SSLC Result 2026: ಈಗಾಗಲೇ SSLC ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ! ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ನಿರ್ಧರಿಸುವ SSLC ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಸದ್ಯದಲ್ಲೇ ಫಲಿತಾಂಶ ಪ್ರಕಟಿಸುವದಾಗಿ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಹೊಚ್ಚ ಹೊಸ ಅಪ್ಡೇಟ್ ನೀಡಿದೆ.
SSLC ಪರೀಕ್ಷೆಯು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಅಂತಿಮ ಹಂತಕ್ಕೆ ಬಂದು ತಲುಪಿದೆ ಎಂದು ಇಲಾಖೆಯು ತಿಳಿಸಿದ್ದು, ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ SSLC ಫಲಿತಾಂಶವನ್ನು ಪ್ರಕಟಿಸುತ್ತದೆ ಎಂದು ತಿಳಿಸಿದೆ.
ಹಾಗಿದ್ದರೆ, ಯಾವ ದಿನಾಂಕದಂದು SSLC ಫಲಿತಾಂಶ ಪ್ರಕಟಗೊಳ್ಳಲಿದೆ? SSLC ರಿಸಲ್ಟ್ ಅನ್ನು ವೀಕ್ಷಿಸುವುದು ಹೇಗೆ? ಹಾಗೂ ಇನ್ನಿತರ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಪ್ರಮುಖ ಹೈಲೈಟ್ಸ್:
| ಪ್ರಸ್ತುತ ಶೈಕ್ಷಣಿಕ ವರ್ಷ | 2025-06 |
| ನೋಂದಾಯಿತ ವಿದ್ಯಾರ್ಥಿಗಳ ಸಂಖ್ಯೆ | 9,02,889 |
| SSLC ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ | 8,16,302 |
| ಫಲಿತಾಂಶ ಪ್ರಕಟವಾದ ನಿರೀಕ್ಷಿತ ದಿನಾಂಕ | ಏಪ್ರಿಲ್ 24, 2026 ಅಥವಾ ಮೇ 2, 2026 |
2025-26 ನೇ ಸಾಲಿನ SSLC ಪರೀಕ್ಷಾ ವಿವರ:
ಪ್ರಸ್ತುತ 2025-26 ನೇ ಶೈಕ್ಷಣಿಕ ಸಾಲಿನ SSLC ಪರೀಕ್ಷೆಯು ಮಾರ್ಚ್ 18, 2026 ರಿಂದ ಮೇ 2, 2026 ರ ವರೆಗೆ ಯಶಸ್ವಿಯಾಗಿ ನಡೆದಿದ್ದು, ಒಟ್ಟು 9,02,889 ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದು, ಇದರಲ್ಲಿ 8,16,302 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಒಟ್ಟು 625 ಅಂಕಗಳಿಗೆ SSLC ಪರೀಕ್ಷೆಯನ್ನು ಬರೆದಿದ್ದು, 625 ಅಂಕಗಳನ್ನು ಒಟ್ಟುಗೂಡಿಸಿ SSLC ಫಲಿತಾಂಶವನ್ನು ಪ್ರಕಟಿಸುತ್ತಾರಾ? ಅಥವಾ 525 ಅಂಕಗಳನ್ನು ಮಾತ್ರ ಒಗ್ಗೂಡಿಸಿ ಫಲಿತಾಂಶವನ್ನು ಪ್ರಕಟಿಸುತ್ತಾರಾ? ಎಂದು ರಿಸಲ್ಟ್ ಪ್ರಕಟಗೊಂಡ ನಂತರವಷ್ಟೇ ತಿಳಿದುಬರುತ್ತದೆ.
ಫಲಿತಾಂಶ ಯಾವಾಗ ಪ್ರಕಟಗೊಳ್ಳಲಿದೆ?
2025-26 ನೇ ಸಾಲಿನ ಶೈಕ್ಷಣಿಕ ವರ್ಷದ SSLC ಪರೀಕ್ಷೆಯು ಯಾವುದೇ ತೊಂದರೆಗಳಿಲ್ಲದೆ ನಡೆದಿದ್ದು, ಉತ್ತರ ಪತ್ರಿಕೆಯ ಮೌಲ್ಯಮಾಪನವು ಏಪ್ರಿಲ್ 8 ರಿಂದ ಪ್ರಾರಂಭಗೊಂಡಿದ್ದು, ಶೀಘ್ರದಲ್ಲೇ ಈ ಒಂದು ಪ್ರಕ್ರಿಯೆಯು ಪೂರಣಗೊಳ್ಳಲಿದೆ. ಹಾಗಾಗಿ ಫಲಿತಾಂಶವು ಏಪ್ರಿಲ್ 24 ರಂದು ಪ್ರಕಟವಾಗಲಿದೆ ಎಂಬ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇತ್ತೀಚಿನ ಮಾಹಿತಿ ಪ್ರಕಾರ, ಮೇ 2 ರಂದು SSLC ಫಲಿತಾಂಶವು ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ.
ಈ ವರ್ಷದ SSLC ಪರೀಕ್ಷಾ ಫಲಿತಾಂಶಗಳಲ್ಲಾಗುವ ಪ್ರಮುಖ ಬದಲಾವಣೆಗಳು:
SSLC ಫಲಿತಾಂಶವನ್ನು ಎರಡು ವಿಧಾನಗಳ ಮೂಲಕ ವೀಕ್ಷಿಸಬಹುದಾಗಿದ್ದು, ನಿಮಗೆ ಯಾವ ವಿಧಾನ ಪೂರಕವೆನಿಸುತ್ತದೆಯೋ? ಈ ಒಂದು ವಿಧಾನಗಳ ಮೂಲಕ ನಿಮ್ಮ SSLC ರಿಸಲ್ಟ್ ಅನ್ನು ವೀಕ್ಷಿಸಬಹುದಾಗಿದೆ.
2025-26 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ ಆಗಿದ್ದು, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಅವುಗಳ ವಿವರ ಈ ಕೆಳಕಂಡಂತಿದೆ.
- 625 ಅಂಕಗಳಿಂದ 525 ಕ್ಕೆ ಕಡಿತ:
ಈ ಹಿಂದೆ SSLC ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿದ್ದು, ಪ್ರಥಮ ಭಾಷಾ ವಿಷಯಕ್ಕೆ ಒಟ್ಟು 125 ಅಂಕಗಳು ಹಾಗೂ ಇನ್ನಿತರ ಪ್ರತಿ ವಿಷಯಕ್ಕೂ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ SSLC ಪರೀಕ್ಷೆಯ ಅಂಕವು ಪ್ರಥಮ ಭಾಷೆ, ದ್ವಿತೀಯ ಭಾಷೆ, ಹಾಗೂ ಸಮಾಜ, ವಿಜ್ಞಾನ ಹಾಗೂ ಗಣಿತ ವಿಷಯಗಳ ಅಂಕಗಳು ಮಾತ್ರ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ. ತೃತೀಯ ಭಾಷಾ ವಿಷಯವನ್ನು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ.
- ಐದು ವಿಷಯಗಳ ಆಧಾರದ ಮೇಲೆ SSLC ಫಲಿತಾಂಶ ಪ್ರಕಟ:
ಈ ಮೊದಲು ಆರು ವಿಷಯಗಳನ್ನೊಳಗೊಂಡು SSLC ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುತ್ತಿತ್ತು. ಈ ವರ್ಷ ತೃತೀಯ ಭಾಷಾ ವಿಷಯವಾದ ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಪರಿಗಣಿಸದೆ ಕೇವಲ 525 ಅಂಕಗಳನ್ನು ಮಾತ್ರ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ.
- ಅಂಕಗಳ ಬದಲಿಗೆ ಗ್ರೇಡ್ ಗಳನ್ನು ನೀಡಲಾಗುವುದು:
ತೃತೀಯ ಭಾಷೆಯ ವಿಷಯವಾದ ಹಿಂದಿ ವಿಷಯದಲ್ಲಿ ಗಳಿಸಿದ ಅಂಕಗಳನ್ನು ನಮೂದಿಸುವ ಬದಲಿಗೆ ಗಳಿಸಿದ ಅಂಕಗಳ ಆಧಾರದ ಮೇಲೆ A, B ಹಾಗೂ C ಗ್ರೇಡ್ ಗಳನ್ನೂ ಮಾತ್ರ ನೀಡಲಾಗುವುದು.
- ಪರೀಕ್ಷೆಗೆ ಹಾಜರಾಗಿರುವುದು ಕಡ್ಡಾಯ:
ತೃತೀಯ ಭಾಷೆಯ ಅಂಕಗಳು SSLC ಪರೀಕ್ಷೆಯಲ್ಲಿ ಕೌಂಟ್ ಆಗದಿದ್ದರೂ ಕೂಡ ವಿದ್ಯಾರ್ಥಿಗಳು SSLC ಪರೀಕ್ಷೆಗೆ ಕಡ್ಡಾಯವಾಗಿ ಹಾಜರಿರಬೇಕಾಗಿರುತ್ತದೆ. ಪರೀಕ್ಷೆಗೆ ಹಾಜರಿರದ ವಿದ್ಯಾರ್ಥಿಗಳನ್ನು ಫೇಲ್ ಎಂದು ಪರಿಗಣಿಸಲಾಗುವುದು.
- ತೃತೀಯ ಭಾಷೆಗೆ ಪಾಸ್ ಫೇಲ್ ಇರುವುದಿಲ್ಲ:
ವಿದ್ಯಾರ್ಥಿಗಳು ತೃತೀಯ ಭಾಷಾ ಪರೀಕ್ಷೆಗೆ ಹಾಜರಿದ್ದು, ಪರೀಕ್ಷೆಯಲ್ಲಿ ಪಾಸಿಂಗ್ ಅಂಕಗಳಿಗಿಂತ ಕಡಿಮೆ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಫೇಲ್ ಎಂದು ಪರಿಗಣಿಸಲಾಗುವುದಿಲ್ಲ.
ಶಿಕ್ಷಣ ಸಚಿವರ ಈ ಒಂದು ಮಹತ್ವದ ನಿರ್ಧಾರಕ್ಕೆ ಕಾರಣಗಳೇನು?
- ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವುದು.
- ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಫೇಲ್ ಆಗಿರುವುದರಿಂದ ವಿದ್ಯಾರ್ಥಿಗಳ ಒಂದು ಶೈಕ್ಷಣಿಕ ವರ್ಷವು ವರ್ಥವಾಗಿದೆ. ಈ ಒಂದು ವಿಷಯದಲ್ಲಿ ವಿದ್ಯಾರ್ಥಿಗಳು ಪಾಸಿಂಗ್ ಮಾರ್ಕ್ಸ್ ಗಿಂತ ಕಡಿಮೆ ಅಂಕಗಳನ್ನು ಗಳಿಸಿದರೆ ಫಲಿತಾಂಶಕ್ಕೆ ಯಾವುದೇ ತೊಂದರೆಗಳಾಗಬಾರದು ಎನ್ನುವ ಹಿತದೃಷ್ಟಿಯಿಂದ ಶಿಕ್ಷಣ ಸಚಿವರು ಈ ಒಂದು ನಿರ್ಧಾರಕ್ಕೆ ಬಂದಿದ್ದಾರೆ.
- ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಾಗೂ ಕೋರ್ ವಿಷಯಗಳಲ್ಲಿ ಹೆಚ್ಚಿನ ಅಂಕವನ್ನು ಗಳಿಸಿದ್ದರೂ, ಹಿಂದಿ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ್ದರೆ ಅವರ ರ್ಯಾಂಕಿಂಗ್ ಮೇಲೆ ಪರಿಣಾಮ ಬೀರಬಾರದು ಇನ್ನು ಉದ್ದೇಶ.
ಫಲಿತಾಂಶವನ್ನು ವೀಕ್ಷಿಸುವುದು ಹೇಗೆ?
- ಆನ್ಲೈನ್ ಮೂಲಕ:
- SSLC ಫಲಿತಾಂಶವನ್ನು ವೀಕ್ಷಿಸಬೇಕೆಂದಿರುವ ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ https://karresults.nic.in/ ಗೆ ಭೇಟಿ ನೀಡಿ.
- ನಂತರ ಮುಖಪುಟದಲ್ಲಿ ಕಾಣುವ SSLC Examination – 1 Result 2026 ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಅಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ನಿಮ್ಮ ಜನ್ಮ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ.
- ಈ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿಮಾಡಿದ ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಫಲಿತಾಂಶವನ್ನು ವೀಕ್ಷಿಸಿ.
- SMS ಮೂಲಕ:
- ಸರಿಯಾದ ಇಂಟೆರ್ನೆರ್ಟ್ ಸೌಲಭ್ಯವಿಲ್ಲದಿರುವ ವಿದ್ಯಾರ್ಥಿಗಳು SMS ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
- ನಿಮ್ಮ ಮೊಬೈಲ್ ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಅನ್ನು ನಮೂದಿಸಿ 56263 ಈ ನಂಬರ್ ಗೆ ಕಳುಹಿಸಿ.
- ತಕ್ಷಣವೇ ನಿಮ್ಮ SSLC ಫಲಿತಾಂಶವು SMS ರೂಪದಲ್ಲಿ ಬರುತ್ತದೆ.
ಮರು ಮೌಲ್ಯಮಾಪನ ಹಾಗೂ ಪೂರಕ ಪರೀಕ್ಷೆಯ ಕುರಿತು ಮಾಹಿತಿ:
- ಮರು ಮೌಲ್ಯಮಾಪನ:
SSLC ಫಲಿತಾಂಶ ಪ್ರಕಟಗೊಂಡ ನಂತರ ನೀವು ಗಳಿಸಿದ ಅಂಕಗಳ ಮೇಲೆ ಸ್ಯಾಟಿಸ್ಫ್ಯಾಕ್ಷನ್ ಇಲ್ಲದಿದ್ದರೆ ನಿಮ್ಮ ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಮರು ಮೌಲ್ಯಮಾಪನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಫಲಿತಾಂಶ ಪ್ರಕಟಗೊಂಡ ದಿನದಿಂದ ಹಿಡಿದು ನಂತರದ 7 ದಿನಗಳ ವರೆಗೆ ಅವಕಾಶ ಇರುತ್ತದೆ. ಮರುಮೌಲ್ಯಮಾಪನ ಮಾಡುವಾಗ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಪೂರಕ ಪರೀಕ್ಷೆ:
SSLC ಪರೀಕ್ಷೆ – 1 ರಲ್ಲಿ ಯಾವುದೇ ವಿಷಯದಲ್ಲಿ ಪಾಸಿಂಗ್ ಮಾರ್ಕ್ಸ್ 35 ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿ ಅನುತೀರ್ಣರಾಗಿರುವ ವಿದ್ಯಾರ್ಥಿಗಳಿಗೆ 2 ಪೂರಕ ಪರೀಕ್ಷೆಗಳನ್ನು ಬರಿಯಲು ಅವಕಾಶವಿದ್ದು, ಪರೀಕ್ಷೆ – 2 ಮೇ ತಿಂಗಳಲ್ಲಿ ನಡೆಯಲಿದ್ದು, ಪರೀಕ್ಷೆ – 3 ಜೂನ್ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ.
ಅಂತಿಮ ತೀರ್ಮಾನ:
ಶೀಘ್ರದಲ್ಲೇ SSLC ಫಲಿತಾಂಶವು ಪ್ರಕಟಗೊಳ್ಳಲಿದ್ದು, ಪ್ರಕಟವಾದ ದಿನದಂದು ಎಲ್ಲಾ SSLC ವಿದ್ಯಾರ್ಥಿಗಳು ಒಂದೇ ಬಾರಿಗೆ ವೆಬ್ಸೈಟ್ ಓಪನ್ ಮಾಡುವುದರಿಂದ ಸರ್ವರ್ ಬ್ಯುಸಿ ಬರುವ ಸಾಧ್ಯತೆಗಳಿದ್ದು, ಇದಕ್ಕೆ ವಿದ್ಯಾರ್ಥಿಗಳು ಆತಂಕ ಪಡದೆ ಸ್ವಲ್ಪ ಸಮಯಗಳ ನಂತರ ಪುನಃ ಟ್ರೈ ಮಾಡಿ ಫಲಿತಾಂಶವನ್ನು ವೀಕ್ಷಿಸಿ.
ಫಲಿತಾಂಶ ಏನಾದರು ಋಣಾತ್ಮಕವಾಗಿದ್ದರೆ, ವಿದ್ಯಾರ್ಥಿಗಳು ಚಿಂತಿಸದೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಉತ್ತಮವಾಗಿ ಅಭ್ಯಾಸವನ್ನು ಮಾಡುತ್ತ ಪರೀಕ್ಷೆ – 2 ಕ್ಕೆ ಸಿದ್ದತೆಯನ್ನು ಮಾಡಿಕೊಳ್ಳಿ.
ಇದನ್ನು ಓದಿ:
- Scooter: ವಿಕಲಚೇತನರಿಗಾಗಿ ಉಚಿತ ಯಂತ್ರ ಚಾಲಿತ ದ್ವಿಚಕ್ರ ವಾಹನ – ಅರ್ಜಿ ಪ್ರಕ್ರಿಯೆ ಆರಂಭ!
- Goat Shed: ರೈತರಿಗೆ ಸರ್ಕಾರದ ಭರ್ಜರಿ ಯೋಜನೆ ಕುರಿ–ಮೇಕೆ ಶೆಡ್ ನಿರ್ಮಾಣಕ್ಕೆ ₹67,000 ಸಬ್ಸಿಡಿ!

