2nd PUC Result: ದ್ವಿತೀಯ ಪಿಯುಸಿ ರಿಸಲ್ಟ್ ದಿನಾಂಕ ಫಿಕ್ಸ್! ವಿದ್ಯಾರ್ಥಿಗಳಿಗೆ Big Updates । ಇಲ್ಲಿದೆ ಸಂಪೂರ್ಣ ಮಾಹಿತಿ

2nd PUC Result

ಈಗಾಗಲೇ ಯಶಸ್ವಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಗಿಸಿ ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಒಂದು ಮುಖ್ಯ ಮಾಹಿತಿ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಶೀಘ್ರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದ್ದು, ವಿದ್ಯಾರ್ಥಿಗಳ ಕಾಯುವಿಕೆಗೆ ಶೀಘ್ರದಲ್ಲೇ ತೆರೆಬೀಳುವ ಸಾಧ್ಯತೆ ಇದೆ.

2nd PUC Result Details in Kannada

ಎಷ್ಟೋ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆ ಬೆರೆದಿದ್ದರೂ ಕೂಡ ನಾನು ಪಾಸ್ ಆಗಿದಿನಾ? ನನಗೆ ಎಷ್ಟು ಅಂಕ ಬಂದಿರಬಹುದು? ಎನ್ನುವ ಗೊಂದಲ ಹಾಗೂ ಆತಂಕಗಳು ಇದೇ ಇರುತ್ತದೆ. ಈ ಒಂದು ಫಲಿತಾಂಶವು ವಿದ್ಯಾರ್ಥಿಗಳು ಒಂದು ವರ್ಷ ಪಟ್ಟ ಪರಿಶ್ರಮದ ಫಲವಾಗಿದ್ದು, ವಿದ್ಯಾರ್ಥಿಗಳ ಮುಂದಿನ ಉನ್ನತ ಶೈಕ್ಷಣಿಕ ಭವಿಷ್ಯಕ್ಕೆ ಭದ್ರ ಬುನಾದಿ ಆಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಕ್ಕಾಗಿ ವಿದ್ಯಾರ್ಥಿಗಳ ಕಾಯುವಿಕೆ ಯಾವಾಗ ಕೊನೆಗೊಳ್ಳಲಿದೆ? ವಿದ್ಯಾರ್ಥಿಗಳು ರಿಸಲ್ಟ್ ಅನ್ನು ಚೆಕ್ ಮಾಡುವುದು ಹೇಗೆ? ಹಾಗೂ ಇನ್ನಿತರ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದಲ್ಲಿ ನೀಡಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿ ನೀಡಿ.

2nd PUC Result
2nd PUC Result

ಪ್ರಮುಖ ಹೈಲೈಟ್ಸ್:

* ರಿಸಲ್ಟ್ ಗಾಗಿ ವಿದ್ಯಾರ್ಥಿಗಳ ಕಾಯುವಿಕೆಗೆ ಬೀಳಲಿದೆ ತೆರೆ!
* ಏಪ್ರಿಲ್ 9 ಅಥವಾ 10 ರಂದು ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ!
* ವಿದ್ಯಾರ್ಥಿಗಳಿಗೆ ಮೂರು ಶೈಕ್ಷಣಿಕ ವರ್ಷಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ
* ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸುಲಭವಾಗಿ ರಿಸಲ್ಟ್ ಅನ್ನು ವೀಕ್ಷಿಸಲು ಅವಕಾಶ!
2nd PUC Result

ವಿದ್ಯಾರ್ಥಿಗಳ ಕಾಯುವಿಕೆಗೆ ಶೀಘ್ರದಲ್ಲಿ ತೆರೆ ಬೀಳುವ ಸಾಧ್ಯತೆ:

ಫೆಬ್ರವರಿ 28, 2026 ರಿಂದ ಮಾರ್ಚ್ 17, 2026 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯು ಯಶಸ್ವಿಯಾಗಿ ನಡೆದಿದ್ದು, ಈಗಾಗಲೇ ಉತ್ತರ ಪತ್ರಿಕೆಯ ಮೌಲ್ಯಮಾಪನವೂ ಕೂಡ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿರುವಂತೆ ಏಪ್ರಿಲ್ ಎರಡನೇ ವಾರದಲ್ಲಿ ಅಂದರೆ ಏಪ್ರಿಲ್ 9 ಅಥವಾ 10 ರಂದು ಬಿಡುಗಡೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಫಲಿತಾಂಶವನ್ನು ಬೆಳಿಗ್ಗೆ 10:00 ಅಥವಾ 11:00 ಗಂಟೆಗೆ ಸುದ್ದಿಗೋಷ್ಠಿಯ ಮೂಲಕ ಘೋಷಿಸಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಆತಂಕಕ್ಕೂ, ಪಾಸ್ ಆಗಿದಿನಾ? ಇಲ್ಲವಾ? ಎನ್ನುವ ಗೊಂದಲಕ್ಕೂ ಹಾಗೂ ವಿದ್ಯಾರ್ಥಿಗಳ ಕಾಯುವಿಕೆಗೂ ಶೀಘ್ರದಲ್ಲಿ ತೆರೆಬೀಳಲಿದೆ.

ಫಲಿತಾಂಶ ವಿಳಂಬಕ್ಕೆ ಕಾರಣಗಳೇನು?

ಈ ಮೊದಲು ದ್ವಿತೀಯ PUC ಫಲಿತಾಂಶ (2nd PUC Result) ವನ್ನು ಏಪ್ರಿಲ್ 7 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಕೆಲವು ಆಡಳಿತಾತ್ಮಕ ಕಾರಣಗಳಿಂದಾಗಿ ಫಲಿತಾಂಶ ಪ್ರಕಟಣೆಯನ್ನು 9 ಏಪ್ರಿಲ್ 2026 ಕ್ಕೆ ಮುಂದೂಡಲಾಗಿದೆ.

  • ಚುನಾವಣಾ ನೀತಿ ಸಂಹಿತೆ:

ಕರ್ನಾಟಕ ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಉಪ ಚುನಾವಣೆಗಳು ನಡೆಯುತ್ತಿರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭಗಳಲ್ಲಿ ದ್ವಿತೀಯ PUC ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ.

  • ಚುನಾವಣಾ ಕಾರ್ಯದಲ್ಲಿ ಶಿಕ್ಷಕರ ಭಾಗವಹಿಸುವಿಕೆ:

ಸಾಕಷ್ಟು ಶಿಕ್ಷಕರನ್ನು ಹಾಗೂ ಬೋರ್ಡ್ ಸಿಬ್ಬಂದಿಗಳನ್ನು ಚುನಾವಣಾ ಕೆಲಸಕ್ಕೆ ನಿಯಾಜಿಸಲಾಗಿದ್ದು, ಫಲಿತಾಂಶ ಪ್ರಕಟಣೆಗೆ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  • ಅಂತಿಮ ಹಂತದ ಕ್ರೋಢಿಕರಣ:

ದ್ವಿತೀಯ PUC ಉತ್ತರ ಪತ್ರಿಕೆಯ ಮೌಲ್ಯಮಾಪನವು ಈಗಾಗಲೇ ಯಶಸ್ವಿಯಾಗಿ ಮುಗಿದಿದ್ದು, ಯಾವುದೇ ತಾಂತ್ರಿಕ ತೊಂದರೆಗಳಿಲ್ಲದಂತೆ ಅಂಕಗಳನ್ನು ವೆಬ್ಸೈಟ್ ಗೆ ಅಪ್ಲೋಡ್ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಹಾಗಾಗಿ ರಿಸಲ್ಟ್ ಪ್ರಕಟಿಸುವುದು ವಿಳಂಬವಾಗಿದೆ.

ಆನ್ಲೈನ್ ಮೂಲಕ ಸುಲಭವಾಗಿ ರಿಸಲ್ಟ್ ಚೆಕ್ ಮಾಡುವುದು ಹೇಗೆ?

ರಿಸಲ್ಟ್ ಅನ್ನು ವಿದ್ಯಾರ್ಥಿಗಳು ಸುಲಭವಾಗಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಮನೆಯಲ್ಲಿ ಕುಳಿತು ವೀಕ್ಷಿಸಬಹುದಾಗಿದ್ದು, ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಹಂತವನ್ನು ಫಾಲೋ ಮಾಡಿ.

  • ವಿದ್ಯಾರ್ಥಿಗಳು ಮೊದಲು ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ http://karresults.nic.in/ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣಿಸುವ “ಕರ್ನಾಟಕ ಸೆಕೆಂಡ್ ಪಿಯುಸಿ ರಿಸಲ್ಟ್ 2026” ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ ಹಾಲ್ ಟಿಕೆಟ್ ನಲ್ಲಿರುವ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಭರ್ತಿ ಮಾಡಿ.
  • ನಂತರ ನಿಮ್ಮ ವಿಷಯವನ್ನು ಅಂದರೆ ಕಾಂಮೆರ್ಸ್,ಆರ್ಟ್ಸ್ ಅಥವಾ ಸೈನ್ಸ್ ನಲ್ಲಿ ನೀವು ಆಯ್ಕೆ ಮಾಡಿಕೊಂಡಿರುವ ವಿಷಯವನ್ನು ಆಯ್ಕೆ ಮಾಡಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ.
  • ತಕ್ಷಣವೇ ಪರದೆಯ ಮೇಲೆ ಫಲಿತಾಂಶ ಪ್ರಕಟವಾಗುತ್ತದೆ. ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅಂಕಪಟ್ಟಿಯನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

  • ವಿದ್ಯಾರ್ಥಿಗಳು ಮೊದಲು ಡಿಜಿಲಾಕರ್ ಎನ್ನುವ ಆಪ್ ಅನ್ನು ಇನ್ಸ್ಟಾಲ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ ಲಾಗಿನ್ ಆಗಿ.
  • ಮುಖಪುಟದಲ್ಲಿರುವ ಸರ್ಚ್ ಡಾಕ್ಯುಮೆಂಟ್ ಆಯ್ಕೆಗೆ ಹೋಗಿ, KSEAB ಎಂದು ಟೈಪ್ ಮಾಡಿ.
  • ಅಲ್ಲಿ ಕಾಣುವ ಕ್ಲಾಸ್ XII ಮಾರ್ಕ್ಸ್ ಶೀಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಿಮ್ಮ ಪರೀಕ್ಷಾ ವರ್ಷ ಹಾಗೂ ರಿಜಿಸ್ಟರ್ ನಂಬರ್ ನಮೂದಿಸಿ ಗೆಟ್ ಡಾಕ್ಯುಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ನಿಮ್ಮ ಫಲಿತಾಂಶ ಲಭ್ಯವಾಗಿತ್ತದೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ವಿದ್ಯಾರ್ಥಿಗಳು ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣಿಸುವ ಆನ್ಲೈನ್ ಅಪ್ಲಿಕೇಶನ್ ಫಾರ್ ಸ್ಕ್ಯಾನ್ ಕಾಪಿ, ರಿವ್ಯಾಲ್ಯೂಯೇಷನ್ ಅಥವಾ ರಿ- ಟೋಟಲಿಂಗ್ ಆಫ್ ಸೆಕೆಂಡ್ ಪಿಯುಸಿ ಎಕ್ಸಾಮ್ – I ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ.
  • ನಂತರ ನೀವು ಯಾವ ವಿಷಯಗಳ ಮರುಮೌಲ್ಯಮಾಪನವನ್ನು ಹಾಗೂ ಸ್ಕ್ಯಾನ್ ಮಾಡಲು ಬಯಸುತ್ತೀರಿ ಅದನ್ನು ಆಯ್ಕೆ ಮಾಡಿಕೊಂಡು ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ.
  • ನಂತರ ಬರುವ ರಿಸಿಪ್ಟ್ ಅನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ.

ಫೇಲ್ ಆದ ವಿದ್ಯಾರ್ಥಿಗಳು ಏನು ಮಾಡಬೇಕು?

ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಒಂದು ವರ್ಷ ವೆಸ್ಟ್ ಆಯ್ತಲ್ಲಾ? ಎಂದು ಚಿಂತೆ ಮಾಡುವ ಅಗತ್ಯವಿಲ್ಲ. ಫೇಲ್ ಆದ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯು 3 ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಏಪ್ರಿಲ್ 25, 2026 ರಿಂದ ಮೇ 9, 2026 ರ ವರೆಗೂ ನಡೆಸಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಚಿಂತೆ ಮಾಡುವ ಅಗತ್ಯ ಇರುವುದಿಲ್ಲ.

ಪ್ರಮುಖ ಸಲಹೆಗಳು:

  • ರಿಸಲ್ಟ್ ಬಂದ ದಿನದಂದು ಎಲ್ಲಾ ವಿದ್ಯಾರ್ಥಿಗಳು ಒಂದೇ ವೆಬ್ಸೈಟ್ ಗೆ ಹೋಗಿ ರಿಸಲ್ಟ್ ಚೆಕ್ ಮಾಡುವುದರಿಂದ ಸರ್ವರ್ ಬ್ಯುಸಿ ಬರುವ ಸಾಧ್ಯತೆಗಳಿರುತ್ತದೆ. ಇದಕ್ಕೆ ವಿದ್ಯಾರ್ಥಿಗಳು ಗಾಬರಿ ಪಡದೆ ಸ್ವಲ್ಪ ಸಮಯದ ನಂತರ ಪುನಃ ಪ್ರಯತ್ನಿಸಿ.
  • ರಿಸಲ್ಟ್ ವೀಕ್ಷಿಸುವ ಮೊದಲು ನಿಮ್ಮ ರೆಜಿಸ್ಟಾರ್ ನಂಬರ್ ಇರುವ ಹಾಲ್ ಟಿಕೆಟ್ ಅನ್ನು ಹುಡುಕಿಟ್ಟುಕೊಳ್ಳಿ.
  • ರಿಸಲ್ಟ್ ಬಂದ ನಂತರ ಅವುಗಳನ್ನು ಸ್ಕ್ರೀನ್ ಶಾಟ್ ತಗೆದಿಟ್ಟುಕೊಳ್ಳಿ. ಅಡ್ಮಿಶನ್ ಸಮಯದಲ್ಲಿ ಅಂಕಪಟ್ಟಿಯು ಅಗತ್ಯವಾಗಿರುತ್ತದೆ.

ಅಂತಿಮ ತೀರ್ಮಾನ:

ಯಶಸ್ವಿಯಾಗಿ PUC ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತಾವು ಪಟ್ಟ ಪರಿಶ್ರಮಕ್ಕೆ ಸದ್ಯದಲ್ಲೇ ಫಲಿತಾಂಶ ದೊರಕಲಿದ್ದು, ಏಪ್ರಿಲ್ 9 ರಂದು ಪ್ರಕಟವಾಗುವುದು ಖಚಿತವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಮೇಲೆ ನೀಡಿರುವ ಮಾಹಿತಿಯನ್ನು ಓದಿಕೊಂಡು ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ನಿಮ್ಮ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಿ.


ಇದನ್ನು ಗಮನಿಸಿ: 2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ದಿನಾಂಕ ಫಿಕ್ಸ್ ! ಮೊಬೈಲ್‌ನಲ್ಲೇ ನೋಡುವುದು ಹೇಗೆ?

Leave a Reply

Your email address will not be published. Required fields are marked *