ನಮಸ್ಕಾರ ಸ್ನೇಹಿತರೆ, ದೇಶ ಸೇವೆ ಮಾಡುವುದರ ಜೊತೆಗೆ ಗೌರವಯುತ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವುದು ನಿಮ್ಮ ಕನಸೇ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ಭಾರತೀಯ ವಾಯುಪಡೆಯು ತಮ್ಮ ವಿವಿಧ ಘಟಕಗಳಲ್ಲಿ ಖಾಲಿ ಇರುವ ಲೋವರ್ ಡಿವಿಷನ್ ಕ್ಲರ್ಕ್ ಹಾಗೂ ಹಿಂದಿ ಟೈಪಿಸ್ಟ್ ಸೇರಿದಂತೆ ಇನ್ನಿತರ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
IAF Recruitment in Kannada
ಜಸ್ಟ್ SSLC ಮತ್ತು PUC ಪಾಸ್ ಆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ದಿನಾಂಕ 02-05-2026 ರಿಂದ ಆರಂಭಗೊಂಡು 01-06-2026 ಕ್ಕೆ ಕೊನೆಗೊಳ್ಳುತ್ತದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಭಾರತೀಯ ವಾಯುಪಡೆ (IAF) ಯು ತಮ್ಮ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದು, ಅಭ್ಯರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ ಎಷ್ಟು? ವಯೋಮಿತಿ ಎಷ್ಟು? ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಹುದ್ದೆಯ ವಿವರಣಾತ್ಮಕ ನೋಟ:
| ನೇಮಕಾತಿ ಸಂಸ್ಥೆಯ ಹೆಸರು | ಭಾರತೀಯ ವಾಯುಪಡೆ (IAF) |
| ಹುದ್ದೆಯ ಹೆಸರು | ಡ್ರೈವರ್, ಹಿಂದಿ ಟೈಪಿಸ್ಟ್ ಹಾಗೂ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳು |
| ಹುದ್ದೆಗಳ ಸಂಖ್ಯೆ | ಒಟ್ಟು 47 ಹುದ್ದೆಗಳು |
| ಉದ್ಯೋಗ ಸ್ಥಳ | ಭಾರತದಾದ್ಯಂತ |
| ಅರ್ಜಿ ಸಲ್ಲಿಸುವ ವಿಧಾನ | ಅಂಚೆ ಮೂಲಕ (ಆಫ್ಲೈನ್) |
ಹುದ್ದೆಯ ಸಂಕ್ಷಿಪ್ತ ನೋಟ:
ಭಾರತೀಯ ವಾಯುಪಡೆ (IAF) ಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಡ್ರೈವರ್, ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್ ಸೇರಿದಂತೆ ಇನ್ನಿತರ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಮಾನ್ಯತೆ ಪಡೆದ ಮಂಡಳಿಯಿಂದ SSLC ಹಾಗೂ PUC ಪೂರ್ಣಗೊಳಿಸಿದ ಕನಿಷ್ಠ 18 ವರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುದ್ದೆಯ ವಿವರ:
ಭಾರತೀಯ ವಾಯು ಪಡೆಯು ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವ ಹುದ್ದೆಗಳ ವಿವರ ಈ ಕೆಳಕಂಡಂತಿದೆ.
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಡ್ರೈವರ್ | 03 ಹುದ್ದೆಗಳು |
| ಹಿಂದಿ ಟೈಪಿಸ್ಟ್ | 11 ಹುದ್ದೆಗಳು |
| ಲೋವರ್ ಡಿವಿಷನ್ ಕ್ಲರ್ಕ್ | 33 ಹುದ್ದೆಗಳು |
ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ:
- ಡ್ರೈವರ್ ಹುದ್ದೆಗಳು:
- ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಗಳು ಮೋಟರ್ ಮೆಕ್ಯಾನಿಸಂ ಬಗ್ಗೆ ಜ್ಞಾನವನ್ನು ಹೊಂದಿರಬೇಕು.
- ಅಭ್ಯರ್ಥಿಗಳು ಕಡ್ಡಾಯವಾಗಿ ಲಘು ಹಾಗೂ ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
- ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ವಾಹನ ಚಾಲನಾ ಅನುಭವ ಹೊಂದಿರಬೇಕು.
- ಹಿಂದಿ ಟೈಪಿಸ್ಟ್ ಹುದ್ದೆಗಳು:
- ಹಿಂದಿ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಕಂಪ್ಯೂಟರ್ ನಲ್ಲಿ ಪ್ರತಿ ಒಂದು ನಿಮಿಷಕ್ಕೆ ಇಂಗ್ಲಿಷ್ ನಲ್ಲಿ ಒಟ್ಟು 35 ಪದಗಳನ್ನು ಹಾಗೂ ಹಿಂದಿಯಲ್ಲಿ 30 ಪದಗಳನ್ನು ಟೈಪ್ ಮಾಡಿರಬೇಕು.
- ಲೋವರ್ ಡಿವಿಷನ್ ಕ್ಲರ್ಕ್:
- ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಕಂಪ್ಯೂಟರ್ ನಲ್ಲಿ ಪ್ರತಿ ಒಂದು ನಿಮಿಷಕ್ಕೆ ಇಂಗ್ಲಿಷ್ ನಲ್ಲಿ ಒಟ್ಟು 35 ಪದಗಳನ್ನು ಹಾಗೂ ಹಿಂದಿಯಲ್ಲಿ 30 ಪದಗಳನ್ನು ಟೈಪ್ ಮಾಡಿರಬೇಕು.
ವಯೋಮಿತಿ ವಿವರ:
ಭಾರತೀಯ ವಾಯುಪಡೆ (IAF) ಯಲ್ಲಿ ಖಾಲಿ ಇರುವ ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ದಿನಾಂಕ 01-06-2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಾದಿಂದ ಗರಿಷ್ಟ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
ಸರ್ಕಾರದ ನಿಯಮದಂತೆ ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಅವುಗಳ ವಿವರ ಈ ಕೆಳಕಂಡಂತಿದೆ.
- ಅಂಗವಿಕಲ ಅಭ್ಯರ್ಥಿಗಳಿಗೆ: 10 ವರ್ಷ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷ
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 3 ವರ್ಷ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
- ಭಾರತೀಯ ವಾಯುಪಡೆ ಸಂಸ್ಥೆಯ ಉದ್ಯೋಗಿಗಳಿಗೆ: ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 45 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಭಾರತೀಯ ವಾಯುಪಡೆ (IAF) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸದೇ ಉಚಿತವಾಗಿ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವೇತನ ಶ್ರೇಣಿ:
ಭಾರತೀಯ ವಾಯುಪಡೆ (IAF) ಯಲ್ಲಿ ಖಾಲಿ ಇರುವ ಲೋವರ್ ಡಿವಿಷನ್ ಕ್ಲರ್ಕ್, ಹಿಂದಿ ಟೈಪಿಸ್ಟ್, ಡ್ರೈವರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಪೇ ಮೆಟ್ರಿಕ್ ಲೆವೆಲ್ 2 ರ ಅಡಿಯಲ್ಲಿ ವೇತನವನ್ನು ನೀಡಲಾಗುತ್ತದೆ ಹಾಗೂ ಇವುಗಳ ಜೊತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆಯ ಭತ್ಯೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಐಡಿ ಪ್ರೂಫ್
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಅನುಭವ ಪ್ರಮಾಣಪತ್ರ
- ಅಭ್ಯರ್ಥಿಗಳ ಸಹಿ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಜನ್ಮ ದಿನಾಂಕ ಪ್ರಮಾಣಪತ್ರ
- ವಾಸಸ್ಥಳ ಪ್ರಮಾಣಪತ್ರ
- ತಾಂತ್ರಿಕ ಕೌಶಲ್ಯ ಪ್ರಮಾಣಪತ್ರ
- ಹಾಗೂ ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳುಭಾರತೀಯ ವಾಯುಪಡೆ (IAF) ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಡೆದುಕೊಳ್ಳಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರ ಹಾಗೂ ಇತರೆ ಅಗತ್ಯ ವಿವರಗಳನ್ನ ಭರ್ತಿ ಮಾಡಿ.
- ಅಪ್ಲಿಕೇಶನ್ ಫಾರ್ಮ್ ಮೇಲೆ ನಿಮ್ಮ ಸಹಿ, ಪಾಸ್ಪೋರ್ಟ್ ಅಳತೆಯ ಫೋಟೋವನ್ನು ಅಂಟಿಸಿ.
- ಹಾಗೂ ಮೇಲೆ ನೀಡಲಾದ ಎಲ್ಲ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ. 10/- ರೂಪಾಯಿಯ ಅಂಚೆ ಚೀಟಿಯೊಂದಿಗೆ ಇವುಗಳೆಲ್ಲವನ್ನು ಒಂದು ಲಕೋಟೆಗೆ ಹಾಕಿ.
- ಲಕೋಟೆಯ ಮೇಲೆ ಆನ್ ಅಪ್ಲಿಕೇಶನ್ ಫಾರ್ ದಿ ಪೋಸ್ಟ್ ಆಫ್ …. ಅಂಡ್ ಕೆಟಗರಿ… ಎಂದು ಬೆರೆದು ಸಂಬಂಧಿತ ವಾಯುಪಡೆ ನಿಲ್ದಾಣದ ಅಂಚೆ ವಿಭಾಗಕ್ಕೆ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಅರ್ಜಿ ಪರಿಶೀಲನೆ:
ಮೊದಲ ಹಂತದಲ್ಲಿ ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿಯನ್ನು ಪರಿಶೀಲನೆ ನಡೆಸಲಾಗುತ್ತದೆ.
- ಲಿಖಿತ ಪರೀಕ್ಷೆ:
ಅಭ್ಯರ್ಥಿಗಳ ಅರ್ಜಿಯನ್ನು ಪರಿಶೀಲನೆ ನಡೆಸಿದ ನಂತರ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯು ಸಾಮಾನ್ಯ ಬುದ್ದಿವಂತಿಕೆ, ಸಾಮಾನ್ಯ ಜ್ಞಾನ, ಇಂಗ್ಲೀಷ್ ಭಾಷೆ ಹಾಗೂ ಗಣಿತ ಸಾಮರ್ಥ್ಯದ ಕುರಿತು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
- ಕೌಶಲ್ಯ ಪರೀಕ್ಷೆ:
ಲಿಖಿತ ಪರೀಕ್ಷೆಯಲ್ಲಿ ನಿರ್ದಿಷ್ಟ ಅಂಕವನ್ನು ಗಳಿಸಿದ ಅಭ್ಯರ್ಥಿಗಳಿಗೆ ಟೈಪಿಂಗ್ ಟೆಸ್ಟ್ ಹಾಗೂ ಡ್ರೈವಿಂಗ್ ಟೆಸ್ಟ್ ನಡೆಸಲಾಗುತ್ತದೆ. ಇದು ಕೇವಲ ಅಭ್ಯರ್ಥಿಗಳು ಹೊಂದಿರುವ ಕೌಶಲ್ಯವನ್ನು ಅಳೆಯಲು ನಡೆಸುವ ಪರೀಕ್ಷೆಯಾಗಿದೆ.
- ಮೆರಿಟ್ ಪಟ್ಟಿ:
ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :
| ವಿವರಗಳು | ದಿನಾಂಕ |
| ಅಧಿಕೃತ ಅಧಿಸೂಚನೆ ಹೊರಡಿಸಿದ ದಿನಾಂಕ | 02-05-2026 |
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 02-05-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 01-06-2026 |
ಹುದ್ದೆಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು :
| ವಿವರಗಳು | ಲಿಂಕ್ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಫಾರ್ಮ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಭಾರತೀಯ ವಾಯುಪಡೆ (IAF) ಯು ಪ್ರಸ್ತುತ ಸಾಲಿನಲ್ಲಿ ಒಟ್ಟು 47 ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು. ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳುವ, ದೇಶ ಸೇವೆಯ ಜೊತೆಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದಿರುವ ಅಭ್ಯರ್ಥಿಗಳಿಗೆ ಇದೊಂದು ಗೋಲ್ಡನ್ ಚಾನ್ಸ್. ನಿಮಗೆ ಈ ಒಂದು ಇಲಾಖೆಯ ಅಡಿಯಲ್ಲಿ ವೃತ್ತಿಜೀನವನವನ್ನು ಪ್ರಾರಂಭಿಸಬೇಕೆನ್ನುವ ಆಸೆ ಇದ್ದರೆ, ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೇ ಎಂದು ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- SBI: ರೂ. 80,000/- ವೇತನ! ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಂಕರೆಂಟ್ ಆಡಿಟರ್ ಹುದ್ದೆಗಳ ಬೃಹತ್ ನೇಮಕಾತಿ 2026 | ಜೂನ್ 11 ಕೊನೆಯ ದಿನಾಂಕ
- VS Bank: ₹92,500/- ವೇತನ! ಜೂನಿಯರ್ ಅಸಿಸ್ಟೆಂಟ್ ಹಾಗೂ ಅಟೆಂಡರ್ ಹುದ್ದೆಗಳ ಬೃಹತ್ ನೇಮಕಾತಿ 2026 | ಇಂದೇ ಅಪ್ಲೈ ಮಾಡಿ
- IRIDO: ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಲ್ಲಿ 6000+ ಹುದ್ದೆಗಳ ಬೃಹತ್ ನೇಮಕಾತಿ 2026! ಮೇ 31 ಕೊನೆಯ ದಿನಾಂಕ
- IPPB: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನಲ್ಲಿ ಭರ್ಜರಿ ಅವಕಾಶ! COO ಹುದ್ದೆಗೆ ಅರ್ಜಿ ಆಹ್ವಾನ । ಇಂದೇ ಅಪ್ಲೈ ಮಾಡಿ

