ನಮಸ್ಕಾರ ಸ್ನೇಹಿತರೆ, ನಿಮಗೆ ಉದ್ಯೋಗ ಹುಡುಕಿ ಹುಡುಕಿ ಸಾಕಾಯ್ತ? ಎಲ್ಲೂ ಕೂಡ ಸರಿಯಾಗಿ ಉದ್ಯೋಗ ಸಿಕ್ತಿಲ್ವಾ? ಇನ್ನು ಈ ಕುರಿತು ಚಿಂತಿಸುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗಾಗಿ ಒಂದೊಳ್ಳೆಯ ಹುದ್ದೆಗಳ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
High Court Job Recruitment in Kannada
ಕರ್ನಾಟಕ ಹೈಕೋರ್ಟ್ (High Court) 2025-26 ನೇ ಸಾಲಿನ ನೇಮಕಾತಿ ಅಧಿಸೂಚನೆಯಲ್ಲಿ ಬೆಂಗಳೂರಿನ ವಿವಿಧ ವಿಭಾಗಗಳಾದ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದಗಳಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಅಧಿಕೃತ ಅದಿಸೂಚನೆ ಹೊರಡಿಸಿದ್ದು, ಒಟ್ಟು 101 ಹುದ್ದೆಗಳು ಖಾಲಿ ಇದೆ.
ಜಸ್ಟ್ SSLC ಪಾಸ್ ಆದ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 21-05-2026 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಈ ಹುದ್ದೆಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಪ್ರಸ್ತುತ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

ಹುದ್ದೆಯ ವಿವರಣಾತ್ಮಕ ನೋಟ:
| ನೇಮಕಾತಿ ಸಂಸ್ಥೆ | ಕರ್ನಾಟಕ ಹೈಕೋರ್ಟ್, ಬೆಂಗಳೂರು |
| ಹುದ್ದೆಯ ಹೆಸರು | ಪ್ಯೂನ್, ವಾಚ್ ಮೆನ್, ಸ್ವೀಪರ್, ಪ್ಯೂನ್ (ಹೌಸ್ ಪೀಕಿಂಗ್), ಲಿಫ್ಟ್ ಅಟೆಂಡರ್, ಅಸಿಸ್ಟೆಂಟ್ ಬೈಂಡರ್, ಧೋಬಿ ಮತ್ತು ದರ್ಜಿ |
| ಹುದ್ದೆಗಳ ಸಂಖ್ಯೆ | 101 ಹುದ್ದೆಗಳು |
| ಉದ್ಯೋಗ ಸ್ಥಳ | ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 21-05-2026 |
ಹುದ್ದೆಯ ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ಹೈಕೋರ್ಟ್ (High Court) 2026 ನೇ ಸಾಲಿನ ನೇಮಕಾತಿ ಅಧಿಸೂಚನೆಯಲ್ಲಿ ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ಜಸ್ಟ್ SSLC ಅಲ್ಲಿ ಪಾಸ್ ಆದ ಕನಿಷ್ಠ 18 ರಿಂದ ಗರಿಷ್ಟ 40 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ .
ಹುದ್ದೆಯ ವಿವರ:
ಕರ್ನಾಟಕ ಹೈಕೋರ್ಟ್ (High Court) ನಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳನ್ನು ಎರಡು ವೃಂದಗಳ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.
ಉಳಿಕೆ ಮೂಲ ವೃಂದ:
| ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
| ಅಸಿಸ್ಟೆಂಟ್ ಬೈಂಡರ್ | 01 ಹುದ್ದೆ |
| ದರ್ಜಿ | 01 ಹುದ್ದೆ |
| ಧೋಬಿ | 01 ಹುದ್ದೆ |
| ಲಿಫ್ಟ್ ಅಟೆಂಡರ್ | 05 ಹುದ್ದೆಗಳು |
| ಪ್ಯೂನ್, ವಾಚ್ ಮೆನ್, ಸ್ವೀಪರ್, ಪ್ಯೂನ್ (ಹೌಸ್ ಕೀಪಿಂಗ್) | 85 ಹುದ್ದೆಗಳು |
ಕಲ್ಯಾಣ ಕರ್ನಾಟಕ ಪ್ರದೇಶ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಪ್ಯೂನ್, ಸ್ವೀಪರ್, ಪ್ಯೂನ್ (ಹೌಸ್ ಕೀಪಿಂಗ್) | 8 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
- ಪ್ಯೂನ್, ವಾಚ್ ಮೆನ್, ಸ್ವೀಪರ್, ಪ್ಯೂನ್ (ಹೌಸ್ ಕೀಪಿಂಗ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ದರ್ಜಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ SSLC ಅಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ದರ್ಜಿ ಕೆಲಸದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
- ಸಹಾಯಕ ಬೈಂಡರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ SSLC ಅಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಬೈಂಡಿಂಗ್ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹಿಂದಿರಬೇಕು.
- ಲಿಫ್ಟ್ ಅಟೆಂಡರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ SSLC ಅಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಲಿಫ್ಟ್ ಮೆಕ್ಯಾನಿಸಂನಲ್ಲಿ ಅನುಭವ ಹೊಂದಿರಬೇಕು.
- ಧೋಬಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಪಾಸ್ ಆಗಿರಬೇಕು ಜೊತೆಗೆ ಧೋಬಿ ಕೆಲಸದ ಅನುಭವ ಹೊಂದಿರಬೇಕು.
ವಯೋಮಿತಿ ವಿವರ:
ಹೈಕೋರ್ಟ್ ನಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಟ 40 ವರ್ಷ ವಯೋಮಿತಿ ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
- ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ : 3 ವರ್ಷ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ : 5 ವರ್ಷ
ಅರ್ಜಿ ಶುಲ್ಕ:
- ಪ್ರವರ್ಗ 2A, 2B, 3A, 3B ಹಾಗೂ ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : 200/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : 100/-
- ಎಲ್ಲ ವರ್ಗಗಳ ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಆನ್ಲೈನ್ ಪಾವತಿ ಗೇಟ್ ವೇ ಮೂಲಕ ಪಾವತಿಸಬೇಕಾಗುತ್ತದೆ. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಹಿಂದಿರುಗಿಸುವುದಿಲ್ಲ.
ವೇತನ ಶ್ರೇಣಿ:
- ಪ್ಯೂನ್, ವಾಚ್ ಮೆನ್, ಸ್ವೀಪರ್, ಪ್ಯೂನ್ (ಹೌಸ್ ಕೀಪಿಂಗ್), ಅಸಿಸ್ಟೆಂಟ್ ಬೈಂಡರ್ ಮತ್ತು ಧೋಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 19,900 ದಿಂದ ರೂ. 63,200 ವರೆಗೆ ವೇತನವನ್ನು ನೀಡಲಾಗುತ್ತದೆ.
- ಲಿಫ್ಟ್ ಅಟೆಂಡರ್ ಮತ್ತು ದರ್ಜಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ರೂ. 21,700 ದಿಂದ ರೂ. 69,100 ವೇತನವನ್ನು ನೀಡಲಾಗುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- SSLC ಅಂಕಪಟ್ಟಿ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಫೋಟೋ
- ವಯಸ್ಸಿನ ಪುರಾವೆ
- ಅಭ್ಯರ್ಥಿಗಳ ಸಹಿ
- ಜಾತಿ ಪ್ರಮಾಣಪತ್ರ
- ಮೀಸಲಾತಿ ಪ್ರಮಾಣಪತ್ರ
- ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:
- ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ಹೈಕೋಟ್ ನ ಅಧಿಕೃತ ವೆಬ್ಸೈಟ್ https://judiciary.karnataka.gov.in/ ಗೆ ಭೇಟಿ ನೀಡಿ.
- ಅಲ್ಲಿ ಕಾಣುವ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶಿಕ್ಷಣಿಕ ವಿವರ ಹಾಗೂ ಇತರೆ ಅಗತ್ಯ ವಿವರಗಳನ್ನ ಭರ್ತಿ ಮಾಡಿ.
- ಈ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಂತರ, ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳು ಹಾಗೂ ಭರ್ತಿ ಮಾಡಿದ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಖಚಿತ ಪಡಿಸಿಕೊಂಡು ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ.
- ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ನಿಗದಿ ಪಡಿಸಿದ ಕೊನೆಯ ದಿನಾಂಕ 21-05-2026 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ:
ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
- ಸಂದರ್ಶನಕ್ಕೆ ಆಯ್ಕೆ:
ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮೀಸಲಾತಿ ಅನ್ವಯ ಒಟ್ಟು ಹುದ್ದೆಗಳ 10 ರಷ್ಟು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಈ ಸರ್ದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ.
- ದಾಖಲೆ ಪರಿಶೀಲನೆ:
ಸಂದರ್ಶನ ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅಂತಿಮವಾಗಿ ಅಭ್ಯರ್ಥಿಗಳು SSLC ಅಲ್ಲಿ ಗಳಿಸಿದ ಅಂಕ ಹಾಗೂ ಸಂದರ್ಶನದಲ್ಲಿ ಅಭ್ಯರ್ಥಿಗಳ ಭಾಗವಹಿಸುವಿಕೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :
| ವಿವರಗಳು | ದಿನಾಂಕ |
| ಅಧಿಕೃತ ಅಧಿಸೂಚನೆ ಹೊರಡಿಸಿದ ದಿನಾಂಕ | 22-04-2026 |
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 22-04-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 21-05-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 21-05-2026 |
ಹುದ್ದೆಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು :
| ವಿವರಗಳು | ಲಿಂಕ್ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಕರ್ನಾಟಕ ಹೈಕೋರ್ಟ್ (High Court) ಬೆಂಗಳೂರು, ಧಾರವಾಡ, ಕಲಬುರಗಿಯಲ್ಲಿ ಖಾಲಿ ಇರುವ ಪ್ಯೂನ್, ವಾಚ್ ಮೆನ್, ಸ್ವೀಪರ್, ಅಸಿಸ್ಟೆಂಟ್ ಬೈಂಡರ್ ಸೇರಿದಂತೆ ಇನ್ನಿತರ ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, SSLC ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ದಿನಾಂಕ 21-05-2026 ರೊಳಗೆ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಅಭ್ಯರ್ಥಿಗಳು ಹೈಕೋರ್ಟ್ (High Court) ನಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ ಕನಿಷ್ಠ SSLC ಪಾಸ್.
ಕಲ್ಯಾಣ ಕರ್ನಾಟಕ ವೃಂದದಲ್ಲಿ ಒಟ್ಟು 8 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ.
ಇತರೆ ಪ್ರಮುಖ ಲಿಂಕುಗಳು:
- IFFCO: ₹65,000 ವೇತನ! ಪದವೀಧರ ಇಂಜಿನಿಯರ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ । ಏಪ್ರಿಲ್ 30 ಕೊನೆಯ ದಿನಾಂಕ
- PUC: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ನು ಮುಂದೆ ಕಾಲೇಜಿನಲ್ಲೇ ಸಿಗಲಿದೆ ಉಚಿತ ಪಠ್ಯಪುಸ್ತಕಗಳು!
- Grihalakshmi Scheme: ಗೃಹಲಕ್ಷ್ಮಿ 27ನೇ ಕಂತು ಬಿಡುಗಡೆ! ನಿಮ್ಮ ಖಾತೆಗೆ ₹2,000 ಬಂದಿದೆಯಾ? ಈಗಲೇ ಚೆಕ್ ಮಾಡಿ

