ನಮಸ್ಕಾರ ಸ್ನೇಹಿತರೆ, ನಿಮಗೇನಾದರೂ ನ್ಯಾಯಾಂಗ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಆಸೆ ಇದೆಯಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ! ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2026 ನೇ ಸಾಲಿನಲ್ಲಿ ಸ್ಟೈನೋಗ್ರಾಫರ್, ಕಾಪಿಸ್ಟ್, ಪ್ರೋಸೆಸ್ ಸರ್ವರ್, ಪ್ಯೂನ್ ಸೇರಿದಂತೆ ಒಟ್ಟು 93 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
Court Job Recruitment in Kannada
ಸ್ಟೈನೋಗ್ರಾಫರ್, ಕಾಪಿಸ್ಟ್, ಪ್ರೋಸೆಸ್ ಸರ್ವರ್, ಪ್ಯೂನ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಸರ್ಕಾರಿ ಉದ್ಯೋಗದ ಕನಸ್ಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಹಾಗೆಯೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ 28-04-2026 ರಿಂದ 31-05-2026 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜಸ್ಟ್ SSLC ಪಾಸ್ ಆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಹುದ್ದೆಯ ಕಿರು ವಿಮರ್ಶೆ:
| ನೇಮಕಾತಿ ಸಂಸ್ಥೆ | ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು |
| ಹುದ್ದೆಯ ಹೆಸರು | ಸ್ಟೈನೋಗ್ರಾಫರ್, ಪ್ರೋಸೆಸ್ ಸರ್ವರ್, ಪ್ಯೂನ್, ಕಾಪಿಸ್ಟ್ |
| ಹುದ್ದೆಗಳ ಸಂಖ್ಯೆ | 93 ಹುದ್ದೆಗಳು |
| ಉದ್ಯೋಗ ಸ್ಥಳ | ಮೈಸೂರು – ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-05-2026 |
ಹುದ್ದೆಯ ಸಂಕ್ಷಿಪ್ತ ಮಾಹಿತಿ:
ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 93 ಸ್ಟೈನೋಗ್ರಾಫರ್, ಪ್ರೋಸೆಸ್ ಸರ್ವರ್, ಪ್ಯೂನ್, ಕಾಪಿಸ್ಟ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, SSLC ಅಥವಾ PUC ಅಲ್ಲಿ ಪಾಸ್ ಆದ ಕನಿಷ್ಠ 18 ವರ್ಷದಿಂದ ಗರಿಷ್ಟ 40 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುದ್ದೆಯ ವಿವರ:
ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಕಂಡಂತಿದೆ.
| ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
| ಪ್ಯೂನ್ | 75 ಹುದ್ದೆಗಳು |
| ಪ್ರೋಸೆಸ್ ಸರ್ವರ್ | 11 ಹುದ್ದೆಗಳು |
| ಸ್ಟೈನೋಗ್ರಾಫರ್ ಗ್ರೇಡ್ -3 | 4 ಹುದ್ದೆಗಳು |
| ಕಾಪಿಸ್ಟ್ | 3 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂದಿಸಿದ ಶೈಕ್ಷಣಿಕ ಅರ್ಹತೆ ಈ ಕೆಳಕಂಡಂತಿದೆ.
ಪ್ಯೂನ್:
- ಪ್ಯೂನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಪ್ರೋಸೆಸ್ ಸರ್ವರ್:
- ಪ್ರೋಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಸ್ಟೈನೋಗ್ರಾಫರ್ ಗ್ರೇಡ್ -3:
- ಸ್ಟೈನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ PUC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಇದರೊಂದಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಹಿರಿಯ ಶ್ರೇಣಿ ಬೆರಳಚ್ಚು ಹಾಗೂ ಹಿರಿಯ ಶ್ರೇಣಿ ಶೀಘ್ರ ಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕಾಪಿಸ್ಟ್:
- ಕಾಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು PUC ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಹಾಗೂ
- ಇದರೊಂದಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ ವಿವರ:
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿನ ಸ್ಟೈನೋಗ್ರಾಫರ್, ಪ್ರೋಸೆಸ್ ಸರ್ವರ್, ಪ್ಯೂನ್, ಕಾಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 40 ವರ್ಷ ವಯೋಮಿತಿ ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
- ಪ್ರವರ್ಗ 2A, 2B, 3A, 3B ವರ್ಗಗಳ ಅಭ್ಯರ್ಥಿಗಳಿಗೆ : 3 ವರ್ಷ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ : 5 ವರ್ಷ
- ವಿಧವೆ, ಅಂಗವಿಕಲ ಹಾಗೂ ಜೀತ ಕಾರ್ಮಿಕ ಅಭ್ಯರ್ಥಿಗಳಿಗೆ 10 ವರ್ಷ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸೇವಾ ಅವಧಿಯ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಾವತಿಸಬೇಕು ಅಥವಾ ಎಸ್.ಬಿ.ಐ ಬ್ಯಾಂಕ್ ನ ಚಲನ್ ಮೂಲಕ ಪಾವತಿಸಬೇಕು.
ಪ್ಯೂನ್ ಹುದ್ದೆಗಳಿಗೆ:
- ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ₹200/-
- ಪ್ರವರ್ಗ 2A, 2B, 3A, 3B ಹಾಗೂ ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ₹100/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ
ಸ್ಟೈನೋಗ್ರಾಫರ್, ಪ್ರೋಸೆಸ್ ಸರ್ವರ್, ಕಾಪಿಸ್ಟ್ ಹುದ್ದೆಗಳಿಗೆ:
- ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ₹300/-
- ಪ್ರವರ್ಗ 2A, 2B, 3A, 3B ಹಾಗೂ ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ₹150/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ
ವೇತನ ಶ್ರೇಣಿ:
ಕರ್ನಾಟಕ ಸರ್ಕಾರದ ವೇತನ ಶೇಣಿಯ ಅನ್ವಯ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡಲಾಗುತ್ತದೆ. ಹಾಗೂ ಇವುಗಳ ಜೊತೆಗೆ ಇತರೆ ಭತ್ಯೆಗಳನ್ನು ಹಾಗೂ ಪಿಂಚಣಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
- ಪ್ಯೂನ್: ₹27,000/- ದಿಂದ ₹46,675/-
- ಪ್ರೋಸೆಸ್ ಸರ್ವರ್: ₹31,775/- ದಿಂದ ₹61,300/-
- ಕಾಪಿಸ್ಟ್: ₹34,100/- ದಿಂದ ₹67,600/-
- ಸ್ಟೈನೋಗ್ರಾಫರ್: ₹44,425/- ದಿಂದ ₹83,700/-
ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- SSLC ಅಂಕಪಟ್ಟಿ
- PUC ಅಂಕಪಟ್ಟಿ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಫೋಟೋ
- ವಯಸ್ಸಿನ ಪುರಾವೆ
- ಕಪ್ಪು ಶಾಯಿಯಿಂದ ಮಾಡಿದ ಅಭ್ಯರ್ಥಿಗಳ ಸಹಿ
- ಜಾತಿ ಪ್ರಮಾಣಪತ್ರ
- ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:
- ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ರಿಕ್ರೂಟ್ಮೆಂಟ್ ವಿಭಾಗವನ್ನು ಆಯ್ಕೆ ಮಾಡಿಕೊಂಡು ಹುದ್ದೆಗೆ ಸಂಬಂಧಿಸಿದ ನೇಮಕಾತಿ ಅಧಿಸೂಚನೆಯನ್ನು ಓದಿಕೊಳ್ಳಿ.
- ನಂತರ ಅಲ್ಲಿ ಕಾಣುವ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶಿಕ್ಷಣಿಕ ವಿವರ ಹಾಗೂ ಇತರೆ ಅಗತ್ಯ ವಿವರಗಳನ್ನ ಭರ್ತಿ ಮಾಡಿ.
- ಈ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಂತರ, ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳು ಹಾಗೂ ಭರ್ತಿ ಮಾಡಿದ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಖಚಿತ ಪಡಿಸಿಕೊಂಡು ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:
- ಶೈಕ್ಷಣಿಕ ಅಂಕ ಪರಿಶೀಲನೆ:
ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡಿರುವ ಹುದ್ದೆಗಳಿಗೆ ಅನುಗುಣವಾಗಿ ಹೊಂದಿರುವ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
- ಕೌಶಲ್ಯ ಪರೀಕ್ಷೆ:
ಸ್ಟೈನೋಗ್ರಾಫರ್ ಹುದ್ದೆಗಳಿಗೆ ಉಕ್ತಲೇಖನ ಹಾಗೂ ಕಂಪ್ಯೂಟರ್ ಅನುಲಿಪಿ ಪರೀಕ್ಷೆ ನಡೆಸಲಾಗುತ್ತದೆ. ಹಾಗೂ ಕಾಪಿಸ್ಟ್ ಹುದ್ದೆಗಳಿಗೆ 15 ನಿಮಿಷಗಳ ಬೆರಳಚ್ಚು ಪರೀಕ್ಷೆ ನಡೆಸಲಾಗುತ್ತದೆ.
- ಸಂದರ್ಶನ:
ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಪ್ರೋಸೆಸ್ ಸರ್ವರ್, ಪ್ಯೂನ್ ಹುದ್ದೆಗಳಿಗೆ ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ. ಹಾಗೂ ಸ್ಟೈನೋಗ್ರಾಫರ್ ಹಾಗೂ ಕಾಪಿಸ್ಟ್ ಹುದ್ದೆಗಳಿಗೆ ಸಂದರ್ಶನವು ಗರಿಷ್ಟ ಅಂಕಗಳ 5% ಇರುತ್ತದೆ.
- ಅಂತಿಮ ಆಯ್ಕೆ:
ಶೈಕ್ಷಣಿಕ ಅಂಕಗಳು, ಕೌಶಲ್ಯ ಪರೀಕ್ಷೆ, ಸಂದರ್ಶನದಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಮೀಸಲಾತಿ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :
| ವಿವರಗಳು | ದಿನಾಂಕ |
| ಅಧಿಕೃತ ಅಧಿಸೂಚನೆ ಹೊರಡಿಸಿದ ದಿನಾಂಕ | 24-04-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 28-04-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-05-2026 |
| ಸಂವಹನ ನಡೆಯುವ ದಿನಾಂಕ ಮತ್ತು ಸಮಯ | 02-06-2026 |
ಹುದ್ದೆಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು :
| ವಿವರಗಳು | ಲಿಂಕ್ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸ್ಟೈನೋಗ್ರಾಫರ್, ಪ್ಯೂನ್, ಪ್ರೋಸೆಸ್ ಸರ್ವರ್, ಕಾಪಿಸ್ಟ್ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದು, ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- Bank Job: ಬಾಗಲಕೋಟೆ ಸಹಕಾರಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ 2026! ಏಪ್ರಿಲ್ 30 ಕೊನೆಯ ದಿನಾಂಕ । ಈಗಲೇ ಅಪ್ಲೈ ಮಾಡಿ
- High Court: ₹69,100 ವೇತನ! SSLC ಪಾಸ್ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಭರ್ಜರಿ ನೇಮಕಾತಿ । ಮೇ 21 ಕೊನೆಯ ದಿನಾಂಕ
- IFFCO: ₹65,000 ವೇತನ! ಪದವೀಧರ ಇಂಜಿನಿಯರ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ । ಏಪ್ರಿಲ್ 30 ಕೊನೆಯ ದಿನಾಂಕ
- PUC: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ನು ಮುಂದೆ ಕಾಲೇಜಿನಲ್ಲೇ ಸಿಗಲಿದೆ ಉಚಿತ ಪಠ್ಯಪುಸ್ತಕಗಳು!

