PM Kisan Money : ನಿಮಗೆ ರೂ 2000/- ಹಣ ಇನ್ನು ಬಂದಿಲ್ವಾ? | 21ನೇ ಕಂತಿನ ಹಣ ಈ ದಿನ ಜಮಾ!

PM Kisan Money

PM Kisan Money : ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಈಗಾಗಲೇ 21 ಕಂತುಗಳ ಹಣವನ್ನು ಕೆಲವು ರೈತರ ಬ್ಯಾಂಕ್ ಖಾತೆಗೆ ಯಶಸ್ವಿಯಾಗಿ ಜಮಾ ಮಾಡಿದೆ. ಆದರೆ ಇನ್ನು ಕೆಲವು ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿಲ್ಲ. ಇದಕ್ಕೆ ಕಾರಣಗಳೇನು? ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು? ಎನ್ನುವ ಬಗ್ಗೆ ಗೊಂದಲವಿದೆಯೇ? ಹಾಗಿದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

PM Kisan Money In Kannada Information

ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಲಕರಣೆಗಳನ್ನು ಖರೀದಿಸಲು ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ ₹6000 ಮೊತ್ತವನ್ನು ಸಮಾನ ಮೂರು ಕಂತುಗಳಲ್ಲಿ ₹2000 ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಈಗಾಗಲೇ 21 ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರವು ಯಶಸ್ವಿಯಾಗಿ ಬಿಡುಗಡೆ ಮಾಡಿದೆ ಆದರೆ ಕೆಲವರಿಗೆ ಈ ಹಣ ಇನ್ನು ಜಮಾ ಆಗಿಲ್ಲ ಇದಕ್ಕೆ ಕಾರಣಗಳನ್ನು ತಿಳಿದುಕೊಳ್ಳೋಣ.

PM Kisan Money In Kannada Information

ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ:

ನವೆಂಬರ್ 19, 2025 ರಂದು ನರೇಂದ್ರ ಮೋದಿಯವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಪಿಎಂ ಕಿಸಾನ್ ಯೋಜನೆಯ 21 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ಈ ಯೋಜನೆಯಡಿಯಲ್ಲಿ ಕೆಲವು ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ₹2000 ಹಣವನ್ನು ಜಮಾ ಮಾಡಲಾಗಿದೆ.

ಕೆಲವು ರೈತರ ಬ್ಯಾಂಕ್ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಆಗದಿರಲು ಕಾರಣವೇನು?

  • ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆ ಸರಿಯಾಗಿ ಆಗದಿದ್ದರೆ ಹಣ ಜಮಾ ಆಗುವುದಿಲ್ಲ.
  • ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆಯಾಗದಿದ್ದರೆ ಹಣ ಜಮಾ ಆಗುವುದಿಲ್ಲ.
  • ಅರ್ಜಿದಾರ ರೈತರು ಭೂ ದಾಖಲೆಗಳನ್ನು ಸರಿಯಾಗಿ ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ ನಲ್ಲಿ ಸರಿಯಾಗಿ ನಮೂದಿಸದಿದ್ದರೆ ಹಾಗೂ ಕೃಷಿ ಇಲಾಖೆಯಿಂದ ಪರಿಶೀಲಿಸಲ್ಪಟ್ಟಿಲ್ಲವಾದರೆ ಹಣ ದೊರಕುವುದಿಲ್ಲ.
  • ಬ್ಯಾಂಕ್ ಖಾತೆ, IFSC ಕೋಡ್, ಹೆಸರಿನಲ್ಲಿ ಸಣ್ಣ ವ್ಯತ್ಯಾಸಗಳಿದ್ದರೂ ಹಣ ವರ್ಗಾವಣೆ ಆಗುವುದಿಲ್ಲ.
  • ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡದಿದ್ದರೆ ಹಣ ವರ್ಗಾವಣೆಯನ್ನು ತಡೆಯಲ್ಪಡುತ್ತದೆ.
  • ಒಂದೇ ಕುಟುಂಬದ ಹಲವಾರು ಸದಸ್ಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಅಂತಹವರ ಖಾತೆಯನ್ನು ತಡೆಯಲಾಗುತ್ತದೆ.
  • ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾದರೆ ಹಣ ಜಮಾ ಆಗುವುದಿಲ್ಲ.

21ನೇ ಕಂತಿನ ಹಣ ಜಮಾ ಆಗಿರುವ ಬಗ್ಗೆ ಆನ್ಲೈನ್ ನಲ್ಲಿ ಪರಿಶೀಲಿಸುವುದು ಹೇಗೆ?

  • ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಭೇಟಿನೀಡಿ.
  • ಮುಖಪುಟದಲ್ಲಿ ರೈತ ಕಾರ್ನರ್ ವಿಭಾಗಕ್ಕೆ ಹೋಗಿ “ನಿಮ್ಮ ಸ್ಥಿತಿ ತಿಳಿಯಿರಿ” ಆಯ್ಕೆಯನ್ನು ಆರಿಸಿಕೊಳ್ಳಿ.
  • ನಂತರ ನೋಂದಣಿ ಸಂಖ್ಯೆಯನ್ನು ನಮೂದಿಸಿ.
  • ನಂತರ ‘ಡೇಟಾ ಪಡೆಯಿರಿ’ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆಗೆ 21ನೇ ಕಂತಿನ ಹಣ ಜಮಾ ಆಗಿದೆಯೇ? ಇಲ್ಲವೇ? ಎಂದು ತಿಳಿದುಕೊಳ್ಳಬಹುದು.

ಪಿಎಂ ಕಿಸಾನ್ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಹೇಗೆ?

ಪಿಎಂ ಕಿಸಾನ್ e-KYC ಪ್ರಕ್ರಿಯೆಯನ್ನು ಎರಡು ವಿಧಾನಗಳ ಮೂಲಕ ಸುಲಭವಾಗಿ ಪೂರ್ಣಗೊಳಿಸಬಹುದು.

  1. ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಮುಖಪುಟದಲ್ಲಿರುವ e-KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆಯನ್ನು ನಮೂದಿಸಿ ಸರ್ಚ್ ಬಟನ್ ಕ್ಲಿಕ್ ಮಾಡಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ ಗೆಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ ಬಂದ ಒಟಿಪಿ ಯನ್ನು ನಮೂದಿಸಿ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ e-KYC ಪೂರ್ಣಗೊಳಿಸಿ.
  2. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ನಂತರ ಬೆರಳಚ್ಚು ನೀಡುವ ಮೂಲಕ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸುವುದು ಹೇಗೆ?

  • ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಭೇಟಿನೀಡಿ.
  • ಫಾರ್ಮರ್ಸ್ ಕಾರ್ನರ್ ವಿಭಾಗಕ್ಕೆ ಹೋಗಿ ‘ಫಲಾನುಭವಿಗಳ ಪಟ್ಟಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
  • ವರದಿ ಪಡೆಯಿರಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಗ್ರಾಮದ ಅರ್ಹ ಫಲಾನುಭವಿಗಳ ಪಟ್ಟಿ ಲಭಿಸುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳಿ.

ಅಂತಿಮ ತೀರ್ಮಾನ:

ಅರ್ಹ ಫಲಾನುಭವಿಗಳು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಮುಂದಿನ ಹಂತಗಳಲ್ಲಿ ಬರುವ ಕಂತಿಗಳಲ್ಲಿನ ವಿಳಂಬವನ್ನು ತಪ್ಪಿಸಲು, e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹಾಗೂ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಿ. ಈ ಎಲ್ಲಾ ಹಂತಗಳಿಗಿಂತ ಮುಖ್ಯವಾಗಿ ನಿಮ್ಮ ಹೆಸರು ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿದೆಯೇ? ಖಚಿತಪಡಿಸಿಕೊಳ್ಳಿ. ಈ ಎಲ್ಲ ಅಡಚಣೆಗಳನ್ನು ಸರಿಪಡಿಸಿಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

You can read other articles and tell me by commenting below which of these blogging information you liked.

Leave a Reply

Your email address will not be published. Required fields are marked *