ಕಟ್ಟಡ ಕಾರ್ಮಿಕರ ಗೃಹ ಭಾಗ್ಯ ಯೋಜನೆ 2026 | Labour Card holder home Scheme In Karnataka 2026

Labour Card holder home Scheme In Karnataka 2026

ಲೇಬರ್ ಕಾರ್ಡ್ ಇರುವವರಿಗೆ ಭರ್ಜರಿ ಗುಡ್ ನ್ಯೂಸ್. ಈ ಒಂದು ಲೇಬರ್ ಕಾರ್ಡ್ ಇದ್ದರೆ ಸಾಕು, ಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿಯಲ್ಲಿ ನೀವು ಉಚಿತವಾಗಿ ಮನೆ ಪಡೆದುಕೊಳ್ಳಬಹುದು.

Labour Card holder home Scheme In Karnataka 2026

ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಕಾರ್ಮಿಕ ಗೃಹಾಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯಿಂದಾಗಿ ಕಾರ್ಮಿಕರ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಬಹುದು.

ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಇಚ್ಛಿಸುವವರು ನಮ್ಮ ಅಧಿಕೃತ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತಾ ಮಾನದಂಡ, ಪ್ರಮುಖ ದಾಖಲೆಗಳು ಹಾಗೂ ಇನ್ನಷ್ಟುಮಾಹಿತಿಯನ್ನು ಕೆಳಗೆ ನೀಡಿರುತ್ತೇವೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

ಯೋಜನೆಯ ಅವಲೋಕನ:-

ಯೋಜನೆಯ ಹೆಸರುಕಾರ್ಮಿಕ ಗೃಹ ಭಾಗ್ಯ ಯೋಜನೆ
ಫಲಾನುಭವಿಗಳುಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು
ಅರ್ಜಿಸಲ್ಲಿಸುವ ವಿಧಾನಆನ್ ಲೈನ್ ಮತ್ತು ಆಫ್ ಲೈನ್ ಮೂಲಕ
ಅರ್ಜಿಸಲ್ಲಿಸುವ ರಾಜ್ಯಕರ್ನಾಟಕ
ಅಧಿಕೃತ ವೆಬ್ ಸೈಟ್https://karbwwb.karnataka.gov.in/
Labour Card holder home Scheme In Karnataka 2026
Labour Card holder home Scheme In Karnataka 2026

ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಸರ್ಕಾರವು ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ಸುರಕ್ಷತೆಯನ್ನು ಒದಗಿಸುವ, ಸ್ಥಿರ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಉದ್ದೇಶದಿಂದ ಕಾರ್ಮಿಕ ಗೃಹ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರಾಜ್ಯ ಸರ್ಕಾರದ ಶ್ರಮಿಕ ಕಲ್ಯಾಣ ಕಾಯ್ದೆಯಡಿಯಲ್ಲಿ ಈ ಒಂದು ಯೋಜನೆಯನ್ನು ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಯೋಜನೆಯ ಉದ್ದೇಶ:-

  • ಮನೆಯಿಲ್ಲದ ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಒದಗಿಸುವುದು.
  • ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದವರು ಭಯವಿಲ್ಲದೆ ಆರೋಗ್ಯಕರ ಪರಿಸರದಲ್ಲಿ ಸುರಕ್ಷತೆಯಿಂದ ಜೀವನ ನಡೆಸಲು ಈ ಯೋಜನೆಯು ಸಹಾಯಕಾರಿಯಾಗಿದೆ.
  • ಕಟ್ಟಡ ಕಾರ್ಮಿಕರು ಬಾಡಿಗೆ ಮನೆಯಲ್ಲಿ, ರಸ್ತೆ ಬದಿಯಲ್ಲಿ, ತಾತ್ಕಾಲಿಕ ಶೆಡ್ ಗಳಲ್ಲಿ ವಾಸಿಸುವುದನ್ನು ನಿಯಂತ್ರಿಸಲು ಈ ಯೋಜನೆಯನ್ನು ಜಾರಿಗೆತರಲಾಗಿದೆ.
  • ಕಟ್ಟಡ ಕಾರ್ಮಿಕರ ಹಾಗೂ ಅವರ ಕುಟುಂಬದವರ ಜೀವನ ಗುಣಮಟ್ಟವನ್ನು ಹೆಚ್ಚಿಸುವುದು.

ಯೋಜನೆಯ ಪ್ರಯೋಜನಗಳು: Labour Card holder home Scheme In Karnataka 2026

  • ಈ ಯೋಜನೆಯಿಂದಾಗಿ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿ ಸೌಲಭ್ಯಗಳನ್ನು ಒದಗಿಸುವುದು.
  • ಕಾರ್ಮಿಕರು ಮನೆ ಖರೀದಿ ಮಾಡಲು ಅಥವಾ ನಿರ್ಮಾಣ ಮಾಡಲು ಸರ್ಕಾರದಿಂದ 2 ಲಕ್ಷದವರೆಗೆ ಸಾಲದ ರೂಪದಲ್ಲಿ ಧನಸಹಾಯ
  • ಪಡೆದ ಸಾಲವನ್ನು ನಿರಂತರ ವಾರ್ಷಿಕ ಕಂತುಗಳ ರೂಪದಲ್ಲಿ 20 ವರ್ಷದ ಅವಧಿಯಲ್ಲಿ ಮರಿಪಾವತಿಸಲು ಅವಕಾಶ.
Ashraya Scheme In Karnataka
Labour Card holder home Scheme In Karnataka 2026

ಅರ್ಹತಾ ಮಾನದಂಡಗಳು:- Labour Card holder home Scheme In Karnataka 2026

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಕಟ್ಟಡ ಕಾರ್ಮಿಕರಾಗಿರಬೇಕು.
  • ಲೇಬರ್ ಕಾರ್ಡ್ ಹೊಂದಿರಬೇಕು.
  • ಅರ್ಜಿದಾರರು 18 ರಿಂದ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಅರ್ಜಿದಾರರು ಸ್ವಂತ ಮನೆಯನ್ನು ಹೊಂದಿರಬಾರದು.
  • ಹಿಂದಿನ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿರಬೇಕು.
  • ಸರ್ಕಾರ ನಿಗದಿ ಪಡಿಸಿದ ಮಿತಿಯೊಳಗೆ ವಾರ್ಷಿಕ ಆದಾಯ ಇರಬೇಕು.
  • ಅರ್ಜಿದಾರರು ಕನಿಷ್ಠ 3 ವರ್ಷಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತರಾಗಿರಬೇಕು.

ಅಗತ್ಯ ದಾಖಲೆಗಳು:-

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ನಿವೇಶನದ ದಾಖಲೆ
  • ಲೇಬರ್ ಕಾರ್ಡ್
  • ವಯಸ್ಸಿನ ಪುರಾವೆ
  • ಬ್ಯಾಂಕ್ ಪಾಸ್ ಬುಕ್
  • ಮನೆ ನಿರ್ಮಾಣ ಅಂದಾಜು ಪಟ್ಟಿ ಮತ್ತು ಫೋಟೋಗಳು

ಅರ್ಜಿ ಸಲ್ಲಿಸುವ ವಿಧಾನ:-

  • ಅಧಿಕೃತ ವೆಬ್ ಸೈಟ್ https://karbwwb.karnataka.gov.in/ ಗೆ ಭೇಟಿನೀಡಿ ಅರ್ಜಿಸಲ್ಲಿಸಿ
  • ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ
  • ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
  • ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
  • ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು

ಅಂತಿಮ ತೀರ್ಮಾನ:-

ಕಾರ್ಮಿಕ ಗೃಹ ಭಾಗ್ಯ ಯೋಜನೆಯಿಂದಾಗಿ ಸರ್ಕಾರದಿಂದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ತಮ್ಮ ಸ್ವಂತ ಮನೆ ಕಟ್ಟಿಸಲು 2 ಲಕ್ಷದ ವರೆಗೆ ಸಾಲದ ರೂಪದಲ್ಲಿ ಸಹಾಯಧನ ನೀಡಲಾಗುತ್ತಿದೆ.. ಕರ್ನಾಟಕ ಕಾರ್ಮಿಕ ಗೃಹ ಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ, ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ಭಾರತದ ಯಾವುದೇ ಭಾಗದಲ್ಲಿ ಸ್ವಂತಮನೆ ಹೊಂದಿರಬಾರದು. ಅರ್ಹ ಫಲಾನುಭವಿಗಳು ಆನ್ಲೈನ್ ಅಥವಾ ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಯ ಕಚೇರಿಗೆ ಭೇಟಿ ನೀಡಿ ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಇತರೆ ಪ್ರಮುಖ ಲಿಂಕುಗಳು:

ಪ್ರಮುಖ ಯೋಜನೆಗಳು ಪ್ರಮುಖ ಲಿಂಕುಗಳು
ರಾಜೀವ್ ಗಾಂಧಿ ವಸತಿ ಯೋಜನೆ 2026ಇಲ್ಲಿ ಕ್ಲಿಕ್ ಮಾಡಿ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಇಲ್ಲಿ ಕ್ಲಿಕ್ ಮಾಡಿ
ಐರಾವತ ಯೋಜನೆ ಅರ್ಜಿ 2026ಇಲ್ಲಿ ಕ್ಲಿಕ್ ಮಾಡಿ
ವಿಧವಾ ಪಿಂಚಣಿ ಯೋಜನೆ ಅರ್ಜಿ 2026ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ 2026ಇಲ್ಲಿ ಕ್ಲಿಕ್ ಮಾಡಿ
You can read other articles and tell me by commenting below which of these blogging information you liked.

Leave a Reply

Your email address will not be published. Required fields are marked *