ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರವು ಬಡ ಕುಟುಂಬದ ವಿಧವೆಯರಿಗೆ ವಿಧವಾ ಪಿಂಚಣಿ ಯೋಜನೆಯನ್ನು ಜಾರಿಗೆತಂದಿದ್ದು, ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. 2026 ನೇ ಸಾಲಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಕೆಳಗಿನ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ.
Widow Pension Scheme In Karnataka
ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮಾನದಂಡ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳ ಬಗ್ಗೆ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಯೋಜನೆಯ ಅವಲೋಕನ: (Widow Pension Scheme In Karnataka)
| ಯೋಜನೆಯ ಹೆಸರು | ವಿಧವಾ ಪಿಂಚಣಿ ಯೋಜನೆ |
| ಅರ್ಹ ಫಲಾನುಭವಿಗಳು | ಬಡತನ ರೇಖೆ ಗಿಂತ ಕೆಳಗಿರುವ ಕುಟುಂಬದ ವಿಧವೆಯರು |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ ಲೈನ್ |
ಸಂಕ್ಷಿಪ್ತ ಮಾಹಿತಿ :
ಕರ್ನಾಟಕ ಸರ್ಕಾರವು ಜಾರಿಗೊಳಿಸಿದ್ದ ಹಲವಾರು ಯೋಜನೆಗಳಲ್ಲಿ ವಿಧವಾ ಪಿಂಚಣಿ ಯೋಜನೆಯು ಒಂದಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ದುರ್ಬಲ ವಿಧವೆಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ 1984 ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ನಿರ್ಗತಿಕ ವಿಧವೆಯರು ಯಾವುದೇ ಹಣವನ್ನು ಪಾವತಿಸದೆ ಸರ್ಕಾರದಿಂದ ನೇರವಾಗಿ ಪಿಂಚಣಿಯನ್ನು ಪಡೆದುಕೊಳ್ಳಬಹುದು.
ಯೋಜನೆಯ ಬಗ್ಗೆ:
ವಿಧವಾ ಪಿಂಚಣಿ ಯೋಜನೆಯನ್ನು 1984 ಏಪ್ರಿಲ್ 1 ರಂದು ಜಾರಿಗೆ ತರಲಾಗಿದ್ದು, ಯೋಜನೆಯು ಪ್ರಾರಂಭಗೊಂಡಾಗ ವಿಧವೆಯರಿಗೆ ಕೇವಲ 40 ರೂ. ಮಾಸಿಕ ಪಿಂಚಣಿಯನ್ನು ನೀಡಲಾಗಿತ್ತು.
ಕಾಲಕಾಲಕ್ಕೆ ಪಿಂಚಣಿ ಮೊತ್ತವನ್ನು ರೂ. 400 ಕ್ಕೆ ನಂತರ ರೂ. 500 ಕ್ಕೆ ಏರಿಕೆ ಮಾಡಲಾಯಿತು. ನಂತರ ಮುಖ್ಯಮಂತ್ರಿಗಳು 2021 ರ ಪರಿಷ್ಕರಣೆಯಲ್ಲಿ ಪಿಂಚಣಿ ಮೊತ್ತವನ್ನು 800 ಕ್ಕೆ ಹೆಚ್ಚಿಸಿದರು.
ನಂತರ 2025 ರ ಅಂತ್ಯದ ವೇಳೆಗೆ ಸರ್ಕಾರವು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ರೂ 2000 ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿದೆ ಜೊತೆಗೆ ಅರ್ಹ ವಿಧವೆಯರಿಗೆ ಮಾಸಿಕ ಪಿಂಚಣಿ ರೂ. 800 ನೀಡಲಾಗುವುದು.
ಯೋಜನೆಯ ಉದ್ದೇಶ:
- ವಿಧವೆಯರು ತಮ್ಮ ದಿನನಿತ್ಯದ ಅಗತ್ಯಗಳಿಗಾಗಿ ಇತರರಿಗೆ ಅವಲಂಬಿತವಾಗಿರದೆ ಸ್ವಾವಲಂಬಿ ಜೀವನವನ್ನು ನಡೆಸಲು ಈ ಯೋಜನೆಯು ಸಹಕಾರಿಯಾಗಿದೆ.
- ಪತಿಯನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಸರ್ಕಾರದಿಂದ ಆರ್ಥಿಕ ನೆರವನ್ನು ನೀಡುವುದು.
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ನಿರ್ಗತಿಕ ಮಹಿಳೆಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು.
ಯೋಜನೆಯ ಪ್ರಯೋಜನ:
- ಅರ್ಹ ವಿಧವೆಯರಿಗೆ ಮಾಸಿಕ ರೂ. 800 ಪಿಂಚಣಿಯ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
- ನಿರ್ಗತಿಕ ವಿಧವೆಯರು ಸಣ್ಣಪುಟ್ಟ ಮನೆ ಖರ್ಚನ್ನು ನಿಭಾಯಿಸಿಕೊಂಡು ಹೋಗಲು ಈ ಯೋಜನೆಯು ಸಹಾಯಕಾರಿಯಾಗಿದೆ.
- ದುರ್ಬಲ ವಿಧವೆಯರು ಇತರರಿಗೆ ಹೊರೆಯಾಗದೆ ಸ್ವಾವಲಂಬಿ ಜೀವನವನ್ನು ನಡೆಸಲು ಸಹಾಯಕಾರಿಯಾಗಿದೆ.
ಅರ್ಹತಾ ಮಾನದಂಡ: Widow Pension Scheme In Karnataka
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರ ಕನಿಷ್ಠ 18 ವರ್ಷ ಮೇಲ್ಪಟ್ಟಿರುವವರಾಗಿರಬೇಕು.
- ಇತರೆ ಯಾವುದೇ ಸರ್ಕಾರಿ ಪಿಂಚಣಿಯ ಲಾಭವನ್ನು ಪಡೆಯುತ್ತಿರಬಾರದು.
- ಅರ್ಜಿದಾರರು ಮರು ಮದುವೆ ಆಗಿರಬಾರದು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- BPL ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಪತಿಯ ಮರಣ ಪ್ರಮಾಣಪತ್ರ
- ಬ್ಯಾಂಕ್ ಖಾತೆಯ ವಿವರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ವಯಸ್ಸಿನ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ: Widow Pension Scheme In Karnataka
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು:
- ಸೇವಾ ಸಿಂಧೂ ಪೋರ್ಟಲ್ https://sevasindhu.karnataka.gov.in ಗೆ ಭೇಟಿನೀಡಿ
- ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ.
- ನಂತರ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು:
- ನಿಮ್ಮ ಹತ್ತಿರದ ತಹಶೀಲ್ದಾರ್ ಕಚೇರಿಗೆ ಅಥವಾ ನಾಡಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ
ತೀರ್ಮಾನ:
ಕರ್ನಾಟಕ ಸರ್ಕಾರವು ದುರ್ಬಲ ವಿಧವೆಯರಿಗಾಗಿ ಯೋಜನೆಯನ್ನು ಜಾರಿಗೆ ತಂದಿದ್ದು, BPL ಕುಟುಂಬಕ್ಕೆ ಸೇರಿದ ವಿಧವೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. . ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಅಥವಾ ಹತ್ತಿರದ ತಹಶೀಲ್ದಾರ್ ಕಚೇರಿಗೆ ಅಥವಾ ನಾಡಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
| ಪ್ರಮುಖ ಯೋಜನೆಗಳು | ಪ್ರಮುಖ ಲಿಂಕುಗಳು |
| ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ | ಇಲ್ಲಿ ಕ್ಲಿಕ್ ಮಾಡಿ |
| ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನಕ್ಕೆ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
| ಉಚಿತ ಲ್ಯಾಪ್ಟಾಪ್ ಯೋಜನೆ 2026 | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗಿನಿ ಯೋಜನೆ 2026 | ಇಲ್ಲಿ ಕ್ಲಿಕ್ ಮಾಡಿ |
| ಭಾಗ್ಯಲಕ್ಷ್ಮಿ ಯೋಜನೆ 2026 ಅರ್ಜಿ ಸಲ್ಲಿಸುವ ವಿಧಾನ | ಇಲ್ಲಿ ಕ್ಲಿಕ್ ಮಾಡಿ |

