ಇಂದಿನ ಡಿಜಿಟಲ್ ಯುಗದಲ್ಲಿ ಪೋಷಕರಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವುದೇ ಒಂದು ರೀತಿಯ ತಲೆನೋವಿನ ಕೆಲಸವಾಗಿದೆ. ಶಾಲಾ ಕಾಲೇಜುಗಳಲ್ಲಿ ದಿನದಿಂದ ದಿನ ಏರುತ್ತಿರು ಫೀಸ್, ಪಠ್ಯಪುಸ್ತಕಗಳ ಬೆಲೆ, ಹಾಸ್ಟೆಲ್, ಪಿಜಿ ಹಾಗೆಯೇ ಮನೆಯಿಂದ ಕಾಲೇಜಿಗೆ ತೆರಳುವ ಪ್ರಯಾಣದ ಖರ್ಚು ಇವೆಲ್ಲವೂ ಪೋಷಕರನ್ನ ಕಾಡುವ ಅತಿ ದೊಡ್ಡ ಸಮಸ್ಯೆಯಾಗಿದೆ.
Vivo Scholarship In Kannada
ಹಾಗಾಗಿ ನಮ್ಮ ನೀಡ್ಸ್ ಆಫ್ ಕರ್ನಾಟಕ ವೆಬ್ ಸೈಟ್ ನಲ್ಲಿ ಪೋಷಕರಿಗಾಗಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2025-26ನೇ ವರ್ಷದ “ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ” (Vivo Scholarship) ಆನ್ಲೈನ್ ಅರ್ಜಿ ವಿವೊ ಸಂಸ್ಥೆಯು ಆರಂಭಿಸಿರುವುದರ ಬಗ್ಗೆ ಸಂಪರ್ಣವಾಗಿ ಮಾಗಿತಿಯನ್ನ ತಿಳಿಸಲಾಗಿದೆ.
ವಿದ್ಯಾರ್ಥಿಗಳೇ ನೀವು ಯಾವತ್ತಾದರೂ ವಿವೋ (Vivo Scholarship) ಸಂಸ್ಥೆಯು ಶಿಕ್ಷಣಕ್ಕಾಗಿ ಸ್ಕಾಲರ್ಶಿಪ್ ಕೊಡುತ್ತದೆ ಎನ್ನುವುದನ್ನ ಕೇಳಿದ್ದೀರಾ ? ಅಥವಾ ಎಲ್ಲಿಯಾದರೂ ತಿಳಿದಿದ್ದೀರಾ ? ಇಂದಿನ ಕಾಲದಲ್ಲಿ ಅನೇಕ ಮಕ್ಕಳು ಇಂತಹ ಉತ್ತಮ ಅಂಶವನ್ನು ಅರಿಯದೆ ಕೇವಲ ವಿವೋ ಕಂಪನಿಯ ಗ್ರಾಹಕರಿಗೆ ಫೋನ್ ಗಳನ್ನ ಮಾತ್ರ ಮಾರಾಟ ಮಾಡುತ್ತವೆ ಎನ್ನುವ ವಿಷಯವನ್ನ ತಿಳಿದಿರುತ್ತಾರೆ.

ನೋಡಿ ಸ್ನೇಹಿತರೆ ಹೆಣ್ಣು ಮಕ್ಕಳ ಉಜ್ವಲವಾದ ಭವಿಷ್ಯವನ್ನು ರೂಪಿಸಲು ಶಿಕ್ಷಣವೆಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನ ತಿಳಿದುಕೊಂಡ ವಿವೋ ಸಂಸ್ಥೆಯು (Vivo Scholarship) ಹೆಣ್ಣು ಮಕ್ಕಳಿಗಾಗಿ ಸುಮಾರು 60 ಸಾವಿರ ವಿದ್ಯಾರ್ಥಿ ವೇತನ ಕೊಡಲು 2026ನೇ ವರ್ಷದ ಅರ್ಜಿಯನ್ನು ಆರಂಭಿಸಿದೆ. ಈ ಕಂಪನಿಯು ಚೀನಾದಾಗಿದ್ದರು ಸಹ ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ ನಿರ್ಧಾರವನ್ನು ಈ ಬಾರಿಯೂ ಮಾಡಿದೆ.
ಏನಿದು ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ವೇತನ ?
ಯಾರು ಸ್ಕಾಲರ್ಶಿಪ್ ಹಣವನ್ನ ಪಡೆಯಬಹುದು ? ಹಾಗೆಯೇ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಕೊನೆಯ ದಿನಾಂಕ ಯಾವಾಗ ? ಇವೆಲ್ಲವನ್ನ ತಿಲಯೋಣ”.
ವಿವೋ ಕನ್ಯಾಜ್ಞಾನ (vivo KanyaGyaan Scholarship) ವಿದ್ಯಾರ್ಥಿವೇತನವು ವಿವೋ ಇಂಡಿಯಾ ಸಂಸ್ಥೆಯ ಒಂದು ಮಹತ್ವದ ಯೋಜನೆಯಾಗಿದ್ದು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯುಳ್ಳ ಹಾಗೆ “ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣ (STEM)” ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಾರ್ಷಿಕ ರೂ 60,000 ವರೆಗೆ ಆರ್ಥಿಕ ನೆರವು ನೀಡಲು ಈ ಪ್ರೋತ್ಸಾಹ ಧನ ಕೊಡಲು ಮುಂದಾಗಿದೆ. vivo KanyaGyaan ಯೋಜನೆಯು ಭಾರತದಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವಂತದ್ದು.
ಅರ್ಜಿದಾರರು ಪ್ರಸ್ತುತ ಪದವಿ ಮೊದಲ ಅಥವಾ ಎರಡನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು ಮತ್ತು ತಮ್ಮ ಹಿಂದಿನ ಶೈಕ್ಷಣಿಕ ಪರೀಕ್ಷೆಯಲ್ಲಿ ಕನಿಷ್ಠವಾದರೂ 70% ಅಂಕಗಳನ್ನು ಗಳಿಸಿರುವುದು ಕಡ್ಡಾಯವಾಗಿರುತ್ತದೆ. ಕುಟುಂಬದ ವಾರ್ಷಿಕ ಆದಾಯವು ಸುಮಾರು ಐದು ಲಕ್ಷಕ್ಕಿಂತ ಕಡಿಮೆ ಇರಬೇಕೆಂಬ ಷರತ್ತು ಇದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೇವಲ ಹಣಕಾಸಿನ ನೆರವಷ್ಟೇ ಅಲ್ಲದೆ ಅವರ ವೃತ್ತಿ ಜೀವನಕ್ಕೆ ಪೂರಕವಾಗಿ ತಜ್ಞರ ಮಾರ್ಗದರ್ಶನವು ಸಿಗುತ್ತದೆ. ಆಸಕ್ತರು ಪೋರ್ಟಲ್ ಮೂಲಕ ಮಾರ್ಚ್ 3 2026 ರ ಒಳಗೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸುಲಭವಾಗಿ ಹಾಕಿಕೊಳ್ಳಬಹುದು.
ಪ್ರೋತ್ಸಾಹ ಧನದ ಹೈಲೈಟ್ಸ್ :-
2026ನೇ ವರ್ಷದ ವಿವೋ ಕನ್ಯಾಜ್ಞಾನ ವಿದ್ಯಾರ್ಥಿವೇತನ ಪ್ರೋಗ್ರಾಂ ಹೈಲೈಟ್ಸ್ ಗಳನ್ನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕೆಳಗೆ ಚಾರ್ಟ್ ಮೂಲಕ ರಚಿಸಲಾಗಿದೆ.
| ವಿವರಗಳು (Particulars) | ಮಾಹಿತಿ ( Vivo Scholarship Details) |
|---|---|
| ಯೋಜನೆಯ ಹೆಸರು | ವಿವೋ ಕನ್ಯಾಜ್ಞಾನ ವಿದ್ಯಾರ್ಥಿವೇತನ 2025-26(vivo Scholarship) |
| ಯಾರು ನೀಡುತ್ತಿದ್ದಾರೆ? | ವಿವೋ ಇಂಡಿಯಾ (CSR ಉಪಕ್ರಮ) |
| ವಿದ್ಯಾರ್ಥಿವೇತನ ಮೊತ್ತ | ವರ್ಷಕ್ಕೆ ₹60,000 (ಗರಿಷ್ಠ 3 ವರ್ಷಗಳವರೆಗೆ) |
| ಅರ್ಹ ಕೋರ್ಸ್ಗಳು | STEM ಪದವಿ (B.E., B.Tech, B.Sc, BCA, ಇತ್ಯಾದಿ) |
| ಶೈಕ್ಷಣಿಕ ಅರ್ಹತೆ | 10ನೇ, 12ನೇ ಮತ್ತು ಹಿಂದಿನ ಸೆಮಿಸ್ಟರ್ನಲ್ಲಿ ಕನಿಷ್ಠ 70% ಅಂಕ |
| ಆದಾಯ ಮಿತಿ | ಕುಟುಂಬದ ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು |
| ಯಾರಿಗೆ ಆದ್ಯತೆ? | ಸರ್ಕಾರಿ ಮತ್ತು NIRF ಶ್ರೇಯಾಂಕಿತ ಕಾಲೇಜುಗಳ ವಿದ್ಯಾರ್ಥಿನಿಯರಿಗೆ |
| ಅರ್ಜಿ ಸಲ್ಲಿಸುವ ವಿಧಾನ | Buddy4Study ಪೋರ್ಟಲ್ ಮೂಲಕ ಆನ್ಲೈನ್ |
| ಕೊನೆಯ ದಿನಾಂಕ | ಮಾರ್ಚ್ 3, 2026 |
Vivo Scholarship ಯೋಜನೆಯ ಗುರಿ ಮತ್ತು ವೈಶಿಷ್ಟ್ಯತೆ :-
- ಉನ್ನತ ಶಿಕ್ಷಣದಲ್ಲಿ ಅಂದರೆ ವಿಶೇಷವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರು ಬೆಳೆಯುವಂತೆ ಮಾಡುವುದೇ ಇದರ ಪ್ರಮುಖ ಗುರಿಯಾಗಿದೆ.
- ಬಡತನವೆಂಬ ಕಾರಣದಿಂದ ಅನೇಕ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಯಾವುದೋ ಒಂದು ಉದ್ಯೋಗವನ್ನ ಹಿಡಿದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನ ನಿಲ್ಲಿಸಿ ವಿದ್ಯಾರ್ಥಿಗಳನ್ನ ಶಿಕ್ಷಣದತ್ತ ಕೊಂಡೊಯ್ಯಲು ಸುಮಾರು 60 ಸಾವಿರದವರೆಗೆ Vivo Scholarship ನೀಡಲು ವಿವೊ ಕಂಪನಿಯು ಮುಂದೆ ಬಂದಿದೆ.
- ಇಲ್ಲಿ ಕೇವಲ ಕಂಪನಿಯಿಂದ ಆರ್ಥಿಕ ನೆರವಷ್ಟೇ ಸಿಗುವುದಿಲ್ಲ, ಕೆಲವು ತಜ್ಞರಿಂದ ಮಾರ್ಗದರ್ಶನವೂ ವಿದ್ಯಾರ್ಥಿನಿಯರಿಗೆ ಸಿಗುತ್ತದೆ. ನಂತರದಲ್ಲಿ ಈ ಮಾರ್ಗದರ್ಶನ ಅವರನ್ನ ಒಂದು ಉದ್ಯೋಗಕ್ಕೆ ಸಿದ್ದರಾಗುವಂತೆ ಮಾಡುತ್ತದೆ.
- ಇಂದಿನ ಹೆಣ್ಣುಮಕ್ಕಳು ಕೇವಲ ಹಣದ ಸಮಸ್ಯೆಯಿಂದ ಪಿಯುಸಿ, ಪದವಿ ಮುಗಿಸಿ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಕೈ ಸಲ್ಲುತ್ತಾರೆ. ಅವರನ್ನು ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಿ ಹಾಗೆ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಅಷ್ಟೇ ಅಲ್ಲದೆ ಸಮಾಜದಲ್ಲಿ ಒಬ್ಬ ಉತ್ತಮ ನಾಯಕಿಯರನ್ನಾಗಿ ರೂಪಿಸುವ ಉದ್ದೇಶವನ್ನು ಒಳಗೊಂಡಿದೆ.
- STEM ಫೋರ್ಸ್ ಗಳು ಕೇವಲ ಶ್ರೀಮಂತ ವಿದ್ಯಾರ್ಥಿಗಳ ಪಾಲಾಗದೆ, ಸಮಾಜದಲ್ಲಿ ಬಡವರ್ಗದ ವಿದ್ಯಾರ್ಥಿಗಳು ಕೂಡ ಇಂತಹ ಒಂದು ಅತ್ಯುತ್ತಮ ಕೋರ್ಸ್ ನಲ್ಲಿ ಶಿಕ್ಷಣವನ್ನ ಪಡೆಯಬೇಕು.
ಒಂದೇ ಮಾತಿನಲ್ಲಿ ಸರವಾಗಿ ಹೇಳುವುದಾದರೆ “ಪ್ರತಿಭಾವಂತ ಬಾಲಕಿಯರಿಗೆ ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ವೃತ್ತಿಜೀವನ ರೂಪಿಸಿಕೊಳ್ಳಲು ವೇದಿಕೆ ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಆಶಯ.” ಹಾಗೆ “ಹಣಕಾಸಿನ ತೊಂದರೆಯಿಂದ ಯಾವುದೇ ವಿದ್ಯಾರ್ಥಿನಿ ತಂತ್ರಜ್ಞಾನದ ಶಿಕ್ಷಣದಿಂದ ವಂಚಿತಳಾಗಬಾರದು ಎಂಬುದು ಈ ಯೋಜನೆಯ ಸಂಕಲ್ಪ.”
| ವಿಶೇಷ ಸೂಚನೆ :-ಈ ವಿದ್ಯಾರ್ಥಿ ವೇತನ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ. |
ಯಾರಿಗೆಲ್ಲ ಸಿಗುವುತ್ತೆ ಗೊತ್ತ Vivo Scholarship ?
- STEM ಪದವಿಗಳನ್ನು ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ಈ ಕೆಳಗೆ ಕೊಡಲಾದ ಅರ್ಹತೆಗಳು ನಿಮ್ಮಲ್ಲಿ ಇದ್ದಲ್ಲಿ ಮಾತ್ರ ಈ ಒಂದು ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಸಲ್ಲಿಸಿ.
- ಪ್ರಸ್ತುತ B.E., B.Tech, B.Sc, BCA, ಇತ್ಯಾದಿ ಕೋರ್ಸ್ ಗಳನ್ನ 1ನೇ ಅಥವಾ 2ನೇ ವರ್ಷದಲ್ಲಿಓದುತ್ತಿರಬೇಕು.
- ಸರ್ಕಾರೀ ಕಾಲೇಜು ಅಥವಾ National Institutional Ranking Framework (NIRF) ಸಂಸ್ಥೆಯಲ್ಲಿ ಓದುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ.
- ಕುಟುಂಬದ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ
- ಹತ್ತನೇ ತರಗತಿ, ಸೆಕೆಂಡ್ ಪಿಯುಸಿ ಮತ್ತು ಹಿಂದಿನ ಎಲ್ಲಾ ಸೆಮಿಸ್ಟರ್ನಲ್ಲಿ ಕನಿಷ್ಠ 70% ಅಂಕವನ್ನ ಕಡ್ಡಾಯವಾಗಿ ವಿದ್ಯಾರ್ಥಿನಿ ಹೊಂದಿರಲೇಬೇಕು.
- ಭಾರತದ ಯಾವುದೇ ರಾಜ್ಯದ ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದು.
ವಿದ್ಯಾರ್ಥಿಗಳಿಗಾಗುವ ಅನುಕೂಲ :-
Vivo Scholarship: ವಿವೋ ಕನ್ಯಾಜ್ಞಾನ (vivo KanyaGyaan) ವಿದ್ಯಾರ್ಥಿವೇತನದಿಂದ ಭಾರತದ ಅತ್ಯಂತ ವಿದ್ಯಾರ್ಥಿನಿಯರಿಗೆ ಬಹಳಷ್ಟು ಅನುಕೂಲಗಳು ಆಗುತ್ತವೆ. ಹಾಗಿದ್ರೆ ಯಾವ ರೀತಿಯ ಅನುಕೂಲಗಳು ಕಂಡು ಬರುತ್ತಿವೆ ? ಈ ವರ್ಷಕ್ಕಿಂತ ಹಿಂದಿನ ವರ್ಷಗಳಲ್ಲಿ ಯಾವ ರೀತಿ ಅನುಕೂಲ ಆಗಿದೆ ? ಯಾವಾಗಿಂದ ವಿದ್ಯಾರ್ಥಿನಿಯರಿಗೆ ವಿವೋ ಕಂಪನಿ ಸ್ಕಾಲರ್ಶಿಪ್ ನೀಡುತ್ತಿರುವಂತದ್ದು? ಮುಂದಿನ ಹಂತದಲ್ಲಿ ನೋಡೋಣ.
- ವಾರ್ಷಿಕ ₹60 ಸಾವಿರದಂತೆ ಮೂರು ವರ್ಷಗಳ ಕಾಲ ಒಬ್ಬ ವಿದ್ಯಾರ್ಥಿನಿಗೆ ಒಟ್ಟು ರೂ.1,80,000/- ವರೆಗೂ ಸಹಾಯಧನ ಸಿಗುತ್ತದೆ. ಇದು ಕಾಲೇಜಿನ ಶುಲ್ಕ, ಹಾಸ್ಟೆಲ್ ಮತ್ತು ಪುಸ್ತಕಗಳ ಹೊರೆಯನ್ನ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಕಡಿಮೆ ಮಾಡುತ್ತದೆ.
- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೂ ಸಹ ಬಲಿಷ್ಠವಾದ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬೇಕಾದ ನೆಟ್ವರ್ಕಿಂಗ್ ಮತ್ತು ತರಬೇತಿ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ.
- ವಿದ್ಯಾರ್ಥಿಗಳೇ ನಿಮ್ಮ ನೀವು ಶಿಕ್ಷಣದ ಬಗ್ಗೆ ಕಂಡ ಕನಸನ್ನ ನೆರವೇರಿಸಿಕೊಳ್ಳಬಹುದು. ಯಾವುದೇ ಪದವಿಯನ್ನು ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಬರುವುದಿಲ್ಲ.
- ಕನ್ಯಾಜ್ಞಾನ ವಿದ್ಯಾರ್ಥಿ ವೇತನವು ಕೇವಲ ಹಣವಸ್ತೆ ನೀಡುವುದಿಲ್ಲ. ಒಂದು ಉದ್ಯಮದ ಬಗ್ಗೆ ತಜ್ಞರಿಂದ ಮಾರ್ಗದರ್ಶನವನ್ನು ನೀಡುತ್ತದೆ. ಇದರಿಂದ ವಿದ್ಯಾರ್ಥಿನಿಯರ ಆಧುನಿಕ ವೃತ್ತಿ ಜೀವನಕ್ಕೆ ಬೇಕಾಗುವ ಕೌಶಲ್ಯಗಳನ್ನೆಲ್ಲ ಕಲ್ಪಿಸುತ್ತದೆ.
ಯಾವಾಗಿನಿಂದ ವಿವೋ ಸಂಸ್ಥೆಯು ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ಹಣವನ್ನು ಕೊಡುತ್ತಾ ಬಂದಿದೆ ?
ಸಾಮಾನ್ಯವಾಗಿ ಯಾವುದೇ ವಿದ್ಯಾರ್ಥಿಯಾದರು ಈ ಮೇಲಿನ ಹಂತಗಳನ್ನ ಓದುತ್ತಾ ಬಂದ ಹಾಗೆ ವಿವೊ ಸಂಸ್ಥೆಯು ಯಾವಾಗಿನಿಂದ ವಿದ್ಯಾರ್ಥಿನಿಯರಿಗೆ ಇಷ್ಟೊಂದು ಸ್ಕಾಲರ್ಶಿಪ್ ಮೊತ್ತವನ್ನ ನೀಡುತ್ತಾ ಬಂದಿದೆ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು ಎನ್ನುವುದು ನನ್ನ ಭಾವನೆ.
ವಿವೋ ಇಂಡಿಯಾ ತನ್ನ vivo For Education ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಅಧಿಕೃತವಾಗಿ ಅಗಸ್ಟ್ 16, 2018 ರಂದು ಆರಂಭಿಸಿತು. ಇದು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಮಾರ್ಟ್ಫೋನ್ ವಿತರಣೆಯ ಮೂಲಕ ಆರಂಭವಾಗಿ ನಂತರ ಹಣಕಾಸಿನ ನೆರವು ನೀಡಲು ಶುರು ಮಾಡಿತು.
STEM ಓದುತ್ತಿರುವ ಹೆಣ್ಣುಮಕ್ಕಳಿಗೆ ಮಾತ್ರ ಕೊಡುತ್ತಿರುವ ವೇತನ. ಹಾಗೆ ‘ಕನ್ಯಾಜ್ಞಾನ’ ಯೋಜನೆಯನ್ನು 2023 ರಲ್ಲಿ ಶೂಟಿಂಗ್ ಸ್ಟಾರ್ಸ್ ಫೌಂಡೇಶನ್ ಸಹಯೋಗದೊಂದಿಗೆ ಆರಂಭಿಸಿರುವಂತದ್ದು.
ನಿಮಲ್ಲಿ ಇರಬೇಕಾದ ದಾಖಲೆಗಳು(Documents) :-
- ಇತ್ತೀಚಿನ ಅಂಕಪಟ್ಟಿ – Recent marks card
- ಪ್ರವೇಶ ದೃಢೀಕರಣ (ID ಕಾರ್ಡ್ / ಪ್ರವೇಶ ಪತ್ರ) – Admission confirmation (ID card / Admission letter)
- ಪೋಷಕರ ಆದಾಯ ಪ್ರಮಾಣಪತ್ರ – Parent income certificate
- ಸರ್ಕಾರಿ ಗುರುತಿನ ಚೀಟಿ – Government identity proof
- ಪಾಸ್ಪೋರ್ಟ್ ಗಾತ್ರದ ಫೋಟೋ – Passport size photo
- ಬ್ಯಾಂಕ್ ಪಾಸ್ಬುಕ್ ಅಥವಾ ರದ್ದಾದ ಚೆಕ್ – Bank passbook or cancelled cheque
- ಸ್ವಯಂ ದೃಢೀಕರಣ ಘೋಷಣೆ – Self-declaration form
- ನಾಯಕತ್ವ ಪ್ರಮಾಣಪತ್ರ (ಅಗತ್ಯವಿದ್ದರೆ) – Leadership certificate (if required)
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ) – Caste certificate (if required)
- ಅಂಗವೈಕಲ್ಯ ಪ್ರಮಾಣಪತ್ರ (ಅಗತ್ಯವಿದ್ದರೆ) – Disability certificate (if required)
- ಪೂರ್ಣ ಶುಲ್ಕ ವಿವರ – Complete fee details
- ಕ್ರೀಡಾ ಪ್ರಮಾಣಪತ್ರ (ಅಗತ್ಯವಿದ್ದರೆ) – Sports certificate (if required)
- ಮೊದಲ ತಲೆಮಾರಿನ ಕಲಿಯುವವರ ಘೋಷಣೆ (ಅಗತ್ಯವಿದ್ದರೆ) – First generation learner declaration (if required)
ಪ್ರಮುಖ ದಿನಾಂಕ(important date) :-
ವಿವೋ ಕನ್ಯಾಜ್ಞಾನ ವಿದ್ಯಾರ್ಥಿ ಮೆತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಕೆಳಗೆ ಕೊಡಲಾದ ಪ್ರಮುಖ ದಿನಾಂಕದ ವಿವರವನ್ನು ತಿಳಿಯಿರಿ.
| ಅರ್ಜಿ ಸಲ್ಲಿಸಲು ಆರಂಭದ ದಿನಾಂಕ | ಫೆಬ್ರವರಿ 13, 2026 |
| ಅರ್ಜಿ ಸಲ್ಲಿಸಲು ಕೊನೆಯ ಅದಿನಾಂಕ | ಮಾರ್ಚ್ 3, 2026 |
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ (online application) :-
- ವಿದ್ಯಾರ್ಥಿಗಳು ಅಧಿಕೃತ Buddy4Study ವಿದ್ಯಾರ್ಥಿವೇತನ ಪೋರ್ಟಲ್ಗೆ ಮೊದಲು ಭೇಟಿ ನೀಡಿ.
- ಈಗಲೇ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಇಮೇಲ್/ಮೊಬೈಲ್/ಗೂಗಲ್ ಖಾತೆಯನ್ನು ಬಳಸಿಕೊಂಡು ಲಾಗಿನ್ ಮಾಡಿ (ಹೊಸ ಬಳಕೆದಾರರು ಸೈನ್ ಅಪ್ ಮಾಡಬೇಕು).
- ವಿವೋ ಕನ್ಯಾಜ್ಞಾನ ವಿದ್ಯಾರ್ಥಿವೇತನ 2025-26 ಅರ್ಜಿ ನಮೂನೆಯನ್ನು ಪ್ರಾರಂಭಿಸಿ.
- ವೈಯಕ್ತಿಕ, ಶೈಕ್ಷಣಿಕ ಮತ್ತು ಆದಾಯದ ವಿವರಗಳನ್ನು ಎಚ್ಚರಿಕೆಯಿಂದ ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನೀವು ಭರ್ತಿ ಮಾಡಲಾದ ಅಪ್ಲಿಕೇಶನ್ ಸರಿ ಇದೆಯೇ ನೋಡಿ.
- ತಪ್ಪದೆ 3 ಮಾರ್ಚ್ 2026 ರ ಮೊದಲು ಸಲ್ಲಿಸಿ .
- ಉಲ್ಲೇಖಕ್ಕಾಗಿ ದೃಢೀಕರಣ ಪ್ರತಿಯನ್ನು ಡೌನ್ಲೋಡ್ ಮಾಡಿ.
- ಅಂತಿಮ ದಿನಾಂಕ ಮುಗಿದ ಮೇಲೆ ನೀವು ಅರ್ಜಿ ಸಲ್ಲಿಸಲು ಮುಂದಾದರೆ ಅರ್ಜಿ ರಿಜೆಕ್ಟ್ ಆಗುತ್ತದೆ.
ಮತ್ತೆ ಮತ್ತೆ ಕೇಳಲಾದ ಪ್ರಶ್ನೋತ್ತರಗಳು (question and answers):-
ಉತ್ತರ : ಇಲ್ಲ. ಇದು ಕೇವಲ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ವಿಷಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಮಾತ್ರ.
ಉತ್ತರ: ಇಲ್ಲ. ಅರ್ಜಿದಾರರು 10ನೇ, 12ನೇ ತರಗತಿ ಮತ್ತು ಹಿಂದಿನ ಸೆಮಿಸ್ಟರ್ಗಳಲ್ಲಿ ಕನಿಷ್ಠ 70% ಅಂಕ ಪಡೆದಿರುವುದು ಕಡ್ಡಾಯ.
ಉತ್ತರ: ಇಲ್ಲ. ನೀವು ಸಲ್ಲಿಸಿದ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ (Interview) ನಡೆದ ನಂತರವೇ ಅರ್ಹ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತದೆ.
ಉತ್ತರ: ಇದನ್ನು ನಿಮ್ಮ ಶೈಕ್ಷಣಿಕ ಶುಲ್ಕ (Tuition Fee), ಹಾಸ್ಟೆಲ್ ಶುಲ್ಕ, ಪುಸ್ತಕಗಳು ಅಥವಾ ಓದಿಗೆ ಬೇಕಾದ ಲ್ಯಾಪ್ಟಾಪ್ ಖರೀದಿಸಲು ಬಳಸಬಹುದು.

