ಉದ್ಯೋಗಿನಿ ಯೋಜನೆ 2026 | Udyogini Scheme (Yojane) In Karnataka Kannada | USK

ಉದ್ಯೋಗಿನಿ ಯೋಜನೆ 2026 | Udyogini Scheme In Karnataka

ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆ (Udyogini Scheme) ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ಸ್ವಂತ ಉದ್ಯೋಗ ಪ್ರಾರಂಭಿಸಲು ನೆರವು ನೀಡುವ ಒಂದು ಉತ್ತಮ ಯೋಜನೆಯಾಗಿದೆ. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಯಮದ ಮೂಲಕ ಜಾರಿಗೊಳಿಸಿದೆ. ಗ್ರಾಮೀಣ ಮತ್ತು ಹಿಂದುಳಿದ ಮಹಿಳೆ ಉದ್ಯಮಿಗಳಿಗೆ ಸಹಾಯಧನ ನೀಡುವ ಯೋಜನೆಯಾಗಿದೆ.

Udyogini Scheme In Karnataka

ಇದರ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಪ್ರೋತ್ಸಾಹಿಸುವ ಒಂದು ಯೋಜನೆಯಾಗಿದೆ. ಈ ಯೋಜನೆಯು ಮಹಿಳೆಯರಿಗೆ ವ್ಯಾಪಾರ ಮಾಡಲು ಹಣಕಾಸಿನ ನೆರವು ನೀಡುವ ಮೂಲಕ ಬಡವರಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಹೆಚ್ಚಿಸುತ್ತದೆ ಹಾಗು ಅವರಲ್ಲಿ ಆರ್ಥಿಕ ಸ್ವಾತಂತ್ರವನ್ನು ಉತ್ತೇಜಿಸುವ ಗುರುಯನ್ನು ಹೊಂದಿದೆ. ಉದ್ಯೋಗಿನಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಮತ್ತು ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ರೀತಿಯ ಸಹಾಯಧನಗಳು ಸಿಗುತ್ತದೆ. ನಿರ್ದಿಷ್ಟ ಕ್ಷೇತ್ರಗಳಲ್ಲಿನ ಸ್ವಯಂ ಉದ್ಯಮಗಳಿಗೆ ಅವಕಾಶ.

ಯೋಜನೆಯ ಅವಲೋಕನ:-

ಯೋಜನೆಯ ಹೆಸರುಉದ್ಯೋಗಿನಿ ಯೋಜನೆ
ಫಲಾನುಭವಿಗಳುಮಹಿಳೆಯರು
ಅರ್ಜಿಸಲ್ಲಿಸುವ ವಿಧಾನಆನ್ ಲೈನ್ ಮತ್ತು ಆಫ್ ಲೈನ್ ಮೂಲಕ
ಅರ್ಜಿಸಲ್ಲಿಸುವ ರಾಜ್ಯಕರ್ನಾಟಕ
ಅಧಿಕೃತ ವೆಬ್ ಸೈಟ್https://kswdc.karnataka.gov.in/21/udyogini/en
Udyogini Scheme In Karnataka Kannada

ಯೋಜನೆಯ ಉದ್ದೇಶ:-

ಮಹಿಳಾ ಸಬಲೀಕರಣ :-

  • ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಪ್ರೇರಿಪಿಸುವುದು ಮತ್ತು ಸಮಾಜದಲ್ಲಿ ಅವರ ಸ್ಥಾನಮಾನವನ್ನು ಹೆಚ್ಚಿಸುವುದು

ಸ್ವಯಂ ಉದ್ಯೋಗಕ್ಕೆ ಉತ್ತೇಜನ:-

  • ನಿರುದ್ಯೋಗಿ ಮಹಿಳೆಯರು ಸ್ವಂತ ಉದ್ಯೋಗ ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಆರ್ಥಿಕ ಸಹಾಯಧನ ಒದಗಿಸುವುದು.

ಬಂಡವಾಳದ ನೆರವು:-

  • ಕೃಷಿ ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಉದ್ಯಮ ಆರಂಭಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಮತ್ತು ಗರಿಷ್ಠ ಸಹಾಯದ ನೀಡುವ ಮೂಲಕ ಬಂಡವಾಳದ ಕೊರತೆಯನ್ನು ನೀಗಿಸುವುದು

ಆರ್ಥಿಕ ಸ್ವಾತಂತ್ರ್ಯ :-

  • ಗ್ರಾಮೀಣ ಮತ್ತು ಹಿಂದುಳಿದ ವರ್ಗದ ಮಹಿಳೆಯರು ತಮ್ಮ ಕುಟುಂಬದ ಅಧಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಆರ್ಥಿಕವಾಗಿ ಯಾರನ್ನು ಅವಲಂಭಿಸದಂತೆ ಮಾಡುವುದು

ತರಬೇತಿ ಮತ್ತು ಕೌಶಲ್ಯ :-

  • ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ವ್ಯಾಪಾರ ನಿರ್ವಹಣೆಯ ಬಗ್ಗೆ ಅಗತ್ಯ ಕೌಶಲ್ಯ ಮತ್ತು ತರಬೇತಿಯನ್ನು ನೀಡುವುದು

ಸಂಕ್ಷಿಪ್ತ ಮಾಹಿತಿ:- Udyogini Scheme In Karnataka

ಈ ಯೋಜನೆಯು ಮಹಿಳೆಯರು ಮನೆಬಿಟ್ಟು ಹೊರಬಂದು ಸ್ವಂತ ವ್ಯವಹಾರ ಮಾಡುವ ಮೂಲಕ ಆರ್ಥಿಕ ಸಬಲೀಕರಣ ಹೊಂದಲು ಮತ್ತು ತಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲಲು ಸಹಕಾರಿಯಾಗಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಪ್ರೇರಿಪಿಸುವುದು ಮತ್ತು ಸಮಾಜದಲ್ಲಿ ಅವರ ಸ್ಥಾನಮಾನವನ್ನು ಹೆಚ್ಚಿಸುವುದು. ಈ ಯೋಜನೆಯಿಂದಾಗಿ ಬ್ಯಾಂಕುಗಳಿಂದ 3 ಲಕ್ಷದ ವರೆಗೆ ಸಾಲ ಸ್ವಲಭ್ಯ ದೊರೆಯುತ್ತದೆ ಆ. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಯಮದ ಮೂಲಕ ಜಾರಿಗೊಳಿಸಿದೆ.

ಅರ್ಹತಾ ಮಾನದಂಡಗಳು:- Udyogini Scheme In Karnataka

  • ಈ ಯೋಜನೆಯ ಲಾಭಪಡೆಯಲು

ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ:-

ಅರ್ಜಿದಾರರು ಕಡ್ಡಾಯವಾಗಿ ಮಹಿಳಾ ಅಭ್ಯರ್ಥಿಯಾಗಿರಬೇಕು. ಯಾರಮೇಲೆಯೂ ಅವಲಂಬನೆಯಾಗದೆ ಸ್ವತಂತ್ರವಾಗಿ ಬದುಕಲು ಈ ಯೋಜನೆ ಬಹುಮುಖ್ಯ ಪಾತ್ರವಹಿಸುತ್ತದೆ.

ನಿವಾಸಿ:-

  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು. ನಿರ್ದಿಷ್ಟ ಸ್ಥಳದಲ್ಲಿ ಶಾಶ್ವತವಾಗಿ ಅಥವಾ ದೀರ್ಘಕಾಲದವರೆಗೆ ವಾಸಿಸುವ ವ್ಯಕ್ತಿಯಾಗಿರಬೇಕು.

ವಯೋಮಿತಿ :-

  • ಈ ಸಹಾಯಧನವನ್ನು ಪಡೆಯಲು ಅರ್ಜಿದಾರದ ವಯಸ್ಸು ಕನಿಷ್ಠ18ವರ್ಷ ಗರಿಷ್ಠ 55 ವರ್ಷಗಳ ಒಳಗಿರಬೇಕು.

ಅಧಾಯದ ಮಿತಿ:-

  • ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಕುಟುಂಬದ ವಾರ್ಷಿಕ ಆಧಾಯ ₹1,50,000 ಒಳಗಿರಬೇಕು
  • SC/ST ಮಹಿಳೆಯರ ವಾರ್ಷಿಕ ಆಧಾಯ ₹2.00.000 ಒಳಗಿರಬೇಕು.
  • ವಿಧವಾ ಮತ್ತು ಅಂಗವಿಲ ಮಹಿಳೆಯರಿಗೆ ಅಧಾಯದ ಮಿತಿ ಅನ್ವಯಿಸುವುದಿಲ್ಲ.

ಆಧ್ಯತೆ:-

  • ಬಡತನ ರೇಖೆಗಿಂತ ಕೆಳಗಿರು ಸಂಕಷ್ಟದಲ್ಲಿರುವ ವಿಧವೆಯರು ವಿಶೇಷ ಚೇತನ ಮಹಿಳೆಯರಿಗೆ ಇಲ್ಲಿ ಮೊದಲ ಆಧ್ಯತೆ ನೀಡಲಾಗುವುದು.

ತರಬೇತಿ :-

  • ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಥವಾ ಇತರೆ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಅಗತ್ಯ ದಾಖಲೆಗಳು:- Udyogini Scheme In Karnataka

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ತರಬೇತಿ ಅನುಭವದ ಪ್ರಮಾಣ ಪತ್ರ
  • ವಯಸ್ಸಿನ ಪುರಾವೆ
  • ಬ್ಯಾಂಕ್ ಪಾಸ್ ಬುಕ್
  • ನಿವಾಸ ಪ್ರಮಾಣ ಪತ್ರ

ಅನುಕೂಲಗಳು:- Udyogini Scheme In Karnataka

ಆರ್ಥಿಕ ಸ್ವತಂತ್ರ ಮತ್ತುಸಬಲೀಕರಣ :-

  • ಈ ಯೋಜನೆಯು ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸಲು ನೆರವಾಗುವ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಲು ಮತ್ತು ಸಮಾಜದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ

ಗರಿಷ್ಠ ಸಹಾಯಧನ:-

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸಾಲದ ಮೊತ್ತ 50% ರಷ್ಟು ಸಹಾಯಧನ ದೊರೆಯುತ್ತದೆ.
  • ಇತರೆ ವರ್ಗದ ಮಹಿಳೆಯರಿಗೆ 30% ರಷ್ಟು ಸಹಾಯದನ ದೊರೆಯುತ್ತದೆ

ಕಡಿಮೆ ಬಡ್ಡಿದರದಲ್ಲಿ ಸಾಲ:-

  • ಉದ್ಯೋಗಿನಿ ಯೋಜನೆ ಅಡಿಯಲ್ಲಿ ದೊರೆಯುವ ಬಡ್ಡಿದರವು ಸಾಮಾನ್ಯವಾಗಿ ವಾಣಿಜ್ಯ ಬ್ಯಾಂಕುಗಳು ನೀಡುವ ಬಡ್ಡಿದರಕಿಂತ ಕಡಿಮೆ ಇರುತ್ತದೆ

ಬಡ್ಡಿ ರಿಯಾಯಿತಿ:-

  • ವಿಧವೆಯರು, ಅಂಗವಿಕಲರು ಮತ್ತು ಸಂಕಷ್ಟದಲ್ಲಿರುವ ಮಹಿಳೆಯುಳರಿಗೆ ಕೆಲವು ಸಂದರ್ಭದಲ್ಲಿ ಬಡ್ಡಿರಹಿತ ಸಲ ಸೌಲಭ್ಯಗಳು ಲಭ್ಯವಿರುತ್ತವೆ.

ಸುಲಭ ಸಾಲ ಮರುಪಾವತಿ:-

  • ಸಾಲವನ್ನು ಸುಲಭ ಮಾಸಿಕ ಕಂತುಗಳ ಮೂಲಕ ಮರುಪಾವತಿಸಲು ಅವಕಾಶವಿರುತ್ತದೆ

ವ್ಯಾಪಕ ಉದ್ಯಮದ ಆಯ್ಕೆಗಳು:-

ಕೃಷಿ ,ಕೈಗಾರಿಕೆ, ಸೇವಾ ವಲಯ ಸೇರಿದಂತೆ ಸುಮಾರು 88 ವಿವಿಧ ಉದ್ಯೋಗಗಳಿಗೆ ಸಾಲ ಲಭ್ಯವಿದೆ

ನಿರುದ್ಯೋಗ ನಿವಾರಣೆ:-

ಮಹಿಳೆಯರಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಲು ಸಹಾಯಕವಾಗಿದೆ.

ಅನಾನುಕೂಲಗಳು:- Udyogini Scheme In Karnataka

ಸಂಕೀರ್ಣ ಅರ್ಜಿಪ್ರಕ್ರಿಯೆ:-

  • ಅರ್ಜಿಸಲ್ಲಿಸುವ ಪ್ರಕ್ರಿಯೆಯು ಸಂಪರ್ಣವಾಗಿ ಆನ್ ಲೈನ್ ನಲ್ಲಿ ಲಭ್ಯವಿರುವುದಿಲ್ಲ. ಕಚೇರಿಗಳಿಗೆ ಹೋಗಿ ಅರ್ಜಿಸಲ್ಲಿಸಬೇಕಾಗುತ್ತದೆ ಇದರಿಂದಾಗಿ ಹೆಚ್ಚು ಸಮಯ ಬೇಕಾಗುತ್ತದೆ.

ಸಾಲ ವಿತರಣೆಯಲ್ಲಿ ವಿಳಂಬ:-

  • ಅರ್ಜಿಸಲ್ಲಿಸಿದ ನಂತರ ಸಾಲ ಮಂಜೂರಾತಿ ಮತ್ತು ವಿತರಣೆಯು ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ವಿಳಂಬವಾಗಬಹುದು

ಸೀಮಿತ ಸಾಲದ ಮೊತ್ತ:-

  • ಗರಿಷ್ಠ ಸಾಲದ ಮೊತ್ತವು ಕೇವಲ 3 ಲಕ್ಷವಾಗಿರುತ್ತದೆ ದೊಡ್ಡ ಪ್ರಮಾಣದ ಉದ್ಯಮಗಳಿಗೆ ಈ ಮೊತ್ತವು ಸಾಕಾಗದಿರಬಹುದು.

ಅಧಾಯದ ಮಿತಿ:-

  • ಸಾಮಾನ್ಯ ವರ್ಗದ ಮಹಿಳೆಯರಿಗೆ ವಿಧಿಸಿರುವ ಆದಾಯದ ಮಿತಿ ಕಡಿಮೆಯಿರುವುದಂದ ಅನೇಕ ಮಾಧ್ಯಮ ವರ್ಗದ ಮಹಿಳೆಯರು ಈ ಯೋಜನೆಯ ವ್ಯಾಪ್ತಿಯಿಂದ ಹೊರಗುಳಿಯುತ್ತಾರೆ.

ಎಲ್ಲಾ ಬ್ಯಾಂಕುಗಳಲ್ಲಿ ಲಭ್ಯವಿಲ್ಲ:-

ಯೋಜನೆ ವರದಿಯು ಸಿದ್ಧಪಡಿಸುವ ಸವಾಲುಗಳು:-

ಅರ್ಜಿ ಸಲ್ಲಿಸುವ ವಿಧಾನ:- Udyogini Scheme In Karnataka

  • ಕರ್ನಾಟಕಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ ಸೈಟ್ https://kswdc.karnataka.gov.in/21/udyogini/en ಗೆ ಭೇಟಿನೀಡಿ ಅರ್ಜಿಸಲ್ಲಿಸಿ
  • ದಾಖಲೆಯಾಳನ್ನು ಅಪ್ಲೆಮಾಡಿ
  • ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
  • ಅರ್ಜಿಯನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
  • ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು

ಅಂತಿಮ ತೀರ್ಮಾನ:-

ಮಹಿಳೆಯನ್ನು ಉತ್ತೇಜಿಸುವ ದೃಷ್ಟಿಇಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಾಗು ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಈ ಯೋಜನೆಯಿಂದಾಗಿ ಈ ಯೋಜನೆಯು ಮಹಿಳೆಯರಿಗೆ ವ್ಯಾಪಾರ ಮಾಡಲು ಹಣಕಾಸಿನ ನೆರವು ನೀಡುವ ಮೂಲಕ ಬಡವರಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಹೆಚ್ಚಿಸುತ್ತದೆ ಹಾಗು ಅವರಲ್ಲಿ ಆರ್ಥಿಕ ಸ್ವಾತಂತ್ರವನ್ನು ಉತ್ತೇಜಿಸುವ ಗುರುಯನ್ನು ಹೊಂದಿದೆ. ಉದ್ಯೋಗಿನಿ ಯೋಜನೆಯಿಂದಾಗಿ ಸರ್ಕಾರದಿಂದ ಮಹಿಳೆಯರಿಗೆ 3 ಲಕ್ಷದ ವರೆಗೆ ಸಾಲ ಸೌಲಭ್ಯ ದೊರೆಯುತ್ತದೆ. ನೀವು ಅರ್ಜಿಸಲ್ಲಿಸಿ ಈ ಸಹಾಯದವನ್ನು ಪಡೆದುಕೊಳ್ಳಿ


ಇತರೆ ಯೋಜನೆ ಲಿಂಕುಗಳು :-

Leave a Reply

Your email address will not be published. Required fields are marked *