ಅಬ್ಬಬ್ಬಾ! ಇದೆಂತ ಬಿಸಿಲು, ಆಯೋ! ಇದೆಂತ ಶಕೆ! ಇಲ್ಲಿದೆ ಟಾಪ್ 10 ಟಿಪ್ಸ್!

Top 10 Tips to Beat the Heat Waves in the Summers

ಅಬ್ಬಬ್ಬಾ! ಇದೆಂತ ಬಿಸಿಲು, ಆಯೋ! ಇದೆಂತ ಶಕೆ. ನಿಮ್ಮ ಪರಿಸ್ಥಿತಿಯು ಹೀಗೆ ಆಗಿದಿಯ. ನೀವು ತಿಳಿಯಲೇ ಬೇಕು ಇದು ಏಪ್ರಿಲ್ ಅಲ್ಲ… ಮೇ ಅಲ್ಲ.. ಇದು ಫೆಬ್ರವರಿ! ಆದರೆ ಮಧ್ಯಾನದ ಹೊತ್ತಲ್ಲಿ ಹೊರಗೆ ಕಾಲಿಟ್ಟ ತಕ್ಷಣ ಸಮ್ಮರ್ ಶುರುವಾದಂತೆ ಫೀಲ್ ಆಗುತ್ತಿದೆಯಾ? ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಬೆಳಗಿನ ಸೂರ್ಯನ ತಾಪ ಹೆಚ್ಚು ಅನುಭವವಾಗುವುದಿಲ್ಲ.

Top 10 Tips to Beat the Heat Waves in the Summers

ಆ ಸಮಯದಲ್ಲಿ ವಾತಾವರಣ ಸ್ವಲ್ಪ ಮೃದುವಾಗಿರುತ್ತದೆ. ಆದರೆ ಸುಮಾರು 11 ಗಂಟೆಯ ನಂತರ ಸೂರ್ಯನಾ ತಾಪಮಾನ ಬಹಳಷ್ಟು ಹೆಚ್ಚಾಗಿ ಕಿರಣಗಳು ನೇರವಾಗಿ ಮತ್ತು ತೀವ್ರವಾಗಿ ಬೀಳುತ್ತವೆ. ಆ ಸಂದರ್ಭದಲ್ಲಿ ಸೂರ್ಯ “ನಾನು ಬಂದೆ!” ಅನ್ನೋ ಸ್ಟೈಲ್‌ನಲ್ಲಿ ಕಿರಣಗಳ ದಾಳಿ ಮಾಡ್ತಾನೆ.

ಪ್ರತಿಯೊಬ್ಬರಿಗೂ ತಲೆಯ ಮೇಲೆ ಬೆಂಕಿ ಹೊತ್ತಂತಹ ಅನುಭವವಾಗುತ್ತದೆ ಹಾಗೆ ದೇಹದಲ್ಲಿ ಬೆವರು ಹರಿಯುತ್ತದೆ. ಮೋಡಗಳು ಕವಿದು, ಗಾಳಿ ಸ್ವಲ್ಪ ತಂಪಾದಂತೆ ಅನಿಸಿದರೂ ಸಂಜೆ ಹೊತ್ತಿಗೆ ಆಕಾಶದ ಕಡೆ ನೋಡಿದ್ರೆ ಮೋಡಗಳು ಕವಿದು, ಗಾಳಿ ಸ್ವಲ್ಪ ತಂಪಾದಂತೆ ಅನಿಸಿದರೂ – “ಇನ್ನೇನು ವರುಣರಾಯ ಎಂಟ್ರಿ ಕೊಡ್ತಾನೋ?” ಅನ್ನೋ ಹೈಡ್ರಾಮಾ ಸೀನ್ ಶುರುವಾಗುತ್ತದೆ. ಆದರೆ ಈ ತಂಪಿನ ಭ್ರಮೆಗೆ ನೀವು ಮರುಳಾಗೋದು ಬೇಡ!

“ಫೆಬ್ರವರಿಯ ಬಿಸಿಲು ನಮಗೆ ಮುಂದೆ ಬರುವ ಎಪ್ರಿಲ್-ಮೇ ಬಿಸಿಲಿಗೆ ಸಣ್ಣ ಸೂಚನೆಯನ್ನ ನೀಡುತ್ತಿದೆ; ಪ್ರತಿಯೊಬ್ಬರೂ ತಮ್ಮ ಆರೋಗ್ಯದ ದೃಷ್ಟಿ ಇಂದ ಈಗಲೇ ಜಾಗ್ರತೆ ವಹಿಸಬೇಕು”

ಈ ಫೆಬ್ರವರಿ ಆಗಿ ಬಿಸಿಲು ಕೇವಲ ಹವಮಾನ ಬದಲಾವಣೆ ಅಲ್ಲ ಇದು ನಿಮ್ಮ ದೇಹಕ್ಕೆ ಮುನ್ನೆಚ್ಚರಿಕೆಯ ಸೂಚನೆಯಾಗಿರುತ್ತದೆ.

ಫೆಬ್ರವರಿ ತಿಂಗಳ ಈ ಬಿಸಿಲು ಪ್ರತಿಯೊಬ್ಬ ಜನಸಾಮಾನ್ಯರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಇನ್ನು ಸಮ್ಮರ್ ಬಂದಿಲ್ಲ ಅನ್ನೋ ಭ್ರಮೆಯಿಂದ ನಾವು ನೀರು ಕಡಿಮೆ ಕುಡಿಯುತ್ತೇವೆ, ಮಧ್ಯಾಹ್ನದ ಬಿಸಿಲಿನಲ್ಲಿ ನಿರ್ಲಕ್ಷವಾಗಿ ಓಡಾಡುತ್ತೇವೆ, ಆಹಾರದಲ್ಲಿ ಜಾಗ್ರತೆ ವಹಿಸುವುದಿಲ್ಲ, ಅಂದರೆ ದೇಹದ ಒಳಗೆ ಉಷ್ಣತೆ ಹೆಚ್ಚಾಗುತ್ತಾ ಬರುತ್ತದೆ.

ಭಾಗಶಃ ಸಂಜೆ ಹೊತ್ತಿಗೆ ವಾತಾವರಣದಲ್ಲಿ ಮೋಡ ಕವಿದರೆ ನಿಮ್ಮಗೆ ತಂಪಾಗಿದೆ ಅನ್ನಿಸಬಹುದು. ಆದರೆ ತೇವಾಂಶ ಹೆಚ್ಚಾದಾಗ ದೇಹದ ಕೂಲಿಂಗ್ ಸಿಸ್ಟಮ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಪರಿಣಾಮ ತಲೆನೋವು, ಕೋಪ, ಆಯಾಸ, ನಿದ್ರಾ ಸಮಸ್ಯೆ ಎಲ್ಲವೂ ನಿಧಾನವಾಗಿ ಒಬ್ಬ ಮನುಷ್ಯನ ದೇಹದಲ್ಲಿ ಶುರುವಾಗುತ್ತವೆ. ಆದ್ದರಿಂದ ಫೆಬ್ರವರಿಯನ್ನೇ Preparation Month ಅಂತ ತೆಗೆದುಕೊಂಡು ಈಗಲೇ ನಿಮ್ಮ ಲೈಫ್ ಸ್ಟೈಲ್ ಕಂಟ್ರೋಲ್ ಮಾಡಿದ್ರೆ ಮುಂದೆ ಬರುವ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಿಮ್ಮ ದೇಹದ ಆರೋಗ್ಯದ ಸ್ಥಿತಿಯನ್ನು ಒಂದು ರೀತಿಯಲ್ಲಿ ಕಂಟ್ರೋಲ್ ಇಟ್ಟುಕೊಳ್ಳಬಹುದು.

“ಹೆಚ್ಚುತ್ತಿದೆ ಬಿಸಿಲಿನ ಬೇಗೆ, ಮಾಡಿ ಆರೋಗ್ಯದ ಕಾಳಜಿ ಹೀಗೆ!”

ಇಂದು ಮಧ್ಯಾಹ್ನ ಸುಟ್ಟು ಹಾಕುವಂತೆ ಬಿಸಿಲು, ಸಂಜೆ ಮೋಡದಿಂದ ಡ್ರಾಮಾ!
ಮಾರ್ಚ್-ಏಪ್ರಿಲ್? ಆ ಸಮಯದಲ್ಲಿ ಮಧ್ಯಾಹ್ನ ಸೂರ್ಯ ಫುಲ್ ಪವರ್, ಅಂಗ ಅಂಗ ಸುಡ್ತಾ, ರಾತ್ರಿ ಮಾತ್ರ ತಣ್ಣನೆ ಅಲೈಟ್.

ಹಾಗಿದ್ರೆ ಇನ್ನು ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಯಾವ ರೀತಿಯ ಬಿಸಿಲು ಇರಬಹುದು? ಅತಿಯಾದ ಬಿಸಿಲಿನಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಆರೋಗ್ಯದ ಕಾಳಜಿ ಮಾಡುವುದಾದರೂ ಹೇಗೆ?

ಕೆಳಗೆ ಕೊಡಲಾದ ಟಾಪ್ 10 ಹೆಲ್ತ್ ಟಿಪ್ಸ್ ಅನ್ನ ಫಾಲೋ ಮಾಡಿದ್ರೆ: ನಿಮ್ಮ ದೇಹದ ಕಂಡೀಶನ್ ಫುಲ್ ಕೂಲ್ ಕೂಲ್!

ಇನ್ನು ಸಮ್ಮರ್ ಬಂದಿಲ್ಲ ಅಲ್ವಾ? ಇಂಥ ತಪ್ಪು ಕಲ್ಪನೆಯನ್ನ ಮೊದಲು ಬಿಡಿ!. ಇವತ್ತಿಂದನೆ ದೇಹದಲ್ಲಿ ನೀರಿನ ಪ್ರಮಾಣವನ್ನ ಪ್ರತಿಯೊಬ್ಬರು ಕಾಪಾಡಿಕೊಳ್ಳಲೇಬೇಕು, ಅತಿ ಹೆಚ್ಚಾಗಿ ನೀರು ಕುಡಿಯಲೇ ಬೇಕು.

ಟಿಪ್ಸ್ 1. ಹಾಗಿದ್ರೆ ಎಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು? ಕಂಪ್ಲೀಟ್ ವಿವರ ಈ ಕೆಳಗೆ ಇದೆ

  • ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ಬಿಸಿಲಿನ ಸಂದರ್ಭದಲ್ಲಿ ದೇಹ ನಿರಂತರವಾಗಿ ನೀರಿನ ಅಂಶವನ್ನ ಕಳೆದುಕೊಳ್ಳುತ್ತದೆ. ದಿನಕ್ಕೆ ಒಬ್ಬ ಮನುಷ್ಯ ಕನಿಷ್ಠ 3 ಲೀಟರ್ ನೀರು ಕುಡಿಯುವುದರಿಂದ ದೇಹದ ಉಷ್ಣವೂ ನಿಯಂತ್ರಣಕ್ಕೆ ಬರುತ್ತದೆ ಹಾಗೆ ಜಠರದ ವ್ಯವಸ್ಥೆ ಮತ್ತು ರಕ್ತ ಸಂಚಲನ ಸಮತೋಲನ ದಲ್ಲಿ ಇರುತ್ತದೆ.
  • ನೀವು ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ನೀರನ್ನ ಕುಡಿಯುವುದು ದೇಹದಲ್ಲಿ ನೀರಿನ ಪ್ರಮಾಣವನ್ನ ಹೆಚ್ಚಿಸುತ್ತದೆ ಹಾಗೆ ನಿಮ್ಮ ದೇಹದಲ್ಲಿ ಇದು ದಿನಪೂರ್ತಿ ಶಕ್ತಿ ಮತ್ತು ಎನರ್ಜಿಯನ್ನ ಹೆಚ್ಚಿಸುತ್ತದೆ.
  • ಮಧ್ಯಾನದ ಊಟ ಮಾಡುವ ಮೊದಲು ಸ್ವಲ್ಪ ನೀರು ಕುಡಿಯುವುದು ಜಠರವನ್ನು ಸಜೀವಗೊಳಿಸುತ್ತದೆ ಹಾಗಾಗಿ ಈ ಬೇಸಿಗೆಯಲ್ಲಿ ಈ ಕೆಲಸವನ್ನು ನೀವು ತಪ್ಪದೆ ಮಾಡಿ.
  • ಪ್ರತಿದಿನ ಎಳನೀರು, ಮಜ್ಜಿಗೆ, ನಿಂಬೆ ರಸವನ್ನು ನೀರಿಗೆ ಬೆರೆಸಿ ಕುಡಿಯುವುದು ಇಂತಹ ಕೆಲಸವನ್ನ ದಿನನಿತ್ಯ ಮಾಡುತ್ತಾ ಬನ್ನಿ. ಯಾಕೆಂದರೆ ಇವುಗಳು ದೇಹಕ್ಕೆ ನೈಸರ್ಗಿಕ ಎಲೆಕ್ಟ್ರಾನಿಕ್ ನೀಡುತ್ತದೆ, ಹೈಡ್ರೇಶನ್ ಕಾಪಾಡುತ್ತದೆ, ತಂಪು ನೀಡುತ್ತಾ ಜಠರವನ್ನ ಶಾಂತ ಮಾಡುತ್ತದೆ. ಹಾಗೆಯೇ ವಿಟಮಿನ್ ಸಿ ನೀಡುತ್ತ ದೇಹಕ್ಕೆ ರಿಫ್ರೆಶ್ ಆಗಲು ಸಹಾಯ ಮಾಡುತ್ತದೆ.

ಬಿಸಿಲಿನಲ್ಲಿ ನಿಮ್ಮ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯದಿದ್ದರೆ ಏನಾಗುತ್ತದೆ ಗೊತ್ತಾ?

ಇಂತಹ ಸುಡು ಬಿಸಿಲಿನಲ್ಲೂ ನಿಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರಮಾಣದಲ್ಲಿ ನೀರನ್ನ ಕುಡಿಯದೆ ಹೋದರೆ ನೀವು ನಿಮ್ಮ ದೇಹಕ್ಕೆ ಒಂದಿಷ್ಟು ಸಮಸ್ಯೆಯನ್ನ ತಂದುಕೊಳ್ಳುವುದು ಹೌದು. ಯಾವ ಸಮಸ್ಯೆಗಳು ಬರುತ್ತವೆ ತಿಳಿಯಲು ಬಯಸುವಿರಾ?

ತಲೆನೋವು

ದೇಹ ಬಲಹೀನತೆ

ಮೂತ್ರ ಗಾಢ ಬಣ್ಣ

ಡಿಹೈಡ್ರೇಷನ್ ಸ್ಟಾರ್ಟ್

ಈ ಫೆಬ್ರವರಿ ತಿಂಗಳಲ್ಲಿ ನೀವು ಇಂತಹ ಸಮಸ್ಯೆಗೆ ಎದುರಾದರೆ ಮುಂದೆ ಬರುವ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಿಮ್ಮ ಸ್ಥಿತಿ ಹೇಗಿರಬಹುದು ನೀವೇ ಊಹೆ ಮಾಡಿ.

ಟಿಪ್ಸ್ 2. ಮೊದಲು ಕಾಟನ್ ಬಟ್ಟೆಗಳಿಗೆ ಶಿಫ್ಟ್ ಆಗಿ

ನೀವು ಈ ಬಿಸಿಲಿನ ವಾತಾವರಣದಲ್ಲಿ ಅತಿ ಹೆಚ್ಚಾಗಿ ಕಾಟನ್ ಬಟ್ಟೆಗಳನ್ನ ಉಪಯೋಗ ಮಾಡಿ. ಪಾಲಿಸ್ಟರ್ ಬಟ್ಟೆಗಳನ್ನ ಯಾವುದೇ ಕಾರಣಕ್ಕೂ ಧರಿಸಬೇಡಿ.

೧ . ಕಾಟನ್ ಬಟ್ಟೆ ಹಾಕಿದಾಗ ನಿಮ್ಮ ದೇಹಕ್ಕೆ ಸಿಗುವ ಲಾಭ ಏನು ಗೊತ್ತ:-

  • ಸಾಮಾನ್ಯವಾಗಿ ಬಿಸಿಲಿನ ವಾತಾವರಣದಲ್ಲಿ ದೇಹದ ಉಷ್ಣತೆಯು ಹೆಚ್ಚಾಗುವ ಸಾಧ್ಯತೆ ಬಹಳಷ್ಟು ಇರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಕಾಟನ್ ಬಟ್ಟೆಯನ್ನು ಧರಿಸಿದಾಗ ದೇಹದ ತಾಪಮಾನ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.
  • ಹಾಗೆ ಕೆಲವು ಸಂದರ್ಭದಲ್ಲಿ ಬೆವರು, ಆಯಾಸ ಮನುಷ್ಯನ ದೇಹಕ್ಕೆ ಬರುವುದು ಕಾಟನ್. ಈ ಸಂದರ್ಭದಲ್ಲಿ ಬಟ್ಟೆಯಿಂದ ಕಡಿಮೆಯಾಗುತ್ತದೆ.
  • ಚರ್ಮದ ಮೇಲೆ ಬೆವರಿನಿಂದ ಆಗುವ ಚರ್ಮ ಸಮಸ್ಯೆಗಳು ಮತ್ತು ಕೆಲವು ಬಾರಿ ತಲೆನೋವು ಸಹ ಕಡಿಮೆಯಾಗುತ್ತದೆ.

ಟಿಪ್ಸ್ 3. ನೀರಿನ ಅಂಶ ಇರುವ ಹಣ್ಣನ್ನ ಹೆಚ್ಚಾಗಿ ಸೇವಿಸಿ :-

ಇಂತಹ ಬಿಸಿಲಿನ ವಾತಾವರಣದಲ್ಲಿ ಮನುಷ್ಯ ಆಯಾಸವಾದರೂ ಸಹ ನೀರನ್ನ ಕುಡಿಯಲು ಹಿಂದೆ ಮುಂದೆ ಯೋಚಿಸುತ್ತಾರೆ. ಇಂಥವರು ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚಾಗಿ ಸಿಗುವಂತಹ ಹಾಗೆ ನೀರಿನ ಅಂಶಗಳು ಹೆಚ್ಚಾಗಿ ಇರುವ ಹಣ್ಣನ್ನ ಸೇವಿಸುವುದು, ದೇಹದ ಮೇಲೆ ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಿದ್ರೆ ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳು ಯಾವವು? ಯಾವ ರೀತಿಯ ಪ್ರಯೋಜನ ಸಿಗುತ್ತದೆ?

“ಗಮನದಲ್ಲಿಡಿ ಈಗಂತೂ ಕಲ್ಲಂಗಡಿ(watermelon) ಹಣ್ಣಿನ ಸೀಸನ್ ಫುಲ್ ಜೋರು”

  • ಮೂಸಂಬಿ / ಸಿಂತ್ರಿ (Orange) – 85% ನೀರು
  • ಕಲ್ಲಂಗಡಿ (Watermelon) – ಸುಮಾರು 92% ನೀರು
  • ದ್ರಾಕ್ಷಿ (Grapes) – 80–85% ನೀರು
  • ಪೀಚ್ (Peach) – 88% ನೀರು
  • ಸೌತೆಕಾಯಿ (Cucumber fruit technically) – ಸುಮಾರು 95% ನೀರು
  • ಸ್ಟ್ರಾಬೆರಿ (Strawberry) – 91% ನೀರು
  • ಸೌತೇಕಾಯಿ
  • ಪೇರ್ (Pear) – 84% ನೀರು
  • ತೆಂಗು (Coconut water fruit) – ಸುಮಾರು 90–95% ನೀರು
  • ಮೊಸರು

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿಕೊಳ್ಳಲು ನೀರು ತುಂಬಿರುವ ಹಣ್ಣುಗಳು lifesaver! ತೆಂಗು ಎಲೆಕ್ಟ್ರೋಲೈಟ್ಸ್ ನೀಡುತ್ತಾ ಹೃದಯ ಮತ್ತು ಸ್ನಾಯು ಕಾರ್ಯಕ್ಕೆ ಸಹಾಯ ಮಾಡುತ್ತದೆ, ಕಲ್ಲಂಗಡಿ ಮತ್ತು ಸೌತೆಕಾಯಿ ದೇಹ ತಂಪು ಮಾಡುತ್ತವೆ, ದ್ರಾಕ್ಷಿ, ಮೂಸಂಬಿ, ಪೀಚ್, ಪೇರ್ ಶಕ್ತಿ, ವಿಟಮಿನ್ ಮತ್ತು ಫೈಬರ್ ಒದಗಿಸುತ್ತವೆ, ಸ್ಟ್ರಾಬೆರಿ ಚರ್ಮ, ಹೃದಯ ಮತ್ತು ಜಠರ ಆರೋಗ್ಯಕ್ಕೆ ಬೆಂಬಲ ನೀಡುತ್ತದೆ. ಈ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿದರೆ ಬೇಸಿಗೆ ಬಿಸಿಲಿನಲ್ಲಿಯೂ ದೇಹ ಹೈಡ್ರೇಟೆಡ್, ಶಕ್ತಿಶಾಲಿ ಮತ್ತು ಆರಾಮದಾಯಕವಾಗಿರುತ್ತದೆ.

ಟಿಪ್ಸ್ 4. ಸ್ಪೈಸಿ ಫುಡ್ ಹೆಚ್ಚು ತಿಂದ್ರೆ ಏನಾಗುತ್ತ?

ಇಂತ ಬಿಸಿಲಿನ ವಾತಾವರಣದಲ್ಲಿ ಅತಿ ಹೆಚ್ಚಿನ ಖಾರ,ಮಸಾಲೆ ಬರೀತಾ ಆಹಾರವನ್ನ ಸೇವಿಸಿದರೆ ನೀವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿನವವನ್ನ ಎದುರಿಸಲಿದ್ದೀರಿ. ಹಾಗಿರೆ ಯಾವ ರೀತಿಯ ತೊಂದ ಆಗುತ್ತೆ.

  • ಹೊಟ್ಟೆ ಉರಿಯುವುದು
  • ಅಜೀರ್ಣ
  • ದೇಹದ ಒಳಗಿನ ತಾಪ ಹೆಚ್ಚಳ

ಟಿಪ್ಸ್ 5. ಚರ್ಮದ ರಕ್ಷಣೆಯನ್ನ ಹೇಗೆ ಮಾಡಬೇಕು

  • ತಲೆ ಮತ್ತು ಮುಖವನ್ನ ಸೂರ್ಯನ ಕಿರಣಗಳಿಂದ ರಕ್ಷಿಸುವುದು ಬಹಳಷ್ಟು ಉತ್ತಮ. ಇದರಿಂದ ತಲೆನೋವು, ಬೆವರು ಕಡಿಮೆಯಾಗುತ್ತದೆ. ಯಾವ ರೀತಿ ರಕ್ಷಿಸಬೇಕು ಎಂದರೆ ಟೋಪಿ ಅಥವಾ ಕಾಟನ್ ಕ್ಯಾಪಗಳನ್ನ ಬಳಸಬೇಕು.
  • ಮಧ್ಯಾಹ್ನದ ಹೊತ್ತಿಗೆ ನೀವು ಸುಡು ಬಿಸಿಲಿನಲ್ಲಿ ನಡೆಯುತ್ತಿದ್ದರೆ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಛತ್ರಿ ಯನ್ನು ಬಳಕೆ ಮಾಡುವುದು ಬಹಳಷ್ಟು ಉತ್ತಮ. ಇದು ನಿಮ್ಮ ದೇಹದ ತೇವಾಂಶವನ್ನು ಕಡಿಮೆ ಮಾಡುತ್ತದೆ.
  • ಕೆಲವು ಮನುಷ್ಯರಿಗೆ ಅತಿ ಹೆಚ್ಚಿನ ಬಿಸಿಲಿನ ವಾತಾವರಣದಿಂದಾಗಿ ಕಣ್ಣು ನೋವು, ಕಣ್ಣು ಕೆಂಪಾಗುವುದು, ದೃಷ್ಟಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದನ್ನ ತಡೆಯಲು ನೀವು ಸನ್‌ಗ್ಲಾಸ್ ಅನ್ನ ಉಪಯೋಗಿಸುವುದು ಬಹಳಷ್ಟು ಉತ್ತಮ.
  • ಹಾಗೆಯೇ ಕೆಲವು ಬಾರಿ ಹೊರಗೆ ಹೋಗುವ ಮೊದಲು ನೀವು ಸನ್‌ಸ್ಕ್ರೀನ್ ಅನ್ನ ಹಚ್ಚುವುದು ಬಹಳಷ್ಟು ಉತ್ತಮ.

ಟಿಪ್ಸ್ 6. ಮಕ್ಕಳು & ವೃದ್ಧರು – ಫೆಬ್ರವರಿಯಿಂದಲೇ ಕಾಳಜಿ ಹೇಗೆ ಇರಬೇಕು

ಈ ತಿಂಗಳಲ್ಲೇ ಬಿಸಿಲು ಬಹಳಷ್ಟಿದೆ ಇನ್ನು ಮುಂದಿನ ಬಿಸಿಲ್ಲ ಕತೆ ನೋಡಿದರೆ ಸೂರ್ಯನ ಕೋಪ ಬಹಳಷ್ಟು ಕಂಡುಬರುತ್ತಿದೆ. ಇಂತ ಸಂದರ್ಭದಲ್ಲಿ ಹೇಗೆ ರಕ್ಷಣೆ ಮಾಡ್ಬೇಕು ಈ ಕೆಳಗೆ ತಿಳಿಸಲಾಗಿದೆ.

  • ಪೋಷಕರು ಮಧ್ಯಾಹ್ನದ ಹೊತ್ತಿಗೆ ಮಕ್ಕಳನ್ನು ಹೊರಗೆ ಬಿಡದೆ ನೋಡಿಕೊಳ್ಳಬೇಕು, ಹೆಚ್ಚಾಗಿ ನೀರನ್ನು ಕುಡಿಸಬೇಕು, ಹಾಗೆ ಹಗುರ ಆಹಾರ ಮತ್ತು ಹಣ್ಣಿನ ಸೇವನೆಯನ್ನು ಹೆಚ್ಚಿಸಬೇಕು.
  • ಅದೇ ರೀತಿ ಇನ್ನೂ ವೃದ್ಧರಿಗೆ ನೋಡೋದಾದ್ರೆ ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು, ನೆರಳಿನಲ್ಲಿಯೇ ವಾಕ್ ಮಾಡುವುದು ಬಹಳಷ್ಟು ಉತ್ತಮ.
  • ಹೈಡ್ರೋಶನ್ ನಿರಂತರವಾಗಿರಬೇಕು ಇನ್ನು ಸಾಮಾನ್ಯ ಕಾಳಜಿ ಆದರೆ ಹಗುರ ಬಟ್ಟೆ, ಹಣ್ಣು, ಮಜ್ಜಿಗೆ, ತೆಂಗಿನ ನೀರು, ಇವೆಲ್ಲವನ್ನ ಸೇವಿಸುವುದು ಬಹಳಷ್ಟು ಉತ್ತಮ.

ಟಿಪ್ಸ್ 7. ಬೇಸಿಗೆಯಲ್ಲಿ ಕಾಲುಗಳ ರಕ್ಷಣೆ ಹೇಗಿರಬೇಕು

  • ಸಣ್ಣವರಾಗಿರಲಿ ದೊಡ್ಡವರಾಗಿರಲಿ ಅಥವಾ ಮಕ್ಕಳೇ ಆಗಿರಲಿ ಬರಿಗಾಲಿನನಲ್ಲಿ ಈ ಬಿಸಿಲಿನಲ್ಲಿ ನಡೆಯುವುದು ಬಹಳ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.
  • ನಿಮ್ಮ ಚರ್ಮದಲ್ಲಿ ಕೆಲವು ಬದಲಾವಣೆಗಳಾದರೂ ಆಗಬಹುದು.
  • ಬಿಸಿಲಿನಿಂದ ಸುಟ್ಟಿರುವ ಉರಿ, ಬೆವರು ಬರುವುದನ್ನು ನಿಲ್ಲಿಸಲು ನೀವು ಚಪ್ಪಲಿ ಅಥವಾ ಶಿವುಗಳನ್ನ ಈ ಬೇಸಿಗೆಯಲ್ಲಿ ಕಡ್ಡಾಯವಾಗಿ ಧರಿಸಬೇಕು.
  • ಚಾಲಕ ಮತ್ತು ವೃದ್ಧರು ತಮ್ಮ ಕಾಲನ್ನು ಎಚ್ಚರಿಕೆ ವಹಿಸಿ ಮಚ್ಚಿಟ್ಟು ಕೊಳ್ಳಿ.
  • ಜಾಗ್ರತೆ ಮಧ್ಯಾನದ ತೀವ್ರ ಸುಡು ಬಿಸಿಲಿನಲ್ಲಿ ಹೆಚ್ಚಾಗಿ ನೆರಳು ಇರುವಂತಹ ಪ್ರದೇಶದಲ್ಲಿಯೇ ಓಡಾಡುವುದು ಬಹಳಷ್ಟು ಉತ್ತಮ. ನೀವು ಬಿಸಿಲಿನಲ್ಲಿ ಓಡಾಡಿದರೆ ದೇಹದ ಮೇಲೆ ಹೆಚ್ಚಿನ ಅಪಾಯವಾಗುತ್ತದೆ.

ಟಿಪ್ಸ್ 8. ಸರಿಯಾದ ನಿದ್ರೆ

ಯಾವುದೇ ಕಾಲವಾದರೂ ಮನುಷ್ಯನ ದೇಹಕ್ಕೆ ನಿದ್ರೆ ಎಂಬುದು ಬಹಳಷ್ಟು ಮುಖ್ಯವಾಗಿರುತ್ತದೆ ಹಾಗೆ ಈ ಫೆಬ್ರವರಿ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಒಬ್ಬ ಮನುಷ್ಯ ಯಾವ ರೀತಿಯಲ್ಲಿ ನಿದ್ರಿಸಬೇಕು ಮತ್ತು ಏಕೆ ಈ ರೀತಿಯ ನಿದ್ರೆ ಉತ್ತಮ ಎನ್ನುವುದರ ಬಗ್ಗೆ ಚಾರ್ಟ್ ಮೂಲಕ ಸ್ಪಷ್ಟವಾಗಿ ತಿಳಿಸಲಾಗಿದೆ.

ಕಾರಣ (Why)ನಿದ್ರೆ ಕಡಿಮೆ/ಬೇಸಿಗೆ ಅಪಾಯಸಲಹೆ (How much / When)
ದೇಹದ ತಾಪಮಾನ ನಿಯಂತ್ರಣಕಡಿಮೆ ನಿದ್ರೆ ದೇಹ ತಾಪ ಏರಿಕೆ → ಬೆವರು7–8 ಗಂಟೆ ಪ್ರತಿರಾತ್ರಿ, ರಾತ್ರಿ 10–6 ಅಥವಾ 11–7 ಸಮಯದಲ್ಲಿ
ಇಮ್ಯುನಿಟಿ (Immunity)ಕಡಿಮೆ ನಿದ್ರೆ → ವೈರಲ್ ಸೋಂಕಿಗೆ ಆತ್ಮೀಯಮಧ್ಯಾಹ್ನ ದೀಪಾವಳಿ / power nap 20–30 ನಿಮಿಷ
ಶಕ್ತಿ / ಎನರ್ಜಿಕಡಿಮೆ ನಿದ್ರೆ → ಆಯಾಸ, ದೇಹ ದುರ್ದಶೆಹಗುರ ಊಟ + hydration + early bedtime
ಮನಸ್ಸು / ಕಂಸೆಂಟ್ರೇಶನ್ಕಡಿಮೆ ನಿದ್ರೆ → ಕೋಪ, ನಿರಾಸೆ, ಗೊಂದಲಹಗಲಿನ ಹೊತ್ತಿಗೆ ತೀವ್ರ ಚಟುವಟಿಕೆ ತಪ್ಪಿಸಿ, ರಾತ್ರಿ ಸಮರ್ಪಕ ವಿಶ್ರಾಂತಿ

ಟಿಪ್ಸ್ 9. ಔಷಧಿ ಸೇವಿಸುವವರು ಡಬಲ್ ಜಾಗ್ರತೆ!

ಪ್ರತಿಯೊಬ್ಬರ ದೇಹವು ಸಾಮಾನ್ಯವಾಗಿ ಒಂದೇ ರೀತಿ ಇರುವುದಿಲ್ಲ ಕೆಲವು ಕಾರಣಗಳಿಂದ ಅನಾರೋಗ್ಯದಿಂದ ಬಳಲುತ್ತಾ ಮಾತ್ರೆಗಳನ್ನ ಔಷಧಿಗಳನ್ನ ಸೇವನೆ ಮಾಡುತ್ತಿರುತ್ತಾರೆ. ಅಂತವರು ಮುಖ್ಯವಾಗಿ 2026 ನೇ ವರ್ಷದ ಬೇಸಿಗೆಯಲ್ಲಿ ಈ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿದಲ್ಲಿ ಮಾತ್ರ ನಿಮ್ಮ ಆರೋಗ್ಯದ ಸ್ಥಿತಿಯು ಸಮಾನವಾಗಿರುತ್ತದೆ.

  • ಮುಖ್ಯವಾಗಿ ಮಾತ್ರೆ ಹಾಗೂ ಔಷಧಿಗಳನ್ನ ಸೇವನೆ ಮಾಡುತ್ತಿರುವ ಮನುಷ್ಯರು ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಅತಿ ಹೆಚ್ಚಾಗಿ ನೀರನ್ನು ಕುಡಿಯಲೇ ಬೇಕು.
  • ಇದರಿಂದ ಔಷಧಿಯಿಂದ ಆಗುವ ಕೆಲವು ಕೆಟ್ಟ ಪರಿಣಾಮಗಳು ಕಡಿಮೆಯಾಗುತ್ತವೆ.
  • ಮಧ್ಯಾನದ ಬಿಸಿಲು ಬೆವರು ಇಂತಹ ಪರಿಣಾಮದಿಂದಾಗಿ ಔಷಧಿಗಳನ್ನ ಸರಿಯಾಗಿ ಪಾಲನೆ ಮಾಡುವುದು ದೇಹದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬಿಸುತ್ತದೆ.
  • ಆದಷ್ಟು ತಂಪಾದ ಹೊತ್ತಿನಲ್ಲಿ ಔಷಧಿ ಸೇವಿಸುವುದು ಉತ್ತಮ
  • ದೇಹದಲ್ಲಿ dehydration, ಹೈಡ್ರೇಶನ್ ಸಮಸ್ಯೆ ಅಥವಾ ಔಷಧಿ ಪರಿಣಾಮ ತೀವ್ರವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
  • ಅತಿ ಹೆಚ್ಚಾಗಿ ಹಣ್ಣು, ಜ್ಯೂಸ್, ಎಳನೀರು, ಗುಣಮಟ್ಟದ ಆಹಾರವನ್ನ ಸೇವಿಸುವುದರಿಂದ ಹೈಡ್ರೇಶನ್ ಜೊತೆಗೆ ಔಷಧಿ ಉತ್ತಮ ಅಬ್ಸರ್ವೇಷನ್ ಆಗಲು ಬಹಳಷ್ಟು ಸಹಾಯವಾಗುತ್ತದೆ.

ಟಿಪ್ಸ್ 10. ಸುಡು ಬೇಸಿಗೆಯಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು

  • ಹೀರೆಕಾಯಿ ಮತ್ತು ಪಡವಲಕಾಯಿ: ನೀರಿನಂಶ ಹೆಚ್ಚಿರುವ ಇಂತಹ ತರಕಾರಿಗಳು ಹೊಟ್ಟೆಯನ್ನು ತಂಪಾಗಿಡುತ್ತವೆ
  • ಸೊಪ್ಪು ತರಕಾರಿಗಳು: ಪಾಲಕ್ ಮತ್ತು ಇತರ ಸೊಪ್ಪುಗಳು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ಪೋಷಕಾಂಶಗಳನ್ನು ಒದಗಿಸುತ್ತವೆ.
  • ಸೌತೆಕಾಯಿ: ಅತಿ ಹೆಚ್ಚು ನೀರಿನಂಶವನ್ನು ಹೊಂದಿದ್ದು, ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.

ಇತರ ಮುಖ್ಯ ಆಹಾರಗಳು

  • ಮೊಸರು: ಇದರಲ್ಲಿರುವ ಪ್ರೋಬಯಾಟಿಕ್‌ಗಳು ಕರುಳಿನ ಆರೋಗ್ಯವನ್ನು ಕಾಪಾಡುತ್ತವೆ.
  • ಸಬ್ಜಾ ಬೀಜಗಳು (Sabja Seeds): ಇವುಗಳನ್ನು ನೀರಿನಲ್ಲಿ ನೆನೆಸಿ ಕುಡಿಯುವುದು ದೇಹದ ಅತಿಯಾದ ಉಷ್ಣತೆಯನ್ನು ಕಡಿಮೆ ಮಾಡಲು ರಾಮಬಾಣ.
  • ಪುದೀನಾ: ಚಟ್ನಿ ಅಥವಾ ಪಾನೀಯಗಳಲ್ಲಿ ಪುದೀನಾ ಬಳಸುವುದರಿಂದ ದೇಹಕ್ಕೆ ನೈಸರ್ಗಿಕವಾಗಿ ತಂಪು ಸಿಗುತ್ತದೆ. 
ಎಚ್ಚರಿಕೆಯ ಮಾತು : “ಇದು ಫೆಬ್ರವರಿ, ಆದರೆ ಮಧ್ಯಾಹ್ನ ಹೊರಗೆ ಕಾಲಿಟ್ಟರೆ ಸಮರ್ ಸ್ಟೈಲ್ ಫೀಲ್ ಆಗುತ್ತಿದೆ!” ನಿಮ್ಮ ದೇಹ ತಂಪಾಗಲು ಹೈಡ್ರೇಶನ್ ಕಾಪಾಡಿಕೊಳ್ಳಬೇಕು. 11 ಗಂಟೆಯ ನಂತರ ಸೂರ್ಯ ಕಿರಣಗಳು ನೇರವಾಗಿ ತೀವ್ರವಾಗಿ ಬೀಳುತ್ತವೆ – ತಲೆನೋವು, ಬೆವರು, ಆಯಾಸ, ತೀವ್ರ ಬಿಸಿಲು ಎಫೆಕ್ಟ್ ಯಾವಾಗಲೇ ಸಿದ್ಧ. ಮಧ್ಯಾಹ್ನ ಸುಟ್ಟುಬಿಸಿಲಿನಲ್ಲಿ ಓಡಾಡುವುದು, ಜಾಸ್ತಿ ಖಾರದ ಆಹಾರ ಸೇವಿಸುವುದು, ನೀರು ಕಡಿಮೆ ಕುಡಿಯುವುದು ದೇಹದ ಒಳಗಿನ ತಾಪಮಾನ ಹೆಚ್ಚಿಸುತ್ತದೆ. ಮೊದಲು Preparation Month – ಫೆಬ್ರವರಿ ಎಂದು ಪಡೆದು, ಈಗಲೇ ನೀರು ಹೆಚ್ಚು ಕುಡಿಯಿರಿ, ಹಗುರ ಹಣ್ಣು, ಹಸಿರು ತರಕಾರಿ, ಮೊಸರು, ತೆಂಗಿನ ನೀರು ಸೇವಿಸಿ. ಮಧ್ಯಾಹ್ನ, ಟೋಪಿ, ಛತ್ರಿ, ಸನ್‌ಗ್ಲಾಸ್ ಬಳಸಿ, ಹೊರಗೆ ಹೆಚ್ಚು ಕಾಲ ಹೋಗಬೇಡಿ.

ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು :-

ಉತ್ತರ: ಮಧ್ಯಾಹ್ನ ಹೊರಗೆ ಕಳುಹಿಸಬೇಡಿ, ಹೆಚ್ಚು ನೀರು, ಹಣ್ಣು, ಹಗುರ ಆಹಾರ, ನೆರಳಿನಲ್ಲೇ ಚಟುವಟಿಕೆ.

ಉತ್ತರ: ಹೌದು! ಫೆಬ್ರವರಿಯಿಂದಲೇ ದೇಹದಲ್ಲಿ ನೀರಿನ ಪ್ರಮಾಣ ಕಾಪಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಿರಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್, ಮಧ್ಯಾಹ್ನ ಊಟಕ್ಕೆ ಮೊದಲು ಸ್ವಲ್ಪ.

ಉತ್ತರ: ಮಧ್ಯಾಹ್ನ 11–4 ಗಂಟೆ ಡೇಂಜರ್ ಝೋನ್. ಈ ಸಮಯದಲ್ಲಿ ಬಿಸಿಲು ತೀವ್ರ, ದೇಹಕ್ಕೆ ಹಾನಿಕಾರಕ.

ಉತ್ತರ: ಹೆಚ್ಚು ಆಯಾಸ, ತಲೆ ಸುತ್ತು, ಬೆವರು, ಕೋಪ, ಜ್ವರ, ದೇಹದಲ್ಲಿ dehydration. ತಕ್ಷಣ ನೆರಳು / ಹೈಡ್ರೇಟಿಂಗ್ ಪಾನೀಯ, ವಿಶ್ರಾಂತಿ.

ಇತರೆ ಮಾಹಿತಿಯನ್ನು ಓದಿರಿ:-

ಮಳೆರಾಯನ ‘ಸರ್ಪ್ರೈಸ್ ಎಂಟ್ರಿ!

Byadagi Chilli: ಬ್ಯಾಡಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆ

Leave a Reply

Your email address will not be published. Required fields are marked *