ವಿದ್ಯಾರ್ಥಿಗಳಿಗೆ ಟಾಟಾ ಗ್ರೂಪ್ (Tata Group)ಕಡೆಯಿಂದ ಭರ್ಜರಿ ಗುಡ್ ನ್ಯೂಸ್! ಶಿಕ್ಷಣದ ಕುರಿತು ಹೆಚ್ಚಿನ ಆಸೆ ಕನಸನ್ನು ಹೊತ್ತಿರುವ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಟಾಟಾ ಗ್ರೂಪ್ ಅವರ ಆಸೆ-ಕನಸುಗಳಿಗೆ ನೀರೆರೆಚುವ ಕೆಲಸವನ್ನು ಮಾಡಿದೆ.
TATA Scholarship In Kannada
ಟಾಟಾ ಸ್ಟೀಲ್ ಡೌನ್ ಸ್ಟ್ರೀಮ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಯು ಯಶಸ್ವಿಯಾಗಿ 25 ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದ್ದು, ಈ ವಿದ್ಯಾರ್ಥಿವೇತನದ ಮೂಲಕ ₹50,000 ದಿಂದ ₹1,00,000 ದ ವರೆಗೆ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಡಿಪ್ಲೋಮಾ ಮತ್ತು ITI ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರಾಗಬೇಕೆಂದು ಕನಸುಕಾಣುವವರಿಗೆ ಈ ವಿದ್ಯಾರ್ಥಿವೇತನ ದಾರಿದೀಪವಾಗಲಿದೆ.
ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಕಾರ್ಯಕ್ರಮ 2025-26
ಟಾಟಾ ಕಂಪನಿ ವಿದ್ಯಾರ್ಥಿಗಳಿಗೆ ನೆರವನ್ನು ಒದಗಿಸುವ ಉದ್ದೇಶದಿಂದ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಸರಿ. ಆದರೆ, ಈ ವಿದ್ಯಾರ್ಥಿವೇತನವನ್ನು ಪಡೆಯಲು ಯಾರು ಅರ್ಹರು? ಎನ್ನುವ ಗೊಂದಲಗಲುಂಟಾಗುವುದು ಸಹಜ. ಈ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ಒಂದು ಲೇಖನವನ್ನು ಓದಿದರೆ ಸಾಕು. ಇದೇ ರೀತಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವು ನೀಡುವ ಸಾಕಷ್ಟು ವಿದ್ಯಾರ್ಥಿವೇತನಗಳ ಬಗ್ಗೆ ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿ ನೀಡಿ.
ವಿದ್ಯಾರ್ಥಿವೇತನದ ಕಿರು ನೋಟ:
| ವಿದ್ಯಾರ್ಥಿ ವೇತನದ ಹೆಸರು | TSDPL ರಜತ ಮಹೋತ್ಸವ ವಿದ್ಯಾರ್ಥಿವೇತನ |
| ಅರ್ಹ ಫಲಾನುಭವಿಗಳು | ಡಿಪ್ಲೋಮಾ ಹಾಗೂ ಪದವಿ ವಿದ್ಯಾರ್ಥಿಗಳು |
| ವಿದ್ಯಾರ್ಥಿ ವೇತನದ ಮೊತ್ತ | ₹50,000 ದಿಂದ ₹1,00,000 |
| ಶೈಕ್ಷಣಿಕ ವರ್ಷ | 2025-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 07-02-2026 |
ಏನಿದು ವಿದ್ಯಾರ್ಥಿವೇತನ:
ಟಾಟಾ ಸ್ಟೀಲ್ ಡೌನ್ ಸ್ಟ್ರೀಮ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಯು ರಜತ ಮಹೋತ್ಸವದ ಸಂಭ್ರಮಕ್ಕಾಗಿ ವಿದ್ಯಾರ್ಥಿಗಳಿಗೆ ₹50,000 ದಿಂದ ₹1,00,000 ವರೆಗಿನ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದ್ದು, ಈ ವಿದ್ಯಾರ್ಥಿವೇತನವನ್ನು ಪಡೆಯಲು ITI, ಡಿಪ್ಲೋಮಾ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ವಿದ್ಯಾರ್ಥಿವೇತನ ನೀಡುವುದರ ಉದ್ದೇಶ:
- ಪ್ರತಿಭಾವಂತ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸುವುದನ್ನು ತಡೆದು ಆರ್ಥಿಕ ನೆರವನ್ನು ನೀಡುವ ಮೂಲಕ ಶಿಕ್ಷಣವನ್ನು ಮುಂದುವರೆಸುವಂತೆ ಪ್ರೇರೇಪಿಸುವುದು.
- ITI, ಡಿಪ್ಲೋಮಾ ಹಾಗೂ MBBS ನಂತಹ ವೃತ್ತಿಪರ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಣಕಾಸಿನ ಬೆಂಬಲವನ್ನು ನೀಡುವ ಮೂಲಕ ಅವರಲ್ಲಿ ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದು.
- ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಡೆಯಲು ಮೊದಲ ಆದ್ಯತೆ ನೀಡುವ ಮೂಲಕ ಉಳಿದ ವಿದ್ಯಾರ್ಥಿಗಳಿಗೂ ಹೆಚ್ಚಿನ ಅಂಕಗಳಿಸುವಂತೆ ಪ್ರೇರೇಪಿಸುವುದು.
- ಟಾಟಾ ಕಂಪನಿಯು ಕಾರ್ಯಾಚರಣೆ ಮಾಡುತ್ತಿರುವ ಪ್ರದೇಶದ ಸುತ್ತಮುತ್ತಲಿನ 9 ನಗರಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಿ, ಅಲ್ಲಿನ ಶೈಕ್ಷಣಿಕ ಮಟ್ಟವನ್ನು ಸುಧಾರಿಸುವುದು.
ವಿದ್ಯಾರ್ಥಿಗಳಿಗೆ ಸಿಗುವ ಲಾಭ:
- ಡಿಪ್ಲೋಮಾ ಹಾಗೂ ITI ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷಕ್ಕೆ ₹50,000 ವಿದ್ಯಾರ್ಥಿವೇತನವನ್ನು ನೀಡಲಾಗುವುದು.
- MBBS ಹಾಗೂ BDS ನಂತಹ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷಕ್ಕೆ ₹1,00,000 ವಿದ್ಯಾರ್ಥಿವೇತನ ನೀಡಲಾಗುವುದು.
- ವಿದ್ಯಾರ್ಥಿಗಳು ಕಾಲೇಜು ಫೀಸ್, ಎಕ್ಸಾಮ್ ಫೀಸ್, ಪುಸ್ತಕ, ಊಟ ಮತ್ತು ಇತರೆ ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚುಗಳನ್ನು ಈ ವಿದ್ಯಾರ್ಥಿವೇತನದ ಮೂಲಕ ಭರಿಸಬಹುದಾಗಿದೆ.
ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು?
ಡಿಪ್ಲೋಮಾ ಹಾಗೂ ITI ವಿದ್ಯಾರ್ಥಿಗಳು ಹೊಂದಿರಬೇಕಾದ ಅರ್ಹತೆ:
- ಯಾವುದೇ ವರ್ಷದ ITI ಹಾಗೂ ಡಿಪ್ಲೋಮಾದಲ್ಲಿ ಫಿಟ್ಟರ್, ವೆಲ್ಡರ್, ಸೇಫ್ಟಿ, ಎಲೆಕ್ಟ್ರಿಕಲ್ ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.
- ಕುಟುಂಬದ ವಾರ್ಷಿಕ ಆದಾಯವು ₹5 ಲಕ್ಷ ಮೀರಿರಬಾರದು.
- 10ನೇ ತರಗತಿಯಲ್ಲಿ ಕನಿಷ್ಠ 50% ಅಂಕವನ್ನು ಗಳಿಸಿರುವುದು ಕಡ್ಡಾಯವಾಗಿದೆ.
- ಅರ್ಹ ಅಭ್ಯರ್ಥಿಗಳು ₹50,000 ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.
MBBS ಹಾಗೂ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳು:
- ಯಾವುದೇ ವರ್ಷದಲ್ಲಿ MBBS ಹಾಗೂ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.
- 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರುವುದು ಕಡ್ಡಾಯವಾಗಿರುತ್ತದೆ.
- ಕುಟುಂಬದ ವಾರ್ಷಿಕ ಆದಾಯವು ₹5 ಲಕ್ಷ ಮೀರಿರಬಾರದು.
- ಅರ್ಹ ಅಭ್ಯರ್ಥಿಗಳು ₹1,00,000 ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.
| ಇಲ್ಲಿ ಗಮನಿಸಿ: “ಮಹಿಳೆಯರು, ಅಂಗವಿಕಲರು, ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು, SC/ST ವಿದ್ಯಾರ್ಥಿಗಳಿಗೆ ಯಾವುದೇ ಅಂಕಗಳ ಆಧಾರವನ್ನು ಪರಿಗಣಿಸದೆ TSDPL ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಎಲ್ಲರಿಗೂ ಸಮಾನಾವಕಾಶ ಕಲ್ಪಿಸಿದೆ” |
ವಿದ್ಯಾರ್ಥಿಗಳು ಹೊಂದಿರಬೇಕಾದ ಅಗತ್ಯ ದಾಖಲೆಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ಬ್ಯಾಂಕ್ ಪಾಸ್ ಪುಸ್ತಕ
- ಕಾಲೇಜು ಸೇರ್ಪಡೆಯ ಪುರಾವೆ
- 10 ನೇ ತರಗತಿಯ ಅಂಕಪಟ್ಟಿ
- 12ನೇ ತರಗತಿಯ ಅಂಕಪಟ್ಟಿ
- ಮೊಬೈಲ್ ನಂಬರ್
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
- TSDPL ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
- ಅರ್ಜಿ ನಮೂನೆಯಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ
ಮುಖ್ಯ ಷರತ್ತು:
- ITI ಹಾಗೂ ಡಿಪ್ಲೋಮಾದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಬೇಕಾದರೆ,10ನೇ ತರಗತಿಯನ್ನು ಜಮ್‌ಶೆಡ್‌ಪುರ, ಕಳಿಂಗನಗರ, ಪಂತನಗರ, ಫರೀದಾಬಾದ್, ಪುಣೆ, ತಡಾ, ಕಲ್ಕತ್ತಾ, ಚನ್ನೈ, ಸನಂದ್ ಎಂಬ ಈ ಒಂಬತ್ತು ನಗರಗಳೊಂದರಲ್ಲಿ ವ್ಯಾಸಂಗ ಮಾಡಿರಬೇಕು.
- MBBS ಹಾಗೂ BDS ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಬೇಕಾದರೆ, 12ನೇ ತರಗತಿಯನ್ನುಜಮ್‌ಶೆಡ್‌ಪುರ, ಕಳಿಂಗನಗರ, ಪಂತನಗರ, ಫರೀದಾಬಾದ್, ಪುಣೆ, ತಡಾ, ಕಲ್ಕತ್ತಾ, ಚನ್ನೈ, ಸನಂದ್ ಎಂಬ ಈ ಒಂಬತ್ತು ನಗರಗಳೊಂದರಲ್ಲಿ ವ್ಯಾಸಂಗ ಮಾಡಿರಬೇಕು.
ಪ್ರಮುಖ ದಿನಾಂಕ:
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 07-02-2026 |
ಪ್ರಮುಖ ಲಿಂಕ್:
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಕೊನೆಯದಾಗಿ:
TSDPL ಸಿಲ್ವರ್ ಜುಬಿಲಿ ಸ್ಕಾಲರ್ಷಿಪ್ ಪ್ರೋಗ್ರಾಮ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ₹50,000 ದಿಂದ ₹1,00,000 ವರೆಗೆ ವಿದ್ಯಾರ್ಥಿವೇತನವನ್ನು ನೀಡಲು ನಿರ್ಧರಿಸಿದ್ದು, ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಮೇಲೆ ನೀಡಿರುವ ಮುಖ್ಯ ಸೂಚನೆಗಳನ್ನು ಓದಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- ಅಜೀಮ್ ಪ್ರೇಮ್ ಜಿ ವಿದ್ಯಾರ್ಥಿವೇತನದಡಿಯಲ್ಲಿ ಪಡೆಯಿರಿ ₹30,000 ವಿದ್ಯಾರ್ಥಿವೇತನ
- ವಿದ್ಯಾಸಿರಿ ವಿದ್ಯಾರ್ಥಿವೇತನ 2026

