Tarpaulin Subsidy : 90% ಸಬ್ಸಿಡಿ! ರೈತರಿಗೆ ಭರ್ಜರಿ ಸುದ್ದಿ : ಇಂದು ಅರ್ಜಿ ಸಲ್ಲಿಸಿದರೆ ಲಿಸ್ಟ್ ಅಲ್ಲಿ ನಿಮ್ಮ ಹೆಸರು!

Tarpaulin Subsidy : 90% ಸಬ್ಸಿಡಿ! ರೈತರಿಗೆ ಭರ್ಜರಿ ಸುದ್ದಿ : ಇಂದು ಅರ್ಜಿ ಸಲ್ಲಿಸಿದರೆ ಲಿಸ್ಟ್ ಅಲ್ಲಿ ನಿಮ್ಮ ಹೆಸರು!

ರೈತರೇ, ಟಾರ್ಪಲ್ ಕೊರತೆಯಿಂದ ನೀವು ಕಟಾವು ಮಾಡಿರುವ ಬೆಳೆಗಳನ್ನು ಸುರಕ್ಷಿತವಾಗಿಡಲು ಸಾಧ್ಯವಾಗುತ್ತಿಲ್ಲವೇ? ಅಥವಾ ಸುರಕ್ಷಿತವಾಗಿಸಲು ಬಳಸುವ ಟಾರ್ಪಲ್ ಖರೀದಿಸಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಇನ್ನು ಈ ಚಿಂತೆ ನಿಮಗಿಲ್ಲ. ಏಕೆಂದರೆ ಸರ್ಕಾರವು ‘ಟಾರ್ಪಲಿನ್ ಸಹಾಯಧನ ಯೋಜನೆ’ (Tarpaulin Subsidy) ಯನ್ನು ನಿಮಗೆಂದೇ ಜಾರಿಗೆ ತಂದಿದೆ.

Tarpaulin Subsidy In Kannada

Tarpaulin Subsidy

ರೈತರು ತಾವು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿಡಬೇಕಾದರೆ ಟಾರ್ಪಲ್ ಬಳಸುವುದು ಅಗತ್ಯವಾಗಿರುವುದರಿಂದ ಅದನ್ನು ಖರೀದಿಸುವುದು ಕೂಡ ಅನಿವಾರ್ಯವಾಗಿದೆ. ಆದರೆ, ಕೆಲವು ರೈತರಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಖರೀದಿಸಲು ಹಣಕಾಸಿನ ಸಮಸ್ಯೆ ಉಂಟಾಗಬಹುದು ಹಾಗೂ ಕೃಷಿ ಚಟುವಟಿಕೆಯಲ್ಲಿ ಇದು ದೊಡ್ಡ ಹೊರೆಯಾಗಿ ಪರಿಣಮಿಸಬಹುದು.

ಇದಕ್ಕಾಗಿಯೇ ಸರ್ಕಾರವು ಕೃಷಿ ಇಲಾಖೆಯ ಮೂಲಕ ಟಾರ್ಪಲಿನ್ ಸಹಾಯಧನ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಟಾರ್ಪಲ್ ಕೊಳ್ಳಲು ಸಬ್ಸಿಡಿ (Tarpaulin Subsidy)ರೂಪದಲ್ಲಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೂ ಈ ಸೌಲಭ್ಯ ಬೇಕಾ? ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ. ಇದೇ ರೀತಿಯ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

Tarpaulin Subsidy

ಯೋಜನೆಯ ಮುಖ್ಯಾಂಶಗಳು :

ಯೋಜನೆಯ ಹೆಸರು ಟಾರ್ಪಲಿನ್ ಸಹಾಯಧನ ಯೋಜನೆ (Tarpaulin Subsidy)
ಅರ್ಹ ಫಲಾನುಭವಿಗಳು ನೋಂದಾಯಿತ ರೈತರು
ಒಟ್ಟು ಸಬ್ಸಿಡಿ ದರ ಒಟ್ಟು ವೆಚ್ಚದ ಮೇಲೆ 50% ಇಂದ 90%
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್

ಯೋಜನೆಯ ಬಗ್ಗೆ:

‘ಟಾರ್ಪಲಿನ್ ಸಹಾಯಧನ ಯೋಜನೆ’(Tarpaulin Subsidy)ಯು ಕರ್ನಾಟಕ ಸರ್ಕಾರದ ಕೃಷಿ ಯಾಂತ್ರೀಕರಣ ಯೋಜನೆಯ ಒಂದು ಭಾಗವಾಗಿದ್ದು, ಕಟಾವಿನ ನಂತರ ತೇವಾಂಶದಿಂದ ಬೆಳೆಗಳು ಹಾಳಾಗದಂತೆ ತಡೆಯಲು ರಿಯಾಯಿತಿ ದರದಲ್ಲಿ ಸರ್ಕಾರವು ಗುಣಮಟ್ಟದ ಟಾರ್ಪಲ್ (Tarpaulin Subsidy) ನೀಡಲು ಮುಂದಾಗಿದೆ.

ಈ ಯೋಜನೆಯು ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಚಾಲನೆಯಲ್ಲಿದ್ದು, ಸರ್ಕಾರವು ಇನ್ನು ಸಾಕಷ್ಟು ಜಿಲ್ಲೆಗಳಲ್ಲಿ ವಿಸ್ತರಿಸಲು ಮುಂದಾಗಿದೆ. ಅರ್ಹ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಟಾರ್ಪಲ್ ಬಳಕೆಯ ಅನಿವಾರ್ಯತೆ ಏನು?

  • ಬೆಳೆಗಳ ರಕ್ಷಣೆ:

ರೈತರು ಕಷ್ಟಪಟ್ಟು ಬೆಳೆಗಳನ್ನು ಕಟಾವು ಮಾಡಿದ ನಂತರ ಕಣದಲ್ಲಿ ಒಣಗಿಸಿದ ನಂತರ ದಿಢೀರ್ ಮಳೆ ಬಂದರೆ ಟಾರ್ಪಲ್ ಮೂಲಕ ತಕ್ಷಣವೇ ಅವುಗಳ ರಕ್ಷಣೆ ಮಾಡಬಹುದು.

  • ಹಣ್ಣು ತರಕಾರಿಗಳ ರಕ್ಷಣೆ:

ಹಣ್ಣು ಮತ್ತು ತರಕಾರಿಗಳನ್ನು ಬಿಸಿಲಿನ ಶಾಖದಲ್ಲಿ ಬಾಡಿ ಹೋಗುವುದನ್ನು ತಡೆಯಲು ಟಾರ್ಪಲ್ ಸಹಾಯಕಾರಿಯಾಗುತ್ತದೆ.

  • ತಾತ್ಕಾಲಿಕ ಉಗ್ರಾಣ:

ಗೋದಾಮಿನ ಸೌಲಭ್ಯ ಇಲ್ಲದಿದ್ದಾಗ, ರೈತರು ಯಾವುದೇ ಖರ್ಚಿಲ್ಲದೆ ಟಾರ್ಪಲ್ ಸಹಾಯದಿಂದ ತಮ್ಮ ಹೊಲದಲ್ಲೇ ದಾಸ್ತಾನು ವ್ಯವಸ್ಥೆಯನ್ನು ಮಾಡಬಹುದಾಗಿದೆ.

  • ಸಾರಿಗೆ ಭದ್ರತೆ:

ಟ್ರ್ಯಾಕ್ಟರ್ ಗಳಲ್ಲಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಗೆದುಕೊಂಡು ಹೋಗುವಾಗ ಗಾಳಿ ಮತ್ತು ಮಳೆಗೆ ಉತ್ಪನ್ನಗಳು ಹಾನಿಯಾಗದಂತೆ ಟಾರ್ಪಲ್ ರಕ್ಷಿಸುತ್ತದೆ.

  • ಯಂತ್ರಗಳ ರಕ್ಷಣೆ:

ಕೃಷಿ ಯಂತ್ರೋಪಕರಣಗಳನ್ನು ತುಕ್ಕಿ ಹಿಡಿಯದಂತೆ ತಡೆಯಲು ಟಾರ್ಪಲ್ ಸಹಾಯ ಮಾಡುತ್ತದೆ.

  • ಕೃಷಿ ಹೊಂಡ:

ಕೃಷಿ ಹೊಂಡದಲ್ಲಿನ ನೀರು ಇಂಗಿಹೋಗದಂತೆ ತಡೆಯಲು ಟಾರ್ಪಲ್ ಶೀಟ್ ಬಳಸುವುದು.

ಟಾರ್ಪಲ್ ಗಾತ್ರದ ವಿವರ:

  • ಈ ಯೋಜನೆಯಡಿಯಲ್ಲಿ 8 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲದ ಟಾರ್ಪಲ್ ಅನ್ನು ಪಡೆದುಕೊಳ್ಳಬಹುದು.
  • ಸಾಮಾನ್ಯವಾಗಿ 250 ರಿಂದ 300 ಗ್ರಾಂ ಪರ್ ಸ್ಕ್ವೇರ್ ಮೀಟರ್(GSM) ದಪ್ಪವಿರುವ ಉತ್ತಮ ಗುಣಮಟ್ಟದ ಶೀಟ್ ಅನ್ನು ನೀಡಲಾಗುವುದು.

ಫಲಾನುಭವಿಗಳಿಗೆ ಬಂಪರ್ ಕೊಡುಗೆ:

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಒಟ್ಟು ವೆಚ್ಚದ ಮೇಲೆ ಶೇಕಡಾ 90% ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತದೆ. ರೈತರು ಕೇವಲ 10% ಹಣವನ್ನು ಭರಿಸಿದರೆ ಸಾಕಾಗುತ್ತದೆ.
  • ಸಾಮಾನ್ಯವರ್ಗದ ರೈತರಿಗೆ ಒಟ್ಟು ವೆಚ್ಚದ ಮೇಲೆ ಶೇಕಡಾ 50% ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತದೆ. ರೈತರು 50% ಹಣವನ್ನು ಪಾವತಿಸಬೇಕಾಗುತ್ತದೆ.

ಅರ್ಹ ಫಲಾನುಭವಿಗಳು ಯಾರು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಕಡ್ಡಾಯವಾಗಿ ಸ್ವಂತ ಕೃಷಿ ಭೂಮಿಯನ್ನು ಹೊಂದಿರಬೇಕು.
  • ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯ ಫ್ರೂಟ್ಸ್ ಪೋರ್ಟಲ್ ನಲ್ಲಿ ನೋಂದಾಯಿತರಾಗಿರಬೇಕು.
  • ಈ ಯೋಜನೆಯ ಲಾಭ ಪಡೆದುಕೊಳ್ಳಬೇಕಾದರೆ ಯಾವುದೇ ಆದಾಯದ ಮಿತಿ ಇರುವುದಿಲ್ಲ.
  • ಹಿಂದಿನ 3 ವರ್ಷದಲ್ಲಿ ಇದೆ ಯೋಜನೆಯಡಿ ಸೌಲಭ್ಯವನ್ನು ಪಡೆದುಕೊಂಡಿರಬಾರದು.
Tarpaulin Subsidy

ಫಲಾನುಭವಿಗಳು ಹೊಂದಿರಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್ ಪ್ರತಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಇತ್ತೀಚಿನ RTC/ ಪಹಣಿ ಪ್ರತಿ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ರೈತರು ನಿಮ್ಮ ಹತ್ತಿರದ ‘ರೈತ ಸಂಪರ್ಕ ಕೇಂದ್ರ’ಕ್ಕೆ ಭೇಟಿ ನೀಡಿ.
  • ಅಲ್ಲಿ, ಟಾರ್ಪಲ್ ವಿತರಣಾ ಅರ್ಜಿ ಫಾರ್ಮ್ ಪಡೆದುಕೊಳ್ಳಿ.
  • ಅರ್ಜಿ ಫಾರ್ಮ್ ನಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ಭರ್ತಿಮಾಡಿ.
  • ಭರ್ತಿಮಾಡಿದ ಅರ್ಜಿ ಫಾರ್ಮ್ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ನಂತರ, ಸಂಬಂಧಪಟ್ಟ ಕೃಷಿ ಅಧಿಕಾರಿಗಳಿಗೆ ಸಲ್ಲಿಸಿ, ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ.
ವಿಶೇಷ ಸೂಚನೆ: “ಪ್ರತಿ ತಾಲೂಕಿಗೆ ಕೃಷಿ ಇಲಾಖೆಯಿಂದ ಬಿಡುಗಡೆಯಾಗುವ ಬಜೆಟ್ ಹಣದ ಆಧಾರದ ಮೇಲೆ ಎಷ್ಟು ಟಾರ್ಪಲ್ ಗಳನ್ನೂ ವಿತರಿಸಲು ಸಾಧ್ಯವೋ ಅಷ್ಟನ್ನು ಮಾತ್ರ ವಿತರಣೆ ಮಾಡಲಾಗುತ್ತಿದ್ದು, ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು”

ಅಂತಿಮ ತೀರ್ಮಾನ:

ಸರ್ಕಾರವು ಕರ್ನಾಟಕದ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಸುರಕ್ಷಿತವಾಗಿ ಇಡಲು ಟಾರ್ಪಲ್ ಖರೀದಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡಲು ಮುಂದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಬೇರೆ ಬೇರೆ ರೀತಿಯ ಸಬ್ಸಿಡಿ ದರವನ್ನು ನಿಗದಿಪಡಿಸಿದ್ದು, ನೀವೇನಾದರೂ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದರೆ, ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *