ನಮಸ್ಕಾರ ಸ್ನೇಹಿತರೆ, ನಮಗೆಲ್ಲಾ ತಿಳಿದಿರುವ ಹಾಗೆ ಯಾವುದೇ ಒಂದು ವ್ಯವಹಾರ ಮಾಡಬೇಕಾದರೆ ಸರಕು ಸಾಮಗ್ರಿಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಒಂದು ವಾಹನ ಬೇಕಾಗುತ್ತದೆ. ಅದಕ್ಕಾಗಿಯೇ ಬಾಡಿಗೆಯ ವಾಹನಗಳನ್ನು ಮಾಡಿ ಸರಕನ್ನು ಸಾಗಿಸುತ್ತಾರೆ ಈ ಒಂದು ವ್ಯವಸ್ಥೆಯು ಹೆಚ್ಚು ವೆಚ್ಚದಾಯಕವಾಗಿದೆ. ಈಗ ಈ ಎಲ್ಲಾ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರವು ಒಂದು ಯೋಜನೆಯನ್ನು ಜಾರಿಗೊಳಿಸಿದೆ. ಆ ಯೋಜನೆಯೇ ಸ್ವಾವಲಂಬಿ ಸಾರಥಿ ಯೋಜನೆ.
Swavalambi Sarathi Scheme In Kannada 2026
ಕರ್ನಾಟಕ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯು ಒಂದು. ಆದರೆ ಈ ಯೋಜನೆಯ ಬಗ್ಗೆ ಕೆಲವರಿಗೆ ತಿಳಿದಿರುವುದಿಲ್ಲ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾಗಿದ್ದರೆ, ನಮ್ಮ ಅಧಿಕೃತ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿನೀಡಿ.
ಸ್ವಾವಲಂಬಿ ಸಾರಥಿ ಯೋಜನೆಯು ಹಿಂದುಳಿದ ವರ್ಗದ ನಿರುದ್ಯೋಗಿ ಯುವಕರಿಗೆ ವಾಣಿಜ್ಯ ಉದ್ದೇಶಕ್ಕಾಗಿ ವಾಹನವನ್ನು ಖರೀದಿಸಲು ಮತ್ತು ಹೊಸ ಉದ್ಯಮವನ್ನು ಪ್ರಾರಂಭಿಸಲು ಸಬ್ಸೀಡಿ ರೂಪದಲ್ಲಿ ಗರಿಷ್ಠ ರೂ. 4 ಲಕ್ಷದ ವರೆಗೆ ಸಹಾಯಧನವನ್ನು ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಈ ಯೋಜನೆಯು ಸಹಾಯಕಾರಿಯಾಗಿದೆ.
ಅರ್ಹ ಫಲಾನುಭವಿಗಳು ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು, ಯೋಜನೆಯ ಉದ್ದೇಶ, ಪ್ರಯೋಜನ ಪ್ರಯೋಜನ ಇತ್ಯಾದಿಗಳ ಬಗ್ಗೆ ಕೆಳಗೆ ನೀಡಿರುವ ಮಾಹಿತಿಯನ್ನು ಓದಿಕೊಂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಯೋಜನೆಯ ಅವಲೋಕನ: (Swavalambi Sarathi Scheme In Kannada 2026)
| ಯೋಜನೆಯ ಹೆಸರು | ಸ್ವಾವಲಂಬಿ ಸಾರಥಿ ಯೋಜನೆ |
| ಫಲಾನುಭವಿಗಳು | ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು |
| ಅರ್ಜಿಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅಧಿಕೃತ ವೆಬ್ ಸೈಟ್ | https://kmdconline.karnataka.gov.in/ |
ಸಂಕ್ಷಿಪ್ತ ಮಾಹಿತಿ: Swavalambi Sarathi Scheme In Kannada 2026
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಇತರೆ ಹಿಂದುಳಿದ ಸಮುದಾಯದ ಅಭಿವೃದ್ಧಿ ನಿಗಮಗಳ ಮೂಲಕ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತಂದಿದ್ದು, ಹಿಂದುಳಿದ ವರ್ಗದ ನಿರುದ್ಯೋಗಿ ಯುವಕರಿಗೆ ವಾಣಿಜ್ಯ ಉದ್ದೇಶಕ್ಕಾಗಿ ನಾಲ್ಕು ಚಕ್ರದ ವಾಹನವನ್ನು ಖರೀದಿಸಲು, ಸ್ವಯಂ ಉದ್ಯೋಗವನ್ನು ಕಲ್ಪಿಸಲು ವಾಹನದ ಒಟ್ಟು ಮೊತ್ತದ ಮೇಲೆ 50% ಯಿಂದ 75% ವರೆಗೆ ಸಹಾಯಧನವನ್ನು ನೀಡಲಾಗುವುದು.
ಯೋಜನೆಯ ಉದ್ದೇಶ:
- ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಾದ SC/ST, ಅಲ್ಪಸಂಖ್ಯಾತರ ಸಮುದಾಯದ ಯುವಕ-ಯುವತಿಯರ ಜೀವನೋಪಾಯವನ್ನು ಸುಧಾರಿಸುವುದು.
- ನಿರುದ್ಯೋಗಿ ಯುವಕ-ಯುವತಿಯರಿಗೆ ಸರಕು ಸಾಗಣೆ ಮಾಡುವ ವಾಹನವನ್ನು ಖರೀದಿಸಲು ಹಣಕಾಸಿನ ನೆರವನ್ನು ನೀಡಿ ಸ್ವಂತ ಉದ್ಯೋಗ ನಡೆಸಲು ಪ್ರೋತ್ಸಾಹಿಸುವುದು.
- ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸೌಲಭ್ಯವನ್ನು ಹೆಚ್ಚಿಸುವುದು.
ಯೋಜನೆಯ ಪ್ರಯೋಜನಗಳು:
- ಪ್ರಯಾಣಿಕರ ಆಟೋ ಖರೀದಿ ಮಾಡಲು ರೂ. 75000 ದ ವರೆಗೆ ಸಹಾಯಧನ ನೀಡಲಾಗುವುದು.
- ಇತರೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ವಾಹನದ ಒಟ್ಟು ಮೌಲ್ಯದ ಮೇಲೆ 75% ಸಹಾಯಧನ ಅಥವಾ 4 ಲಕ್ಷದ ವರೆಗೆ ಸಬ್ಸಿಡಿ ನೀಡಲಾಗುವುದು.
- ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಾಹನದ ಒಟ್ಟು ಮೌಲ್ಯದ ಮೇಲೆ 50% ಸಹಾಯಧನ ಅಥವಾ 3 ಲಕ್ಷದ ವರೆಗೆ ಸಬ್ಸಿಡಿ ನೀಡಲಾಗುವುದು.
ಅರ್ಹತಾ ಮಾನದಂಡಗಳು: Swavalambi Sarathi Scheme In Kannada 2026
- ಫಲಾನುಭವಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ಯಾವುದೇ ನಿಗಮದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಸಹಾಯಧನವನ್ನು ಪಡೆದುಕೊಂಡಿರಬಾರದು.
- ಲಘು ಮೋಟಾರ್ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
- ಅರ್ಜಿದಾರರು ಕನಿಷ್ಠ 21 ವರ್ಷದಿಂದ 45 ವರ್ಷದ ಒಳಗೆ ವಯೋಮಿತಿಯನ್ನು ಹೊಂದಿರಬೇಕು.
- ಫಲಾನುಭವಿಗಳ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ರೂ. 98,000 ಹಾಗೂ ನಗರ ಪ್ರದೇಶದವರಿಗೆ ರೂ. 120,000 ಕ್ಕಿಂತ ಹೆಚ್ಚಿರಬಾರದು.
- ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
- ಮಹಿಳೆಯರಿಗಿ ಮತ್ತು ತೃತೀಯ ಲಿಂಗಿಗಳಿಗೆ ಈ ಯೋಜನೆಗೆ ಹೆಚ್ಚಿನ ಆದ್ಯತೆ ಇರುತ್ತದೆ.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಹುದ್ದೆಯಲ್ಲಿರಬಾರದು.
ಅಗತ್ಯ ದಾಖಲೆಗಳು: Swavalambi Sarathi Scheme In Kannada 2026
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್
- ವಯಸ್ಸಿನ ಪುರಾವೆ ಪ್ರಮಾಣಪತ್ರ
- ಚಾಲನಾ ಪರವಾನಗಿ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಪಾನ್ ಕಾರ್ಡ್
- ಸ್ವಯಂ ಘೋಷಣಾ ಪತ್ರ
- ವಾಹನದ ಅಂದಾಜು ದರ ಪಟ್ಟಿ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ ಸೈಟ್ https://kmdconline.karnataka.gov.in/ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಿ
- ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
- ಅರ್ಜಿ ನಮೂನೆಯಲ್ಲಿರುವ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಿ
- ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರವು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಇತರೆ ಹಿಂದುಳಿದ ಸಮುದಾಯದ ಅಭಿವೃದ್ಧಿ ನಿಗಮಗಳ ಮೂಲಕ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳಿಗೆ ಮತ್ತು ತೃತೀಯ ಲಿಂಗಿ ಅರ್ಜಿದಾರರಿಗೆ ಈ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಇತರೆ ಪ್ರಮುಖ ಲಿಂಕುಗಳು:
- ರಾಜೀವ್ ಗಾಂಧಿ ವಸತಿ ಯೋಜನೆ 2026
- ಕಟ್ಟಡ ಕಾರ್ಮಿಕರ ಗೃಹ ಭಾಗ್ಯ ಯೋಜನೆ 2026
- ವಿದ್ಯಾಸಿರಿ ವಿದ್ಯಾರ್ಥಿವೇತನ 2026
- ಕರ್ನಾಟಕ ಮಡಿಲು ಕಿಟ್ ಯೋಜನೆ 2026
- ಶ್ರಮ ಶಕ್ತಿ ಯೋಜನೆ ಸಹಾಯಧನ 2026

