SSLC Timetable 2026 : ವೇಳಾಪಟ್ಟಿ ಪ್ರಕಟ :ಭಯ ಬೇಡ… ನಿಮ್ಮ ಗೆಲುವಿನ ಸಮಯ ಶುರು! ಹೀಗೆ ಓದಿದ್ರೆ ಪಾಸ್ ಆಗೋದು ಪಕ್ಕಾ!

SSLC Timetable 2026

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ SSLC ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ, ಹೌದು ವೀಕ್ಷಕರೇ ಹೌದು ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ (SSLC Timetable 2026) ಇದೀಗ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಎಲ್ಲ ರೀತಿಯ ತಯಾರಿಯನ್ನು ಇಂದಿನಿಂದಲೇ ನಡೆಸಿ.

SSLC Timetable 2026

ಯಾಕೆಂದರೆ ನಿಮ್ಮ ಪಲಿತಾಂಶವನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿಮ್ಮ ಶ್ರಮ ನಿಮ್ಮ ಶ್ರದ್ದೆ ನಿಮ್ಮ ಹಾರ್ಡ್ ವರ್ಕ್ ತುಂಬಾನೇ ಪ್ರಮುಖವಾಗುತ್ತದೆ ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ತಿಳಿಸಲಾಗುತ್ತದೆ, ಯಾವ ರೀತಿ ಓದಬೇಕು? ಟೈಮ್ ಟೇಬಲ್ ಬಗ್ಗೆ ಹಾಗೂ ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಯಾವ ರೀತಿ ಮಾಡಬೇಕು ಎಲ್ಲ ಮಾಹಿತಿಯನ್ನು ಓದಿ ಈ ಮಾಹಿತಿ ಇಷ್ಟ ಆದರೆ ಒಂದು ಕಮೆಂಟ್ ಅನ್ನು ಮಾಡಿ.

SSLC Timetable 2026

ವೇಳಾಪಟ್ಟಿ ಸಂಕ್ಷಿಪ್ತ ಮಾಹಿತಿ:

ಪರೀಕ್ಷಾ ಅವಧಿಮಾರ್ಚ್ 18ರಿಂದ ಏಪ್ರಿಲ್ ಎರಡು 2026
ಸಮಯಬೆಳಗ್ಗೆ 10 ರಿಂದ ಮಧ್ಯಾಹ್ನ1.15
ಉಚಿತ ಬಸ್ ಪ್ರಯಾಣಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಪ್ರವೇಶ ಪತ್ರ ತೋರಿಸಿದರೆ ಸಾಕು)
ಫಲಿತಾಂಶ ನಿರೀಕ್ಷಿಸಬಹುದಾದ ದಿನಾಂಕಏಪ್ರಿಲ್ 24 2026

ಪರೀಕ್ಷಾ ವೇಳಾಪಟ್ಟಿ ಹೀಗಿದೆ (SSLC Timetable 2026):

ಮಾರ್ಚ್ 18ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ
ಮಾರ್ಚ್ 23ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
ಮಾರ್ಚ್ 25ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಮಾರ್ಚ್ 28ಗಣಿತ, ಸಮಾಜಶಾಸ್ತ್ರ
ಮಾರ್ಚ್ 30ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳು
ಏಪ್ರಿಲ್ 01ಜೆಟಿಎಸ್ ವಿಷಯಗಳು ಮತ್ತು ಅರ್ಥಶಾಸ್ತ್ರ
ಏಪ್ರಿಲ್ 02ಸಮಾಜ ವಿಜ್ಞಾನ

ವಿದ್ಯಾರ್ಥಿಗಳು ಈಗಿನಿಂದಲೇ ಹೇಗೆ ಓದಬೇಕು?

  • ವಿದ್ಯಾರ್ಥಿಗಳು ಓದುವಾಗ ದಿನಚರಿಯನ್ನು ರೂಪಿಸಿಕೊಳ್ಳಬೇಕು
  • ಪ್ರತಿದಿನ ಕನಿಷ್ಠ 6 ಗಂಟೆಯಿಂದ 8 ಗಂಟೆ ಓದಬೇಕು
  • ಬೆಳಿಗ್ಗೆ 4.30 ಓದುವುದಕ್ಕೆ ಕುಳಿತು 6:30 ತನಕ ಕಠಿಣ ಪರಿಶ್ರಮದೊಂದಿಗೆ (ಗಣಿತ ವಿಜ್ಞಾನ) ಓದಬೇಕು
  • ಸಂಜೆ 5ಗಂಟೆಯಿಂದ 8 ಗಂಟೆಯ ತನಕ ಭಾಷಾ ವಿಷಯವಾರು ಓದಬೇಕು
  • ರಾತ್ರಿ ರಾತ್ರಿ 9:30 ಒಳಗೆ ಮಲಗುವುದು

ವಿದ್ಯಾರ್ಥಿಗಳು ವಿಷಯವಾರು ತಯಾರಿ ನಡೆಸುವುದು ಹೇಗೆ?:

ಗಣಿತ : ಪ್ರತಿದಿನ ಸಮಸ್ಯೆಗಳನ್ನ ಬಿಡಿಸಿ ಅಭ್ಯಾಸವನ್ನು ಮಾಡಿಕೊಂಡರೆ ಗಣಿತ ಸುಲಭವಾಗುತ್ತದೆ

ವಿಜ್ಞಾನ : ಸೂತ್ರಗಳು, ಚಿತ್ರಗಳು ಹಾಗೂ ಇನ್ನಿತರ ಪ್ರಮುಖ ಪ್ರಶ್ನೋತ್ತರಗಳನ್ನ ಅಧ್ಯಯನ ಮಾಡಬೇಕು

ಸಮಾಜ ವಿಜ್ಞಾನ: ನಕ್ಷೆ, ಪ್ರಮುಖ ಅಂಶಗಳು, ದಿನಾಂಕಗಳು ಹೀಗೆ ಕಠಿಣ ಪ್ರಶ್ನೋತ್ತರಗಳನ್ನು ಅಭ್ಯಾಸ ಮಾಡಬೇಕು

ಭಾಷೆಗಳು : ವ್ಯಾಕರಣ, ಪ್ರಬಂಧ, ಪತ್ರ ಬರವಣಿಗೆ ಹಾಗೂ ಇನ್ನಿತರ ಪ್ರಶ್ನೋತ್ತರಗಳನ್ನ ಅಚ್ಚುಕಟ್ಟಾಗಿ ಕಲಿಯಬೇಕು

ಹಳೆಯ ಪ್ರಶ್ನೆ ಪತ್ರಿಕೆಯನ್ನು ಏಕೆ ಓದಬೇಕು?

ವಿದ್ಯಾರ್ಥಿಗಳು ಹಳೆಯ ಪ್ರಶ್ನೆ ಪತ್ರಿಕೆಗಳನ್ನ ಪ್ರತಿದಿನ ಒಂದು ಪ್ರಶ್ನೆ ಪತ್ರಿಕೆಯಂತೆ ಬಿಡಿಸಬೇಕು,ಇದರಿಂದ ಸಮಯ ಉಳಿತಾಯ ಸೇರಿದಂತೆ, ಪ್ರಶ್ನೋತ್ತರಗಳ ಮೇಲುಕು ಹಾಕಿದ ಹಾಗೆ ಆಗುತ್ತದೆ ಹಾಗೂ ಹೆಚ್ಚು ಅಂಕ ಪಡೆಯಲು ಇದು ಸಾಧ್ಯವಾಗುತ್ತದೆ

ಹಳೆಯ ಪ್ರಶ್ನೆ ಪತ್ರಿಕೆಯನ್ನ ಬರೆಯುವುದು ಹಾಗೂ ಅದನ್ನ ಮನನ ಮಾಡುವುದು ಇತ್ತೀಚಿನ ಪ್ರಶ್ನೋತ್ತರಗಳಿಗೆ ಅವುಗಳನ್ನು ಹೋಲಿಕೆ ಮಾಡುವುದು ಹೀಗೆ ಮಾಡಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಬಹುದು.

ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಹೇಗೆ?

  • ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಪರೀಕ್ಷೆ ಮುಗಿಯುವ ತನಕ ದೂರವಿರಬೇಕು
  • ಪ್ರತಿ ಗಂಟೆಗೆ 5ರಿಂದ 10 ನಿಮಿಷಗಳ ಕಾಲ ವಿರಾಮವನ್ನ ಮಾಡಿಕೊಳ್ಳಬೇಕು ಆ ವಿರಾಮದ ಸಮಯದಲ್ಲಿ ಉತ್ತಮ ಆಲೋಚನೆಯನ್ನು ಹಾಗೂ ಮುಂದೆ ಯಾವ ವಿಷಯವನ್ನು ಓದಬೇಕು ಅನ್ನುವುದರ ಬಗ್ಗೆ ಚಿಂತಿಸಬೇಕು.
  • ಟೈಮ್ ಟೇಬಲ್ ಗೋಡೆಗಳಿಗೆ ಅಂಟಿಸಬೇಕು ಹಾಗೂ ಸಮಾಜ ವಿಜ್ಞಾನದ ಮ್ಯಾಪ್ ಗಳು ಹಾಗೂ ಗಣಿತದ ಸೂತ್ರಗಳನ್ನು ಗೋಡೆಯಲ್ಲಿ ಅಂಟಿಸಿರಬೇಕು
  • ಬೆಳಿಗ್ಗೆ ಬೇಗ ಹೇಳುವುದನ್ನು ರೂಢಿಸಿಕೊಳ್ಳಬೇಕು

ವಿದ್ಯಾರ್ಥಿಗಳು ಭಯ ಮತ್ತು ಆತಂಕವನ್ನು ದೂರ ಮಾಡುವುದು ಹೇಗೆ?

  • ಪ್ರತಿದಿನ 10 ರಿಂದ 15 ನಿಮಿಷ ಪ್ರಾಣಾಯಾಮ ಸೇರಿದಂತೆ ಯೋಗವನ್ನ ಮಾಡಬೇಕು
  • ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸದಿಂದ ಬೆಳಿಗ್ಗೆಯ ಉತ್ಸಾಹಕತೆಯಿಂದ ಎದ್ದು ಓದಬೇಕು
  • ಹೋಲಿಕೆಯನ್ನು ಯಾರೊಂದಿಗೂ ಕೂಡ ಹೆಚ್ಚು ಮಾತಾಡಬೇಡಿ
  • ನಿಮ್ಮ ಮೇಲೆ ನಿಮಗೆ ನಂಬಿಕೆಯನ್ನು ಇಟ್ಟು ಓದಿರಿ
  • ಮೊಬೈಲ್ ಬಳಕೆ ಮಾಡಬೇಡಿ
  • ಬೇರೆಯವರ ಮಾತನ್ನು ಹೆಚ್ಚಾಗಿ ಕೇಳಿಸಿಕೊಳ್ಳಬೇಡಿ

ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ ಯಾವ ವಿಧಾನವನ್ನು ಪಾಲನೆ ಮಾಡಬೇಕು?

  • ಪ್ರವೇಶ ಪತ್ರವನ್ನು ಜೋಪಾನವಾಗಿ ತೆಗೆದುಕೊಂಡು ಹೋಗಬೇಕು
  • 2ರಿಂದ 3 ನೀಲಿ ಪೆನ್ನುಗಳನ್ನು ಜೊತೆಗೆ ಇರಿಸಿಕೊಳ್ಳಬೇಕು
  • ಪೆನ್ಸಿಲ್, ಎರೇಸರ್ ,ಜೀವಮೆಟ್ರಿಕ್ಸ್ ಬಾಕ್ಸ್ ಇಟ್ಟುಕೊಳ್ಳಬೇಕು
  • ಡಿಜಿಟಲ್ ಅನ್ನದ ಕೈಗಡಿಯಾರವನ್ನು ಸಮಯವನ್ನು ನೋಡಲು ಇಟ್ಟುಕೊಳ್ಳಬೇಕು

ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಬಾರದ ವಸ್ತುಗಳು:

  • ಮೊಬೈಲ್ ಫೋನ್
  • ಕ್ಯಾಲ್ಕುಲೇಟರ್
  • ಚೀಟಿ
  • ಪುಸ್ತಕಗಳು
  • ಸ್ಮಾರ್ಟ್ ವಾಚ್

ತಂದೆ ತಾಯಿಯರ ಅಭಯ ಮತ್ತು ಶಿಕ್ಷಕರ ಸಲಹೆ :

ಹೌದು ವಿದ್ಯಾರ್ಥಿಗಳಿಗೆ ತಂದೆ-ತಾಯಿ ಅಭಯ ಸೇರಿದಂತೆ ಶಿಕ್ಷಕರ ಸಲಹೆ ಇಂತಹ ಸಂದರ್ಭದಲ್ಲಿ ತುಂಬಾನೇ ಪ್ರಮುಖವಾಗುತ್ತದೆ

  • ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡವನ್ನು ಹೇರಬಾರದು.
  • ಪಲಿತಾಂಶಕ್ಕಿಂತ ಪ್ರಯತ್ನ ಮುಖ್ಯ ಅಂತ ಅವರಿಗೆ ಸಲಹೆಯನ್ನ ನೀಡಬೇಕು
  • ಶಿಕ್ಷಕರ ಮಾರ್ಗದರ್ಶನವನ್ನು ಅನುಸರಿಸಬೇಕು
  • ಅನುಮಾನ ಇದ್ದರೆ ತಕ್ಷಣ ಕೇಳಿ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು

ವಿದ್ಯಾರ್ಥಿಗಳು ಎಷ್ಟು ಗಂಟೆ ಮಲಗಬೇಕು?

  • ವಿದ್ಯಾರ್ಥಿಗಳು ಕನಿಷ್ಠ 7:00 ನಿದ್ರೆ ಮಾಡಬೇಕು
  • ರಾತ್ರಿ ಹೆಚ್ಚು ಹೊತ್ತು ಜಾಗರಣೆ ಮಾಡಬಹುದು ಒಳ್ಳೆಯದಲ್ಲ
  • ಬೆಳಿಗ್ಗೆ ಓದುವುದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ

ವಿದ್ಯಾರ್ಥಿಗಳಿಗೆ ಕಿವಿಮಾತು:

ಒಂದು ಪರೀಕ್ಷೆ ನಿಮ್ಮ ಭವಿಷ್ಯವನ್ನು ತೀರ್ಮಾನಿಸುವುದಿಲ್ಲ ಆದರೆ ನಿಮ್ಮ ಧೈರ್ಯ ಶ್ರಮ ಮತ್ತೆ ನಿಮ್ಮ ನಂಬಿಕೆ ನಿಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ, ನೀವು ಏನು ಬೇಕಾದರೂ ಮಾಡಬಲ್ಲಿರಿ ನಿಮ್ಮಲ್ಲಿ ಆ ಶಕ್ತಿ ಇದೆ, ಈ ಬಾರಿ ನೀವು ಗೆಲ್ಲುವುದಂತು ನಿಜ, ನೀವು ಪ್ರತಿದಿನ ಉತ್ತಮವಾದ ಪ್ರಯತ್ನವನ್ನ ಓದುವುದರ ಕಡೆಗೆ ಗಮನಹರಿಸಿ ಖಂಡಿತ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮವಾದ ಅಂಕವನ್ನ ಗಳಿಸುವುದರ ಜೊತೆಗೆ ಒಳ್ಳೆ ಸಾಧನೆ ಮಾಡಿದ ಕೀರ್ತಿ ನಿಮ್ಮದಾಗುತ್ತದೆ ನಿಮ್ಮಲ್ಲಿ ಆ ಶಕ್ತಿ ಇದೆ, ಇಂದಿನಿಂದಲೇ ನಿಮ್ಮ ತಯಾರಿಯನ್ನು ನಡೆಸಿ ನಿಮ್ಮ ತಂದೆ ತಾಯಿಗೆ ನಿಮ್ಮ ಗುರುಹಿರಿಯರಿಗೆ ಹಾಗೂ ಶಿಕ್ಷಕರಿಗೆ ಒಳ್ಳೆಯ ಕೀರ್ತಿಯನ್ನು ತನ್ನಿ.

ವಿದ್ಯಾರ್ಥಿಗಳಿಗೆ ಕೊನೆಯ ಮಾತು:

ನೀವು ಸಾಮಾನ್ಯ ವಿದ್ಯಾರ್ಥಿಯಲ್ಲ, ನಿಮ್ಮೊಳಗೆ ಅನೇಕ ಸಾಮರ್ಥ್ಯವಿರುತ್ತದೆ ಭಯ ಸಹಜ ಆದರೆ ಅದೇ ಭಯವನ್ನು ನಿಮ್ಮಲ್ಲಿ ನಿಯಂತ್ರಿಸಬಾರದು, ಪ್ರತಿದಿನದ ಸಣ್ಣ ಪ್ರಯತ್ನ ದೊಡ್ಡ ಫಲವನ್ನು ಕೊಡುತ್ತದೆ ಅನ್ನುವಂತದ್ದರ ಬಗ್ಗೆ ನಿಮಗೆ ನಂಬಿಕೆ ಇರಬೇಕು ಯಾರೊಂದಿಗೂ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಬೇಡಿ ನಿಮ್ಮ ಸ್ಪರ್ಧಿ ನೀವು ಮಾತ್ರ ಬೇರೆ ಯಾರು ಅಲ್ಲ, ಅನ್ನೋದರ ಮೇಲೆ ನಂಬಿಕೆ ಇಟ್ಟು ಪ್ರತಿದಿನ ಪ್ರಯತ್ನ ಪಟ್ಟು ಈ ಎಸ್ ಎಸ್ ಎಲ್ ಸಿ ಅನ್ನುವ ಘಟ್ಟವನ್ನು ಹತ್ತಿ ನಿಂತು ಎಲ್ಲರಿಗೂ ಮಾದರಿಯಾಗಿ ನಿಲ್ಲಿ.

ಇದನ್ನು ಓದಿರಿ :- Vivo Scholarship: ರೂ.60,000/- ಕನ್ಯಾಜ್ಞಾನ ವಿದ್ಯಾರ್ಥಿವೇತನ 

Leave a Reply

Your email address will not be published. Required fields are marked *