RPLI: ಭಾರತೀಯ ಅಂಚೆ ಇಲಾಖೆಯ ಯೋಜನೆ, ಕೇವಲ ಹತ್ತು ವರ್ಷದ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಸಿಗುತ್ತೆ!

RPLI

ಗ್ರಾಮೀಣ ಭಾರತದ ಆರ್ಥಿಕ ಸಬಲೀಕರಣಕ್ಕಾಗಿ ಭಾರತೀಯ ಅಂಚೆ ಇಲಾಖೆಯು ಜಾರಿಗೆ ತಂದಿರುವ ಅಧ್ಬಿತ ಹಣ ಪಾವತಿ ವಿಮಾ ಯೋಜನೆಗಳಲ್ಲಿ ‘ಗ್ರಾಮ ಪ್ರಿಯ’ (10-Year RPLI) ಬಹಳಷ್ಟು ಅಗ್ರಸ್ಥಾನದಲ್ಲಿದೆ. ಇದು ಕೇವಲ ಒಂದು ವಿಮೆಯಲ್ಲ, ಬದಲಿಗೆ ಹಳ್ಳಿ ಜನರ ಬದುಕಿಗೆ ಭಧ್ರ ಬುನಾದಿ ಯೋಜನೆ.

RPLI scheme in kannada

ಇಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿ ಹೂಡಿಕೆಯನ್ನ ಆರಂಭಿಸಿದರು ಅತ್ಯಂತ ಸುರಕ್ಷಿತ ಹೂಡಿಕೆಯನ್ನ ಆರಂಭಿಸಲು ಹೆಚ್ಚು ಒಲವನ್ನ ತೋರಿಸುವುದು ಬಹಳ ಉತ್ತಮ. ಇದೆ ರೀತಿಯ ಅನೇಕ ಸ್ಕೀಮ್ ಗಳಿಂದ ಬಹಳಷ್ಟು ಜನ ಮೋಸ ಹೋಗುತ್ತಿದ್ದಾರೆ ಯಚ್ಚರಿಕೆಯಿಂದ ಇಂತ ಸ್ಕೀಮ್ ಗಳ ಮೇಲೆ ಹೂಡಿಕೆ ಮಾಡಿ.


RPLI

“ಗ್ರಾಮ ಪ್ರಿಯ ಯೋಜನೆಯು ಕೇವಲ ಜನ ಸಾಮಾನ್ಯರಿಗೆ ಹಣದ ಉಳಿತಾಯವನ್ನ ಅಷ್ಟೇ ಮಾಡುವುದಿಲ್ಲ”. ಇದು ಪ್ರತಿ ಗ್ರಾಮೀಣ ಕುಟುಂಬದ ದೀರ್ಘಕಾಲದ ಕನಸುಗಳಿಗೆ ಭಧ್ರ ಬುನಾದಿ. ರೈತರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ, ಹೆಣ್ಣುಮಕ್ಕಳ ಮದುವೆಗಾಗಿ ಅಥವಾ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ದೊಡ್ಡ ಮೊತ್ತದ ಹಣಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡುವ ಅಗತ್ಯವಿಲ್ಲ.

“RPLI ಈ ಯೋಜನೆಯಡಿ ಸಿಗುವ ಕಾಲಕಾಲದ ‘ಮನಿ ಬ್ಯಾಕ್’ ಸೌಲಭ್ಯವು ಆಯಾ ಸಮಯದ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತದೆ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ, ತಿಂಗಳ ಅಲ್ಪ ಉಳಿತಾಯವು ಹತ್ತು ವರ್ಷಗಳ ಅಂತ್ಯಕ್ಕೆ ನಿಮ್ಮ ಕೈಯನ್ನು ಬಲಪಡಿಸಿ, ಆರ್ಥಿಕವಾಗಿ ನಿಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ.”

ಇಂತಹ ಭಾರತ ಸರ್ಕಾರದ ಯೋಜನೆಗಳು ಅಂಚೆ ಇಲಾಖೆಯ ಮೇಲಿರುವ ಜನರ ನಂಬಿಕೆ ಮತ್ತು ಸರ್ಕಾರದ ಗ್ಯಾರಂಟಿ ಈ ಯೋಜನೆಗೆ ಮತ್ತಷ್ಟು ಶಕ್ತಿ ನೀಡಿದೆ. ಹಳ್ಳಿ ಹಳ್ಳಿಗಳಲ್ಲೂ ಲಭ್ಯವಿರುವ ಅಂಚೆ ಸೇವೆಗಳ ಮೂಲಕ ಸುಲಭವಾಗಿ ಈ ವಿಮೆಯನ್ನು ಪಡೆಯಬಹುದಾಗಿದೆ.

RPLI ಏನಿದು ಯೋಜನೆ ? ಯಾವಾಗ ಜಾರಿ ಮಾಡಿದ್ದೂ ಸರ್ಕಾರ ?

RPLI ಯೋಜನೆಯು ಭಾರತೀಯ ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವ ವಿಮೆ (RPLI) ಅಡಿಯಲ್ಲಿ ಬರುವ ಒಂದು ವಿಶಿಷ್ಟವಾದ “ಹಣ ವಾಪಸಾತಿ” (Money Back) ವಿಮಾ ಯೋಜನೆಯಾಗಿದೆ. ಇದರಿಂದ ಜನರಿಗೆ ಬಹಯಷ್ಟು ಅನುಕೂಲವೇ ಇದೆ. ಈ ಯೋಜನೆಯನ್ನ ಕೇಂದ್ರ ಸರ್ಕಾರವು ಮಲ್ಹೋತ್ರಾ ಸಮಿತಿಯ ಶಿಫಾರಸಿನ ಮೇರೆಗೆ 1995ರ ಮಾರ್ಚ್ 24ರಂದು ಗ್ರಾಮೀಣ ಭಾಗದ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಕಡಿಮೆ ವೆಚ್ಚದಲ್ಲಿ ವಿಮಾ ಸೌಲಭ್ಯ ನೀಡುವುದು ಹಾಗೂ ಉಳಿತಾಯದ ಮನೋಭಾವ ಬೆಳೆಸುವುದು ಇದರ ಮುಖ್ಯ ಉದ್ದೇಶವನ್ನ ಇಟ್ಟುಕೊಂಡು ಜಾರಿ ಮಾಡಲಾಯಿತು.

ಮುಖ್ಯ ಹೈಲೆಟ್ ಪಾಯಿಂಟ್ಸ್:

ಅಂಶವಿವರ
ಯೋಜನೆ ಹೆಸರುಗ್ರಾಮ ಪ್ರಿಯ (10-Year RPLI)
ಯೋಜನೆ ಪ್ರಕಾರಮನಿ ಬ್ಯಾಕ್ ವಿಮಾ ಯೋಜನೆ
ಒಟ್ಟು ಅವಧಿ10 ವರ್ಷ
ಕನಿಷ್ಠ ವಿಮಾ ಮೊತ್ತ₹10,000
ಗರಿಷ್ಠ ವಿಮಾ ಮೊತ್ತ₹10,00,000
ಮನಿ ಬ್ಯಾಕ್4ನೇ ವರ್ಷ 20% + 7ನೇ ವರ್ಷ 20%
ಅವಧಿ ಮುಗಿದಾಗ60% ಮೊತ್ತ + ಬೋನಸ್
ಬೋನಸ್ ದರ₹1000ಕ್ಕೆ ವರ್ಷಕ್ಕೆ ₹45
ವಯಸ್ಸಿನ ಅರ್ಹತೆ19 ರಿಂದ 45 ವರ್ಷ
ಪ್ರೀಮಿಯಂ ಪಾವತಿತಿಂಗಳು / ತ್ರೈಮಾಸಿಕ / ಅರ್ಧ ವರ್ಷ / ವರ್ಷ

ಹಣದ ಹೂಡಿಕೆ ಮತ್ತು ಹಣ ವಾಪಸಾತಿ ಹೇಗಿರುತ್ತೆ ಪಕ್ಕ ಲೆಕ್ಕಾಚಾರ :

ಅಂಚೆ ಕಚೇರಿಯ ‘ಗ್ರಾಮ ಪ್ರಿಯ'(RPLI) ಸ್ಕೀಮ್ ಎಂಬುದು ನೀವು ಕಟ್ಟಿದ ಹಣವನ್ನು ಲಾಭದ ಸಮೇತ ವಾಪಸ್ ನೀಡುವ ಒಂದು “10 ವರ್ಷದ ಫಿಕ್ಸೆಡ್ ಸೇವಿಂಗ್ಸ್” ಪ್ಲಾನ್ ಇದ್ದಂತೆ.

1. ಹಾಗಿದ್ದರೆ ಹೂಡಿಕೆಯನ್ನ ನೀವು ಯಾವ ರೀತಿ ಮಾಡಬೇಕು ಇಲ್ಲಿ ನೋಡಿ

ಸ್ನೇಹಿತರೆ ನೀವು ಪ್ರತಿ ತಿಂಗಳು ಅಥವಾ ವರ್ಷಕ್ಕೊಮ್ಮೆ ಅಲ್ಪ- ಸ್ವಲ್ಪ ಹಣವನ್ನು ಪ್ರೀಮಿಯಂ ರೂಪದಲ್ಲಿ ಕಟುತ್ತ ಬನ್ನಿ ಅಂದರೆ (ಉದಾಹರಣೆಗೆ: ₹1 ಲಕ್ಷದ ಪಾಲಿಸಿಗೆ ತಿಂಗಳಿಗೆ ಅಂದಾಜು ₹970 ರಿಂದ ₹1000).

2 . ಕಟ್ಟಿದ ಹಣ ಹೇಗೆ ಮರುಪಾವತಿ ಆಗುತ್ತದೆ

ಯಾವದೇ ವ್ಯಕ್ತಿ ಆದರೂ RPLI ಯೋಜನೆಯಗೆ 10 ವರ್ಷದ ಹೂಡಿಕೆ ಪ್ಲಾನಿಂಗ್ ಮಾತ್ರ ಇಲ್ಲ ಕೆಳಗೆ ಎಷ್ಟೆಷ್ಟು ವರ್ಷದ ಪ್ಲಾನಿಂಗ್ ಮಾಡ ಬಹುದು ಕೆಳಗೆ ತಿಳಿಸಲಾಗಿದೆ.

  • 4 ವರ್ಷ ಆದ ಮೇಲೆ: ನೀವು ಪಾಲಿಸಿ ಮಾಡಿದ ಮೊತ್ತದ 20% ಹಣ ಸಿಗುತ್ತದೆ (ಒಂದಷ್ಟು ಕೈ ಖರ್ಚಿಗೆ ಅಥವಾ ಸಾಲ ತೀರಿಸಲು ಆಗುತ್ತದೆ).
  • 7 ವರ್ಷ ಆದ ಮೇಲೆ: ಮತ್ತೆ 20% ಹಣ ನಿಮ್ಮ ಕೈ ಸೇರುತ್ತದೆ (ಮಕ್ಕಳ ಓದಿಗೆ ಅಥವಾ ಸಣ್ಣ ಪುಟ್ಟ ಖರ್ಚಿಗೆ ನೆರವು).
  • 10 ವರ್ಷ ಮುಗಿದ ಮೇಲೆ: ಉಳಿದ 60% ಹಣ ಮತ್ತು ಹತ್ತು ವರ್ಷದ ಪೂರ್ತಿ ಬೋನಸ್ (ಲಾಭ) ಒಟ್ಟಿಗೆ ಸಿಗುತ್ತದೆ.

ನಿಮ್ಮಗೆ RPLI ಇನ್ನು ಪಕ್ಕ ಲೆಕ್ಕಾಚಾರ ಬೇಕೆಂದರೆ ಉದಾಹರಣೆ ಸಮೇತ ₹1 ಲಕ್ಷದ ವಿಮೆ ಮಾಡಿಸುವುದರ ಬಗ್ಗೆ ತಿಳಿಸಲಾಗಿದೆ

  • 4ನೇ ವರ್ಷ: ನಿಮ್ಮ ಕೈಗೆ ₹20,000 ಸಿಗುತ್ತೆ.
  • 7ನೇ ವರ್ಷ: ನಿಮ್ಮ ಕೈಗೆ ₹20,000 ಸಿಗುತ್ತೆ.
  • 10ನೇ ವರ್ಷ: ನಿಮ್ಮ ಕೈಗೆ ₹1,05,000 ಸಿಗುತ್ತೆ (60 ಸಾವಿರ ಅಸಲು + 45 ಸಾವಿರ ಲಾಭ).
  • ಒಟ್ಟು ನಿಮಗೆ ಸಿಗುವ ಹಣ: ₹1,45,000.

ಒಬ್ಬ ವ್ಯಕ್ತಿ ಗ್ರಾಮ ಪ್ರಿಯ (10-Year RPLI) ಯೋಜನೆಯಡಿ ಎಷ್ಟು ಲಕ್ಷದ ವರೆಗೆ ಹೂಡಿಕೆ ಮಾಡಬಹುದು :

  • ಗರಿಷ್ಠ ವಿಮಾ ಮೊತ್ತ: ನೀವು ಒಬ್ಬರೇ ಗರಿಷ್ಠ ₹10 ಲಕ್ಷದವರೆಗೆ ವಿಮೆ ಮಾಡಿಸಬಹುದು.
  • ಕನಿಷ್ಠ ವಿಮಾ ಮೊತ್ತ: ಕನಿಷ್ಠ ₹10,000 ರಿಂದ ವಿಮೆಯನ್ನು ಪ್ರಾರಂಭಿಸಬಹುದು

ಉದಾಹರಣೆ ಈ ಲೆಕ್ಕಾಚಾರವು 30 ವರ್ಷದ ವ್ಯಕ್ತಿಯನ್ನು ಉದಾಹರಣೆಯಾಗಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ. (ಗಮನಿಸಿ: ವಯಸ್ಸಿಗೆ ಅನುಗುಣವಾಗಿ ಕಂತುಗಳು ಸ್ವಲ್ಪ ಬದಲಾಗಬಹುದು)

ಗ್ರಾಮ ಪ್ರಿಯ RPLI ಹೂಡಿಕೆ ಮತ್ತು ಆದಾಯದ ಚಾರ್ಟ್ (ಅಂದಾಜು)

ವಿಮಾ ಮೊತ್ತ (Sum Assured)ತಿಂಗಳ ಪ್ರೀಮಿಯಂ (ಅಂದಾಜು)4ನೇ ವರ್ಷದಲ್ಲಿ (20%)7ನೇ ವರ್ಷದಲ್ಲಿ (20%)10ನೇ ವರ್ಷದಲ್ಲಿ (60% + ಬೋನಸ್*)ಒಟ್ಟು ಸಿಗುವ ಹಣ
₹10,000₹100₹2,000₹2,000₹10,500₹14,500
₹50,000₹485₹10,000₹10,000₹52,500₹72,500
₹1,00,000₹970₹20,000₹20,000₹1,05,000₹1,45,000
₹5,00,000₹4,850₹1,00,000₹1,00,000₹5,25,000₹7,25,000
₹10,00,000₹9,700₹2,00,000₹2,00,000₹10,50,000₹14,50,000

ಬೋನಸ್ ಅನ್ನು ವಾರ್ಷಿಕ ₹1,000 ಕ್ಕೆ ₹45 ರಂತೆ ಲೆಕ್ಕ ಹಾಕಲಾಗಿದೆ (ಪ್ರಸ್ತುತ ದರ).

ಯಾವ ರೀತಿಯಲ್ಲಿ ಪಾವತಿ ಮಾಡಬೇಕಾಗುತ್ತದೆ :

ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಕೆಳಗಿನ ಯಾವುದೇ ವಿಧಾನದಲ್ಲಿ ಯಾದರು ಹಣವನ್ನ ಕಟುತ್ತ ಬರಬಹುದು.

  • ತಿಂಗಳಿಗೆ (Monthly): ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಕಟ್ಟಬಹುದು.
  • ಮೂರು ತಿಂಗಳಿಗೊಮ್ಮೆ (Quarterly): ಪ್ರತಿ 3 ತಿಂಗಳಿಗೊಮ್ಮೆ ಪಾವತಿಸಬಹುದು.
  • ಆರು ತಿಂಗಳಿಗೊಮ್ಮೆ (Half-yearly): ಪ್ರತಿ 6 ತಿಂಗಳಿಗೊಮ್ಮೆ ಪಾವತಿಸಬಹುದು.
  • ವರ್ಷಕ್ಕೊಮ್ಮೆ (Annual): ವರ್ಷದ ಪ್ರೀಮಿಯಂ ಅನ್ನು ಒಟ್ಟಿಗೆ ಪಾವತಿಸಬಹುದು.

ತಿಳಿಯಲೇ ಬೇಕಾದ ಮುಖ್ಯ ಅಂಶ :-

1. ಮರಣ ಸೌಲಭ್ಯ (Death Benefit):

  • ಪಾಲಿಸಿದಾರರು 10 ವರ್ಷದೊಳಗೆ ಮರಣ ಹೊಂದಿದರೆ, ನಾಮಿನಿಗೆ ಹಣ ನೀಡಲಾಗುತ್ತದೆ.
  • ಈಗಾಗಲೇ ಪಡೆದಿರುವ ಮನಿ ಬ್ಯಾಕ್ ಹಣವನ್ನು ಕಡಿತ ಮಾಡಲಾಗುವುದಿಲ್ಲ.
  • ಪೂರ್ಣ ₹1,00,000 + ಆ ಅವಧಿಗೆ ಬಂದ ಬೋನಸ್ ನಾಮಿನಿಗೆ ಸಿಗುತ್ತದೆ.

2. ಸಾಲದ ಸೌಲಭ್ಯ (Loan Facility):

  • ಈ ಯೋಜನೆ ಮೇಲೆ ಸಾಲ ಪಡೆಯಲು ಸಾಧ್ಯವಿಲ್ಲ.
  • ಪಾಲಿಸಿಯನ್ನು ಮಧ್ಯದಲ್ಲಿ ಸರೆಂಡರ್ (ಬಿಟ್ಟುಬಿಡಲು) ಮಾಡುವ ಅವಕಾಶ ಇಲ್ಲ.

3. ನೈಸರ್ಗಿಕ ವಿಕೋಪ ರಿಯಾಯಿತಿ (Natural Disaster Benefit):

  • ಬರಗಾಲ ಅಥವಾ ಪ್ರವಾಹದಂತ ಸಂದರ್ಭಗಳಲ್ಲಿ ಸಹಾಯ ಇದೆ.
  • ಪ್ರೀಮಿಯಂ ಕಟ್ಟಲು 1 ವರ್ಷದವರೆಗೆ ಸಮಯ ನೀಡಲಾಗುತ್ತದೆ.
  • ಆ ಅವಧಿಗೆ ಯಾವುದೇ ಬಡ್ಡಿ ಹಾಕುವುದಿಲ್ಲ.

ಯೋಜನೆಯ ಅರ್ಹತೆಗಳು :

  • ಕನಿಷ್ಠ 19 ವರ್ಷ ತುಂಬಿರಬೇಕು ಮತ್ತು ಗರಿಷ್ಠ 45 ವರ್ಷ ಮೀರಬಾರದು.
  • ನೀವು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದ ನಿವಾಸಿಯಾಗಿರಬೇಕು (Rural Area).
  • ಈ ಯೋಜನೆಯು ರೈತರು, ಸಣ್ಣ ವ್ಯಾಪಾರಿಗಳು, ಕೃಷಿ ಕಾರ್ಮಿಕರು ಸೇರಿದಂತೆ ಎಲ್ಲಾ ಗ್ರಾಮೀಣ ಜನರಿಗೆ ಮುಕ್ತವಾಗಿದೆ.
  • ಪಾಲಿಸಿ ಪಡೆಯುವಾಗ ನೀವು ಆರೋಗ್ಯವಂತರಾಗಿರಬೇಕು (ಕೆಲವೊಮ್ಮೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿರುತ್ತದೆ ಇರುತ್ತದೆ)

ಪ್ರಮುಖ ದಾಖಲೆಗಳು :

  • ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್.
  • ನಾಮಿನಿ ವಿವರ: ನಿಮ್ಮ ಉತ್ತರಾಧಿಕಾರಿಯ ಆಧಾರ್ ಕಾರ್ಡ್ ಪ್ರತಿ
  • ಫೋಟೋ: 2 ಪಾಸ್‌ಪೋರ್ಟ್ ಸೈಜ್ ಭಾವಚಿತ್ರಗಳು.
  • ವಿಳಾಸದ ದಾಖಲೆ: ರೇಷನ್ ಕಾರ್ಡ್ ಅಥವಾ ವೋಟರ್ ಐಡಿ.
  • ವಯಸ್ಸಿನ ಪುರಾವೆ: SSLC ಅಂಕಪಟ್ಟಿ ಅಥವಾ ಜನನ ಪ್ರಮಾಣಪತ್ರ.

ಅರ್ಜಿ ಸಲ್ಲಿಸುವುದು ಹೇಗೆ :

ಈ ಯೋಜನೆಯ ಲಾಭ ಪಡೆಯಲು ಆಸಕ್ತ ಹೊಂದಿರುವ ಅಭ್ಯರ್ಥಿಗಳು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಮತ್ತು ಪೋಸ್ಟ್ ಆಫೀಸ್ ಪ್ರೀಮಿಯಂ ಲೆಕ್ಕಾಚಾರಕ್ಕಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ https://www.indiapost.gov.in ಗೆ ಒಂದು ಸಾರಿ ವಿಸಿಟ್ ಮಾಡಿ.

RPLI ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಉತ್ತರ: ಈ ಯೋಜನೆಯ ಒಟ್ಟು ಅವಧಿ 10 ವರ್ಷಗಳು. ಇದು ಅಲ್ಪಾವಧಿಯ ಮನಿ-ಬ್ಯಾಕ್ ಯೋಜನೆಯಾಗಿದೆ.

ಉತ್ತರ: ಸದ್ಯದ ದರದಂತೆ ವಾರ್ಷಿಕವಾಗಿ ಪ್ರತಿ ₹1,000 ವಿಮಾ ಮೊತ್ತಕ್ಕೆ ₹45 ಬೋನಸ್ ಸಿಗುತ್ತದೆ. (ಉದಾಹರಣೆಗೆ: ₹1 ಲಕ್ಷದ ವಿಮೆಗೆ ವರ್ಷಕ್ಕೆ ₹4,500 ಬೋನಸ್ ಜಮೆಯಾಗುತ್ತದೆ)

ಉತ್ತರ: ಕನಿಷ್ಠ 19 ವರ್ಷ ತುಂಬಿರಬೇಕು ಮತ್ತು ಗರಿಷ್ಠ 45 ವರ್ಷ ಮೀರಬಾರದು.

ಉತ್ತರ: ನಿಗದಿತ ಸಮಯಕ್ಕೆ ಪ್ರೀಮಿಯಂ ಕಟ್ಟದಿದ್ದರೆ ಪಾಲಿಸಿ ‘ಲ್ಯಾಪ್ಸ್’ ಆಗುತ್ತದೆ. ಆದರೆ ಬಾಕಿ ಹಣ ಮತ್ತು ಸ್ವಲ್ಪ ದಂಡ (Penalty) ಕಟ್ಟಿ ಮತ್ತೆ ಚಾಲ್ತಿಗೆ ತರಬಹುದು.


ಇತರೆ ಸರ್ಕಾರೀ ಯೋಜನೆಗಳ ಲಿಂಕುಗಳು:

Leave a Reply

Your email address will not be published. Required fields are marked *