ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ಕೂಲಿ ಕಾರ್ಮಿಕರ ಮದುವೆ ಸಹಾಯಧನವನ್ನು 2026 ರಲ್ಲಿ ಹೆಚ್ಚಿಸಿದ ಸರ್ಕಾರ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಈ ಸಹಾಯಧನವನ್ನು ನೀಡಲಿದ್ದು, ಅರ್ಹಫಲಾನುಭವಿಗಳು ಈ ಒಂದು ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ.
Labour Card Marriage Benefits Scheme
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರ ಮದುವೆಗೆ ಅಥವಾ ತಮ್ಮ ಮಕ್ಕಳ ಮದುವೆಗೆ ಹಣಕಾಸಿನ ನೆರವನ್ನು ಒದಗಿಸುವ ಉದ್ದೇಶದಿಂದ ವಿವಾಹ ಸಹಾಯಧನವನ್ನು ನೀಡಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಇಂದೇ ಅರ್ಜಿ ಸಲ್ಲಿಸಿ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಇಚ್ಛಿಸುವವರು ನಮ್ಮ ಅಧಿಕೃತ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.
ಯೋಜನೆಯ ಉದ್ದೇಶಗಳನ್ನು, ಈ ಯೋಜನೆಯಿಂದಾಗಿ ಫಲಾನುಭವಿಗಳಿಗಾಗುವ ಪ್ರಯೋಜನಗಳನ್ನು, ಅರ್ಹತಾ ಮಾನದಂಡಗಳನ್ನು ಮತ್ತು ಇನ್ನಿತರೇ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಈ ಎಲ್ಲ ಮಾಹಿತಿಯನ್ನು ಓದಿಕೊಳ್ಳಿ.
ಯೋಜನೆಯ ಅವಲೋಕನ: (Labour Card Marriage Benefits Scheme)
| ಯೋಜನೆಯ ಹೆಸರು | ವಿವಾಹ ಸಹಾಯಧನ ಯೋಜನೆ |
| ಫಲಾನುಭವಿಗಳು | ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು |
| ಅರ್ಜಿಸಲ್ಲಿಸುವ ವಿಧಾನ | ಆನ್ ಲೈನ್ ಮತ್ತು ಆಫ್ಲೈನ್ |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಒಟ್ಟು ಸಹಾಯಧನ | ₹1,20,000 |
ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ಸರ್ಕಾರವು ನಿರ್ಮಾಣ ಕಾರ್ಮಿಕರ ಮದುವೆಗೆ ಅಥವಾ ಅವರ ಸ್ವಂತ ಮಕ್ಕಳ ಮದುವೆಗೆ ₹ 60000 ಸಹಾಯಧನವನ್ನು ನೀಡುತ್ತಿದ್ದು, ಒಂದು ಕುಟುಂಬವು 2 ಬಾರಿ ಈ ಯೋಜನೆಯ ಲಾಭವನ್ನು ಪಡಿದುಕೊಳ್ಳಬಹುದು ಅಂದರೆ ₹1,20,000 ಸಹಾಯಧನವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಮೊದಲ ಮದುವೆಗೆ ಮಾತ್ರ ಅನ್ವಯವಾಗುತ್ತದೆ.
ಯೋಜನೆಯ ಪ್ರಮೂಖ ಉದ್ದೇಶಗಳು: Labour Card Marriage Benefits Scheme
- ಬಡ ಮತ್ತು ಮಧ್ಯಮ ವರ್ಗದ ಕಾರ್ಮಿಕರ ಕುಟುಂಬಗಳಿಗೆ ಮದುವೆ ಸಂದರ್ಭದಲ್ಲಿ ಎದುರಾಗುವ ಆರ್ಥಿಕ ಸಮಸ್ಯೆಯನ್ನು ಕಡಿಮೆ ಮಾಡುವುದು.
- ನೋಂದಾಯಿತ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸುವುದು. ಸಾಮಾಜಿಕ ಭದ್ರತೆಯನ್ನು ಒದಗಿಸುವುದು.
- ಕಾನೂನುಬದ್ಧವಾಗಿ ವಯೋಮಿತಿ ಹೊಂದಿರುವವ ವಧು-ವರರು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಈ ಒಂದು ಪ್ರಕ್ರಿಯೆಯಿಂದಾಗಿ ಬಾಲ್ಯ ವಿವಾಹವನ್ನು ತಡೆಗಟ್ಟಬಹುದು.
- ಕಾನೂನುಬದ್ಧವಾಗಿ ಮದುವೆಯನ್ನು ನೋಂದಾಯಿಸಿಕೊಳ್ಳಲು ಪ್ರೇರೇಪಿಸುವುದು.
- ಕಾರ್ಮಿಕರ ಅಥವಾ ಅವರ ಇಬ್ಬರು ಮಕ್ಕಳ ಮದುವೆಗಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸುವುದು.
ಯೋಜನೆಯ ಪ್ರಯೋಜನಗಳು:
- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಅಥವಾ ತಮ್ಮ ಇಬ್ಬರು ಮಕ್ಕಳ ವಿವಾಹ ಸಂದರ್ಭದಲ್ಲಿ ಸರ್ಕಾರದಿಂದ ₹1,20,000 ಸಹಾಯಧನವನ್ನು ಪಡೆದುಕೊಳ್ಳಬಹುದು.
- ಈ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವನ್ನು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
- ಕಾರ್ಮಿಕರು ಸಮಾಜದಲ್ಲಿ ಗೌರವಯುತವಾಗಿ ಶುಭ ಕಾರ್ಯವನ್ನು ನಡೆಸಲು ಸಹಾಯವಾಗುತ್ತದೆ.
ಅರ್ಜಿದಾರರ ಅರ್ಹತಾ ಮಾನದಂಡಗಳೇನು? – Labour Card Marriage Benefits Scheme
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ಕರ್ನಾಟಕದಲ್ಲಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರಾಗಿರಬೇಕು.
- ಮದುವೆಗೆ ಒಂದು ವರ್ಷ ಮೊದಲು ಮಂಡಳಿಯ ಸದಸ್ಯತ್ವವನ್ನು ಹೊಂದಿರಬೇಕು.
- ಹಿಂದಿನ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಬೇಕು.
- ಮದುವೆಯಾಗುವ ವಧು-ವರರು ಕಾನೂನುಬದ್ಧ ವಯೋಮಿತಿಯನ್ನು ಹೊಂದಿರಬೇಕು.
- ಒಂದು ಕುಟುಂಬವು ಈ ಸಹಾಯಧನವನ್ನು ಎರಡು ಬಾರಿ ಮಾತ್ರ ಪಡೆದುಕೊಳ್ಳಬಹುದು.
| ಇಲ್ಲಿ ಗಮನಿಸಿ: “ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರ ಮೊದಲ ಮದುವೆ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ಮಾತ್ರ ಈ ಯೋಜನೆ ಅನ್ವಹಿಸುತ್ತದೆ.” |
ಅರ್ಜಿದಾರರು ಹೊಂದಿರಬೇಕಾದ ಅಗತ್ಯ ದಾಖಲೆಗಳು:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಎಲ್ಲ ದಾಖಲೆಗಳನ್ನು ಹೊಂದಿರಬೇಕು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಲೇಬರ್ ಕಾರ್ಡ್
- ಮದುವೆ ನೋಂದಣಿ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್
- ಕೆಲಸದ ದೃಡೀಕರಣ ಪತ್ರ
- ಮದುವೆ ಆಮಂತ್ರಣ ಪತ್ರಿಕೆ
ಅರ್ಜಿ ಸಲ್ಲಿಸುವ ವಿಧಾನ: Labour Card Marriage Benefits Scheme
ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಈ ಒಂದು ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ ಈ ಎರಡು ವಿಧಾನಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ, ಈ ಕೆಳಗಿನ ಹಂತವನ್ನು ಅನುಸರಿಸಿ
- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಕೃತ ವೆಬ್ ಸೈಟ್ https://kbocwwb.karnataka.gov.in/ ಗೆ ಭೇಟಿ ನೀಡಿ ಅರ್ಜಿಸಲ್ಲಿಸಿ
- ಹೊಸ ‘ನಿರ್ಮಾಣ ಕೆಲಸಗಾರರಾಗಿ ನೋಂದಾಯಿಸಿ’ ಆಯ್ಕೆಯನ್ನು ಕ್ಲಿಕ್ ಮಾಡಿ
- ಮೊಬೈಲ್ ನಂಬರ್ ಮತ್ತು ಒಟಿಪಿ ಬಳಸಿ ಲಾಗಿನ್ ಆಗಿ.
- ನೋಂದಣಿ ಮೇಲೆ ಕ್ಲಿಕ್ ಮಾಡಿ, ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
- ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ, ಈ ಕೆಳಗಿನ ಹಂತವನ್ನು ಅನುಸರಿಸಿ.
- ನಿಮ್ಮ ಹತ್ತಿರದ ಕಾರ್ಮಿಕ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಫಾರ್ಮ್ ಪಡೆದುಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ಎಲ್ಲ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿ.
ಅಂತಿಮ ತೀರ್ಮಾನ:
ವಿವಾಹ ಸಹಾಯಧನ ಯೋಜನೆಯಡಿಯಲ್ಲಿ ಲೇಬರ್ ಕಾರ್ಡ್ ಹೊಂದಿರುವವರು ತಮ್ಮ ಅಥವಾ ತಮ್ಮ ಮಕ್ಕಳ ಮದುವೆಗೆ ಸರ್ಕಾರದಿಂದ ಸಹಾಯಧನವನ್ನು ಪಡೆಯಲು ಅರ್ಹರಾಗಿದ್ದಾರೆ. ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಆನ್ಲೈನ್ ಅಥವಾ ನಿಮ್ಮ ಹತ್ತಿರದ ಕಾರ್ಮಿಕ ಕಚೇರಿಗೆ ಭೇಟಿ ನೀಡಿ ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- ಪಿಎಂ ಸೂರ್ಯ ಘರ್ ಯೋಜನೆ
- ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ 2026
- ಶ್ರಮ ಶಕ್ತಿ ಯೋಜನೆ ಸಹಾಯಧನ 2026
- ಕರ್ನಾಟಕ ಮಡಿಲು ಕಿಟ್ ಯೋಜನೆ 2026
- ವಿಧವಾ ಪಿಂಚಣಿ ಯೋಜನೆ ಅರ್ಜಿ 2026

