Kukkuta Sanjeevini Scheme : ಕುಕ್ಕುಟ ಸಂಜೀವಿನಿ ಯೋಜನೆ – ಉಚಿತ ಕೋಳಿಮರಿ ಮತ್ತು ಶೆಡ್ ನಿರ್ಮಾಣಕ್ಕೆ ₹7.5 ಲಕ್ಷ ಸಹಾಯಧನ!

Kukkuta Sanjeevini Scheme

ಕರ್ನಾಟಕ ಸರ್ಕಾರದಿಂದ ಮಹಿಳೆಯರಿಗೆ ಸಂತಸದ ಸುದ್ದಿ. ನರೇಗಾ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿ ಅವರನ್ನು ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡಲು ಕುಕ್ಕುಟ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾ? ಹಾಗಿದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

Kukkuta Sanjeevini Scheme In Kannada 2026

ಈ ಒಂದು ಯೋಜನೆಯಡಿಯಲ್ಲಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಉಚಿತ ನಾಟಿ ಕೋಳಿಮರಿ, ಶೆಡ್ ಗಳ ನಿರ್ಮಾಣಕ್ಕೆ ಹಣಕಾಸಿನ ಸಹಾಯವನ್ನು ನೀಡಲಾಗುವುದು ಜೊತೆಗೆ ಪ್ರತಿ ಸಂಘಕ್ಕೆ ರೂ. 25000 ಸಹಾಯಧನವನ್ನು ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಕುಕ್ಕುಟ ಸಂಜೀವಿನಿ ಯೋಜನೆ 2026

Kukkuta Sanjeevini Scheme

ಯೋಜನೆಯ ಅವಲೋಕನ: (Kukkuta Sanjeevini Scheme 2026)

ಯೋಜನೆಯ ಹೆಸರು ಕುಕ್ಕುಟ ಸಂಜೀವಿನಿ ಯೋಜನೆ
ಅರ್ಹ ಫಲಾನುಭವಿಗಳು ಮಹಿಳಾ ಸ್ವಸಹಾಯ ಸಂಘದ ಸದಸ್ಯರು
ಸಹಾಯಧನದ ಮೊತ್ತ ರೂ. 25000 ಜೊತೆಗೆ ಇನ್ನಷ್ಟು ಸೌಲಭ್ಯಗಳು
ಅರ್ಜಿಸಲ್ಲಿಸುವ ರಾಜ್ಯ ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್
Kukkuta Sanjeevini Scheme 2026

ಯೋಜನೆಯ ಕುರಿತು:

ಕುಕ್ಕುಟ ಸಂಜೀವಿನಿ ಯೋಜನೆಯು ಕರ್ನಾಟಕ ಸರ್ಕಾರದ ಬಹು ನಿರೀಕ್ಷೆಯ ಯೋಜನೆಯಾಗಿದ್ದು, ಈ ಒಂದು ಯೋಜನೆಯನ್ನು 2024-25ರ ಬಜೆಟ್ ನಲ್ಲಿ ಘೋಷಿಸಲಾಯಿತು. ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಮತ್ತು ಉದ್ಯೋಗಾವಕಾಶವನ್ನು ಸೃಷ್ಟಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಯೋಜನೆಯ ಉದ್ದೇಶ: Kukkuta Sanjeevini Scheme 2026

  • ಗ್ರಾಮೀಣ ಭಾಗದ ಮಹಿಳೆಯರಿಗೆ ಶಾಶ್ವತ ಉದ್ಯೋಗಾವಕಾಶವನ್ನು ಸೃಷ್ಟಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು ಮತ್ತು ಅವರನ್ನು ಸಬಲರನ್ನಾಗಿ ಮಾಡುವುದು.
  • ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯವನ್ನು ಮಾಡುವ ಮೂಲಕ ಲಿಂಗ ಸಮಾನತೆಯನ್ನು ಉತ್ತೇಜಿಸುವುದು.
  • ಪೌಷ್ಟಿಕ ಆಹಾರದ ಲಭ್ಯತೆಯನ್ನು ಹೆಚ್ಚಿಸುವುದು.

ಯೋಜನೆಯ ಪ್ರಯೋಜನ:

  • ನೋಂದಾಯಿತ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಈ ಒಂದು ಯೋಜನೆಯಡಿಯಲ್ಲಿ ಪಶುಸಂಗೋಪನಾ ಇಲಾಖೆಯಿಂದ ಆರು ವಾರದ ನಾಟಿ ಕೋಳಿಮರಿಗಳನ್ನು ಉಚಿತವಾಗಿ ನೀಡಲಾಗುವುದು.
  • ನರೇಗಾ ಯೋಜನೆಯಡಿಯಲ್ಲಿ ಕೋಳಿ ಶೆಡ್ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತಿದ್ದು, 500 ಕೋಳಿಗಳ ಶೆಡ್ ಗೆ ₹4.5 ಲಕ್ಷ ಹಾಗೂ 1000 ಕೋಳಿಗಳ ಶೆಡ್ ಗೆ ₹7.5 ಲಕ್ಷ ಸಹಾಯಧನವನ್ನು ಪಡೆದುಕೊಳ್ಳಬಹುದು.
  • ಕೋಳಿ ಸಾಕಾಣಿಕೆ ಪ್ರಾರಂಭಿಸಲು ಪ್ರತಿ ಗುಂಪಿಗೆ ₹25000 ಸಹಾಯಧನವನ್ನು ನೀಡಲಾಗುವುದು.
  • ಈ ಯೋಜನೆಯಡಿಯಲ್ಲಿ ಉತ್ಪಾದನೆಯಾದ ಮೊಟ್ಟೆಗಳನ್ನು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ನಿಗದಿತ ದರದಲ್ಲಿ ಮಾರಾಟ ಮಾಡಲು ಅವಕಾಶ ಇರುವುದರಿಂದ ಮಹಿಳೆಯರು ಬೇರೆ ಮಾರುಕಟ್ಟೆ ಹುಡುಕುವ ಅವಶ್ಯಕತೆ ಇಲ್ಲದೆ ಸ್ಥಿರ ಮಾರಾಟ ವ್ಯವಸ್ಥೆ ಲಭ್ಯವಾಗುತ್ತದೆ.

ಫಲಾನುಭವಿಗಳಿಗೆ ಉಚಿತ ತರಬೇತಿ: Kukkuta Sanjeevini Scheme 2026

  • ಸರ್ಕಾರವು ಫಲಾನುಭವಿಗಳಿಗೆ 5 ರಿಂದ 10 ದಿನಗಳ ಕಾಲ ಉಚಿತವಾಗಿ “ವೈಜ್ಞಾನಿಕ ಕೋಳಿ ಸಾಕಣೆ” ತರಬೇತಿಯನ್ನು ನೀಡುತ್ತದೆ ಜೊತೆಗೆ ತರಬೇತಿ ಸಮಯದಲ್ಲಿ ದಿನಕ್ಕೆ ₹200 ಭತ್ಯೆಗಳನ್ನು ನೀಡಲಾಗುವುದು ಮತ್ತು ಪ್ರವಾಸ ವೆಚ್ಚಕ್ಕಾಗಿ ₹800 ಅನುದಾನವನ್ನು ಹಾಗೂ ಕಿಟ್ ವಿತರಣಾ ಸೌಲಭ್ಯವನ್ನು ಒದಗಿಸಲಾಗುವುದು.

ಅರ್ಹತಾ ಮಾನದಂಡ:

  • ಅರ್ಜಿದಾರರು ಕಡ್ಡಾಯವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿರಬೇಕು.
  • ಮಹಿಳಾ ಸ್ವಸಹಾಯ ಸಂಘದಲ್ಲಿ ಒಟ್ಟು 5 ರಿಂದ 10 ಸದಸ್ಯರಿರಬೇಕು.
  • ಗ್ರಾಮ ಪಂಚಾಯಿತಿ ಮಟ್ಟದ ಸಂಘಗಳಿಗೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ.
  • ಕೋಳಿ ಸಾಕಾಣಿಕೆ ಮಾಡಲು ಆಸಕ್ತಿ ಅಥವಾ ಅನುಭವವನ್ನು ಹೊಂದಿರಬೇಕು.

ಅಗತ್ಯ ದಾಖಲೆಗಳು: Kukkuta Sanjeevini Scheme 2026

  • ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಜಮೀನಿನ ಪಹಣಿ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವ ವಿಧಾನ:

  • ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಹತ್ತಿರದ ಪಶುಪಾಲನಾ ಇಲಾಖೆ ಅಥವಾ ತಾಲ್ಲೂಕು ಮಟ್ಟದ ತಹಶೀಲ್ದಾರ್ ಅವರನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ.

ತೀರ್ಮಾನ:

ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರು ಸ್ವಂತ ಉದ್ಯೋಗವನ್ನು ಸೃಷ್ಟಿಸಿಕೊಂಡು ಸ್ವಾವಲಂಬಿ ಜೀವನವನ್ನು ನಡೆಸುವಂತೆ ಮಾಡಲು ಕುಕ್ಕುಟ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಹತ್ತಿರದ ಪಶುಪಾಲನಾ ಇಲಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

ಇತರೆ ಪ್ರಮುಖ ಲಿಂಕುಗಳು:

You can read other articles and tell me by commenting below which of these blogging information you liked.

Leave a Reply

Your email address will not be published. Required fields are marked *