Karnataka SDA & FDA: 2026ರ ಕರ್ನಾಟಕ SDA (ದ್ವಿತೀಯ ದರ್ಜೆ ಸಹಾಯಕರ) ಮತ್ತು FDA (ಪ್ರಥಮ ದರ್ಜೆ ಸಹಾಯಕ) ಹುದ್ದೆಗಳ ನೇಮಕಾತಿ ಅಧಿಸೂಚನೆಯೂ ಪ್ರಕಟವಾಗಲಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ. SDA, FDA ಹುದ್ದೆಗಳೆಂದರೆ ಉದ್ಯೋಗ ಪ್ರೀಯರಿಗೆ ಒಂದು ರೀತಿಯ ಹುಚ್ಚು! ಇನ್ನು ಕೆಲವರಿಗೆ ನಾನು ಉದ್ಯೋಗವನ್ನು ಹಿಡಿದರೆ ಈ ಕ್ಷೇತ್ರದಲ್ಲೇ ಉದ್ಯೋಗ ಹಿಡಿಯಬೇಕು ಎನ್ನುವ ಕನಸು, ಹಠ, ಛಲ ಇರುತ್ತದೆ.
Karnataka SDA & FDA Recruitment in Kannada 2026
ಎಷ್ಟೆಷ್ಟು ಸರ್ಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಬಿದ್ದರೂ ಬಹಳಷ್ಟು ಅಭ್ಯರ್ಥಿಗಳು ಈ ಎಸ್ ಡಿ ಎ, ಎಫ್ ಡಿ ಎ ಹುದ್ದೆಗಳ ನೋಟಿಫಿಕೇಶನ್ ಯಾವಾಗ ಬರುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಓದನ್ನ ಮುಂದುವರಿಸುತ್ತಾರೆ.
ಪ್ರತಿ ವರ್ಷವೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಹಾಗೆ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಗಳು ಕರ್ನಾಟಕ ಸರ್ಕಾರಿ ಇಲಾಖೆಯಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ಮುಖ್ಯ ನೇಮಕಾತಿಗಳಾಗಿವೆ. ಇಲ್ಲಿ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಲೋಗೋಪಯೋಗಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, KSDL, KSRTC / NWKRTC / KKRTC, ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಈ ಎಲ್ಲಾ ಇಲಾಖೆಯ ಹುದ್ದೆಗಳು SDA, FDA ಹುದ್ದೆಗಳಿಗೆ ಒಳಪಟ್ಟಿರುತ್ತವೆ.
ಸ್ನೇಹಿತರೆ ಕರ್ನಾಟಕ ರಾಜ್ಯದ ಟಾಪ್ ಒನ್ ಹುದ್ದೆಗಳ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನ ನೀಡಲಾಗಿದ್ದು, 2026ರಲ್ಲಿ ಈ ಹುದ್ದೆಗಳಿಗೆ ಯಾವ ರೀತಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಏನು? ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳು ಯಾವುವು? ಇವೆಲ್ಲದರ ಬಗ್ಗೆ ಸಂಪೂರ್ಣವಾಗಿ ಕೆಳಗೆ ಮಾಹಿತಿಯನ್ನು ತಿಳಿಸಲಾಗಿದೆ. Karnataka SDA & FDA

SDA ಮತ್ತು FDA ನೇಮಕಾತಿ 2026 ಹೈಲೈಟ್ಸ್ :-
FDA (First Division Assistant) ಮತ್ತು SDA (Second Division Assistant) ಸರ್ಕಾರೀ ಹುದ್ದೆಗಳು ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಗೌರ್ಮೆಂಟ್ ಅಡಿಯಲ್ಲಿ ಬರುವಂತಹ ಆಡಳಿತಾತ್ಮಕ ಹುದ್ದೆಗಳಾಗಿವೆ. ಈ ನೇಮಕಾತಿಯನ್ನು ಮುಖ್ಯವಾಗಿ ಕೆಪಿಎಸ್ಸಿ ಅಥವಾ ಕೆಇಎ ಸಂಸ್ಥೆಗಳು ನಡೆಸುತ್ತವೆ. FDA ಹುದ್ದೆಗೆ ಯಾವುದೇ ಪದವಿ (Degree) ಮಾಡ್ಕೊಂಡಿದ್ದಾರೆ ಸಾಕು ಹಾಗೆ SDA ಹುದ್ದೆಗೆ ಪಿಯುಸಿ (PUC/12th) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದರೆ ಸಾಕು, ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತೀರಾ.
ಈ ಸರ್ಕಾರಿ ಕೆಲಸದ ಬಗ್ಗೆ ನೀವು ಪರಿಚಯ ಮಾಡಿಕೊಳ್ಳಲು ಬಯಸಿದರೆ ಇವು ಇವು ಕಚೇರಿಯ ಕಡತಗಳ ನಿರ್ವಹಣೆ (File Management), ಪತ್ರ ವ್ಯವಹಾರ ಮತ್ತು ಸಾರ್ವಜನಿಕ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುತ್ತವೆ. ಪರೀಕ್ಷಾ ದೃಷ್ಟಿಯಿಂದ ಅಭ್ಯರ್ಥಿಗಳಿಗೆ ಇಲ್ಲಿ General Kannada ಮತ್ತು General Knowledge ವಿಷಯಗಳು ಅತ್ಯಂತ ಪ್ರಮುಖವಾದ ಅಂಶವಾಗಿರುತ್ತದೆ. ಇಲ್ಲಿ ನೀವು ಪಡೆಯುವ ಅಂಕಗಳೇ ನಿಮ್ಮ ಭವಿಷ್ಯದ ದಿಕ್ಕನ್ನೇ ಬದಲಾಯಿಸುತ್ತವೆ . ರಾಜ್ಯ ಸರ್ಕಾರದ ನಿಯಮದಂತೆ ಅವುಗಳಿಗೆ ಆಕರ್ಷಕ ಸಂಬಳ ಹಾಗೆ ಇತರೆ ಭತ್ಯೆ ಇದ್ದು ಕರ್ನಾಟಕ ಗ್ರಾಮೀಣ ಮತ್ತು ನಗರ ಪ್ರದೇಶದ ಅಭ್ಯರ್ಥಿಗಳಿಗಳ ಬಹು ಬೇಡಿಕೆಯ ಸರ್ಕಾರಿ ಉದ್ಯೋಗ ಇದಾಗಿದೆ.
ಗ್ರಾಮೀಣ ಹಾಗೂ ನಗರ ಭಾಗದ ಜನಸಾಮಾನ್ಯರ ನೆರವಿಗಾಗಿ SDA ಮತ್ತು FDA Karnataka State Government ಅಡಿಯಲ್ಲಿ ಅನೇಕ ಹುದ್ದೆಗಳ ನೇಮಕಾತಿಯನ್ನ ಮಾಡಲಾಗುತ್ತದೆ. ಈ ನೇಮಕಾತಿಗೆ ಸಂಬಂಧಪಟ್ಟಂತೆ ವಿವಿಧ ಹುದ್ದೆಗಳನ್ನು ಈ ಕೆಳಗೆ ನೀವು ತಿಳಿಯಬಹುದು.
FDA (First Division Assistant – ಪ್ರಥಮ ದರ್ಜೆ ಸಹಾಯಕ) ಇಲಾಖೆಯ ಕಂಪ್ಲೀಟ್ ವಿವರ
ಗ್ರಾಮೀಣ ಮತ್ತು ನಗರಾಭಿವೃದ್ಧಿ ವಿಭಾಗ: Karnataka SDA & FDA
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
- ವಸತಿ ಇಲಾಖೆ
- ನಗರಾಭಿವೃದ್ಧಿ ಇಲಾಖೆ
ಆರ್ಥಿಕ ಮತ್ತು ವಾಣಿಜ್ಯ ವಿಭಾಗ:
- ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ
- ಹಣಕಾಸು ಇಲಾಖೆ
- ಗಣಿ ಮತ್ತು ಭೂ ವಿಜ್ಞಾನ ಇಲಾಖೆ
- ಸಹಕಾರ ಇಲಾಖೆ
ಕಲ್ಯಾಣ ಮತ್ತು ಸಾಮಾಜಿಕ ಸೇವೆ:
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಸಮಾಜ ಕಲ್ಯಾಣ ಇಲಾಖೆ
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
- ಮುಜ್ರಾಯಿ ಇಲಾಖೆ
- ಕಾರ್ಮಿಕ ಇಲಾಖೆ
ಆಡಳಿತಾತ್ಮಕ ಇಲಾಖೆಗಳು:
- ಕಂದಾಯ ಇಲಾಖೆ
- ತಾಂತ್ರಿಕ ಶಿಕ್ಷಣ ಇಲಾಖೆ
- ಪೊಲೀಸ್ ಇಲಾಖೆ
- ಆರೋಗ್ಯ ಇಲಾಖೆ
- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಸಾರಿಗೆ ಮತ್ತು ಇಂಧನ ವಿಭಾಗ:
- ಕಂದಾಯ ಇಲಾಖೆ
- ಲೋಕೋಪಯೋಗಿ ಇಲಾಖೆ
- ಸಾರಿಗೆ ಇಲಾಖೆ
SDA (Second Division Assistant – ದ್ವಿತೀಯ ದರ್ಜೆ ಸಹಾಯಕ) ಇಲಾಖೆಯ ಕಂಪ್ಲೀಟ್ ವಿವರ:
ಶೈಕ್ಷಣಿಕ ಮತ್ತು ಕಂದಾಯ ವಿಭಾಗ:
- ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಕಂದಾಯ ಮತ್ತು ಆಡಳಿತ ವಿಭಾಗ:
- ಪೊಲೀಸ್ ಇಲಾಖೆ
- ನಗರಾಭಿವೃದ್ಧಿ ಇಲಾಖೆ
- ಕಂದಾಯ ಇಲಾಖೆ
ಆರ್ಥಿಕ ಮತ್ತು ವಾಣಿಜ್ಯ ವಿಭಾಗ: Karnataka SDA & FDA
- ವಾಣಿಜ್ಯ ತೆರಿಗೆ ಇಲಾಖೆ
- ಅಬಕಾರಿ ಇಲಾಖೆ
- ಖಜಾನೆ ಇಲಾಖೆ
ಸರ್ಕಾರಿ ನಿಗಮಗಳು ಮತ್ತು ಮಂಡಳಿಗಳು:
- ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಇಲಾಖಾವಾರು ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಯ ಜವಾಬ್ದಾರಿಗಳು:
1. ಕಂದಾಯ ಇಲಾಖೆ:
Karnataka SDA & FDA ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಾಸಸ್ಥಳ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಅರ್ಜಿಗಳನ್ನು ವಿಲೇವಾರಿ ಮಾಡುವುದು, ಚುನಾವಣಾ ಸಮಯದಲ್ಲಿ ಮತದಾರರ ಪಟ್ಟಿಯನ್ನು ತಯಾರಿಸುವುದು ಹಾಗೂ ಭೂ ದಾಖಲೆಗಳು, ಆಸ್ತಿ ನೋಂದಣಿಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ ಬರೆದು ಮೇಲ್ವಿಚಾರಕರಿಗೆ ಆಡಳಿತಾತ್ಮಕವಾಗಿ ನೆರವು ನೀಡುವುದು ಪ್ರಥಮ ದರ್ಜೆ ಸಹಾಯಕ ಹುದ್ದೆಯ ಬಹು ಮುಖ್ಯ ಜವಾಬ್ದಾರಿ ಆಗಿದೆ.
2. ಆರೋಗ್ಯ ಇಲಾಖೆ:
ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳಿಗೆ ಅಗತ್ಯವಾದ ಔಷಧಿ ಹಾಗೂ ಉಪಕರಣಗಳಿಗೆ ಸಂಬಂಧಿಸಿದ ಲೇಖನವನ್ನು ನಿಯಮಾನುಸಾರ ಪರಿಶೀಲಿಸಿ, ಅವುಗಳ ನಿರ್ವಹಣೆ ಮಾಡುವುದು ಹಾಗೂ ರಾಷ್ಟ್ರೀಯ ಆರೋಗ್ಯ ನಿರ್ವಹಣೆ ಅಭಿಯಾನದಡಿಯಲ್ಲಿ ಬರುವ ಯೋಜನೆಗಳ ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡುವುದು ಪ್ರಥಮ ದರ್ಜೆ ಸಹಾಯಕ ಹುದ್ದೆಯ ಕರ್ತವ್ಯವಾಗಿದೆ.
3. ಶಾಲಾ ಶಿಕ್ಷಣ ಇಲಾಖೆ:
ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶಿಕ್ಷಕರ ವರ್ಗಾವಣೆ, ವೇತನ ಬಡಾವಣೆ ಹಾಗೂ ಬಡ್ತಿಗೆ ಸಂಬಂಧಿಸಿದ ಟಿಪ್ಪಣಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅವುಗಳನ್ನು ನಿರ್ವಹಣೆ ಮಾಡುವುದು ಹಾಗೂ ಶಾಲಾ ಮಕ್ಕಳಿಗೆ ಸಿಗುವ ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ಹಾಗೂ ವಿದ್ಯಾರ್ಥಿವೇತನದಂತಹ ಸೌಲಭ್ಯಗಳ ಹಂಚಿಕೆಯ ಉಸ್ತುವಾರಿ ವಹಿಸುವುದು ಪ್ರಥಮ ದರ್ಜೆ ಸಹಾಯಕ ಹುದ್ದೆಯ ಪ್ರಮುಖ ಜವಾಬ್ದಾರಿಯಾಗಿದೆ.
4. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿಯಲ್ಲಿ ಅರ್ಹರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡುವ ಬಗ್ಗೆ ದಸ್ತಾವೇಜುಗಳನ್ನು ನಿಯಮಾನುಸಾರ ಪರಿಶೀಲಿಸಿ, ಅವುಗಳ ನಿರ್ವಹಣೆ ಮಾಡುವುದು ಹಾಗೂ ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಅಗತ್ಯವಾದ ಆಹಾರ ದಾನ್ಯಗಳನ್ನು ಹಾಗೂ ಅನುದಾನವನ್ನು ಬಿಡುಗಡೆ ಮಾಡುವ ಜವಾಬ್ದಾರಿ ಪ್ರಥಮ ದರ್ಜೆ ಸಹಾಯಕರದ್ದಾಗಿರುತ್ತದೆ.
5. ಪೊಲೀಸ್ ಇಲಾಖೆ:
ಪೊಲೀಸ್ ಇಲಾಖೆಯ ಆಡಳಿತ ವಿಭಾಗದಲ್ಲಿ ಸಿಬ್ಬಂದಿಗಳ ರಜೆ, ವೇತನ, ಶಿಸ್ತು ಕ್ರಮ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಕಡತಗಳನ್ನು ನಿಯಮಾನುಸಾರ ಪರಿಶೀಲಿಸಿ, ಅವುಗಳನ್ನು ನಿರ್ವಹಣೆ ಮಾಡುವುದು ಪ್ರಥಮ ದರ್ಜೆ ಸಹಾಯಕ ಹುದ್ದೆಯ ಜವಾಬ್ದಾರಿಯಾಗಿದೆ.
ಇಲಾಖಾವಾರು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಯ ಜವಾಬ್ದಾರಿಗಳು:
1. ಕಂದಾಯ ಇಲಾಖೆ: Karnataka SDA & FDA
ಕಂದಾಯ ಇಲಾಖೆ ವ್ಯಾಪ್ತಿಯ ನಾಡಕಚೇರಿ ಅಥವಾ ತಹಶೀಲ್ದಾರ್ ಕಚೇರಿಗಳಿಗೆ ಸಾರ್ವಜನಿಕರು ನೀಡುವ ವಾಸಸ್ಥಳ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಅರ್ಜಿಗಳನ್ನು ಆನ್ಲೈನ್ ಮೂಲಕ ಸ್ವೀಕರಿಸಿ, ಅರ್ಜಿಗೆ ಸಂಬಂಧಿಸಿದ ಪಾವತಿ ರಶೀದಿಗಳನ್ನು ನೀಡಿ, ನಂತರ ದಾಖಲೆಗಳನ್ನು ಕಂಪ್ಯೂಟರ್ ತಂತ್ರಾಂಶ ಬಳಸಿ ಡಿಜಿಟಲೀಕರಣ ಗೊಳಿಸಿ ವಿಂಗಡಣೆ ಮಾಡುವುದು ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಪ್ರಮುಖ ಜವಾಬ್ದಾರಿಯಾಗಿದೆ.
2. ಆರೋಗ್ಯ ಇಲಾಖೆ:
ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವ ಆಸ್ಪತ್ರೆಗಳ ಔಷಧಿ ಹಾಗೂ ಉಪಕರಣಗಳ ದಾಸ್ತಾನುಗಳ ನಿರ್ವಹಣೆ ಮಾಡುವುದು ಹಾಗೂ ಆಯುಷ್ಮಾನ್ ಭಾರತ್ ಅಂತಹ ವಿವಿಧ ಚಿಕಿತ್ಸಾ ಯೋಜನೆಯಡಿಯಲ್ಲಿ ಬರುವ ಅರ್ಜಿಗಳನ್ನು ಮೊದಲ ಹಂತದಲ್ಲಿ ಪರಿಶೀಲನೆ ಮಾಡುವುದು ಹಾಗೂ ಆಸ್ಪತ್ರೆಗಳಿಗೆ ಬರುವ ರೋಗಿಗಳ ದಾಖಲಾತಿಯನ್ನು ಪರಿಶೀಲನೆ ಮಾಡುವುದು ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಮುಖ್ಯ ಜವಾಬ್ದಾರಿಯಾಗಿದೆ.
3. ಶಾಲಾ ಶಿಕ್ಷಣ ಇಲಾಖೆ:
ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಹಾಜರಾತಿ ವಿವರಗಳನ್ನು ಹಾಗೂ ದಾಖಲಾತಿ ಪುಸ್ತಕಗಳನ್ನು ಪರಿಶೀಲನೆ ಮಾಡುವುದು ಮತ್ತು ಬಿಇಒ ಕಚೇರಿಗಳಲ್ಲಿ ಶಿಕ್ಷಕರ ರಜಾ ಅರ್ಜಿಯನ್ನು ಸ್ವೀಕರಿಸುವುದು, ವೇತನಬಡಾವಣೆಯನ್ನು ಸಿದ್ದಪಡಿಸುವುದು ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಜವಾಬ್ದಾರಿಯಾಗಿದೆ.
4. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿನ ಆಹಾರ ಮತ್ತು ದಿನಸಿ ಬಿಲ್ ಗಳನ್ನು ತಯಾರಿಸುವುದು ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸುವುದು ಹಾಗೂ ವಿದ್ಯಾರ್ಥಿವೇತನದ ಕುರಿತು ಅರ್ಜಿ ಸಲ್ಲಿಸಿದ ಅರ್ಜಿಗಳ ದತ್ತಾಂಶವನ್ನು ನಿರ್ವಹಣೆ ಮಾಡುವುದು ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಜವಾಬ್ದಾರಿಯಾಗಿದೆ.
5. ಪೊಲೀಸ್ ಇಲಾಖೆ:
ಪೊಲೀಸ್ ಇಲಾಖೆ ವ್ಯಾಪ್ತಿಯ ಎಸ್.ಪಿ ಕಚೇರಿಯ ಸಿಬ್ಬಂದಿಗಳ ಭತ್ಯೆ, ರಜೆ ಹಾಗೂ ಇಲಾಖಾ ವಿಚಾರಣೆಗಳ ದಾಖಲೆಗಳ ಕ್ರಮಬದ್ಧವಾಗಿ ಇಡುವುದು ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಜವಾಬ್ದಾರಿಯಾಗಿದೆ.
FDA ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳು:
Karnataka SDA & FDA ಅಭ್ಯರ್ಥಿಗಳು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಅವುಗಳೆಂದರೆ,
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ಅಭ್ಯರ್ಥಿಗಳು SSLC ಅಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಇಲ್ಲದಿದ್ದರೆ, ಆಯ್ಕೆ ಪ್ರಕ್ರಿಯೆಯಲ್ಲಿ ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕಾಗುತ್ತದೆ.
SDA ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳು:
ಅಭ್ಯರ್ಥಿಗಳು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಅವುಗಳೆಂದರೆ,
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ PUC ಅಥವಾ ಅದಕ್ಕೆ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಐಟಿಐ ಹಾಗೂ ಡಿಪ್ಲೊಮಾ ಮುಗಿಸಿ PUC ಸಮಾನಾಂತರ ಸರ್ಟಿಫಿಕೇಟ್ ಹೊಂದಿದ್ದರೂ ಅಂತಹ ಅಭ್ಯರ್ಥಿಗಳು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ ವಿವರ:
- ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಹಾಗೂ ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ ವಿವರ:
Karnataka SDA & FDA ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವರ್ಗವಾರು ಈ ಕೆಳಗೆ ನೀಡಲಾದ ವಯೋಮಿತಿ ಸಡಿಲಿಕೆ ಇರುತ್ತದೆ. ಅವುಗಳೆಂದರೆ,
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕರಿಗೆ 3 ವರ್ಷವಯೋಮಿತಿ ಸಡಿಲಿಕೆ ಇರುತ್ತದೆ.
- SC, ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
- ವಿಧವೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ:
Karnataka SDA & FDA ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕರ್ನಾಟಕ ಸರ್ಕಾರದ 7 ನೇ ವೇತನ ಆಯೋಗದ ಅನ್ವಯ ವೇತನ ಶ್ರೇಣಿ ನಿರ್ಧಾರವಾಗುತ್ತದೆ. ಇತ್ತೀಚಿನ ಸರ್ಕಾರಿ ಆದೇಶಗಳ ಅನ್ವಯ, FDA ಹಾಗೂ SDA ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ ಈ ಕೆಳಕಂಡಂತಿದೆ.
- ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ ₹31,400 ರಿಂದ ₹83,700 ವೇತನವನ್ನು ನೀಡಲಾಗುತ್ತದೆ ಹಾಗೂ ಇವುಗಳ ಜೊತೆಗೆ ವಿವಿಧ ಭತ್ಯೆಗಳನ್ನು ನೀಡಲಾಗುತ್ತದೆ.
- ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ ₹27,650 ರಿಂದ ₹71,100 ವೇತನವನ್ನು ನೀಡಲಾಗುತ್ತದೆ ಹಾಗೂ ಇವುಗಳ ಜೊತೆಗೆ ವಿವಿಧ ಭತ್ಯೆಗಳನ್ನು ನೀಡಲಾಗುತ್ತದೆ.
Karnataka SDA & FDA ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:
- SDA ಹುದ್ದೆಗಳಿಗೆ PUC ಅಂಕ ಪಟ್ಟಿ
- FDA ಹುದ್ದೆಗಳಿಗೆ ಪದವಿ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಅದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಅಭ್ಯರ್ಥಿಗಳ ಸಹಿ
- ಹಾಗೂ ಇನ್ನಿತರ ಅಗತ್ಯ ದಾಖಲೆಗಳು
| ಇಲ್ಲಿ ಗಮನಿಸಿ: “ಅಭ್ಯರ್ಥಿಗಳನ್ನು ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡುವಾಗ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣಪತ್ರ ಹಾಗೂ ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ ಹೊಂದಿದ್ದರೆ ನಿಮಗೆ ಮೊದಲ ಆದ್ಯತೆ ನೀಡಲಾಗುತ್ತದೆ.” Karnataka SDA & FDA |
SDA ಹಾಗೂ FDA ಹುದ್ದೆಗೆ ಸಂಬಂಧಿತ ಪರೀಕ್ಷೆಗಳಿಗೆ ನಿಮ್ಮ ತಯಾರಿ ಹೇಗಿರಬೇಕು?
SDA ಹಾಗೂ FDA ಹುದ್ದೆಗಳಿಗೆ ನೀವು ಆಯ್ಕೆಯಾಗಬೇಕಾದರೆ ಮೊದಲು ಸಾಮಾನ್ಯ ಕನ್ನಡ ಅಥವಾ ಇಂಗ್ಲಿಷ್ ಭಾಷಾ ಜ್ಞಾನ ಹಾಗೂ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ನೀವು ಭಾಷಾ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಆಯ್ಕೆಯ ಯಾವುದಾದರೊಂದು ಭಾಷೆಗೆ ಸಂಬಂಧಿಸಿದ ವ್ಯಾಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ಹಾಗೂ ಸಂವಿಧಾನ ವಿಜ್ಞಾನ ಹಗೂ ಭೂಗೋಳಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಜೊತೆಗೆ ಮುಖ್ಯವಾಗಿ ಪರೀಕ್ಷಾ ಸಮಯದಲ್ಲಿ ನಿಮಗೆ ಸರಿಯಾದ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ. ಏಕೆಂದರೆ, SDA ಹಾಗೂ FDA ಪರೀಕ್ಷೆಗಳಲ್ಲಿ 0.25 ರಷ್ಟು ಋಣಾತ್ಮಕ ಅಂಕಗಳಿರುತ್ತದೆ.
FDA ಪರೀಕ್ಷೆಯಲ್ಲಿ ಈ ಮೇಲೆ ನೀಡಲಾದ ಎರಡು ಪರೀಕ್ಷೆಗಳ ಜೊತೆಗೆ ನೀವೇನಾದರೂ SSLC ಅಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡದೇ ಇದ್ದರೆ ಕಡ್ಡಾಯವಾಗಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. Karnataka SDA & FDA
ಅಂತಿಮ ತೀರ್ಮಾನ:
ನೀವೇನಾದರೂ SDA ಹಾಗೂ FDA ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕೆಂದು ಬಯಸುತ್ತಿದ್ದೀರಾ? ಹಾಗಿದ್ದರೆ ಪ್ರಥಮ ದರ್ಜೆ ಸಹಾಯಕ (FDA) ಹಾಗೂ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರ ಅರ್ಹತಾ ಮಾನದಂಡಗಳು ಹಾಗೂ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಜವಾಬ್ದಾರಿಗಳನ್ನು ಹಾಗೂ ಇನ್ನಿತರ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನೀಡಲಾಗಿದೆ ಅವುಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಕನಿಷ್ಠ 18 ವರ್ಷ.
ಕನಿಷ್ಠ 21 ವರ್ಷ.
ಆಯ್ಕೆಯಾದ ಅಭ್ಯರ್ಥಿಗಳು ₹31,400 ರಿಂದ ₹83,700 ವೇತನ ಪಡೆಯಬಹುದಾಗಿದೆ.
ಆಯ್ಕೆಗೊಂಡ ಅಭ್ಯರ್ಥಿಗಳು ಮಾಸಿಕ ₹27,650 ರಿಂದ ₹71,100 ವೇತನವನ್ನು ಪಡೆದುಕೊಳ್ಳಬಹುದಾಗಿದೆ.
ಇತರೆ ಪ್ರಮುಖ ಲಿಂಕುಗಳು:
- Labour Card Benefits: ಲೇಬರ್ ಕಾರ್ಡ್ ಇದ್ದರೆ ಸಾಕು! ಸರ್ಕಾರದಿಂದ ಲಕ್ಷಾಂತರ ಸೌಲಭ್ಯಗಳು – ಸಂಪೂರ್ಣ ಮಾಹಿತಿ ಇಲ್ಲಿದೆ
- SSLC Timetable 2026 : ವೇಳಾಪಟ್ಟಿ ಪ್ರಕಟ :ಭಯ ಬೇಡ… ನಿಮ್ಮ ಗೆಲುವಿನ ಸಮಯ ಶುರು! ಹೀಗೆ ಓದಿದ್ರೆ ಪಾಸ್ ಆಗೋದು ಪಕ್ಕಾ!
- Vivo Scholarship: ರೂ.60,000/- ಕನ್ಯಾಜ್ಞಾನ ವಿದ್ಯಾರ್ಥಿವೇತನ – ತಕ್ಷಣ ಅಪ್ಲೈ ಮಾಡಿ!
- IAS/ KAS Free Couching: ಫ್ರೀ IAS/KAS ತರಬೇತಿ ಆರಂಭ! ಬಡ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ!
- Tata Scholarship : ನಾಳೆ ಕೊನೆಯದಿನ ! ಟಾಟಾ ಸ್ಕಾಲರ್ಶಿಪ್ಗೆ ವಿದ್ಯಾರ್ಥಿಗಳು ಈಗ್ಲೆಅಪ್ಲೈ ಮಾಡಿ!

