ಕರ್ನಾಟಕ ಮಡಿಲು ಕಿಟ್ ಯೋಜನೆ 2026 | Karnataka Madilu Kit Scheme In Kannada

ಕರ್ನಾಟಕ ಮಡಿಲು ಕಿಟ್ ಯೋಜನೆ 2026 | Karnataka Madilu Kit Scheme In Kannada

ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗಾಗಿ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ. ಅದರಲ್ಲಿ ಮಡಿಲು ಕಿಟ್ ಯೋಜನೆಯು ಒಂದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ತಾಯಿ ಮತ್ತು ನವಜಾತ ಶಿಶುವಿನ ಆರೈಕೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

Karnataka Madilu Kit Scheme In Kannada

Karnataka Madilu Kit Scheme In Kannada

ಕರ್ನಾಟಕ ಸರ್ಕಾರವು ಮಡಿಲು ಕಿಟ್ ಯೋಜನೆಯಡಿಯಲ್ಲಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ತಾಯಿ ಮತ್ತು ಮಗುವಿಗೆ ಬಳಕೆಗೆ ಅಗತ್ಯವಿರುವ ಸುಮಾರು 19 ವಸ್ತುಗಳನ್ನೊಳಗೊಂಡ ಕಿಟ್ ಅನ್ನು ಉಚಿತವಾಗಿ ನೀಡುತ್ತಿದೆ. ಈ ಮಡಿಲು ಕಿಟ್ ಸುಮಾರು 1,500 ರೂ. ಮೌಲ್ಯದ್ದಾಗಿದೆ.

ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಇಚ್ಛಿಸುವವರು ನಮ್ಮ ಅಧಿಕೃತ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತಾ ಮಾನದಂಡ, ಪ್ರಮುಖ ದಾಖಲೆಗಳು ಹಾಗೂ ಇನ್ನಷ್ಟುಮಾಹಿತಿಯನ್ನು ಕೆಳಗೆ ನೀಡಿರುತ್ತೇವೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

ಯೋಜನೆಯ ಅವಲೋಕನ:

ಯೋಜನೆಯ ಹೆಸರುಮಡಿಲು ಕಿಟ್ ಯೋಜನೆ
ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಫಲಾನುಭವಿಗಳುಗರ್ಭಿಣಿ ಮಹಿಳೆಯರು
Karnataka Madilu Kit Scheme In Kannada

ಸಂಕ್ಷಿಪ್ತ ಮಾಹಿತಿ:

ಮಡಿಲು ಕಿಟ್ ಯೋಜನೆಯು 15 ಸೆಪ್ಟೆಂಬರ್ 2007 ರಿಂದ ಪ್ರಾರಂಭಗೊಂಡಿದ್ದು, ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

BIG NEWS : ಗರ್ಭಿಣಿ, ಬಾಣಂತಿ ಮಹಿಳೆಯರೇ ಗಮನಿಸಿ : ತಾಯಿ, ಮಗುವಿನ ಆರೋಗ್ಯ ರಕ್ಷಣೆಗೆ  `ಕಿಲ್ಕಾರಿ ಮೊಬೈಲ್' ಸೇವೆ ಪಡೆಯಿರಿ.! » Kannada News | India News | Breaking  news | Live news | Kannada ...
Karnataka Madilu Kit Scheme In Kannada

ಯೋಜನೆಯ ಉದ್ದೇಶ:

  • ಗ್ರಾಮೀಣ ಮತ್ತು ನಗರ ಭಾಗದ ಗರ್ಭಿಣಿ ಮಹಿಳೆಯರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.
  • ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಅರೋಗ್ಯ ಮತ್ತು ಸುರಕ್ಷತೆಯನ್ನು ಒದಗಿಸುವುದು.
  • ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.
  • ಹೆರಿಗೆಯ ನಂತರ ತಾಯಿ ಮತ್ತು ಮಗುವಿಗೆ ಅಗತ್ಯವಾದ ಮೂಲಭೂತ ವಸ್ತುಗಳನ್ನು ಉಚಿತವಾಗಿ ನೀಡುವುದು

ಯೋಜನೆಯ ಪ್ರಯೋಜನಗಳು: Karnataka Madilu Kit Scheme In Kannada

  • ಮಡಿಲು ಕಿಟ್ ಯೋಜನೆಯಡಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸವಾದ ತಾಯಿ ಮತ್ತು ಮಗುವಿಗೆ 1,500 ರೂ. ಮೌಲ್ಯದ ಒಟ್ಟು 19 ಮನೆಬಳಕೆ ವಸ್ತುಗಳನ್ನು ನೀಡಲಾಗುವುದು.
  • ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ ರೂ. 1,000 ಸಹಾಯಧನ ಪಡೆಯಬಹುದು.
  • ತಾಯಿ ಮತ್ತು ಮಗು ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಈ ಯೋಜನೆಯು ಸಹಾಯಕಾರಿ ಆಗುತ್ತದೆ.
  • ಹೆರಿಗೆಗೆ ಸಂಬಂಧಿಸಿದ ವೆಚ್ಚದ ಒತ್ತಡ ಕಡಿಮೆಯಾಗುವುದು.
  • ಗ್ರಾಮೀಣ ಮತ್ತು ನಗರ ಭಾಗದ ಬಡ ಕುಟುಂಬದ ಮಹಿಳೆಯರಿಗೆ ಸಮಾನ ಆರೋಗ್ಯ ಸೌಲಭ್ಯವನ್ನು ಒದಗಿಸಲಾಗುವುದು.

ಅರ್ಹತಾ ಮಾನದಂಡಗಳು: Karnataka Madilu Kit Scheme In Kannada

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ಗರ್ಭಿಣಿ ಮಹಿಳೆಯರಾಗಿರಬೇಕು.
  • ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯಾಗಿರಬೇಕು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸೇರಿದ ಮಹಿಳೆಯರಾಗಿರಬೇಕು.
  • ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸವಾದ ತಾಯಿ
  • ಮಡಿಲು ಕಿಟ್ ಯೋಜನೆಯು ಮೊದಲ ಎರಡು ಜೀವಂತ ಹೆರಿಗೆಗೆ ಮಾತ್ರ ಅನ್ವಹಿಸುತ್ತದೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ವಾಸಸ್ಥಳ ಪುರಾವೆ
  • ತಾಯಿ ಕಾರ್ಡ್
  • ತಾಯಿ ಭಾಗ್ಯದಲ್ಲಿ ಆಶಾ ಕಾರ್ಯಕರ್ತೆಯರು ನೀಡುವ NNC Reg. No

ಗರ್ಭಿಣಿ ಮಹಿಳೆಯರಿಗೆ ಕಿಟ್ ನಲ್ಲಿ ಲಭ್ಯವಾಗುವ ವಸ್ತುಗಳು:

  • ಸೊಳ್ಳೆ ಪರದೆ
  • ತಾಯಿಗೆ ಸ್ನಾನದ ಸೋಪು (2)
  • ಬಟ್ಟೆ ಒಗೆಯುವ ಸೋಪು (4)
  • ಬೆಡ್ ಶೀಟ್
  • ತಾಯಿಗೆ ಕಾಟನ್ ಹೊದಿಕೆ
  • ಕಾಟನ್ ಕಾರ್ಪೆಟ್
  • ಸ್ಯಾನಿಟರಿ ಪ್ಯಾಡ್
  • ಹೊಟ್ಟೆಗೆ ಕಟ್ಟಲು ಬಟ್ಟೆ
  • ತೆಂಗಿನ ಎಣ್ಣೆ
  • ತಾಯಿಗೆ ಟವಲ್
  • ಮಗುವಿಗೆ ಉಣ್ಣೆಯ ಸ್ವೇಟರ್, ಟೋಪಿ, ಸಾಕ್ಸ್
  • ಮಗುವಿಗೆ ಬಟ್ಟೆ (3)
  • ಮಗುವಿನ ಡೈಪರ್ (6)
  • ಮಗುವಿಗೆ ರಬ್ಬರ್ ಶೀಟ್
  • ಮಗುವಿನ ಸೋಪು (2)
  • ಮಗುವಿನ ಹೊದಿಕೆ
  • ಮಗುವಿನ ಬೆಡ್ ಶೀಟ್ (2)
  • ಹಲ್ಲುಜ್ಜುವ ಬ್ರೆಷ್ ಮತ್ತು ಪೇಸ್ಟ್
  • ಈ ಎಲ್ಲ ವಸ್ತುಗಳನ್ನು ಇಡಲು ದೊಡ್ಡ ಬ್ಯಾಗ್

ಅರ್ಜಿ ಸಲ್ಲಿಸುವ ವಿಧಾನ: Karnataka Madilu Kit Scheme In Kannada

  • ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಯಾವುದೇ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
  • ಗರ್ಭಿಣಿಯರು ತಮ್ಮ ಹತ್ತಿರದ ಅಂಗನವಾಡಿ ಅಥವಾ ಸರ್ಕಾರಿ ಆಸ್ಪತ್ರೆಗೆ ಹೋಗಿ ತಾಯಿ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬೇಕು.

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮಡಿಲು ಕಿಟ್ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಹೆರಿಗೆಯ ನಂತರ ಆಸ್ಪತ್ರೆಯ ಸಿಬ್ಬಂದಿಗಳೇ ನೇರವಾಗಿ ಮಡಿಲು ಕಿಟ್ ಅನ್ನು ವಿತರಣೆ ಮಾಡುತ್ತಾರೆ.


ಇತರೆ ಪ್ರಮುಖ ಲಿಂಕುಗಳು:

You can read other articles and tell me by commenting below which of these blogging information you liked.

Leave a Reply

Your email address will not be published. Required fields are marked *