Karnataka: ಕರ್ನಾಟಕಕ್ಕೆ ಶಾಕ್! ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನಕ್ಕೆ ಇಳಿಕೆ! ಕಾರಣ ಏನು ಗೊತ್ತ?

Karnataka

Karnataka: ನಮಸ್ಕಾರ ಸ್ನೇಹಿತರೆ, 2025-26 ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4 ನೇ ಸ್ಥಾನಕ್ಕೆ ತಲುಪಿದೆ. ಹೌದು ಇತ್ತೀಚಿನ ಆರ್ಥಿಕ ಅಂದಾಜಿನ ಪ್ರಕಾರ, ರಾಜ್ಯದ ಒಟ್ಟು ದೇಶೀಯ ಉತ್ಪನ್ನ ಆಧಾರಿತ ಹಿಂದಿನ ಹಲವು ವರ್ಷಗಳಲ್ಲಿ ಕರ್ನಾಟಕವು 3 ನೇ ಸ್ಥಾನದಲ್ಲಿದ್ದು, ಇದೀಗ 4 ನೇ ಸ್ಥಾನಕ್ಕೆ ಬಂದು ತಲುಪಿದೆ.

India’s Richest States 2026: Karnataka at No.4 in Kannada

ಕಳೆದ ಹಣಕಾಸಿನ ವರ್ಷದಲ್ಲಿ ಕರ್ನಾಟಕ (Karnataka) ದ ಜಿಡಿಪಿ ಯು ₹25.57 ಲಕ್ಷ ಕೋಟಿ ಇದ್ದು ಈ ವರ್ಷದ ಹಣಕಾಸು ವರ್ಷದಲ್ಲಿ ಕರ್ನಾಟಕ (Karnataka) ದ GDP ಯು ಸುಮಾರು ₹28.84 ಲಕ್ಷ ಕೋಟಿ ಆಗಿದೆ. ಜಿಡಿಪಿ ಪ್ರಮಾಣವು ಹೆಚ್ಚಾಗಿದ್ದರೂ ಕೂಡ ಉತ್ತರ ಪ್ರದೇಶದಲ್ಲಿನ ಆರ್ಥಿಕ ಬೆಳವಣಿಗೆಯಿಂದಾಗಿ ಕರ್ನಾಟಕವು 4 ನೇ ಸ್ಥಾನಕ್ಕೆ ಬಂದು ತಲುಪಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಭಾರತೀಯ ಆರ್ಥಿಕತೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಕೈ ಪಿಡಿ ಪ್ರಕಾರ, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ, ಹಾಗೂ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿದ್ದ ಪೈಪೋಟಿಯಲ್ಲಿ ಉತ್ತರ ಪ್ರದೇಶವು 3 ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಮೂಲಕ ಕರ್ನಾಟಕ (Karnataka) ವನ್ನು ಹಿಂದಿಕ್ಕಿದೆ.

ಕರ್ನಾಟಕ (Karnataka) ಈ ರೀತಿ ಸ್ಥಾನಪಲ್ಲಟ ಆಗಲು ಕಾರಣವೇನು? ಕರ್ನಾಟಕ ಎದುರಿಸಿದ ಸವಾಲುಗಳು ಹಾಗೂ 4 ಸ್ಥಾನಕ್ಕೆ ಕುಸಿಯಲು ಕಾರಣಗಳನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿ ನೀಡಿ.

Karnataka

ಪ್ರಮುಖ ಹೈಲೈಟ್ಸ್:

1. ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ.
2. ದೇಶದ ಆರ್ಥಿಕತೆಯಲ್ಲಿ ಕರ್ನಾಟಕಕ್ಕೆ 4 ನೇ ಸ್ಥಾನ.
3. ಭಾರತದ ಒಟ್ಟು ಜಿಡಿಪಿ ಅಲ್ಲಿ ಕರ್ನಾಟಕವು ಸುಮಾರು 8.2% ಇಂದ 8.5% ಕೊಡುಗೆಯನ್ನು ನೀಡಿದೆ.
4. 2025-26 ರಲ್ಲಿ ಕರ್ನಾಟಕದ ಒಟ್ಟು JDP ಸುಮಾರು ₹28.84 ಲಕ್ಷ ಕೋಟಿ.

2025-26 ನೇ ಹಣಕಾಸಿನ ವರ್ಷದಲ್ಲಿ ಜಿಡಿಪಿ ಶ್ರೇಯಾಂಕದ ವಿವರ:

ಭಾರತೀಯ ರಿಸರ್ವ್ ಬ್ಯಾಂಕ್ ಭಾರತೀಯ ಆರ್ಥಿಕತೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ ದತ್ತಾಂಶಗಳ ಪ್ರಕಾರ, ವಿವಿಧ ರಾಜ್ಯಗಳು ಈ ಕೆಳಕಂಡಂತೆ ಸ್ಥಾನವನ್ನು ಪಡೆದುಕೊಂಡಿದೆ.

2025-26 ನೇ ಹಣಕಾಸಿನ ವರ್ಷದಲ್ಲಿ ಒಟ್ಟು GDP ಆಧಾರಿತ ಭಾರತದ ಶ್ರೀಮಂತ ರಾಜ್ಯದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟರಾದ ಒಟ್ಟು GDP ಸುಮಾರು ₹45.31 ಲಕ್ಷ ಕೋಟಿ ಆಗಿದೆ. ಎರಡನೇ ಸ್ಥಾನದಲ್ಲಿ ತಮಿಳುನಾಡು ಇದ್ದು ಒಟ್ಟು GDP ಸುಮಾರು ₹31.19 ಲಕ್ಷ ಕೋಟಿ ಆಗಿದೆ.

ಉತ್ತರ ಪ್ರದೇಶವು ಉತ್ತಮ ಆರ್ಥಿಕ ಬೆಳವಣಿಗೆಯಿಂದಾಗಿ ಕರ್ನಾಟಕವನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಉತ್ತರ ಪ್ರದೇಶದ ಒಟ್ಟು GDP ಸುಮಾರು ₹29.78 ಲಕ್ಷ ಕೋಟಿ ಆಗಿದೆ. ಹಾಗೂ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ (Karnataka) ವು ಇದೀಗ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಕರ್ನಾಟಕದ ಒಟ್ಟು GDP ಸುಮಾರು ₹28.84 ಲಕ್ಷ ಕೋಟಿಯಷ್ಟಿದೆ.

ಪಶ್ಚಿಮ ಬಂಗಾಳವು ಸುಮಾರು ₹18.15 ಲಕ್ಷ ಕೋಟಿ GDP ಹೊಂದಿದ್ದು, ಐದನೇ ಸ್ಥಾನದಲ್ಲಿದೆ. ಹಾಗೂ ರಾಜಸ್ಥಾನ ಸುಮಾರು ₹17.04 ಲಕ್ಷ ಕೋಟಿ GDP ಹೊಂದಿದ್ದು, ಆರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ತೆಲಂಗಾಣವು ₹16.41 ಲಕ್ಷ ಕೋಟಿ GDP ಹೊಂದಿದ್ದು, ಏಳನೇ ಸ್ಥಾನದಲ್ಲಿದೆ.

₹15.93 ಲಕ್ಷ ಕೋಟಿ GDP ಹೊಂದಿರುವ ಆಂಧ್ರಪ್ರದೇಶವು ಎಂಟನೇ ಸ್ಥಾನದಲ್ಲಿದ್ದು, ₹15.03 ಲಕ್ಷ ಕೋಟಿಯಷ್ಟು GDP ಹೊಂದಿರುವ ಮಧ್ಯಪದೇಶವು ಎಂಟನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಹತ್ತನೇ ಸ್ಥಾನವನ್ನು ದೆಹಲಿ ಇದ್ದು ಅಲ್ಲಿನ ಒಟ್ಟು GDP ₹12.15 ಲಕ್ಷ ಕೋಟಿ ಇದೆ.

GDP ಆಧಾರಿತ ಟಾಪ್ ಟೆನ್ ಶ್ರೀಮಂತ ರಾಜ್ಯಗಳು:

ಶ್ರೀಮಂತ ರಾಜ್ಯಗಳು ಒಟ್ಟು ಜಿಡಿಪಿ ಮೌಲ್ಯ
ಮಹಾರಾಷ್ಟ್ರ ₹45.31 ಲಕ್ಷ ಕೋಟಿ
ತಮಿಳುನಾಡು₹31.19 ಲಕ್ಷ ಕೋಟಿ
ಉತ್ತರ ಪ್ರದೇಶ₹29.78 ಲಕ್ಷ ಕೋಟಿ
ಕರ್ನಾಟಕ₹28.84 ಲಕ್ಷ ಕೋಟಿ
ಪಶ್ಚಿಮ ಬಂಗಾಳ₹18.15 ಲಕ್ಷ ಕೋಟಿ
ರಾಜಸ್ಥಾನ ₹17.04 ಲಕ್ಷ ಕೋಟಿ
ತೆಲಂಗಾಣ₹16.41 ಲಕ್ಷ ಕೋಟಿ
ಆಂಧ್ರಪ್ರದೇಶ₹15.93 ಲಕ್ಷ ಕೋಟಿ
ಮಧ್ಯಪದೇಶ₹15.03 ಲಕ್ಷ ಕೋಟಿ
ದೆಹಲಿ₹12.15 ಲಕ್ಷ ಕೋಟಿ

ರಾಷ್ಟ್ರಿಯ GDP ಅಲ್ಲಿ ಕರ್ನಾಟಕದ ಪಾಲು:

ಇತ್ತೀಚಿನ ಹಣಕಾಸಿನ ಅಂಕಿ ಅಂಶಗಳ ಪ್ರಕಾರ, ಭಾರತದ ಒಟ್ಟು GDP ಅಲ್ಲಿ ಕರ್ನಾಟಕ (Karnataka) ದ ಪಾಲು 8.2% ಇಂದ 8.5% ಇದೆ. ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಆರ್ಥಿಕತೆಯಲ್ಲಿ ಮುಂದುವರೆಯುತ್ತಿರುವ ದೇಶವಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಕರ್ನಾಟಕವು ಭಾರತದ GDP ಗೆ ಬಹುದೊಡ್ಡ ಕೊಡುಗೆ ನೀಡಿದೆ.

ತಲಾ ಆದಾಯದಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನ:

ಭಾರತದ GDPಯಲ್ಲಿ ಕರ್ನಾಟಕ 4 ನೇ ಸ್ಥಾನಕ್ಕೆ ಕುಸಿದಿದ್ದರೂ ಕೂಡ ತಲಾ ಆದಾಯದಲ್ಲಿ ಮೊದಲ ಸ್ಥಾನವನ್ನು ಪಡೆದು ಮುಂಚೂಣಿಯಲ್ಲಿದೆ. RBI ವರದಿ ಪ್ರಕಾರ, ಕರ್ನಾಟಕವು ತಲಾ ಆದಾಯದಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗಿಂತ ಮೂರು ಪಟ್ಟು ಹೆಚ್ಚಿದ್ದು, ಕರ್ನಾಟಕ (Karnataka) ರಾಜ್ಯದ ಪ್ರತಿಯೊಬ್ಬ ಪ್ರಜೆಯ ಸರಾಸರಿ ವಾರ್ಷಿಕ ಆದಾಯವು ₹3.8 ಲಕ್ಷ ದಾಟಿದೆ. ಅಂದರೆ ಕರ್ನಾಟಕವು ಸಮೃದ್ಧಿ ಜನ ಜೀವನವನ್ನು ಹಾಗೂ ಆರ್ಥಿಕತೆಯಲ್ಲಿ ಹೆಚ್ಚಿನ ಗುಣಮಟ್ಟತೆಯನ್ನು ಹೊಂದಿದೆ.

ಕರ್ನಾಟಕವು 2022-23 ನೇ ಆರ್ಥಿಕ ವರ್ಷದಲ್ಲಿ ₹3.01ಲಕ್ಷ ತಲಾ ಆದಾಯವನ್ನು ಹೊಂದಿದ್ದು, 2023-24 ನೇ ಆರ್ಥಿಕ ವರ್ಷದಲ್ಲಿ ₹3.39 ಲಕ್ಷ ತಲಾ ಆದಾಯವನ್ನು ಹೊಂದಿದೆ. ಹಾಗೂ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಒಟ್ಟು ತಲಾ ಆದಾಯವು ₹3.80 ಲಕ್ಷ ಇದ್ದು ಕರ್ನಾಟಕವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಕರ್ನಾಟಕವು ದೇಶದ GDP ಅಲ್ಲಿ 4 ನೇ ಸ್ಥಾನಕ್ಕೆ ಕುಸಿಯಲು ಕಾರಣವೇನು?

1. ಸೇವಾ ವಲಯದ ಮೇಲೆ ಅತಿಯಾದ ಅವಲಂಬನೆ:

ಕರ್ನಾಟಕದ GDP ಯು ಸುಮಾರು 66% ಇಂದ 68% ವರೆಗೆ ಸೇವಾ ವಲಯದಮೇಲೆ ಅವಲಂಬಿತವರಿರುವುದರಿಂದ ಆರ್ಥಿಕತೆಯಲ್ಲಿ 4 ನೇ ಸ್ಥಾನಕ್ಕೆ ಕುಸಿದಿದೆ. ಕೋವಿಡ್ ನಂತರ ಐಟಿ ಕ್ಷೇತ್ರದಲ್ಲಿ ಹಾಗೂ ತಂತ್ರಜ್ಞಾನ ವಲಯದಲ್ಲಾದ ಮಂದಗತಿಯು ಕರ್ನಾಟಕ ರಾಜ್ಯದ ಬೆಳವಣಿಗೆಗೆ ನೇರ ಪರಿಣಾಮ ಬೀರಿದೆ.

2. ಉತ್ತರ ಪದೇಶದ ಉತ್ತಮ ಆರ್ಥಿಕ ಬೆಳವಣಿಗೆ:

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕರ್ನಾಟಕದ GDP ಹೆಚ್ಚಿದ್ದರೂ ಕೂಡ ಕರ್ನಾಟಕ 4 ನೇ ಸ್ಥಾನಕ್ಕೆ ಬರಲು ಮೂಲ ಕಾರಣ ಉತ್ತರ ಪ್ರದೇಶದಲ್ಲಿನ ಉತ್ತಮ ಆರ್ಥಿಕ ಬೆಳವಣಿಗೆಯಾಗಿದೆ. ಅತಿ ಹೆಚ್ಚು ಜನಸಂಖ್ಯೆ ಹಾಗೂ ವಿಸ್ತಾರವಾದ ಭೂ ಪ್ರದೇಶವನ್ನು ಹೊಂದಿರುವ ಉತ್ತರ ಪ್ರದೇಶವು ಬೃಹತ್ ಮೂಲ ಸೌಕರ್ಯ ಹಾಗೂ ಕೈಗಾರಿಕೆಗಳ ಮೇಲೆ ಭಾರಿ ಹೂಡಿಕೆ ಮಾಡುವ ಮೂಲಕ ಕರ್ನಾಟಕವನ್ನು ಹಿಂದಿಕ್ಕಿ 3 ನೇ ಸ್ಥಾನಕ್ಕೆ ಬಂದು ತಲುಪಿದೆ.

3. ಕೃಷಿ ವಲಯಗಳಲ್ಲಿನ ಏರಿಳಿತಗಳು:

ಕರ್ನಾಟಕದ ಎಷ್ಟು ಜಿಲ್ಲೆಗಳು ಮಳೆಯನ್ನೇ ಆಧರಿಸಿ ಕೃಷಿ ಕೆಲಸವನ್ನು ಪ್ರಾರಂಭಿಸುತ್ತದೆ. ಹಾಗಾಗಿ ಹಿಂದಿನ ವರ್ಷದಲ್ಲಾದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಕಾರಣದಿಂದಾಗಿ ಕೃಷಿ ಉತ್ಪಾದಕತೆ ಕಡಿಮೆಯಾಗಿ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿದೆ.

4. ಉತ್ಪಾದನಾ ವಲಯಗಳಲ್ಲಿ ಸ್ಪರ್ಧೆ:

ಭಾರತದ ಆರ್ಥಿಕತೆಯಲ್ಲಿ ಕರ್ನಾಟಕಕ್ಕಿಂತ ಉತ್ತರಪ್ರದೇಶ, ತಮಿಳುನಾಡು ಹಾಗೂ ಗುಜರಾತ್ ಗಳು ಉತ್ಪಾದನಾ ವಲಯದಲ್ಲಿ ಹೆಚ್ಚು ಆಕರ್ಷಿಸುತ್ತಿದೆ. ಕರ್ನಾಟಕವು ಸೇವಾ ವಲಯಗಳ ಮೇಲೆ ಅವಲಂಬಿತವಾಗಿದ್ದರೆ ಈ ರಾಜ್ಯಗಳು ಅಟೋಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮಾಡುವುದರಲ್ಲಿ ಮುಂಚುಣಿಯಲ್ಲಿದೆ.

5. ಪ್ರಾದೇಶಿಕ ಅಸಮಾನತೆ:

ಕರ್ನಾಟಕದ ಒಟ್ಟು ಆದಾಯದಲ್ಲಿ ಬೆಂಗಳೂರು ನಗರದಲ್ಲೇ ಬಹುಪಾಲು ಆದಾಯ ಬರುತ್ತದೆ. ಕೈಗಾರಿಕಾ ಬೆಳವಣಿಗೆಯಲ್ಲಿ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಹಾಗೂ ಇನ್ನಿತರ ಜಿಲ್ಲೆಗಳು ಬೆಂಗಳೂರಿಗಿಂತ ಅತಿ ಕಡಿಮೆ ಸ್ಥಾನದಲ್ಲಿದೆ. ಈ ಪ್ರಾದೇಶಿಕ ಅಸಮಾನತೆಯು ದೇಶದ ಆರ್ಥಿಕತೆಯಲ್ಲಿ ಕರ್ನಾಟಕವು 3 ನೇ ಸ್ಥಾನವನ್ನು ಬಿಟ್ಟುಕೊಡುವಂತಾಯಿತು.

ಕರ್ನಾಟಕವು ಉತ್ತಮ ಆರ್ಥಿಕತೆಯನ್ನು ಹೊಂದಲು ಅನುಸರಿಸಬೇಕಾದ ಸುಧಾರಣಾ ಕ್ರಮಗಳು:

1. ಉತ್ಪಾದನಾ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ:

ಕರ್ನಾಟಕವು ಕೇವಲ ಸೇವಾ ವಲಯಗಳ ಮೇಲೆ ಹೆಚ್ಚಿನ ಗಮನ ಹರಿಸದೆ ಅವುಗಳ ಜೊತೆಗೆ ಉತ್ಪಾದನಾ ವಲಯಗಳ ಮೇಲೂ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ. ಎಲೆಕ್ಟ್ರಾನಿಕ್ ವಾಹನಗಳ ತಯಾರಿ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡೆಕ್ಟರ್ ಹೂಡಿಕೆದಾರರಿಗೆ ನೆರೆಯ ರಾಜ್ಯಗಳಿಗಿಂತ ಹೆಚ್ಚು ಸಬ್ಸಿಡಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವುದು. ಇದು ಕರ್ನಾಟಕದಲ್ಲಿ ಉದ್ಯೋಗಾವಕಾಶವು ಹೆಚ್ಚುತ್ತಲ್ಲದೆ GDP ಗಾತ್ರದಲ್ಲೂ ಬದಲಾವಣೆ ಕಾಣಬಹುದಾಗಿದೆ.

2. ಸರಳ ವ್ಯಾಪಾರ ನೀತಿ ಅಳವಡನೆ:

ಕರ್ನಾಟಕವು ಹೊಸ ಉದ್ಯಮವನ್ನು ಪ್ರಾರಂಭಿಸಲು ಇರುವ ಪರವಾನಗಿಯ ಬದಲಾವಣೆ ಮಾಡಿ ಸುಲಭವಾದ ಪರವಾನಗಿಯನ್ನು ಉತ್ತೇಜಿಸುವುದು. ವ್ಯಾಪಾರ ಸ್ಥಳಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿ ಭ್ರಷ್ಟಾಚಾರವನ್ನು ತಡೆಯುವ ಮೂಲಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವುದು.

3. ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆ ಮಾಡಲು ಒತ್ತು ನೀಡುವುದು:

ಕರ್ನಾಟಕವು ಕೃಷಿ ವಲಯಗಳಲ್ಲಿ ಕೃಷಿ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವ ಮೂಲಕ ರೈತರಿಗೆ ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ನೇರ ಮಾರುಕಟ್ಟೆ ಹಾಗೂ ಮೂಲವರ್ಧನೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯಲ್ಲಿ ಮುಂಚುಣಿಯಲ್ಲಿ ಬರುವಂತೆ ಮಾಡುವುದು.

ಕೊನೆಯದಾಗಿ:

ಕರ್ನಾಟಕವು ದೇಶದ ಆರ್ಥಿಕತೆಯಲ್ಲಿ 4 ನೇ ಸ್ಥಾನಕ್ಕೆ ಕುಸಿದಿದ್ದರೂ ಕೂಡ ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿ ಇರುವುದರಿಂದ ಕರ್ನಾಟಕ ರಾಜ್ಯದ ಜನರ ಆರ್ಥಿಕವಾಗಿ ಸಬಲರಾಗಿದ್ದರೆ ಎನ್ನುವುದನ್ನು ಸಾಬೀತುಪಡಿಸಿದೆ. ಕರ್ನಾಟಕವು ಕೇವಲ ಸೇವಾ ವಲಯಗಳ ಮೇಲೆ ಹೆಚ್ಚು ಅವಲಂಬಿತವಾಗಿರದೆ ವಿವಿಧ ವಲಯಗಳ ಬೆಳವಣಿಗೆಗೂ ಒಟ್ಟು ನೀಡಿದರೆ ನಂತರದ ಹಣಕಾಸು ವರ್ಷಗಳಲ್ಲಿ ದೇಶದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನಕ್ಕೆ ಬರಬಹುದಾಗಿದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ಉತ್ತರಪ್ರದೇಶದ ಉತ್ತಮ ಆರ್ಥಿಕ ಬೆಳವಣಿಗೆ ಹಾಗೂ ಕರ್ನಾಟಕ ಕೇವಲ ಸೇವಾ ವಲಯಗಳ ಮೇಲೆ ಹೆಚ್ಚಿನ ಅವಲಂಬನೆ.

ಕರ್ನಾಟಕವು ಒಟ್ಟು ₹28.84 ಲಕ್ಷ ಕೋಟಿ GDP ಹೊಂದಿದೆ.

ದೇಶದ ಆರ್ಥಿಕತೆಯಲ್ಲಿ ಮೊದಲ ಸ್ಥಾನ ಪಡೆದ ಶ್ರೀಮಂತ ರಾಜ್ಯ ಮಹಾರಾಷ್ಟ್ರ ಆಗಿದೆ.

ದೇಶದ GDP ಯಲ್ಲಿ ಕರ್ನಾಟಕವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆರಿದ ರಾಜ್ಯ ಉತ್ತರಪ್ರದೇಶ.


ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *