Grihalakshmi Scheme: ಗೃಹಲಕ್ಷ್ಮಿ 27ನೇ ಕಂತು ಬಿಡುಗಡೆ! ನಿಮ್ಮ ಖಾತೆಗೆ ₹2,000 ಬಂದಿದೆಯಾ? ಈಗಲೇ ಚೆಕ್ ಮಾಡಿ

Grihalakshmi Scheme

ನಮಸ್ಕಾರ ಸ್ನೇಹಿತರೆ, ರಾಜ್ಯದ ಗೃಹಲಕ್ಷ್ಮಿಯರಿಗೆ ಸಂತಸದ ಸುದ್ದಿ! ರಂಜಾನ್ ಹಾಗೂ ಯುಗಾದಿ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿಯರ ಖಾತೆಗೆ 27 ನೇ ಕಂತಿನ ಹಣವನ್ನು ಜಮಾ ಮಾಡುವ ಮೂಲಕ ಹಬ್ಬಕ್ಕೆ ಉಡುಗರೆಯನ್ನು ನೀಡಿದೆ.

Grihalakshmi Scheme in Kannada

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳಿಗೆ ₹2,000 ದಂತೆ ಈಗಾಗಲೇ 26 ಕಂತುಗಳ ಹಣ ಯಶಸ್ವಿಯಾಗಿ ಬಿಡುಗಡೆ ಆಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮನೆಯ ಯಜಮಾನಿಯರಿಗೆ ಹಣಕಾಸಿನ ನೆರವನ್ನು ನೀಡಿ ಅವರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ.

ಈಗಾಗಲೇ 27 ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ 15 ಕ್ಕೂ ಹೆಚ್ಚು ಜಿಲ್ಲೆಗಳ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ. ನಿಮ್ಮ ಖಾತೆಗೂ ಹಣ ಜಮಾ ಆಗಿದೆಯಾ? ಅಥವಾ ಇನ್ನೂ ಬಾಕಿ ಇದೆಯಾ? ಎನ್ನುವುದನ್ನು ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದಾಗಿದೆ. ಹೇಗೆ ಎನ್ನವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

Grihalakshmi Scheme
Grihalakshmi Scheme

ಯಾವ ಯಾವ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಹಣ ಜಮಾ ಆಗಿದೆ? ಉಳಿದ ಜಿಲ್ಲೆಗಳಿಗೆ ಯಾವಾಗ ಜಮಾ ಆಗಲಿದೆ? ಎನ್ನುವದನ್ನು ಪ್ರಸ್ತುತ ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

ಯೋಜನೆಯ ಅವಲೋಕನ:

ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಯೋಜನೆಯ ಹೆಸರು ಗೃಹಲಕ್ಷ್ಮಿ ಯೋಜನೆ (Grihalakshmi Scheme)
ಅರ್ಹ ಫಲಾನುಭವಿಗಳು ಮನೆಯ ಯಜಮಾನಿಯರು
ಯೋಜನೆಯಡಿಯಲ್ಲಿ ಸಿಗುವ ಪ್ರಯೋಜನ ಪ್ರತಿ ತಿಂಗಳಿಗೆ ₹2,000 ಆರ್ಥಿಕ ನೆರವು
ಈವರೆಗೂ ಬಿಡುಗಡೆಯಾದ ಒಟ್ಟು ಹಣ ₹52,000
ಪ್ರಸ್ತುತ ಬಿಡುಗಡೆ ಆಗಿರುವ ಕಂತು 27 ನೇ ಕಂತು

ಏನಿದು ಗೃಹಲಕ್ಷ್ಮಿ ಯೋಜನೆ:

ಗೃಹಲಕ್ಷ್ಮಿ ಯೋಜನೆ (Grihalakshmi Scheme) ಯು ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿ ಎನಿಸಿಕೊಂಡವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ನೀಡುವ ಮೂಲಕ ಅವರಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಅವಕಾಶ ಕಲ್ಪಿಸುವುದು ಹಾಗೂ ಗೃಹಿಣಿಯರ ಶ್ರಮಕ್ಕೆ ಗೌರವವನ್ನು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯೋಜನೆಯ ಉದ್ದೇಶ:

1. ಮಹಿಳಾ ಸಬಲೀಕರಣ:

ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳಿಗೆ ₹2,000 ಹಣವನ್ನು ಜಮಾ ಮಾಡುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಮನೆಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಅವಕಾಶ ಕಲ್ಪಿಸುವುದು ಹಾಗೂ ಕುಟುಂಬದಲ್ಲಿ ಪ್ರಮುಖ ನಿರ್ಧಾರವನ್ನು ತಾನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

2. ಸ್ವಾವಲಂಬಿ ಜೀವನ ನಡೆಸಲು ಅವಕಾಶ:

ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವನ್ನು ನೀಡುವ ಮೂಲಕ ಮಹಿಳೆಯರು ತಮ್ಮ ವೈಯಕ್ತಿಕ ಅಥವಾ ಸಣ್ಣ ಪುಟ್ಟ ಖರ್ಚುಗಳಿಗೆ ಕುಟುಂಬದ ಇತರ ಸದಸ್ಯರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸುವುದು.

3. ಬಡತನ ನಿರ್ಮೂಲನೆಗೆ ಅವಕಾಶ:

ಆರ್ಥಿಕವಾಗಿ ಹಿಂದುಳಿದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡುವ ಮೂಲಕ ಕುಟುಂಬದ ಮೇಲಿರುವ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವುದು.

4. ಸ್ವಂತ ಉದ್ಯೋಗ ನಡೆಸಲು ಅವಕಾಶ:

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಸಹಕಾರ ಸಂಘಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿ ಸ್ವಂತ ಉದ್ಯೋಗವನ್ನು ನಡೆಸಿ ಸ್ಥಿರ ಆದಾಯವನ್ನು ಗಳಿಸಲು ಅವಕಾಶ ಕಲ್ಪಿಸಿದೆ.

ಯಾವೆಲ್ಲ ಜಿಲ್ಲೆಗಳಿಗೆ 27 ನೇ ಕಂತಿನ ಹಣ ಜಮಾ ಆಗಿದೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿರುವಂತೆ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಡಗು, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ಗದಗ, ಕಲಬುರಗಿ, ಹಾಸನ ಸೇರಿದಂತೆ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ ಅರ್ಹ ಫಲಾನುಭವಿಗಳ ಖಾತೆಗೆ ಈಗಾಗಲೇ 27 ನೇ ಕಂತಿನ ಹಣ ಜಮಾ ಆಗಿದೆ.

ಉಳಿದ ಫಲಾನುಭವಿಗಳಿಗೆ ಯಾವಾಗ ಹಣ ಜಮಾ ಆಗಲಿದೆ?

ಈಗಾಗಲೇ ಸಾಕಷ್ಟು ಫಲಾನುಭವಿಗಳ ಬ್ಯಾಂಕ್ ಖಾತೆಗೆ 27 ನೇ ಕಂತಿನ ಗೃಹಲಕ್ಷ್ಮಿ (Grihalakshmi Scheme) ಹಣ ಜಮಾ ಆಗಿದ್ದು, ಇನ್ನು ಬಾಕಿ ಇರುವ ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನು ಎರಡು ಮೂರು ದಿನಗಳಲ್ಲಿ ಹಣ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಿಳಿಸಿದೆ.

ಇನ್ನು ಎಷ್ಟು ಕಂತುಗಳ ಹಣ ಜಮಾ ಆಗಬೇಕಿದೆ?

ಗೃಹಲಕ್ಷ್ಮಿ ಯೋಜನೆ (Grihalakshmi Scheme) ಯನ್ನು ಜಾರಿಗೊಳಿಸಿ ಒಟ್ಟು 31 ತಿಂಗಳುಗಳು ಆಗುತ್ತಾ ಬಂದಿದೆ. ಆದರೆ ತಾಂತ್ರಿಕ ಸಮಸ್ಯೆ ಇಂದಾಗಿ ಕಳೆದ 3 ತಿಂಗಳ ಹಣ ಜಮಾ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರಲಿಲ್ಲ. ಸದ್ಯದಲ್ಲಿ ಜನವರಿ ತಿಂಗಳ ಅಂದರೆ 27 ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಇನ್ನು ಮೂರು ಕಂತುಗಳ ಹಣ ಜಮಾ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಉಳಿದ ಮೂರು ಕಂತುಗಳ ಹಣವನ್ನು ಹಂತ ಹಂತವಾಗಿ ಜಮಾ ಮಾಡುವ ಸಾಧ್ಯತೆಗಳಿವೆ.

ತಾಂತ್ರಿಕ ಸಮಸ್ಯೆಯಿಂದಾಗಿ ಬಿಡುಗಡೆ ಆಗದ ಹಣವನ್ನು ಈಗ ಬಿಡುಗಡೆ ಮಾಡುತ್ತಿರುವುದರಿಂದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ನಡುವೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ 3 ಕಂತಿನ ಹಣವನ್ನು ಅಂದರೆ ಒಟ್ಟು ₹6,000 ಹಣ ಜಮಾ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ.

ಹಣ ಜಮಾ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿಯ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಬ್ಯಾಂಕ್ ಗಳಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಕುಳಿತು ಕೇವಲ ಎರಡು ನಿಮಿಷಗಳಲ್ಲಿ ಹಣ ಜಮಾ ಆಗಿರುವ ಸ್ಟೇಟಸ್ ಚೆಕ್ ಮಾಡಬಹುದಾಗಿದೆ. ಹೇಗೆಂದರೆ,

  • ಅರ್ಹ ಫಲಾನುಭವಿಗಳು DTP ಕರ್ನಾಟಕ ಆಪ್ ಮೂಲಕ ಸುಲಭವಾಗಿ ಚೆಕ್ ಮಾಡಬಹುದಾಗಿದೆ.
  • ಅಭ್ಯರ್ಥಿಗಳು ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಡಿಟಿಪಿ ಆಪ್ ಅನ್ನು ತೆರೆಯಿರಿ.
  • ನಂತರ, ಆಧಾರ್ ಕಾರ್ಡ್ ನಂಬರ್ ನಮೂದಿಸಿ ಮೊಬೈಲ್ ನಲ್ಲಿ ಬರುವ ಒಟಿಪಿ ಅನ್ನು ನಮೂದಿಸಿ ಲಾಗಿನ್ ಆಗಿ.
  • ಲಾಗಿನ್ ಆದ ನಂತರ ಪೇಮೆಂಟ್ ಸ್ಟೇಟಸ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ಗೃಹಲಕ್ಷ್ಮಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.
  • ಆಗ ನೀವು ಯಾವಾಗ ಗೃಹಲಕ್ಷ್ಮಿ ಹಣ ಜಮಾ ಆಗಿದೆ. ಯಾವ ದಿನಾಂಕದಂದು ಹಣ ಜಮಾ ಆಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಹಣ ಜಮಾ ಆಗದಿದ್ದರೆ ಏನು ಮಾಡಬೇಕು?

  • e-KYC ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿ:

ಹಣ ಜಮಾ ಆಗದಿರುವ ಅಭ್ಯರ್ಥಿಗಳು ಮೊದಲು ತಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೆ e-KYC ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದು ಸ್ಥಗಿತಗೊಳ್ಳುತ್ತದೆ.

  • NPCI ಮ್ಯಾಪಿಂಗ್ ಆಗಿದೆಯೇ ಪರಿಶೀಲಿಸಿ:

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಜೊತೆಗೆ NPCI ನಲ್ಲಿ ಸಕ್ರಿಯವಾಗಿರಬೇಕು. ಇಲ್ಲದಿದ್ದರೆ ಹಣ ಜಮಾ ಆಗುವುದು ವಿಫಲವಾಗುತ್ತದೆ.

  • ಇಲಾಖೆಗೆ ಭೇಟಿ ನೀಡಿ:

ಈ ಮೇಲಿನ ಎಲ್ಲಾ ಪ್ರಕ್ರಿಯೆಗಳು ಸರಿ ಇದ್ದು, ಗೃಹಲಕ್ಷ್ಮಿ ಹಣ ಜಮಾ ಆಗದೆ ಇದ್ದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸುವುದು ಸೂಕ್ತ.

ಅಂತಿಮ ತೀರ್ಮಾನ:

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ (Grihalakshmi Scheme) ಅಡಿಯಲ್ಲಿ ಕೆಲವು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಈಗಾಗಲೇ 27 ನೇ ಕಂತಿನ ಹಣವನ್ನು ಜಮಾ ಮಾಡಲಾಗಿದ್ದು, ಬಾಕಿ ಜಿಲ್ಲೆಗಳ ಅರ್ಹ ಫಲಾನುಭವಿಗಳಿಗೆ ಸದ್ಯದಲ್ಲೇ ಹಣ ಜಮಾ ಆಗುವ ಸಾಧ್ಯತೆಗಳಿವೆ.

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗದಿದ್ದರೆ, ಈ ಮೇಲೆ ನೀಡಿರುವ ಹಂತಗಳನ್ನು ಅನುಸರಿಸಿ ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡು ಹಣ ಜಮಾ ಆಗುವಂತೆ ಮಾಡಿಕೊಳ್ಳಿ. ಇದು ಕೇವಲ ಆರ್ಥಿಕ ನೆರವಲ್ಲದೆ. ಗೃಹಿಣಿಯರ ಸ್ವಾವಲಂಬನೆಗೆ ಹಾಗೂ ಅವರ ಬದುಕಿಗೆ ದೊಡ್ಡ ಆಸರೆಯಾಗಿದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ (Grihalakshmi Scheme) ಯಡಿಯಲ್ಲಿ ಪ್ರತಿ ಕಂತಿನಲ್ಲಿ ₹2,000 ಹಣ ಜಮಾ ಆಗುತ್ತದೆ.

ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಡಗು, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ಗದಗ, ಕಲಬುರಗಿ, ಹಾಸನ ಸೇರಿದಂತೆ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ (Grihalakshmi Scheme) 27 ನೇ ಕಂತಿನ ಹಣ ಈಗಾಗಲೇ ಜಮಾ ಆಗಿದೆ.

ಇನ್ನು ಎರಡು ಮೂರು ದಿನಗಳಲ್ಲಿ ಬಾಕಿ ಇರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿಯ 27 ನೇ ಕಂತಿನ ಹಣ ಜಮಾ ಆಗುವ ಸಾಧ್ಯತೆಗಳಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿದೆ.


ಪ್ರಮುಖ ಲಿಂಕುಗಳು:

4 thoughts on “Grihalakshmi Scheme: ಗೃಹಲಕ್ಷ್ಮಿ 27ನೇ ಕಂತು ಬಿಡುಗಡೆ! ನಿಮ್ಮ ಖಾತೆಗೆ ₹2,000 ಬಂದಿದೆಯಾ? ಈಗಲೇ ಚೆಕ್ ಮಾಡಿ

  1. Sabiha banu says:

    ಬಾಕಿ ಇರುವ ಜಿಲ್ಲೆಗಳಿಗೆ 27 ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ

Leave a Reply

Your email address will not be published. Required fields are marked *