ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ! ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯೋಗವಕಾಶವನ್ನು ಸೃಷ್ಟಿಸಲು ಮತ್ತು ಹೆಚ್ಚಿನ ಆದಾಯವನ್ನು ಗಳಿಸುವಂತೆ ಮಾಡಲು ಮಾನವ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಕುರಿತು ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.
Free ToolKit for Labour In Kannada
ಅರ್ಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಯೋಜನೆಯ ಪ್ರಯೋಜನ, ಅರ್ಹತಾ ಮಾನದಂಡ ಇನ್ನಿತರ ಮಾಹಿತಿಗಳನ್ನು ಹಂತ ಹಂತವಾಗಿ ನೀಡಲಾಗಿದೆ ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ.
ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಮಾನವ ಕಲ್ಯಾಣ ಯೋಜನೆ |
| ಫಲಾನುಭವಿಗಳು | ಆರ್ಥಿಕವಾಗಿ ಹಿಂದುಳಿದ ವರ್ಗದವರು |
| ಅರ್ಜಿಸಲ್ಲಿಸುವ ವಿಧಾನ | ಆನ್ ಲೈನ್ |
ಯೋಜನೆಯ ಕುರಿತು:
ಮಾನವ ಕಲ್ಯಾಣ ಯೋಜನೆಯನ್ನು ಸೆಪ್ಟೆಂಬರ್ 11, 1995 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ,ಕಡಿಮೆ ಆದಾಯವನ್ನು ಹೊಂದಿರುವ ಕುಶಲಕರ್ಮಿಗಳಿಗೆ ಹಾಗೂ ಕಾರ್ಮಿಕರಿಗೆ ಸ್ವ-ಉದ್ಯೋಗವನ್ನು ಸೃಷ್ಟಿಸಿ ಅವರ ಉದ್ಯೋಗಕ್ಕೆ ಅಗತ್ಯವಾದ ಉಪಕರಣಗಳನ್ನು ಮತ್ತು ಸಂಪನ್ಮೂಲಗಳನ್ನು ಒದಗಿಸಲಾಗುವುದು.
ಯೋಜನೆಯ ಉದ್ದೇಶ:
- ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರು ಹಾಗೂ ಕುಶಲಕರ್ಮಿಗಳು ಉದ್ಯೋಗಕ್ಕಾಗಿ ಇತರರಿಗೆ ಅವಲಂಬಿತರಾಗಿರದೆ, ಸ್ವಂತ ಉದ್ಯೋಗವನ್ನು ಮಾಡಲು ಪ್ರೇರೇಪಿಸುವುದು.
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆದಾಯವನ್ನು ಹೆಚ್ಚುವಂತೆ ಮಾಡಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು.
- ಈ ಯೋಜನೆಯಡಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.
- ಕುಶಲಕರ್ಮಿಗಳಿಗೆ ತಮ್ಮ ವೃತ್ತಿಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಅಂತವರಿಗೆ ಕಿಟ್ ಗಳನ್ನು ನೀಡುವ ಮೂಲಕ ಆರ್ಥಿಕ ನೆರವನ್ನು ನೀಡುವುದು.
- ಸಾಂಪ್ರದಾಯಿಕ ವೃತ್ತಿಗಳನ್ನು ನಂಬಿಕೊಂಡಿರುವ ಕುಟುಂಬಗಳು ತಮ್ಮ ವೃತ್ತಿಯನ್ನು ಮುಂದುವರಿಸಲು ಪ್ರೇರೇಪಿಸುವುದು.
ಯೋಜನೆಯ ಪ್ರಯೋಜನಗಳು:
- ₹25000 ಮೌಲ್ಯದ ಉಪಕರಣಗಳನ್ನು ಸರ್ಕಾರವೇ ಉಚಿತವಾಗಿ ನೀಡುವುದಿರಿಂದ ಸಣ್ಣ ವ್ಯಾಪಾರ ಮಾಡುವವರು ಹಾಗೂ ಬಡ ಕುಶಲಕರ್ಮಿಗಳು ತಮ್ಮ ಉದ್ಯೋಗಕ್ಕೆ ಬೇಕಾದ ಅಗತ್ಯ ಉಪಕರಣಗಳನ್ನು ಕೊಳ್ಳಲು ಸಾಲ ಮಾಡುವ ಅಗತ್ಯ ಇರುವುದಿಲ್ಲ.
- ಅರ್ಹ ಫಲಾನುಭವಿಗಳಿಗೆ ಸರ್ಕಾರವು ಡಿಜಿಟಲ್ ಈ -ವೋಚರ್ ಸೌಲಭ್ಯವನ್ನು ನೀಡುವ ಮೂಲಕ ತಮ್ಮ ಇಚ್ಛೆಯ ಬ್ರಾಂಡ್ ಗಳನ್ನು ಉತ್ತಮ ಗುಣಮಟ್ಟದ ಉಪಕರಣಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
- ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ₹5000 ದಿಂದ ₹25000 ಮೌಲ್ಯದ ಟೂಲ್ ಕಿಟ್ ಗಳನ್ನು ಪಡೆದುಕೊಳ್ಳಬಹುದು.
- ಕೆಲಸಕ್ಕಾಗಿ ನಗರ ಭಾಗಗಳಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ.
- ಫಲಾನುಭವಿಗಳ ಆಯ್ಕೆಯ ಉದ್ಯೋಗಗಳ ಕುರಿತು ಅಲ್ಪ ಸಮಯದ ತರಬೇತಿಗಳನ್ನು ನೀಡುತ್ತಿದ್ದು, ತರಬೇತಿ ಸಮಯದಲ್ಲಿ ಅವರಿಗೆ ₹500 ಸ್ಟೈಫಂಡ್ ನೀಡಲಾಗುವುದು.
| ಇಲ್ಲಿ ಗಮನಿಸಿ: ಸರ್ಕಾರವು ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಿಲ್ಲ, ಬದಲಾಗಿ ವೃತ್ತಿಗೆ ಅಗತ್ಯವಾದ ಉಪಕರಣಗಳನ್ನು ಪಡೆದುಕೊಳ್ಳಲು ಡಿಜಿಟಲ್ ಈ ವೋಚರ್ ಅಥವಾ ಕಿಟ್ ನೀಡುತ್ತದೆ. |
ಅರ್ಹತಾ ಮಾನದಂಡಗಳು:
- ಅರ್ಜಿದಾರರು ಗುಜರಾತಿನ ಖಾಯಂ ನಿವಾಸಿ ಆಗಿರಬೇಕು.
- ಲೇಬರ್ ಕಾರ್ಡ್ ಹೊಂದಿರಬೇಕು.
- ಅರ್ಜಿದಾರರು 18 ರಿಂದ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ₹600000 ಕ್ಕಿಂತ ಕಡಿಮೆ ಇರಬೇಕು.
- ಫಲಾನುಭವಿಗಳು ಆಯ್ಕೆ ಮಾಡುವ ವೃತ್ತಿಯಲ್ಲಿ ಕೌಶಲ್ಯ ಹೊಂದಿರಬೇಕು.
- ಯುವುದೇ ಶೈಕ್ಷಣಿಕ ಅರ್ಹತೆಯ ಅವಶ್ಯಕತೆ ಇರುವುದಿಲ್ಲ.
- ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
- ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಕುಟುಂಬದ ಒಬ್ಬ ಸದಸ್ಯರು ಕೂಡ ಸರ್ಕಾರಿ ನೌಕರಿಯಲ್ಲಿರಬಾರದು.
- ಈ ಹಿಂದೆ ಈ ಯೋಜನೆ ಅಥವಾ ಇದೇ ರೀತಿಯ ಸರ್ಕಾರದ ಯೋಜನೆಯ ಲಾಭವನ್ನು ಪಡೆದುಕೊಂಡ ಕುಟುಂಬ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ನಿವೇಶನದ ದಾಖಲೆ
- ಲೇಬರ್ ಕಾರ್ಡ್
- ವಯಸ್ಸಿನ ಪುರಾವೆ
- ಪಾಸ್ಪೋರ್ಟ್ ಸೈಜ್ ಫೋಟೋ
- ವೃತ್ತಿ ತರಬೇತಿ ಪ್ರಮಾಣ ಪತ್ರ
- ಮತದಾರರ ಚೀಟಿ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ ಸೈಟ್ https://e-kutir.gujarat.gov.in/ ಗೆ ಭೇಟಿ ನೀಡಿ
- ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ
- ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
- ಆಯ್ಕೆಯಾದ ಫಲಾನುಭವಿಗಳ ಮೊಬೈಲ್ ನಂಬರ್ ಗೆ SMS ಮೂಲಕ ಮಾಹಿತಿ ಲಭಿಸುತ್ತದೆ ಮತ್ತು ಟೂಲ್ ಕಿಟ್ ಪಡೆಯಲು ಈ ವೋಚರ್ ಬರುತ್ತದೆ.
ಅಂತಿಮ ತೀರ್ಮಾನ:
ಮಾನವ ಕಲ್ಯಾಣ ಯೋಜನೆಯು ಗುಜರಾತ್ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಗುಜರಾತಿನಲ್ಲಿ ಖಾಯಂ ನಿವಾಸಿಯಾಗಿರುವ ಕಡಿಮೆ ಆದಾಯವನ್ನು ಗಳಿಸುವ ಉದ್ಯೋಗಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಶಲಕರ್ಮಿಗಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು. ನೀವು ಗುಜರಾತ್ ನಿವಾಸಿಯಾಗಿದ್ದರೆ, ಈ ಯೋಜನೆಗೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಇತರೆ ಪ್ರಮುಖ ಲಿಂಕುಗಳು:
- ನಿಮಗೆ ರೂ 2000/- ಹಣ ಇನ್ನು ಬಂದಿಲ್ವಾ? | 21ನೇ ಕಂತಿನ ಹಣ ಈ ದಿನ ಜಮಾ!
- ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ 2026
- ಶ್ರಮ ಶಕ್ತಿ ಯೋಜನೆ ಸಹಾಯಧನ 2026
- ಕರ್ನಾಟಕ ಮಡಿಲು ಕಿಟ್ ಯೋಜನೆ 2026
- ಕುಕ್ಕುಟ ಸಂಜೀವಿನಿ ಯೋಜನೆ – ಉಚಿತ ಕೋಳಿಮರಿ ಮತ್ತು ಶೆಡ್ ನಿರ್ಮಾಣಕ್ಕೆ ₹7.5 ಲಕ್ಷ ಸಹಾಯಧನ

