Free House : ರಾಜ್ಯ ಸರ್ಕಾರದಿಂದ ಉಚಿತ ಮನೆಗೆ ಆನ್ಲೈನ್ ಅರ್ಜಿ : ಅದೃಷ್ಟವಂತರು ಇಲ್ಲಿ ಅರ್ಜಿ ಸಲ್ಲಿಸಿ!

Free house scheme in karnataka

ಅಲೆಮಾರಿ ಅಥವಾ ಅರೆ ಅಲೆಮಾರಿ ಸಮುದಾಯದ ವರ್ಗಕ್ಕೆ ಸಂಪುಟ ಸಭೆಯಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ 1200 ಚದರ ಅಡಿ ನಿವೇಶನದಲ್ಲಿ 600 ಚದರ ಅಡಿ ಮನೆ ನಿರ್ಮಾಣದ (Free House) ನಿರ್ಧಾರವು, ಅಷ್ಟೇ ಅಲ್ಲದೆ ಕಡಿಮೆ ಮತ್ತು ಮಧ್ಯಮ ಆದಾಯದ ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ಸಂಪುಟ ಸಭೆಯ ನಿರ್ಧಾರವನ್ನು ಕೈಗೊಂಡಿದೆ.

Free House Scheme in Karnataka

ಪ್ರತಿಯೊಬ್ಬ ಶ್ರೀಮಂತ ಬಡವ ಹಾಗೆ ಮಧ್ಯಮ ವರ್ಗದ ಜನಸಾಮಾನ್ಯರ ಕನಸು ನಾನು ಒಂದು ಸ್ವಂತವಾಗಿ ಮನೆ ಕಟ್ಟಬೇಕು ಎನ್ನುವುದು. ಇದರಲ್ಲಿ ಶ್ರೀಮಂತರಿಗೆ ಮನೆ ಕಟ್ಟುವುದು ನೀರು ಕುಡಿದಷ್ಟೇ ಸುಲಭ ಯಾಕೆಂದರೆ ಅಷ್ಟು ಹಣ ಅವರಲ್ಲಿ ಇರುತ್ತದೆ. Free House ಸಾಮಾನ್ಯ ಜನ ಸಾಮಾನ್ಯರಲ್ಲಿ ಮನೆ ಕಟ್ಟದಕ್ಕೆನ್ನುವ ಆಸೆ ಇರುತ್ತದೆ ಆರ್ಥಿಕ ಸಮಸ್ಯೆಯಿಂದಾಗಿ ಹಣದ ಕೊರತೆ ಬಹಳಷ್ಟು ಇರುತ್ತದೆ.

ಕರ್ನಾಟಕ ರಾಜ್ಯ ಸಚಿವ ಸಂಪುಟವು ಜನವರಿ 22 2026ರಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಪ್ರಮುಖವಾಗಿ ನೀವು ಗಮನಿಸಲೇಬೇಕಾದ ವಿಷಯವೇನೆಂದರೆ, ಬೆಂಗಳೂರು ಅಲೆಮಾರಿ ಮತ್ತು ಅರೆ ಅಲೆ ಮಾರಿ ಸಮುದಾಯಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕೆನ್ನುವ ಚರ್ಚೆ ನಡೆಸಿ ಸರ್ಕಾರ ಇದೀಗ ಯೋಜನೆಯ ಸೌಲಭ್ಯಗಳ ಬಗ್ಗೆ ಸ್ಪಷ್ಟವಾಗಿ ಅನುಮೋದನೆ ನೀಡಿದೆ.

ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯ ಆಯಾ ಜಿಲ್ಲೆಗಳಲ್ಲಿನ ಕಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಲಾಗುತ್ತದೆ. ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಮತ್ತು ನಗರ ಭಾಗಗಳೆರಡು ವಸತಿ ರಹಿತ ಅಲೆಮಾರಿ ಕುಟುಂಬಗಳಿಗೆ ಅನ್ವಯವಾಗುತ್ತದೆ.

“ಪ್ರತಿಯೊಬ್ಬ ಕರ್ನಾಟಕದ ಪ್ರಜೆಯೂ ಕೂಡ ದಿನಾಂಕ 22 2026 ರಲ್ಲಿ ನಡೆದ ಸಂಪುಟ ಸಂಚಿಕೆ ನಿರ್ಧಾರದ ಬಗ್ಗೆ ತಿಳಿಯಲೇಬೇಕು”.

ಯೋಜನೆಯ ಪ್ರಯೋಜನಗಳು ಹೀಗಿವೆ :-

ವಸತಿ ಸೌಲಭ್ಯ (Free House)ಪಡೆಯುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಅಲೆಮಾರಿ ಅಥವಾ ಅರೆ ಅಲೆಮಾರಿಗಳು ಆಗಿರುತ್ತಾರೆ.

  • ಸಚಿವ ಸಂಪುಟದ ಇತ್ತೀಚಿನ ನಿರ್ಧಾರದ ಪ್ರಕಾರ ಪ್ರತಿ ಅರ್ಹ ಕುಟುಂಬಕ್ಕೆ 600 ಚದುರ ಅಡಿ ವಿಸ್ತೀರ್ಣದ ಸುಸರ್ಜಿತ ಮನೆಯನ್ನು ಕಟ್ಟಿಕೊಡಲಾಗುತ್ತದೆ.
  • ಈ ಮನೆಗಳನ್ನು ತಾವಿಂದ 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಲಾಗಿರುತ್ತದೆ.
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಪ್ರತಿ ಮನೆಗೆ 1,20,000 ರೂಪಾಯಿಗಳ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.
  • ಈ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಸರ್ಕಾರವೇ ಮನೆಗಳನ್ನು ನಿರ್ಮಿಸಿಕೊಡಲಿದೆ.
  • ಅಲೆಮಾರಿ ಜೀವನವನ್ನು ನಡೆಸುತ್ತಿರುವ ಜನರು ಒಂದೇ ಕಡೆ ನಿಂತು ಜೀವನವನ್ನು ನಡೆಸಲು ಅನುಕೂಲವಾಗುತ್ತದೆ. ಇದು ಸರ್ಕಾರದ ಒಂದು ಒಳ್ಳೆಯ ನಿರ್ಧಾರ ಅಂತಾನೇ ಹೇಳಬಹುದು.
  • ಟೀ ಮನೆಗಳ (Free House) ನಿರ್ಮಾಣದ ಜೊತೆಗೆ ಆ ಪ್ರದೇಶದಲ್ಲಿ ರಸ್ತೆ ವಿದ್ಯುತ್ ಕುಡಿಯುವ ನೀರು, ಹೀಗೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತದೆ.
  • ಇಷ್ಟೇ ಅಲ್ಲದೆ ಸ್ವಂತ ಮನೆ ಸಿಗುವುದರಿಂದ ಈ ಸಮುದಾಯದ ಮಕ್ಕಳು ಶಾಲೆಗೆ ದಾಖಲಾಗಿ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಮತ್ತು ಆ ಕುಟುಂಬಗಳಿಗೆ ಸಾಮಾಜಿಕ ಗೌರವ ದೊರೆಯುತ್ತದೆ.

ಈ ಯೋಜನೆಯು ರಾಜ್ಯದ ಅಲೆಮಾರಿ ಸಮುದಾಯಗಳ ದಶಕಗಳ ಕಾಲದ ವಸತಿ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ.

ಕರ್ನಾಟಕ ಸರ್ಕಾರದ ನಿರ್ಧಾರ :-

ಸುಮಾರು ಈ ಯೋಜನೆಗೆ ಅಂದಾಜು ₹100 ಕೋಟಿ ವೆಚ್ಚ ಮಾಡಲು ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಇದಾಗಿದ್ದು ಅನುಮೋದನೆ ಪಡೆದಿರುವುದರಿಂದ, ಮುಂದಿನ ಕೆಲವು ವಾರಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಸಂಬಂಧ ಅಧಿಕೃತ ಮಾರ್ಗಸೂಚಿ ಮತ್ತು ಅರ್ಜಿ ಸಲ್ಲಿಸುವ ದಿನಾಂಕಗಳನ್ನು ಬಿಡುಗಡೆ ಮಾಡಲಿದೆ.

ಇಲ್ಲಿ ಗಮನಿಸಿ :-

ಸಾಮಾನ್ಯವಾಗಿ ಇಂತಹ ಯೋಜನೆಗಳ (Free House) ಅನುಷ್ಠಾನಕ್ಕೆ ಸಿದ್ಧತೆಗಳು ಮುಗಿದ ನಂತರ 2026ರ ಸಾಲಿನಲ್ಲಿ ಅರ್ಜಿಯನ್ನು ಆಹ್ವಾನಿಸುವ ಸಾಧ್ಯತೆ ಇದೆ ರಾಜ್ಯ ಸರ್ಕಾರವು ವಸತಿ ಯೋಜನೆಯನ್ನು ಕೂಡಗೊಳಿಸಲು ಡಿಸೆಂಬರ್ 2020ರ ಗಡಿಯನ್ನು ಹಾಕಿಕೊಂಡಿದೆ

ಸಿಎಂ ಸಿದ್ದರಾಮಯ್ಯ ಅವರು ನಿರ್ಮಿಸಿರುವ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಥವಾ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವೆಬ್‌ಸೈಟ್ ಗೆ ಭೀತಿ ನೀಡಿ.

ಅಗತ್ಯ ದಾಖಲೆಗಳು :-

ಕರ್ನಾಟಕ ರಾಜ್ಯದಲ್ಲಿ ಅಲೆಮಾರಿ ಜೀವನ ನಡೆಸುತ್ತಿರುವ ಹಾಗೆ ಹಿಂದುಳಿದ ವರ್ಗದ ಜನಸಾಮಾನ್ಯರು ಇದೇ ತಕ್ಷಣ ಕೆಳಗೆ ಕೊಡಲಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ.

  • ಗುರುತಿನ ಚೀಟಿ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಾಸಸ್ಥಾನ ದೃಢೀಕರಣ ಪತ್ರ
  • ಬ್ಯಾಂಕ್ ವಿವರಗಳು
  • ಇತ್ತೀಚಿನ ಭಾವಚಿತ್ರ ಸ್ವ
  • ಯಂ ಘೋಷಣ ಪತ್ರ

“ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಜನರಿಗೆ ಮನೆ (Free House) ನಿರ್ಮಿಸಿಕೊಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಸ್ತಾವನೆಯ ಮೇರೆಗೆ 100 ಕೋಟಿ ರೂಪಾಯಿಗಳ ಮೊತ್ತವನ್ನು ಮಂಜೂರು ಮಾಡಲಾಗಿದೆ”.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ;-

ಕರ್ನಾಟಕ ರಾಜ್ಯ ಸಚಿವ ಸಂಪುಟವು ಜನವರಿ 22, 2026ರಲ್ಲಿ ನಡೆಸಿದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. (Free House) ಹಾಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮುಂದಿನ ಕೆಲವು ದಿನಗಳಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ಕೆಲವೇ ದಿನಗಳಲ್ಲಿ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಿ ಪಿಎಂ ಸಿದ್ದರಾಮಯ್ಯ ಸರ್ಕಾರ ಕೊಟ್ಟಿರುವ ಬಂಪರ್ ಕೊಡುಗೆಯನ್ನ ನಿಮ್ಮದಾಗಿಸಿಕೊಳ್ಳಿ.

ಸರ್ಕಾರ ಆನ್ಲೈನ್ ಮತ್ತು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಅವಕಾಶವನ್ನ ಮಾಡಿದೆ.

1. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (Online) :

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು (Seva Sindhu Portal) ಮೂಲಕ ಅಥವಾ ‘ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ’ದ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
  • ‘ಹೊಸ ಬಳಕೆದಾರರ ನೋಂದಣಿ’ (New User Registration) ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಬಳಸಿ ಖಾತೆ ತೆರೆಯಿರಿ.
  • ಲಾಗಿನ್ ಆದ ನಂತರ, “ಅಲೆಮಾರಿ/ಅರೆ ಅಲೆಮಾರಿ ವಸತಿ ಯೋಜನೆ” ಅಥವಾ “ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ” ಅಡಿಯಲ್ಲಿ ಬರುವ ಅರ್ಜಿಗಾಗಿ ಹುಡುಕಿ.
  • ಅರ್ಜಿಯಲ್ಲಿ ಕೇಳಲಾದ ನಿಮ್ಮ ಹೆಸರು, ವಿಳಾಸ ಮತ್ತು ಇನ್ನಿತರ ಇತ್ಯಾದಿ ದಾಖಲೆಗಳನ್ನ ಭರ್ತಿ ಮಾಡಿ.
  • ಹಾಗೆ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಇವನ್ನ ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡಿ.
  • ಅರ್ಜಿಯನ್ನು ಸಬ್‌ಮಿಟ್ ಮಾಡಿದ ನಂತರ ಬರುವ ‘ಅಕ್ನಾಲೆಡ್ಜ್‌ಮೆಂಟ್’ (Acknowledgment) ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

2. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (Offline) :

  • ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಮ್ಮ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗದಿಪಡಿಸಿದ ಅರ್ಜಿಯನ್ನ ಕೇಳಿ ಪಡೆದು ಭರ್ತಿ ಮಾಡಬಹುದು.
  • ಅಭ್ಯರ್ಥಿಗಳು ಸಲ್ಲಿಸುವ ಅರ್ಜಿಯಲ್ಲಿ ನಿಮ್ಮ ಹೆಸರು, ಪೂರ್ಣ ವಿಳಾಸ ,ಕುಟುಂಬದ ಸದಸ್ಯರ ವಿವರಗಳು ಮತ್ತು ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಸ್ಪಷ್ಟವಾಗಿ ಬರೆಯಿರಿ.
  • ಅತಿ ಮುಖ್ಯವಾಗಿ ನಿಮ್ಮ ಅಲೆಮಾರಿ ಅಥವಾ ಅರೆ ಅಲೆಮಾರಿ ಸಮುದಾಯದ ಹೆಸರನ್ನ ಸರಿಯಾಗಿ ಫೀಲ್ ಮಾಡಬೇಕು.
  • ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
  • ಎಲ್ಲಾ ಪ್ರತಿಗಳ ಮೇಲೆ ನಿಮ್ಮ ಸಹಿ (Self-attestation) ಇರಲಿ.
  • ಭರ್ತಿ ಮಾಡಲಾದ ಅರ್ಜಿಯನ್ನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗೆ ಸಲ್ಲಿಸಿ. ಕೊನೆಯಲ್ಲಿ ‘ಸ್ವೀಕೃತಿ ಪತ್ರ’ (Acknowledgment Receipt) ಪತ್ರವನ್ನು ನಿಮಗೆ ಕೊಡುತ್ತಾರೆ ಸರಿಯಾಗಿ ತೆಗೆದಿಟ್ಟುಕೊಳ್ಳಿ.

ಈ ಎರಡು ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕಷ್ಟವಾದರೆ ನಿಮ್ಮ ಊರಿನ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಕೊಟ್ಟು ಆನ್ಲೈನ್ ಅರ್ಜಿಯನ್ನು ಸಲ್ಲಿಸಿ. ಹಾಗೆಯೇ ಅವರು ಕೊಡುವ ರಶೀದಿಯನ್ನು ಸರಿಯಾಗಿ ತೆಗೆದು ಇಟ್ಟುಕೊಂಡು ಅವರು ಕೇಳುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.

ಅಂತಿಮ ಮಾತು :-

2026ರ ಹೊಸ ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಅಲೆಮಾರಿಗಳಿಗೆ ಸೂರು (Free House) ಕಲ್ಪಿಸಿಕೊಡುವ ನಿರ್ಧಾರ ಮಾಡಿರುವುದು ಒಳ್ಳೆಯ ವಿಷಯವೇ ಹೌದು. ಇದರಲ್ಲಿ ಯಾವುದೇ ಒಬ್ಬ ಅಭ್ಯರ್ಥಿಗೂ ಈ ಯೋಚನೆಯಿಂದ ನಷ್ಟವಾಗದೆ ಪ್ರತಿಯೊಬ್ಬರಿಗೂ ಕೂಡ ಸರ್ಕಾರ ಒಂದು ಸ್ಥಿರ ಜಾಗದಲ್ಲಿ ಮನೆಯನ್ನು ಕಟ್ಟಿ ಕೊಡಬೇಕು ಎನ್ನುವುದೇ ನನ್ನ ಅಂತಿಮ ಮಾತು.


ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *