ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರದಿಂದ ರೈತರಿಗೆ ಸಿಗುತ್ತಿದೆ ಭರ್ಜರಿ ಗುಡ್ ನ್ಯೂಸ್. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.
Free Borewell Scheme In Karnataka Apply Online
ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮಾನದಂಡ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳ ಬಗ್ಗೆ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಯೋಜನೆಯ ಅವಲೋಕನ: (Free Borewell Scheme In Karnataka Apply Online)
| ಯೋಜನೆಯ ಹೆಸರು | ಗಂಗಾ ಕಲ್ಯಾಣ ಯೋಜನೆ |
| ಅರ್ಹ ಫಲಾನುಭವಿಗಳು | ಸಣ್ಣ ಮತ್ತು ಅತಿ ಸಣ್ಣ ರೈತರು |
| ಅರ್ಜಿಸಲ್ಲಿಸುವ ರಾಜ್ಯ | ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |

ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ಸರ್ಕಾರವು ಜಾರಿಗೊಳಿಸಿದ್ದ ಹಲವಾರು ಯೋಜನೆಗಳಲ್ಲಿ ಗಂಗಾ ಕಲ್ಯಾಣ ಯೋಜನೆಯು ಒಂದಾಗಿದೆ. ಈ ಯೋಜನೆಯು 1983 ರಿಂದ ಜಾರಿಗೆ ಬಂದಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಉಚಿತ ಬೋರ್ವೆಲ್/ ಪಂಪ್ಸೆಟ್ ಅಳವಡಿಸಿಕೊಳ್ಳಲು ಸಹಾಯಧನವನ್ನು ಹಾಗೂ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆ ಎಂದರೇನು?
ಗಂಗಾ ಕಲ್ಯಾಣ ಯೋಜನೆಯು 1.20 ಎಕ್ಕರೆಯಿಂದ 5 ಎಕ್ಕರೆ ಜಮೀನನ್ನು ಹೊಂದಿರುವ ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಜಮೀನಿನಲ್ಲಿ ಬೋರ್ವೆಲ್ ಕೊರೆಸಿ, ಪಂಪ್ಸೆಟ್ ಅಳವಡಿಸಿ, ನೀರಾವರಿ ಸೌಲಭ್ಯವನ್ನು ಒದಗಿಸಲು ಸಹಾಯಧನವನ್ನು ನೀಡುತ್ತದೆ. ವಿದ್ಯುದ್ದೀಕರಣ ಮಾಡಲು ರೂ. 50,000 ವನ್ನು ಸಾಲದ ರೂಪದಲ್ಲಿ ನೀಡಲಾಗುವುದು.
ಯೋಜನೆಯ ಉದ್ದೇಶ:
- ರೈತರಿಗೆ ತಮ್ಮ ಕೃಷಿ ಜಮೀನಿನಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸುವುದು.
- ನೀರಾವರಿ ಸೌಲಭ್ಯಕ್ಕೆ ಸಹಾಯಧನವನ್ನು ನೀಡುವ ಮೂಲಕ ಬೆಳೆಗಳ ಇಳುವರಿ ಹೆಚ್ಚಿಸಿ ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.
- ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯಕ್ಕೆ ಸಹಾಯಧನವನ್ನು ನೀಡುವ ಮೂಲಕ ಅವರ ರೈತ ಜೀವನವನ್ನು ಸುಲಭಗೊಳಿಸುವುದು.
ಯೋಜನೆಯ ಪ್ರಯೋಜನ:
- ರೈತರಿಗೆ ಉಚಿತ ಬೋರ್ವೆಲ್ ಕೊರೆಸಿಕೊಡಲಾಗುವುದು.
- ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
- ಬೆಳೆ ಉತ್ಪಾದನೆ ಹೆಚ್ಚಳದಿಂದ ರೈತರ ಆದಾಯ ಹೆಚ್ಚಳ.
ಅರ್ಹತಾ ಮಾನದಂಡ: Free Borewell Scheme In Karnataka Apply Online
- ರೈತರು ಕರ್ನಾಟಕದ ನಿವಾಸಿಯಾಗಿರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರರಾಗಿರಬಾರದು.
- 18 ರಿಂದ 60 ವರ್ಷದೊಳಗಿನವರಾಗಿರಬೇಕು.
- ಕನಿಷ್ಠ 2 ಎಕ್ಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
- ಅರ್ಜಿದಾರರ ಕೃಷಿ ಭೂಮಿಯಲ್ಲಿ ಯಾವುದೇ ನೀರಾವರಿ ಸೌಲಭ್ಯ ಇರಬಾರದು.
- ನಗರ ಪದೇಶದ ರೈತರ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆಯಿರಬೇಕು.
- ಗ್ರಾಮೀಣ ಪ್ರದೇಶದ ರೈತರ ವಾರ್ಷಿಕ ಆದಾಯ 98,000 ಕ್ಕಿಂತ ಕಡಿಮೆ ಇರಬೇಕು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- BPL ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಜಮೀನಿನ ದಾಖಲೆ ಪ್ರಮಾಣಪತ್ರ
- ಹೆಣ್ಣು ಮಗುವಿನ ಬ್ಯಾಂಕ್ ಖಾತೆಯ ವಿವರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಬ್ಯಾಂಕ್ ಪಾಸ್ ಬುಕ್
ಅರ್ಜಿ ಸಲ್ಲಿಸುವ ವಿಧಾನ: Free Borewell Scheme In Karnataka Apply Online
- ಸೇವಾ ಸಿಂಧೂ ಪೋರ್ಟಲ್ https://sevasindhu.karnataka.gov.in ಗೆ ಭೇಟಿನೀಡಿ
- ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ.
- ನಂತರ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
- ಇಲ್ಲವೇ ಗ್ರಾಮ್ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ತೀರ್ಮಾನ:
ಕರ್ನಾಟಕ ಸರ್ಕಾರವು ರೈತರಿಗಾಗಿ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಅಂದರೆ ಕನಿಷ್ಠ 2 ಎಕ್ಕರೆ ಜಮೀನನ್ನು ಹೊಂದಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. . ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಅಥವಾ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
| ಪ್ರಮುಖ ಯೋಜನೆಗಳು | ಪ್ರಮುಖ ಲಿಂಕುಗಳು |
| ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ | ಇಲ್ಲಿ ಕ್ಲಿಕ್ ಮಾಡಿ |
| ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನಕ್ಕೆ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
| ಉಚಿತ ಲ್ಯಾಪ್ಟಾಪ್ ಯೋಜನೆ 2026 | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗಿನಿ ಯೋಜನೆ 2026 | ಇಲ್ಲಿ ಕ್ಲಿಕ್ ಮಾಡಿ |
| ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ | ಇಲ್ಲಿ ಕ್ಲಿಕ್ ಮಾಡಿ |
| You can read other articles and tell me by commenting below which of these blogging information you liked. |

