ಉದ್ಯೋಗ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್! ಕರ್ನಾಟಕದ ಗಡಿ ಜಿಲ್ಲೆ, ಕಪ್ಪು ಶಿಲೆಯ ನಾಡು ಮತ್ತು ವನ್ಯ ಸಿರಿಗಳ ತವರು ಚಾಮರಾಜನಗರದಲ್ಲಿ ಉದ್ಯೋಗ ಮಾಡಬೇಕೆಂದು ಅದೆಷ್ಟೋ ಯುವಕ-ಯುವತಿಯರ ಕನಸಾಗಿರುತ್ತದೆ. ಅಂತಹ ಅಭ್ಯರ್ಥಿಗಳಿಗೆ ಈಗ ಅತ್ಯುತ್ತಮವಾದ ಸುವರ್ಣ ಅವಕಾಶವೆಂದು 2026 ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಕೂಡಿಬಂದಿದೆ. ಚಾಮರಾಜನಗರ ಜಿಲ್ಲಾ ಮತ್ತು ನ್ಯಾಯಾಲಯವು ವಿವಿಧ ಹುದ್ದೆಗಳ ಬರ್ತಿಗಾಗಿ ಹೊಚ್ಚಹೊಸ ನೇಮಕಾತಿ ಅಧಿಸೂಚನೆ ಒಂದನ್ನು ಪ್ರಕಟ ಮಾಡಿದೆ.
Chamarajanagara District Court Recruitment In Kannada
ಇಲ್ಲಿ ಹತ್ತನೇ ತರಗತಿ ಪಾಸಾದವರಿಂದ ಹಿಡಿದು ಪದವಿದಾರರವರೆಗೆ ಗೌರವಯುತ ಸರ್ಕಾರಿ ಕೆಲಸವನ್ನು ಪಡೆಯುವ ಕನಸು ಈಗ ನನಸಾಗುವ ಕಾಲ ಹತ್ತಿರ ಬಂದಿದೆ. ಹೌದು ಸ್ನೇಹಿತರೆ “ಚಾಮರಾಜನಗರ ಜಿಲ್ಲಾ ಮತ್ತು ನ್ಯಾಯಾಲಯವು (District & Sessions Court job) ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಯನ್ನ ಮಾಡುವುದಾಗಿ ನೋಟಿಫಿಕೇಶನ್ ಅನ್ನ ಹೊರಡಿಸಿದ್ದು, ನೇರ ನೇಮಕಾತಿ ಮೂಲಕ ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲು ಸಜ್ಜಾಗಿದೆ”. ನೀವು ಇಲ್ಲಿ ಸೇವೆಯನ್ನ ಸಲ್ಲಿಸುವುದು ಕೇವಲ ಉದ್ಯೋಗವಲ್ಲ, ಅದೊಂದು ಸಾಮಾಜಿಕ ಗೌರವ ಮತ್ತು ಭದ್ರತೆಯ ಸಂಕೇತವಿದ್ದಂತೆ.

ಹಾಗಿದ್ದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ವಯೋಮಿತಿ ಪ್ರಕ್ರಿಯೆ ಹೇಗಿರುತ್ತೆ? ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? ನಾವು ಇಲ್ಲಿ ಉದ್ಯೋಗವನ್ನ ಪಡೆದುಕೊಂಡರೆ ನಮಗೆ ತಿಂಗಳಿಗೆ ಸಂಬಳ ಎಷ್ಟು ಸಿಗುತ್ತೆ? ಹಾಗೆಯೇ ಅರ್ಜಿ ಶುಲ್ಕವನ್ನ ಇದೆಯೇ? ಇವೆಲ್ಲದರ ಸಂಪೂರ್ಣವಾದ ಮಾಹಿತಿಯನ್ನ ಈ ಕೆಳಗೆ ನಿಮಗಾಗಿ ತಿಳಿಸಲಾಗಿದೆ
ಸರ್ಕಾರಿ ಕೆಲಸದ ಹೈಲೈಟ್ಸ್(Quick Highlights):
ಯಾವುದೇ ಅಭ್ಯರ್ಥಿಗಳಾಗಿರಲಿ ಒಂದು ಕೆಲಸದ ಬಗ್ಗೆ ತಿಳಿಯಲು ಮುಖ್ಯವಾದ ಹೈಲೈಟ್ಸ್ ಗಳನ್ನ ನೋಡಲು ಇಚ್ಚಿಸುತ್ತಾರೆ ಹಾಗಾಗಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಹೊರಡಿಸಿರುವ 2026 ನೇ ಸಾಲಿನ ನೇಮಕಾತಿಯ ಬಗ್ಗೆ ಸ್ಪಷ್ಟವಾದಂತಹ ಚಾರ್ಟ್ ಮೂಲಕ ಹೈಲೈಟ್ಸ್ ತಿಳಿಸಲಾಗಿದೆ.
| ವಿವರಗಳು | ಮಾಹಿತಿ |
|---|---|
| ನೇಮಕಾತಿ ಸಂಸ್ಥೆ | ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಾಮರಾಜನಗರ(Court job) |
| ಒಟ್ಟು ಹುದ್ದೆಗಳು | 25 ಹುದ್ದೆಗಳು |
| ಹುದ್ದೆಗಳ ಹೆಸರು | ಸೇವಕರು, ಟೈಪಿಸ್ಟ್, ಸ್ಟೆನೋಗ್ರಾಫರ್, ಟೈಪಿಸ್ಟ್-ಕಾಪಿಯಿಸ್ಟ್ |
| ವಿದ್ಯಾಹರ್ಹತೆ | 10th ಪಾಸ್ (ಸೇವಕ), PUC + Typing (ಇತರ ಹುದ್ದೆಗಳು) |
| ವಯೋಮಿತಿ | 18 ರಿಂದ 35 ವರ್ಷ (ಮೀಸಲಾತಿ ಅನ್ವಯ ಸಡಿಲಿಕೆ ಇದೆ) |
| ವೇತನ ಶ್ರೇಣಿ | ₹17,000 ರಿಂದ ₹52,650 ವರೆಗೆ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ (Online Only) |
| ಅರ್ಜಿ ಆರಂಭದ ದಿನಾಂಕ | 13 ಮಾರ್ಚ್ 2026 |
| ಕೊನೆಯ ದಿನಾಂಕ | 13 ಏಪ್ರಿಲ್ 2026 |
| ಉದ್ಯೋಗ ಸ್ಥಳ | ಚಾಮರಾಜನಗರ ಜಿಲ್ಲೆ(Court job) |
| ಅಧಿಕೃತ ವೆಬ್ಸೈಟ್ | chamarajanagara.dcourts.gov.in |
ಹುದ್ದೆಗಳ ವಿವರ :-
2026 ರ ಈ ಅತ್ಯುತ್ತಮ ಕರ್ನಾಟಕ ಸರ್ಕಾರ ದ ನೇಮಕಾತಿಯಲ್ಲಿ ಒಟ್ಟು 25 ಹುದ್ದೆಗಳನ್ನು ಭರ್ತಿ (Court job) ಮಾಡಲಾಗಿದ್ದು, ಈ ಹುದ್ದೆಗಳನ್ನು ಪ್ರಮುಖವಾಗಿ ನಾಲ್ಕು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. ಹಾಗೆಯೇ ಈ ಎಲ್ಲಾ ಹುದ್ದೆಗಳು ಸಹ ತನ್ನದೇ ಆದ ವಿಶೇಷತೆಯನ್ನು ಒಳಗೊಂಡಿದೆ. ಅನೇಕ ವಿದ್ಯಾರ್ಥಿಗಳು ಇಂತಹ ನ್ಯಾಯಾಲಯಗಳ ಸರ್ಕಾರಿ ಕೆಲಸಕ್ಕಾಗಿಯೇ ಹಾತರೆಯುತ್ತಿರುತ್ತಾರೆ. ಅಂತವರಿಗೆ ಇದೊಂದು ಈ ವರ್ಷದ ಗೋಲ್ಡನ್ ಅಪರ್ಚುನಿಟಿ ಅಂದರೆ ತಪ್ಪಾಗುವುದಿಲ್ಲ.
ಹಾಗಿದ್ದರೆ ಯಾವ ರೀತಿಯ ವಿಂಗಡಣೆ ಮೂಲಕ ಈ ಹುದ್ದೆಗಳನ್ನು ವರ್ಗೀಕರಿಸಲಾಗಿದೆ ಎಂದು ಈ ಕೆಳಗೆ ನೀವು ತಿಳಿಯಬಹುದಾಗಿದೆ.
| ಹುದ್ದೆಯ ಹೆಸರು (POST NAME) | ಒಟ್ಟು ಸಂಖ್ಯೆ(Tottal post) |
|---|---|
| ಸೇವಕರು (Peon) | 13 |
| ಬೆರಳಚ್ಚುಗಾರರು (Typist) | 06 |
| ಬೆರಳಚ್ಚು-ನಕಲುಗಾರರು (Typist-Copyist) | 04 |
| ಶೀಘ್ರಲಿಪಿಗಾರರು (Stenographer Grade-III) | 02 |
ವಿದ್ಯಾರ್ಹತೆ :-
ಯಾವುದೇ ಸರ್ಕಾರಿ ಉದ್ಯೋಗದ ಯಶಸ್ಸಿನ ಮೊದಲ ಮೆಟ್ಟಿಲೇ ಸರಿಯಾದ ಶಿಕ್ಷಣ. ಹೌದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ (Court job) ಈ ನೇಮಕಾತಿಯಲ್ಲಿ ವಿಶೇಷತೆ ಏನೆಂದರೆ ಇಲ್ಲಿ ಕೇವಲ ಪದವೀಧರರಿಗೆ ಮಾತ್ರವಲ್ಲದೆ 10ನೇ ತರಗತಿ ಪಾಸ್ತಾ ದವರಿಗೂ ಅತ್ಯುತ್ತಮವಾದ ಅವಕಾಶ ನೀಡಲಾಗಿದೆ. ಆದರೆ ಕೇವಲ ಅಂಕ ಪಟ್ಟಿ ಇದ್ದರೆ ಸಾಲದು ನ್ಯಾಯಾಲಯದ ಕೆಲಸಕ್ಕೆ ಬೇಕಾದ ಒಂದಿಷ್ಟು ತಾಂತ್ರಿಕ ಕೌಶಲ್ಯಗಳು ಮತ್ತು ಭಾಷಾ ಪ್ರಾವಿನ್ಯತೆ ನಿಮ್ಮಲ್ಲಿದೆಯೇ ಎಂಬುದು ಬಹಳ ಮುಖ್ಯವಾಗುತ್ತದೆ.
ಅನೇಕ ಅಭ್ಯರ್ಥಿಗಳು ತಮಗೆ ಅರ್ಹತೆ ಇದ್ದರೂ ಸಹ ಅಧಿಸೂಚನೆಯಲ್ಲಿನ ಸಣ್ಣ ಸಣ್ಣ ತಾಂತ್ರಿಕ ವಿವರಗಳನ್ನು ಲೆಕ್ಕಿಸದೆ ಅರ್ಜಿ ಸಲ್ಲಿಸಿ ಆನಂತರ ಅರ್ಜಿಗಳು ತಿರಸ್ಕಾರವಾಗುತ್ತದೆ. ಅಂತಹ ತಪ್ಪು ನಿಮ್ಮಿಂದ ಆಗಬಾರದು ಎನ್ನುವ ಕಾರಣದಿಂದ ಪ್ರತಿ ಹುದ್ದೆಗೆ ಇರಬೇಕಾದ ಕನಿಷ್ಠ ಮತ್ತು ಗರಿಷ್ಠ ವಿವಾರ್ಹತೆ ವಿವರವನ್ನು ಸಂಪೂರ್ಣವಾಗಿ ನಾವು ಇಲ್ಲಿ ತಿಳಿಸಲಾಗಿದೆ. ನಿಮ್ಮ ಶೈಕ್ಷಣಿಕ ಹಿನ್ನೆಲೆಗೆ ಯಾವ ಹುದ್ದೆ ಸೂಕ್ತ ಎಂಬುದನ್ನು ನೀವು ಈ ಕೆಳಗೆ ನೀಡಲಾದ ವಿವರಗಳನ್ನು ನೋಡಿದ ನಂತರ ಖಚಿತಪಡಿಸಿಕೊಳ್ಳುವುದು ಉತ್ತಮ.
ಸೇವಕರು (Peon)
- ವಿದ್ಯಾರ್ಹತೆ: 10ನೇ ತರಗತಿ (SSLC/ತತ್ಸಮಾನ) ಪಾಸ್
- ಭಾಷಾ ಜ್ಞಾನ: ಕನ್ನಡ ಓದು ಮತ್ತು ಬರವಣಿಗೆ
- ಮೆರಿಟ್: 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುತ್ತದೆ
2. ಬೆರಳಚ್ಚುಗಾರರು (Typist)
- ವಿದ್ಯಾರ್ಹತೆ: 12ನೇ ತರಗತಿ (PUC/ತತ್ಸಮಾನ) ಪಾಸ್
- ತಾಂತ್ರಿಕ ಅರ್ಹತೆ:
- ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಹಿರಿಯ ದರ್ಜೆ ಬೆರಳಚ್ಚು ಪಾಸ್ ಅಥವಾ
- ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್
3. ಬೆರಳಚ್ಚು ನಕಲುಗಾರರು (Typist-Copyist)
- ವಿದ್ಯಾರ್ಹತೆ: PUC ಪಾಸ್
- ತಾಂತ್ರಿಕ ಅರ್ಹತೆ: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಕಿರಿಯ ದರ್ಜೆ ಬೆರಳಚ್ಚು ಪಾಸ್
4. ಶೀಘ್ರಲಿಪಿಗಾರರು ಗ್ರೇಡ್-3 (Stenographer Grade-III)
- ವಿದ್ಯಾರ್ಹತೆ: PUC/ತತ್ಸಮಾನ ಪಾಸ್
- ತಾಂತ್ರಿಕ ಅರ್ಹತೆ:
- ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿ ಮತ್ತು ಬೆರಳಚ್ಚು ಹಿರಿಯ ದರ್ಜೆ ಪಾಸ್
- ಕಂಪ್ಯೂಟರ್ ಜ್ಞಾನ ಅಗತ್ಯ
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:
ಇತ್ತೀಚಿನ ದಿನಗಳಲ್ಲಿ ಅದೆಷ್ಟು ವಿದ್ಯಾರ್ಥಿಗಳ ಎದುರು ಕಾಡುತ್ತಿರುವ ಸಮಸ್ಯೆ ಏನೆಂದರೆ ವಯೋಮಿತಿ. ಹೌದು ಬಹಳಷ್ಟು ಸ್ಪರ್ಧಾತ್ಮಕ ಪರೀಕ್ಷಿಯನ್ನ ಅಟೆಂಡ್ ಮಾಡಿದರು ಸಹ ಅನೇಕ ವಿದ್ಯಾರ್ಥಿಗಳು ಅನೇಕ ಬಾರಿ ಫೇಲ್ ಆಗಿರುತ್ತಾರೆ. ಅಂತವರು ಉದ್ಯೋಗಕ್ಕಾಗಿ ಕಾದು ಕುಳಿತರೆ ತಮ್ಮ ವಯಸ್ಸು ಹೆಚ್ಚಾಗುತ್ತಾ ಹೋಗುತ್ತದೆ.
ಇಂತಹ ಸಮಸ್ಯೆಯನ್ನು ಅರಿತುಕೊಂಡ ಸರ್ಕಾರ ಈ ಬಾರಿಯ ಸರ್ಕಾರಿ ಕೆಲಸದಲ್ಲಿ ವಯೋಮಿತಿ ಸಡಿಲಿಕೆಯನ್ನ ಹೆಚ್ಚಿಸಿದೆ. ಹಾಗೆ ವಯೋಮಿತಿಯಲ್ಲಿ ವಿಶೇಷವಾದ ಅಂಶವನ್ನು ಕೂಡ ಕಲ್ಪಿಸಿದೆ. ಹಾಗಿದ್ದರೆ ಈ ಜಾಮರಾಜನಗರ ಹೈಕೋರ್ಟ್ ಹುದ್ದೆಗಳಿಗೆ (Court job) ಯಾವ ರೀತಿ ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆಯನ್ನ ನೀಡಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಈ ಕೆಳಗೆ ತಿಳಿಸಲಾಗಿದೆ.
ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ
- ಹಿಂದುಳಿದ ವರ್ಗಗಳು (2A, 2B, 3A, 3B): ಗರಿಷ್ಠ 38 ವರ್ಷ.
- ಸಾಮಾನ್ಯ ವರ್ಗ (General): ಗರಿಷ್ಠ 35 ವರ್ಷ.
- ಮಾಜಿ ಸೈನಿಕರು/ಅಂಗವಿಕಲರು: ನಿಯಮಾನುಸಾರ ಹೆಚ್ಚುವರಿ ಸಡಿಲಿಕೆ ಇರುತ್ತದೆ.
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST/Cat-1): ಗರಿಷ್ಠ 40 ವರ್ಷ.
ಈ ರೀತಿಯಲ್ಲಿ ತಿಳಿಸಲಾಗಿದೆ ವಯೋಮಿತಿ ತಿಳಿಸಲಾಗಿದೆ.
ಇಲ್ಲಿ ಗಮನಿಸಿ: ವಯೋಮಿತಿಯನ್ನು ಲೆಕ್ಕ ಹಾಕಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕವನ್ನು (13 ಏಪ್ರಿಲ್ 2026) ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತದೆ. ನಿಮ್ಮ ಜನ್ಮ ದಿನಾಂಕವನ್ನು ದೃಢೀಕರಿಸಲು ಎಸ್ಎಸ್ಎಲ್ಸಿ (SSLC) ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣಪತ್ರವನ್ನು (TC) ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಹುದ್ದೆಗಳಿಗೆ ಆಯ್ಕೆ ಮಾಡುವ ರೀತಿ-ನೀತಿ:
ಚಾಮರಾಜನಗರ ಜಿಲ್ಲಾ ನ್ಯಾಯಾಲಯದ (Court job) ಈ ನೇಮಕಾತಿಯು ಸಂಪೂರ್ಣವಾಗಿ ಅರ್ಹತೆ ಮತ್ತು ಪಾರದರ್ಶಕತೆಯ ಮೇಲೆ ಆಧಾರವಾಗಿರುವಂಥದ್ದು. ಪ್ರತಿಭಾವಂತ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ. ಇಲ್ಲಿ ಎಲ್ಲಾ ಹುದ್ದೆಗಳಿಗೂ ಒಂದೇ ರೀತಿಯ ಪರೀಕ್ಷೆ ಇರುವುದಿಲ್ಲ ಬದಲಾಗಿ ಆಯಾ ಕೆಲಸದ ಜವಾಬ್ದಾರಿಗೆ ತಕ್ಕಂತೆ ವಿಭಿನ್ನವಾದ ಮಾನದಂಡವನ್ನು ರೂಪಿಸಲಾಗಿದೆ. ವಿಶೇಷವಾಗಿ ಯಾವ ರೀತಿ ಹುದ್ದೆಗಳಿಗೆ ಆಯ್ಕೆ ಮಾಡುವ ರೀತಿ ನೀತಿಗಳನ್ನು ಈ ಕೆಳಗೆ ತಿಳಿಯಬಹುದು.
ಆಯ್ಕೆಯ 3 ಮುಖ್ಯ ಹಂತಗಳು:
- ಮೊದಲ ಹಂತದಲ್ಲಿ, ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ರೂಪಿಸಲಾಗುತ್ತದೆ. ಇದು 10ನೇ (SSLC) ಅಥವಾ ಪಿಯುಸಿ (PUC) ಪರೀಕ್ಷೆಯ ಅಂಕಗಳ ಆಧಾರವಾಗಿ ಸ್ಕ್ರೀನಿಂಗ್ ಮಾಡಲಾಗುವುದು. ಇಲ್ಲಿ 1:10 ಅಥವಾ 1:25 ರ ಅನುಪಾತದಲ್ಲಿ ಅಭ್ಯರ್ಥಿಗಳು ಆರಿಸಿಕೊಂಡು ಮುಂದಿನ ಹಂತಕ್ಕೆ ಕರೆದೊಯ್ಯಲ್ಪಡುತ್ತಾರೆ.
- ರಾಷ್ಟ್ರೀಯ ಮಟ್ಟದ ಕೌಶಲ್ಯ ಪರೀಕ್ಷೆ (Skill Test) ಹಂತದಲ್ಲಿ, ಟೈಪಿಸ್ಟ್ ಮತ್ತು ಶೀಘ್ರಲಿಪಿಗಾರರ ಹುದ್ದೆಗೆ ಅಗತ್ಯವಿರುವ ವೇಗ ಮತ್ತು ನಿಖರತೆಯನ್ನು ಪರೀಕ್ಷಿಸಲಾಗುತ್ತದೆ. ನಿಗದಿತ ಸಮಯದಲ್ಲಿ ಶೀಘ್ರವಾಗಿ ಮತ್ತು ತಪ್ಪಿಲ್ಲದೆ ಟೈಪ್ ಮಾಡುವುದು ಮುಖ್ಯ.
- ಅಂತಿಮ ಹಂತ ನೇರ ಸಂದರ್ಶನ (Interview). ಇಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ, ಜವಾಬ್ದಾರಿ ಗ್ರಹಿಸುವ ಶಕ್ತಿ, ಮತ್ತು ಕಾರ್ಯನಿಷ್ಠೆಯನ್ನು ಮೌಲ್ಯಮಾಪನ ಮಾಡಿ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಹಂತವು ಅಭ್ಯರ್ಥಿಯ ಅರ್ಹತೆ + ಕೌಶಲ್ಯ + ವ್ಯಕ್ತಿತ್ವ ಎಂಬ ಮೂರು ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸುತ್ತದೆ..
ಈ ಸರ್ಕಾರೀ ಕೆಲಸದಲ್ಲಿ ನೀವು ಪಡೆವ ಸಂಬಳ :-
ಸರ್ಕಾರಿ ಉದ್ಯೋಗ (Court job) ಎಂದರೆ ಕೇವಲ ಕೆಲಸವಲ್ಲ, ಸ್ಥಿರತೆ + ಗೌರವ + ಚೆಕ್ಬುಕ್ ಭದ್ರತೆ ಒಂದು ಪುಟ್ಟ ಪ್ಯಾಕೇಜ್! ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನೇಮಕಾತಿಯಲ್ಲಿ ನೀವು ಕೇವಲ ಡೆಸ್ಕ್ ಮೇಲೆ ಕೆಲಸ ಮಾಡುವುದಕ್ಕೆಲ್ಲ ಅಲ್ಲ, ಪ್ರಾರಂಭಿಕ ವೇತನದ ಭರ್ಜರಿ ಶ್ರೇಣಿಯೂ ಸಿಗುತ್ತದೆ. ಆಯ್ಕೆಯು ನಿಮ್ಮ ಹುದ್ದೆಗೆ ಅನುಗುಣವಾಗಿ, ಮಾಸಿಕ ವೇತನ + ವಿವಿಧ ಭತ್ಯೆಗಳು ಸೇರಿ ನಿಮ್ಮ ಖಾತೆಯಲ್ಲಿ ನೇರವಾಗಿ ಸಿಗುತ್ತದೆ.
ಗಮನವಿಟ್ಟು ಇಲ್ಲಿ ನೋಡಿ!
| ಹುದ್ದೆ(Court job) | ಮಾಸಿಕ ವೇತನ ಶ್ರೇಣಿ |
|---|---|
| ಶೀಘ್ರಲಿಪಿಗಾರರು ಗ್ರೇಡ್-III | ರೂ. 44,425 – ರೂ. 83,700 |
| ಬೆರಳಚ್ಚುಗಾರರು (Typist) | ರೂ. 34,100 – ರೂ. 67,600 |
| ಬೆರಳಚ್ಚು ನಕಲುಗಾರರು (Typist-Copyist) | ರೂ. 34,100 – ರೂ. 67,600 |
| ಸೇವಕರು (Peon) | ರೂ. 27,000 – ರೂ. 46,675 |
- ಇಷ್ಟೇ ಅಲ್ಲದೆ ಇತರ ಭತ್ಯೆಗಳು ಸಿಗುಗತ್ತೆ
ಅರ್ಜಿ ಶುಲ್ಕ :-
ಯಾವುದೇ ಸರ್ಕಾರಿ ನೇಮಕಾತಿಯಲ್ಲಿ (Court job) ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸುವುದು ಅಗತ್ಯವಾಗುತ್ತದೆ. ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಈ ನೇಮಕಾತಿಯಲ್ಲೂ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ ವಿಭಿನ್ನ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಈ ಶುಲ್ಕವನ್ನು ಪಾವತಿಸುವುದರಿಂದ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಹಾಗೂ ಅಭ್ಯರ್ಥಿಯ ಅರ್ಜಿ ಮಾನ್ಯವಾಗುತ್ತದೆ. ಆದ್ದರಿಂದ, ಅರ್ಜಿ ಸಲ್ಲಿಸುವ ಮೊದಲು ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಸರಿಯಾಗಿ ಪರಿಶೀಲಿಸಿ ಪಾವತಿಸುವುದು ಬಹಳ ಮುಖ್ಯ.
- ಸರ್ಕಾರದ ನಿಯಮಾವಳಿಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗದ ಜೊತೆಗೆ 2A, 2B, 3A ಮತ್ತು 3B ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ರೂ. 200/- ಶುಲ್ಕವನ್ನು ಪಾವತಿಸಬೇಕು.
- ಸಮಾಜದ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಪೂರ್ಣ ವಿನಾಯಿತಿ ನೀಡಲಾಗಿದೆ. ಅಂದರೆ, ಈ ವರ್ಗದ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸದೇ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:
- ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಈ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
- ಖುದ್ದಾಗಿ, ಅಂಚೆ ಮೂಲಕ ಅಥವಾ ಬೇರೆ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
- ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಗಳು ವೈಯಕ್ತಿಕ ವಿವರಗಳು, ವಿದ್ಯಾರ್ಹತೆ ಮತ್ತು ಸಂಪರ್ಕ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು.
- ಸೂಚಿಸಿರುವಂತೆ ಅಗತ್ಯವಾದ ದಾಖಲೆಗಳನ್ನು (Documents) ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು.
- ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳಲು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸುವುದು ಕಡ್ಡಾಯ.
- ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ (UPI) ಮೂಲಕ ಪಾವತಿಸಬಹುದು.
- ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್/ಕಾಪಿಯನ್ನು ಡೌನ್ಲೋಡ್ ಮಾಡಿ ಉಳಿಸಿಕೊಳ್ಳುವುದು ಉತ್ತಮ.
- ತಪ್ಪು ಮಾಹಿತಿ ನೀಡಿದರೆ ಅಥವಾ ಅಪೂರ್ಣ ಅರ್ಜಿ ಸಲ್ಲಿಸಿದರೆ ಅರ್ಜಿಯನ್ನು ಅಮಾನ್ಯಗೊಳಿಸುವ ಸಾಧ್ಯತೆ ಇದೆ.
- ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಎಲ್ಲ ವಿವರಗಳನ್ನು ಚೆನ್ನಾಗಿ ಪರಿಶೀಲಿಸಿ ಸಲ್ಲಿಸುವುದು ಅತ್ಯಂತ ಮುಖ್ಯ.
ಪ್ರಮುಖ ದಿನಾಂಕಗಳು:
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 13-03-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-04-2026 (ರಾತ್ರಿ 11:59 ರವರೆಗೆ)
- ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಲು ಕೊನೆಯ ದಿನಾಂಕ: 16-04-2026
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ, ಏಕೆಂದರೆ ಕೊನೆಯ ದಿನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
ಈ ಹುದ್ದೆಯ ಪ್ರಮುಖ ಲಿಂಕುಗಳು:
| ಅಧಿಸೂಚನೆ (ಸ್ಟೆನೋಗ್ರಾಫರ್) | ಇಲ್ಲಿ ಕ್ಲಿಕ್ ಮಾಡಿ |
| ಅಧಿಸೂಚನೆ (ಟೈಪಿಸ್ಟ್) | ಇಲ್ಲಿ ಕ್ಲಿಕ್ ಮಾಡಿ |
| ಅಧಿಸೂಚನೆ (ಟೈಪಿಸ್ಟ್ ನಕಲುಗಾರ) | ಇಲ್ಲಿ ಕ್ಲಿಕ್ ಮಾಡಿ |
| ಅಧಿಸೂಚನೆ (ಪಿಇಒನ್) | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ಮಾರ್ಚ್ 13 ರಿಂದ ಪ್ರಾರಂಭ |
ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು:
ಉತ್ತರ: ಅರ್ಹ ಅಭ್ಯರ್ಥಿಗಳು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಉತ್ತರ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13 ಏಪ್ರಿಲ್ 2026 (ರಾತ್ರಿ 11:59)
ಉತ್ತರ: ಆಯ್ಕೆಯಾದ ಅಭ್ಯರ್ಥಿಗಳಿಗೆ ಚಾಮರಾಜನಗರ ಜಿಲ್ಲೆಯಲ್ಲಿಯೇ ಕೆಲಸ ಮಾಡಲು ಅವಕಾಶ ಸಿಗುತ್ತದೆ.
ಇತರೆ ಸರ್ಕಾರೀ ಹುದ್ದೆಗಳ ಪ್ರಮುಖ ಲಿಂಕುಗಳು:
- CMS Bank: ₹52,650 ವೇತನ! ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಭರ್ಜರಿ ನೇಮಕಾತಿ 2026
- Police Department : ಪೊಲೀಸ್ ಇಲಾಖೆ ನೇಮಕಾತಿ 2026 : ಸಂಪೂರ್ಣ ಮಾಹಿತಿ!
- Fireman Recruitment 2026: SSLC ಅರ್ಹತೆ – 1600ಕ್ಕೂ ಹೆಚ್ಚು ಹುದ್ದೆಗಳು, ಈಗಲೇ ಸಿದ್ಧತೆ ಆರಂಭಿಸಿ!
- DHFWS: ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ! ಜಸ್ಟ್ 10th ಪಾಸ್ ಆಗಿದ್ರೆ ಸಾಕು ಸರ್ಕಾರಿ ಉದ್ಯೋಗಾವಕಾಶ!


Habbanakuppe village Chilkunda post hunsur t Mysore d
Sevakaru hudde