ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ! ಸರ್ಕಾರದಿಂದ ₹2.5 ಲಕ್ಷ ಸಾಲ + 35% ಸಬ್ಸಿಡಿ । Chief Minister Employment Generation Scheme 2026

Chief Minister Employment Generation Scheme

ನೀವೇನಾದರೂ ಸ್ವಂತ ಉದ್ಯೋಗ ಮಾಡಲು ಇಚ್ಛಿಸುತ್ತಿದೀರ? ಹಾಗಿದ್ದರೆ ಇಲ್ಲಿದೆ ನೋಡಿ ಭರ್ಜರಿ ಗುಡ್ ನ್ಯೂಸ್. ಕರ್ನಾಟಕ ಸರ್ಕಾರವು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೊಳಿಸಿದೆ.

Chief Minister Employment Generation Scheme 2026

ಗ್ರಾಮೀಣ ನಿರುದ್ಯೋಗಿ ಯುವಕ- ಯುವತಿಯರು ಸ್ವಂತವಾಗಿ ಕೈಗಾರಿಕೆ ಅಥವಾ ಸ್ವಂತ ಉದ್ಯಮವನ್ನು ಸ್ಥಾಪಿಸಲು ಆರ್ಥಿಕ ನೆರವನ್ನು ಜೊತೆಗೆ ಸಬ್ಸಿಡಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು, ಅಗತ್ಯದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಕಂಡಂತಿದೆ, ಅದನ್ನು ಓದಿಕೊಳ್ಳಿ. ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿದ್ದರೆ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿನೀಡಿ.

ಯೋಜನೆಯ ಅವಲೋಕನ:(Chief Minister Employment Generation Scheme 2026)

ಯೋಜನೆಯ ಹೆಸರು ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆ
ಅರ್ಹ ಫಲಾನುಭವಿಗಳು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು
ಒಟ್ಟು ಪ್ರೋತ್ಸಾಹಧನ ಒಟ್ಟು ಸಾಲದ ಮೇಲೆ 25% ಇಂದ 35% ಸಬ್ಸಿಡಿ
ಅಧಿಕೃತ ವೆಬ್ ಸೈಟ್ https://maha-cmegp.gov.in/
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್
Chief Minister Employment Generation Scheme 2026

ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಸರ್ಕಾರವು ಆಗಸ್ಟ್ 1, 2019 ರಲ್ಲಿ ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಸ್ವಂತ ಉದ್ಯೋಗವನ್ನು ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಒಟ್ಟು ಯೋಜನಾ ವೆಚ್ಚದ ಮೇಲೆ ಸಾಮಾನ್ಯ ವರ್ಗಗಳಿಗೆ 25% ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಹಾಗೂ ವಿಕಲಚೇತನರಿಗೆ 35% ಸಬ್ಸಿಡಿ ನೀಡಲಾಗುವುದು.

ಯೋಜನೆಯ ಉದ್ದೇಶ: Chief Minister Employment Generation Scheme 2026

  • ಗ್ರಾಮೀಣ ಭಾಗದ ಯುವಕ- ಯುವತಿಯರು ಉದ್ಯೋಗಕ್ಕಾಗಿ ಬೇರೆಯವರನ್ನು ಅವಲಂಬಿತರಾಗದೆ, ಸ್ವಂತ ಉದ್ಯೋಗವನ್ನು ಪ್ರಾರಂಭಿಸುವಂತೆ ಉತ್ತೇಜಿಸುವುದು.
  • ಗ್ರಾಮೀಣ ಪ್ರದೇಶಗಳಲ್ಲಿ ಯುವಕ- ಯುವತಿಯರಿಗೆ ಕೈಗಾರಿಕಾ ಉದ್ಯೋಗಗಳನ್ನು ಮಾಡುವಂತೆ ಪ್ರೇರೇಪಿಸುವ ಮೂಲಕ ಉದ್ಯೋಗವನ್ನು ಹುಡುಕುತ್ತ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು.
  • ಉದ್ಯೋಗವನ್ನು ಪ್ರಾರಂಭಿಸಲು ಹಣಕಾಸಿನ ಸಮಸ್ಯೆ ಇರುವವರಿಗೆ ಸಾಲದ ಸೌಲಭ್ಯವನ್ನು ಒದಗಿಸುವುದರ ಜೊತೆಗೆ ಸಬ್ಸಿಡಿ ರೂಪದಲ್ಲಿ ಹಣಕಾಸಿನ ನೆರವನ್ನು ನೀಡುವುದು.
  • ಗ್ರಾಮೀಣ ಭಾಗದ ಯುವಕ- ಯುವತಿಯರ ಉದ್ಯಮಶೀಲತೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸಲು ತರಬೇತಿಗಳನ್ನು ನೀಡಿ ಅವರಿಗೆ ಪ್ರೋತ್ಸಾಹ ನೀಡುವುದು.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಹಾಗೂ ವಿಕಲಚೇತನರಿಗೆ ವಿಶೇಷ ರಿಯಾಯಿತಿಯನ್ನು ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು.

ಯೋಜನೆಯ ಪ್ರಯೋಜನ:

ಸಾಲದ ಮಿತಿ:

  • ಸೇವಾ ವಲಯ ಹಾಗೂ ಉತ್ಪಾದನಾ ವಲಯದ ಯೋಜನೆಗಳಿಗೆ ಒಟ್ಟು ₹10 ಲಕ್ಷದಿಂದ ₹25 ಲಕ್ಷದ ವರೆಗೆ ಸಾಲ ಸೌಲಭ್ಯ ಲಭ್ಯವಿದೆ.

ಸಬ್ಸಿಡಿ ದರ:

  • ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಒಟ್ಟು ಯೋಜನಾ ವೆಚ್ಚ 2.5 ಲಕ್ಷದ ಮೇಲೆ 25% ಸಬ್ಸಿಡಿ ಸೌಲಭ್ಯ ನೀಡಲಾಗಿದೆ.
  • SC/ST/OBC/ಮಹಿಳೆಯರು/ಹಿಂದುಳಿದ ವರ್ಗದವರು/ ಅಲ್ಪಸಂಖ್ಯಾತರು/ ಮಾಜಿ ಸೈನಿಕರಿಗೆ ಒಟ್ಟು ಯೋಜನಾ ವೆಚ್ಚ 3.5 ಲಕ್ಷದ ಮೇಲೆ 35% ಸಬ್ಸಿಡಿ ಸೌಲಭ್ಯ ನೀಡಲಾಗಿದೆ.

ಉಚಿತ ತರಬೇತಿ:

  • ಸಾಲ ಮಂಜೂರಾದ ತಕ್ಷಣ ಸರ್ಕಾರದಿಂದ ಫಲಾನುಭವಿಗಳಿಗೆ ಉಚಿತ ಉದ್ಯಮಶೀಲ ತರಬೇತಿಯನ್ನು ನೀಡಲಾಗುವುದು.

ಹೂಡಿಕೆಯ ಪ್ರಮಾಣ ಕಡಿಮೆ:

  • ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಾಮಾನ್ಯ ವರ್ಗದವರು 10% ಹಾಗೂ ವಿಶಿಷ್ಟ ವರ್ಗದವರು ( SC/ST/ OBC/ಮಹಿಳೆಯರು/ಹಿಂದುಳಿದ ವರ್ಗದವರು/ ಅಲ್ಪಸಂಖ್ಯಾತರು/ ಮಾಜಿ ಸೈನಿಕರು) 5% ಹಣವನ್ನು ಹೂಡಿಕೆ ಮಾಡಿದರೆ ಸಾಕಾಗುತ್ತದೆ

ಯಾವ ಉದ್ಯಮಗಳಿಗೆ ಸಾಲಸೌಲಭ್ಯ ದೊರೆಯುತ್ತದೆ?

  • ಉತ್ಪಾದನಾ ಉದ್ಯಮಗಳು:

ಪೀಠೋಪಕರಣ ತಯಾರಿಕೆ, ಪೇಪರ್ ಉತ್ಪನ್ನಗಳ ತಯಾರಿಕೆ, ಕಟ್ಟಡ ಸಾಮಗ್ರಿಗಳ ತಯಾರಿಕೆ, ಅಗರಬತ್ತಿ ತಯಾರಿಕೆ ಮತ್ತು ಜವಳಿ ಉದ್ಯಮ

  • ಕೃಷಿ ಆಧಾರಿತ ಉದ್ಯಮಗಳು:

ಹಿಟ್ಟಿನ ಗಿರಣಿ, ಬೇಳೆಕಾಳುಗಳ ಸಂಸ್ಕರಣೆ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ, ಹಾಲು ಉತ್ಪನ್ನ ಮತ್ತು ಮಸಾಲ ತಯಾರಿಕೆ

  • ಜವಳಿ ಮತ್ತು ಉಡುಪು:

ನೂಲು ತಯಾರಿಕೆ, ಪ್ರಿಂಟಿಂಗ್ ಉದ್ಯಮ ಮತ್ತು ಪವರ್ ಲೂಮ್ ಘಟಕ

  • ಸೇವಾ ವಲಯದ ಉದ್ಯಮ

ಹೇರ್ ಸಲೂನ್, ಮೆಕ್ಯಾನಿಕ್ ಗ್ಯಾರೇಜ್, ಕಂಪ್ಯೂಟರ್ ಸೇವೆ, ಬ್ಯೂಟಿ ಪಾರ್ಲರ್, ಕ್ಯಾಟರಿಂಗ್, ಹೋಟಲ್ ಉದ್ಯಮ ಮತ್ತು ಫೋಟೋ ಸ್ಟುಡಿಯೋ

ಅರ್ಹತಾ ಮಾನದಂಡ: Chief Minister Employment Generation Scheme 2026

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಕನಿಷ್ಠ 18 ವರ್ಷದಿಂದ 45 ವರ್ಷದ ಒಳಗೆ ವಯೋಮಿತಿಯನ್ನು ಹೊಂದಿರಬೇಕು.
  • ವಿಶಿಷ್ಟ ವರ್ಗದವರಿಗೆ ( SC/ST/OBC/ಮಹಿಳೆಯರು/ಹಿಂದುಳಿದ ವರ್ಗದವರು/ ಅಲ್ಪಸಂಖ್ಯಾತರು/ ಮಾಜಿ ಸೈನಿಕರು) 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
  • 10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗಳಿಗೆ ಕನಿಷ್ಠ 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • 25% ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗೆ ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • ಈ ಯೋಜನೆಯು ಹೊಸ ಉದ್ಯಮಗಳಿಗಷ್ಟೇ ಅನ್ವಹಿಸುತ್ತದೆ.
  • ಈ ಯೋಜನೆಯ ಲಾಭ ಪಡೆದುಕೊಳ್ಳಬೇಕಾದರೆ ಯಾವುದೇ ಆದಾಯದ ಮಿತಿ ಇರುವುದಿಲ್ಲ.
  • ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರು ಮಾತ್ರ ಅರ್ಹರಾಗಿರುತ್ತಾರೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಯೋಜನಾ ವರದಿ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆಯ ವಿವರ
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಮೊಬೈಲ್ ಸಂಖ್ಯೆ

ಇತರೆ ದಾಖಲೆಗಳು.

ಅರ್ಜಿ ಸಲ್ಲಿಸುವ ವಿಧಾನ: Chief Minister Employment Generation Scheme 2026

  • ಅಧಿಕೃತ PMEGP ವೆಬ್ ಸೈಟ್ https://maha-cmegp.gov.in/ ಗೆ ಭೇಟಿನೀಡಿ
  • ಅಪ್ಲೈ ಆನ್ಲೈನ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಆಧಾರ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಂತರ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ
  • ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ

ವಿಶೇಷ ಸೂಚನೆ:

  • ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
  • ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಅಥವಾ ಇತರೆ ಯೋಜನೆಗಳ ಅಡಿಯಲ್ಲಿ ಸಾಲವನ್ನು ಪಡೆದವರು ಅಥವಾ ಇತರೆ ಸೌಲಭ್ಯವನ್ನು ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ತೀರ್ಮಾನ:

ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ಉದ್ದೇಶದಿಂದ ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಫಲಾನುಭವಿಗಳು ಸಾಲ ಮಂಜೂರಾದ ಮೇಲೆ ಉದ್ಯಮಶೀಲತಾ ತರಬೇತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.


ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *