ಅಜೀಮ್ ಪ್ರೇಮ್ ಜಿ ವಿದ್ಯಾರ್ಥಿವೇತನದಡಿಯಲ್ಲಿ ಪಡೆಯಿರಿ ₹30,000 ವಿದ್ಯಾರ್ಥಿವೇತನ | Azim Premji Scholarship 2026

Azim Premji Scholarship 2026

ಗ್ರಾಮೀಣ ಭಾಗದಲ್ಲಿರುವ ಮತ್ತು ದುರ್ಬಲ ವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳು ಹಣಕಾಸಿನ ಸಮಸ್ಯೆ ಇಲ್ಲದೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಅಜಿಮ್ ಪ್ರೇಮ್ ಜಿ ಫೌಂಡೇಷನ್ ವತಿಯಿಂದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಕೂಡ ಪ್ರಾರಂಭಗೊಂಡಿದೆ.

Azim Premji Scholarship 2026

ಡಿಪ್ಲೋಮಾ ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿನೀಯರು ಅಜೀಮ್ ಪ್ರೇಮ್ ಜಿ ವಿದ್ಯಾರ್ಥಿವೇತನದ ಅಡಿಯಲ್ಲಿ ರೂ. 30,000 ವರೆಗೆ ವೇತನವನ್ನು ಪಡೆಯುತ್ತಾರೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆಗಳೇನು? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಅಜೀಮ್ ಪ್ರೇಮ್ ಜಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಜನವರಿ 10, 2026 ರಿಂದ ಜನವರಿ 31, 2026 ರ ವರೆಗೂ ಅವಕಾಶವಿದ್ದು, ಅರ್ಜಿಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿನೀಡಿ.

ವಿದ್ಯಾರ್ಥಿವೇತನದ ಅವಲೋಕ: Azim Premji Scholarship 2026

ವಿದ್ಯಾರ್ಥಿ ವೇತನದ ಹೆಸರು ಅಜೀಮ್ ಪ್ರೇಮ್ ಜಿ ವಿದ್ಯಾರ್ಥಿವೇತನ
ಅರ್ಹ ಫಲಾನುಭವಿಗಳು ವಿದ್ಯಾರ್ಥಿನೀಯರು
ವಿದ್ಯಾರ್ಥಿ ವೇತನದ ಮೊತ್ತ ವಾರ್ಷಿಕ ₹30,000
ಶೈಕ್ಷಣಿಕ ವರ್ಷ 2025-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2026
Azim Premji Scholarship 2026

ವಿದ್ಯಾರ್ಥಿವೇತನದ ಕುರಿತು:

ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ವಿಪ್ರೋ ಸಂಸ್ಥೆಯ ವ್ಯವಸ್ಥಾಪಕರಾದ ಅಜೀಮ್ ಪ್ರೇಮ್ ಜಿ ಯವರು ಅಜೀಮ್ ಪ್ರೇಮ್ ಜಿ ಫೌಂಡೇಷನ್ ವತಿಯಿಂದ ಈ ಒಂದು ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಇದು ಕೇವಲ ಹಣಕಾಸಿನ ನೆರವು ಮಾತ್ರವಲ್ಲದೆ, ವಿದ್ಯಾರ್ಥಿನೀಯರು ಉನ್ನತ ಶಿಕ್ಷಣವನ್ನು ಪಡೆದು ಸ್ವಾವಲಂಬಿಯಾಗಿ ಬದುಕಲು ಇದು ಸಹಾಯವನ್ನು ಮಾಡುತ್ತದೆ.

ವಿದ್ಯಾರ್ಥಿವೇತನವನ್ನು ನೀಡುವ ಉದ್ದೇಶ: Azim Premji Scholarship 2026

  • ವಿದ್ಯಾರ್ಥಿನೀಯರು ಉನ್ನತ ಶಿಕ್ಷಣವನ್ನು ಪಡೆಯಲು ಉತ್ತೇಜಿಸುವುದು.
  • ವಿದ್ಯಾರ್ಥಿವೇತನದಡಿಯಲ್ಲಿ, ಹಣಕಾಸಿನ ಸಹಾಯವನ್ನು ಮಾಡಿ ವಿದ್ಯಾರ್ಥಿನೀಯರು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಸಮಸ್ಯೆಯನ್ನು ಕಡಿಮೆ ಮಾಡುವುದು.
  • ಖಾಸಗಿ ಕಾಲೇಜಿನ ವಿದ್ಯಾರ್ಥಿನೀಯರಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿನೀಯರಿಗೂ ಸಮಾನ ಶಿಕ್ಷಣವನ್ನು ಪಡೆದುಕೊಳ್ಳುವುದು.

ವಿದ್ಯಾರ್ಥಿವೇತನದಿಂದ ಆಗುವ ಪ್ರಯೋಜನ:

  • ಈ ಒಂದು ವಿದ್ಯಾರ್ಥಿ ವೇತನದಡಿಯಲ್ಲಿ, ವಿದ್ಯಾರ್ಥಿನೀಯರು ತಮ್ಮ ಪದವಿ ಅಥವಾ ಡಿಪ್ಲೊಮಾ ಕೋರ್ಸ್ ಪೂರ್ಣಗೊಳ್ಳುವ ವರೆಗೆ ವಾರ್ಷಿಕ ₹30,000 ವೇತನವನ್ನು ಪಡೆದುಕೊಳ್ಳಬಹುದು.
  • ವಿದ್ಯಾರ್ಥಿನೀಯರು ಸಮಾನ ಶಿಕ್ಷಣವನ್ನು ಪಡೆಯಬಹುದು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಬಹುದು.

ಅರ್ಹತಾ ಮಾನದಂಡ: Azim Premji Scholarship 2026

  • ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿನೀಯರು 10 ನೇ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2025-26 ನೇ ಸಾಲಿನಲ್ಲಿ ಮೊದಲ ವರ್ಷದ ಪದವಿಪೂರ್ವ ಅಥವಾ ಡಿಪ್ಲೋಮ ಕೋರ್ಸ್ ಗೆ ಪ್ರವೇಶ ಪಡೆದುಕೊಂಡಿರಬೇಕು.

ಅರ್ಜಿ ಸಲ್ಲಿಸಲು ಅರ್ಹಗೊಂಡ ರಾಜ್ಯಗಳು:

ಅರುಣಾಚಲ ಪ್ರದೇಶ, ಬಿಹಾರ, ಅಸ್ಸಾಂ, ಜಾರ್ಖಂಡ್, ಛತ್ತೀಸ್ಗಢ, ಮಧ್ಯಪ್ರದೇಶ, ಕರ್ನಾಟಕ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪುದಚೇರಿ, ರಾಜಸ್ತಾನ್, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ.

ಅಗತ್ಯ ದಾಖಲೆಗಳು: Azim Premji Scholarship 2026

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಪಾಸ್ ಪುಸ್ತಕ
  • ಕಾಲೇಜು ಸೇರ್ಪಡೆಯ ಪುರಾವೆ
  • 10 ನೇ ತರಗತಿಯ ಅಂಕಪಟ್ಟಿ
  • 12ನೇ ತರಗತಿಯ ಅಂಕಪಟ್ಟಿ
  • ಮೊಬೈಲ್ ನಂಬರ್
  • ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ಕ್ರಿಯೇಟ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ
  • ಆಧಾರ್ ಸಂಖ್ಯೆಯನ್ನು ಮತ್ತು ಹೆಸರನ್ನು ನಮೂದಿಸಿ
  • ನಿಮ್ಮ ಮೊಬೈಲ್ ಗೆ ಬರುವ OTP ಯನ್ನು ನಮೂದಿಸಿ
  • ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕ: Azim Premji Scholarship 2026

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 10-01-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2026
Azim Premji Scholarship 2026

ಪ್ರಮುಖ ಲಿಂಕ್: Vidyasiri Scholarship 2026 In Kannada

ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ಪ್ರಕ್ರಿಯೆ:

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹ ಅಭ್ಯರ್ಥಿಯರನ್ನು ಕೆಲವು ಮಾನದಂಡಗಳ ಪ್ರಕಾರ ಆಯ್ಕೆ ಮಾಡಲಾಗುವುದು.

ಅಂತಿಮ ತೀರ್ಮಾನ:

ಅಜಿಮ್ ಪ್ರೇಮ್ ಜಿ ಫೌಂಡೇಷನ್ ವತಿಯಿಂದ ಅಜಿಮ್ ಪ್ರೇಮ್ ಜಿ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿನೀಯರಿಗೆ ಅವಕಾಶವಿದ್ದು, ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು 31-01-2026 ಕೊನೆಯ ದಿನಾಂಕವಾಗಿದೆ. ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ ಉತ್ತಮ ಶಿಕ್ಷಣವನ್ನು ತಮ್ಮದಾಗಿಸಿಕೊಳ್ಳಿ.

ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *