ಹೊಸ ಜಮೀನು ಖರೀದಿಗೆ ಮುನ್ನ ಇದನ್ನು ತಿಳ್ಕೊಳಿ! ಮ್ಯುಟೇಷನ್ ಎಂದರೇನು? ಇದನ್ನು ಹೇಗೆ ಮಾಡಿಸುವುದು! ಎಷ್ಟು ದಿನ ಬೇಕು?

Automatic Mutation information in Karnataka

ಕರ್ನಾಟಕ ರಾಜ್ಯದಲ್ಲಿ ಭೂ ದಾಖಲೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಾದ್ಯಂತ ಸ್ವಯಂ ಚಾಲಿತವಾಗಿ ಮ್ಯುಟೇಷನ್ (Automatic Mutation) ವ್ಯವಸ್ಥೆಗೆ ಚಾಲನೆಯನ್ನು ನೀಡಿದ್ದು ಇನ್ನು ಮುಂದೆ ಖಾತೆ ಬದಲಾವಣೆಗಾಗಿ ಕಚೇರಿಗಳ ಸುತ್ತಾಟ ಹಾಗೂ ಅಲೆದಾಟ ಬೇಡ ಅಂತ ಮಾಹಿತಿಯನ್ನು ತಿಳಿಸಿದ್ದಾರೆ.

Automatic Mutation information in Karnataka

30 ದಿನಗಳ ಒಳಗಾಗಿ ನೋಟಿಸ್ ಅವಧಿ ಮುಗಿದ ಕೂಡಲೇ ಆನ್ಲೈನ್ ಮುಖಾಂತರವೇ ಮ್ಯುಟೇಶನ್ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದೇವೆ ಅನ್ನುವ ಮಾಹಿತಿ ಇದೀಗ ಹೇಳಿದ್ದಾರೆ ಈ ವ್ಯವಸ್ಥೆಯನ್ನ ಭೂಮಿ ಪೋರ್ಟಲ್ ಮೂಲಕ ಜನರು ನೇರವಾಗಿ ವೀಕ್ಷಿಸಬಹುದಾಗಿದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.

ಮ್ಯುಟೇಷನ್ ಎಂದರೆ ಏನು?

ಮ್ಯುಟೇಷನ್ ಅಂದ್ರೆ ಭೂಮಿ ಅಥವಾ ಆಸ್ತಿಯ ಮಾಲೀಕತ್ವದಲ್ಲಿ ಬದಲಾವಣೆ ಸಂಭವಿಸಿದಾಗ ( ಖರೀದಿದಾರ ಅಥವಾ ದಾನ, ಹಂಚಿಕೆ, ವಾರಸುದಾರಿಕೆ) ಬದಲಾವಣೆಯನ್ನು ಸರ್ಕಾರದ ಭೂ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಮ್ಯುಟೇಷನ್ ಅಂತ ಕರೆಯಲಾಗುತ್ತದೆ.

Automatic Mutation information in Karnataka

ಮ್ಯುಟೇಷನ್ ಮುಖ್ಯ ಉದ್ದೇಶ:

  • ಆಸ್ತಿ ಮಾಲಿಕತ್ವದ ಸರಿಯಾದ ದಾಖಲೆಗಳನ್ನು ನಿರ್ವಹಣೆ ಮಾಡುವುದು
  • ತೆರಿಗೆ ಮತ್ತು ಕಂದಾಯ ಪಾವತಿಯನ್ನು ಸರಿಯಾದ ವ್ಯಕ್ತಿಯಿಂದ ಸಂಗ್ರಹಿಸುವ ಕೆಲಸವನ್ನು ನಿರ್ವಹಿಸುವುದು
  • ಭೂ ವಿವಾದವನ್ನು ಕಡಿಮೆ ಮಾಡುವುದು
  • ಪಾರದರ್ಶಕ ಮತ್ತು ವೇಗದ ಸೇವೆಯನ್ನು ಒದಗಿಸುವ ಉದ್ದೇಶ

ಮ್ಯುಟೇಷನ್ ಯಾರಿಗೆ ಉಪಯುಕ್ತವಾಗಲಿದೆ:

  • ವಾರಸುದಾರರು ಹಾಗೂ ಆಸ್ತಿ ಹಂಚಿಕೆ ಮಾಡಿಕೊಂಡವರು
  • ಭೂಮಿ ಅಥವಾ ಸೈಟ್ ಖರೀದಿಸಿದವರು
  • ದಾನ ಪತ್ರ ಅಥವಾ ಗಿಫ್ಟ್ ಡಿಡ್ ಮೂಲಕ ಆಸ್ತಿ ಪಡೆದವರು
  • ಗೃಹ ನಿರ್ಮಾಣ ಸಾಲ ಪಡೆದವರು

ಮ್ಯುಟೇಷನ್ ಲಾಭಗಳು:

ಈ ಕೆಳಗೆ ಮ್ಯುಟೇಷನ್ (Automatic Mutation) ಲಾಭಗಳನ್ನು ನೀಡಲಾಗಿದ್ದು ಒಂದೊಂದು ವಿವಿಧ ಹಂತಗಳಲ್ಲಿ ಈ ಲಾಭಗಳನ್ನು ನೋಡಬಹುದು

  • ಕಚೇರಿಗಳ ಅಲೆದಾಟಕ್ಕೆ ಅಂತ್ಯವನ್ನು ಹಾಡುವುದು
  • ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ
  • 30 ದಿನಗಳ ನಂತರ ಸ್ವಯಂ ಚಾಲಿತವಾಗಿ ಅನುಮೋದನೆ ಯಾಗುತ್ತದೆ
  • ಕೃಷಿ ಮತ್ತು ಕೃಷಿಯೇತರ ಜಮೀನುಗಳಿಗೆ ಅನ್ವಯವಾಗುತ್ತದೆ
  • ಆನ್ಲೈನ್ ಟ್ರ್ಯಾಕಿಂಗ್ ಸೌಲಭ್ಯ ಇರುತ್ತದೆ

ಮ್ಯುಟೇಷನ್ ಮಾಡಿಸಲು ಯಾರು ಅರ್ಹರು?

  • ನೊಂದಾಯಿತ ಮಾರಾಟ ಪತ್ರ ಹೊಂದಿರುವವರು
  • ಕಾನೂನು ಬದ್ಧ ದಾಖಲೆ ಹೊಂದಿರುವವರು
  • ವಾರಸುದಾರರಾಗಿ ಸಾಬೀತಾದವರು
  • ನ್ಯಾಯಾಲಯದ ಆದೇಶ ಹೊಂದಿದವರು

ಇನ್ನಿತರರು ಅರ್ಹತೆಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದು

ಮ್ಯುಟೇಷನ್ ಮಾಡಿಸುವುದು ಹೇಗೆ?

  • ಆಸ್ತಿ ಖರೀದಿ ಅಥವಾ ಹಸ್ತಾಂತರ ದಾಖಲೆ ನೋಂದಣಿಯನ್ನು ಮಾಡಿಸಬೇಕು
  • ದಾಖಲೆಗಳು ಸ್ವಯಂ ಚಾಲಿತವಾಗಿ ಭೂಮಿ ಪೋರ್ಟಲ್ ಗೆ ಸೇರಿರುತ್ತದೆ
  • 30 ದಿನಗಳ ನೋಟಿಸ್ ಅವಧಿ
  • ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಸ್ವಯಂ ಚಾಲಿತವಾಗಿರುತ್ತದೆ

ಮ್ಯುಟೇಷನ್ ಗೆ (Automatic Mutation) ಎಲ್ಲಿ ಅರ್ಜಿ ಸಲ್ಲಿಸಬೇಕು?

  • Bhoomi ಅಧಿಕೃತ ವೆಬ್ಸೈಟ್
  • ನಾಡಕಚೇರಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ
  • ಸಬ್ ರಿಜಿಸ್ಟರ್ ಕಚೇರಿ ಮೂಲಕ ನಂದಡಿ ನಂತರ ಸ್ವಯಂ ಚಾರಿತವಾಗಿ ಪ್ರಕ್ರಿಯೆ ಶುರುವಾಗುತ್ತದೆ

ಮ್ಯುಟೇಷನ್ ಬಗ್ಗೆ ಇರುವ ಅಪಪ್ರಚಾರಗಳು:

  • ಮಧ್ಯವರ್ತಿಗಳಿಲ್ಲದೆ ಆಗುವುದಿಲ್ಲ – ಈಗ ಅಗತ್ಯವಿಲ್ಲ
  • ವರ್ಷಗಳ ಕಾಲ ತಡವಾಗುತ್ತದೆ – ಈಗ ಸ್ವಯಂ ಚಾಲಿತ ವ್ಯವಸ್ಥೆ
  • ಮ್ಯುಟೇಷನ್ ಮಾಡಿಸದಿದ್ದರೂ ಸಮಸ್ಯೆ ಇಲ್ಲ – ತಪ್ಪು ಮಾಹಿತಿ

ಮ್ಯುಟೇಷನ್ ಬಗ್ಗೆ ಸೂಚನೆ:

ನೋಟಿಸ್ ಅವಧಿ ಗಮನದಲ್ಲಿರಬೇಕಾಗುತ್ತದೆ, ಆಸ್ತಿ ಕರೆದಿಸಿದ ತಕ್ಷಣ ಆರ್‌ಟಿಸಿ ಪರಿಶೀಲನೆ ಮಾಡಬೇಕು ,ಎಸ್ಎಂಎಸ್ ಆನ್ಲೈನ್ ಅಪ್ಡೇಟಿಗಾಗಿ ಪರಿಶೀಲನೆಯನ್ನು ಮಾಡಿಕೊಳ್ಳುತ್ತಿರಿ

ಅಂತಿಮ ಮಾತು:

ಮ್ಯುಟೇಷನ್ (Automatic Mutation)ಸ್ವಯಂ ಚಾಲಿತವಾಗಿ ಕರ್ನಾಟಕದಲ್ಲಿ ಭೂ ಆಡಳಿತಕ್ಕೆ ಹೊಸ ದಿಕ್ಕು ತೋರಿಸಿದಂತೆ ಆಗುತ್ತದೆ, ಪಾರದರ್ಶಕತೆ ವೇಗ ಮತ್ತು ಜನಸ್ನೇಹಿ ಸೇವೆ ಈ ಮೂರನ್ನು ಒಟ್ಟಿಗೆ ನೀಡುವ ಮಹತ್ವದ ಹೆಜ್ಜೆ ಇದಾಗಿದ್ದು ನಿಮ್ಮ ಜಮೀನಿನ ಆರ್ ಟಿ ಸಿ ಅಥವಾ ಮ್ಯುಟೇಶನ್ ಸ್ಥಿತಿಯನ್ನು ಪರಿಶೀಲಿಸಲು ಮಾರ್ಗದರ್ಶನ ಬೇಕಿದ್ದರೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ನ್ಯೂಟನ್ ಬಗ್ಗೆ ತಿಳಿದುಕೊಳ್ಳಿ.

ಇದನ್ನು ಓದಿರಿ :- Farmers Loan: ₹5 ಲಕ್ಷ ಶೂನ್ಯ ಬಡ್ಡಿ ಕೃಷಿ ಸಾಲ!

Leave a Reply

Your email address will not be published. Required fields are marked *