ಭಾಗ್ಯಲಕ್ಷ್ಮಿ ಯೋಜನೆ 2026 ಅರ್ಜಿ ಸಲ್ಲಿಸುವ ವಿಧಾನ । How To Apply For Bhagyalakshmi Scheme In Karnataka । BLY

ಭಾಗ್ಯಲಕ್ಷ್ಮಿ ಯೋಜನೆ 2026 ಅರ್ಜಿ ಸಲ್ಲಿಸುವ ವಿಧಾನ । How To Apply For Bhagyalakshmi Scheme In Karnataka

ನಮಸ್ಕಾರ ಸ್ನೇಹಿತರೆ, ನಮಗೆಲ್ಲಾ ಗೊತ್ತಿರುವ ಹಾಗೆ ಯಾವುದೇ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ ಸಾಕು, ಹೆಣ್ಣುಮಕ್ಕಳಿಗಾಗಿ ಇರುವ ಹಲವಾರು ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಆದರೆ ಆ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಈ ಒಂದು ಲೇಖನದ ಮೂಲಕ ಭಾಗ್ಯಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡಲಾಗಿದೆ.

How To Apply For Bhagyalakshmi Scheme In Karnataka

ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮಾನದಂಡ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳ ಬಗ್ಗೆ ಓದಿಕೊಂಡು ಆನ್ಲೈನ್ ಮೂಲಕ ಅಥವಾ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

ಯೋಜನೆಯ ಅವಲೋಕನ: (How To Apply For Bhagyalakshmi Scheme In Karnataka)

ಯೋಜನೆಯ ಹೆಸರು ಭಾಗ್ಯಲಕ್ಷ್ಮಿ ಯೋಜನೆ
ಅರ್ಹ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಸಿದ 2 ಹೆಣ್ಣು ಮಕ್ಕಳಿಗೆ
ಮೆಚ್ಯುರಿಟಿ ಮೊತ್ತ ರೂ. 34,751 ರಿಂದ 1,00,000
ಅರ್ಜಿಸಲ್ಲಿಸುವ ರಾಜ್ಯ ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಅಂಗನವಾಡಿ ಕೇಂದ್ರ, ಗ್ರಾಮಪಂಚಾಯತ್ ಅಥವಾ ಆನ್ಲೈನ್
How To Apply For Bhagyalakshmi Scheme In Karnataka

ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಸರ್ಕಾರವು ಜಾರಿಗೊಳಿಸಿದ್ದ ಹಲವಾರು ಯೋಜನೆಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆಯು ಒಂದಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರವು 2006 ರಲ್ಲಿ ಜಾರಿಗೆ ತಂದಿದ್ದು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ರೂಪಿಸಿದ ಸಾಮಾಜಿಕ ಕಲ್ಯಾಣ ಯೋಜನೆ ಇದಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣುಮಕ್ಕಳು 2006 ರ ಮಾರ್ಚ್ 31 ರ ನಂತರ ಜನಿಸಿರಬೇಕು.

ಭಾಗ್ಯಲಕ್ಷ್ಮಿ ಯೋಜನೆ ಎಂದರೇನು?

ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಸಿದ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳಿಗೆ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಆರ್ಥಿಕ ನೆರವು, ವಿದ್ಯಾರ್ಥಿ ವೇತನ, ಜೀವ ವಿಮೆ ಮತ್ತು ಇತರೆ ಪ್ರಯೋಜನಗಳನ್ನು ಒದಗಿಸಿದೆ.

ಈ ಯೋಜನೆಯಡಿ, ಅರ್ಹವಾಗಿರುವ ಹೆಣ್ಣುಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿಯನ್ನು ಮಾಡಲಾಗುತ್ತದೆ. ಹೆಣ್ಣು ಮಗಳು ಕನಿಷ್ಠ 8 ನೇ ತರಗತಿ ಪೂರ್ಣಗೊಳಿಸಿ ಅವಿವಾಹಿತೆಯಾಗಿದ್ದಾರೆ 18 ವರ್ಷ ತುಂಬಿದ ನಂತರ ಅದನ್ನು ಪಡೆದುಕೊಳ್ಳಬಹುದು.

ಯೋಜನೆಯ ಉದ್ದೇಶ:

  • ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣುಮಕ್ಕಳ ಜನನವನ್ನು ಪ್ರೋತ್ಸಾಹಿಸುವುದು.
  • ಬಾಲಕಾರ್ಮಿಕ ಮತ್ತು ಬಾಲ್ಯವಿವಾಹವನ್ನು ತಡೆಗಟ್ಟುವುದು.
  • ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆ ಒದಗಿಸುವುದು
  • ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಅರೋಗ್ಯ ರಕ್ಷಣೆಯನ್ನು ಉತ್ತೇಜಿಸುವುದು.

ಯೋಜನೆಯ ಪ್ರಯೋಜನ: How To Apply For Bhagyalakshmi Scheme In Karnataka

  • 18 ವರ್ಷ ಪೂರ್ಣಗೊಂಡ ನಂತರ ಮಗುವಿಗೆ ರೂ. 34,751 ರಿಂದ 1,00,000 ವರೆಗೆ ಮೆಚ್ಯುರಿಟಿ ಮೊತ್ತವನ್ನು ನೀಡಲಾಗುವುದು.
  • 1 ರಿಂದ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ. 300 ರಿಂದ 1,000 ದ ವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು.
  • ಫಲಾನುಭವಿಗಳು ವರ್ಷಕ್ಕೆ ರೂ. 25,000 ದ ವರೆಗೆ ಅರೋಗ್ಯ ವಿಮೆಯನ್ನು ಪಡೆದುಕೊಳ್ಳಬಹುದು.
  • ರೂ. 42,500 ದಿಂದ 1,00,000 ದ ವರೆಗೆ ಮಗುವಿನ ಮರಣಕ್ಕೆ ಪರಿಹಾರ ಮೊತ್ತವನ್ನು ನೀಡಲಾಗುವುದು.

ಅರ್ಹತಾ ಮಾನದಂಡ: How To Apply For Bhagyalakshmi Scheme In Karnataka

  • ಮಗು 2006 ರ ಮಾರ್ಚ್ 31 ರ ನಂತರ ಜನಿಸಿರಬೇಕು.
  • ಕುಟುಂಬವು BPL ಕಾರ್ಡ್ ಹೊಂದಿರಬೇಕು.
  • ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
  • ಮಗುವಿನ ಜನನವಾದ ಒಂದು ವರ್ಷದೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
  • ಮಗು ಬಾಲಕಾರ್ಮಿಕ ಪದ್ದತಿಯಲ್ಲಿ ತೊಡಗಿರಬಾರದು.
  • ಮಗು 18 ವರ್ಷ ತುಂಬುವ ಮೊದಲು ಮದುವೆ ಆಗಬಾರದು.
  • ಕನಿಷ್ಠ 8 ನೇ ತರಗತಿ ವರಗೆ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

ಅಗತ್ಯ ದಾಖಲೆಗಳು:

  • ಹೆಣ್ಣು ಮಗುವಿನ ಜನನ ಪ್ರಮಾಣಪತ್ರ
  • BPL ಕಾರ್ಡ್
  • ಜಾತಿ ಪ್ರಮಾಣಪತ್ರ
  • ವಾಸಸ್ಥಳ ಪ್ರಮಾಣಪತ್ರ
  • ಹೆಣ್ಣು ಮಗುವಿನ ಬ್ಯಾಂಕ್ ಖಾತೆಯ ವಿವರ
  • ಪೋಷಕರೊಂದಿಗೆ ಮಗುವಿನ ಭಾವಚಿತ್ರ

ಅರ್ಜಿ ಸಲ್ಲಿಸುವ ವಿಧಾನ: How To Apply For Bhagyalakshmi Scheme In Karnataka

  • ಕರ್ನಾಟಕದ ಅಧಿಕೃತ ವೆಬ್ ಸೈಟ್ https://dwcd.karnataka.gov.in/ ಗೆ ಭೇಟಿನೀಡಿ
  • ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ.
  • ನಂತರ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ
  • ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
  • ಇಲ್ಲವೇ ಗ್ರಾಮ ಪಂಚಾಯತ್ ಅಥವಾ ಅಂಗನವಾಡಿಗೆ ಭೇಟಿ ನೀಡಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಅದೇ ಕಚೇರಿಗೆ ಸಲ್ಲಿಸುವುದು.

ತೀರ್ಮಾನ:

ಕರ್ನಾಟಕ ಸರ್ಕಾರವು ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಪ್ರಯೋಜನವನ್ನು ಬಡತನ ರೇಖೆಗಿಂತ ಕೆಳಗೆ ಇರುವ ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಪಡೆದುಕೊಳ್ಳಬಹುದು. ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿದ್ದರೆ ಎರಡು ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಅಥವಾ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

ಇತರೆ ಪ್ರಮುಖ ಲಿಂಕುಗಳು:

ಪ್ರಮುಖ ಯೋಜನೆಗಳು ಪ್ರಮುಖ ಲಿಂಕುಗಳು
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಇಲ್ಲಿ ಕ್ಲಿಕ್ ಮಾಡಿ
ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನಕ್ಕೆ ಅರ್ಜಿಇಲ್ಲಿ ಕ್ಲಿಕ್ ಮಾಡಿ
ಉಚಿತ ಲ್ಯಾಪ್ಟಾಪ್ ಯೋಜನೆ 2026ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಇಲ್ಲಿ ಕ್ಲಿಕ್ ಮಾಡಿ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *