ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಅಡಿಯಲ್ಲಿ ನಮ್ಮ ಸರ್ಕಾರವು ಹಿರಿಯ ನಾಗರೀಕರಿಗಾಗಿ ಈ ಒಂದು ಉತ್ತಮ ಯೋಜನೆಯನ್ನ ಜಾರಿತಂದಿದೆ. ಬಡರೇಖೆಗಿಂತ ಕೆಳಗಿರುವ ವೃದ್ಧ ನಾಗರಿಕರಿಗೆ ಸಮಾಜದಲ್ಲಿ ಆರ್ಥಿಕ ನೆರವು ನೀಡುವ ಪ್ರಮುಖ ಉದ್ದೇಶವನ್ನ ಒಳಗೊಡಿದೆ.
60 Years Pension Scheme In Karnataka
ಭಾರತ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದ ಒಂದು ಭಾಗವಾಗಿರುವ ಈ ಯೋಜನೆಯು ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ನೆರವು ಜೊತೆಗೆ ಅವರ ಒಂದು ಆರೋಗ್ಯದ ದೃಷ್ಟಿ ಇಂದ ಸರ್ಕಾರ ಈ ಉತ್ತಮ ಯೋಜನೆ ಜಾರಿಮಾಡಿದೆ.
ಈ ಯೋಜನೆಯನ್ನ ಸರ್ಕಾರವು ಕೆಲವೇ ಜಿಲ್ಲೆಗಳಿಗೆ ಅನ್ವಯವಾಗುವುದಿಲ್ಲ ಕರ್ನಾಟಕದಾದ್ಯಂತ ಇಂದಿರಾಗಾಂಧಿ ವೃದ್ಧಾಪ್ಯ ಪಿಂಚಣಿ ಯೋಜನೆ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗಾಗಿ ಪ್ರತಿ ತಿಂಗಳು ಇಂತಿಷ್ಟು ಪಿಂಚಣಿ ನೀಡಲಾಗುತ್ತದೆ.
ಹಿರಿಯ ನಾಗರಿಕರಿಗೆ ವಯಸದಂತೆ ದುಡಿಯುವ ಶಕ್ತಿ ಕಡಿಮೆಯಾಗುತ್ತ ಬರುತ್ತದೆ ಹಾಗೆ ಕೆಲವು ಕುಟುಬದಲ್ಲಿ ಸರಿಯಾಗಿ ನೋಡಿಕೊಳುವುದಿಲ್ಲ ಇನ್ನ ಕೆಲವು ವಯಸ್ಸಾದವರು ಬೇರೆಯವರ ಮೇಲೆ ಅವಲಂಬನೆ ಆಗುತ್ತಾರೆ ಇಂತವರಿಗಾಗಿನೇ ಸರ್ಕಾರ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಆರಂಭಿಸಿದೆ.
ಸರ್ಕಾರದ ಇಂತ ಉತ್ತಮ ಯೋಜನೆ ಅಡಿಯಲ್ಲಿ ದೊರೆಯುವ ಸಹಾಯಧನ ಎಷ್ಟು ? ಅರ್ಜಿ ಸಲ್ಲಿಸುವುದು ಹೇಗೆ ? ಎನ್ನುವುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ…
ಯೋಜನೆಯ ಅವಲೋಕನ :- 60 Years Pension Scheme In Karnataka
| ಯೋಜನೆ ಹೆಸರು | ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ (NSAP) |
| ಅರ್ಜಿ ಸಲ್ಲಿಸುವುದು ಎಲ್ಲಿ | ಬೆಂಗಳೂರು ಒನ್ ಅಥವಾ ಗ್ರಾಮ ಪಂಚಾಯಿತಿ |
| ಅರ್ಜಿದಾರರ ವಯಸ್ಸಿನ ಮಿತಿ | 60 ದಿಂದ 64 ಹಾಗೆ 65 ವರ್ಷ ಮೇಲ್ಪಟ್ಟ |
| ರಾಜ್ಯ | ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶ |
| ಫಲಾನುಭವಿಗಳು | ಹಿರಿಯ ನಾಗರೀಕರು |
| ಒಟ್ಟು ಪಿಂಚಣಿ | ಪ್ರತಿ ತಿಂಗಳು 600 ರೂ. ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 1200 ರೂ. |
ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ ಯೋಜನೆ ಎಂದರೇನು ?
ಭಾರತ ಸರ್ಕಾರವು ಪ್ರಾರಂಭಿಸಿದ ಸಾಮಾಜಿಕ ಕಲ್ಯಾಣ ಯೋಜನಾ ಕಾರ್ಯಕ್ರಮ ಇದಾಗಿದ್ದು ಬಡತನ ರೇಖೆಗಿಂತ ಕೆಳಗಿರುವ ವೃದ್ಧ ನಾಗರಿಕರಿಗೆ ಆರ್ಥಿಕವಾಗಿ ಸಹಯಾನದ ನೀಡುತ್ತಾಬಂದಿದೆ. ಆಗಸ್ಟ್ 15, 1995 ರಂದು ಕೇಂದ್ರ ಸರ್ಕಾರದಿಂದ ಈ ಯೋಜನೆ ಜಾರಿ ಬಂದಿತು ಹಾಗೆ ನವೆಂಬರ್ 19, 2007 ನಂತರ ‘ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ’ (NOAPS) ಎಂಬ ಯೋಜನೆ ನಂಟಕ ಮರುನಾಮಕರ್ಣವಾಗಿ‘ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ’ (IGNOAPS) ಎಂಬ ಹಸರನ್ನ ಪಡೆಯಿತು.
ವಯಸ್ಸಾದವರಿಗೆ ದಿನನಿತ್ಯದ ಕೆಲವು ಮೂಲಭೂತ ಅಗತ್ಯಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಯೋಜನೆಯಡಿ 60 ದಿಂದ 64 ವರ್ಷದೊಳಗಿನ ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 600 ರೂ. ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 1200 ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸರ್ಕಾರದ ಕಡೆಯಿಂದಾನೆ ಹಣ ಜಮಾ ಮಾಡಲಾಗುತ್ತದೆ.
ಈ ಯೋಜನೆಯನ್ನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎರಡರಲ್ಲೂ ಕೂಡ ಜಾರಿಯಲ್ಲಿದೆ.
ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ (NSAP) ಯೋಜನೆಯಡಿಯಲ್ಲಿ 5 ಕಾರ್ಯಾಚರಣೆಯ ಯೋಜನೆಗಳನ್ನು ಒಳಗೊಂಡಿದೆ
- ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆ
- ಅನ್ನಪೂರ್ಣ ಯೋಜನೆ
- ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ
- ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ
- ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆ ವಿಧವೆಯರ ಪಿಂಚಣಿ ಯೋಜನೆ
ಯೋಜನೆಯ ಮೊತ್ತ :- 60 Years Pension Scheme In Karnataka
ಈ ಕೆಳಗಿನ ಎರೆಡು ವಿಧಾನದಲ್ಲಿ ಪಿಂಚಣಿ ಹಣ ನೀಡಲಾಗುತ್ತದೆ
- 60 ರಿಂದ 64 ವರ್ಷ: ತಿಂಗಳಿಗೆ ₹600
- 65 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ: ತಿಂಗಳಿಗೆ ₹1,200
ಯೋಜನೆಯ ಅನುಕೂಲ :- 60 Years Pension Scheme In Karnataka
- ಆದಾಯದ ಮೂಲವಿಲ್ಲದ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಪಿಂಚಣಿ ಸಿಗುತ್ತದೆ
- ಸಮಾಜದಲ್ಲಿ ಇವರಿಗೂ ಕೂಡ ಒನೆದು ಜೀವನಕ್ಕೆ ಭದ್ರತೆ ಸಿಕ್ಕಂತಾಗುತ್ತದೆ.
- ಸರ್ಕಾರದ ಈ ಹಣಕ್ಕೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಅರ್ಜಿ ದರವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
- ಹಿರಿಯರು, ವಿಧವೆಯರು ಮತ್ತು ಅಂಗವಿಕಲರು ಕನಿಷ್ಠ ಅಗತ್ಯಗಳನ್ನು ಪೂರೈಸುವುದರ ಜೊತೆಗೇನೆ ಜೀವನ ಮಟ್ಟವನ್ನ ಸುಧಾರಿಸುತ್ತದೆ.
- ಇಂತ ಯೋಜನೆಗಳಿಂದ ಸಮಾಜದಲ್ಲಿವಯಸದವರು ಗೌರವಯುತವಾಗಿ ಬದುಕಲು ಆಸರೆಯಾಗಿದೆ.
- ಹೀಗೆ ಇನ್ನು ಅನೇಕ ಪ್ರಯೋಜನಗಳು ಈ ಯೋಜನೆ ಇಂದ ಸಿಗುತ್ತೆ.
NSAP ಯೋಜನೆಯ ಕೆಲವು ಪ್ರಮುಖ ಷರತ್ತುಗಳ :-
- ಅರ್ಜಿ ಸಲ್ಲಿಸುವ ಫಲಾನುಭವಿಗಳ ವರ್ಷದ ಆದಾಯವು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 32 ಸಾವಿರಕ್ಕಿಂತ ಕಡಿಮೆ ಇರಬೇಕು.
- ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಪಿಂಚಣಿ ಹಣವನ್ನ ಪಡೆಯಬಹುದಾಗಿದೆ.
- ಅರ್ಜಿದಾರರು 60 ವರ್ಷ ಮೇಲ್ಪಟ್ಟವರಾಗಿರಬೇಕು ಮತ್ತು ಬಡತನ ರೇಖೆಗಿಂತ (BPL Card) ಕೆಳಗಡೆ ಇರಬೇಕು.
- ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು
ಈ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು ?
ಕೆಳಗೆ ಕೊಡಲಾದ ಮಾಹಿತಿಯನ್ನ ಸರಿಯಾಗಿ ಹಾಗೆ ಸಂಪೂರ್ಣವಾಗಿ ಓದಿಕೊಂಡು ಅರ್ಜಿದಾರರು ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ನಿಮ್ಮ ಮನೆಯ ಹತ್ತಿರದ ಬೆಂಗಳೂರು ಒನ್ ಅಥವಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ (NSAP) ಅರ್ಜಿ ಸಲ್ಲಿಸಬಹುದು ಅಥವಾ ನೀವು ಬೆಂಗಳೂರಿನ ನಾಗರಿಕರಾಗಿದ್ದರೆ ಜನಸೇವಕ ಎಂಬ ಯೋಜನೆ ಅಡಿ ನಿಮ್ಮ ಮನೆಬಾಗಿಲಿಗೆ ಈ ಯೋಹಣೆಗೆ ಸಂಬಂಧ ಪಟ್ಟ ಅಧಿಕಾರಿಗಳನ್ನ ಕರೆಯಿಸಿ ಅರ್ಜಿ ಸಲ್ಲಿಸಬಹುದು.
ಈ ಪ್ರಮುಖ ಹಂತವನ್ನ ಅನುಸರಿಸಿ: 60 Years Pension Scheme In Karnataka
1. sevasindhu.karnataka.gov.in ವೆಬ್‌ಸೈಟ್‌ಗೆ ಹೋಗಿ ಇಲಾಖೆಗಳು ಮತ್ತು ಸೇವೆಗಳ ಬಟನ್ ಮೇಲೆ ಪ್ರೆಸ್ ಮಾಡಿ.
2. ನಂತರ ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿಯ ಮೇಲೆ ಪ್ರೆಸ್ ಮಾಡಿ.
3. ಮೂರನೇ ಹಂತದಲ್ಲಿ ಆನ್‌ಲೈನ್‌ನಲ್ಲಿ ಅನ್ವಯಿಸು ಮೇಲೆ ಪ್ರೆಸ್ ಮಾಡಿ.
4. ಈಗಾಗಲೇ ನೋಂದಣಿ ಆಗಿದ್ದರೆ, ಅರ್ಜಿದಾರಹೆಸರು, ಪಾಸ್‌ವರ್ಡ್/OTP, ಕ್ಯಾಪ್ಚಾ ನಮೂದಿಸಿ ಮತ್ತು ಲಾಗಿನ್ ಬಟನ್ ಪ್ರೆಸ್ ಮಾಡಿ.
5. ಅರ್ಜಿದಾರರ ವಿವರಗಳನ್ನು ಸರಿಯಾಗಿ ಯಾವದೇ ತಪ್ಪಿಲ್ಲದೆ ಭರ್ತಿ ಮಾಡಿ
6. ನಂತರ ನೀವು ಭರ್ತಿ ಮಾಡಿದ ಫಾರಂಅನ್ನ ಸರಿಯಾಗಿ ಪರಿಶೀಲಿಸಿ ವಿವರಗಳು ಸರಿಯಾಗಿದ್ದರೆ, ಚೆಕ್‌ಬಾಕ್ಸ್ (“ಹೌದು”) ಆಯ್ಕೆಮಾಡಿ ಮತ್ತು ಸಲ್ಲಿಸಿ.
7. ಯಾವುದೇ ರೀತಿಯ ತಿದ್ದುಪಡಿ ಇದ್ದಲ್ಲಿ ಸಂಪಾದಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
8. ನಂತರ ಮುಂದುವರಿಯಲು ಇ-ಸಹಿ ಮಾಡಿ ಮತ್ತು ಸಲ್ಲಿಸಿ ಮೇಲೆ ಪ್ರೆಸ್ ಮಾಡಿ.
9. ಅಲ್ಲಿ ಕೇಳಿರುವ ಕೆಲವು ಮಾನದಂಡಗಳಿಗೆ ಒಪ್ಪಿಗೆ ಸೂಚಿಸಿ ಮುಂದುವರಿದ ಬಳಿಕ, ಆಧಾರ್ ನಂಬರ್ ಹಾಗೂ OTP ಯನ್ನು ನಮೂದಿಸಿ “ಸಲ್ಲಿಸು” ಬಟನ್ ಮೇಲೆ ಕ್ಲಿಕ್ ಮಾಡಿ.
10. ಸಹಿ ಮಾಡಿದ ನಂತರ, ಸ್ವೀಕೃತಿಯನ್ನು ರಚಿಸಲಾಗುತ್ತದೆ. ಸ್ವೀಕೃತಿಯು ಫಲಾನುಭವಿಗಳ ವಿವರಗಳು, ಅರ್ಜಿ ವಿವರಗಳು ಮತ್ತು ಅರ್ಜಿದಾರರ ಉಲ್ಲೇಖಕ್ಕಾಗಿ ಸಲ್ಲಿಕೆ ವಿವರಗಳನ್ನು ಒಳಗೊಂಡಿರುತ್ತದೆ.
ಪ್ರಮುಖ ದಾಖಲೆಗಳು:- 60 Years Pension Scheme In Karnataka
- ವಿಳಾಸ ಪುರಾವೆ(ಆಧಾರ್ ಕಾರ್ಡ್)
- ಗಂಡನ ಮರಣ ಪ್ರಮಾಣಪತ್ರ (ಅನ್ವಯಿಸಿದರೆ)
- ಪಡಿತರ ಚೀಟಿ
- ಐಡಿ ಪ್ರೊಫ್
- ನಿವಾಸ ಪ್ರಮಾಣಪತ್ರ(ವಾಸಸ್ಥಳ )
- ಬ್ಯಾಂಕ್ ಖಾತೆ (PassBook)
- ವಯಸ್ಸಿನ ಪ್ರಮಾಣಪತ್ರ
- ಮತದಾರರ ಗುರುತಿನ ಚೀಟಿ
- ಆದಾಯ ಪ್ರಮಾಣಪತ್ರ
- ಅರ್ಜಿದಾರರ ಫೋಟೋ
ಅಂತಿಮ ತೀರ್ಮಾನ :- 60 Years Pension Scheme In Karnataka
ಅರ್ಜಿ ಸಲ್ಲಿಕೆಯ ನಂತರ ಅರ್ಜಿದಾರರ ಅರ್ಜಿ ಮಂಜೂರಾತಿಯ ತೀರ್ಮಾನವನ್ನ ಆಯಾ ಊರಿನ ತಹಶೀಲ್ದಾರ್ ಅಥವಾ ಉಪ ತಹಶೀಲ್ದಾರ್ ಅವರು ತೆಗೆದುಕೊಳ್ಳುತ್ತಾರೆ. ಮೇಲಿನ ಎಲ್ಲ ಹಂತ ಗಳನ್ನ ಸರಿಯಾಗಿ ಓದಿಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಗೆ ಯಾವುದೇ ರೀತಿಯ ಅಂತಿಮ ದಿನಾಂಕ ಇರುವುದಿಲ್ಲ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು.
ಪ್ರಮುಖ ಮಾಹಿತಿ ಗಮನಿಸಿ :-
| ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕೃತಗೊಂಡರೆ ಅಥವಾ ಯಾವುದೇ ತೀರ್ಮಾನ ವಿಳಂಬವಾದರೆ, ನೀವು ಸಂಬಂಧಪಟ್ಟ ತಾಲ್ಲೂಕು ಕಚೇರಿಯ ತಹಶೀಲ್ದಾರರನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು ಅಥವಾ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. |

