PUC: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ನು ಮುಂದೆ ಕಾಲೇಜಿನಲ್ಲೇ ಸಿಗಲಿದೆ ಉಚಿತ ಪಠ್ಯಪುಸ್ತಕಗಳು!

PUC

ಬೆಂಗಳೂರು: ಕರ್ನಾಟಕ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮಹತ್ತರ ಬದಲಾವಣೆ ಇದೀಗ ಕರ್ನಾಟಕ ಸರ್ಕಾರ ನಾಂದಿ ಹಾಡಿದೆ. ಇದುವರೆಗೆ ಕೇವಲ “ಒಂದರಿಂದ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಠ್ಯಪುಸ್ತಕ ವಿತರಣೆ ಮಾಡುತಿದ್ದ ಸರ್ಕಾರ ಇದೀಗ ಈ ಯೋಜನೆಯು ಪದವಿ ಪೂರ್ವ (PUC) ಹಂತಕ್ಕೂ ವಿಸ್ತರಿಸುವ ನಿರ್ಧಾರವನ್ನ ಕೈಗೊಂಡಿದೆ.

Karnataka Free Text Books In Kannada

ಹೌದು ಪ್ರತಿ ಬಾರಿ ಶೈಕ್ಷಣಿಕ ವರ್ಷ ಆರಂಭವಾದಾಗಲು ಪೋಷಕರ ಎದೆಯಲ್ಲಿ ಒಂದು ಆತಂಕ ಮನೆ ಮಾಡಿರುತ್ತದೆ. ಅದೇ ರೀತಿ ಈಗ 10ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಕ್ಕಳ ಪೋಷಕರಿಗೆ ಒಂದು ಆತಂಕ ಈ ವರ್ಷವೂ ಸೃಷ್ಟಿಯಾಗಿದೆ. ಅದೇನೆಂದರೆ ಮಕ್ಕಳ ಮುಂದಿನ ಓದಿಗಾಗಿ ಪುಸ್ತಕಗಳನ್ನ ಎಲ್ಲಿ ಖರೀದಿಸಬಹುದು? ಅದಕ್ಕೆ ಬೇಕಾದ ಸಾವಿರಾರು ರೂಪಾಯಿ ಹಣವನ್ನ ಎಲ್ಲಿಂದ ತರುವುದು? ನಮ್ಮ ಮಕ್ಕಳ ಭವಿಷ್ಯ ವೃದ್ಧಿಸುವ ಪಠ್ಯಪುಸ್ತಕ ಕೊಡಿಸಲು ಯಾರ ಮುಂದೆ ನಾವು ಹೋಗಿ ಕೈ ಚಾಚುವುದು? ಎಂಬ ಪ್ರಶ್ನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನ ಬಹಳ ವರ್ಷಗಳಿಂದ ಕಾಡುತ್ತಿದೆ.



ಅಪ್ಪನ ಜೇಬಿನ ಅಸಹಾಯಕತೆ ಮತ್ತು ಅಮ್ಮನ ಕಣ್ಣೀರಿನ ನಡುವೆ ಮಗುವಿನ ಶೈಕ್ಷಣಿಕ ಕನಸುಗಳು ಕಮರಿ ಹೋಗುತ್ತಿದ್ದಾವೇ ಇವೆಲ್ಲದರ ಚಿಂತೆ ಮಾಡುವ ಕಾಲ ಬದಲಾಗಿದೆ. ಯಾವುದೇ ಪೋಷಕರು ಕೂಡ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅಂದರೆ ಪುಸ್ತಕಗಳನ್ನು ಕೊಡಿಸಲು ಹಣವನ್ನ ಎಲ್ಲಿಂದ ತರಲಿ? ಬೆಲೆ ನೋಡಿದರೆ ದಿನದಿಂದ ದಿನ ಹೆಚ್ಚಾಗುತ್ತಿವೆ. ಹಣವನ್ನ ಎಲ್ಲಿಯಾದರೂ ಹೊಂದಿಸಿಕೊಂಡು ಪುಸ್ತಕದ ಅಂಗಡಿಗಳ ಮುಂದೆ ಹೋದರೆ ಸಾಲಾಗಿ ನಿಲ್ಲಬೇಕಿತ್ತು.

ಇಂತಹ ವಿಷಯಗಳನ್ನೆಲ್ಲವನ್ನ ಅರಿತ ಸರ್ಕಾರ ಇದೀಗ ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತ ಪಠ್ಯಪುಸ್ತಕ ನೀಡುವ ಮೂಲಕ ಪೋಷಕರ ಈ ಕಷ್ಟಕ್ಕೆ ಶಾಶ್ವತವಾಗಿ ಮುಕ್ತಿಯನ್ನು ನೀಡಿದೆ. “ಶಿಕ್ಷಣವೆಂಬುದು ಪ್ರತಿಯೊಬ್ಬ ಮಕ್ಕಳ ಹಕ್ಕು! ಹಣದ ಕೊರತೆಯಿಂದ ಯಾವುದೇ ಮಗುವಿನ ಓದು ಇನ್ನು ಮುಂದೆ ಅರ್ಧಕ್ಕೆ ನಿಲ್ಲುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ”.

ಏನಿದು ಶಿಕ್ಷಣ ಕ್ಷೇತ್ರದ ಹೊಸ ವ್ಯವಸ್ಥೆ?

ರಾಜ್ಯ ಸರ್ಕಾರವು ಮಕ್ಕಳ ಓದಿನ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮವನ್ನ ಸಂಪೂರ್ಣವಾಗಿ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಉಗಿತವಾಗಿ (Karnataka Free Text Books) ಕೊಡಲು ಮಂಜಾಗಿದೆ. ಇದರ ಪ್ರಕಾರ ಸರ್ಕಾರಿ ಪದವಿ ಪೂರ್ವ (PUC) ಕಾಲೇಜುಗಳ ವಿದ್ಯಾರ್ಥಿಗಳು ಇನ್ನು ಮುಂದೆ ಮಾರುಕಟ್ಟೆಯಲ್ಲಿ ಹಣ ಕೊಟ್ಟು ಯಾವುದೇ ಪುಸ್ತಕಗಳನ್ನ ಖರೀದಿಸುವ ಅಗತ್ಯ ಇಲ್ಲ, ಶೈಕ್ಷಣಿಕ ವರ್ಷದ ಮೊದಲ ದಿನವೇ ತಮ್ಮ ತಮ್ಮ ಕಾಲೇಜಿನಲ್ಲಿ ಉಚಿತವಾಗಿ ಪಠ್ಯ ಪುಸ್ತಕಗಳನ್ನ ಪಡೆಯಬಹುದಾಗಿದೆ ಎಂದು X ನಲ್ಲಿ ಹಂಚಿಕೊಂಡಿದೆ.

ಪಿಯುಸಿ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಕಷ್ಟಗಳು:

ಸರ್ಕಾರವು ಇದೀಗ x ಖಾತೆಯಲ್ಲಿ ಹಂಚಿಕೊಂಡಿರುವ ವಿಷಯವನ್ನು ಬಹಳ ವರ್ಷಗಳ ಹಿಂದೆಯೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿಂತನೆ ನಡೆಸಿದ್ದಾರೆ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರಲಿಲ್ಲ ಎನ್ನುವುದು ನನ್ನ ಅನಿಸಿಕೆ.

ಹಾಗಿದ್ದರೆ ಸರ್ಕಾರದ ಈ ಯೋಚನೆಯ ಮೊದಲು ಪದವಿ ಪೂರ್ವ(PUC) ಕಾಲೇಜಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಂದ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು ಯಾವ ರೀತಿ ಸವಾಲುಗಳು ಎಂಬುದನ್ನು ಈ ಕೆಳಗೆ ತಿಳಿಯೋಣ.

೧. ಆರ್ಥಿಕ ಸಂಕಷ್ಟ:

  • ಪಿಯುಸಿ (PUC) ತರಗತಿಗಳ ಪಠ್ಯಪುಸ್ತಕಗಳ ಬೆಲೆ ಹೆಚ್ಚು ಇರುವುದರಿಂದ ಅನೇಕ ಪೋಷಕರಿಗೆ ಅವನ್ನು ಖರೀದಿಸುವುದು ಕಷ್ಟಕರವಾಗುತ್ತಿತ್ತು.
  • ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ವೆಚ್ಚ ದೊಡ್ಡ ಹೊರೆ ಆಗುತ್ತಿತ್ತು.
  • ಹಣದ ಅಭಾವದಿಂದ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಒತ್ತಡ ಹಾಗೂ ಆತಂಕ ಕೂಡ ಹೆಚ್ಚಾಗುತ್ತಿತ್ತು.
  • ಕೆಲವರು ಮಕ್ಕಳ ಶಿಕ್ಷಣಕ್ಕಾಗಿ ಪುಸ್ತಕಗಳನ್ನು ಖರೀದಿಸಲು ಸಾಲ ಪಡೆಯುವ ಪರಿಸ್ಥಿತಿಯೂ ಉಂಟಾಗುತ್ತಿತ್ತು.
  • ಶೈಕ್ಷಣಿಕ ವರ್ಷದ ಆರಂಭದಲ್ಲೇ ಪುಸ್ತಕಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿತ್ತು.
  • ಕೆಲವು ವಿದ್ಯಾರ್ಥಿಗಳು ಎಲ್ಲ ಪುಸ್ತಕಗಳನ್ನು ಪಡೆಯಲು ಸಾಧ್ಯವಾಗದೆ ಸ್ನೇಹಿತರ ಅಥವಾ ಹಿರಿಯರ ಪುಸ್ತಕಗಳನ್ನು ಬಳಸಿಕೊಂಡು ಓದುತ್ತಿದ್ದರು.

೨. ಓದಿನಲ್ಲಿ ಆತಂಕ ಮತ್ತು ಒತ್ತಡ:

  • ಅಗತ್ಯ ಪಠ್ಯಪುಸ್ತಕಗಳು ಸಮಯಕ್ಕೆ ದೊರಕದಿದ್ದರೆ ವಿದ್ಯಾರ್ಥಿಗಳು ಓದನ್ನು ಸರಿಯಾಗಿ ಆರಂಭಿಸಲು ಅಡಚಣೆ ಎದುರಿಸುತ್ತಿದ್ದರು.
  • ಪಾಠಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಬೇಕಾದ ಪುಸ್ತಕಗಳ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಚಿಂತೆಯೂ ಹೆಚ್ಚಾಗುತ್ತಿತ್ತು.
  • ಪರೀಕ್ಷೆಗಳ ಸಮಯದಲ್ಲಿ ಸಿದ್ಧತೆ ಸರಿಯಾಗಿ ಆಗುವುದಿಲ್ಲ ಎಂಬ ಭಯ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿತ್ತು.
  • ಇತರ ವಿದ್ಯಾರ್ಥಿಗಳಂತೆ ಸುಗಮವಾಗಿ ಓದಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆಯಿಂದ ಮಾನಸಿಕ ಒತ್ತಡ ಉಂಟಾಗುತ್ತಿತ್ತು.
  • ಈ ರೀತಿಯ ಸಮಸ್ಯೆಗಳು ಕೆಲ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕುಗ್ಗುವ ಪರಿಸ್ಥಿತಿಯನ್ನೂ ಸೃಷ್ಟಿಸುತ್ತಿದ್ದವು.

೩. ಪುಸ್ತಕಗಳ ಸರಬರಾಜಿನ ಕೊರತೆ (Book Supply Issue)

  • ಕೆಲವೊಮ್ಮೆ ಪಿಯುಸಿ (PUC) Textbooks ಮಾರುಕಟ್ಟೆಯಲ್ಲಿ ಸಮಯಕ್ಕೆ ಸಿಗದೆ ವಿದ್ಯಾರ್ಥಿಗಳು ಮತ್ತು ಪೋಷಕರು ತೊಂದರೆ ಅನುಭವಿಸುತ್ತಿದ್ದರು.
  • ಪುಸ್ತಕ ಅಂಗಡಿಗಳಲ್ಲಿ ಬೇಕಾದ ಎಲ್ಲಾ ಪುಸ್ತಕಗಳು ಒಂದೇ ವೇಳೆ ಲಭ್ಯವಾಗದೆ availability problem ಎದುರಾಗುತ್ತಿತ್ತು.
  • ಅಗತ್ಯ ಪುಸ್ತಕಗಳಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಹಲವಾರು book storesಗಳಿಗೆ ಸುತ್ತಾಡಬೇಕಾದ ಪರಿಸ್ಥಿತಿ ಬರುತ್ತಿತ್ತು.
  • ಬೇಕಾದ ಪುಸ್ತಕಗಳು ದೊರಕುವವರೆಗೆ ಓದನ್ನು ಸರಿಯಾಗಿ start ಮಾಡುವುದು ಕಷ್ಟವಾಗುತ್ತಿತ್ತು.
  • ಈ ಕಾರಣದಿಂದ ವಿದ್ಯಾರ್ಥಿಗಳ study schedule ಕೂಡ ವಿಳಂಬವಾಗುವ ಸಾಧ್ಯತೆ ಇತ್ತು

೪. Second-hand ಮತ್ತು ಜೆರಾಕ್ಸ್ ಪುಸ್ತಕಗಳ ಬಳಕೆ

  • ಹೊಸ ಪುಸ್ತಕ ಖರೀದಿ ಸಾಧ್ಯವಾಗದಿದ್ದುದರಿಂದ ಕೆಲ ವಿದ್ಯಾರ್ಥಿಗಳು photocopy ಅಥವಾ ಹಳೆಯ ಪುಸ್ತಕ ಮೇಲೆ ಅವಲಂಬಿಸಿದ್ದರು.
  • ಇದರಿಂದ ಪಾಠಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು.
  • ವಿದ್ಯಾರ್ಥಿಗಳ preparation ಸಹ ಸಮಯಕ್ಕೆ ಮುಗಿಯಲಿಲ್ಲ.
  • ಪುಸ್ತಕ ಹಂಚಿಕೆಯಿಂದ ಸ್ವಂತ ಓದು ಅನುಭವ ಕೂಡ ಕಡಿಮೆಯಾಗುತ್ತಿತ್ತು.

ಸರ್ಕಾರದ ನಿರ್ಧಾರದಿಂದಾಗುವ ಅನುಕೂಲ:

  • ವಿದ್ಯಾರ್ಥಿಗಳು ಪಿಯುಸಿ (PUC) ಪಠ್ಯ ಪುಸ್ತಕಗಳಿಗಾಗಿ ಖರ್ಚು ಮಾಡುತ್ತಿದ್ದ ಸಾವಿರಾರು ರೂಪಾಯಿ ಹಣಗಳನ್ನ ಉಳಿತಾಯ ಮಾಡಬಹುದು ಹಾಗೆ ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಸರ್ಕಾರದ ಈ ನಿರ್ಧಾರವು ದೊಡ್ಡ ನೆಮ್ಮದಿಯನ್ನ ನೀಡುತ್ತದೆ.
  • ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಪುಸ್ತಕಗಳ ಲಭ್ಯತೆಗಾಗಿ ತಿಂಗಳುಗಟ್ಟಲೆ ಕಾಯುವ ಅಥವಾ ಅಂಗಡಿಗಳ ಮುಂದೆ ಬಹಳಷ್ಟು ಸಮಯ ಸಾಲಾಗಿ ನಿಂತು ಕಾಯುವ ಪರಿಸ್ಥಿತಿ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಸಮಯ ಉಳಿದು ಇನ್ನೂ ಹೆಚ್ಚಿನ ಶಿಕ್ಷಣದ ಮೇಲೆ ತಮ್ಮನ್ನ ತಾವು ತೊಡಗಿಸಿಕೊಳ್ಳಬಹುದು.
  • ಕಾಲೇಜಿನಲ್ಲಿಯೇ ನೇರವಾಗಿ ವಿತರಣೆ ಮಾಡುವ ನಿರ್ಧಾರದಿಂದ ಪುಸ್ತಕಗಳಿಗಾಗಿ ನಗರದ ಅಂಗಡಿಗಳಿಗೆ ಅಲೆಯುವ ಮತ್ತು ಹಳೆಯ ಪುಸ್ತಕ ಮತ್ತು ಜೆರಾಕ್ಸ್ ಗಳನ್ನ ಓದಬೇಕಿಲ್ಲ. ಈಗ ಮುಂದಿನ ಪದವಿ ಪೂರ್ವ ಶಿಕ್ಷಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಕಾಲೇಜಿನಲ್ಲಿಯೇ ಯಾವುದೇ ಶ್ರಮವಿಲ್ಲದೆ ಪುಸ್ತಕಗಳನ್ನ ಪಡೆಯಬಹುದು.
  • ಸರ್ಕಾರದಿಂದ ಸಿಗುವ ಉಚಿತ ಸೌಲಭ್ಯಗಳ ವ್ಯವಸ್ಥೆಯಿಂದ ವಿದ್ಯಾರ್ಥಿಯಲ್ಲಿ ಹೊಸ ಉತ್ಸಾಹ ತುಂಬೋದಲ್ಲದೆ, ಶಿಕ್ಷಣವಲ್ಲ ಮುಂದುವರಿಸಲು ಪೂರಕವಾದ ಧೈರ್ಯ ನೀಡುತ್ತದೆ.
  • ಕೆಲವು ವಿದ್ಯಾರ್ಥಿಗಳಂತೂ ಸರಿಯಾದ ಸಮಯಕ್ಕೆ ಪುಸ್ತಕಗಳು ಸಿಗದೇ ಇರುವ ಕಾರಣದಿಂದ ಬಹಳಷ್ಟು ಹಣವನ್ನ ಕೊಟ್ಟು ಖರದಿಸಲು ಮುಂದಾಗುತ್ತಿದ್ದರು ಇದಕ್ಕೆ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದೆ.
  • ವಿದ್ಯಾರ್ಥಿಗಳಿಗೆ ಇನ್ಮುಂದೆ ಜೆರಾಕ್ಸ್ ಮತ್ತು ಹಳೆಯ ಪುಸ್ತಕಗಳ ಅವಲಂಬನೆಗೆ ಸರ್ಕಾರ ಬ್ರೇಕ್ ಹಾಕಿದೆ.
  • 2026 ನೇ ಸಾಲಿನಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ಪದವಿ ಪೂರ್ವ ಶಿಕ್ಷಣದಲ್ಲಿ ಹೊಸ ಪುಸ್ತಕಗಳಲ್ಲೇ ಕಲಿಯುವ ಭಾಗ್ಯವನ್ನು ಸರ್ಕಾರ ಕಲ್ಪಿಸಿದೆ. ಅಷ್ಟೇ ಅಲ್ಲದೆ ಪುಸ್ತಕಗಳು ಉಚಿತವಾಗಿ ಸಿಗುತ್ತವೆ.

ಸರ್ಕಾರದ ಈ ನಿರ್ಧಾರದ ಅಸಲಿ ಕರಣ:

  • ಕರ್ನಾಟಕ ಸರ್ಕಾರವು ಸರ್ಕಾರಿ ಪದವಿ ಪೂರ್ವ ಕಾಲೇಜು (PUC) ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ನೀಡಲು ನಿರ್ಧರಿಸಿದ ಹಿಂದೆ ಕೆಲವೊಂದಿಷ್ಟು ಪ್ರಮುಖವಾದಂತಹ ಕಾರಣಗಳಿವೆ. ಅದು ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಾಗಿವೆ. ಈ ನಿರ್ಧಾರದ ಹಿಂದಿನ ಮುಖ್ಯ ಕಾರಣಗಳೇನೆಂಬುದನ್ನ ಈ ಕೆಳಗೆ ನೋಡಿ.
  • ಆರ್ಥಿಕವಾಗಿ ಬಲಿಷ್ಠರಾಗಿರುವ ಕುಟುಂಬದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಉತ್ತಮವಾಗಿಯೇ ಮುಗಿಸಿ ಸರ್ಕಾರಿ ನೌಕರಿಯನ್ನ ಹಿಡಿಯುತ್ತಾರೆ. ಆದರೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಪುಸ್ತಕ ಮತ್ತು ನೋಟ್ ಬುಕ್ ಗಳನ್ನ ಖರೀದಿಸಲು ಆಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ವಿಷಯವು ಸರ್ಕಾರದ ಗಮನಕ್ಕೆ ಬಂದಿರುವ ಕಾರಣದಿಂದಲೇ ಉಚಿತವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪುಸ್ತಕಗಳು ಸಿಗಲೇಬೇಕೆನ್ನುವ ತೀರ್ಮಾನವನ್ನ ಮಾಡಿದೆ.
  • ಪ್ರತಿವರ್ಷದಲ್ಲೂ ಶೈಕ್ಷಣಿಕ ವರ್ಷ ಆರಂಭವಾದರೂ ಮಾರುಕಟ್ಟೆಯಲ್ಲಿ ಸರಿಯಾದ ಸಮಯಕ್ಕೆ ಪುಸ್ತಕಗಳು ಸಿಗದೇ ವಿದ್ಯಾರ್ಥಿಗಳು ಸಂಕಷ್ಟಕೀಡಾಗುತ್ತಿದ್ದರು. ಈ ಕೊರತೆಯನ್ನ ನೀಗಿಸುವ ದೃಷ್ಟಿಯಿಂದ ಸರ್ಕಾರವೇ ನೇರವಾಗಿ ಕಾಲೇಜುಗಳಿಗೆ ಪುಸ್ತಕ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ.
  • ವಿದ್ಯಾರ್ಥಿಗಳ ಕೈಗೆ ಸರಿಯಾದ ಸಮಯಕ್ಕೆ ಮತ್ತು ನೇರವಾಗಿ ಪುಸ್ತಕಗಳು ಸೇರುವಂತೆ ಮಾಡಲು ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.
  • ಬಡವ, ಶ್ರೀಮಂತ, ಮಧ್ಯಮ ವರ್ಗ ಅನ್ನುವ ಯಾವುದೇ ತಾರತಮ್ಯವೂ ಶಿಕ್ಷಣದಲ್ಲಿ ಇರಬಾರದು. ಎಲ್ಲರೂ ಸಮಾನವಾಗಿ ಶಿಕ್ಷಣವನ್ನ ಪಡೆದು ತಮ್ಮ ಕಲಿಕೆಯನ್ನು ಮುಂದುವರಿಸಬೇಕು ಎನ್ನುವುದು ರಾಜ್ಯದ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ.
  • ಈ ಸಾರಿ ಶಿಕ್ಷಣ ಮಂತ್ರಿಗಳಾದ ಮಧು ಬಂಗಾರಪ್ಪನವರು ಮಕ್ಕಳ ಮೇಲಿನ ಕಾಳಜಿಯಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಕೂಡ ಮಾಡಿದ್ದಾರೆ. ಅದೇ ರೀತಿ ಸರ್ಕಾರಿ ಪುಸ್ತಕಗಳು ಸಿಗದಿದ್ದಾಗ ವಿದ್ಯಾರ್ಥಿಗಳು ಅನಿವಾರ್ಯವಾಗಿ ದುಬಾರಿ ಬೆಲೆಯ ncert ಅಥವಾ ಖಾಸಗಿ ಪ್ರಕಾಶಕರ ಪುಸ್ತಕಗಳನ್ನ ಪುಸ್ತಕಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸುವ ಉದ್ದೇಶದಿಂದ ಮತ್ತು ಕಡಿಮೆ ವೆಚ್ಚದಲ್ಲಿ ಉಚಿತವಾಗಿ ಶಿಕ್ಷಣ ನೀಡುವ ಉದ್ದೇಶ ಸರ್ಕಾರಕ್ಕಿದೆ ಎನ್ನುವುದನ್ನು ಮತ್ತೆ ಸಾಬೀತು ಮಾಡಿದೆ.

ಮುಖ್ಯ ಅಂಶ:

ವಿದ್ಯಾರ್ಥಿಗಳು ಈ ಯೋಜನೆ ಅಡಿ ಪ್ರಯೋಜನ ಪಡೆಯಲು ತಿಳಿಯಲೇಬೇಕಾದ ಅತ್ಯಂತ ಮುಖ್ಯವಾದ ಅಂಶಗಳು ಇಲ್ಲಿವೆ.

೧. ಯಾರಿಗೆಲ್ಲ ಯೋಜನೆ ಅನ್ವಯವಾಗುತ್ತದೆ?

10ನೇ ತರಗತಿ ಪರೀಕ್ಷೆ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (PUC) ಶಿಕ್ಷಣವನ್ನ ಪಡೆಯಲು ಬಯಸಿದರೆ ಈ ಯೋಜನೆಯಾ ಲಾಭ ಸಿಗುತ್ತದೆ.

೨. ಪುಸ್ತಕಗಳನ್ನ ಎಲ್ಲಿ ಸಿಗುತ್ತವೆ ತಿಳಿಯಬೇಕೇ?

ನೀವು ಯಾವುದೇ ಮಾರುಕಟ್ಟೆ ಅಥವಾ ಬುಕ್ ಸ್ಟಾಲ್ಗಳಿಗೆ ಹೋಗುವ ಅಗತ್ಯವಿಲ್ಲ ವಿದ್ಯಾರ್ಥಿಗಳು ತಾವು ಓದುವ ಕಾಲೇಜಿನಲ್ಲಿಯೇ ಇವುಗಳನ್ನು ಪಡೆಯಬಹುದು ಮತ್ತು ಯಾವುದೇ ರೀತಿಯ ಹಣವನ್ನ ಕಟ್ಟಬೇಕಿಲ್ಲ.

೩.ಯಾವ ಕಾಂಬಿನೇಷನ್ ಅವರಿಗೆ ಉಚಿತ ಪುಸ್ತಕಗಳು ಸಿಗುತ್ತೆ

ಪಿಯುಸಿ (PUC) ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಪಠ್ಯಪುಸ್ತಕಗಳು ಸಿಗುತ್ತವೆ. ನೀವು ಆರ್ಟ್ಸ್, ಕಾಮರ್, ಸೈನ್ಸ್ ಯಾವುದೇ ಕಾಂಬಿನೇಷನ್ ಅವರಾಗಿದ್ದರು ಕೂಡ ಸರ್ಕಾರದ ಯೋಜನೆಗೆ ಅರ್ಹರಾಗಿರುತ್ತೀರಾ.

ನನ್ನ ಕೊನೆಯ ಮಾತು:

“ಈ ಹೊಸ ಉಚಿತ ಪಠ್ಯಪುಸ್ತಕ ಯೋಜನೆಯಿಂದ ನಿಮ್ಮ ಓದುವ ಹಾದಿ ಸುಲಭವಾಗುತ್ತಿದೆ. ಹಣದ ತೊಂದರೆಗಳ ಬಗ್ಗೆ ಚಿಂತೆ ಮಾಡಬೇಕಿಲ್ಲ, ಪುಸ್ತಕಗಳು ಸಮಯಕ್ಕೆ ನಿಮಗೆ ಲಭ್ಯ. ಇದರಿಂದ ನಿಮ್ಮ ಗಮನವನ್ನು ಸಂಪೂರ್ಣವಾಗಿ ಓದಿಗೆ ನೀಡಬಹುದು ಮತ್ತು ಉತ್ತಮ ಫಲಿತಾಂಶ ಪಡೆಯಬಹುದು. ನಿಮ್ಮ ಭವಿಷ್ಯವನ್ನು ಕಟ್ಟುವ ಈ ಅವಕಾಶವನ್ನು ಹಿಂತೆಗೆದುಕೊಳ್ಳಬೇಡಿ – ಶ್ರಮಿಸಿ, ಆಸೆ ಬಿಟ್ಟು ಓದು ಮುಂದುವರಿಸಿ, ಕನಸುಗಳನ್ನು ನಿಜವಾಗಿಸಿಕೊಳ್ಳಿ.”

ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು(question and answer):

ಉತ್ತರ:10ನೇ ತರಗತಿ ಪಿಯುಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ.

ಉತ್ತರ: ಯಾವುದೇ ಮಾರುಕಟ್ಟೆ ಅಥವಾ ಬುಕ್ ಸ್ಟಾಲ್‌ಗೆ ಹೋಗಬೇಕಾಗಿಲ್ಲ. ಪುಸ್ತಕಗಳು ವಿದ್ಯಾರ್ಥಿಗಳ ಓದುದ

೩. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಯಾವ ರೀತಿಯ ಧೈರ್ಯ ಸಿಗುತ್ತದೆ?

ಉತ್ತರ: ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟ, ಪುಸ್ತಕ ಕೊರತೆ ಅಥವಾ availability problem ಬಗ್ಗೆ ಚಿಂತೆ ಮಾಡದೆ, ತಮ್ಮ ಓದು ಮತ್ತು ಪರೀಕ್ಷೆಗಳ ತಯಾರಿಗೆ ಸಂಪೂರ್ಣ ಗಮನ ಕೊಡಬಹುದು. ಇದರಿಂದ confidence ಮತ್ತು motivation ಹೆಚ್ಚುತ್ತದೆ.

ಇತರೆ ಸರ್ಕಾರೀ ಕೆಲಸಗಳ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *