LPG Stove: ಸೌದಿ-ಇರಾನ್ ಸಂಘರ್ಷ, ಭಾರತದ ಅಡುಗೆ ಮನೆಗೆ ತಟ್ಟಿದ ಯುದ್ಧದ ಬಿಸಿ! ಸಿಲಿಂಡರ್ ಬುಕಿಂಗ್‌ಗೆ ಬಂತು ಹೊಸ ರೂಲ್ಸ್!

LPG

ಸೌದಿ ಅರೇಬಿಯಾ, UAE, ಹಾಗೆ ಇರಾನ್ ಯುದ್ದದಿಂದ ಭಾರತೀಯರು ಬಳಸುವ ಗ್ಯಾಸ್ ಸಿಲಿಂಡರ್ (Gas cylinder) ಮೇಲು ಬಂತು ಹೊಸ ರೂಲ್ಸ್! ಮಹಿಳೆಯರು ಫುಲ್ ಶಾಕ್! ಇನ್ನು ಮುಂದೆ ಪ್ರತಿಯೊಬ್ಬರೂ ಅಡುಗೆ ಮನೆಗೆ ಬಳಸುವ ಎರಡನೇ ಸಿಲಿಂಡರ್ ಗೆ 21 ದಿನ ಕಾಯಲೇ ಬೇಕು ಹೌದು ನೀವು ಕೇಳುತ್ತಿರುವುದು ನೋಡುತ್ತಿರುವುದು ನಿಜಾ. ಇದೀಗ ಪಶ್ಚಿಮ ಏಷ್ಯಾದ ರಾಜ್ಯಕೀಯ ಉಧ್ವಿಗ್ನತೆಗಳು ಭಾರತಕ್ಕೆ ಬರುವ ಅಡುಗೆ ಅನಿಲಗಳ ಮೇಲೆ ಕೆಟ್ಟ ಪರಿಣಾಮವನ್ನ ಬೀರಿದೆ.

LPG Gas Cylinder In Kannada

ಭಾರತದ ಕೋಟ್ಯಂತರ ಗೃಹಿಣಿಯರ ಅಡುಗೆ ಮನೆಗೆ ಪಶ್ಚಿಮ ಏಷ್ಯಾದಲ್ಲಿ ಸೌದಿ ಅರೇಬಿಯಾ, ಯುಎಇ ಮತ್ತು ಇರಾನ್ ನಡುವಿನ ಯುದ್ಧದ ಬಿಸಿ ಮುಟ್ಟಿದೆ. ಗೃಹಿಣಿಯರು ತಮ್ಮ ಅಡುಗೆ ಮನೆಗೆ ಎರಡನೇ ಸಿಲಿಂಡರ್ ಪಡೆಯಲು ಇನ್ನು ಮುಂದೆ ಕಡ್ಡಾಯವಾಗಿ 21 ರಿಂದ 25 ದಿನ ಕಾಯಲೇಬೇಕು ಎಂಬ ಹೊಸ ನಿಯಮ ಮಹಿಳೆಯರಲ್ಲಿ ಆತಂಕವನ್ನ ಇದೀಗ ಮೂಡಿಸಿದೆ.

ಯವಾಗಿನಂದ ಈ ರೂಲ್ಸ್ ಜಾರಿ? ಸೌದಿ ಅರೇಬಿಯಾ, UAE, ಹಾಗೆ ಇರಾನ್ ಯುದ್ದದಿಂದ ಭಾರತಕ್ಕೆ ಯಾಕೆ ಎಂತ ಪರಿಸ್ಥಿತಿ? ಅತಿ ಹೆಚ್ಚಾಗಿ ಅಡುಗೆ ಅನಿಲ ಬಳಸುವ ಕುಟುಂಬಗಳ ಪರಿಸ್ಥಿತಿ ಮುಂದೆ ಏನಾಗಬಹುದು? ಇಂತ ವಿಷಯಗಳು ನಿಮ್ಮಲ್ಲಿ ಕಾಡುತ್ತಿದ್ದರೆ ಕೆಳಗೆ ಕೊಡಲಾದ ಮಾಹಿತಿಯನ್ನ ಸಂಪೂರ್ಣವಾಗಿ ನೋಡಿ.


LPG

ಹೈಲೆಟ್ಸ್‌ (highlights)

ಮುಖ್ಯ ಹೈಲೆಟ್ಸ್ (LPG)ವಿವರಣೆ
1. 21–25 ದಿನಗಳMandatory Gapಪ್ರತಿಯೊಬ್ಬ ಗೃಹಿಣಿಯು ಎರಡನೇ LPG ಸಿಲಿಂಡರ್‌ಗೆ ಕನಿಷ್ಠ 21–25 ದಿನ ಕಾಯಬೇಕು. ಇದು ತಾತ್ಕಾಲಿಕ ನಿಯಮ, ಪೂರೈಕೆ ಸಮತೋಲನಕ್ಕಾಗಿ ಜಾರಿಗೊಂಡಿದೆ.
2. ಮಧ್ಯಪೂರ್ವದ ಉದ್ವಿಗ್ನತೆಸೌದಿ ಅರೇಬಿಯಾ, UAE ಮತ್ತು ಇರಾನ್ ನಡುವೆ ಯುದ್ಧದ ಬಿಸಿಯಿಂದ ಹಡಗುಗಳ ಸಂಚಾರ ತಡವಾಗುತ್ತಿದೆ. ಇದರ ಪರಿಣಾಮ ಭಾರತಕ್ಕೆ LPG ಪೂರೈಕೆ ವಿಳಂಬವಾಗಿದೆ.
3. ಡಿಜಿಟಲ್ ಬುಕ್ಕಿಂಗ್ ಆದ್ಯತೆWhatsApp, LPG App (Indane/HP/Bharatgas) ಅಥವಾ Online Payment Apps ಮೂಲಕ ಬುಕ್ಕಿಂಗ್ ಪ್ರಕ್ರಿಯೆ ತ್ವರಿತವಾಗಿದೆ. ಹಳೆಯ ಏಜೆನ್ಸಿ ಭೇಟಿ ಸಿಸ್ಟಮ್ ಕಡಿಮೆಯಾಗಿದೆ.
4. E-KYC / DAC ಸುರಕ್ಷತೆBiometric / Aadhaar ದೃಢೀಕರಣ ಮತ್ತು Delivery Authentication Code (DAC) ಮೂಲಕ ಪೂರೈಕೆ ಖಚಿತಪಡಿಸಲಾಗಿದೆ. ಇದು ಭ್ರಷ್ಟಾಚಾರ ತಡೆಗಟ್ಟುತ್ತದೆ.
5. ಪರ್ಯಾಯ ಆಯ್ಕೆಗಳುಮಧ್ಯಂತರ ಸಮಯದಲ್ಲಿ ಮನೆಗೆ ಎಲೆಕ್ಟ್ರಿಕ್ ಇಂಡಕ್ಷನ್ ಸ್ಟೌವ್ ಅಥವಾ ಸೋಲಾರ್ ಕುಕ್ಕರ್ ಬಳಸುವುದು ಉಚಿತ ಮತ್ತು ಸುಲಭ ಪರಿಹಾರವಾಗಿದೆ.
6. ಬೆಲೆ ಮತ್ತು ಪೂರೈಕೆ ನಿರೀಕ್ಷೆಯುದ್ಧ ಕಡಿಮೆಯಾಗಿದಂತೆ, ಅಥವಾ ಕಚ್ಚಾ ತೈಲದ ಬೆಲೆ ಇಳಿದಂತೆ LPG ಪೂರೈಕೆ ಸುಧಾರಿತವಾಗಬಹುದು; ಸಿಲಿಂಡರ್ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಭಾರತಕ್ಕೆ ಹೇಗೆ ಪರಿಣಾಮ ಬೀರುತ್ತದೆ?

ಬಹಳಷ್ಟು ವರ್ಷಗಳಿಂದ ಭಾರತವು ಅಡುಗೆ ಅನಿಲವನ್ನ ಸುಮಾರು 60% ಕ್ಕಿಂತ ಹೆಚ್ಚು ಪಶ್ಚಿಮ ಏಷ್ಯಾ ದಿಂದಲೇ ಆಮದು ಮಾಡಿಕೊಳ್ಳುತ್ತಾ ಬಂದಿದೆ. ಇದೀಗ ಅಲ್ಲಿನ ಯುದ್ಧದ ಕಾರಣದಿಂದ ಹಡಗುಗಳ ಸಂಚಾರಕ್ಕೆ ಅಡ್ಡಿ ಯಾದಲ್ಲಿ ಭಾರತಕ್ಕೆ ಗ್ಯಾಸ್ ಸರಬರಾಜು ವಿಳಂಬವಾಗುತ್ತಿದೆ. ಇದೇ ಕಾರಣಕ್ಕೆ ಸದ್ಯಕ್ಕೆ ಲಭ್ಯವಿರುವ ಸ್ಟಾಕ್ ಅನ್ನು ಎಲ್ಲರಿಗೂ ಹಂಚಿಕೆ ಮಾಡುವ ಉದ್ದೇಶದಿಂದ ಎರಡನೇ ಗ್ಯಾಸ್ ಪಡೆಯಲು 21 ರಿಂದ 25 ದಿನಗಳು ಕಾಯಲೇಬೇಕು ಎನ್ನುವ ಹೊಸ ರೂಲ್ಸ್ ಅನ್ನ ಜಾರಿಗೊಳಿಸಿದೆ.

ಯುದ್ಧದ ಪರಿಸ್ಥಿತಿ:

ಇರಾನ್ ಮತ್ತು ಇಸ್ರೇಲ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆ, ಜೊತೆಗೆ ಸೌದಿ ಅರೇಬಿಯಾ ಸೇರಿದಂತೆ ಕೆಲವು ಗಲ್ಫ್ ರಾಷ್ಟ್ರಗಳ ಪ್ರಾದೇಶಿಕ ರಾಜಕೀಯ ಪರಿಸ್ಥಿತಿ ಮಧ್ಯಪೂರ್ವದಲ್ಲಿ ಅಸ್ಥಿರತೆಯನ್ನು ಉಂಟುಮಾಡುತ್ತಿದೆ. ಈ ಪರಿಸ್ಥಿತಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಸಹ ಪರಿಣಾಮ ಬೀರುತ್ತಿದೆ.

ಸಾಗಣೆ ಮಾರ್ಗಗಳ ಸಮಸ್ಯೆ:

ಭಾರತಕ್ಕೆ ಬಹುತೇಕ ಕಚ್ಚಾ ತೈಲ ಮತ್ತು LPG ಪೂರೈಕೆ ಮಧ್ಯಪೂರ್ವ ದೇಶಗಳಿಂದ ಬರುತ್ತದೆ. ಈ ಸರಕುಗಳು ಸಾಮಾನ್ಯವಾಗಿ ಕೆಂಪು ಸಮುದ್ರ ಹಾಗೂ ಹಾರ್ಮುಜ್ ಜಲಸಂಧಿ ಮಾರ್ಗಗಳ ಮೂಲಕ ಸಾಗುತ್ತವೆ. ಇತ್ತೀಚಿನ ಉದ್ವಿಗ್ನತೆಯಿಂದ ಈ ಮಾರ್ಗಗಳಲ್ಲಿ ಸಾಗುವ ಹಡಗುಗಳಿಗೆ ಭದ್ರತಾ ಸವಾಲುಗಳು ಎದುರಾಗಿದ್ದು, ಕೆಲವು ಸಂದರ್ಭಗಳಲ್ಲಿ ಸಾಗಣೆ ವಿಳಂಬವಾಗುವ ಸಾಧ್ಯತೆ ಇದೆ.

ಅಂತರಾಷ್ಟ್ರೀಯ ಬೆಲೆ ಏರಿಕೆ:

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದರೆ ಅದರ ಪರಿಣಾಮ ಭಾರತದಲ್ಲಿಯೂ ಕಾಣಬಹುದು. ತೈಲವನ್ನು ಆಮದು ಮಾಡುವ ಭಾರತೀಯ ಕಂಪನಿಗಳಿಗೆ ಹೆಚ್ಚುವರಿ ವೆಚ್ಚ ಉಂಟಾಗಬಹುದು. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯ ಸಾಧ್ಯತೆ ಉಂಟಾಗುತ್ತದೆ.

ಯಾವಾಗಿನಿಂದ ಈ ರೂಲ್ಸ್ ಜಾರಿ?

“ತೈಲ ಕಂಪನಿಗಳು ಈ ನಿಯಮವನ್ನು ತಕ್ಷಣದಿಂದಲೇ ಮಾರ್ಚ್ ೧ ೦ (ಇಂದಿನಿಂದಲೇ) ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚಿಸಿವೆ”. ಅಂದರೆ, ನೀವು ಇಂದು ಸಿಲಿಂಡರ್ ಪಡೆದರೆ, ಮುಂದಿನ ೨೧ ದಿನಗಳವರೆಗೆ ಮತ್ತೊಂದು ಬುಕಿಂಗ್ ಮಾಡಲು ಸಿಸ್ಟಮ್ ಅವಕಾಶ ನೀಡುವುದಿಲ್ಲ.

ತೈಲ ಕಂಪನಿಗಳು ತಕ್ಷಣವೇ ಈ ನಿಯಮವನ್ನ ಜಾರಿ ಮಾಡಿರುಇವುದರ ಪ್ರಮುಖ ಉದ್ದೇಶವೇನೆಂದರೆ ವಾಸ್ತವವಾಗಿ, ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು 15 ರಿಂದ 21 ದಿನಗಳ ಕಾಲಾವಕಾಶ ಇರಬೇಕು ಎಂಬ ನಿಯಮ ಭಾರತದಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ ಆದರೆ ಇದೀಗ ಯುದ್ಧದ ಪರಿಣಾಮದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ತೈಲ ಕಂಪನಿಗಳು ಈ ನಿಯಮವನ್ನು ಮಾರ್ಚ್ ೨೦೨೪ ರಿಂದ ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ. 

ಕೆಲವು ಗ್ರಾಹಕರು ಅನಗತ್ಯವಾಗಿ ಸಿಲಿಂಡರ್ ದಾಸ್ತಾನು ಮಾಡುವುದನ್ನು ತಡೆಯಲು ತೈಲ ಕಂಪನಿಗಳು ಈ ನಿಯಮವನ್ನು ಜಾರಿ ತಂದಿರುವುದು ಗಮನಿಸಬಹುದು. ಮುಖ್ಯವಾಗಿ ನೀವಿಲ್ಲಿ ಗಮನಿಸಿ ಈಗಾಗಲೇ ಈ ನಿಯಮ ಕೆಲವು ಭಾಗದಲ್ಲಿ ಜಾರಿ ಯಾಗಿದೆ.

ಇನ್ನು ಮುಂದೆ ಗ್ಯಾಸ್ ಸಿಲಿಂಡರ್(LPG) ಬುಕ್ಕಿಂಗ್ ಹೇಗಿರುತ್ತೆ?

21-25 ದಿನಗಳ ಅಂತರ (Mandatory Gap) ಕಡ್ಡಾಯ ಮಾಡಿದ ಅನಿಲ ತೈಲ ಕಂಪನಿಗಳು ಇನ್ನು ಮುಂದೆ ನೀವು ಒಂದು ಸಿಲಿಂಡರ್ ಪಡೆದ ತಕ್ಷಣ ಮತ್ತೊಂದನ್ನು ಬುಕ್ ಮಾಡಲು ಸಾಧ್ಯವಿಲ್ಲ. ನಿಮ್ಮ ಮೊದಲ ಸಿಲಿಂಡರ್ ವಿತರಣೆಯಾದ ದಿನದಿಂದ ಕನಿಷ್ಠ 21 ರಿಂದ 25 ದಿನಗಳ ಕಾಲಾವಕಾಶ ಮುಗಿದ ನಂತರವಷ್ಟೇ ಸಿಸ್ಟಮ್ ಮುಂದಿನ ಬುಕ್ಕಿಂಗ್ ಸ್ವೀಕರಿಸುತ್ತದೆ ಎಂಬುದು ಗ್ರಾಹಕರು ತಿಳಿಯಲೇ ಬೇಕು.

ಈ ಸಂದರ್ಭದಲ್ಲಿ ಡಿಜಿಟಲ್ ಬುಕ್ಕಿಂಗ್‌ಗೆ ಆದ್ಯತೆ ಯಾವತಾರ ಇರುತ್ತದೆ ಗೊತ್ತ ?

ಹಳೆಯ ಕಾಲದಂತೆ ಏಜೆನ್ಸಿಗೆ ಹೋಗಿ ಬುಕ್ ಮಾಡುವ ಬದಲು, ಪಾರದರ್ಶಕತೆಗಾಗಿ ಈ ಕೆಳಗಿನ ವಿಧಾನಗಳನ್ನು ಬಳಸಲು ಸರ್ಕಾರ ಇದೀಗ ಸೂಚನೆಯನ್ನ ಕೊಟ್ಟಿದೆ. ಹಾಗಿದ್ರೆ ಯಾವ ತರ ಅನ್ನೋದನ್ನ ಈ ಕೆಳಗೆ ನೋಡೋಣ ಬನ್ನಿ.

  • LPG WhatsApp ಬುಕ್ಕಿಂಗ್: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಏಜೆನ್ಸಿಯ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಬುಕ್ ಮಾಡುವ ಅವಕಾಶ.
  • ಮೊಬೈಲ್ ಆ್ಯಪ್: Indane (IndianOil One), HP Pay, ಅಥವಾ Bharatgas ಆ್ಯಪ್‌ಗಳ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ.
  • ಪಾವತಿ ಆ್ಯಪ್‌ಗಳು: Google Pay, PhonePe ಅಥವಾ Amazon Pay ಮೂಲಕ ಬುಕ್ ಮಾಡಿ ಪಾವತಿಸಬಹುದು.

ಆಧಾರ್ ದೃಢೀಕರಣ (Biometric/E-KYC)

ಪೂರೈಕೆಯಲ್ಲಿ ಅಕ್ರಮ ತಡೆಯಲು ಸರ್ಕಾರವು ಇತ್ತೀಚೆಗೆ E-KYC ಕಡ್ಡಾಯಗೊಳಿಸಿದೆ. ನಿಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಬೆರಳಚ್ಚು (Biometric) ನೀಡಿ ಆಧಾರ್ ಲಿಂಕ್ ಮಾಡದಿದ್ದರೆ, ಭವಿಷ್ಯದಲ್ಲಿ ಬುಕ್ಕಿಂಗ್ ಅಥವಾ ಸಬ್ಸಿಡಿ ಪಡೆಯಲು ತೊಂದರೆಯಾಗಬಹುದು ಇನ್ನುವ ಎನ್ನುವ ಪ್ರಮುಖ ಉದ್ದೇಶದಿಂದ ಈ ಆಧಾರ್ ದೃಢೀಕರಣ ಮಾಡುತ್ತಿದೆ.

 ವಿತರಣಾ ಕೋಡ್ (DAC – Delivery Authentication Code)

ಈ ವಿತರಣಾ ಕೋಡ್ ಬಹಳಷ್ಟು ಮುಖ್ಯ ವಾಗಿದೆ ಯಾಕಂದರೆ ಸಿಲಿಂಡರ್ ನಿಮ್ಮ ಮನೆಗೆ ಬಂದಾಗ, ನಿಮ್ಮ ಮೊಬೈಲ್‌ಗೆ ಬರುವ DAC ಕೋಡ್ ಅನ್ನು ವಿತರಣಾ ಸಿಬ್ಬಂದಿಗೆ ನೀಡಲೇಬೇಕು. ಇದು ಸಿಲಿಂಡರ್ ಸರಿಯಾದ ಗ್ರಾಹಕರಿಗೇ ತಲುಪಿದೆ ಎಂದು ಖಚಿತಪಡಿಸುತ್ತದೆ ಹಾಗಾಗಿ ಮುಖ್ಯವಾಗುತ್ತದೆ.

ಗ್ರಾಹಕರು ಇಂದು ಗಮನಿಸಲೇ ಬೇಕಾದ ಮುಖ್ಯ ಅಂಶ:-

ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ಗ್ಯಾಸ್ ಕೊರತೆಯಾಗಬಹುದು ಎಂಬ ಆತಂಕವಿದ್ದರೆ, ಮನೆಯಲ್ಲಿ ಹೆಚ್ಚುವರಿಯಾಗಿ ಒಂದು ಇಂಡಕ್ಷನ್ ಸ್ಟೌವ್ ಇಟ್ಟುಕೊಳ್ಳುವುದು ನನ್ನ ಪ್ರಕಾರ ಒಳ್ಳೆಯದು. ಸರಿಯಾದ ಸಮಯಕ್ಕೆ ಅಡಿಗೆ ಮಾಡಬಹುದು.

ಇದರಿಂದ ಗ್ರಾಹಕರಿಗೆ ಯಾವಾಗ ರಿಲೀಫ್ ಸಿಗಬಹುದು:

ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದ ಉಂಟಾಗಿರುವ ಈ ಕಟ್ಟುನಿಟ್ಟಿನ ನಿಯಮಗಳಿಂದ ಗ್ರಾಹಕರಿಗೆ ಸದ್ಯಕ್ಕೆ ಪೂರ್ಣ ಪ್ರಮಾಣದ ರಿಲೀಫ್ (Relief) ಸಿಗುವುದು ಕಷ್ಟ ಎನ್ನುವ ವಿಷಯವನ್ನ ತಿಳಿಯಲೇಬೇಕು. ಒಂದು ವೇಳೆ ಯುದ್ಧ ನಿಂತರೆ ಮಾತ್ರ ಸೌದಿ ಅರೇಬಿಯಾ, ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಕಡಿಮೆಯಾಗಿ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸಂಚಾರ ಮತ್ತೆ ಸರಾಗವಾಗಿ ನಡೆಯಲು ಆರಂಭಿಸಿದರೆ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಸುಧಾರಿಸಬಹುದು. ಆಗ ಸಿಲಿಂಡರ್ ಬುಕ್ಕಿಂಗ್ ನಡುವೆ ಇರಬಹುದಾದ 21–25 ದಿನಗಳ ಅಂತರವನ್ನು ಕೂಡ ಕಡಿಮೆ ಮಾಡುವ ಸಾಧ್ಯತೆ ಇದೆ.

ಭಾರತದಲ್ಲಿ ಅನಿಲ ಹೆಚ್ಚು ಸಂಗ್ರಹ ಇದ್ದಾರೆ ಏನಾಗುತ್ತಿತ್ತು ?

ಭಾರತ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಅನಿಲವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರೆ ದೇಶದಲ್ಲಿ ಗ್ಯಾಸ್ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಿಂದ ಗ್ರಾಹಕರಿಗೂ ಸಿಲಿಂಡರ್ ಸುಲಭವಾಗಿ ದೊರಕಬಹುದು.

ಅಂತರಾಷ್ಟ್ರೀಯ ಬೆಲೆ ಕುಸಿದರೆ ಪರಿಣಾಮ:

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದರೆ ಅದರ ಪರಿಣಾಮ ಭಾರತದಲ್ಲಿಯೂ ಕಾಣಬಹುದು. ಅಂಥ ಸಂದರ್ಭದಲ್ಲಿ LPG ಸಿಲಿಂಡರ್ ಬೆಲೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಜನರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ.

ಅತಿ ಹೆಚ್ಚಾಗಿ ಗ್ಯಾಸ್ ಬಳಸುವ ಸ್ಥಿತಿ ಮುಂದೇನು:

ಭಾರತ ದಂತ ದೇಶದಲ್ಲಿ ಬಹಳಷ್ಟು ಕುಟುಂಬಗಳು ಕೇವಲ ಅಡುಗೆ ಅನಿಲದ ಮೇಲೆ ತಮ್ಮ ಜೀವನವನ್ನು ನಡೆಸುತ್ತಾ ಬಂದಿದೆ. ಇಂತಹ ಕುಟುಂಬಗಳು ತಿಂಗಳಲ್ಲಿಯೇ ಮೂರು ನಾಲ್ಕು ಗ್ಯಾಸ್ ಗಳನ್ನ ಪಡೆಯುತ್ತಿದ್ದರು ಆದರೆ ಈ ಯುದ್ಧದ ಕಾರಣದಿಂದಾಗಿ ತಮಗೆ ಬೇಕಾದ ಸಂದರ್ಭದಲ್ಲಿ ಲ್‌ಪಿಜಿ ಸಿಲಿಂಡರ್ ಗಳನ್ನು ಪಡೆಯಲು ಸರ್ಕಾರ ಇದೀಗ ಬ್ರೇಕ್ ಹಾಕಿದೆ. ಹಾಗಿದ್ರೆ ಇವರ ಪರಿಸ್ಥಿತಿ ಮುಂದೇನು ಈ ಕೆಳಗೆ ತಿಳಿಸಲಾಗಿದೆ.

  • ಇಂತಹ ಕುಟುಂಬಗಳು ಅನಿವಾರ್ಯವಾಗಿ ಎಲೆಕ್ಟ್ರಿಕ್ ಇಂಡಕ್ಷನ್ ಸ್ಟವ್ ಅಥವಾ ಸೋಲಾರ್ ಕುಕ್ಕರ್ಗಳನ್ನ ಬಳಸಬೇಕಾದ ಪರಿಸ್ಥಿತಿ ಬರಬಹುದು.
  • ಅಂತರಾಷ್ಟ್ರೀಯ ಬೆಲೆ ಏರಿಕೆಯಿಂದಾಗಿ ಸಿಲಿಂಡರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಾಸಿಕ ಖರ್ಚು ಬಹಳಷ್ಟು ಅಧಿಕವಾಗಲಿದೆ.
  • ಒಟ್ಟಾರೆಯಾಗಿ ಹೇಳುವುದಾದರೆ ಇದು ಅಧಿಕೃತವಾಗಿ ಹೊಸದಾಗಿ ಘೋಷಿಸಲಾದ ಕಾನೂನಿಗಿಂತ ಹೆಚ್ಚಾಗಿ, ಯುದ್ಧದ ಸಂದರ್ಭದಲ್ಲಿ ಉಂಟಾಗುವ ತುರ್ತು ಪೂರೈಕೆ ನಿರ್ವಹಣಾ ವ್ಯವಸ್ಥೆಯಾಗಿದೆ. ಆದ್ದರಿಂದ ಗ್ರಾಹಕರು ಇಂಥ ಒಂದು ಪರಿಸ್ಥಿತಿಯನ್ನ ಅರಿತುಕೊಂಡು ತಮ್ಮ ಮುಂದಿನ ಹೆಜ್ಜೆಯನ್ನ ಇಡಬೇಕು.

ನನ್ನ ಕೊನೆಯ ಮಾತು : ಈ ನಿಯಮಗಳು ತಾತ್ಕಾಲಿಕ ಉದ್ದೇಶಕ್ಕಾಗಿ ಮಾತ್ರ ಜಾರಿಯಾಗಿವೆ. ಗ್ರಾಹಕರು ಧೈರ್ಯದಿಂದ ನಿಯಮ ಪಾಲಿಸಿ, ಪರ್ಯಾಯ ಆಯ್ಕೆಗಳು ಬಳಸಿಕೊಂಡು ತಮ್ಮ ದಿನನಿತ್ಯದ ಅಡುಗೆ ಕಾರ್ಯವನ್ನು ನಿರಂತರವಾಗಿ ಸಾಗಿಸಬಹುದು. ಯುದ್ಧ ಕಡಿಮೆಯಾಗುವಂತೆ, ಪೂರೈಕೆ ಸುಧಾರಿತವಾಗುತ್ತಾ, ಸಿಲಿಂಡರ್ ಬುಕ್ಕಿಂಗ್‌ ನಡುವಿನ 21–25 ದಿನಗಳ ಅಂತರವೂ ಕಡಿಮೆ ಆಗಬಹುದು.

ಪದೇ ಪದೇ ಕೇಳದ ಪ್ರಶ್ನೆ ಉತ್ತರ (Question and Answer)

ಉತ್ತರ: ಮಾರ್ಚ್ 10, 2024ರಿಂದ ತೈಲ ಕಂಪನಿಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.

ಉತ್ತರ: WhatsApp, Indane/HP/Bharatgas Apps, Google Pay/PhonePe/Amazon Pay ಮೂಲಕ ಬುಕ್ ಮಾಡಬಹುದು.

ಉತ್ತರ: ಜಾಗತಿಕ ತೈಲ ಬೆಲೆ ಇಳಿದರೆ, ಸಿಲಿಂಡರ್ ಬೆಲೆ ಕೂಡ ಕಡಿಮೆಯಾಗಬಹುದು; ಬೆಲೆ ಏರಿದರೆ ಹೆಚ್ಚಾಗುತ್ತದೆ.

ಸರ್ಕಾರೀ ಯೋಜನೆಗಳ ಪ್ರಮುಖ ಲಿಂಕುಗಳು:-

Leave a Reply

Your email address will not be published. Required fields are marked *