ಕರ್ನಾಟಕ ರಾಜ್ಯದ ಸಣ್ಣ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ 2026-27ನೇ ಸಾಲಿನ ವಿಧಾನಸೌಧದಲ್ಲಿ ಮಂಡಿಸಲಾದ ನಿನ್ನೆಯ ಬಜೆಟ್ ನಲ್ಲಿ ಮುಂದಿನ ಬೇಸಿಗೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರು ಹಾಯಿಸುವ ಪ್ರಮುಖ ಅಂಶವನ್ನು ಗಮನದಲ್ಲಿಟ್ಟುಕೊಂಡು ಗಂಗಾ ಕಲ್ಯಾಣ ಯೋಜನೆಗೆ (Ganga Kalyana Scheme) ಒಂದು ಅಪರೂಪದ ಕೊಡುಗೆಯನ್ನು ನೀಡಿದ್ದಾರೆ.
Ganga Kalyana Scheme In Kannada
ಚಳಿಗಾಲ ಮುಗಿದು ಇದೀಗ ಶುರುವಾಗಿದೆ. ಕರ್ನಾಟಕದ ಯಾವುದೇ ಒಬ್ಬ ರೈತರು ಕೂಡ ತಾವು ಬೆಳೆದ ಬೆಳೆಗಳಿಗೆ ನೀರಿನ ಸಮಸ್ಯೆಯಿಂದಾಗಿ ತಮ್ಮ ಬೆಳೆಗಳನ್ನ ನಾಶ ಮಾಡಿಕೊಳ್ಳಬಾರದು ಅನ್ನುವ ಪ್ರಮುಖ ಉದ್ದೇಶದಿಂದ ಮಾರ್ಚ್ 6 ಮಂಡಿಸಲಾದ ಬಜೆಟ್ ನಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ನೀರಾವರಿ ಯೋಜನೆಯಲ್ಲಿ ಹಣಕಾಸಿನ ನೆರವನ್ನ ಗಣನೀಯವಾಗಿ ಹೆಚ್ಚಿಸುವ ಮೂಲಕ ರೈತರಿಗೆ ವಿಚಾರವನ್ನು ಘೋಷಣೆ ಮಾಡಿದೆ. ಈ ವಿಷಯವಾಗಿ ಬೋರ್ವೆಲ್ ಅನ್ನ ಕೊರಿಸಲು ಇದುವರೆಗೂ ಕೊಡುತ್ತಿದ್ದ ಮೊತ್ತವನ್ನ ಹೆಚ್ಚು ಮಾಡಿರುವುದು ಈ ಬಾರಿಯ ಬಜೆಟ್ ನ ಮುಖ್ಯ ಹೈಲೈಟ್ಸ್ ಆಗಿದೆ.

ಕರ್ನಾಟಕದ ಕೃಷಿ ಇತಿಹಾಸದಲ್ಲಿ ಮಾರ್ಚ್ 6, 2026 ಸುವರ್ಣಾಕ್ಷರದಲ್ಲಿ ಬರೆಯಬಹುದಾದ ದಿನವಾಗಿದೆ. ವಿಧಾನಸೌಧದಲ್ಲಿ ಮಂಡಿಸಲಾದ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಸಣ್ಣ ಮತ್ತು ಅತಿ ಸಣ್ಣ ರೈತರ ಪಾಲಿಗೆ ಸಂಜೀವಿನಿ ಯಂತಹ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಜೀವನಾಡಿಯಾಗಿರುವ ಕೃಷಿ ಕ್ಷೇತ್ರಕ್ಕೆ ಅದರಲ್ಲಿಯೂ ವಿಶೇಷವಾಗಿ ನೀರಾವರಿ ವಲಯಕ್ಕೆ ಹೆಚ್ಚಿನ ಗಮನ ಹರಿತಿರುವುದು ಒಂದು ಒಳ್ಳೆಯ ವಿಷಯವೇ ಆಗಿದೆ. ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಅಡಿಯಲ್ಲಿ ಒಂದು ಅತ್ಯುತ್ತಮವಾದ ಸರ್ಕಾರದ ನಿರ್ಧಾರವಾಗಿದೆ ಇದು ಅಂದರೆ ತಪ್ಪಾಗುವುದಿಲ್ಲ.
ಗಂಗಾ ಕಲ್ಯಾಣ ಯೋಜನೆ ಬಜೆಟ್ 2026-27: ಪ್ರಮುಖ ಮುಖ್ಯಾಂಶಗಳು:
| ಪ್ರಮುಖ ಅಂಶಗಳು | ವಿವರಣೆ |
|---|---|
| ಬೋರ್ವೆಲ್ ಸಹಾಯಧನ ಏರಿಕೆ(Ganga Kalyana Scheme) | ವೈಯಕ್ತಿಕ ಬೋರ್ವೆಲ್ ಕೊರೆಯುವ ಮೊತ್ತವನ್ನು ₹1.5 ಲಕ್ಷದಿಂದ ₹2.5 ಲಕ್ಷಕ್ಕೆ (ಪ್ರದೇಶಕ್ಕೆ ಅನುಗುಣವಾಗಿ) ಹೆಚ್ಚಿಸಲಾಗಿದೆ. |
| ವಿದ್ಯುದ್ದೀಕರಣಕ್ಕೆ ಬೂಸ್ಟ್ | ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕದ ಸಹಾಯಧನವನ್ನು ₹75,000 ದಿಂದ ₹1.50 ಲಕ್ಷಕ್ಕೆ ದುಪ್ಪಟ್ಟು ಮಾಡಲಾಗಿದೆ. |
| ಸೌರಶಕ್ತಿ ಪಂಪ್ಗಳಿಗೆ ಆದ್ಯತೆ | ವಿದ್ಯುತ್ ವಿಳಂಬ ತಪ್ಪಿಸಲು ಸೌರಶಕ್ತಿ ಚಾಲಿತ ಪಂಪ್ಸೆಟ್ (Solar Pump) ಅಳವಡಿಕೆಗೆ ವಿಶೇಷ ಪ್ರೋತ್ಸಾಹ ನೀಡಲಾಗಿದೆ. |
| ಅಂತರ್ಜಲ ಮರುಪೂರಣ | ಬೋರ್ವೆಲ್ ಬತ್ತಿ ಹೋಗದಂತೆ ತಡೆಯಲು ಮಳೆ ನೀರು ಕೊಯ್ಲು (Rainwater Harvesting) ರಚನೆಗೆ ತಾಂತ್ರಿಕ ನೆರವು. |
| ಡಿಜಿಟಲ್ ಪಾರದರ್ಶಕತೆ | ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರ ನಗದು ವರ್ಗಾವಣೆ (DBT) ಮತ್ತು ಆನ್ಲೈನ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ. |
| ಬೇಸಿಗೆ ಬೆಳೆ ರಕ್ಷಣೆ | ನೀರಿನ ಅಭಾವದಿಂದ ಬೆಳೆ ನಾಶವಾಗದಂತೆ ತಡೆಯಲು ಈ ಹೆಚ್ಚುವರಿ ಅನುದಾನವನ್ನು ಯುದ್ಧೋಪಾದಿಯಲ್ಲಿ ಬಿಡುಗಡೆ ಮಾಡಲು ನಿರ್ಧಾರ. |
ಬೋರ್ವೆಲ್ ಮೊತ್ತದಲ್ಲಿನ ಬದಲಾವಣೆ ಏನು?(Change in borewell amount)
ಈ ಯೋಜನೆಯು ಜಾರಿಯಾದ ವರ್ಷಗಳಿಂದ ರೈತರ ವೈಯಕ್ತಿಕ ಬೋರ್ವೆಲ್ ಕೊಡಿಸಲು ನೀಡಲಾಗುತ್ತಿದ್ದ ಸಹಾಯಧನವು ರೈತರ ಅಗತ್ಯಕ್ಕೆ ಸಾಕಾಗುತ್ತಿರಲಿಲ್ಲ ಆದರೆ ನೆನ್ನೆಯ ಬಜೆಟ್ ನಲ್ಲಿ ಸಿಎಂ ಈ ಮೊತ್ತವನ್ನು ಬರೋಬ್ಬರಿ 1.5 ಲಕ್ಷಗಳಿಂದ 2.5 ಲಕ್ಷ ರೂಪಾಯಿಗಳವರೆಗೆ ಏರಿಕೆ ಮಾಡಿದ್ದಾರೆ. ವಿಶೇಷವಾಗಿ ವಿದ್ಯುತೀಕರಣಕ್ಕೆ ಸಂಬಂಧಿಸಿದ ಸಹಾಯಧನವನ್ನು 75,000 ದಿಂದ ಸುಮಾರು 1.50 ಲಕ್ಷಕ್ಕೆ ಹೆಚ್ಚಿಸಿರುವುದು ರೈತರಿಗೆ ದೊಡ್ಡ ನೆರವನ್ನ ನೀಡಿದಂತಾಗಿದೆ.
೧ . ಸೌರಶಕ್ತಿ ಚಾಲಿತ ಪಂಪ್ಸೆಟ್ಗಳಿಗೆ (Solar Pumps) ಆಧ್ಯತೆ ನೀಡಿದ ಸರ್ಕಾರ:
ಬೋರ್ವೆಲ್(Ganga Kalyana Scheme) ಕೊರೆದ ನಂತರ ಕಂಬಗಳನ್ನ ಅಥವಾ ಸಿಗಲು ರೈತರು ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಹಳಷ್ಟು ಇತ್ತು. ಕೆಲವು ಬಾರಿ ರೈತರು ಬೆಳೆದ ಬೆಳೆಗೆ ನೀರಿಲ್ಲದೆ ಬೆಳೆಯ ನಾಶ ಕೂಡ ಆಗುತ್ತಿತ್ತು. ಆದರೆ ಈ ಬಾರಿಯ ಬಜೆಟ್ ನಲ್ಲಿ ಗಂಗಕಲ್ಯಾಣ ಯೋಜನೆ (Ganga Kalyana Scheme) ಅಡಿಯಲ್ಲಿ ಸೌರ ಶಕ್ತಿ ಚಾಲಿತ ಪಂಪ್ಸೆಟ್ಗಳನ್ನ ಅಳವಡಿಸಿಕೊಳ್ಳಲು ಇಚ್ಚಿಸುವ ರೈತರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದರಿಂದ ವಿದ್ಯುತ್ ಬಿಲ್ ತಲೆನೋವು ಯಾವುದೇ ರೈತರಿಗೂ ಇರೋದಿಲ್ಲ, ಹಾಗೆಯೇ ಸುಲಭವಾಗಿ ರೈತರು ತಮ್ಮ ಜಮೀನಿಗೆ ನೀರನ್ನ ಯಾವುದೇ ಸಮಯದಲ್ಲಾದರೂ ಬಿಟ್ಟುಕೊಳ್ಳಬಹುದು.
೨ . ಅಂತರ್ಜಲ ಮರುಪೂರಣ (Recharge Shaft) ಕಡ್ಡಾಯ ಮತ್ತು ನೆರವು
Ganga Kalyana Scheme ಕೇವಲ ಬೋರ್ವೆಲ್ ಕೊರೆಯುವುದು ಮಾತ್ರವಲ್ಲದೆ, ಆ ಬೋರ್ವೆಲ್ಗಳು ದೀರ್ಘಕಾಲದವರೆಗೆ ನೀರು ರೈತರಿಗೆ ನೀಡುವಂತಾಗಲು ‘ಅಂತರ್ಜಲ ಮರುಪೂರಣ’ ತಂತ್ರಜ್ಞಾನಕ್ಕೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಹೊಸದಾಗಿ ಬೋರ್ವೆಲ್ ಪಡೆಯುವ ಫಲಾನುಭವಿಗಳಿಗೆ ಮಳೆ ನೀರು ಕೊಯ್ಲು (Rainwater Harvesting) ರಚನೆಗಳನ್ನು ನಿರ್ಮಿಸಿಕೊಳ್ಳಲು ತಾಂತ್ರಿಕ ಮಾರ್ಗದರ್ಶನ ಮತ್ತು ಹೆಚ್ಚುವರಿ ಅನುದಾನವನ್ನು ಘೋಷಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಬೋರ್ವೆಲ್ ಬತ್ತಿ ಹೋಗದಂತೆ ತಡೆಯುವ “ದೂರದೃಷ್ಟಿಯ ಹೆಜ್ಜೆ”ಯಾಗಿದೆ.
ಬೇಸಿಗೆಯ ಸಂಕಷ್ಟಕ್ಕೆ ಮುಕ್ತಿ: ಸರ್ಕಾರದ ದೂರದೃಷ್ಟಿ:
ಯಾವುದೇ ಒಬ್ಬ ರೈತ ನೀರಿಲ್ಲದೆ ತನ್ನ ಜಮೀನನ್ನ ಹಾಳು ಮಾಡಿಕೊಳ್ಳಬಹುದು ಎಂಬುದು ಈ ಬಾರಿಯ ಬಜೆಟ್ ಘೋಷಣೆಯಾಗಿದೆ. ಇಂತಹ ಸಮಯದಲ್ಲಿ ರೈತರು ತಮ್ಮ ತೋಟ ಅಥವಾ ಹೊಲದಲ್ಲಿ ಆರ್ಥಿಕವಾಗಿ ಮಾರ್ಗದರ್ಶನವೂ ತಕ್ಷಣವೇ ದಾರಿಗೆ ಬರುವುದರಿಂದ ರೈತರು ಈ ಬೇಸಿಗೆಯಲ್ಲಿ ನೀರಾವರಿ ಸೌಲಭ್ಯವನ್ನು ಪಡೆದು ತಮ್ಮ ಬೆಳೆಯನ್ನ ರಕ್ಷಿಸಿಕೊಳ್ಳಬಹುದು.
ಇದರ ಜೊತೆಗೆ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಜೊತೆಗೆ ಬೋರ್ವೆಲ್ ಕೊರಿಸಲು ತಾಂತ್ರಿಕ ಮಾರ್ಗದರ್ಶನ ಅಷ್ಟೇ ಅಲ್ಲದೆ ನೀರಿನ ಸಮರ್ಪಕ ಬಳಕೆಗೆ ಸಂಬಂಧಿಸಿದ ತರಬೇತಿಯನ್ನು ನೀಡುವ ಯೋಜನೆಯು ಸರ್ಕಾರ ಇದೀಗ ರೂಪಿಸಿರುವ ಅಂತದ್ದು. ಇದರಿಂದ ನೀರಿನ ಸಂಪನ್ಮೂಲವನ್ನು ಸಂರಕ್ಷಿಸುವ ಜೊತೆಗೆ ಕೃಷಿ ಉತ್ಪಾದ ಕಥೆಯು ಹೆಚ್ಚಾಗುವ ನಿರೀಕ್ಷೆ ಇದೆ. ಈ ಯೋಜನೆಯ ಮೂಲಕ ಸಣ್ಣ ಹಾಗೂ ಅಲ್ಪ ಪ್ರಮಾಣದಲ್ಲಿ ಭೂಮಿಯನ್ನ ಹೊಂದಿರುವ ರೈತರಿಗೆ ವಿಶೇಷ ಆದ್ಯತೆ ನೀಡಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ಮೂಲ ಸೌಕರ್ಯವನ್ನು ಬಲಪಡಿಸುವುದರಿಂದ ಕರ್ನಾಟಕದ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ಸಿಗುತ್ತದೆ. ರೈತರು ತಮ್ಮ ಬೆಳೆಗಳನ್ನ ಯಾವುದೇ ಆತಂಕವಿಲ್ಲದೆ ಬೆಳೆಸಲು ಸಾಧ್ಯವಾಗುವುದು ಅಷ್ಟೇ ಅಲ್ಲದೆ ಗ್ರಾಮೀಣ ಆರ್ಥಿಕತೆಯು ಒಂದು ದೃಷ್ಟಿಯಲ್ಲಿ ಬಲವಾಗುತ್ತಾ ಹೋಗುತ್ತದೆ.
ನೆನ್ನೆಯ ಬಜೆಟ್ ನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಆದ್ಯತೆ! ಯಾವ ರೀತಿಯಲ್ಲಿ?
ಮುಖ್ಯವಾಗಿ ನೀವಿಲ್ಲಿ ನೋಡಬಹುದು ನೆನ್ನೆ ಮಂಡಿಸಲಾದ ಬಜೆಟ್ ನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷ ಆಧ್ಯತೆ ನೀಡಿರುವುದು ಕಂಡು ಬರುತ್ತಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಲ್ಪ ಜಮೀನು ಹೊಂದಿರುವ ಹಾಗೆ ಅತಿ ಸಣ್ಣ ರೈತರು ಇದ್ದಾರೆ ಎಂಬುದನ್ನ ಸರ್ಕಾರ ತನ್ನ ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನ ಘೋಷಣೆ ಮಾಡಿದೆ. ಅದರಲ್ಲಿ ಗಂಗಾ ಕಲ್ಯಾಣ ಯೋಜನೆಗೆ (Ganga Kalyana Scheme) ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವುದು.
ಬೋರ್ವೆಲ್ ಕೊರಿಸಲು ಹಾಗೂ ಹನಿ ನೀರಾವರಿ ಮತ್ತು ಪಿಂಕ್ಲರ್ ವ್ಯವಸ್ಥೆಗೆ ಹೆಚ್ಚುವರಿ ಅನುದಾನ ನೀಡಿರುವ ಯೋಜನೆ ರೂಪಿಸಲಾಗಿದೆ. ಇದರಿಂದ ನೀರಾವರಿ ಸೌಲಭ್ಯವನ್ನು ಹೆಚ್ಚಿಸಲು ಬೋರ್ವೆಲ್ ಕೊರೆಸಲು ಹಾಗೂ ಹನಿ ನೀರಾವರಿಗೆ ಮತ್ತು ಪಿಂಕ್ಲರ್ ವ್ಯವಸ್ಥೆಗೆ ಹೆಚ್ಚುವರಿ ಅನುದಾನ ನೀಡುವ ಯೋಜನೆ ರೂಪಿಸಲಾಗಿದೆ. ಆದ್ದರಿಂದ ಕಡಿಮೆ ಜಮೀನಿನಲ್ಲಿ ರೈತರು ಉತ್ತಮವಾದ ಕೃಷಿ ಚಟುವಟಿಕೆಯನ್ನು ನಡೆಸಿ ತಮ್ಮ ಆದಾಯವನ್ನ ಕಂಡುಕೊಳ್ಳಲು ಸಾಧ್ಯವಾಗುತ್ತದೆ
ಅದರ ಜೊತೆಗೆ ಕೃಷಿ ಸಾಲವನ್ನ ರೈತರು ಸುಲಭವಾಗಿ ಪಡೆಯಲು ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ರೈತರಿಗೆ ಸಾಲವನ್ನು ಸುಲಭವಾಗಿ ದೊರೆಯುವಂತೆ ಮಾಡುವ ಕಾರ್ಯಕ್ರಮವನ್ನು ಕೈಗೊಂಡಿದೆ. ನಷ್ಟವಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಕ್ರಮ ಕೈಗೊಳ್ಳಲಾಗಿದೆ ಸರಿಯಾದ ಬೆಲೆ ಪಡೆಯುವಂತೆ ಮಾಡುವ ಅತ್ಯುತ್ತಮ ಘೋಷಿಸಲಾಗಿದೆ.
ಬದಲಾವಣೆಯಿಂದ ರೈತರಿಗಾಗುವ ಲಾಭ: (Farmers benefit from the change)
2026-27ನೇ ಸಾಲಿನ ಕರ್ನಾಟಕ ಸರ್ಕಾರದ ಬಜೆಟ್ ನಲ್ಲಿ ರೈತರಿಗಾಗಿ ಒಂದಿಷ್ಟು ಕೃಷಿ ಚಟುವಟಿಕೆ ಮೇಲೆ ತನ್ನ ಬಜೆಟ್ ಅನ್ನ ಸಿಎಂ ಮಂಡಿಸಿದ್ದಾರೆ. ಯಾವ ರೀತಿಯ ಬಜೆಟ್ ಮಂಡನೆ ಆಗಿದೆ ಈ ಕೆಳಗಿನ ತಿಳಿಯೋಣ.
- ಹೆಚ್ಚುವರಿ ಆರ್ಥಿಕ ನೆರವು: ಬೋರ್ವೆಲ್ ಕೊರೆಯುವುದು, ಪಂಪ್ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕಕ್ಕಾಗಿ ನೀಡುವ ಮೊತ್ತದಲ್ಲಿ 50 ಕ್ಕೂ ಹೆಚ್ಚು ಏರಿಕೆ ಮಾಡಿರುವ ಕರ್ನಾಟಕ ಸರ್ಕಾರದ ಬಜೆಟ್
- ಬೆಳೆ ಹಾನಿಗೆ ಪರಿಹಾರ: ಇಂದಿನ ಬೇಸಿಗೆಯ ದಿನಗಳಲ್ಲಿ ಶೇಂಗಾ ಜೋಳ ಮತ್ತು ತರಕಾರಿ ಬೆಲೆಗಳಿಗೆ ಸಕಲದಲ್ಲಿ ನೀರು ಕೊಡದೆ ಹೋದರೆ ಬೆಳೆಯು ನಾಶವಾಗುತ್ತದೆ. ಹಾಗಾಗಿ ಈ ಯೋಚನೆಯನ್ನು ಜಾರಿ ಮಾಡಲಾಗಿದೆ.
- ತ್ವರಿತ ವಿದ್ಯುದ್ದೀಕರಣ: ಬೋರ್ವೆಲ್ ಕೊರೆದ ನಂತರ ವಿದ್ಯುತ್ ಸಂಪರ್ಕಕ್ಕಾಗಿ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ತಪ್ಪಿಸಲು ಹೆಸ್ಕಾಂ/ಬೆಸ್ಕಾಂಗಳಿಗೆ ವಿಶೇಷ ಅನುದಾನ.
- ಆಧುನಿಕ ತಂತ್ರಜ್ಞಾನ: ಬೋರ್ವೆಲ್ಗಳ ಜೊತೆಗೆ ಹನಿ ನೀರಾವರಿ (Drip Irrigation) ಅಳವಡಿಸಿಕೊಳ್ಳಲು ಹೆಚ್ಚುವರಿ ಪ್ರೋತ್ಸಾಹ ಧನ ನೀಡಿದ ಸರ್ಕಾರ.
ರೈತರು ಅರ್ಜಿ ಸಲ್ಲಿಸುವ ವಿಧಾನ :(Application Procedure)
Ganga Kalyana Scheme ಅರ್ಜಿ ಸಲ್ಲಿಸುವುದು ಹೇಗೆ?
ಬಜೆಟ್ ಘೋಷಣೆಯ ಬೆನ್ನಲ್ಲೇ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ರೈತರು ಅಗತ್ಯ ದಾಖಲೆಗಳಾದ:
- ಪಹಣಿ (RTC)
- ಆಧಾರ್ ಕಾರ್ಡ್
- ಸಣ್ಣ ರೈತ ದೃಢೀಕರಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ನೀಡಿ ಗ್ರಾಮ ಒನ್ ಅಥವಾ ಸೇವಾ ಸಿಂಧು ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಮುಕ್ತಾಯ:
ಒಟ್ಟಾರೆಯಾಗಿ, 2026-27ನೇ ಸಾಲಿನ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗದೆ, ರೈತರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. “ರೈತ ಸಂಕಷ್ಟದಲ್ಲಿದ್ದರೆ ದೇಶ ಸಂಕಷ್ಟದಲ್ಲಿರುತ್ತದೆ” ಎಂಬ ತತ್ವದಡಿ ಮಂಡಿಸಲಾದ ಈ ಬಜೆಟ್, ಗಂಗಾ ಕಲ್ಯಾಣ ಯೋಜನೆಯ ಮೂಲಕ ರಾಜ್ಯದ ಕೃಷಿ ಭೂಮಿಗೆ ಹಸಿರನ್ನು ತುಂಬುವಲ್ಲಿ ಯಶಸ್ವಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ: ಈ ಯೋಜನೆಯಡಿ ನಿಮ್ಮ ಜಿಲ್ಲೆಗೆ ಎಷ್ಟು ಅನುದಾನ ಮೀಸಲಿಡಲಾಗಿದೆ ಎಂದು ತಿಳಿಯಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (RSK) ಅಥವಾ ಜಿಲ್ಲಾ ಪಂಚಾಯತ್ ಕಚೇರಿಯನ್ನು ಭೇಟಿ ಮಾಡಿ.
ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು:
ಉತ್ತರ : ವಿದ್ಯುದ್ದೀಕರಣದ ವೆಚ್ಚವನ್ನು ₹75,000 ದಿಂದ ₹1.50 ಲಕ್ಷಕ್ಕೆ ದುಪ್ಪಟ್ಟು ಮಾಡಲಾಗಿದೆ.
ಉತ್ತರ : ರೈತರು ಗ್ರಾಮ ಒನ್, ಸೇವಾ ಸಿಂಧು ಪೋರ್ಟಲ್ ಅಥವಾ ಸಂಬಂಧಪಟ್ಟ ನಿಗಮಗಳ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
ಉತ್ತರ: ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (ಮುಖ್ಯವಾಗಿ SC/ST ಮತ್ತು ಹಿಂದುಳಿದ ವರ್ಗದವರಿಗೆ) ಇದು ಅನ್ವಯಿಸುತ್ತದೆ.
ಇತರೆ ಸರ್ಕಾರೀ ಯೋಜನೆಗಳ ಲಿಂಕುಗಳು:
- PM Surya Ghar Yojane: ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ + ₹78,000 ಸಬ್ಸಿಡಿ ಹಣ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!
- Bank Business Loan : ಸುಲಭವಾಗಿ ಪಡೆದುಕೊಳ್ಳುವ ವಿಧಾನ! ಎಷ್ಟು ಬಡ್ಡಿ , ಅರ್ಜಿ ಸಲ್ಲಿಸುವುದು ಹೇಗೆ? – ಸಂಪೂರ್ಣ ಮಾಹಿತಿ
- ಹೊಸ ಜಮೀನು ಖರೀದಿಗೆ ಮುನ್ನ ಇದನ್ನು ತಿಳ್ಕೊಳಿ! ಮ್ಯುಟೇಷನ್ ಎಂದರೇನು? ಇದನ್ನು ಹೇಗೆ ಮಾಡಿಸುವುದು! ಎಷ್ಟು ದಿನ ಬೇಕು?

