ಆಕಾಶದಲ್ಲಿ ಅಪರೂಪದ ದೃಶ್ಯ ಕಾಣ ಸಿಗುತ್ತೆ, ಚಂದ್ರನು ಕೆಂಪು ಬಣ್ಣಕ್ಕೆ (Lunar Eclipse 2026) ತಿರುಗುವ ಅದ್ಭುತ ಕ್ಷಣವನ್ನು ನೀವು ನೋಡಬಹುದು, ಮಂಗಳವಾರ ಅಂದರೆ ನಾಳೆ 03/ 03/2026 ರಂದು ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ.
Lunar Eclipse 2026 In Kannada information
ಹೌದು ಈ ರಕ್ತ ಚಂದ್ರನ ನೀವು ಹೇಗೆ ಮತ್ತು ಎಲ್ಲಿ ವೀಕ್ಷಿಸಬಹುದು? ಇದಕ್ಕೆ ಸಂಬಂಧಿಸಿದ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳು ತಿಳಿದುಕೊಳ್ಳೋಣ.
ಚಂದ್ರ ಗ್ರಹಣ ಎಂದರೆ ಏನು?
ಚಂದ್ರ ಗ್ರಹಣವು (Lunar Eclipse 2026) ಭೂಮಿಯ ಸೂರ್ಯ ಮತ್ತು ಚಂದ್ರನ ನಡುವೆ ನೇರವಾಗಿ ಹಾದು ಹೋಗುವಾಗ ಸಂಭವಿಸುವ ಒಂದು ಆಕಾಶದ ಘಟನೆ ಇದಾಗಿದೆ, ಈ ಸಂದರ್ಭದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ, ಇದು ಹುಣ್ಣಿಮೆ ದಿನವೇ ಸಂಭವಿಸುತ್ತದೆ. ಭೂಮಿಯ ವಾತಾವರಣದಲ್ಲಿ ಸೂರ್ಯನ ಬೆಳಕು ಹಾದು ಹೋಗುವಾಗ “ರೇಲೀ ಸ್ಕ್ಯಾಟರಿಂಗ್” ಪರಿಣಾಮದಿಂದಾಗಿ ಕೆಂಪು ಬಣ್ಣದ ಕಿರಣಗಳು ಮಾತ್ರ ಚಂದ್ರನ ಮೇಲೆ ಬೀಳತೊಡಗುತ್ತವೆ ಅದರ ಪರಿಣಾಮವಾಗಿ ಚಂದ್ರನು ಕೆಂಪು- ಕಿತ್ತಳೆ ಬಣ್ಣದಲ್ಲಿ ಕಾಣಸಿಗುತ್ತಾನೆ ಇದನ್ನೆ ಜನರು ರಕ್ತ ಚಂದ್ರ ಅಂತ ಕರೆಯುತ್ತಾರೆ.

2026 ರ ಮಾರ್ಚ್ 3 — ಚಂದ್ರಗ್ರಹಣ
ಗ್ರಹಣದ ಸಮಯ (Lunar Eclipse 2026) ಮಾರ್ಚ್/3/2026ರಂದು ಬೆಳಗ್ಗೆ ಮತ್ತು ಮಧ್ಯಾಹ್ನದ ದೃಷ್ಟಿಯಿಂದ ಗಣನೆ ಮಾಡಿದರೆ
- ಗ್ರಹಣ ಪ್ರಾರಂಭ: ಮಧ್ಯಾಹ್ನ 3:20
- ಸಂಪೂರ್ಣ ಹಂತ ಪ್ರಾರಂಭ: ಸಂಜೆ 4:34
- ಸಂಪೂರ್ಣ ಹಂತ ಅಂತ್ಯ: ಸಂಜೆ 5:33
- ಗ್ರಹಣ ಅಂತ್ಯ: ಸಂಜೆ 6:48
ಭಾರತದಲ್ಲಿ ಹಲವೆಡೆ ಮೋಡ ಕವಿದ ವಾತಾವರಣವಿದ್ದು ಚಂದ್ರ ಗ್ರಹಣವು ಕೊನೆಯ 20 ರಿಂದ 30 ನಿಮಿಷಗಳಲ್ಲಿ ಗೋಚರ ಆಗುವ ಸಾಧ್ಯತೆ ಇದೆ.
ತುಲಾ ರಾಶಿಯ ಮೇಲೆ ಗ್ರಹಣದ ಪ್ರಭಾವ:
ತುಲಾ ರಾಶಿಯ ಅಧಿಪತಿ ಶುಕ್ರನಾಗಿದ್ದು ಈ ರಾಶಿಯ ಅಡಿಯಲ್ಲಿ ಬರುವಂತ ಎಲ್ಲಾ ರೀತಿಯಾದ ಚಿತ್ತ ಸ್ವಾತಿ ಮತ್ತು ವಿಶಾಖ ನಕ್ಷತ್ರದವರು ಈ ಗ್ರಹಣದ ಪ್ರಭಾವಕ್ಕೆ ಒಳಗಾಗುತ್ತಾರೆ ಅಷ್ಟೇ ಅಲ್ಲದೆ ಈ ಚಂದ್ರಗ್ರಹಣವು ತುಲಾ ರಾಶಿಯವರ ಜಾತಕದ 11ನೇ ಮನೆಯಾದ ಲಾಭ ಸ್ಥಾನದ ಸ್ಥಾನದಲ್ಲಿ ಸಂಭವಿಸುವುದರಿಂದ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಲವಾರು ರೀತಿಯಾದ ಬದಲಾವಣೆಗಳನ್ನು ನೋಡಬಹುದು.
ಚಂದ್ರ ಗ್ರಹಣದಲ್ಲಿನ ವಿಧಗಳು ಯಾವುವು ಗೊತ್ತಾ?
ಚಂದ್ರನು ಭೂಮಿಯ ಗಾಢ ನೆರಳಿನೊಳಗೆ ಸಂಪೂರ್ಣವಾಗಿ ಪ್ರವೇಶಿಸುತ್ತದೆ ಇದರಿಂದಾಗಿ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಸಿಗುತ್ತಾನೆ.
ಸಂಪೂರ್ಣ ಚಂದ್ರಗ್ರಹಣ:- ಚಂದ್ರನ ಭೂಮಿಯ ಗಾಢ ನೆರಳಿನೊಳಗೆ ಸಂಪೂರ್ಣವಾಗಿ ಪ್ರವೇಶಿಸುವುದರಿಂದ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆ.
ಭಾಗಶಃ ಚಂದ್ರ ಗ್ರಹಣ:-ಚಂದ್ರನ ಒಂದು ಭಾಗ ಮಾತ್ರ ನೆರಳಿಗೆ ಒಳಗಾಗುತ್ತದೆ ಇದರಿಂದಾಗಿ ಒಂದು ತುಂಡು ಕಂಚಿನಂತೆ ಕಾಣಿಸುತ್ತದೆ
ಪೆನಂಬ್ರಲ್ ಚಂದ್ರ ಗ್ರಹಣ:- ಚಂದ್ರನು ಭೂಮಿಯ ಹೊರಗಿನ ಮುಸುಕಾದ ನೆರಳಿನಲ್ಲಿ ಸಾಗುತ್ತಾ ಹೋಗುತ್ತದೆ ಇದರಿಂದಾಗಿ ಸೂಕ್ಷ್ಮವಾಗಿ ಬರಿಗಣ್ಣಿನಿಂದ ಗಮನಿಸಲು ಕಷ್ಟಕರವಾದ ಈ ಗ್ರಹಣ ಗೋಚರಿಸುತ್ತದೆ.
ಎಚ್ಚರಿಕೆ ಮತ್ತು ಗಮನಿಸಬೇಕಾದ ಸವಾಲುಗಳು?
ಚಂದ್ರ ಗ್ರಹಣದ ಈ ಸಮಯದಲ್ಲಿ ಶುಭ ಫಲಗಳ ನಡುವೆಯೂ ಸಹ ಗ್ರಹಚಾರಗಳು ಸಹ ಇಲ್ಲಿ ಸಂಭವಿಸುತ್ತವೆ ಹಲವಾರು ಸವಾಲುಗಳನ್ನು ನೀವು ಎದುರಿಸಬೇಕಾಗುತ್ತದೆ ಮೊದಲನೇದಾಗಿ ಮದುವೆಯ ಚಿಂತೆಯಾದರೆ 2ನೇದು ಸ್ಥಾನಪಲ್ಲಟ ಸೇರಿದಂತೆ ದಾಯಾದಿಗಳ ಕಲಹ ಖರ್ಚು ವೆಚ್ಚಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ ಆಪ್ತರ ಆರೋಗ್ಯ, ಲೆಕ್ಕಾಚಾರದಲ್ಲಿ ತಪ್ಪು ಹೀಗೆ ಪ್ರತಿಯೊಂದು ವಿಷಯದಲ್ಲೂ ಸಹ ಈ ಗ್ರಹಣದ ಸಮಯದಲ್ಲಿ ಯೋಚನೆ ಮಾಡಿ ವಿವರಿಸಬೇಕಾಗುತ್ತದೆ.
ಭಾರತದಲ್ಲಿ ಎಲ್ಲಿ ಗೋಚರಿಸುತ್ತದೆ?
ಭಾರತದ ಬಹುತೇಕ ಭಾಗಗಳಲ್ಲಿ ಚಂದ್ರೋದಯ ಸಮಯದಲ್ಲಿ ಚಂದ್ರ ಗ್ರಹಣ ಅಂತಿಮ ಹಂತದಲ್ಲಿ ಗೋಚರಿಸುತ್ತದೆ ಈಶಾನ್ಯ ಭಾರತ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ದೃಶ್ಯಾವಕಾಶ ಸೀಮಿತವಾಗಿರುತ್ತದೆ ಚೆನ್ನೈ ಮತ್ತು ಕನ್ಯಾಕುಮಾರಿ ಭಾಗಗಳಲ್ಲಿ ಸುಮಾರು 31 ನಿಮಿಷಗಳ ಕಾಲ ಗ್ರಹಣ ಗೋಚರಿಸುತ್ತದೆ ಸಾಧ್ಯತೆ ತುಂಬಾನೇ ಇದೆ.
ಚಂದ್ರ ಗ್ರಹಣ ಹಿಂದಿನ ಮತ್ತು ಮುಂದಿನ ಗ್ರಹಣಗಳು ಸಂಭವಿಸಿದ ದಿನಾಂಕಗಳು:
- ಭಾರತದಿಂದ ಗೋಚರಿಸಿದ ಕೊನೆಯ ಸಂಪೂರ್ಣ ಚಂದ್ರಗ್ರಹಣ ಸೆಪ್ಟೆಂಬರ್ 7–8, 2025
- ಮುಂದಿನ ಭಾಗಶಾ ಚಂದ್ರಗ್ರಹಣ ಜುಲೈ 6–7, 2028
- ಮುಂದಿನ ಸಂಪೂರ್ಣ ಚಂದ್ರ ಗ್ರಹಣ ಡಿಸೆಂಬರ್ 31, 2028
ಚಂದ್ರ ಗ್ರಹಣವನ್ನ ಹೇಗೆ ವೀಕ್ಷಿಸಬಹುದು?
- ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದಲೇ ಸುರಕ್ಷಿತವಾಗಿ ವೀಕ್ಷಿಸಬಹುದಾಗಿದೆ
- ಯಾವುದೇ ವಿಶೇಷ ಗಗಲ್ಸ್ ಅಗತ್ಯವಿಲ್ಲದೆ ನೋಡಬಹುದು
- ದೂರದರ್ಶಕ ಅಥವಾ ಟೆಲಿಸ್ಕೋಪ್ ಬಳಸಿದರೆ ಹೆಚ್ಚು ಸ್ಪಷ್ಟ ದೃಶ್ಯ ಕಾಣಿಸುತ್ತದೆ
- ಬೆಳಕು ಮಾಲಿನ್ಯ ಕಡಿಮೆ ಇರುವ ಸ್ಥಳದಲ್ಲಿ ವೀಕ್ಷಿಸಿದರೆ ಉತ್ತಮ ಅನುಭವವನ್ನು ನೀವು ಪಡೆಯಬಹುದು
- ಆಕಾಶದಲ್ಲಿ ಇದ್ದರೆ ದೃಶ್ಯ ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ.
ಸೂತಕ ಕಾಲ ಮತ್ತು ಅದಕ್ಕೆ ಪಾಲಿಸಬೇಕಾದ ನಿಯಮಗಳು?
ಜ್ಯೋತಿಷ್ಯ ಭಕ್ತರು ಸಾಮಾನ್ಯವಾಗಿ ಗ್ರಹಣದ ಮೊದಲ 9 ಗಂಟೆಗಳ ವೇಳೆ ಸೂತಕ ಕಾಲ ಇರುತ್ತದೆ ಅಂತ ಹೇಳುತ್ತಾರೆ ಇದರಿಂದಾಗಿ ದೇವರಿಗೆ ಪೂಜೆ ಹೋಮ , ಶುದ್ದಿ ಇತ್ಯಾದಿ ಕಾರ್ಯಗಳನ್ನ ಕೆಲವೊಮ್ಮೆ ನಿಷಿದ್ಧ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.
ಸಮಾಪನ:
ಆಕಾಶದಲ್ಲಿ ಎಂತೆಂಥ ಅದ್ಭುತ ಕ್ಷಣಗಳನ್ನು ನೀವು ನೋಡಬಹುದು ಆಕಾಶದ ಅದ್ಭುತಗಳಲ್ಲಿ ಒಂದಾದ ಸಂಪೂರ್ಣ ಚಂದ್ರಗ್ರಹಣವು ಸಹ ಮಾರ್ಚ್ 3/2026ರಂದು ರಕ್ತ ಚಂದ್ರದ ಮನಮೋಹಕ ದೃಶ್ಯವನ್ನು ತಪ್ಪದೆ ವೀಕ್ಷಿಸಿ, ಅದರ ಅನುಭವವನ್ನು ಪಡೆದುಕೊಳ್ಳಿ ವಿಜ್ಞಾನವು , ಭಕ್ತಿಯು ಪ್ರಕೃತಿಯು ಒಂದೇ ಕ್ಷಣದಲ್ಲಿ ಒಂದಾಗುವ ಅದ್ಭುತ ಕ್ಷಣವನ್ನು ನೀವು ತಪ್ಪದೇ ಮಿಸ್ ಮಾಡಿಕೊಳ್ಳದೆ ನೋಡಿ ಈ ಅದ್ಭುತವನ್ನು ಆನಂದಿಸಿ.
ಇದನ್ನು ಓದಿರಿ:- ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕಾ?

