Police Department Recruitment : ಪೊಲೀಸ್ ಇಲಾಖೆ ನೇಮಕಾತಿ 2026 : ಸಂಪೂರ್ಣ ಮಾಹಿತಿ!

Police Department

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ (Police Department) ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತಿರುತ್ತದೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯದ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸುರಕ್ಷತೆ ಸೇರಿದಂತೆ ಅಪರಾಧ ತಟಗಟ್ಟುವಿಕೆ ಮತ್ತು ತನಿಖೆಯನ್ನು ನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದೆ. ಪೊಲೀಸ್ ಇಲಾಖೆಯ ಉದ್ಯೋಗಗಳು ಭಾರತದಲ್ಲಿ ಅತ್ಯಂತ ಗೌರವ ಅನಿಸುವಂತಹ ಸರ್ಕಾರಿ ಹುದ್ದೆಗಳಲ್ಲಿ ಒಂದಾಗಿದೆ.

Police Department Jobs In Karnataka

ಪ್ರತಿ ವರ್ಷ ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವಾರು ನೇಮಕಾತಿಗಳನ್ನು ನಡೆಸಲಾಗುತ್ತದೆ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಇದ್ದು ಈ ಹುದ್ದೆಗಳ ಅರ್ಹತೆಗೆ ತಕ್ಕಂತೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಾರೆ.

ಈ ಹುದ್ದೆಗಳ ಬಗ್ಗೆ ಈ ಕೆಳಗೆ ವಿವರವಾದ ಮಾಹಿತಿಯನ್ನು ನೀಡಲಾಗಿದ್ದು 2026ರಲ್ಲಿ ಈ ಹುದ್ದೆಗಳಿಗೆ ಯಾವ ರೀತಿಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸುತ್ತಾರೆ, ಇದಕ್ಕೆ ಬೇಕಾಗಿರುವ ಅರ್ಹತೆ ಏನು? ಅರ್ಜಿ ಸಲ್ಲಿಸಲು ವಿವಿಧ ಹಂತಗಳು ಯಾವುವು? ಅಧಿಕೃತ ವೆಬ್ಸೈಟ್ ಯಾವುದು? ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Police Department
Police Department

ಪೊಲೀಸ್ ಇಲಾಖೆ ನೇಮಕಾತಿ 2026 ಹೈಲೈಟ್ಸ್:

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಈ ನೇಮಕಾತಿಯನ್ನ ಕರ್ನಾಟಕ ಸರ್ಕಾರವು ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸುತ್ತಾರೆ, ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಜನರ ಸುರಕ್ಷಿತ ಯ ಬಗ್ಗೆ ಹೆಚ್ಚು ಒತ್ತನ್ನು ನೀಡಲಾಗುತ್ತದೆ.

ಹಾಗೆ ಸಮಾಜದ ಮೇಲೆ ಆಗುವ ಸಾಕಷ್ಟು ಅನ್ಯಾಯ ಸೇರಿದಂತೆ ವಿವಿಧ ರೀತಿಯಾದ ತನಿಕ ವರದಿಯನ್ನು ಸಹ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನ್ಯಾಯಾಲಯವು ಪಡೆದುಕೊಳ್ಳುತ್ತದೆ ಈ ಪೊಲೀಸ್ ಇಲಾಖೆಯ ವಿವಿಧ ಶ್ರೇಣಿಯ ಹುದ್ದೆಗಳ ವಿವರವನ್ನು ಈ ಕೆಳಗೆ ನೀಡಲಾಗಿದೆ.

ಗೆಜೆಟೆಡ್ ಅಧಿಕಾರಿಗಳು (Gazetted Officers):

  • DGP: ಪೊಲೀಸ್ ಮಹಾನಿರ್ದೇಶಕರು (Director General of Police)
  • ADGP: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (Additional Director General of Police)
  • IGP: ಪೊಲೀಸ್ ಮಹಾನಿರೀಕ್ಷಕರು (Inspector General of Police)
  • DIGP: ಪೊಲೀಸ್ ಉಪ ಮಹಾನಿರೀಕ್ಷಕರು (Deputy Inspector General of Police)
  • SP / DCP: ಪೊಲೀಸ್ ಅಧೀಕ್ಷಕರು / ಉಪ ಪೊಲೀಸ್ ಆಯುಕ್ತರು (Superintendent of Police / Deputy Commissioner of Police)
  • ASP / DSP / ACP: ಹೆಚ್ಚುವರಿ ಪೊಲೀಸ್ ಅಧೀಕ್ಷಕರು / ಉಪ ಪೊಲೀಸ್ ಅಧೀಕ್ಷಕರು / ಸಹಾಯಕ ಪೊಲೀಸ್ ಆಯುಕ್ತರು (Assistant/Deputy Superintendent of Police / Assistant Commissioner of Police)

ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿ (Sub-Ordinate Officers):

  • CPI / PI: ವೃತ್ತ ಪೊಲೀಸ್ ನಿರೀಕ್ಷಕರು / ಪೊಲೀಸ್ ನಿರೀಕ್ಷಕರು (Circle Police Inspector / Police Inspector)
  • PSI: ಪೊಲೀಸ್ ಉಪನಿರೀಕ್ಷಕರು (Police Sub-Inspector)
  • ASI: ಸಹಾಯಕ ಪೊಲೀಸ್ ಉಪನಿರೀಕ್ಷಕರು (Assistant Sub-Inspector)
  • HC: ಹೆಡ್ ಕಾನ್‌ಸ್ಟೆಬಲ್ (ಮುಖ್ಯ ಪೇದೆ) (Head Constable)
  • PC: ಪೊಲೀಸ್ ಕಾನ್‌ಸ್ಟೆಬಲ್ (ಪೊಲೀಸ್ ಪೇದೆ) (Police Constable)

ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ಜವಾಬ್ದಾರಿಗಳ ವಿವರ:

ಪೊಲೀಸ್ ಇಲಾಖೆಯ ವಿವಿಧ ವರ್ಗದ ಹುದ್ದೆಗಳ ವಿವರವನ್ನು ಈ ಕೆಳಗೆ ನೀಡಲಾಗಿದ್ದು ಈ ಎಲ್ಲ ಮಾಹಿತಿಯನ್ನು ನೀವು ಗಮನಿಸಬಹುದು.

DGP: ಪೊಲೀಸ್ ಮಹಾನಿರ್ದೇಶಕರು (Director General of Police)

ಪೊಲೀಸ್ ಮಹಾನಿರ್ದೇಶಕರು ಭಾರತದಲ್ಲಿನ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯುನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಯ ಹುದ್ದೆಯಾಗಿದ್ದು ಆಯಾ ವ್ಯಾಪ್ತಿಗಳಿಗೆ ಅನುಗುಣವಾಗಿ ಸಂಪೂರ್ಣ ಪೊಲೀಸ್ ಪಡೆ ಮತ್ತು ಕಾನೂನು ವ್ಯವಸ್ಥೆಯನ್ನ ಜಾರಿ ಮಾಡುವ ಚಟುವಟಿಕೆಯನ್ನು ಹಾಗೂ ಮೇಲ್ವಿಚಾರಣೆ ಮಾಡುವಂತಹ ಜವಾಬ್ದಾರಿಯನ್ನು ಇವರು ಹೊಂದಿರುತ್ತಾರೆ.

ADGP: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (Additional Director General of Police)

ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಭಾರತೀಯ ಪೊಲೀಸ್ ಸೇವೆಯ ಅತ್ಯುನ್ನತ ಶ್ರೇಣಿಯಲ್ಲಿ ಇರುವಂತಹ ಒಂದು ಹುದ್ದೆಯಾಗಿದೆ ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರಾದ DGP ನಂತರದ ಹುದ್ದೆ ಇದಾಗಿದೆ ಕಾನೂನು ಮತ್ತು ಸುವ್ಯವಸ್ಥೆ ಅಪರಾಧ ತನಿಖೆ ಗುಪ್ತಚರ ಮತ್ತು ಆಡಳಿತ ದಂತಹ ವಿಭಾಗವನ್ನು ಇವರು ನಿರ್ವಹಿಸುತ್ತಾರೆ.

IGP: ಪೊಲೀಸ್ ಮಹಾನಿರೀಕ್ಷಕರು (Inspector General of Police)

ಪೊಲೀಸ್ ಮಹಾ ನಿರೀಕ್ಷಕರು ಪೊಲೀಸ್ ಇಲಾಖೆಯ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು ಸಾಮಾನ್ಯವಾಗಿ ಒಂದು ವಲಯ ಅಥವಾ ದೊಡ್ಡ ಶ್ರೇಣಿಯ ಉಸ್ತುವಾರಿಯನ್ನ ಇವರು ವಹಿಸುತ್ತಾರೆ ಇವರು ಡಿಜಿ ಐ ಗಿಂತ ಮೇಲಿನ ಮತ್ತು ಎಡಿಜಿಪಿಗಿಂತ ಕೆಳಗಿನ ಶ್ರೇಣಿಯ ಹುದ್ದೆಯನ್ನು ಅಲಂಕರಿಸುತ್ತಾರೆ ಇವರು ಕಾನೂನು ವ್ಯವಸ್ಥೆ ಮತ್ತು ಅಪರಾಧ ತಡೆಗಟ್ಟುವಿಕೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವ ಕೆಲಸವನ್ನ ಮಾಡುತ್ತಾರೆ.

DIGP: ಪೊಲೀಸ್ ಉಪ ಮಹಾನಿರೀಕ್ಷಕರು (Deputy Inspector General of Police)

ಪೊಲೀಸ್ ಉಪ ಮಹಾನಿರೀಕ್ಷಕರು ಭಾರತೀಯ ಪೊಲೀಸ್ ಸೇವೆಯ ಹಿರಿಯ ಶ್ರೇಣಿಯ ಅಧಿಕಾರಿಯಾಗಿರುತ್ತಾರೆ, ಇವರು ಪೊಲೀಸ್ ಮಹಾನ್ ನಿರ್ದೇಶಕರಿಗಿಂತಲೂ ಕೆಳಗಿನ ಮತ್ತು ಹಿರಿಯ ಪೊಲೀಸ್ ಅಧ್ಯಕ್ಷರಿಂದ ಮೇಲಿನ ಹುದ್ದೆಯನ್ನು ಅಲಂಕರಿಸುತ್ತಾರೆ. ಸಾಮಾನ್ಯವಾಗಿ ವಲಯ ಅಥವಾ ವ್ಯಾಪ್ತಿಯಲ್ಲಿ ಬರುವಂತಹ ಜಿಲ್ಲೆಗಳ ಮೇಲ್ವಿಚಾರಣೆಯನ್ನು ಇವರು ಮಾಡುತ್ತಾರೆ.

SP / DCP: ಪೊಲೀಸ್ ಅಧೀಕ್ಷಕರು / ಉಪ ಪೊಲೀಸ್ ಆಯುಕ್ತರು (Superintendent of Police / Deputy Commissioner of Police)

ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಧಿಕರು ಮತ್ತು ಉಪ ಪೊಲೀಸ್ ಆಯುಕ್ತರು ಇಬ್ಬರು ಒಂದೇ ಶ್ರೇಣಿಯ ಅಧಿಕಾರಿಗಳಾಗಿರುತ್ತಾರೆ ಆದರೆ ಇವರು ಕಾರ್ಯ ನಿರ್ವಹಿಸುವ ಪ್ರದೇಶದ ಆಧಾರದ ಮೇಲೆ ಹುದ್ದೆಯ ಹೆಸರು ಬದಲಾಗುತ್ತಾ ಇರುತ್ತದೆ.

ASP / DSP / ACP: ಹೆಚ್ಚುವರಿ ಪೊಲೀಸ್ ಅಧೀಕ್ಷಕರು / ಉಪ ಪೊಲೀಸ್ ಅಧೀಕ್ಷಕರು / ಸಹಾಯಕ ಪೊಲೀಸ್ ಆಯುಕ್ತರು

ಭಾರತೀಯ ಪೊಲೀಸ್ ವ್ಯವಸ್ಥೆಯಲ್ಲಿನ ಪ್ರಮುಖ ಗೆಜೆಟೆಡ್ ಅಧಿಕಾರಿ ಹುದ್ದೆ ಇದಾಗಿದ್ದು ಐಪಿಎಸ್ ತರಬೇತಿ ಹಂತದಲ್ಲಿದ್ದರೆ ಡಿಎಸ್ಪಿ ಗಳು ರಾಜ್ಯ ಪೊಲೀಸ್ ಸೇವೆಯ ಅಧಿಕಾರಿಗಳಾಗಿರುತ್ತಾರೆ ಮತ್ತು ಎಸಿಪಿ ಗಳು ನಗರ ಪೊಲೀಸ್ ಕಮಿಷನ್ ವ್ಯವಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ ಇವರೆಲ್ಲರೂ ಸರಿ ಸುಮಾರು ಒಂದೇ ಶ್ರೇಣಿಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.

CPI / PI: ವೃತ್ತ ಪೊಲೀಸ್ ನಿರೀಕ್ಷಕರು / ಪೊಲೀಸ್ ನಿರೀಕ್ಷಕರು (Circle Police Inspector / Police Inspector)

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವೃತ್ತ ಪೊಲೀಸ್ ನಿರೀಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಪ್ರಮುಖ ಕಾರ್ಯಾಚರಣೆಯಲ್ಲಿ ಪ್ರಮುಖ ಕಾರ್ಯಾಚರಣೆಯ ಅಧಿಕಾರಿಗಳಾಗಿರುತ್ತಾರೆ. ಇವರು ಉಪಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನಡುವಿನ ಕೊಂಡಿಯಾಗಿ ಕಾರ್ಯವನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತಾರೆ.

PSI: ಪೊಲೀಸ್ ಉಪನಿರೀಕ್ಷಕರು (Police Sub-Inspector)

ಕರ್ನಾಟಕ ರಾಜ್ಯ ಪೊಲೀಸ್ ಉಪನಿರೀಕ್ಷಕರು ಅತ್ಯಂತ ಪ್ರಮುಖವಾದ ತನಿಕ ದರ್ಜೆಯ ಅಧಿಕಾರಿಗಳಾಗಿರುತ್ತಾರೆ. ಇವರು ಪೊಲೀಸ್ ಠಾಣೆಯ ಉಸ್ತುವಾರಿಯನ್ನ ಅಥವಾ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಕೆಲಸವನ್ನು ನಿರ್ವಹಿಸುತ್ತಾರೆ.

ASI: ಸಹಾಯಕ ಪೊಲೀಸ್ ಉಪನಿರೀಕ್ಷಕರು (Assistant Sub-Inspector)

ಕರ್ನಾಟಕ ರಾಜ್ಯ ಸಹಾಯಕ ಪೊಲೀಸ್ ಉಪನಿರೀಕ್ಷಕರ ಹುದ್ದೆಗಳು ಭಾರತದ ಪೋಲಿಸ್ ವ್ಯವಸ್ಥೆಯಲ್ಲಿ ಒಂದು ಅತ್ಯಂತ ಪ್ರಮುಖವಾದ ಗೆಜೆಟೆಡ್ ಅಲ್ಲದ ಹುದ್ದೆಯಾಗಿರುತ್ತದೆ ಇವರು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಿಂತ ಮೇಲಿನ ಮತ್ತು ಸಬ್ ಇನ್ಸ್ಪೆಕ್ಟರ್ ಕಿಂತ ಕೆಳಗಿನ ಹುದ್ದೆಯ ಶ್ರೇಣಿಯನ್ನು ಅಲಂಕರಿಸುತ್ತಾರೆ.

HC: ಹೆಡ್ ಕಾನ್‌ಸ್ಟೆಬಲ್ (ಮುಖ್ಯ ಪೇದೆ) (Head Constable)

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿಯೇ ಹೆಡ್ ಕಾನ್ಸ್ಟೇಬಲ್ ಹುದ್ದೆಯ ಕಾರ್ಯವನ್ನು ಸಬ್ ಇನ್ಸ್ಪೆಕ್ಟರ್ ಕಿಂತ ಕೆಳಗಿನ ಹುದ್ದೆ ಇದಾಗಿದ್ದು ಇವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ.

PC: ಪೊಲೀಸ್ ಕಾನ್‌ಸ್ಟೆಬಲ್ (ಪೊಲೀಸ್ ಪೇದೆ) (Police Constable)

ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್ಟೇಬಲ್ ಅಥವಾ ಪೊಲೀಸ್ ಪೇದೆ ಪೊಲೀಸ್ ಇಲಾಖೆಯ ಅತ್ಯಂತ ಪ್ರಮುಖವಾದ ತಾಳಮಠದ ಹುದ್ದೆ ಯಾಗಿರುತ್ತದೆ ಇವರು ಕಾನೂನು ವ್ಯವಸ್ಥೆಗೆ ಸಹಾಯ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ನಿರ್ವಹಿಸುತ್ತಾರೆ ಕರ್ನಾಟಕದಲ್ಲಿ ಈ ಹುದ್ದೆಗೆ ಸಾಮಾನ್ಯವಾಗಿ 10ನೇ ತರಗತಿ ಅಥವಾ 12ನೇ ತರಗತಿ ಓದಿರುವಂತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ (Police Department):

ಈ ಹುದ್ದೆಗಳಿಗೆ ಸಂಬಂಧಪಟ್ಟಂತ ಆಯಾ ಶ್ರೇಣಿಯ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ವಿಧ್ಯಾರ್ಥಿಯನ್ನ ನಿಗದಿಪಡಿಸಲಾಗಿದ್ದು ಈ ಕೆಳಗೆ ಹುದ್ದೆಗೆ ಸಂಬಂಧಿಸಿದ ಅರ್ಹತೆ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

  • DGP (Police Department): ಪೊಲೀಸ್ ಮಹಾನಿರ್ದೇಶಕರು (Director General of Police)
    • ಮಾನ್ಯತೆ ಪಡೆದ ಯಾವುದೇ ವಿಷಯದಲ್ಲಿ ಪದವಿ (Bachelor’s Degree) ವಿದ್ಯಾರ್ಹತೆ ಕಡ್ಡಾಯ. ಅಭ್ಯರ್ಥಿಯು ಭಾರತೀಯ ಪೊಲೀಸ್ ಸೇವೆಗೆ (IPS) ಸೇರಲು UPSC ನಡೆಸುವ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
  • ADGP (Police Department): ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (Additional Director General of Police)
    • ವಿದ್ಯಾರ್ಹತೆ: ಪದವಿ (Bachelor’s Degree in any discipline) ಅಥವಾ ಕನಿಷ್ಠ 25 ರಿಂದ 30 ವರ್ಷಗಳ ಐಪಿಎಸ್ (IPS) ಸೇವೆ.
  • IGP (Police Department): ಪೊಲೀಸ್ ಮಹಾನಿರೀಕ್ಷಕರು (Inspector General of Police)
    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Bachelor’s Degree) ಕಡ್ಡಾಯ ವಿದ್ಯಾರ್ಹತೆಯಾಗಿದೆ
  • DIGP (Police Department: ಪೊಲೀಸ್ ಉಪ ಮಹಾನಿರೀಕ್ಷಕರು (Deputy Inspector General of Police)
    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Bachelor’s Degree)
  • SP / DCP (Police Department): ಪೊಲೀಸ್ ಅಧೀಕ್ಷಕರು / ಉಪ ಪೊಲೀಸ್ ಆಯುಕ್ತರು (Superintendent of Police / Deputy Commissioner of Police)
    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Bachelor’s Degree) ಕನಿಷ್ಠ ವಿದ್ಯಾರ್ಹತೆ
  • ASP / DSP / ACP (Police Department): ಹೆಚ್ಚುವರಿ ಪೊಲೀಸ್ ಅಧೀಕ್ಷಕರು / ಉಪ ಪೊಲೀಸ್ ಅಧೀಕ್ಷಕರು / ಸಹಾಯಕ ಪೊಲೀಸ್ ಆಯುಕ್ತರು (Assistant/Deputy Superintendent of Police / Assistant Commissioner of Police)
    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (Postgraduate Degree) ಅಥವಾ ಕನಿಷ್ಠ ಪದವಿ (Bachelor’s Degree) ವಿದ್ಯಾರ್ಹತೆ
  • CPI / PI (Police Department): ವೃತ್ತ ಪೊಲೀಸ್ ನಿರೀಕ್ಷಕರು / ಪೊಲೀಸ್ ನಿರೀಕ್ಷಕರು (Circle Police Inspector / Police Inspector)
    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation) ಪೂರ್ಣಗೊಳಿಸಿರುವುದು ಕಡ್ಡಾಯ
  • PSI (Police Department): ಪೊಲೀಸ್ ಉಪನಿರೀಕ್ಷಕರು (Police Sub-Inspector)
    • ಯಾವುದೇ ಪದವಿ (Graduation) ಪೂರ್ಣಗೊಳಿಸಿರುವುದು ಕಡ್ಡಾಯ
  • ASI (Police Department): ಸಹಾಯಕ ಪೊಲೀಸ್ ಉಪನಿರೀಕ್ಷಕರು (Assistant Sub-Inspector)
    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ (Degree) ವಿದ್ಯಾರ್ಹತೆ ಅಗತ್ಯವಿದೆ.
  • HC (Police Department): ಹೆಡ್ ಕಾನ್‌ಸ್ಟೆಬಲ್ (ಮುಖ್ಯ ಪೇದೆ) (Head Constable)
    • ಮಾನ್ಯತೆ ಪಡೆದ ಬೋರ್ಡ್‌ನಿಂದ 12ನೇ ತರಗತಿ (10+2) ಪಾಸ್ ಆಗಿರಬೇಕು
  • PC (Police Department): ಪೊಲೀಸ್ ಕಾನ್‌ಸ್ಟೆಬಲ್ (ಪೊಲೀಸ್ ಪೇದೆ) (Police Constable)
    • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ಪಿಯುಸಿ (12ನೇ ತರಗತಿ) ಪಾಸ್ ಮಾಡಿರಬೇಕು

ಇತರೆ ಮಾನದಂಡಗಳು ಮತ್ತು ಅವಶ್ಯಕತೆಗಳ ಬಗ್ಗೆ ಮಾಹಿತಿ:

ಈ ಕೆಳಗೆ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ (Police Department) ಸಂಬಂಧಪಟ್ಟಂತ ದೇಹದಾಢ್ಯತೆ ಎಷ್ಟಿರಬೇಕು ಅನ್ನುವ ಮಾಹಿತಿಯನ್ನು ತಿಳಿಸಲಾಗಿದೆ.

ಪುರುಷರು: 168 ಸೆಂ.ಮೀ ಎತ್ತರ (ಮೀಸಲಾತಿ ಹೊಂದಿದವರಿಗೆ 155-160 ಸೆಂ.ಮೀ ಇರಬಹುದು)ಎದೆ ಸುತ್ತಳತೆ 86 ಸೆಂ.ಮೀ.
ಮಹಿಳೆಯರು: 157 ಸೆಂ.ಮೀ ಎತ್ತರಕನಿಷ್ಠ 45 ಕೆ.ಜಿ ತೂಕ.

ಓಟ: 1600 ಮೀಟರ್ ದೂರವನ್ನು 7 ನಿಮಿಷಗಳಲ್ಲಿ ಓಡಿ ಪೂರ್ಣಗೊಳಿಸಬೇಕು.

ಉದ್ದ ಜಿಗಿತ/ಎತ್ತರ ಜಿಗಿತ:

ನಿರ್ದಿಷ್ಟ ಅಂತರ/ಎತ್ತರವನ್ನು ಜಿಗಿಯಬೇಕು.
ಗುಂಡು ಎಸೆತ: ನಿಗದಿತ ದೂರಕ್ಕೆ ಗುಂಡು ಎಸೆಯಬೇಕು.

  • ವಯೋಮಿತಿ (ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು):
    • 21 ರಿಂದ 30 ವರ್ಷದೊಳಗಿನವರು (ಸಾಮಾನ್ಯ ವರ್ಗ) ಅರ್ಜಿ ಸಲ್ಲಿಸಬಹುದುಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವೇತನ ಮತ್ತು ಶ್ರೇಣಿ:

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವಂತಹ ವಿವಿಧ ಶ್ರೇಣಿಯ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿಯನ್ನು ವಿವಿಧ ಮಾನದಂಡಗಳ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳ ವಿವರಗಳು:

  • ಆಧಾರ್ ಕಾರ್ಡ್ದಾ
  • ಅದಾಯ ಪ್ರಮಾಣ ಪತ್ರ
  • 10ನೇ ತರಗತಿ ಮತ್ತು 12ನೇ ತರಗತಿ ಅಂಕಪಟ್ಟಿಗಳು
  • ಆಧಾರ್ ಕಾರ್ಡ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ದೈಹಿಕ ಸದೃಢತೆಯ ಪ್ರಮಾಣ ಪತ್ರ

ದೈಹಿಕ ಪರೀಕ್ಷೆ ತಯಾರಿ ಹೇಗಿರಬೇಕು?

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕು ಅನ್ನುವ ಕನಸು ಕಾಣುತ್ತಿರುವ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯ ತಯಾರಿಯ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕಾಗುತ್ತದೆ ಪ್ರತಿನಿತ್ಯ ರನ್ನಿಂಗ್ ಸೇರಿದಂತೆ ಫಿಸಿಕಲ್ ಫಿಟ್ನೆಸ್ ಆಗಿರುವುದು ತುಂಬಾನೇ ಪ್ರಮುಖವಾಗುತ್ತದೆ ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್ ಪುಟ್ ಸೇರಿದಂತೆ ಇನ್ನಿತರ ದೈಹಿಕ ಪರೀಕ್ಷೆಯನ್ನು ಇಲ್ಲಿ ನಡೆಸಲಾಗುತ್ತದೆ ಇದಕ್ಕೆ ಬೇಕಾಗಿರುವ ಅಗತ್ಯ ತಯಾರಿಯನ್ನು ಪ್ರತಿನಿತ್ಯ ನಡೆಸಬೇಕಾಗುತ್ತದೆ.

ಎಲ್ಲರೂ ಪೊಲೀಸ್ ಇಲಾಖೆಯ ಕೆಲಸವನ್ನು ಏಕೆ ಇಷ್ಟಪಡುತ್ತಾರೆ?

ಕರ್ನಾಟಕ ರಾಜ ಪೊಲೀಸ್ ಇಲಾಖೆಯು ಹಲವಾರು ರೀತಿಯಾದ ಸಮಾಜಸೇವೆಯ ಜೊತೆಗೆ ಉತ್ತಮವಾದ ಉದ್ಯೋಗ ಭದ್ರತೆ ಹಾಗೂ ಅಧಿಕಾರ ಗೌರವವನ ಒದಗಿಸುತ್ತದೆ ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ನೀಡಲಾಗುತ್ತದೆ ಹಾಗೂ ಸಮಾಜದಲ್ಲಿ ಈ ಹುದ್ದೆಗಳಿಗೆ ಧನಾತ್ಮಕ ಬದಲಾವಣೆ ತರಲು ಅಪರಾಧವನ್ನು ತಡೆಯಲು ಅಗತ್ಯ ಇರುವವರಿಗೆ ಸಹಾಯ ಮಾಡಲು ಸಾಹಸಮಯ ಕೆಲಸವನ್ನು ನಿರ್ವಹಿಸಲು ಹೀಗೆ ಎಲ್ಲಾ ರೀತಿಯ ಅವಕಾಶಗಳು ಇಲ್ಲಿ ಇರುವುದರಿಂದ ಇಲ್ಲಿ ಕಾರ್ಯವನ್ನು ನಿರ್ವಹಿಸಲು ತುಂಬಾ ಜನ ಅಭ್ಯರ್ಥಿಗಳು ಇಷ್ಟಪಡುತ್ತಾರೆ.

ಪರೀಕ್ಷಾ ತಯಾರಿ ಹೇಗಿರಬೇಕು?

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯವನ್ನು ನಿರ್ವಹಿಸಲು ಪರೀಕ್ಷಾ ತಯಾರಿ ಲಿಖಿತ ಪರೀಕ್ಷೆಗೆ ತುಂಬಾನೇ ಹೆಚ್ಚು ಕಷ್ಟಪಟ್ಟು ಓದಬೇಕು ಸಾಮಾನ್ಯ ಜ್ಞಾನದ ವಿಷಯ ಸೇರಿದಂತೆ ಇತಿಹಾಸ ಭೂಗೋಳ ಶಾಸ್ತ್ರ ಪ್ರಚಲಿತ ವಿದ್ಯಮಾನಗಳು ಸೇರಿದಂತೆ ದೈಹಿಕ ಸಾಮರ್ಥ್ಯ ಪರೀಕ್ಷೆಗಳು ಇನ್ನಿತರ ವಿಷಯಗಳ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ ಪ್ರತಿನಿತ್ಯ ನಿಮ್ಮ ತಯಾರಿಯನ್ನು ಮುಂದುವರಿಸಿದರೆ ಖಂಡಿತವಾಗಿಯೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇರುವ ವಿವಿಧ ಹಂತದ ಶ್ರೇಣಿಯ ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ನೀವು ನಿಮ್ಮ ಕನಸಿನ ಉದ್ಯೋಗವನ್ನಾಗಿ ಪಡೆದುಕೊಳ್ಳಬಹುದು.

ಹಳೆಯ ಪ್ರಶ್ನೆ ಪತ್ರಿಕೆಯನ್ನ ಪ್ರತಿನಿತ್ಯ ಬಿಡಿಸುವುದು, 6ರಿಂದ 10ನೇ ತರಗತಿಯ ಪುಸ್ತಕವನ್ನು ಓದುವುದು ಹಾಗೂ ಗುಂಪು ಚರ್ಚೆ ಇನ್ನಿತರ ಎಲ್ಲಾ ರೀತಿಯಾದ ವಿಧಾನದಲ್ಲಿ ತಯಾರಿಯನ್ನು ನಡೆಸಬೇಕಾಗುತ್ತದೆ.

ಅಂತಿಮ ಮಾತು :

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಮೇಲೆ ತಿಳಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಸರ್ಕಾರದಿಂದ ನೇಮಕಾತಿ ಅಧಿಸೂಚನೆ ಬಂದ ನಂತರ ಅರ್ಜಿಯನ್ನು ಸಲ್ಲಿಸಿ ಎಲ್ಲಾ ತಯಾರಿಯನ್ನು ನಡೆಸಿ ಪರೀಕ್ಷೆಯನ್ನ ಎದುರಿಸಿ ಇದರಲ್ಲಿ ಪಾಸಾಗಿ ನಿಮ್ಮ ಕನಸಿನ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು

ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು:

ಪುರುಷರು: ಕನಿಷ್ಠ 168 ಸೆಂ.ಮೀ ಎತ್ತರ, 1600 ಮೀಟರ್ ಓಟವನ್ನು 7 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.

ಮಹಿಳೆಯರು: ಕನಿಷ್ಠ 157 ಸೆಂ.ಮೀ ಎತ್ತರ, ಕನಿಷ್ಠ 45 ಕೆ.ಜಿ ತೂಕ.

ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ಸೇರಿದಂತೆ ದೈಹಿಕ ಪರೀಕ್ಷೆಗಳು ಇರುತ್ತವೆ.

Police Constable (PC): ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ಪಿಯುಸಿ (12ನೇ ತರಗತಿ) ಪಾಸ್.

Police Sub-Inspector (PSI): ಯಾವುದೇ ವಿಷಯದಲ್ಲಿ ಪದವಿ (Graduation) ಕಡ್ಡಾಯ.

ಪೊಲೀಸ್ ಇಲಾಖೆಯಲ್ಲಿ ಗೆಜೆಟೆಡ್ ಮತ್ತು ಅಧೀನ ಹುದ್ದೆಗಳು ಇವೆ. ಪ್ರಮುಖ ಹುದ್ದೆಗಳು – DGP, ADGP, IGP, DIGP, SP/DCP, DSP/ACP, CPI/PI, PSI, ASI, HC ಮತ್ತು PC (ಪೊಲೀಸ್ ಕಾನ್ಸ್ಟೇಬಲ್). ಪ್ರತಿಯೊಂದು ಹುದ್ದೆಯೂ ವಿಭಿನ್ನ ಜವಾಬ್ದಾರಿಗಳನ್ನು ಹೊಂದಿರುತ್ತದೆ.

ಇತರೆ ಯೋಜನೆಯ ಪ್ರಮುಖ ಲಿಂಕುಗಳು:-

Leave a Reply

Your email address will not be published. Required fields are marked *