ನಾಳೆ (ಫೆಬ್ರವರಿ 28) ರಾಷ್ಟ್ರೀಯ ವಿಜ್ಞಾನ ದಿನ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿವರ್ಷ ಫೆಬ್ರವರಿ 28ರಂದು ಭಾರತದಾದ್ಯಂತ ಆಚರಿಸಲಾಗುತ್ತೆ, ಈ ದಿನದಂದು ಭಾರತೀಯ ವಿಜ್ಞಾನಿ ಒಬ್ಬರ ಮಹಾನ್ ಆವಿಷ್ಕಾರವನ್ನು ಸ್ಮರಿಸಲು ಹಾಗೂ ವಿಜ್ಞಾನ ಜಾಗೃತಿಯನ್ನು ಉತ್ತೇಜಿಸಲು ಈ ದಿನವನ್ನು ಸಮರ್ಪಿತವಾಗಿ ಬಳಸಿಕೊಳ್ಳಲಾಗುತ್ತದೆ.
National Science Day information In Kannada
ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿ ನೀಡಲಾಗಿದ್ದು ರಾಮನ್ ಪರಿಣಾಮದ ಆವಿಷ್ಕಾರ ಅಂದ್ರೆ ಏನು?ರಾಮನ್ ಪರಿಣಾಮ ಅಂದ್ರೆ ಏನು? ಹಾಗೆ ನೋಬೆಲ್ ಪ್ರಶಸ್ತಿ ಸ್ವೀಕರಿಸಿದ ವ್ಯಕ್ತಿ ಯಾರು? ಹಾಗೂ ರಾಷ್ಟ್ರೀಯ ವಿಜ್ಞಾನ ದಿನದ ಘೋಷಣೆ ಯಾವುದು? ಅನ್ನುವುದರ ಬಗ್ಗೆ ಈ ಕೆಳಗೆ ತೆಗೆದುಕೊಳ್ಳುತ್ತಾ ಹೋಗೋಣ.
ವಿಶೇಷ ಸೂಚನೆ :
| ಫೆಬ್ರವರಿ 28, ರಾಷ್ಟ್ರೀಯ ವಿಜ್ಞಾನ ದಿನದಂದು ಪ್ರತಿಜ್ಞಾ ವಿಧಿ ಸ್ವೀಕಾರಕ್ಕೆ ಆದೇಶ |

ರಾಷ್ಟ್ರೀಯ ವಿಜ್ಞಾನ ದಿನದ (National Science Day) ಪ್ರತಿಜ್ಞಾ ವಿಧಿ:

ರಾಮನ್ ಪರಿಣಾಮ ಅಂದ್ರೆ ಏನು?
ಬೆಳಕು ಒಂದು ಪಾರದರ್ಶಕ ದ್ರವ ಅಥವಾ ಘನ ವಸ್ತುವಿನ ಮೂಲಕ ಹಾದು ಹೋಗುವಾಗ ಅದರ ಕೆಲವು ಕಿರಣಗಳು ತನ್ನ ತರಂಗದೈರ್ಘ್ಯವನ್ನು (wavelength) ಬದಲಾಯಿಸುತ್ತದೆ, ಈ ಬೆಳಕಿನ ಚಿದುರಿಕೆಯನ್ನು ರಾಮನ್ ಪರಿಣಾಮ ಎಂದು ಕರೆಯುತ್ತಾರೆ.
ಇದು ಬೆಳಕಿನ ಸ್ವಭಾವ ಮತ್ತು ಅಣುಗಳ ರಚನೆ ತಿಳಿಯಲು ಮಹತ್ವದ ಸಾಧನವಾಗಿದೆ.
ರಾಷ್ಟ್ರೀಯ ವಿಜ್ಞಾನ ದಿನವನ್ನು ಏಕೆ ಆಚರಿಸಲಾಗುತ್ತದೆ?
ಈ ದಿನದಲ್ಲಿ ಸಿವಿ ರಾಮನ್ ಅವರು 28 ಫೆಬ್ರವರಿ 1928 ರಂದು ಕಂಡು ಹಿಡಿದ ರಾಮನ್ ಪರಿಣಾಮದ ನೆನಪಿಗಾಗಿ ಈ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆ ಈ ದಿನದಂದು ಪ್ರತಿಜ್ಞಾವಿಧಿಯನ್ನ ಸ್ವೀಕರಿಸಲಾಗುತ್ತದೆ.
ರಾಮನ್ ಪರಿಣಾಮದ ಮೂಲ:
28 ಫೆಬ್ರವರಿ 1928 ರಂದು ಘೋಷಿಸಲಾದ ರಾಮನ್ ಪರಿಣಾಮ ಎಂದು ಕರೆಯಲ್ಪಡುವ ಬೆಳಕಿನ ಚದುರುವಿಕೆಯ ರಾಮನ್ ಆವಿಷ್ಕಾರದ ಗೌರವಾರ್ಥವಾಗಿ ರಾಷ್ಟ್ರೀಯ ವಿಜ್ಞಾನದ ದಿನವನ್ನಾಗಿ (National Science Day) ಆಚರಿಸಲಾಗುತ್ತದೆ, ಈ ಆವಿಷ್ಕಾರವು ನಂತರ 1930ರಲ್ಲಿ ಬೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಇದು ವಿಜ್ಞಾನದಲ್ಲಿ ಈ ಗೌರವವನ್ನು ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಈ ಮೂಲಭೂತ ಸಂಶೋಧನೆಯ ಪರಿವರ್ತಕ ಶಕ್ತಿ ಮತ್ತು ತಂತ್ರಜ್ಞಾನ ಮತ್ತು ಉದ್ಯಮದ ಮೇಲೆ ಅದರ ದೀರ್ಘಕಾಲಿನ ಪ್ರಭಾವದ ಜ್ಞಾಪನೆಗಾಗಿ ಈ ದಿನವೂ ಕಾರ್ಯ ನಿರ್ವಹಿಸುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನದ ಮುಖ್ಯ ಉದ್ದೇಶಗಳು:
- ವಿದ್ಯಾರ್ಥಿಗಳಿಗೆ ಸಂಶೋಧನಾ ಮನೋಭಾವ ಬೆಳೆಸುವುದು
- ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು
- ವಿಜ್ಞಾನ ಸಾಧನೆಗಳನ್ನು ಗೌರವಿಸುವುದು
- ಸಮಾಜದಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳೆಸುವುದು
ರಾಷ್ಟ್ರೀಯ ವಿಜ್ಞಾನ ದಿನದಂದು ಏನು ಮಾಡುತ್ತಾರೆ?
- ರಾಷ್ಟ್ರೀಯ ವಿಜ್ಞಾನ ದಿನದಂದು ಶಾಲಾ-ಕಾಲೇಜುಗಳಲ್ಲಿ ವಿಜ್ಞಾನ ಪ್ರದರ್ಶನಗಳು ನಡೆಯುತ್ತವೆ
- ಪ್ರಬಂಧ, ಭಾಷಣ ಮತ್ತು ಕ್ವಿಜ್ ಗಳ ಸ್ಪರ್ಧೆಗಳು ಜರುಗುತ್ತವೆ
- ವಿಜ್ಞಾನಿಗಳ ಉಪನ್ಯಾಸಗಳು ಇರುತ್ತದೆ
- ವಿಜ್ಞಾನ ಸಾಧಕರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡುತ್ತಾರೆ
ರಾಷ್ಟ್ರೀಯ ವಿಜ್ಞಾನ ದಿನ ಇಂದು ಏಕೆ ಮುಖ್ಯ?
ರಾಷ್ಟ್ರೀಯ ವಿಜ್ಞಾನ ದಿನದಂದು ಕೇವಲ ಸ್ಮರಣಾರ್ಥ ಕಾರ್ಯಕ್ರಮಕ್ಕಿಂತ ಹೆಚ್ಚಿನದನ್ನು ಹೊಂದಿರುವುದರಿಂದ ಇದು ಈ ಕೆಳಗಿನವುಗಳಿಗೆ ವೇದಿಕೆಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ.
- ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ವಿಚಾರಣೆಯನ್ನು ಪ್ರೋತ್ಸಾಹಿಸುತ್ತದೆ
- ವಿಜ್ಞಾನ ಮತ್ತು ನೀತಿಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ
- ಸ್ಥಳೀಯ ತಾಂತ್ರಿಕ ಪ್ರಗತಿಯನ್ನು ಎತ್ತಿ ತೋರಿಸುತ್ತದೆ
- ಸಂಶೋಧನಾ ಸಂಸ್ಥೆಗಳೊಂದಿಗೆ ಸಾರ್ವಜನಿಕ ನಿಶ್ಚಿತಾರ್ಥವನ್ನು ಬಲಪಡಿಸುತ್ತದೆ
ಸಮಾರೋಪ:
ರಾಷ್ಟ್ರೀಯ ವಿಜ್ಞಾನ ದಿನವನ್ನು (National Science Day) 28 ಫೆಬ್ರವರಿ 1928 ರಂದು ಮಾಡಲಾಗುತ್ತದೆ ಈ ದಿನದಂದು ವಿಶೇಷ ಕಾರ್ಯಕ್ರಮದ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಗೌರವವನ್ನು ಸೂಚಿಸಲಾಗುತ್ತದೆ, ಹಾಗೂ ಇದೇ ದಿನದಂದು ಹೊಸ ವಿಶೇಷ ಥೀಮ್ ಪ್ರಕಟಿಸಲಾಗುತ್ತದೆ, ಈ ರಾಷ್ಟ್ರೀಯ ವಿಜ್ಞಾನ ದಿನದಂದು ಕೇವಲ ಒಂದು ಆಚರಣೆಗೆ ಮಾತ್ರವಲ್ಲದೇ ಇದು ಭಾರತದ ವೈಜ್ಞಾನಿಕ ಪರಂಪರೆಯ ಗೌರವ ದಿನವನ್ನಾಗಿ ಆಚರಿಸಲಾಗುತ್ತದೆ, ಸಿವಿ ರಾಮನ್ ಅವರ ಸಾಧನೆ ಭಾರತೀಯ ಯುವ ಜನತೆಗೆ ಪ್ರೇರಣೆಯನ್ನು ನೀಡುತ್ತದೆ ವಿಜ್ಞಾನ ಮನೋಭಾವವನ್ನು ಬೆಳೆಸುವುದು ಮತ್ತು ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವುದು ಈ ದಿನದ ಮುಖ್ಯ ಗುರಿಯಾಗಿದೆ.
ಇದನ್ನು ಓದಿರಿ :- PM Surya Ghar Yojane: ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ + ₹78,000 ಸಬ್ಸಿಡಿ ಹಣ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!

