PM Surya Ghar Yojane: ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ + ₹78,000 ಸಬ್ಸಿಡಿ ಹಣ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!

PM Surya Ghar Yojane

ನಮಸ್ಕಾರ ಸ್ನೇಹಿತರೆ, ನಿಮ್ಮ ಮನೆಗೆ ಹೆಚ್ಚಿನ ಕರೆಂಟ್ ಬಿಲ್ ಬರುತ್ತಿದೆಯೇ? ಪ್ರತಿ ತಿಂಗಳ ದಿನಸಿ ಸಾಮಗ್ರಿ, ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಕೂಡಿಸಿದ ಹಣ ಪೂರ ಕರೆಂಟ್ ಬಿಲ್ ಕಟ್ಟಲು ಸರಿ ಹೊಂದುತ್ತಿದೆಯೇ? ಹಾಗಿದ್ದರೆ ಈ ವಿಷಯದ ಕುರಿತು ಇನ್ನು ಚಿಂತಿಸುವ ಅಗತ್ಯವಿಲ್ಲ.

PM Surya Ghar Yojane in Kannada

ಏಕೆಂದರೆ ಕೇಂದ್ರ ಸರ್ಕಾರವು ಪಿಎಂ ಸೂರ್ಯ ಘರ್ ಮುಫ್ಟ್ ಬಿಜಲಿ ಯೋಜನೆಯಡಿಯಲ್ಲಿ ನಿಮ್ಮ ಮನೆಗಳಿಗೆ ಸೋಲಾರ್ ಅಳವಡಿಸಲು ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ನಿಮ್ಮ ಕಟ್ಟುವ ಕರೆಂಟ್ ಬಿಲ್ ಗೆ ಕಡಿವಾಣ ಹಾಗಿ ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಪಿಎಂ ಸೂರ್ಯ ಘರ್ ಮುಫ್ಟ್ ಬಿಜಲಿ ಯೋಜನೆ (PM Surya Ghar Yojane) ಯ ಪ್ರಯೋಜನವನ್ನು ಪಡೆಯಲು ಅರ್ಹ ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಮುಖ್ಯವಾಗಿ ಹೇಳಬೇಕಾದರೆ ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತಾ ಮಾನದಂಡ, ಪ್ರಮುಖ ದಾಖಲೆಗಳು ಹಾಗೂ ಇನ್ನಷ್ಟುಮಾಹಿತಿಯನ್ನು ಕೆಳಗೆ ನೀಡಿರುತ್ತೇವೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಇಚ್ಛಿಸುವವರು ನಮ್ಮ ಅಧಿಕೃತ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

PM Surya Ghar Yojane
PM Surya Ghar Yojane

ಯೋಜನೆಯ ಅವಲೋಕನ:-

ಯೋಜನೆಯ ಹೆಸರುಪಿಎಂ ಸೂರ್ಯ ಘರ್ ಮುಫ್ಟ್ ಬಿಜಲಿ ಯೋಜನೆ (PM Surya Ghar Yojane)
ಅರ್ಹ ಫಲಾನುಭವಿಗಳುಸ್ವಂತ ಮನೆ ಹೊಂದಿರುವ ಫಲಾನುಭವಿಗಳು
ಅರ್ಜಿಸಲ್ಲಿಸುವ ವಿಧಾನಆನ್ ಲೈನ್
ಯೋಜನೆಯಡಿಯಲ್ಲಿ ಸಿಗುವ ಪ್ರಯೋಜನಗಳು ಸೋಲಾರ್ ಅಳವಡಿಸಲು ಸಬ್ಸಿಡಿ ಸಹಾಯಧನ
ಅಧಿಕೃತ ವೆಬ್ ಸೈಟ್https://pmsuryaghar.gov.in/
PM Surya Ghar Yojane

ಸಂಕ್ಷಿಪ್ತ ಮಾಹಿತಿ:-

ಪಿಎಂ ಸೂರ್ಯ ಘರ್ ಮುಫ್ಟ್ ಬಿಜಲಿ ಯೋಜನೆ (PM Surya Ghar Yojane) ಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯನ್ನು 2024 ರಲ್ಲಿ ಜಾರಿಗೊಳಿಸಲಾಗಿದೆ. ಸೋಲಾರ್ ಅಳವದಣೆಗೆ ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ದೇಶದ ಪ್ರತಿಯೊಂದು ಮನೆಯು ಪರಿಸರ ಸ್ನೇಹಿ ವಿದ್ಯುತ್ ಸಂಪರ್ಕವನ್ನು ಹೊಂದಲು ಉತ್ತೇಜನವನ್ನು ನೀಡುತ್ತಿದೆ.

ಸ್ವಂತ ಮನೆಯನ್ನು ಹೊಂದಿರುವವರಿಗೆ ತಮ್ಮ ಮನೆಗಳಿಗೆ ಸೋಲಾರ್ ಅಳವಡಿಸಲು ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಒದಗಿಸುವ ಉದ್ದೇಶವನ್ನು ಹೊಂದಿದೆ. ಅರ್ಹ ಫಲಾನುಭವಿಗಳು ತಮ್ಮ ಮನೆಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿದ ನಂತರವಷ್ಟೇ ಸಬ್ಸಿಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಯೋಜನೆಯ ಉದ್ದೇಶ:-

  • ವಿದ್ಯುತ್ ಸಂಪರ್ಕವಿಲ್ಲದ ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಮೂಲಕ ಶಾಶ್ವತ ವಿದ್ಯುತ್ ಸಂಪರ್ಕವನ್ನು ಒದಗಿಸುವುದು.
  • ಪ್ರತಿ ಮನೆಗೂ ಸೋಲಾರ್ ಅಳವಡಿಸಲು ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ಮನೆಯ ತಿಂಗಳ ಖರ್ಚನ್ನು ತಗ್ಗಿಸಿ, ಅವರ ಬಳಕೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅಥವಾ ಹಣವನ್ನು ಉಳಿತಾಯ ಮಾಡಲು ಉತ್ತೇಜನ ನೀಡುವುದು.
  • ತಮ್ಮ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಸರ್ಕಾರಿ ಗ್ರೀಡಿ ಗಳಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಅವಕಾಶ ಕಲ್ಪಿಸುವುದು.
  • ಪ್ರತಿಯೊಬ್ಬ ನಾಗರೀಕನೂ ತಮ್ಮ ಮನೆಗಳಿಗೆ ನೈಸರ್ಗಿಕ ಸೋಲಾರ್ ಪ್ಯಾನಲ್ ಗಳನ್ನೂ ಅಳವಡಿಸಲು ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ಪರಿಸರ ಹಾನಿಯಾಗುವ ಇಂಧನಗಳ ಬಳಕೆಯ ಬದಲು ಪರಿಸರ ಸ್ನೇಹಿ ಇಂಧನಗಳನ್ನು ಬಳಸಲು ಉತ್ತೇಜನ ನೀಡುವುದು

ಯೋಜನೆಯ ಪ್ರಯೋಜನಗಳು:-

  1. ಫಲಾನುಭವಿಗಳು ತಮ್ಮ ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸುವ ಮೂಲಕ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಪಡೆದುಕೊಳ್ಳುವ ಮೂಲಕ ಪ್ರತಿ ತಿಂಗಳ ವಿದ್ಯುತ್ ಖರ್ಚನ್ನು ಉಳಿತಾಯ ಮಾಡಬಹುದಾಗಿದೆ.
  2. ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲು ಹಣಕಾಸಿನ ಕೊರತೆ ಉಂಟಾದಾಗ ಬ್ಯಾಂಕ್ ಗಳಲ್ಲಿ ಕೇವಲ 7% ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  3. ಒಮ್ಮೆ ಅಳವಡಿಸಿದ ಸೋಲಾರ್ ಪ್ಯಾನಲ್ ಗಳು ಸುಮಾರು 25 ವರ್ಷಗಳ ಕಾಲ ಬಾಳಿಕೆ ಬರುವುದರಿಂದ ಇವುಗಳನ್ನು ನಿರ್ವಹಣೆ ಮಾಡುವುದು ಅತಿ ಸುಲಭವಾಗಿದೆ.
  4. ತಮ್ಮ ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಲು ಕೇಂದ್ರ ಸರ್ಕಾರದಿಂದ ಸುಮಾರು ₹78,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
  5. ಪಿಎಂ ಸೂರ್ಯ ಘರ್ ಮುಫ್ಟ್ ಬಿಜಲಿ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವು ನೇರವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಕತೆಗೆ ವರ್ಗಾವಣೆ ಆಗುವುದರಿಂದ ಯಾವುದೇ ಮಧ್ಯವರ್ತಿಗಳು ಹಾವಳಿ ಇರುವುದಿಲ್ಲ.

ಸಬ್ಸಿಡಿ ಸಹಾಯಧನದ ವಿವರ:

ಅರ್ಹ ಫಲಾನುಭವಿಗಳಿಗೆ ಪಿಎಂ ಸೂರ್ಯ ಘರ್ ಮುಫ್ಟ್ ಬಿಜಲಿ ಯೋಜನೆ (PM Surya Ghar Yojane) ಯಡಿಯಲ್ಲಿ ಸಿಗುವ ಸಬ್ಸಿಡಿ ಸಹಾಯಧನದ ವಿವರವನ್ನು ಈ ಕೆಳೆಗೆ ನೀಡಲಾಗಿದೆ. ಅವುಗಳ ವಿವರ ಹೀಗಿದೆ,

  • 1kW ಸೋಲಾರ್ ಪ್ಯಾನಲ್ ಗೆ ₹30,000
  • 2 kW ಸೋಲಾರ್ ಪ್ಯಾನಲ್ ಗೆ ₹60,000
  • 3kW ಅಥವಾ ಅದಕ್ಕಿಂತ ಹೆಚ್ಚು kW ಸಾಮರ್ಥ್ಯದ ಸೋಲಾರ್ ಪ್ಯಾನಲ್ ಗೆ ₹78,000 ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹತಾ ಮಾನದಂಡಗಳು:-

  • ಅರ್ಜಿದಾರರು ಭಾರತದ ನಾಗರೀಕನಾಗಿರಬೇಕು.
  • ಅರ್ಜಿದಾರರು ಸ್ವಂತ ಮನೆಯನ್ನು ಹೊಂದಿರಬೇಕು.
  • ಅರ್ಜಿದಾರರು ಸೋಲಾರ್ ಪ್ಯಾನಲ್ ಅಳವಡಿಸಲು ಸೂಕ್ತ ಚಾವಣಿಯನ್ನು ಹೊಂದಿದ್ದು, ಅಲ್ಲಿ ಹೆಚ್ಚು ನೆರಳು ಇರಬಾರದು.
  • ಅರ್ಜಿ ಸಲ್ಲಿಸುವವರು ತಮ್ಮ ಹೆಸರಿನಲ್ಲಿ ಅಧಿಕೃತ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.
  • ಈ ಹಿಂದೆ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಸೋಲಾರ್ ಅಳವಡಿಸಲು ಸಬ್ಸಿಡಿ ಸಹಾಯಧನವನ್ನು ಪಡೆದುಕೊಂಡಿರಬಾರದು.
  • ಅರ್ಜಿದಾರರು ಕೈಗಾರಿಕೆ ಚಟುವಟಿಕೆಗಳಿಗೆ, ಅಥವಾ ಇತರೆ ವಾಣಿಜ್ಯ ಕೆಲಸಕ್ಕೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಪಿಎಂ ಸೂರ್ಯ ಘರ್ ಯೋಜನೆಯಡಿಯಲ್ಲಿ ಸೋಲಾರ್ ಅಳವಡಿಸಲು ಸಬ್ಸಿಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಅಗತ್ಯ ದಾಖಲೆಗಳು:-

  • ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ವಾಸಸ್ಥಳ ಪುರಾವೆ
  • ಇತ್ತೀಚಿನ ವಿದ್ಯುತ್ ಬಿಲ್
  • ಬ್ಯಾಂಕ್ ಪಾಸ್ ಬುಕ್
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-

ಅರ್ಹ ಫಲಾನುಭವಿಗಳು ಪಿಎಂ ಸೂರ್ಯ ಘರ್ ಯೋಜನೆ (PM Surya Ghar Yojane) ಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳುವುದು ಹೇಗೆ?

  • ಅರ್ಹ ಅಭ್ಯರ್ಥಿಗಳು ಅಧಿಕೃತ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಲು, ಪಿಎಂ ಸೂರ್ಯ ಘರ್ ಮುಫ್ಟ್ ಬಿಜಿಲಿ ಯೋಜನೆಯ ಅಧಿಕೃತ ವೆಬ್ಸೈಟ್ https://pmsuryaghar.gov.in/ ಗೆ ಭೇಟಿ ನೀಡಿ.
  • ಅಪ್ಲೈ ಫಾರ್ ರೂಫ್ ಟಾಪ್ ಸೋಲಾರ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರಾಜ್ಯ, ಜಿಲ್ಲೆ ಹಾಗೂ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿ.
  • ನಂತರ ನಿಮ್ಮ ಕರೆಂಟ್ ಬಿಲ್ ನಲ್ಲಿರುವ ಕಸ್ಟಮರ್ ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ನಮೂದಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತೆ ಕಸ್ಟಮರ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಿ.
  • ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ.
  • ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ.
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.

ಅಂತಿಮ ತೀರ್ಮಾನ:-

ಕೇಂದ್ರ ಸರ್ಕಾರವು ಪಿಎಂ ಸೂರ್ಯ ಘರ್ ಮುಫ್ಟ್ ಬಿಜಲಿ ಯೋಜನೆ (PM Surya Ghar Yojane) ಯಡಿಯಲ್ಲಿ ಪ್ರತಿಯೊಂದು ಮನೆಗೂ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ನಿರ್ಧರಿಸಿದ್ದು, ನೀವೇನಾದರೂ ಈ ಯೋಜನೆಯಡಿಯಲ್ಲಿ ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬೇಕಾದರೆ ಮೊದಲು ನಿಮ್ಮ ಮನೆಗಳಲ್ಲಿ ಸೋಲಾರ್ ಪ್ಯಾನಲ್ ಗಳನ್ನೂ ಅಳವಡಿಸುವುದು ಕಡ್ಡಾಯವಾಗಿದೆ.

ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಈಗಾಗಲೇ ಸಬ್ಸಿಡಿ ಹಣ ಜಮಾ ಆಗಿದೆ. ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದರೆ ಇಂದೇ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಮೊದಲು ನೋಂದಾಯಿಸಿಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:-

ಹೌದು, ಪಿಎಂ ಸೂರ್ಯ ಘರ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಸ್ವಂತ ಮನೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಪಿಎಂ ಸೂರ್ಯ ಘರ್ ಯೋಜನೆಯಡಿಯಲ್ಲಿ ಸಿಗುವ ಒಟ್ಟು ಸಹಾಯಧನ ₹30,000 ದಿಂದ ₹78,000.

ಹೌದು, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ.

ಸಬ್ಸಿಡಿ ಸಹಾಯಧನವನ್ನು ಪಡೆಯಲು ಯಾವುದೇ ಸೇವಾ ಕೇಂದ್ರಕ್ಕೆ ಅಲಿಯುವ ಅವಶ್ಯಕತೆ ಇರುವುದಿಲ್ಲ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ.


ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *