Property: ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕಾ? ಹಾಗಿದ್ದರೆ ಈ 5 ದಾಖಲೆಗಳು ಇರಲೇಬೇಕು!

Property

Property: ನೀವೇನಾದರೂ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದೀರಾ? ಹಾಗಿದ್ದರೆ ಈ ಮಾಹಿತಿಯನ್ನು ನೀವು ತಿಳಿದಿರಲೇ ಬೇಕು. ಮೊದಲೆಲ್ಲಾ ತಮ್ಮ ತಾತ ಮುತ್ತಾತರು ಮಾಡಿಟ್ಟಿರುವ ಆಸ್ತಿ (Property) ನಮ್ಮ ಹೆಸರಿಗೆ ಸುಲಭವಾಗಿ ವರ್ಗಾವಣೆ ಆಗುತ್ತಿತ್ತು. ಹಿರಿಯರು ನಿರ್ಧರಿಸಿದಂತೆ ತಮ್ಮ ನಂತರದ ತಲೆಮಾರುಗಳಿಗೆ ಆಸ್ತಿ ಸುಲಭವಾಗಿ ವರ್ಗಾವಣೆ ಆಗುತ್ತಿತ್ತು. ಅವರು ಮಾಡಿಟ್ಟಿರುವ ಆಸ್ತಿಗಳಿಗೆ ಯಾವುದೇ ತಕರಾರುಗಳು ಇರುತ್ತಿರಲಿಲ್ಲ.

Want to Claim Your Inherited Property? These 5 Documents Are a Must!

ಆದರೆ ಈಗಿನ ಕಾಲದಲ್ಲಿ ಹಾಗಿಲ್ಲ. ಅಂದು ನಂಬಿಕೆಯ ಮೇಲೆ ನಡೆಯುತ್ತಿದ್ದ ಆಸ್ತಿ ವ್ಯವಹಾರಗಳು ಇಂದು ಕಟ್ಟು ನಿಟ್ಟಾದ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದೆ. ಹಾಗೆಯೇ ಸರಿಯಾದ ಆಸ್ತಿ ದಾಖಲೆಗಳಿಲ್ಲದ ಕಾರಣ ಎಷ್ಟು ಕುಟುಂಬಗಳು ತಮ್ಮ ಆಸ್ತಿಯನ್ನು ಕಳೆದುಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಆಸ್ತಿ (Property Law) ಗಳ ಮೌಲ್ಯವು ಗಗನಕ್ಕೇರುತ್ತಿದ್ದಂತೆ, ಹಳೆಯ ಆಸ್ತಿಗಳ ಮೇಲೆ ವಿವಾದವು ಹೆಚ್ಚುತ್ತಿದೆ. ಈಗಿನ ಕಾಲದಲ್ಲಿ ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಇರುವ ಮೌಖಿಕ ಮಾಹಿತಿಗಳಿದ್ದರೆ ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆ ಆಗುವುದಿಲ್ಲ. ಬದಲಾಗಿ, ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಅಥವಾ ಆಸ್ತಿಯನ್ನು ರಕ್ಷಿಸಲು ಪ್ರಮುಖ ಐದು ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಆಸ್ತಿಯನ್ನು ತಮ್ಮ ಹೆಸರಿನಲ್ಲಿ ವರ್ಗಾಯಿಸಿಕೊಳ್ಳಲು ಬೇಕಾದ ಆ ಅಗತ್ಯ ದಾಖಲೆಗಳು ಯಾವುವು? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಇನ್ನಷ್ಟು ಹೊಸ ಹೊಸ ವಿಷಯಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿ ನೀಡಿ.

Property

ಪ್ರಮುಖ ಹೈಲೈಟ್ಸ್:

1. ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಐದು ದಾಖಲೆಗಳು ಕಡ್ಡಾಯ.
2. ಈ ಐದು ದಾಖಲೆಗಳನ್ನು ನೀವೇನಾದರೂ ಹೊಂದಿಲ್ಲವಾದರೆ, ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ತಪ್ಪಿಹೋಗುತ್ತದೆ.

ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಹೊಂದಿರಬೇಕಾದ ಅಗತ್ಯ ದಾಖಲೆಗಳು:

ನೀವೇನಾದರೂ ನಿಮ್ಮ ಪಿತ್ರಾರ್ಜಿತ ಆಸ್ತಿ (Property) ಯನ್ನು ಕಾನೂನುಬದ್ಧವಾಗಿ ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾದರೆ ಈ ಕೆಳಗೆ ನೀಡಲಾದ ಪ್ರಮುಖ ಐದು ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಅವುಗಳು ಯಾವುವು ಎಂಬುದನ್ನು ಕೆಳಗಿನ ಹಂತದಲ್ಲಿ ತಿಳಿದುಕೂಳ್ಳುತ್ತ ಹೋಗೋಣ.

1. ಮೂಲ ಮಾಲೀಕತ್ವದ ಪತ್ರ (Title Deeds):

ಯಾವುದೇ ಒಂದು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕಾದರೆ ನಿಮ್ಮ ಪೂರ್ವಜರು ಆಸ್ತಿಯನ್ನು ಯಾರಿಂದ ಪಡೆದುಕೊಂಡರು? ಪಡೆದುಕೊಂಡ ಆಸ್ತಿಯನ್ನು ಹೇಗೆ ವಿಭಜನೆ ಮಾಡಲಾಗಿದೆ? ಆಸ್ತಿಯು ಏನಾದರು ಉಡುಗರೆಯಾಗಿ ಬಂದದ್ದೇ ಅಥವಾ ದಾನವಾಗಿ ನೀಡಿದೆ ಎನ್ನುವ ಮಾಹಿತಿ ಅತ್ಯಗತ್ಯವಾಗಿರುತ್ತದೆ. ಹಾಗಾಗಿ ಮಾರಾಟ ಪತ್ರ, ಆಸ್ತಿ ವಿಭಜನೆಯಾಗಿದ್ದರೆ ವಿಭಜನಾ ಪತ್ರ ಹಾಗೂ ಧಾನವಾಗಿ ನೀಡಿದ್ದರೆ, ಧಾನ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.

2. ವಂಶವೃಕ್ಷ ಮತ್ತು ಮರಣ ಪ್ರಮಾಣಪತ್ರ (Death Certificate):

ಆಸ್ತಿ ಯಾರ ಹೆಸರಿನಲ್ಲಿದೆಯೋ ಅವರು ಮರಣ ಹೊಂದಿದರೆ, ಅವರ ಮರಣ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ ಹಾಗೂ ನೀವು ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಅರ್ಹರೇ ಎಂಬುದನ್ನು ತಿಳಿಯಲು ಕಂದಾಯ ಇಲಾಖೆಯಿಂದ ಪಡೆದ ವಂಶವೃಕ್ಷವನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಎರಡು ದಾಖಲೆಗಳಿಲ್ಲದಿದ್ದರೆ ನಿಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಿಲ್ಲ.

3. ಪಹಣಿ ಹಾಗೂ ಆರ್.ಟಿ.ಸಿ:

ನೀವೇನಾದರೂ ಕೃಷಿ ಭೂಮಿಯನ್ನು ಹೊಂದಿದ್ದರೆ, ಈ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಪಹಣಿ ಅತ್ಯಗತ್ಯ ದಾಖಲೆಗಳಾಗಿವೆ. ನೀವು ಆನ್ಲೈನ್ ಮೂಲಕವೇ ಪಹಣಿಯನ್ನು ಪರಿಶೀಲನೆ ಮಾಡಬಹುದು. ಕಾಲ ಕಾಲಕ್ಕೆ ಪಹಣಿಯ ಹೆಸರು ಬದಲಾವಣೆ ಆಗಿದೆಯೇ? ಅಥವಾ ಸರ್ಕಾರದ ಯಾವುದೇ ಒಂದು ಯೋಜನೆಗೆ ನಿಮ್ಮ ಕೃಷಿ ಭೂಮಿ ಸ್ವಾಧೀನಕ್ಕೊಳಪಟ್ಟಿದೆಯೇ ಎಂಬುದನ್ನು ಇದರ ಮೂಲಕ ವೀಕ್ಷಿಸಬಹುದಾಗಿದೆ.

4. ಋಣಭಾರ ಪ್ರಮಾಣಪತ್ರ (EC):

ನೀವು ಪಿತ್ರಾರ್ಜಿತ ಆಸ್ತಿ (Property) ಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾದರೆ, ಋಣಭಾರ ಪ್ರಮಾಣಪತ್ರ (EC) ಹೊಂದಿರುವುದು ಅತ್ಯಗತ್ಯ. ಏಕೆಂದರೆ ಇದು ಕಳೆದ 15-30 ವರ್ಷಗಳಲ್ಲಿ ನಿಮ್ಮ ಆಸ್ತಿಯ ಮೇಲೆ ಯಾರಾದರೂ ಸಾಲವನ್ನು ಪಡೆದುಕೊಂಡಿದ್ದಾರೆಯೇ? ಇಲ್ಲ ಅಕ್ರಮವಾಗಿ ಆಸ್ತಿಯನ್ನು ಮಾರಾಟ ಮಾಡಿದ್ದಾರೆಯೇ? ಎಂಬುದನ್ನು ಪರಿಶೀಲನೆ ಮಾಡಲು ನೆರವಾಗುತ್ತದೆ.

5. ಮ್ಯುಟೇಷನ್ ಅಥವಾ ಖಾತಾ ವರ್ಗಾವಣೆ:

ಒಬ್ಬರ ಹೆಸರಿನಿಂದ ಇನ್ನೊಬ್ಬರ ಹೆಸರಿಗೆ ಆಸ್ತಿಯನ್ನು ವರ್ಗಾಯಿಸುವಾಗ ಸರ್ಕಾರಿ ದಾಖಲೆಗಳಲ್ಲಿ ದಾಖಲಿಸುವುದನ್ನು ಮ್ಯುಟೇಷನ್ ಎಂದು ಕರೆಯುತ್ತಾರೆ. ಆಸ್ತಿಯು ನಿಮ್ಮ ಹೆಸರಿನಲ್ಲಿ ಕಾನೂನುಬದ್ಧವಾಗಿ ವರ್ಗಾವಣೆ ಆಗಲು ಮ್ಯುಟೇಷನ್ ಅತ್ಯಗತ್ಯ ದಾಖಲೆಗಳಾಗಿವೆ.

ಈ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ತಗೆದುಕೊಂಡು ನಿಮ್ಮ ಹತ್ತಿರದ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ. ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಬೇಕೆಂದು ತಹಶೀಲ್ದಾರ್ ಗೆ ಅರ್ಜಿ ಸಲ್ಲಿಸಿದಾಗ, ನೀವು ಸಲ್ಲಿಸಿದ ಅರ್ಜಿಯನ್ನು ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿ ನಿಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾಯಿಸುತ್ತದೆ.

ಈ ಐದು ದಾಖಲೆಗಳನ್ನು ಹೊಂದಿದ್ದರೆ, ಭವಿಷ್ಯದಲ್ಲಿ ಏನೆಲ್ಲಾ ಪ್ರಯೋಜನಗಳಾಗುತ್ತದೆ?

1. ಕಾನೂನು ಸಮ್ಮತ ಹಕ್ಕು ದೊರೆಯುತ್ತದೆ:

ನೀವೇನಾದರೂ ಈ ಮೇಲೆ ನೀಡಲಾದ ದಾಖಲೆಗಳನ್ನು ಹೊಂದಿದ್ದರೆ ಕೇವಲ ಆಸ್ತಿ (Property) ಯನ್ನು ನಿಮ್ಮ ಹೆಸರಿಗೆ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದಲ್ಲದೆ, ಕಾನೂನುಬದ್ದ ಭದ್ರತೆಯನ್ನು ಪಡೆದುಕೊಳ್ಳಬಹುದಾಗಿದೆ. ಭವಿಷ್ಯದಲ್ಲಿ ಯಾರಾದರೂ ನಿಮ್ಮ ಆಸ್ತಿಯನ್ನು ತಮ್ಮದೆಂದು ವಾದ ಮಾಡಿದರೆ, ಕೋರ್ಟ್ ನಲ್ಲಿ ವಿಚಾರಣೆ ನಡೆಸುವಾಗ ನಿಮ್ಮ ಬಳಿಗೆ ಭಲವಾದ ಸಾಕ್ಷಿ ಇರುತ್ತದೆ. ಇದರಿಂದ ಯಾರು ನಿಮ್ಮ ಆಸ್ತಿಯನ್ನು ಅಕ್ರಮವಾಗಿ ಪಡೆದುಕೊಳ್ಳಲು ಆಗುವುದಿಲ್ಲ.

2. ಮುಂದಿನ ಕಾನೂನು ಸಮಸ್ಯೆಗಳಿಂದ ಭದ್ರತೆ:

ಆಸ್ತಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ಹೊಂದಿದ್ದರೆ, ಭವಿಷ್ಯದಲ್ಲಿ ಕುಟುಂಬದ ಸದಸ್ಯರಿಂದ ಆಗುವ ತಕರಾರುಗಳನ್ನು ತಪ್ಪಿಸಬಹುದು. ಆಸ್ತಿಯ ಮಾಲೀಕರು ಮರಣಹೊಂದಿದ ನಂತರ ಆಸ್ತಿ ಯಾರ ಹೆಸರಿಗೆ ವರ್ಗಾವಣೆ ಆಗಬೇಕು, ನಂತರದ ವಾರಸುದಾರರು ಯಾರಾಗಬೇಕೆನ್ನುವ ಸಂಪೂರ್ಣ ದಾಖಲೆಗಳನ್ನು ಹೊಂದಿರುವುದರಿಂದ ಅನಗತ್ಯವಾಗಿ ಕೋರ್ಟು ಕಚೇರಿಗೆ ಅಳಿಯುವ ತಲೆಬಿಸಿ ಇರುವುದಿಲ್ಲ.

3. ಆಸ್ತಿಯ ಮೇಲೆ ಸಂಪೂರ್ಣ ನಿಯಂತ್ರಣ:

ಒಬ್ಬ ವ್ಯಕ್ತಿಯು ಎಲ್ಲಾ ಆಸ್ತಿಯನ್ನು ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರೆ, ಅವನು ಭವಿಷ್ಯದಲ್ಲಿ ಆಸ್ತಿ (Property) ಯನ್ನು ಮಾರಾಟ ಮಾಡಲು, ಭೂಮಿಯನ್ನು ಅಡಮಾನವಾಗಿ ಇಟ್ಟು ಬ್ಯಾಂಕ್ ಗಳಿಂದ ಸಾಲವನ್ನು ಪಡೆಯಲು, ಯಾರಿಗಾದರೂ ಉಡುಗರೆಯಾಗಿ ನೀಡಲು ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ಈ ವಿಷಯದ ಕುರಿತು ಯಾವುದೇ ರೀತಿಯ ತಕರಾರು ಇರುವುದಿಲ್ಲ.

4. ಆಸ್ತಿಯ ಬೆಲೆ ಏರಿಕೆಯ ಪ್ರಯೋಜನ:

ಆಸ್ತಿಯನ್ನು ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ವರ್ಗಾಯಿಸಿ ಕೊಂಡಿರುವವರು ಭವಿಷ್ಯದಲ್ಲಿ ಯಾರಿಗಾದರೂ ಮಾರಾಟಮಾಡಬೇಕೆಂದಿದ್ದರೆ, ಸುಲಭವಾಗಿ ಹೆಚ್ಚಿನ ಲಾಭದೊಂದಿಗೆ ಮಾರಾಟ ಮಾಡಬಹುದು. ಏಕೆಂದರೆ ಸರಿಯಾದ ಹಾಗೂ ಸ್ಪಷ್ಟ ದಾಖಲೆಗಳನ್ನು ಹೊಂದಿರುವ ಆಸ್ತಿಯನ್ನು ಮಾರಾಟ ಮಾಡಿದರೆ ಆ ಆಸ್ತಿಯ ಮೌಲ್ಯವು ಹೆಚ್ಚಿರುತ್ತದೆ. ಆಸ್ತಿಯನ್ನು ಖರೀದಿ ಮಾಡುವವರು ಕೂಡ ಸ್ಪಷ್ಟ ದಾಖಲೆಗಳನ್ನು ಹೊಂದಿರುವ ಆಸ್ತಿಯನ್ನು ಖರೀದಿಮಾಡಲು ಹೆಚ್ಚಿನ ಒಲವನ್ನು ತೋರಿಸುತ್ತಾರೆ. ಇದರಿಂದಾಗಿ ಭವಿಷ್ಯದಲ್ಲಿ ತಾವು ಹೊಂದಿರುವ ಆಸ್ತಿಗೆ ಭಾರಿ ದರದಲ್ಲಿ ಬೇಡಿಕೆ ಇರುತ್ತದೆ.

5. ಆರ್ಥಿಕ ಮತ್ತು ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಅವಕಾಶ:

ಸರಿಯಾದ ಋಣಭಾರ ಪ್ರಮಾಣಪತ್ರ (EC) ಹಾಗೂ ಪಹಣಿಯನ್ನು ಹೊಂದಿದ್ದರೆ, ನಿನ್ನ ಆಸ್ತಿ (Property) ಯ ಮೇಲೆ ಸಾಲವನ್ನು ಪಡೆದುಕೊಳ್ಳಬಹುದು. ಕೃಷಿ ಭೂಮಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ಹೊಂದಿದ್ದರೆ, ಸರ್ಕಾರದ ಎಷ್ಟೋ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು, ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದು.

ಆಸ್ತಿಯ ಹಕ್ಕನ್ನು ಭವಿಷ್ಯದಲ್ಲಿ ಕಾನೂನುಬದ್ಧವಾಗಿ ಉಳಿಸಿಕೊಳ್ಳಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು:

  • ಮೂಲ ದಾಖಲೆಗಳ ಸಂಗ್ರಹಣೆ:

ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಭವಿಷ್ಯದಲ್ಲಿ ಕಾನೂನುಭದ್ದವಾಗಿ ಉಳಿಸಿಕೊಳ್ಳಲು ಮೂಲ ಮಾಲೀಕತ್ವ ದಾಖಲೆಗಳನ್ನು, ಮ್ಯುಟೇಷನ್, ಋಣಭಾರ ಪ್ರಮಾಣಪತ್ರ, ಪಹಣಿ ಹಾಗೂ ಆರ್,ಟಿ,ಸಿ ಯನ್ನು ಹಾಗೂ ವಂಶವೃಕ್ಷ, ಆಸ್ತಿ ಮಾಲೀಕರು ಮರಣಹೊಂದಿದರೆ ಅವರ ಮರಣ ಪ್ರಮಾಣ ಪತ್ರಗಳನ್ನು ಸೇಫ್ ಆಗಿ ಸಂಗ್ರಹಿಸಿಡುವುದು. ಇದರಿಂದಾಗಿ ಭವಿಷ್ಯದಲ್ಲಿ ಯಾವುದೇ ತಕರಾರು ಇರುವುದಿಲ್ಲ.

  • ದಾಖಲೆಗಳನ್ನು ನಿರಂತರವಾಗಿ ನವೀಕರಣ ಮಾಡುತ್ತಿರುವುದು:

ಆಸ್ತಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ನವೀಕರಣ ಮಾಡುವುದು. ಅಂದರೆ ಪಹಣಿಯಲ್ಲಿ ಯಾರದಾದರೂ ಹೆಸರು ಬದಲಾವಣೆಯನ್ನು ಮಾಡಿದರೆ, ಆಸ್ತಿಗೆ ಸಂಬಂಧಿಸಿದಂತೆ ಏನಾದರು ಸಾಲವನ್ನು ಪಡೆದುಕೊಂಡಿದ್ದರೆ ಅವುಗಳನ್ನು ಕಾಲ ಕಾಲಕ್ಕೆ ನವೀಕರಣ ಮಾಡುತ್ತಿರಬೇಕು.

  • ಡಿಜಿಟಲ್ ರೂಪದಲ್ಲಿ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು:

ಕಾಗದದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಲಾಕರ್ ಅಥವಾ ಬ್ಯಾಂಕ್ ಲಾಕರ್ ಗಳಲ್ಲಿ ಇಡುವ ಮೂಲಕ ದಾಖಲೆಗಳನ್ನು ಸುರಕ್ಷತೆಯಾಗಿ ಕಾಪಾಡಿಕೊಳ್ಳಿ.

ಕೊನೆಯ ಮಾತು:

ನೀವೇನಾದರೂ ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕೆಂದಿದ್ದೀರಾ? ಹಾಗಿದ್ದರೆ ಮೊದಲು ಈ ಎಲ್ಲ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ನಂತರ ತಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿಕೊಳ್ಳಿ. ಕಾನೂನುಬದ್ಧವಾಗಿ ವರ್ಗಾಯಿಸಿಕೊಂಡ ಎಲ್ಲಾ ಆಸ್ತಿಯಾಗಳನ್ನು ಯಾರು ಕೂಡ ಅಕ್ರಮವಾಗಿ ತಮ್ಮ ವಶ ಪಡಿಸಿಕೊಳ್ಳಲು ಸಾಧ್ಯವಿಲ್ಲ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ಆಸ್ತಿ ಮಾಲೀಕತ್ವ ಯಾರಿಂದ ಯಾರಿಗೆ ವರ್ಗಾವಣೆ ಆಗಿದೆ ಎಂದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ದಾಖಲೆ ಮಾಡುವುದನ್ನು ಮ್ಯುಟೇಷನ್ ಅನ್ನುತ್ತಾರೆ.

ಹೌದು, ಆಸ್ತಿಯನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾದರೆ ಋಣಭಾರ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ.

1. ಮೂಲ ಮಾಲೀಕತ್ವದ ಪತ್ರ, 2. ವಂಶವೃಕ್ಷ ಮತ್ತು ಮರಣ ಪ್ರಮಾಣಪತ್ರ, 3. ಪಹಣಿ ಹಾಗೂ ಆರ್.ಟಿ.ಸಿ, 4. ಋಣಭಾರ ಪ್ರಮಾಣಪತ್ರ, 5. ಮ್ಯುಟೇಷನ್ ಅಥವಾ ಖಾತಾ ವರ್ಗಾವಣೆ.


ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *