ನಮಸ್ಕಾರ ಸ್ನೇಹಿತರೆ, ನೀವೇನಾದರೂ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕೆಂದಿದ್ದೀರಾ? ಅಥವಾ ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರು ತಿದ್ದುಪಡಿ ಮಾಡಿಸಬೇಕಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ. ಕರ್ನಾಟಕ ಸರ್ಕಾರವು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಡಿಯಲ್ಲಿ ಸಾಮಾನ್ಯ ಜನರಿಗೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
BPL Card Online Application in Kannada
ಪ್ರತಿಯೊಬ್ಬ ನಾಗರೀಕನಿಗೂ ರೇಷನ್ ಕಾರ್ಡ್ ಅತಿ ಮುಖ್ಯವಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಜನಸಾಮಾನ್ಯರಿಗೆ ರೇಷನ್ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ, ಬದಲಾಗಿ ಅವರ ಬದುಕಿನ ಆಧಾರ ಸ್ತಂಭವಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ರೇಷನ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ನೀಡಬೇಕಾಗುತ್ತದೆ. ಇದು ಕೇವಲ ಆಹಾರ ಧಾನ್ಯಗಳನ್ನು ಪಡೆಯಲು ಮಾತ್ರ ಸೀಮಿತವಲ್ಲದೆ, ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯಬೇಕಾದರು ಕೂಡ ರೇಷನ್ ಕಾರ್ಡ್ ಅಗತ್ಯವಾಗಿರುತ್ತದೆ.
2026 ನೇ ಸಾಲಿನಲ್ಲಿ ಜನಸಾಮಾನ್ಯರಿಗೆ ಇದೇ ಮೊದಲ ಬಾರಿಗೆ ಬಿಪಿಎಲ್ ರೇಷನ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ಗೊಂಡಿದೆ. ಇನ್ನೇನು ಹೊಸ ಅರ್ಜಿಗಳ ಸ್ವೀಕೃತಿಯನ್ನು ಸ್ಥಗಿತಗೊಳಿಸಲಿದ್ದು, ಸದ್ಯದಲ್ಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಳ್ಳಲಿದೆ. ನೀವೇನಾದರೂ ಹೊಸದಾಗಿ ಆನ್ಲೈನ್ ಮೂಲಕ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಂದೇ ಅರ್ಜಿ ಸಲ್ಲಿಸಿ.
ಇದೇ ರೀತಿಯ ಇನ್ನಷ್ಟು ಹೊಸ ಹೊಸ ವಿಷಯಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿ ನೀಡಿ.

ಹೈಲೈಟ್ಸ್:
| 1. 2026 ರಲ್ಲಿ ಮೊದಲ ಬಾರಿಗೆ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ. 2. ಪ್ರಸ್ತುತ ಸಾಲಿನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅವಕಾಶ. 3. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆ. |
ರೇಷನ್ ಕಾರ್ಡ್ ವ್ಯವಸ್ಥೆಯ ಹಿಂದಿನ ಉದ್ದೇಶ:
1. ಬಡತನ ನಿರ್ಮೂಲನೆ:
ಕರ್ನಾಟಕದಲ್ಲಿ ಎಷ್ಟೋ ಜನಸಾಮಾನ್ಯರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಾರೆ. ಅಂತಹವರಿಗೆ ಆಹಾರ ಧಾನ್ಯಗಳನ್ನು ನೀಡಿ ಬಡ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಮೂಲಕ ಬಡತನ ನಿರ್ಮೂಲನೆ ಮಾಡುವಲ್ಲಿ ರೇಷನ್ ಕಾರ್ಡ್ ಪ್ರಮುಖ ಪಾತ್ರ ವಹಿಸುತ್ತದೆ.
2. ಅರ್ಹ ಫಲಾನುಭವಿಗಳ ಗುರುತಿಸುವಿಕೆ:
ಸರ್ಕಾರದ ಯಾವುದೇ ಯೋಜನೆಗೆ ಅಂದರೆ, ಗೃಹಲಕ್ಷ್ಮಿ, ಆಯುಷ್ಮನ್ ಭರತ್ ಯೋಜನೆಯಡಿಯಲ್ಲಿ ಹಾಗೂ ಇನ್ನಿತರ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಯಡಿಯಲ್ಲಿ ಲಾಭ ಪಡೆಯಲು ಅವಕಾಶ ಕಲ್ಪಿಸಲು ಬಿಪಿಎಲ್ ಕಾರ್ಡ್ ಪ್ರಮುಖ ಮಾನದಂಡವಾಗಿದೆ.
BPL ಕಾರ್ಡ್ ಏಕೆ ಅಗತ್ಯ:
ಬಿಪಿಎಲ್ ಕಾರ್ಡ್ ಕೇವಲ ಬಡತನ ರೇಖೆಗಿಂತ ಕೆಳಗಿರುವ ಜನಸಾಮಾನ್ಯರಿಗೆ ಆಹಾರ ಹಾಗೂ ಧಾನ್ಯಗಳನ್ನು ಪಡೆದುಕೊಳ್ಳಲು ಇರುವ ದಾಖಲೆಗಳಲ್ಲ ಬದಲಾಗಿ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಅಡಿಪಾಯವಾಗಿದೆ.
1. ಉಚಿತ ಆರೋಗ್ಯ ಚಿಕಿತ್ಸೆ ಪಡೆಯಲು ಅವಕಾಶ :
ನೀವೇನಾದರೂ ಗಂಭೀರ ಕಾಯಿಲೆಗಳಿಗೆ ತುತ್ತಾದಾಗ ನೀವು ಹೊಂದಿರುವ ಬಿಪಿಎಲ್ ಕಾರ್ಡ್ ಮೂಲಕ ಅಯುಷ್ಮಾನ್ ಭರತ್- ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ₹5,00,000 ದ ವರೆಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.
2. ಆಹಾರ ಭದ್ರತೆಯನ್ನು ಪಡೆದುಕೊಳ್ಳಬಹುದು:
ಪ್ರತಿ ತಿಂಗಳು BPL ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ 10 KG ಅಕ್ಕಿಯನ್ನು ನೀಡುವ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಜನಸಾಮಾನ್ಯರಿಗೆ ಹಸಿವಿನಿಂದ ಮುಕ್ತಿಯನ್ನು ನೀಡಿದ್ದು, ಕೆಲವು ಸಂದರ್ಭದಲ್ಲಿ ಅಕ್ಕಿ ಕೊರತೆಯಾದರೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
3. ಶಿಕ್ಷಣ ಹಾಗೂ ಇತರೆ ಸಾಮಾಜಿಕ ಕಲ್ಯಾಣ ಸೌಲಭ್ಯವನ್ನು ಪಡೆಯಲು BPL ಕಾರ್ಡ್ ಅಗತ್ಯ:
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕಾಗಿ ವಿವಿಧ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ಹಣಕಾಸಿನ ನೆರವನ್ನು ಪಡೆಯಲು ಬಿಪಿಎಲ್ ಕಾರ್ಡ್ ಮುಖ್ಯ ದಾಖಲೆಯಾಗಿದೆ.
ಜೊತೆಗೆ, ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಹೊಸ ಮನೆಯನ್ನು ಪಡೆಯಲು ಕೂಡ BPL ಅತ್ಯಗತ್ಯ ದಾಖಲೆಗಳಾಗಿವೆ.
4. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು:
ಕರ್ನಾಟಕ ಸರ್ಕಾರವು ಹೊಸದಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ಹೊಂದಿರುವ ಯಜಮಾನಿಯರ ಬ್ಯಾಂಕ್ ಖಾತೆಗೆ ₹2,000 ಹಣವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಕೂಡ BPL ಕಾರ್ಡ್ ಅತ್ಯಗತ್ಯ.
5. ಸಾಲ ಹಾಗೂ ಸಬ್ಸಿಡಿ ಸಹಾಯಧನವನ್ನು ಪಡೆಯಲು BPL ಕಾರ್ಡ್ ಅತ್ಯಗತ್ಯ:
ಕರ್ನಾಟಕ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೂ, ಸ್ವಂತ ಉದ್ಯೋಗ ಮಾಡಲು ಯಾವುದೇ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೂ ಕೂಡ ಬಿಪಿಎಲ್ ಕಾರ್ಡ್ ಅತ್ಯಗತ್ಯ.
ಹೊಸದಾಗಿ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು:
- ಅತ್ಯಂತ ಹಿಂದುಳಿದ ವರ್ಗಗಳ ಹಾಗೂ ಬುಡಕಟ್ಟು ಸಮುದಾಯಗಳ ಅಭ್ಯರ್ಥಿಗಳು ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಕಿಡ್ನಿ ವೈಫಲ್ಯ, ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಹಾಗೂ ಇನ್ನಿತರ ಗಂಭೀರ ಕಾಯಿಲೆಗಳಿಗೆ ತುರ್ತು ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಅಗತ್ಯವಿರುವ ಕುಟುಂಬಗಳು.
- ದಿನಗೂಲಿ ನೌಕರರು, ಅಸಂಘಟಿತ ವಲಯದ ನೊಂದಾಯಿತ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
| ಇಲ್ಲಿ ಗಮನಿಸಿ: ” ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಹಿಂದೆ ಯಾವುದೇ ಪಡಿತರ ಚೀಟಿಯನ್ನು ಹೊಂದಿರಬಾರದು.” |
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಯಾರಿಗೆ ಅವಕಾಶ?
- ಹೊಸ ಸದಸ್ಯರ ಸೇರ್ಪಡೆ:
ಕುಟುಂಬದಲ್ಲಿ ಹೊಸದಾಗಿ ವಿವಾಹವಾದ ದಂಪತಿಗಳ ಹೆಸರನ್ನು ಅಥವಾ ಯಾವುದೇ ಮಕ್ಕಳ ಹೆಸರನ್ನು ಬಿಪಿಎಲ್ ಕಾರ್ಡ್ ಗೆ ಸೇರ್ಪಡೆ ಮಾಡಲು ಬಯಸುವವರಿಗೆ ಅವಕಾಶ.
- ತಪ್ಪು ದಾಖಲೆಗಳನ್ನು ತಿದ್ದುಪಡಿ ಮಾಡಲು:
ಈಗಾಗಲೇ ಹೊಂದಿರುವ ಬಿಪಿಎಲ್ ಕಾರ್ಡ್ ನಲ್ಲಿ ಫಲಾನುಭವಿಗಳು ನೀಡಿರುವ ಹೆಸರು, ವಿಳಾಸ, ವಯಸ್ಸು ಹಾಗೂ ಇನ್ನಿತರ ತಪ್ಪಾಗಿರುವ ಅಗತ್ಯ ದಾಖಲೆಗಳನ್ನು ಸರಿಪಡಿಸಲು ಬಯಸುವವರಿಗೆ ಅವಕಾಶ.
- ಸದಸ್ಯರ ಹೆಸರನ್ನು ತೆಗೆದುಹಾಕಲು:
ಕುಟುಂಬದ ಯಾವುದೇ ಸದಸ್ಯರು ಮರಣ ಹೊಂದಿದರೆ ಅವರ ಹೆಸರನ್ನು ಪ್ರಸ್ತುತ ಇರುವ ಬಿಪಿಎಲ್ ಕಾರ್ಡ್ ನಲ್ಲಿ ಹೆಸರನ್ನು ತೆಗೆಸಲು ಬಯಸುವವರಿಗೆ ಅವಕಾಶ.
BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡಿರಬಾರದು.
- BPL ಕಾರ್ಡ್ ಪಡೆಯಬೇಕೆಂದಿರುವ ಕುಟುಂಬವು ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರಬಾರದು.
- ಕುಟುಂಬದ ವಾರ್ಷಿಕ ಆದಾಯವು ₹1.20 ಲಕ್ಷ ಮೀರಿರಬಾರದು.
- ಫಲಾನುಭವಿಗಳು ಸ್ವಂತ ಬಳಕೆಯ ನಾಲ್ಕು ಚಕ್ರ ವಾಹನವನ್ನು ಹೊಂದಿರಬಾರದು.
BPL ಕಾರ್ಡ್ ಹೊಂದಲು ಅಗತ್ಯವಾದ ದಾಖಲೆಗಳು:
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ
- ನಿವಾಸ ಪುರಾವೆ
- ಕುಟುಂಬದಲ್ಲಿನ ಆರು ವರ್ಷದೊಳಗಿನ ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಬೇಕಾದರೆ ಜನನ ಪ್ರಮಾಣ ಅಗತ್ಯ.
BPL ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
BPL ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಹಾಗೂ ತಿದ್ದುಪಡಿ ಮಾಡಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ವಿಧಾನದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಅರ್ಹ ಫಲಾನುಭವಿಗಳು ಮೊದಲು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ಪೋರ್ಟಲ್ http://ahara.karnataka.gov.in/ ಗೆ ಭೇಟಿ ನೀಡಿ.
- ನಂತರ ಮುಖಪುಟದಲ್ಲಿರುವ ಇ-ಸೇವೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಲ್ಲಿ ಕಾಣುವ ಹೊಸ ಪಡಿತರ ಚೀಟಿಗೆ ಅರ್ಜಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಹಾಗೂ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಲು ಬಯಸುವ ಅಭ್ಯರ್ಥಿಗಳು ತಿದ್ದುಪಡಿ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ನಿಮ್ಮ ಆಯ್ಕೆಯ ಭಾಷೆಯನ್ನು ಆಯ್ಕೆ ಮಾಡಿ ಹಾಗೂ ನೀವು ಪಡೆಯಲು ಬಯಸುವ ಕಾರ್ಡ್ ನ ಪ್ರಕಾರವನ್ನು ಆಯ್ಕೆ ಮಾಡಿ.
- ನಂತರ, ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್ ಲಿಂಕ್ ಆಗಿರುವ ಮೊಬೈಲ್ ಗೆ ಬರುವ OTP ಅನ್ನು ನಮೂದಿಸಿ.
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ದಾಖಲಿಸಿದ ಎಲ್ಲಾ ಮಾಹಿತಿಗಳು ಸರಿ ಇದೆಯೇ ಎಂದು ಖಚಿತ ಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರವು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಡಿಯಲ್ಲಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ಇವುಗಳ ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ. ನೀವೇನಾದರೂ ಹೊಸದಾಗಿ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಂದೇ ಅರ್ಜಿ ಸಲ್ಲಿಸಿ ಕೊನೆಯ ದಿನಗಳ ವರೆಗೆ ಕಾಯಬೇಡಿ. ನಂತರದ ದಿನಗಳಲ್ಲಿ ಸರ್ವರ್ ಬ್ಯುಸಿ ಇರುವ ಸಾಧ್ಯತೆಗಳಿರುತ್ತದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಹೊಸದಾಗಿ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
BPL ಕಾರ್ಡ್ ಪಡೆಯಬೇಕಾದರೆ ಫಲಾನುಭವಿಗಳು ಹೊಂದಿರಬೇಕಾದ ಆದಾಯದ ಮಿತಿ ಕುಟುಂಬದ ವಾರ್ಷಿಕ ಆದಾಯವು ₹1.20 ಲಕ್ಷ ಮೀರಿರಬಾರದು.
ಅರ್ಹರಲ್ಲ, ಫಲಾನುಭವಿಗಳು BPL ಕಾರ್ಡ್ ಪಡೆಯಬೇಕಾದರೆ ಸ್ವಂತ ಬಳಕೆಯ ನಾಲ್ಕು ಚಕ್ರ ವಾಹನವನ್ನು ಹೊಂದಿರಬಾರದು.
ಇತರೆ ಪ್ರಮುಖ ಲಿಂಕುಗಳು:
- Farmers Loan: ₹5 ಲಕ್ಷ ಶೂನ್ಯ ಬಡ್ಡಿ ಕೃಷಿ ಸಾಲ! ಈ ಕೂಡಲೇ ಅರ್ಜಿ ಹಾಕಿ! ಅರ್ಜಿ ಹಾಕುವುದು ಹೇಗೆ?
- ಹೊಸ ಜಮೀನು ಖರೀದಿಗೆ ಮುನ್ನ ಇದನ್ನು ತಿಳ್ಕೊಳಿ! ಮ್ಯುಟೇಷನ್ ಎಂದರೇನು? ಇದನ್ನು ಹೇಗೆ ಮಾಡಿಸುವುದು! ಎಷ್ಟು ದಿನ ಬೇಕು?
- Labour Marriage : ರೂ50,000/- ಮದುವೆಗೆ ಧನಸಹಾಯ! ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್! ಹೇಗೆ ಪಡೆಯುವುದು? ಸಂಪೂರ್ಣ ಮಾಹಿತಿ ಇಲ್ಲಿ!
- Labour Card Benefits: ಲೇಬರ್ ಕಾರ್ಡ್ ಇದ್ದರೆ ಸಾಕು! ಸರ್ಕಾರದಿಂದ ಲಕ್ಷಾಂತರ ಸೌಲಭ್ಯಗಳು – ಸಂಪೂರ್ಣ ಮಾಹಿತಿ ಇಲ್ಲಿದೆ

