ನಮಸ್ಕಾರ ರೈತ ಬಾಂಧವರೇ, ನೀವು ಕೃಷಿ ಚಟುವಟಿಕೆಯನ್ನು ನಡೆಸಲು ಹಣಕಾಸಿನ ಅಗತ್ಯವಿದೆಯೆ? ಎಲ್ಲಿಯೂ ಸಾಲವನ್ನು ನೀಡುತ್ತಿಲ್ಲವೇ? ಅಥವಾ ಸಾಲವನ್ನು ನೀಡಿದರೂ ಬಡ್ಡಿ ದರ ಜಾಸ್ತಿ ಇದೆಯೇ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ! ಯಾವುದೇ ಬಡ್ಡಿ ಇಲ್ಲದೆ ಶೂನ್ಯ ಬಡ್ಡಿಯಲ್ಲಿ ನೀವು ₹5,00,000 ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹೇಗಂತ ಯೋಚುಸ್ತಿದೀರಾ? ಹಾಗಿದ್ದರೆ ಈ ಲೇಖನವನ್ನು ಓದಿ ಮಾಹಿತಿಯನ್ನು ಪಡೆದುಕೊಳ್ಳಿ.
Farmers Loan in Kannada
ಪ್ರತಿಯೊಬ್ಬ ರೈತರಿಗೂ ಕೃಷಿ ಚಟುವಟಿಕೆ ನಡೆಸಬೇಕಾದರೆ ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜಗಳನ್ನು, ಹಾಗೂ ಕೃಷಿ ಕೆಲಸಕ್ಕೆ ಅಗತ್ಯವಾದ ಯಂತ್ರೋಪಕರಣಗಳನ್ನು ಹಾಗೂ ಗೊಬ್ಬರಗಳನ್ನು ಖರೀದಿಮಾಡಲು ಹಣದ ಅವಶ್ಯಕತೆ ಇದ್ದೇ ಇರುತ್ತದೆ.
ಇಂತಹ ಸಂದರ್ಭದಲ್ಲಿ ರೈತರು ಖಾಸಗಿ ಲೇವಾದೇವಿಗಾರರ ಬಳಿ ಹೆಚ್ಚಿನ ಬಡ್ಡಿ ದರಕ್ಕೆ ಸಾಲವನ್ನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಇದು ರೈತರಿಗೆ ಕೃಷಿ ಚಟುವಟಿಕೆಯನ್ನು ಮುಂದುವರೆಸುವುದು ಇನ್ನಷ್ಟು ಹೊರೆಯಾಗಿ ಪರಿಣಮಿಸುತ್ತದೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ.
ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ಸಾಲವನ್ನು (Farmers Loan) ಪಡೆಯಲು ನಿಮ್ಮ ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಸಾಕಷ್ಟು ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲವನ್ನು ಪಡೆದುಕೊಂಡಿದ್ದಾರೆ. ನಿಮಗೂ ಸಾಲದ ಅನಿವಾರ್ಯವಿದ್ದರೆ, ಇಂದೇ ಅರ್ಜಿ ಸಲ್ಲಿಸಿ ಸಾಲವನ್ನು (Farmers Loan) ಪಡೆದುಕೊಂಡು ಕೃಷಿ ಚಟುವಟಿಕೆಗೆ ಪೂರಕವಾದ ವಸ್ತುಗಳನ್ನು ಖರೀದಿ ಮಾಡಿ ಯಾವುದೇ ಹಣಕಾಸಿನ ಅಡೆತಡೆ ಇಲ್ಲದೆ ನಿಮ್ಮ ಕೃಷಿ ಚಟುವಟಿಕೆಯನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿ.

ನಿಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದ ಸಾಲ ಸೌಲಭ್ಯಗಳು ಹಾಗೂ ಸಬ್ಸಿಡಿ ಸಹಾಯಧನ ಹಾಗೂ ಇದೇ ರೀತಿಯ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿ ನೀಡಿ.
ಯೋಜನೆಯ ಕಿರು ಚಿತ್ರಣ:
| ಯೋಜನೆಯ ಹೆಸರು | ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆ |
| ಯೋಜನೆಯಡಿಯಲ್ಲಿ ಸಾಲ ಪಡೆಯಲು ಅರ್ಹ ಫಲಾನುಭವಿಗಳು | ರೈತರು |
| ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯ | ಶೂನ್ಯ ಬಡ್ಡಿ ದರದಲ್ಲಿ ₹5,00,000 ಸಾಲ ಸೌಲಭ್ಯ (Farmers Loan) |
| ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ |
| ಸಾಲವನ್ನು ನೀಡುವ ಸಂಸ್ಥೆ | ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ |
ಯೋಜನೆಯ ಬಗ್ಗೆ:
Farmers Loan: ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆ ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ರೈತ ಸ್ನೇಹಿ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದ ಸಲಕರಣೆಗಳನ್ನು, ಬಿತ್ತನೆ ಬೀಜಗಳನ್ನು ಹಾಗೂ ರಸಗೊಬ್ಬರಗಳನ್ನು ಖರೀದಿಸಲು ಯಾವುದೇ ರೀತಿಯ ಬಡ್ಡಿ ಇಲ್ಲದೆ ಅಗತ್ಯವಾದ ಹಣಕಾಸಿನ ನೆರವನ್ನು ಪಡೆಯಬಹುದಾಗಿದೆ.
ಈ ಯೋಜನೆಯನ್ನು ಜಾರಿಗೊಳಿಸಿರುವುದರ ಉದ್ದೇಶ, ರೈತರಿಗೆ ಈ ಯೋಜನೆಯಿಂದಾಗುವ ಲಾಭ ಹಾಗೂ ಇನ್ನಷ್ಟು ಮಾಹಿತಿಗಳನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
ಯೋಜನೆಯ ಉದ್ದೇಶ:
ಈ ಯೋಜನೆ ಹಲವಾರು ದೇಶವನ್ನ ಒಳಗೊಂಡಿದ್ದು ಈ ಕೆಳಗೆ ಹಂತ ಹಂತವಾಗಿ ಈ ಯೋಜನೆಯ ಉದ್ದೇಶವನ್ನ ವಿವರಿಸಲಾಗಿದೆ
1. ಕೃಷಿ ಉತ್ಪಾದಕತೆ ಹೆಚ್ಚಳ:
ರೈತರಿಗೆ ಈ ಯೋಜನೆಯಡಿಯಲ್ಲಿ ಹಣಕಾಸಿನ ನೆರವನ್ನು ನೀಡುವ ಮೂಲಕ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಹಾಗೂ ಗೊಬ್ಬರಗಳನ್ನು ಬಳಸುವ ಮೂಲಕ ಬೆಳೆಯ ಇಳುವರಿ ಹೆಚ್ಚಿಸುವಂತೆ ಮಾಡಿ ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸುವುದು.
2. ಲೇವಾದೇವಿಗಾರರ ಕಾಟದಿಂದ ಬಿಡುಗಡೆ:
ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಮುಂದುವರೆಸಬೇಕಾದರೆ ಸಾಲವನ್ನು (Farmers Loan) ಪಡೆಯುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಸಾಕಷ್ಟು ರೈತರು ಲೇವಾದೇವಿಗಾರರ ಬಳಿ ಅತಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲದ ಸೌಲಭ್ಯವನ್ನು ಒದಗಿಸುತ್ತಿದೆ.
3. ಸಮಯಕ್ಕೆ ಸರಿಯಾಗಿ ಬಂಡವಾಳಗಳ ಪೂರೈಕೆ:
ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯವನ್ನು (Farmers Loan) ಒದಗಿಸುವ ಮೂಲಕ ರೈತರು ತಮ್ಮ ಕೃಷಿಯಲ್ಲಿ ಬಿತ್ತನೆ ಕೆಲಸವನ್ನು ಪ್ರಾರಂಭಿಸುವ ಮುನ್ನವೇ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದೆ ಬಿತ್ತನೆ ಬೀಜಗಳನ್ನು ಹಾಗೂ ರಸಗೊಬ್ಬರಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದು.
4. ಪೂರಕ ವೃತ್ತಿಗಳಿಗೆ ಬೆಂಬಲ:
ಸರ್ಕಾರವು ಈ ಯೋಜನೆಯಡಿಯಲ್ಲಿ ಕೇವಲ ಬೆಳೆ ಬೆಳೆಯುವ ರೈತರಿಗೆ ಮಾತ್ರ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸದೆ, ಪಶುಸಂಗೋಪನೆ ಮಾಡುವವರಿಗೂ ಹಾಗೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೂ ಕೂಡ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ.
ಈ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಲಾಭಗಳು:
1. ಸಂಪೂರ್ಣ ಬಡ್ಡಿ ದರ ಉಳಿತಾಯ:
ರೈತರು ಎಲ್ಲೇ ಸಾಲವನ್ನು ಪಡೆದರು ಕೂಡ ಒಂದಿಷ್ಟು ಬಡ್ಡಿಯನ್ನು ನಿಗದಿಪಡಿಸಿರುತ್ತಾರೆ. ರೈತರು ತಾವು ಪಡೆದುಕೊಂಡ ಸಾಲದ ಜೊತೆಗೆ ಬಡ್ಡಿಯನ್ನು ತೀರಿಸುವುದು ಅನಿವಾರ್ಯವಾಗಿರುತ್ತದೆ. ಆದರೆ, ರೈತರು ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಾಡಿಯಲ್ಲಿ ಪಡೆದುಕೊಂಡ ಸಾಲಕ್ಕೆ ಸಾವಿರಾರು ರೂಪಾಯಿಯ ಬಡ್ಡಿ ಹಣವನ್ನು ನೀಡುವ ಅಗತ್ಯವಿಲ್ಲ. ತಾವು ಪಡೆದುಕೊಂಡ ಸಾಲದ ಹಣವನ್ನು ತೀರಿಸಿದರೆ ಸಾಕಾಗುತ್ತದೆ.
2. ನಿಶ್ಚಿಂತೆಯಿಂದ ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಬಹುದು:
ರೈತರಿಗೆ ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ ₹5,00,000 ಸಾಲ ಸೌಲಭ್ಯ (Farmers Loan) ಸಿಗುವುದರಿಂದ ಯಾವುದೇ ರೀತಿಯ ಹಣಕಾಸಿನ ಚಿಂತೆ ಮಾಡದೇ ನಿಶ್ಚಿಂತೆ ಇಂದ ತಮ್ಮ ಕೃಷಿ ಚಟುವಟಿಕೆಯನ್ನು ನಡೆಸಿ ಬೆಳೆಯ ಇಳುವರಿಯನ್ನು ಹೆಚ್ಚಿಸಿ, ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.
3. ಪಶುಸಂಗೋಪನೆ ಮಾಡುವ ರೈತರಿಗೂ ನೆರವು:
ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ಪಶುಸಂಗೋಪನೆ ಮಾಡುವ ರೈತರು ಹಾಗೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಕೂಡ ಶೂನ್ಯ ಬಡ್ಡಿ ದರದಲ್ಲಿ ₹2,00,000 ಸಾಲ ಸೌಲಭ್ಯ ಪಡೆದುಕೊಳ್ಳುವ ಮೂಲಕ ತಮ್ಮ ತಮ್ಮ ಕಸಬನ್ನು ಆಧುನೀಕರಿಸಿಕೊಳ್ಳುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿ ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸಬಹುದಾಗಿದೆ.
ರೈತರು ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ಪಡೆದುಕೊಳ್ಳುವ ಸಾಲದ ವಿವರ:
1. ಬೆಳೆಗಳನ್ನು ಬೆಳೆಯುವ ರೈತರಿಗೆ:
ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡುರುವ ರೈತರು ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ₹5,00,000 ವರೆಗೆ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಸಾಲಕ್ಕೆ ಯಾವುದೇ ಬಡ್ಡಿ ದರವನ್ನು ನಿಗದಿಪಡಿಸಿಲ್ಲ. ಹಾಗೂ ರೈತರು ಈ ಸಾಲವನ್ನು ಒಂದು ವರ್ಷದ ಅವಧಿಗೆ ಇಲ್ಲವೇ ಸಹಕಾರ ಸಂಘವು ನಿಗದಿಪಡಿಸಿದ ಅವಧಿಯೊಳಗೆ ಮರುಪಾವತಿಸಬೇಕಾಗುತ್ತದೆ.
2. ಪಶುಸಂಗೋಪನೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ:
ಕುರಿ, ಮೇಕೆ ಹಾಗೂ ಹಸುಗಳನ್ನು ಸಾಕುವ ರೈತರಿಗೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ₹2,00,000 ವರೆಗೆ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಸಾಲಕ್ಕೆ ಯಾವುದೇ ಬಡ್ಡಿ ದರವನ್ನು ನಿಗದಿಪಡಿಸಿಲ್ಲ. ಹಾಗೂ ರೈತರು ಈ ಸಾಲವನ್ನು ಒಂದು ವರ್ಷದ ಅವಧಿಗೆ ಇಲ್ಲವೇ ಸಹಕಾರ ಸಂಘವು ನಿಗದಿಪಡಿಸಿದ ಅವಧಿಯೊಳಗೆ ಮರುಪಾವತಿಸಬೇಕಾಗುತ್ತದೆ.
| ಮುಖ್ಯ ಸೂಚನೆ: “ರೈತರೇ, ನೀವು ಒಂದು ವೇಳೆ ಸಹಕಾರ ಸಂಘವು ನೀಡಿರುವ ಗಡುವಿನೊಳಗೆ ನೀಡಿರುವ ಸಾಲವನ್ನು ಮರುಪಾವತಿಸದೆ ಇದ್ದರೆ, ನೀವು ಪಡೆದ ಸಾಲಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಈ ಸಮಸ್ಯೆಯಿಂದ ಪರಾಗಬೇಕಾದರೆ, ನೀಡಿದ ಗಡುವಿನೊಳಗೆ ಪಡೆದ ಸಾಲವನ್ನು ತೀರಿಸಿ.” |
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಹೊಂದಿರುವ ರೈತರು.
- ತಮ್ಮ ಹೆಸರಿನಲ್ಲೇ ಭೂ ದಾಖಲೆಗಳನ್ನು ಹೊಂದಿರುವ ರೈತರು.
- ಇತರೆ ಯಾವುದೇ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆದುಕೊಳ್ಳದೇ ಇರುವ ರೈತರು.
- ಕರ್ನಾಟಕದ ಕಾಯಂ ನಿವಾಸಿಯಾಗಿರುವ ರೈತರು.
- ಕೃಷಿ ಚಟುವಟಿಕೆ, ಪಶುಸಂಗೋಪನೆ, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು.
- ಕನಿಷ್ಠ 18 ರಿಂದ ಗರಿಷ್ಟ 75 ವರ್ಷ ವಯೋಮಿತಿಯನ್ನು ಹೊಂದಿರುವ ರೈತರು.
ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್ ಪ್ರತಿ
- FRUITS ID
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಇತ್ತೀಚಿನ RTC/ ಪಹಣಿ ಪ್ರತಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಪಾಸ್ ಪೋರ್ಟ್ ಸೈಜ್ ಫೋಟೋ
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಸಂಘದ ಸದಸ್ಯತ್ವ ಪ್ರಮಾಣಪತ್ರ
- ಪ್ಯಾನ್ ಕಾರ್ಡ್
- ಹಾಗೂ ಇತರೆ ದಾಖಲೆಗಳು
- ಬೆಳೆ ಸಾಲಕ್ಕೆ ಬೆಳೆ ದೃಢೀಕರಣ ಪತ್ರ ಅಗತ್ಯ
ಅರ್ಹ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ರೈತರು ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ (Farmers Loan) ಸಾಲ ಸೌಲಭ್ಯವನ್ನು (Farmers Loan) ಪಡೆದುಕೊಳ್ಳಬೇಕಾದರೆ ಈ ಕೆಳಗೆ ನೀಡಿರುವಂತೆ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಅರ್ಹ ರೈತರು ನಿಮ್ಮ ಹತ್ತಿರದ ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ಕ್ಕೆ ಭೇಟಿ ನೀಡಿ.
- ಅಲ್ಲಿ, ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಅರ್ಜಿ ಫಾರ್ಮ್ ಅನ್ನು ಕೇಳಿ ಪಡೆದುಕೊಳ್ಳಿ.
- ಅರ್ಜಿ ಫಾರ್ಮ್ ನಲ್ಲಿ ನೀಡಲಾದ ವೈಯಕ್ತಿಕ ಹಾಗೂ ಭೂ ವಿವರ ಹಾಗೂ ಇನ್ನಿತರ ಎಲ್ಲಾ ಮಾಹಿತಿಯನ್ನು ಭರ್ತಿಮಾಡಿ.
- ಭರ್ತಿಮಾಡಿದ ಅರ್ಜಿ ಫಾರ್ಮ್ ಜೊತೆಗೆ ಆಧಾರ್, ಜಮೀನಿನ ಪಹಣಿ, ಫೋಟೋ ಹಾಗೂ ಈ ಮೇಲೆ ನೀಡಲಾದ ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ನಂತರ, ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ.
| ಇಲ್ಲಿ ಗಮನಿಸಿ: “ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಹೊಂದಿರುವುದು ಕಡ್ಡಾಯವಾಗಿದೆ.” |
ಕೊನೆಯ ಮಾತು:
ರೈತರೇ, ಕರ್ನಾಟಕ ಸರ್ಕಾರದ ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲ ಯೋಜನೆಯಿಂದಾಗಿ ನೀವು ನಿಮ್ಮ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಹಣಕಾಸಿನ ನೆರವನ್ನು ಪಡೆಯಲು ಯಾವುದೇ ಲೇವಾದೇವಿಗಾರರ ಬಳಿ ಸಾಲಕ್ಕಾಗಿ ಕೈ ಚಾಚದೆ, ಯಾವುದೇ ಬಡ್ಡಿ ಇಲ್ಲದೆ ಸುಲಭವಾಗಿ ಸಾಲವನ್ನು ಪಡೆದುಕೊಂಡು ನೀವು ನಿಮ್ಮ ಕೃಷಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಹಾಗೂ ಗೊಬ್ಬರಗಳನ್ನು ಬಳಸುವ ಮೂಲಕ ಬೆಳೆಯ ಇಳುವರಿಯನ್ನು ಹೆಚ್ಚಿಸಿ ಹೆಚ್ಚಿನ ಆದಾಯವನ್ನು ಗಳಿಸಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಬೆಳೆ ಬೆಳೆಯುವ ರೈತರು ₹5,00,000 ವರೆಗೆ ಹಾಗೂ ಮೀನುಗಾರಿಕೆ ಹಾಗೂ ಪಶುಸಂಗೋಪನೆ ಮಾಡುವ ರೈತರಿಗೆ ₹2,00,000 ವರೆಗೆ ಸಾಲ ಸೌಲಭ್ಯ (Farmers Loan) ಸಿಗುತ್ತದೆ.
ಇಲ್ಲ, ಅರ್ಹರಲ್ಲ. ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ಬ್ಯಾಂಕ್ ಗಳಲ್ಲಿಯೂ ಸಾಲವನ್ನು ಪಡೆದುಕೊಂಡಿರಬಾರದು.
ಅರ್ಹ ಫಲಾನುಭವಿ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ರೈತರು ಪಡೆದುಕೊಳ್ಳುವ ಸಾಲಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ನಿಗದಿಪಡಿಸಿಲ್ಲ. ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಇತರೆ ಪ್ರಮುಖ ಲಿಂಕುಗಳು:
- Labour Marriage : ರೂ50,000/- ಮದುವೆಗೆ ಧನಸಹಾಯ! ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್! ಹೇಗೆ ಪಡೆಯುವುದು? ಸಂಪೂರ್ಣ ಮಾಹಿತಿ ಇಲ್ಲಿ!
- Labour Card Benefits: ಲೇಬರ್ ಕಾರ್ಡ್ ಇದ್ದರೆ ಸಾಕು! ಸರ್ಕಾರದಿಂದ ಲಕ್ಷಾಂತರ ಸೌಲಭ್ಯಗಳು – ಸಂಪೂರ್ಣ ಮಾಹಿತಿ ಇಲ್ಲಿದೆ

