ಮಳೆರಾಯನ ‘ಸರ್ಪ್ರೈಸ್ ಎಂಟ್ರಿ! V/s ಬಿಸಿಲ ಪ್ರತಾಪ: ಫೆಬ್ರವರಿ 24-26ರವರೆಗೆ ಕರ್ನಾಟಕದಲ್ಲಿ ಹವಾಮಾನ ಹೈಡ್ರಾಮಾ!

Rain Surprise in Karnataka! Feb 24–26 Weather Alert

ರಾಜ್ಯದ ಹಲವೆಡೆ ಹವಾಮಾನ ಈಗ ಒಂದು ರೋಚಕ ಸಿನಿಮಾದ ಕ್ಲೈಮ್ಯಾಕ್ಸ್ ನಂದಾಗಿದೆ. ಒಂದೆಡೆ ಫೆಬ್ರವರಿ ತಿಂಗಳು ಮುಗಿಯುತ್ತಾ ಬಂದರು ಚಳಿಯ ನಡುಕ ಪೂರ್ತಿ ಹೋಗಿಲ್ಲ ಇನ್ನೊಂದು ಕಡೆ ಸೂರ್ಯ ದೇವ ತನ್ನ ಪ್ರತಾಪ ತೋರಿಸಲು ಈಗಲೇ ಬತ್ತಳಿಕೆಯಿಂದ ಬಾಣವನ್ನ ತೆಗೆಯುತ್ತಿದ್ದಾನೆ.

Rain Surprise in Karnataka! Feb 24–26 Weather Alert

ಆದರೆ ಈ ನಡುವೆ ಫೆಬ್ರವರಿ 24, 25 ಮತ್ತು 26ರಂದು ಮಳೆರಾಯ “ಸರ್ಪ್ರೈಸ್ ಎಂಟ್ರಿ” ಕೊಡಲಿದ್ದಾನೆ ಎಂಬ ಸುದ್ದಿ ಈಗ ಹವಾಮಾನ ಇಲಾಖೆ ವರದಿಯಲ್ಲಿ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಇಂದಿನ ದಿನದ ಅಂದರೆ ಫೆಬ್ರವರಿ 23ನೇ ತಾರೀಕಿನಲ್ಲಿಯೂ ಹವಾಮಾನದಲ್ಲಿ ಮಳೆಯ ವಾತಾವರಣದ ಲಕ್ಷಣಗಳು ಕಂಡುಬರುತ್ತವೆ.

ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಸುಡು ಬಿಸಿಲಿನ ಜೊತೆಗೆ ಶಕೆಯು ಆರಂಭವಾಗುತ್ತದೆ ಹಾಗೆಯೇ ಬಯಲು ಸೀಮೆಯಲ್ಲಿ ಅತಿ ಹೆಚ್ಚಿನ ಬಿಸಿಲಿನ ಪ್ರಮಾಣ ಇರುತ್ತದೆ. ಆದರೆ 2026ನೇ ವರ್ಷದಲ್ಲಿ ಹವಾಮಾನದ ಸ್ಥಿತಿಗತಿಗಳು ಬಹಳಷ್ಟು ಏರಿಳಿತಗಳಾಗಿವೆ.

“ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಅಥವಾ ತೇವಾಂಶ ಭಾರತ ಗಾಳಿಯ ಪ್ರಭಾವದಿಂದ ರಾಜ್ಯದ ಹಲವು ಭಾಗಗಳಲ್ಲಿ ಫೆಬ್ರವರಿ 24, 25, 26ರಂದು ಹಗುರದಿಂದ ಮಳೆ ಆಗುವ ಸಾಧ್ಯವೆ ಇದೆ”.

ಮಳೆ ರಾಯನ “ಗೇಮ್ ಪ್ಲಾನ್” ಎಲ್ಲಿ ಬಿಲ್ಲಲಿದೆ ಸಿಂಚನ ?

ಸಾಮಾನ್ಯವಾಗಿ ಪ್ರತಿಯೊಬ್ಬರು ನೋಡಿದ ಹಾಗೆ ಈ ಫೆಬ್ರವರಿ ತಿಂಗಳಲ್ಲಿ ಮಳೆ ಬೀಳುವುದು ಬಹಳ ಅಪರೂಪ. ಆದರೆ ವಾಯುಮಂಡಲದ ಮೇಲ್ಪದರದಲ್ಲಿ ಉಂಟಾಗುವ ಗಾಡಿಯ ದಿಕ್ಕಿನ ಬದಲಾವಣೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಮಳೆಯ ವಾತಾವರಣವನ್ನ ಸೃಷ್ಟಿಸಲು ಕಾರಣವಾಗಿರಬಹುದು. ಶಿವರಾತ್ರಿ ಮುಗಿದ ನಂತರದ ದಿನಗಳಲ್ಲಿ ಚಳಿಗಾಲವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿ ಬಿಸಿಲಿನ ತಾಪ ಹೆಚ್ಚಾಗಿದೆ. ಇದೆ ಸಂದರ್ಭದಲ್ಲಿ ತೀವ್ರವಾದ ಬೇಸಿಗೆಯ ಆರಂಭ ಬಂದು ರೋಚಕ ತಿರುವು ಇದೀಗ ಪಡೆದುಕೊಂಡಿದೆ.

ಫೆಬ್ರವರಿ ತಿಂಗಳು ತಾಪಕ್ಕೆ ಬೆವರುತ್ತಿದ್ದ ಕನ್ನಡಿಗರಿಗೆ ಈಗ ಮಳೆರಾಯನ ಸರ್ಪ್ರೈಸ್ ಎಂಟ್ರಿಯಾ ಮುನ್ಸೂಚನೆ ಸಿಕ್ಕಿದೆ

24 ಗಂಟೆಯಲ್ಲಿ ಕರ್ನಾಟಕದ ಕೆಲವು ಭಾಗದಲ್ಲಿ ಮಳೆರಾಯನ ಎಂಟ್ರಿ ಫಿಕ್ಸ್ ಭಾರತೀಯ ಹವಾಮಾನ ಇಲಾಖೆ ನೀಡಿರುವ ಸೂಚನೆಯಂತೆ ಬಂಗಾಳಕೊಲ್ಲಿಯ ಗಾಳಿಯ ದಿಕ್ಕಿನ ಬದಲಾವಣೆಯಿಂದ ಅಕಾಲಿಕ ಮಳೆಯ ಸಿಂಚನ.

  • ಬೆಂಗಳೂರು ಮತ್ತು ಮೈಸೂರು :-

ಸಂಜೆಯ ಹೊತ್ತು ಸಡನ್ ಆಗಿ ಮೋಡಗಳು ಕವಿದು ಗುಡುಗು ಸಹಿತ ತುಂಟನೂರು ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಹವಾಮಾನ ಕಂಡು ಬಂದಿದೆ.

  • ಮಲೆನಾಡು ಪ್ರದೇಶ :-

ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಜಿಲ್ಲೆಗಳ ಹಾಗೆ ಗುಡ್ಡಗಾಡುಗಳ ಪ್ರದೇಶದಲ್ಲಿ ಸಾಧಾರಣ ಮಳೆ ಆಗುವ ಮುನ್ಸೂಚನೆ ಇದೆ.

Shivamogga, Chikkamagaluru ಹಾಗೂ Kodagu ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಕೆಲವೆಡೆ ಗುಡುಗು–ಮಿಂಚಿನೊಂದಿಗೆ ಚದುರಿದ ಮಳೆಯಾಗುವ ಸಾಧ್ಯತೆಯೂ ಇದ್ದು, ಮಂಜು ಮಸುಕಿನ ವಾತಾವರಣ ಮುಂದುವರಿಯಲಿದೆ.

“ಹಳ್ಳ-ಕೊಳ್ಳಗಳು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ”.

  • ಕರಾವಳಿ ಭಾಗದಲ್ಲೂ ವರ್ಣನ ಎಂಟ್ರಿ

ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಕೆಲ ಪ್ರದೇಶದಲ್ಲಿ ಮಧ್ಯವ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದ ಅಲೆಗಳ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳುವ ವೇಳೆ ಎಚ್ಚರಿಕೆವಹಿಸುವಂತೆ ಹವಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ.

ಬಿಸಿಲ ದರ್ಬಾರ್: ಉತ್ತರ ಕರ್ನಾಟಕದಲ್ಲಿ ‘ಬೆಂಕಿ’ಯಂತಹ ವಾತಾವರಣ!

ದಕ್ಷಿಣಕ್ಕೆ ಮಳೆಯ ಆಸೆ ಇದ್ದರೆ, ಉತ್ತರ ಕರ್ನಾಟಕದ ಕಥೆಯೇ ಬೇರೆ. ಅಲ್ಲಿ ಸೂರ್ಯದೇವ ಈಗಾಗಲೇ ತನ್ನ ಕೋಪವನ್ನು ಹೆಚ್ಚಿಸಿ ಸುಡು ಬಿಸಿಲನ್ನ ನೀಡುತ್ತಿದ್ದಾನೆ.

ಬಳ್ಳಾರಿ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನವು 38 C ದಾಟುವ ಲಕ್ಷಣವಿದೆ. ಹಾಗೆಯೇ ಮಧ್ಯಾನದ ಹೊತ್ತು ಬೀಸುವ ಬಿಸಿ ಗಾಳಿ ಜನರನ್ನ ಕಂಗಾಲು ಮಾಡಿದೆ. ಫೆಬ್ರವರಿ 25ರ ಸುಮಾರಿಗೆ ಇಲ್ಲಿ ಬಿಸಿಲಿನ ತೀವ್ರತೆ ಅತಿ ಹೆಚ್ಚು ಆಗಲಿದ್ದು ಗರಿಷ್ಠ ಬಿಸಿಲಿನ ತಾಪಮಾನ ಹೆಚ್ಚು.

ಹವಾಮಾನ ವರದಿ ಅಂಕಿ-ಅಂಶ (Weather report statistics)

ಫೆಬ್ರವರಿ 24 25 ಮತ್ತು 26ರ ಹವಾಮಾನ ವರದಿಯ ಪ್ರಕಾರ ಈ ಕೆಳಗೆ ಅಂಕಿ ಅಂಶವನ್ನು ಈ ಕೆಳಗೆ ಚಾರ್ಟ್ ಮೂಲಕ ತಿಳಿಸಲಾಗಿದೆ.

ವಲಯಮಳೆಯ ಸಾಧ್ಯತೆಸ್ಥಿತಿ
ದಕ್ಷಿಣ ಒಳನಾಡು40%ಹಗುರ ಮಳೆ
ಉತ್ತರ ಒಳನಾಡು5%ಒಣ ಹವೆ
ಮಲೆನಾಡು60%ಗುಡುಗು ಸಹಿತ ಮಳೆ
ಕರಾವಳಿ20%ಮೋಡ ಕವಿದ ಹವೆ

24 ಗಂಟೆಯಲ್ಲಿ ಮಳೆರಾಯನ ಎಂಟ್ರಿ ಕಾರಣ ಏನು ಗೊತ್ತಾ ?

ಕಳೆದ 24 ಗಂಟೆಗಳಲ್ಲಿ ಮತ್ತು ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಮಳೆಯಾಗುವ ಲಕ್ಷಣಗಳು ಕಂಡುಬರುತ್ತವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತವೇ ಪ್ರಮುಖ ಕಾರಣವೆಂದು ಹವಮಾನ ಇಲಾಖೆ ತನ್ನ ವರದಿಯನ್ನು ನೀಡಿದೆ.

ಮುಖ್ಯ ವೈಜ್ಞಾನಿಕ ಕಾರಣಗಳನ್ನು ಈ ಕೆಳಗೆ ತಿಳಿತ ಹೋಗೋಣ ಬನ್ನಿ…

  • ನೈರುತ್ಯ ಬಂಗಾಳಕೊಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕರ್ನಾಟಕದ ಒಳನಾಡಿನವರೆಗೆ ಒಂದು ಟ್ರಿಪ್ ಅನ್ನು ನಿರ್ಮಿಸಿದೆ ಇದು ಸಮುದ್ರದಿಂದ ತೇವಾಂಶ ಭರಿತ ಗಾಳಿಯನ್ನು ರಾಜ್ಯದ ಕಡೆಗೆ ಎಳೆದುಕೊಂಡು ಬರುತ್ತಿದೆ.
  • ಫೆಬ್ರವರಿ ತಿಂಗಳಲ್ಲಿ ಈಗ ಅರಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಿಂದ ಬರುತ್ತಿರುವ Moisture ಮೋಡಗಳು ಕವಿಯಲು ಮತ್ತು ಮಳೆ ಸುರಿಯಲು ಪೂರಕ ವಾತಾವರಣ ನಿರ್ಮಿಸಿದೆ.
  • ಶ್ರೀಲಂಕಾ ಕರಾವಳಿಗೆ ಸಮೀಪದಲ್ಲಿರುವ ಈ ಹವಾಮಾನ ವ್ಯವಸ್ಥೆಯು ಉತ್ತರ ಮತ್ತು ವಾಯುವ್ಯ ದಿಕ್ಕಿನತ್ತ ಚಲಿಸುತ್ತಿರುವುದರಿಂದ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದೆ ಎಂದು IMD ವರದಿ ನೀಡಿದೆ.

ಇಲ್ಲಿ ಗಮನಿಸಿ: ನಿಮ್ಮ ಊರಿನಲ್ಲಿ ಗಾಳಿಯ ವೇಗ ಅಥವಾ ಮೋಡಗಳ ಸ್ಥಿತಿ ಬಗ್ಗೆ ಲೈವ್ ಅಪ್‌ಡೇಟ್ ಬೇಕೇ? ಸದ್ಯಕ್ಕೆ ಹವಾಮಾನ ವರದಿಗಾಗಿ ಭಾರತೀಯ ಹವಾಮಾನ ಇಲಾಖೆ (IMD) ಪೋರ್ಟಲ್ ಗಮನಿಸಿ.

ರೈತರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆಯ ಮಾತು :-

ರೈತರು ಕೃಷಿ ಚಟುವಟಿಕೆಗಳನ್ನ ಶುರು ಮಾಡುವ ಮೊದಲು ಅದಕ್ಕೆ ಬೇಕಾಗಿರುವ ಅಂತ ಎಲ್ಲ ರೀತಿಯಾದ ಮೊನ್ನೆಚರಿಕೆ ಕ್ರಮಗಳನ್ನು ತೆಗೆದುಕೊಂಡು ಕೃಷಿ ಚಟುವಟಿಕೆಗಳನ್ನ ಪ್ರಾರಂಭ ಮಾಡಿದೆ ಆದಲ್ಲಿ ನಿಮ್ಮ ಬೆಳೆಗಳ ಸುರಕ್ಷತೆಯನ್ನ ಕಾಪಾಡಿಕೊಳ್ಳಬಹುದು ಹಾಗೆ ಯಾವುದೇ ಬೆಳೆಗೆ ಹಾನಿಯಾಗದಂತೆ ಮಳೆಯಿಂದ ನೀವು ರಕ್ಷಿಸಿಕೊಳ್ಳಬಹುದು ಈ ಹವಾಮಾನದ ಬಗ್ಗೆ ಆಗಾಗ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ.

Leave a Reply

Your email address will not be published. Required fields are marked *