Byadagi Chilli: ಮಾರುಕಟ್ಟೆಯ ಇಂದಿನ ದಿನದಲ್ಲಿ ಅತಿ ವೇಗವಾಗಿ ಬೆರೆ ಏರಿಕೆ ಕಾಣುತ್ತಿರುವ ಕೆಂಪು ಬಾಡಿಗೆ ಮೆಣಸಿನ ಕಾಯಿ!. ಬ್ಯಾಡಗಿ ಮೆಣಸು ತನ್ನ ಗಾಟನ್ನು ಎಷ್ಟು ವೇಗವಾಗಿ ಹರಡಿಸುತ್ತದೆಯೋ ಅದೇ ರೀತಿ ಮಾರುಕಟ್ಟೆಯಲ್ಲಿ ಈ ಬಾರಿ ತನ್ನ ಬೆಲೆ ಏರಿಕೆಯನ್ನು ಹೆಚ್ಚಿಸಿಕೊಂಡಿದೆ.
ಕರ್ನಾಟಕ ಕೃಷಿ ಮಾರುಕಟ್ಟೆಯಲ್ಲಿ ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ 2026 ಫೆಬ್ರವರಿ ತಿಂಗಳಲ್ಲಿ ತನ್ನದೊಂದೇ ಹೆಸರು ಈ ಬಾರಿ ಸಂಚಲನ ಮೂಡಿಸುತ್ತಿದೆ. ಅದುವೇ ನೋಡಿ “ಬ್ಯಾಡಗಿ ಮೆಣಸಿನ ಕಾಯಿ”. ಇದು ಕೇವಲ ಗೃಹಿಣಿಯರ ಅಡುಗೆಮನೆಯ ಸಾಂಬಾರು ಪದಾರ್ಥವಲ್ಲ ಕರುನಾಡಿನ ಮಣ್ಣಿನ ಸೊಗಡು, ರೈತನ ಬೆವರಿನ ಫಲ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಗೌರವ, ಹೆಮ್ಮೆಯನ್ನು ಎತ್ತಿ ಹಿಡಿಯುವ ಕೆಂಪು ಚಿನ್ನ ಅಂದರೆ ತಪ್ಪಾಗುವುದಿಲ್ಲ.
Byadagi Chilli Price in kannda 2026
ತನ್ನ ಗಾಡ ಕೆಂಪು ಬಣ್ಣ ಮತ್ತು ಮೃದುವಾದ ಗಾರದಿಂದಾಗಿ ಜಾಗತಿಕ ಮನ್ನಣೆ ಪಡೆದಿರುವ ಈ ಮೆಣಸು ಇತ್ತೀಚಿನ ದಿನಗಳಲ್ಲಿ ಕ್ವಿಂಟಲ್ ಗೆ ಬರೋಬ್ಬರಿ 90,000 ಗಡಿ ದಾಟಿ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಹಾಗೂ ವಿದೇಶದಲ್ಲಿಯೂ ಕೆಂಪು ಸುಂದರಿಯದ್ದೆ ಹವಾ! ಇಂದಿನದಿನದಲಂತೂ ಅತಿ ಹೆಚ್ಚಾಗಿ ಇಡೀ ದೇಶದ ಗಮನವನ್ನು ಈ ಕೆಂಪು ಸುಂದರಿ ಗಮನಸೆಳೆಯುತಿದ್ದಾಳೆ.

ಇಲ್ಲಿ ಗಮನಿಸಿ : “ಮೆಣಸಿನ ಕಾಯಿ(Byadagi Chilli) ಬೆಲೆಯಲ್ಲಿ ನೆನ್ನೆ ಮತ್ತು ಇಂದು ಒಂದೇ ರೀತಿಯ ಬೆಲೆ ಇದ್ದು ಯಾವುದೇ ರೀತಿಯ ಬದಲಾವಣೆ ಇಲ್ಲ. ಪ್ರತಿ ಕ್ವಿಂಟಲ್ ಗೆ ಸುಮಾರು ₹90 ಸಾವಿರ ಆಸುಪಾಸಿನಲ್ಲಿ ವಾಹಿವಾಟು ನಡೆಯುತ್ತಿದೆ. ಫೆಬ್ರವರಿ 24 ರಿಂದ ಮತ್ತಷ್ಟು ಈ ಕೆಂಪು ಸುಂದರಿ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸುವ ಲಕ್ಷಣ ಕಂಡುಬರುತ್ತಿವೆ. ಅಂದರೆ ಪ್ರತಿ ಕ್ವಿಂಟಲ್ ಗೆ ಸುಮಾರು 94 ಸಾವಿರ ತಲುಪುವ ಲಕ್ಷಣಗಳು ಇಂದಿನ ಫೆಬ್ರವರಿ 23ರ ಕೃಷಿ ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ”.
ಮುಖ್ಯವಾಗಿ ಪ್ರತಿಯೊಬ್ಬರು ಈ ವಿಚಾರವನ್ನ ತಿಳಿಯಲೇಬೇಕು. “ಈ ಬೆಲೆ ಏರಿಕೆ ಯಾವ ಕಾರಣದಿಂದಾಗಿದೆ ನಿಮಗೇನಾದರೂ ಗೊತ್ತಾ” ? ಇಲ್ಲಿ ನೋಡಿ ಈ ಬಾರಿ ಬೆಲೆ ಏರಿಕೆ ಹಿಂದೆ ಪ್ರಕೃತಿಯ ಮುನಿಸು ಮತ್ತು ಜಾಗತಿಕ ಪೂರೈಕೆಯ ವ್ಯತ್ಯಾಸದ ದೊಡ್ಡ ಕಥೆಯೇ ಇದೆ. ಅಕಾಲಿಕ ಮಳೆ ಹಾಗೂ ರೋಗಭಾದೆಯಿಂದಾಗಿ ಬ್ಯಾಡಗಿ ಮೆಣಸಿನ ಇಳುವರಿಯು ಗಣನೀಯವಾಗಿ ಕುಸಿದಿರುವುದು ಒಂದು ಕಡೆಯಾದರೆ. ಯೂರೋಪ್ ರಾಷ್ಟ್ರಗಳಿಂದ ಹರಿದು ಬರುತ್ತಿರುವ ಬೇಡಿಕೆ ಮತ್ತು ಮೆಣಸಿನ ಬೆಲೆಯನ್ನ ಗಗನಕ್ಕಿರುವಂತೆ ಮಾಡಿದೆ.
ಇಂದಿನ(Byadagi Chilli) ಮಾರುಕಟ್ಟೆಯಲ್ಲಿ ಈ ಕೆಂಪು ಚಿನ್ನದ ರಕ್ಷಣೆಗೆ ಸಿಸಿಟಿವಿ, ಕ್ಯಾಮೆರ ಹಾಗೂ ಭದ್ರತಾ ಸಿಬ್ಬಂದಿಗ ಸಿಬ್ಬಂದಿಯನ್ನ ನಿಯೋಜಿಸುವಂತಹ ಪರಿಸ್ಥಿತಿ ಈಗ ಬಂದಿದೆ. ಮಾರುಕಟ್ಟೆಯಲ್ಲಿ ಹೂವಿನಂತೆ ಅರಳಿದ ಈ ಕೆಂಪು ಕ್ರಾಂತಿ ಮಧ್ಯವರ್ತಿಗಳ ಹಾವಳಿಯನ್ನು ಮೀರಿ ನೇರವಾಗಿ ರೈತನ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಿದ್ದು ಉತ್ತಮ ಕರ್ನಾಟಕ ರೈತ ಬದುಕಿಗೆ ಹೊಸ ದಾರಿ.
ಕೃಷಿ ಲೋಕದಲ್ಲಿ ಹವಾ ಎಬ್ಬಿಸುತ್ತಿರುವ ಬ್ಯಾಡಗಿ ಮೆಣಸು!
2026ನೇ ವರ್ಷದಲ್ಲಿ ಈ ರಂಗು ರಾಣಿಯ ಬೆಲೆ ಏರಿಕೆಯಾಗಿರುವುದು ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಗೊತ್ತೇ ಇದೆ. “ಮೆಣಸಿನ ಕಾಯಿಗೆ(Byadagi Chilli) ಬ್ಯಾಡಗಿ ಮೆಣಸು ಎಂಬ ಹೆಸರು ಯಾವ ಊರಿನಲ್ಲಿ ಹುಟ್ಟಿಕೊಂಡಿತು ? ಹಾಗೆಯೇ ಮೆಣಸಿನ ಮಾರುಕಟ್ಟೆಯಾದರೂ ಸ್ಥಾಪನೆ ಆಗಿದ್ದು ಯಾವಾಗ ? ಇವೆಲ್ಲವನ್ನ ಈ ಕೆಳಗೆ ತಿಳಿತಾ ಹೋಗೋಣ ಬನ್ನಿ”.
ಬ್ಯಾಡಗಿ ಮೆಣಸಿನ ಇತಿಹಾಸದ ಬಗ್ಗೆ ನಿಮಗಿಷ್ಟು ಗೊತ್ತಿದೆ ? ಇದರ ಹಿಂದಿನ ಇತಿಹಾಸ ವನ್ನು ನೀವು ತಿಳಿಯಲೇಬೇಕು. ಬ್ಯಾಡಗಿ ಮೆಣಸಿಗೆ(Byadagi Chilli) ತನ್ನ ಹೆಸರು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಿಂದ ಬಂದಿರುವಂತದ್ದು, ಅಂದರೆ ಈ ಹೆಸರು ಬ್ಯಾಡಗಿ ಊರಿನಲ್ಲಿ ಹುಟ್ಟಿಕೊಂಡಿರುವಂತದ್ದು. ಮುಖ್ಯವಾಗಿ ಮೆಣಸಿನ ಮಾರುಕಟ್ಟೆಯ ಸ್ಥಳವು ಪ್ರಾಮುಖ್ಯತೆಯಾಗಿದೆ.
ಮೊದಲು 1948ರಲ್ಲಿ ಬ್ಯಾಡಗಿ ಪಟ್ಟಣದಲ್ಲಿ ಮೆಣಸು ಮಾರುಕಟ್ಟೆ ಸ್ಥಾಪನೆ ಆಯಿತು. ಅದು ಬೆಳೆದಂತೆ ಇಂದು ಏಷ್ಯಾದಲ್ಲಿಯೇ ಮೆಣಸಿನಕಾಯಿ ಅತಿ ದೊಡ್ಡ ಮಾರುಕಟ್ಟೆಯಲ್ಲಿ ಒಂದಾಗಿದೆ. ಇದರ ಗಾಡ ಕೆಂಪು ಬಣ್ಣ ಸುವಾಸನೆ ಮತ್ತು ಉತ್ತಮ ಗುಣಮಟ್ಟ ಈ ಮೆಣಸನ್ನ ದೇಶ-ವಿದೇಶದಲ್ಲಿ ಹೆಚ್ಚು ಬೇಡಿಕೆಯನ್ನಾಗಿ ಮಾಡಿದೆ. ಬ್ಯಾಡಗಿ ಮೆಣಸು ರೈತರಿಗೆ ಒಳ್ಳೆಯ ಹಣ ತರುವ ನಗದು ಬೆಳೆ. ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಸಹಾಯ ವನ್ನ ಮಾಡುತ್ತಿದೆ. ಹೀಗಾಗಿ ಬ್ಯಾಡಗಿ ಮೆಣಸು ಕೇವಲ ಬೆಳೆಯಲ್ಲ, ಕರ್ನಾಟಕದ ಕೃಷಿ ವೈಭವ ಮತ್ತು ಹೆಮ್ಮೆ ಆಗಿಯೂ ಪರಿಗಣಿಸಿದೆ.
ಮುಂದಿನ ದಿನಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಲೆ ಏರಿಕೆ ಆಗುತ್ತಾ? ಇಳಿಕೆಯಾಗುತ್ತಾ ? ಮಾರುಕಟ್ಟೆ ತಜ್ಞರ ವಿಶ್ಲೇಷಣೆ ಏನು ?
ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನ ಕಾಯಿ ಬೆಲೆ ನೆನ್ನೆ ಮತ್ತು ಇಂದು ಒಂದೇ ರೀತಿಯಲ್ಲಿ ಕಂಡುಬರುತ್ತಿದೆ ಅಂದರೆ ಒಂದು ಕ್ವಿಂಟಲ್ ಗೆ ರೂ. 90,000 ಆಸು ಪಾತಿನೊಳಗಿದೆ. ಹಾಗೆಯೇ ನಾಳೆ ಅಂದರೆ ಫೆಬ್ರವರಿ 24 ರಿಂದ ಮಾರುಕಟ್ಟೆ ತಜ್ಞರ ಪ್ರಕಾರ ಕ್ವಿಂಟಲ್ ಗೆ ರೂ.4 ಸಾವಿರ ಹೆಚ್ಚಾಗಬಹುದು. ಮುಂದಿನ ದಿನಗಳಲ್ಲಿ ಬರೋಬರಿ ಒಂದು ಕ್ವಿಂಟಲ್ ಗೆ ಬೆಲೆ ರೂ. 1 ಲಕ್ಷ ಗಡಿ ದಾಟುತ್ತದೆ ಎಂದು ಅಂದಾಜಿಸಲಾಗಿದೆ.
1. ಬೆಲೆ ಏರಿಕೆಯ ಟ್ರೇಡ್ ಹೇಗಿದೆ :
ಮಾರುಕಟ್ಟೆಗಳಿಗೆ ಬರುತ್ತಿರುವ ಬ್ಯಾಡಗಿ ಮೆಣಸಿನಕಾಯಿ(Byadagi Chilli) ಪ್ರಮಾಣವೂ ಗಳನೀಯವಾಗಿ ಬಹಳಷ್ಟು ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಇದೇ ಕಾರಣದಿಂದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳು ಬಹಳಷ್ಟು ಕಂಡು ಬರುತ್ತಿದೆ. ರೈತರು ಈ ವಿಚಾರವನ್ನ ಗಮನದಲ್ಲಿಟ್ಟುಕೊಳ್ಳಬೇಕು.
2. ಬೆಲೆ 1 ಲಕ್ಷ ಗಡಿ ದಾಟಬಹುದಾ :
ಈ ಬಾರಿ ಕೃಷಿ ಮಾರುಕಟ್ಟೆಯಲ್ಲಿಯೇ ಕೆಂಪು ಸುಂದರಿ ತನ್ನ ಬೆಲೆಯನ್ನ ತಾನೇ ಹೆಚ್ಚಿಸಿಕೊಂಡಿದ್ದಾಳೆ. ಅತ್ಯುತ್ತಮ ಗುಣಮಟ್ಟದ ಡಬ್ಬಿ ತಳಿ ಶೀಘ್ರದಲ್ಲೇ ಕ್ವಿಂಟಲ್ ಗೆ ಒಂದು ಲಕ್ಷ ತಲುಪುವ ನಿರೀಕ್ಷೆ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಕಂಡುಬರುತ್ತದೆ. ಈಗಾಗಲೇ 90 ಸಾವಿರ ಗಡಿ ದಾಟಿದ ಮೆಣಸಿನ ಬೆಲೆ 1 ಲಕ್ಷ ತಲುಪಲು ಬಹಳ ಸಮಯ ಬೇಕಿಲ್ಲ. ನಾಳೆಯಿಂದ ನಾಲ್ಕು ಸಾವಿರ ಒಂದೇ ಸಾರಿ ಬೆಲೆ ಹೆಚ್ಚಾಗುವ ನಿರೀಕ್ಷೆ ಬಹಳಷ್ಟು ಇದೆ.
3. ರಫ್ತು ಹಾಗೂ ಉದ್ಯಮಗಳ ಬೇಡಿಕೆಗೆ ತುತ್ತಾದ ಬ್ಯಾಡಗಿ ಮೆಣಸು :
ಇಂದಿನ ದಿನಗಳಲ್ಲಿ ಕೆಂಪು ರಾಣಿಗೆ ಕೇವಲ ಕರ್ನಾಟಕ ಹಾಗೂ ಭಾರತದಲ್ಲಿ ಮಾತ್ರ ಬೇಡಿಕೆ ಇಲ್ಲ ಮಸಾಲೆ ಪದಾರ್ಥಗಳ ಕಂಪನಿಗಳು ಮತ್ತು ವಿದೇಶಿ ರಫ್ತುದಾರದಿಂದ ಬಹಳಷ್ಟು ಬೇಡಿಕೆ ಕಂಡುಬರುತ್ತಿದೆ. “ಮಾರುಕಟ್ಟೆಯಲ್ಲಿ ಈ ಬೇಡಿಕೆಯು ಸದಾ ಪೈಪೋಟಿಯನ್ನ ಸೃಷ್ಟಿಸಲಿದೆ!”
4. ಇಳುವರಿ ಸಮಸ್ಯೆ :
ಈ ವರ್ಷ ಮೆಣಸಿನ ಕಾಯಿಗೆ(Byadagi Chilli) ಬಹಳಷ್ಟು ರೋಗಗಳು, ಹವಮಾನದಲ್ಲಿ ಅತಿಹೆಚ್ಚಿನ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹೆಚ್ಚಿನ ಲಾಭದಾಯಕವಾಗಿರುವ ಈ ಮೆಣಸು ಬೆಳೆಯು, ಈ ವರ್ಷ ಇಳುವರಿಯಲ್ಲಿ ಶೇಕಡಾ 40 ರಿಂದ 50 ರಷ್ಟು ಕಡಿಮೆಯಾಗಿದೆ, ಅನೇಕ ರೈತರು ಇದರಿಂದಾಗಿ ಕಂಗಾಲಾಗಿದ್ದರು ಸಹ ಪೂರೈಕೆಯ ಕೊರತೆಯಿಂದಾಗಿ ಈ ರೀತಿಯ ಬೆಲೆ ಹೆಚ್ಚಾಗಿದೆ.
ರೈತರಲ್ಲಿ ಉಳಿದಿರುವ ಅಲ್ಪಸ್ವಲ್ಪ ಮೆಣಸಿನ ಬೆಳೆಗೆ ಬೆಲೆ ಕಡಿಮೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಹಾಗಾಗಿ ರೈತರು ಮುಂದೆ ಮೆಣಸು ಕೃಷಿ ಮಾಡಲು ಈ ವರ್ಷದ ಬೆಲೆ ಏರಿಕೆ ಸ್ವಲ್ಪ ಪ್ರಮಾಣದ ಅನುಕೂಲವನ್ನು ಉಂಟು ಮಾಡುತ್ತದೆ.
5. ಉತ್ತಮ ಗುಣಮಟ್ಟಕ್ಕೆ ಆದ್ಯತೆ :
ಮಾರುಕಟ್ಟೆಯಲ್ಲಿ ಯಾವುದೇ ವಸ್ತುವಾಗಿರಲಿ ಅಥವಾ ಇನ್ನಿತರೆ ಐಟಂಗಳಾಗಿದ್ದರು ಸಹ ಗುಣಮಟ್ಟದ ಆಧಾರದ ಮೇಲೆ ಬೆಲೆಗಳು ನಿರ್ಧಾರವಾಗುತ್ತದೆ. ಅದೇ ರೀತಿ ಈ ಕೆಂಪು ಸುಂದರಿಯ ಬೆಲೆ ನಿರ್ಧಾರವಾಗುವುದು ಕೇವಲ ಗಾತ್ರದಿಂದ ಮಾತ್ರವಲ್ಲ, ಮೆಣಸಿನ ಕಾಯಿಯ(Byadagi Chilli) ಗಾಢ ಕೆಂಪು ಬಣ್ಣ ಮತ್ತು ಉತ್ತಮ ಕ್ವಾಲಿಟಿಯ ಆಧಾರದ ಮೇಲೆ ಬೆಲೆಗಳು ನಿರ್ಧಾರ ಆಗುವುದರಿಂದ ಉತ್ತಮ ಗುಣಮಟ್ಟದ ಬೆಳೆಗೆ ಮಾತ್ರ ಹೆಚ್ಚಿನ ದರ ಸಿಗುತ್ತದೆ ಎನ್ನುವುದು ಪ್ರತಿಯೊಬ್ಬರ ರೈತರ ಗಮನದಲ್ಲಿ ಇರಬೇಕು.
2026 ರಲ್ಲಿ ಏಕೆ ಈ ಪರಿ ಕೆಂಪು ರಾಣಿಯ ಬೇಡಿಕೆ :-
ಬ್ಯಾಡಗಿ ಮೆಣಸು(Byadagi Chilli) ಜಗತ್ತಿನ ಬೇರೆ ಯಾವ ತಳಿಗಳಲ್ಲಿ ಇಲ್ಲದ ಎರಡು ವಿಶೇಷ ಗುಣಗಳನ್ನು ಹೊಂದಿದೆ ಅದೇ ನೋಡಿ ದೇಶ ವಿದೇಶದಲ್ಲೆಡೆ ಬ್ಯಾಡಗಿ ಮೆಣಸಿನ ಬೇಡಿಕೆ ಹೆಚ್ಚಾಗಿರುವ ರಹಸ್ಯ.
ಹಾಗಿದ್ರೆ ಯಾವ ವಿಶೇಷ ಗುಣಗಳು ಈ ಕೆಂಪು ಸುಂದರಿಯಲ್ಲಿ ಅಡಗಿದೆ ?
1. ಈ ಬೆಳೆಯಲ್ಲಿ ಅತಿ ಹೆಚ್ಚು ಒಲಿಯೊರೆಸಿನ್ (Oleoresin) ಅಂಶವು ಇದ್ದು, ಇದು ರಕ್ತದಂತಹ ಕೆಂಪು ಬಣ್ಣ ನೀಡುತ್ತದೆ ಇದರಿಂದಾಗಿ ಅಡುಗೆಗೆ ನೈಸರ್ಗಿಕ ಬಣ್ಣ ಬರುತ್ತದೆ. ಅಡುಗೆಯಲ್ಲಿ ಬೇರೆ ಗುಣಮಟ್ಟದ ಮೆಣಸಿನ ಕಾಯಿಯನ್ನ ಖರೀದಿ ಮಾಡಿ ಬಳಕೆ ಮಾಡಿದರೆ ಈ ರೀತಿಯ ನೈಜ್ಯ ಕೆಂಪು ಬಣ್ಣ ಅಡಿಗೆಯಲ್ಲಿ ಬರುವುದಿಲ್ಲ. ಹಾಗಾಗಿ ಈ ಬ್ಯಾಡಗಿ ಮೆಣಸನ್ನ ಅತಿ ಹೆಚ್ಚಾಗಿ ದೇಶ ಮಾತ್ರ ವಲ್ಲದೆ ವಿದೇಶಿ ಮಾರುಕಟ್ಟೆಗಳು ಕೆಂಪು ಚಿನ್ನ ವನ್ನ ಖರೀದಿ ಮಾಡಲು ಮುಗಿಬಿದ್ದಿವೆ.
2. ಬೇರೆ ಜಾತಿಯ ಮೆಣಸ್ಸಿಗಿಂತ ಈ ಬ್ಯಾಡಗಿ ಮೆಣಸು(Byadagi Chilli) ಅತಿಯಾದ ಖಾರವನ್ನ ಹೊಂದಿರುವುದಿಲ್ಲ ಹೀಗಾಗಿ ಅಡುಗೆಯ ರುಚಿ ಹೆಚ್ಚಿಸಲು ಈ ಮೆಣಸು ಅಡುಗೆಯಲ್ಲಿಯೇ ಸರ್ವ ಶ್ರೇಷ್ಠ ಎಂದು ಹೆಸರುವಾಸಿಯಾಗಿದೆ.
- ಹಾಗಿದ್ದರೆ ಈ ಬ್ಯಾಡಗಿ ಮೆಣಸು ಎಷ್ಟು ಖಾರವನ್ನ ಹೊಂದಿದೆ ಗೊತ್ತ ? ಬ್ಯಾಡಗಿ ಮೆಣಸು SHU ಮಟ್ಟ 8,000 – 15,000 SHU (Scoville Heat Units) ಇಷ್ಟು ಖಾರ ಹೊಂದಿದೆ ಎಂದು ತಿಳಿದುಬಂದಿದೆ.
3. ಬಹಳಷ್ಟು ಜನ ಈ ಮೆಣಸು ಕೇವಲ ಅಡುಗೆಗೆ ಮಾತ್ರ ಸೀಮಿತ ಎಂದು ತಿಳಿದಿದ್ದಾರೆ. ಆದರೆ ಮುಖ್ಯ ವಿಷಯವೇನೆಂದರೆ ಇದನ್ನ ಲಿಪ್ಸ್ಟಿಕ್ ನಂತಹ ಸೌಂದರ್ಯವರ್ಧಕಗಳಲ್ಲಿ ಬಣ್ಣ ನೀಡಲು ಈ ಬ್ಯಾಡಗಿ ಮೆಣಸನ್ನ ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲವೊಂದು ಔಷಧಿಗಳಲ್ಲಿಯೂ ಸಹ ಈ ಕೆಂಪು ರಾಣಿ ತನ್ನದೇ ಆದ ಪಾತ್ರವನ್ನ ನಿರ್ವಹಿಸುತ್ತಿದ್ದಾಳೆ.
ಬ್ಯಾಡಗಿ ಮೆಣಸು(Byadagi Chilli): ಕಳೆದ 6 ವರ್ಷಗಳ ಬೆಲೆ ಏರಿಕೆ ಕಥೆ :-
ಸುಮಾರು ವರ್ಷಗಳಿಂದಲೂ ಈ ಬ್ಯಾಡಗಿ ಮೆಣಸಿನಕಾಯಿ ಬೆಲೆ ಸಾಧಾರಣ ಮಟ್ಟಿಗೆ ಇತ್ತು, ಆದರೆ ಈ ವರ್ಷ ಗಗನಕೇರಿರುವ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಲ್ ಗೆ 90 ಸಾವಿರ ಗಡಿ ದಾಟಿದೆ. “ಬೆಲೆ ಏರಿಕೆ ಯಾಗುತ್ತೋ ಇಲ್ಲವೋ ನಮ್ಮ ಗತಿ ಏನು ಎಂದು ಚಿಂತೆ ಮಾಡುತ್ತಿರುವ ರೈತರು ಫುಲ್ ಖುಷ್!”
2021 ರಿಂದ 2026ನೇ ಸಾಲಿನವರೆಗೆ ಮಾರುಕಟ್ಟೆಯ ಬೆಲೆಗಳು ಯಾವ ಯಾವ ರೀತಿಯಲ್ಲಿ ಸಂಚಲನ ಮೂಡಿಸಿದ್ದವು ಈಗ ಪರಿಸ್ಥಿತಿ ಹೇಗಿದೆ ಈ ಕೆಳಗೆ ಚಾರ್ಟ ಮೂಲಕ ಸಂಪೂರ್ಣವಾಗಿ ತಿಳಿಸಲಾಗಿದೆ.
| ವರ್ಷ | ಸರಾಸರಿ ದರ (₹/ಕ್ವಿಂಟಲ್) | ಗಮನಾರ್ಹ ಟಿಪ್ಪಣಿಗಳು |
|---|---|---|
| 2021 | 36,000 | ಸಾಮಾನ್ಯ ಮಾರುಕಟ್ಟೆ ದರ – ಬೆಲೆ ಸ್ಥಿರವಾಗಿತ್ತು. |
| 2022 | 50,000–70,000 | ಗುಣಮಟ್ಟದ ಮೇಲುಮೈ ದರಗಳೊಂದಿಗೆ ವ್ಯಾಪಾರ. |
| 2023 | 35,000–44,000 | ಬೆಲೆ ಕೆಲವು ವರ್ಷಗಳಂತೆ ಸರಾಸರಿ ಮಟ್ಟದಲ್ಲಿತ್ತು. |
| 2024 | 30,000–40,000 | ಒಟ್ಟಾರೆ ಮೆಣಸು ಬೆಳೆಗೆ ಕಡಿಮೆ ಬೆಲೆ; ಪೂರೈಕೆ ಹೆಚ್ಚು. |
| 2025 | 35,000 | ಮಾರುಕಟ್ಟೆ ಹಿಂದಿನ ವರ್ಷಕ್ಕಿಂತ ಸ್ವಲ್ಪ ಬಲವಾಗಿದೆ. |
| 2026 | ಹೈಲೆಸ್ಟ್ ~74,000–90,000+ | 2026 ರಲ್ಲಿ ದಾಖಲೆ ಮಟ್ಟದ ಬೆಲೆ ದಾಖಲಾಗಿದೆ. |
ನನ್ನ ಪ್ರಕಾರ ರೈತರಿಗೆ ಲಾಭದ ಅಂದಾಜು ಈ ವರ್ಷ:-
ಈ ವರ್ಷದ ಬ್ಯಾಡಗಿ ಮೆಣಸಿನ(Byadagi Chilli) ಬೆಲೆ ಏರಿಕೆ ಮೂಲಕ ಒಬ್ಬ ರೈತರಿಗೆ ಒಂದು ವರ್ಷದಲ್ಲಿ ನಗದು ಆದಾಯದಲ್ಲಿ 10 ಲಕ್ಷಕ್ಕೂ ಹೆಚ್ಚು ಲಾಭ ಸಿಕ್ಕಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ಕಳೆದ ವರ್ಷದ ಬೆಳೆಗೆ ಹೋಲಿಸಿದರೆ ಈ ವರ್ಷ ರೈತರ ಜೀವನ ಮಟ್ಟದಲ್ಲಿ ಅಂದರೆ ಈ ಕೆಂಪು ಸುಂದರಿಯ ಬೆಲೆ ಇಂದಾಗಿ ರೈತರ ಜೀವನವು ಸ್ವಲ್ಪ ಸುಧಾರಣೆಯತ್ತ ಮುಖ ಮಾಡಿದೆ.
ಇನ್ನು ಸ್ಪಷ್ಟವಾಗಿ ಕೆಳಗೆ ಲಾಭದ ಅಂದಾಜು ತಿಳಿಸಲಾಗಿದೆ
ಒಬ್ಬ ರೈತ 1 ಹೆಕ್ಟರ್ (10,000 ಚದರ ಮೀಟರ್) ಮೆಣಸು(Byadagi Chilli) ತೋಟ ಹಾಕಿದ್ದಾನೆ ಎಂದು ಊಹಿಸೋಣ.
- ಸರಾಸರಿ ಬೆಳ = 8 ಟನ್ = 80 ಕ್ವಿಂಟಲ್
1. ಕಳೆದ ವರ್ಷ (2025 ನೇ ಸಾಲಿನಲ್ಲಿ)
- ಬೆಲೆ = ₹35,000/ಕ್ವಿಂಟಲ್
- ಆದಾಯ = 80 × 35,000 = ₹28,00,000 ಕಳೆದ ವರ್ಷ ಸಿಕ್ಕಿರುವ ಹಣ.
2. ಈ ವರ್ಷ (2026 ನೇ ಸಾಲಿನಲ್ಲಿ)
- ಬೆಲೆ = ₹90,000/ಕ್ವಿಂಟಲ್
- ಆದಾಯ = 80 × 90,000 = ₹72,00,000 ಈ ವರ್ಷ ಸಿಕ್ಕಿರುವ ಹಣ
3. ಲಾಭ ವ್ಯತ್ಯಾಸ
- ₹72,00,000 – ₹28,00,000 = ₹44,00,000 ಹೆಚ್ಚು ಲಾಭ ಈ ವರ್ಷ ಪಡೆದಿರುತ್ತಾನೆ ಎಂದು ಅಂದಾಜಿಸಲಾಗಿದೆ.
“ಕೆಂಪು ಸುಂದರಿ: ರೈತರಿಗೆ ಚಿನ್ನದ ಬೆಲೆ!”
ಬೆಲೆ ಏರಿಕೆಯಿಂದ ರೈತರಿಗಾದ ಅನುಕೂಲ :-
ಕೆಂಪು ಸುಂದರಿಯ ಬೆಲೆ ಏರಿಕೆಯಿಂದ ರೈತರಿಗೆ, ಮಾರುಕಟ್ಟೆಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಆಗಿರುವ ಒಂದಿಷ್ಟು ಅನುಕೂಲವನ್ನು ಈ ಕೆಳಗೆ ತಿಳಿಸಲಾಗಿದೆ.
- ರೈತರು ತಾವು ಬೆಳೆದ ಬೆಳೆಗಳಿಂದ ವರ್ಷದಿಂದ ವರ್ಷ ಲಾಭ ಬಂದರು ಬಾರದಿದ್ದರೂ ಸಾಲ ಮಾಡಿಯಾದರು, ತಾವು ಮಾಡುವ ಕೃಷಿ ಕೆಲಸವನ್ನ ವರ್ಷ ವರ್ಷ ಮಾಡುತ್ತಲೇ ಬರುತ್ತಾರೆ. ಇದರಿಂದಾಗಿ ಅನೇಕ ರೈತರು ಕೆಲವು ವರ್ಷ ನಷ್ಟವನ್ನು ಅನುಭವಿಸಿ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಈ ವರ್ಷದ ಬ್ಯಾಡಗಿ ಮೆಣಸಿನ(Byadagi Chilli) ಬೆಲೆಯಿಂದಾಗಿ ಸಾವಿರಾರು ರೈತರು ಲಕ್ಷಾಂತರ ರೂಪಾಯಿ ಲಾಭ ಗಳಿಸಿ ಇದು ಅವರ ಜೀವನ ಮಟ್ಟವನ್ನ ಸುಧಾರಿಸಲು ಮತ್ತು ಹಳೆಯ ಸಾಲವನ್ನು ತಿಳಿಸಿಕೊಳ್ಳಲು ಬಹಳಷ್ಟು ಸಹಾಯವಾಗಿದೆ.
- ರೈತರ ಕೈಯಲ್ಲಿ ಹಣ ಓಡಾಡುತ್ತಿರುವುದರಿಂದ ಗ್ರಾಮೀಣ ಭಾಗದ ವ್ಯಾಪಾರ ಮತ್ತು ಇತರೆ ವಾಹಿವಾಟು ಹಾಗೆಯೇ ವಾಹನ ಖರೀದಿ ಅಷ್ಟೇ ಅಲ್ಲದೆ ತಮ್ಮ ಕನಸಿನ ಕಟ್ಟಡ ನಿರ್ಮಾಣದ ಕಾರ್ಯಕ್ರಮಗಳು ನೆರವೇರುತ್ತವೆ.
- ಈ ವರ್ಷದ ಕೆಲವು ರೈತರು ಬೆಲೆ ಏರಿಕೆಯ ಲಾಭವನ್ನು ಪಡೆಯಲು ತಾವು ಬೆಳೆದ ಮೆಣಸಿನ ಕಾಯಿಯನ್ನ ಶೇಖರಿಸಿಡಲು ಮುಂದಾಗಿ ಕೆಲವು ಗ್ರಾಮೀಣ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಮತ್ತು ಗೋಧಾಮಗಳ ನಿರ್ಮಾಣ ಮಾಡು ನಿರ್ಮಾಣಕ್ಕೆ ಮುಂದಾಗಿದ್ದಾರೆ.
- ಹೆಚ್ಚಿನ ಬೆಲೆ ಸಿಗುವುದರಿಂದ ರೈತರು ಇಳುವರಿ ಹೆಚ್ಚಿಸಲು ಮತ್ತು ಆಧುನಿಕ ತಂತ್ರಜ್ಞಾನ, ಹನಿ ನೀರಾವರಿ ಮತ್ತು ಗುಣಮಟ್ಟದ ಬೀಜಗಳನ್ನ ಮುಂದಿನ ವರ್ಷದಲ್ಲಿ ಬಳಕೆ ಮಾಡಿ ಇನ್ನಷ್ಟು ಆದಾಯವನ್ನು ಗಳಿಸುವಲ್ಲಿ ತಮ್ಮ ಆಸಕ್ತಿಯನ್ನು ತೋರಿಸುತ್ತಾರೆ.
- ಈ ವರ್ಷದಂತೆ ಪ್ರತಿ ವರ್ಷವೂ ಬ್ಯಾಡಗಿ ಮೆಣಸು(Byadagi Chilli) ಹಾಗೆ ಇತರೆ ಬೆಳೆಗಳ ಬೆಲೆಯು ಮಾರುಕಟ್ಟೆಯಲ್ಲಿ ಹೆಚ್ಚಾದಂತೆ ವಾಹಿವಾಟು ಹೆಚ್ಚಾಗುತ್ತದೆ. ಇದರಿಂದ ಹಮಾಲಿಗಳು, ಪ್ಯಾಕೇಜಿಂಗ್ ಕಾರ್ಮಿಕರು ಮತ್ತು ಲಾರಿ ಸಂಚಾರಕರು ಅಷ್ಟೇ ಅಲ್ಲದೆ ಸಣ್ಣ ವರ್ತಕರಿಗೆ ಹೆಚ್ಚಿನ ಕೆಲಸ ಸಿಗುವುದರಿಂದ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ.
- ಕೃಷಿಯಲ್ಲಿ ಲಾಭವಿಲ್ಲ ಎಂದು ಅನೇಕ ರೈತರು ನಗರ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಈ ಕೆಂಪು ಸುಂದರಿ ತನ್ನ ಬೆಲೆಯನ್ನು ಹೆಚ್ಚಿಸಿಕೊಂಡಿರುವುದರಿಂದ ಹಳ್ಳಿ ಭಾಗದಲ್ಲಿರುವ ಯುವಕರು ತಮ್ಮ ಒಲವನ್ನ ಕೃಷಿಯತ್ತ ತೋರಿಸಲು ಇದೊಂದು ಉತ್ತಮ ಅವಕಾಶ.
ರೈತರು ತಿಳಿಯಲೇಬೇಕಾದ ಮುಖ್ಯ ಅಂಶ :
| ಮೆಣಸು ಬೆಳೆಗಾರರೇ ಮಾರುಕಟ್ಟೆಯ ಇಂದಿನ ಸ್ಥಿತಿಗತಿ ಹಾಗೂ ಜಾಗತಿಕ ಬೇಡಿಕೆಯನ್ನ ಅವಲೋಕಿಸಿದರೆ, ಮುಂದಿನ ದಿನಗಳಲ್ಲಿ ಈ ಕೆಂಪು ಸುಂದರಿಯ ಬೆಲೆ ಇನ್ನಷ್ಟು ಏರಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಪ್ರಸ್ತುತ ದಾಸ್ತಾನು ಮಳಿಗೆಯಲ್ಲಿ ಹಳೆಯ ಸರಕು ಖಾಲಿಯಾಗುತ್ತಿದ್ದು ಮಾರುಕಟ್ಟೆಗೆ ಬಂದಿರುವ ಹೊಸ ಮೆಣಸಿನ ಕಾಯಿ ಪ್ರಮಾಣವೂದಾರರ ಬೇಡಿಕೆಗೆ ಪೂರಕವಾಗಿಲ್ಲದ ಕಾರಣ ಬೆಲೆಯಲ್ಲಿ ಬಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. “ವಿಶೇಷವಾಗಿ ಅಂತರಾಷ್ಟ್ರೀಯ ಕಂಪನಿಗಳಿಂದ ನೈಸರ್ಗಿಕ ಬಣ್ಣದ ಬೇಡಿಕೆ ಹೆಚ್ಚಾಗುವುದರಿಂದ ಉತ್ತಮ ಗುಣಮಟ್ಟದ ಕಡ್ಡಿ ತಳಿಯ ಬೆಲೆ ಮುಂದಿನ ಕೆಲವೇ ತಿಂಗಳಲ್ಲಿಯೂ ಕ್ವಿಂಟಲ್ ಗೆ ಒಂದು ಲಕ್ಷ ಗಡಿ ದಾಟಿದರೂ ಅಚ್ಚರಿ ಏನಿಲ್ಲ”. ಇದರಿಂದ ರೈತರು ಮಾರುಕಟ್ಟೆಯ ಏರಿಳಿತವನ್ನು ಗಮನಿಸುತ್ತಾ ಅವಸರಕ್ಕೆ ಬಿದ್ದು ಸಂಪೂರ್ಣ ಬೆಳೆಗಳನ್ನ ಮಾರಾಟ ಮಾಡದೆ ಹಂತ ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಆರ್ಥಿಕ ದೃಷ್ಟಿಯಿಂದ ರೈತರಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ. |
ರೈತ ಮಿತ್ರರಿಗೆ ನನ್ನ ಕಿವಿಮಾತು (Safety & Advice)
- ಬೆಲೆ ಏರುತ್ತದೆ ಎಂದು ಅತಿಯಾದ ಆಸೆಗೆ ಬಿದ್ದು ಇಡೀ ಬೆಳೆ ಹಿಂದಿಟ್ಟುಕೊಳ್ಳಬೇಡಿ ಹಂತ ಹಂತವಾಗಿ (Step-by-step) ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ಬನ್ನಿ.
- ಬೆಲೆ ಹೆಚ್ಚುತ್ತಿರುವುದರಿಂದ ಹೊಲಗಳಲ್ಲಿ ಮತ್ತು ಸಾಗಾಣಿಕೆ ವೇಳೆ ಕಳ್ಳತನ ವಾಗದಂತೆ ಜಾಗರೂಕತೆ ವಹಿಸಬೇಕು ರೈತರು ಮುಖ್ಯವಾಗಿ ಮಾರುಕಟ್ಟೆಗೆ ತರುವಾಗ ವಿಮೆ ಅಥವಾ ಸರಿಯಾದ ದಾಖಲೆಗಳನ್ನ ಹೊಂದಿರಿ.
- ಮುಖ್ಯವಾಗಿ ರೈತರು ಆದಷ್ಟು ಎಪಿಎಂಸಿ ಅಥವಾ ವಿಶ್ವಾಸ ಸಹ ವರ್ತಕರ ಮೂಲಕವೇ ತಮ್ಮ ವ್ಯವಹಾರವನ್ನ ಇಟ್ಟುಕೊಳ್ಳುವುದು ಬಹಳಷ್ಟು ಉತ್ತಮ.
“ಬ್ಯಾಡಗಿ ಮೆಣಸಿನಕಾಯಿಯ ಖಾರದಷ್ಟೇ ಗಟ್ಟಿಯಾಗಿರಲಿ ನಿಮ್ಮ ಛಲ, ಕಾಲ ಬರುತ್ತದೆ ಬೆಲೆ ನೀಡಲು.”
ಪದೇ ಪದೇ ಕೇಳಕಡುವ ಪ್ರಶ್ನೋತ್ತರಗಳು :-
ಉತ್ತರ: ಬ್ಯಾಡಗಿ ಡಬ್ಬಿ (Dabbi) ತಳಿಗೆ ಅತಿ ಹೆಚ್ಚು ಬೆಲೆ ಸಿಗುತ್ತಿದೆ. ಇದರ ಬಣ್ಣ ಮತ್ತು ಸುಕ್ಕುಗಟ್ಟಿದ ಗುಣಲಕ್ಷಣಗಳೇ ಇದಕ್ಕೆ ಕಾರಣ. ಕಡ್ಡಿ ತಳಿ ನಂತರದ ಸ್ಥಾನದಲ್ಲಿದೆ.
ಉತ್ತರ: ಇಲ್ಲ. ಹೈಬ್ರಿಡ್ ತಳಿಗಳಿಗೆ (ಉದಾ: ಸೈಂಜೆಂಟಾ 5531) ಬೆಲೆ ಹೆಚ್ಚಿದ್ದರೂ, ಅಪ್ಪಟ ಬ್ಯಾಡಗಿ ಡಬ್ಬಿ ತಳಿಗೆ ಸಿಗುವಷ್ಟು ದಾಖಲೆ ಬೆಲೆ ಸಿಗುವುದಿಲ್ಲ.
ಉತ್ತರ: ಪ್ರಮುಖವಾಗಿ ಇಳುವರಿ ಕುಸಿತ (ಶೇ. 50-60ರಷ್ಟು ಕಡಿಮೆ). ಮಳೆ ಮತ್ತು ಕೀಟಬಾಧೆಯಿಂದ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಜೊತೆಗೆ ಅಂತರಾಷ್ಟ್ರೀಯ ಕಂಪನಿಗಳಿಂದ ಬೇಡಿಕೆ ಹೆಚ್ಚಿದೆ.
ಉತ್ತರ: ನೀವು ಅಧಿಕೃತ Byadagi APMC Market ವೆಬ್‌ಸೈಟ್ ಅಥವಾ NaPanta App ಮೂಲಕ ಪ್ರತಿದಿನದ ಲೈವ್ ದರಗಳನ್ನು ತಿಳಿಯಬಹುದು.

