SSLC Study Tips: ನೀವೇನಾದರೂ SSLC ಸ್ಟೂಡೆಂಟಾ? ನಿಮಗೆ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು ಎನ್ನುವ ಗೊಂದಲ ಇದಿಯಾ? ಎಷ್ಟೇ ಓದಿದರೂ ಓದಿದ್ದೆಲ್ಲಾ ನೆನಪಿಗೆ ಬರುತ್ತಿಲ್ಲವಾ? ಹಾಗಿದ್ದರೆ ಈ ಟಿಪ್ಸ್ (SSLC Study Tips) ಫಾಲೋ ಮಾಡಿ ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಬರೆಯಿರಿ. ಅದೇನು ಟಿಪ್ಸ್ (SSLC Study Tips), ಹೇಗೆಲ್ಲ ಸ್ಟಡಿ ಮಾಡಿದರೆ ಓದಿದ್ದೆಲ್ಲಾ ನೆನಪಿನಲ್ಲಿರುತ್ತದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
SSLC Study Tips in Kannada
“2025-26 ನೇ ಸಾಲಿನಲ್ಲಿ SSLC ಬೋರ್ಡ್ ಎಕ್ಸಾಮ್ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪಾಲಿಸಲೇ ಬೇಕಾದ ಟಾಪ್ 10 ಸ್ಟಡಿ ಟಿಪ್ಸ್”. ಹೌದು ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ನಡೆಯಲಿರುವ ಪರೀಕ್ಷೆಗೆ ನೀವು ಟಿಪ್ಸ್ ಅನ್ನು ಫಾಲೋ ಮಾಡಿದ್ರೆ ಫೇಲ್ ಆಗೋ ಸ್ಟೂಡೆಂಟ್ ಕೂಡ ರಾಂಕಿಂಗ್ ಬರ್ತಾರೆ ಹಾಗೂ ಬಹಳಷ್ಟು ಓದಿನಲ್ಲಿ ಚುರುಕಾಗಿರುವ ವಿದ್ಯಾರ್ಥಿಗಳು ಕೂಡ ರಾಜ್ಯದಲ್ಲಿ ಡಿಸ್ಟಿಂಕ್ಷನ್ ಬರುವ ಮೂಲಕ ರಾಜ್ಯಕ್ಕೆ ಹೆಸರು ತಂದುಕೊಡಬಹುದಾಗಿದೆ.
“ವಿದ್ಯಾರ್ಥಿಗಳಿಗೆ ಇಲ್ಲಾ ಇನ್ಮುಂದೆ ಟೆಂಷನ್! ಈ ಟಿಪ್ಸ್ (SSLC Study Tips) ಫಾಲೋ ಮಾಡಿದ್ರೆ ಸಾಕು ನೀವೇ ಟಾಪರ್”.
ಎಲ್ಲಾ ವಿದ್ಯಾರ್ಥಿಗಳು ಆರಾಮವಾಗಿ ಯಾವುದೇ ಚಿಂತೆ ಇಲ್ಲದೆ 1 ನೇ ತರಗತಿಯಿಂದ 8 ನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ. ಎಷ್ಟೇ ಅಂಕ ಗಳಿಸಿದರೂ ಪಾಸ್ ಆಗೋದು ಪಕ್ಕ ಅಂತ ಸಂತೋಷದಿಂದ ಕಾಲ ಕಲಿಯುತ್ತಾರೆ. ಓದುವುದರ ಕುರಿತು ಯಾವುದೇ ಆಸಕ್ತಿ ಇರುವುದಿಲ್ಲ, ಪರೀಕ್ಷೆಯ ಭಯವೂ ಇರುವುದಿಲ್ಲ. ಆದರೆ 9 ನೇ ತರಗತಿಯಲ್ಲಿ ಪಾಸಿಂಗ್ ಮಾರ್ಕ್ಸ್ (Passing Marks) ಗಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಫೇಲ್ ಮಾಡುವ ಕಾರಣಕ್ಕೆ ವಿದ್ಯಾರ್ಥಿಗಳು ಸ್ವಲ್ಪ ಓದುವ ಕಡೆ ಆಸಕ್ತಿ ತೋರಿಸುತ್ತಾರೆ ಆದರೂ ಕೂಡ ಹೇಗೆ ಅಧ್ಯಯನ ಮಾಡಬೇಕು? ಹೆಚ್ಚಿನ ಅಂಕ ಗಳಿಸಲು ಏನೆಲ್ಲಾ ಟಿಪ್ಸ್ (SSLC Study Tips) ಫಾಲೋ ಮಾಡಬೇಕು ಎನ್ನುವ ಗೊಂದಲ ಇದ್ದೇ ಇರುತ್ತದೆ. ಈ ಗೊಂದಲವು SSLC ಅಲ್ಲೂ ಮುಂದುವರಿಯುತ್ತದೆ.
ನಿಮ್ಮ ಎಲ್ಲಾ ಗೊಂದಲಗಳನ್ನು ನಿಮ್ಮ ಓದಿಗೆ ಅಗತ್ಯವಾದ ವಿಷಯಗಳನ್ನು ಹಾಗೂ ಹೆಚ್ಚಿನ ಅಂಕ ಗಳಿಸಬೇಕಾದರೆ ನೀವು ಫಾಲೋ ಮಾಡಬೇಕಾದ ಟಿಪ್ಸ್ (SSLC Study Tips) ಗಳನ್ನೂ, ದಿನಕ್ಕೆ ಓದಲು ಎಷ್ಟು ಸಮಯ ಮೀಸಲಿಡಬೇಕು? ಎನ್ನುವ ಕುರಿತು ಈ ಒಂದು ಲೇಖನದ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೇ ರೀತಿಯ ಇನ್ನಷ್ಟು ವಿಷಯಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿ ನೀಡಿ.

ವಿದ್ಯಾರ್ಥಿಗಳು ಓದುವಾಗ ಪಾಲಿಸಬೇಕಾದ ಪ್ರಮುಖ ಕ್ರಮಗಳು (SSLC Study Tips):
| 1. ನೀವು ಓದುವಾಗ ಸ್ಮಾರ್ಟ್ ಸ್ಟಡಿ ತಂತ್ರವನ್ನು (Study Tips) ಅಳವಡಿಸಿಕೊಳ್ಳಿ. 2. ಯಾವ ವಿಷಯವನ್ನು ಯಾವ ಸಮಯಕ್ಕೆ ಓದಬೇಕು ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. 3. ಎಲ್ಲಾ ವಿಷಯವನ್ನು ಸುಮ್ಮನೆ ಓದದೇ, ನೀವು ಓದಿದ ವಿಷಯವನ್ನು ಒಂದೆರೆಡು ಭಾರಿ ರಿವಿಶನ್ ಮಾಡಿಕೊಳ್ಳಿ. 4. ಫೋನ್ ಬಳಕೆಯನ್ನು ಕಡಿಮೆ ಮಾಡಿ. 5. ಯಾವುದೇ ವಿಷಯದ ಬಗ್ಗೆ ಗೊಂದಲಗಳಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ. |
ಇದನ್ನು ಗಮನಿಸಿ: SSLC ವೇಳಾಪಟ್ಟಿ ಪ್ರಕಟ :ಭಯ ಬೇಡ… ನಿಮ್ಮ ಗೆಲುವಿನ ಸಮಯ ಶುರು! ಹೀಗೆ ಓದಿದ್ರೆ ಪಾಸ್ ಆಗೋದು ಪಕ್ಕಾ!
ಪರೀಕ್ಷಾ ತಯಾರಿಗೆ ಸ್ಮಾರ್ಟ್ ಸ್ಟಡಿ ಅತಿ ಮುಖ್ಯ:
ವಿದ್ಯಾರ್ಥಿಗಳೇ, ನೀವೇನಾದರೂ SSLC ಬೋರ್ಡ್ ಪ್ರರೀಕ್ಷೆ (SSLC Board Examination) ಗೆ ತಯಾರಿ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕಲಿಕೆಯಲ್ಲಿ ಸ್ಮಾರ್ಟ್ ಸ್ಟಡಿ ಅತಿ ಮುಖ್ಯವಾಗಿದೆ. ಸ್ಮಾರ್ಟ್ ಸ್ಟಡಿ ಅಂದರೆ ಏನು ಅಂತ ಯೋಚುಸುತ್ತಿದ್ದೀರಾ? ಸ್ಮಾರ್ಟ್ ಸ್ಟಡಿ ಎಂದರೆ ಯಾವುದೇ ಒಂದು ವಿಷಯದ ಎಲ್ಲಾ ಪ್ರಶ್ನೋತ್ತರವನ್ನು ಕಲಿತು ಮರೆತು ಹೋಗುವುದಕ್ಕಿಂತ ಈ ಒಂದು ವಿಷಯದಲ್ಲಿ ಯಾವ ಪ್ರಶ್ನೆ ಪರೀಕ್ಷೆಯಲ್ಲಿ ಹೆಚ್ಚು ಕೇಳಬಹುದು ಎಂದು ಸ್ಮಾರ್ಟ್ ತಿಂಕಿಂಗ್ ಮಾಡುವುದು ಅಗತ್ಯ. ಇದರಿಂದ ಓದಿದ್ದೆಲ್ಲವೂ ನೆನಪಿನಲ್ಲಿರುತ್ತದೆ.
ಗ್ರೂಪ್ ಸ್ಟಡಿ ಅತಿ ಮುಖ್ಯ:
SSLC Study Tips: ನಿಮಗೆ ಯಾವುದೇ ವಿಷಯದ ಕುರಿತು ಗೊಂದಲಗಳಿದ್ದರೆ, ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಗೊಂದಲಗಳಿರುವ ವಿಷಯಗಳ ಕುರಿತು ಉತ್ತರ ಕಂಡುಕೊಳ್ಳಿ. ಯಾವುದೇ ವಿಷಯದ ಕುರಿತು ಡೌಟ್ ಇದ್ದರೆ ಸ್ನೇಹಿತರೊಂದಿಗೆ ಚರ್ಚಿಸಿ ಉತ್ತರ ಕಂಡುಕೊಳ್ಳುವುದು, ನಿಮಗೆ ತಿಳಿದಿರುವ ವಿಷಯವನ್ನು ನಿಮ್ಮ ಸ್ನೇಹಿತರಿಗೆ ಅರ್ಥ ಮಾಡಿಸುವ ಹಾಗೂ ತಿಳಿಸುವ ಮೂಲಕ ಒಂದು ವಿಷಯದ ಕುರಿತು ನಿಮ್ಮ ಹಿಡಿತವನ್ನು ಗಟ್ಟಿ ಮಾಡಿಕೊಳ್ಳಿ. ಯಾವುದೇ ವಿಷಯದ ಕುರಿತು ಬೇರೆಯವರಿಗೆ ವಿವರಿಸುವುದರಿಂದ ನಿಮ್ಮ ಜ್ಞಾನ ಹೆಚ್ಚುತ್ತದೆ.
ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡಿಸುವ ಪ್ರಯತ್ನ ಮಾಡಿ:
ನೀವು ಯಾವುದೇ ವಿಷಯದ ಕುರಿತು ಅಧ್ಯಯನ ಮಾಡುವ ಮೊದಲು ಆ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಯನ್ನು (Model Question Paper) ಬಿಡಿಸುವ ಪ್ರಯತ್ನ ಮಾಡಿ. ಕಳೆದ 3-5 ವರ್ಷಗಳ ಮಾದರಿ ಪ್ರಶ್ನೆಯನ್ನು ಒಂದೊಂದಾಗಿ ಬಿಡಿಸಿ ನಂತರ ನಿಮ್ಮ ನೋಟ್ ಬುಕ್ ನಲ್ಲಿ ರಿಪೀಟ್ ಪ್ರಶ್ನೆಗಳನ್ನು ಟಿಕ್ ಮಾಡಿಕೊಂಡು ಅವುಗಳನ್ನು ಓದಲು ಹೆಚ್ಚಿನ ಗಮನ ಹರಿಸಿ. ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ 25% ರಷ್ಟು ಪ್ರಶ್ನೆಗಳು ಪುನರಾವರ್ತನೆ ಆಗುವ ಸಾಧ್ಯತೆಗಳಿರುತ್ತದೆ. ಹೆಚ್ಚು ಅಂಕ ಗಳಿಸಲು ಇದು ಕೂಡ ಒಂದು ರೀತಿಯ ಸ್ಟಡಿ ಟಿಪ್ಸ್ (SSLC Study Tips) ಆಗಿದೆ.
ಓದಲು ಪ್ರತ್ಯೇಕವಾದ ಟೈಂಟೇಬಲ್ ಅನ್ನು ರಚಿಸಿಕೊಳ್ಳಿ:
ನೀವು ಸ್ಟಡಿ ಮಾಡಲು ಟೈಂಟೇಬಲ್ ಅತಿ ಮುಖ್ಯ ಅದರ ಜೊತೆಗೆ ಟೈಂಟೇಬಲ್ (Timetable) ಅನ್ನು ಫಾಲೋ ಮಾಡೋದು ಕೂಡ ಅತಿ ಮುಖ್ಯ. ನೀವು ನಿಮಗೆ ಸುಲಭವೆನಿಸಿದ ವಿಷಯಗಳಿಗೆ ಕಡಿಮೆ ಸಮಯವನ್ನು ನೀಡಿ ನಿಮಗೆ ಕಠಿಣವೆನಿಸುವ ವಿಷಯಕ್ಕೆ ಹೆಚ್ಚಿನ ಸಮಯ ನೀಡಿ. ನೀವು ದಿನಕ್ಕೆ ಕನಿಷ್ಠ 6-8 ಗಂಟೆಗಳನ್ನು ಓದಲು ಮೀಸಲಿಡಿ. ಇಡೀ ಹೊತ್ತು ಓದುತ್ತ ಕೂತರು ಕೂಡ ಓದುವ ಆಸಕ್ತಿ ಕಡಿಮೆ ಆಗುತ್ತದೆ. ನನ್ನಿಂದ ಓದಲು ಸಾಧ್ಯವಿಲ್ಲ ಅನ್ನುವ ಮಟ್ಟಕ್ಕೆ ಹೋಗಿಬಿಡುತ್ತೀರಿ. ಉಳಿದ ಸಮಯದಲ್ಲಿ ಓದಿದ ವಿಷಯದ ಕುರಿತು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಹಾಗೂ ಆ ವಿಷಯದ ಕುರಿತು ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಿ.
ಮುಖ್ಯವಾಗಿ KSEAB ಅಧಿಕೃತ ವೆಬ್ಸೈಟ್ ನಲ್ಲಿ ನೀಡಿದ ಬ್ಲೂ ಪ್ರಿಂಟ್ ಅನ್ನು ನೋಡಿ ಅದರ ಆಧಾರದ ಮೇಲೆ ಯಾವ ಪಾಠಕ್ಕೆ ಎಷ್ಟು ಅಂಕಗಳು ಎಂದು ಗಮನಿಸಿ. ಮೊದಲು ಹೆಚ್ಚು ಅಂಕಗಳಿರುವ ಪಾಠವನ್ನು ಓದಿ ಮುಗಿಸಿ ನಂತರ ಕಡಿಮೆ ಅಂಕವನ್ನು ನಿಗದಿಪಡಿಸಿದ ಪಾಠವನ್ನು ಓದಿಕೊಳ್ಳಿ. ನೀವು ಹೆಚ್ಚು ಅಂಕ ಗಳಿಸಿ ಟಾಪರ್ ಆಗಬೇಕಾದರೆ ಪ್ರತಿ ಅಂಕವೂ ಮುಖ್ಯವಾಗಿರುತ್ತದೆ.
SSLC Study Tips ಕೀ ಪಾಯಿಂಟ್ಸ್ ಮಾಡಿಕೊಳ್ಳಿ:
ನೀವು ಓದಬೇಕಾದರೆ ಎಷ್ಟು ಓದಿದ್ದೀರಿ ಎನ್ನುವುದು ಮುಖ್ಯವಲ್ಲ, ಓದಿರುವುದರಲ್ಲಿ ಎಷ್ಟು ನೆನಪಿದೆ ಎನ್ನುವುದು ಬಹಳ ಮುಖ್ಯ. ನೀವು ಓದಿದ್ದೆಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದರೆ ನೀವು ಓದುತ್ತಿರುವ ವಿಷಯಗಳನ್ನು ಕೀ ಪಾಯಿಂಟ್ ಮಾಡಿಕೊಳ್ಳುವುದು ಅತಿ ಮುಖ್ಯ. ನೀವು ಉತ್ತರ ಬರೆಯುವಾಗ ಯಾವುದನ್ನೂ ಬರೆದರೆ ಹೆಚ್ಚು ಅಂಕ ಲಭಿಸುತ್ತದೆ ಎನ್ನುವುದನ್ನು ಹಾಗೂ ಇಸವಿಗಳನ್ನು ಕೀ ಪಾಯಿಂಟ್ ರೀತಿಯಲ್ಲಿ ಬರೆದಿಡಿ. ಇದು ನಿಮಗೆ ಓದಿದ್ದೆಲ್ಲವನ್ನು ನೆನಪಿನಲ್ಲಿರಿಸಲು ನೆರವಾಗುತ್ತದೆ.
ಓದಲು ಉತ್ತಮ ಸ್ಥಳವನ್ನು ಆಯ್ಕೆ ಮಾಡಿ:
ಯಾವುದೇ ಒಬ್ಬ ವಿದ್ಯಾರ್ಥಿ ಓದಿನ ಮೇಲೆ ಹೆಚ್ಚಿನ ಆಸಕ್ತಿ ಹೊಂದಬೇಕಾದರೆ ಅವರು ಓದುವ ವಾತಾವರಣ ಚೆನ್ನಾಗಿರಬೇಕು. ಹಾಗಾಗಿ ನೀವು ಓದಬೇಕೆಂದು ಬಯಸಿದಾಗ ಯಾವುದೇ ರೀತಿಯ ಶಬ್ದ ಕೇಳಿಸದ ಜಗದಲ್ಲಿ, ನಿಮ್ಮ ಓದಿನ ಆಸಕ್ತಿಯನ್ನು ಹೆಚ್ಚಿಸುವ ಜಾಗದಲ್ಲಿ ಓದಲು ಪ್ರಾರಂಭಿಸಿ ಮುಖ್ಯವಾಗಿ ಟಿವಿ ಇರುವ ಪಕ್ಕದ ಕೊನೆಯಲ್ಲಿ ಓದಲು ಹೋಗಬೇಡಿ ಏಕೆಂದರೆ, ನೀವು ಓದುವುದರ ಕಡೆ ಗಮನ ಹರಿಸುವ ಬದಲು ಟಿವಿ ಕಡೆ ಹೆಚ್ಚಿನ ಗಮನ ಹರಿಸುತ್ತೀರಿ.
ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿನ ಚಿತ್ರಗಳು ಹಾಗೂ ಸೂತ್ರಗಳನ್ನು ಬಿಡಿಸಿರಿ:
ನಿಮಗೆ ಓದಿ ಓದಿ ನಿದ್ದೆ ಬರುತ್ತಿದೆ ಎನ್ನುವಾಗ ವಿಜ್ಞಾನ ಹಾಗೂ ಗಣಿತ ವಿಷಯದ ಚಿತ್ರಗಳನ್ನು ಹಾಗೂ ಲೆಕ್ಕಗಳನ್ನು ಬಿಡಿಸಿರಿ. ಆಗ ನಿಮ್ಮ ನಿದ್ದೆಗಳೆಲ್ಲವೂ ಹೋಗುತ್ತದೆ. ಗಣಿತದಲ್ಲಿ ಲೆಕ್ಕಗಳನ್ನು ಬಿಡಿಸುವುದು ಒಂದು ರೀತಿಯ ಇಂಟೆರೆಸ್ಟಿಂಗ್ ಆಗಿರುತ್ತದೆ. ನೀವು ಲೆಕ್ಕವನ್ನು ಬಿಡಿಸುತ್ತಿದ್ದರೆ ನಿಮಗೆ ಕೆಲವು ಪ್ರಶ್ನೆಗಳು ಮೂಡುತ್ತದೆ ಆಗ ನೀವು ಅದಕ್ಕೆ ಹೇಗಾದರೂ ಸೊಲ್ಯೂಷನ್ ಕಂಡುಕೊಳ್ಳಬೇಕೆಂದು ಅವುಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿದರೆ ನಿಮ್ಮ ಗಮನವೆಲ್ಲವು ಆ ವಿಷಯದ ಕುರಿತು ಇದ್ದು ನಿದ್ದೆಗಳೆಲ್ಲಾ ಮಾಯವಾಗುತ್ತದೆ.
ಬೇರೆಲ್ಲಾ ವಿಷಯಗಳಿಗೂ ಒಂದಿಷ್ಟು ಪ್ರಶ್ನೆಗೆ ಸಂಬಂಧಿಸಿದ ಉತ್ತರ ಬರೆದರೆ ಒಂದೆರಡು ಅಂಕಗಳಾದರು ಸಿಗುತ್ತದೆ ಆದರೆ ಗಣಿತದಲ್ಲಿ ಲೆಕ್ಕ ಒಂದು ಚೂರು ತಪ್ಪಾದರೂ ಯಾವುದೇ ರೀತಿಯ ಅಂಕಗಳು ಬರುವುದಿಲ್ಲ ಹಾಗೂ ಎಲ್ಲಿ ಅಂಕಗಳು ಹೋಗುತ್ತದೆ ಎನ್ನುವುದು ತಿಳಿಯುವುದಿಲ್ಲ.
ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ:
ಯಾವುದೇ ವ್ಯಕ್ತಿ ಆರೋಗ್ಯವಾಗಿರಬೇಕಾದರೂ ಕೂಡ ತಿನ್ನುವ ಆಹಾರ ಪೌಷ್ಟಿಕಾಂಶದಿಂದ ಕೂಡಿರುವುದು ಹಾಗೂ ನಿದ್ದೆ ಮಾಡುವುದು ಅತಿ ಮುಖ್ಯ. ದಿನದ 24 ಗಂಟೆಗಳಲ್ಲಿ 6-8 ಗಂಟೆಗಳನ್ನು ಓದಲು ಮೀಸಲಿಟ್ಟರೆ ಇನ್ನು 7 ಗಂಟೆಗಳನ್ನು ನಿದ್ದೆಗೆ ಮೀಸಲಿಡಿ. ಒಂದುವೇಳೆ ಸರಿಯಾಗಿ ನಿದ್ದೆ ಆಗದಿದ್ದರೆ ನೆನಪಿನ ಶಕ್ತಿ ಕಡಿಮೆಯಾಗಿ ಓದಿದ್ದೆಲ್ಲವೂ ಮರೆತು ಹೋಗುವ ಸಾಧ್ಯತೆಗಳಿವೆ.
ಯಾವುದೇ ವಿಷಯದ ಕುರಿತು ಓದಿದರೂ ಕೂಡ ಕೊನೆಗೆ ಅವುಗಳನ್ನು ಬರೆದು ಕಲಿಯಿರಿ:
ವಿದ್ಯಾರ್ಥಿಗಳೇ, ನೀವು ಮುಖ್ಯವಾಗಿ ಗಮನಿಸ ಬೇಕಾದ ವಿಷಯವೇನೆಂದರೆ ನೀವು ಓದಿದ್ದೆಲ್ಲವನ್ನು ಬರೆದು ಕಲಿಯುವುದು ಅತಿ ಮುಖ್ಯ. ಓದಿರುವುದಕ್ಕಿಂತ ಬರೆದು ಕಲಿತಿರುವುದೇ ಹೆಚ್ಚಾಗಿ ನೆನಪಿನಲ್ಲಿ ಉಳಿಯುತ್ತದೆ.
ಜೊತೆಗೆ ಪರೀಕ್ಷೆ ಬರೆಯಲು ಸಮಯವೂ ಕಡಿಮೆ ಇರುತ್ತದೆ. ನೀವು ಒಂದು ವೇಳೆ ಬರೆದು ಬರೆದು ಅಧ್ಯಯನ ಮಾಡದೇ ಇದ್ದರೆ, ನಿಮ್ಮಗೆ ಎಲ್ಲಾ ಪ್ರಶ್ನೆಗೂ ಉತ್ತರ ಗೊತ್ತಿದ್ದರೂ ಕೂಡ ಬರೆಯಲು ಸಮಯ ಸಾಕಾಗುವುದಿಲ್ಲ. ಅದೇ ನೀವು ಬರೆದು ಬೆರೆದು ಕಲಿತ್ತಿದ್ದರೆ ನಿಮ್ಮ ಬರವಣಿಗೆ ಸ್ಪೀಡ್ ಆಗಿ ಸಮಯವನ್ನು ಸರಿಯಾಗಿ ಸಮಯವನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.
ದಿನನಿತ್ಯ ವ್ಯಾಯಾಮವನ್ನು ಮಾಡಿ:
ನೀವು ದಿನನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಕೇವಲ 30 ನಿಮಿಷವಾದರೂ ವ್ಯಾಯಾಮ ಮಾಡಲು ಮೀಸಲಿಡಿ. ನೀವು ವ್ಯಾಯಾಮ ಮಾಡುವುದರಿಂದ ಓದಲು ಏಕಾಗ್ರತೆ ಹೆಚ್ಚುತ್ತದೆ ಹಾಗೂ ನೆನಪಿನ ಶಕ್ತಿ ಹೆಚ್ಚುತ್ತದೆ. ಹಾಗೂ ಮುಖ್ಯವಾಗಿ ಪರೀಕ್ಷೆಯ ಕುರಿತು ಇರುವ ಆತಂಕವನ್ನು ದೂರಮಾಡಿಕೊಳ್ಳಿ. ಅಂದರೆ ನಾನು ಹೆಚ್ಚು ಅಂಕ ಗಳಿಸಿ ರಾಂಕ್ ಸ್ಟೂಡೆಂಟ್ ಆಗುತ್ತೇನೆ ಎಂದು ಪ್ರತಿ ದಿನವೂ ಮನಸ್ಸಿನಲ್ಲಿ ದೃಢಸಂಕಲ್ಪವನ್ನು ಮಾಡಿಕೊಳ್ಳಿ.
ನನಗೆ ಯಾವುದೇ ವಿಷಯವು ಕಷ್ಟವಲ್ಲ ನನಗೆ ಎಲ್ಲಾ ಅಧ್ಯಯನ ಮಾಡಲು ಎಲ್ಲಾ ವಿಷಯವು ಸುಲಭ ಎಂದುಕೊಳ್ಳುತ್ತೀರಿ. ಆಗ ನಿಮಗೆ ಆಕಸ್ಮಿಕವಾಗಿ ನಿಮಗೆ ಕಠಿಣವೆನಿಸಿದ ವಿಷಯವೂ ಕೂಡ ಸುಲಭವೆನಿಸುತ್ತದೆ.
ಓದಿನ ನಡುವೆ ಪುಟ್ಟ ವಿರಾಮವನ್ನು ತಗೆದುಕೊಳ್ಳಿ:
ಯಾವುದೇ ಒಂದು ಪಾಠವನ್ನು ಸತತವಾಗಿ ಓದುತ್ತಲೇ ಇರಬೇಡಿ. ನಿಮ್ಮ ಓದಿನಲ್ಲಿ ಸ್ಮಾರ್ಟ್ ಐಡಿಯಾವನ್ನು ಬಳಸಿಕೊಳ್ಳಿ. ಅದೇನೆಂದರೆ, ನೀವು 20 ನಿಮಿಷ ಒಂದು ವಿಷಯವನ್ನು ಓದಿದರೆ 10 ನಿಮಿಷ ಓದಿದ ವಿಷಯವನ್ನು ಪುನರಾರ್ತನೆ ಮಾಡಿಕೊಳ್ಳಿರಿ. ಸತತವಾಗಿ ಓದುವುದರಿಂದ ನಿಮ್ಮ ಓದಿನ ಮೇಲಿರುವ ಏಕಾಗ್ರತೆ ಕಡಿಮೆ ಆಗುತ್ತದೆ.
ನನ್ನದೊಂದು ಸಲಹೆ:
ನಾನು SSLC ಹಾಗೂ PUC ಗಳಲ್ಲಿ ಓದುತ್ತಿರುವಾಗ ನಾನು ಅಧ್ಯಯನದಲ್ಲಿ ಅಳವಡಿಸಿಕೊಂಡಿರುವ ಒಂದಿಷ್ಟು ವಿಷಯಗಳ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ನಾನು ಅಂದಿನ ಪಾಠವನ್ನು ಅಂದೇ ಮನೆಯಲ್ಲಿ ಓದಲು ಕನಿಷ್ಠ 15 ನಿಮಿಷಗಳನ್ನು ಮೀಸಲಿಡುತ್ತಿದ್ದೆ. ಹಾಗೂ ಯಾವುದೇ ವಿಷಯದ ಕುರಿತು ಗೊಂದಲಗಳಿದ್ದರೂ ಕೂಡ ಸ್ನೇಹಿತರಲ್ಲಿ ಅಥವಾ ಶಿಕ್ಷಕರಲ್ಲಿ ಕೇಳಿ ತಿಳಿದುಕೊಳ್ಳುತ್ತಿದ್ದೆ.
ಯಾವುದೇ ವಿಷಯದ ಕುರಿತು ನನ್ನ ಸ್ನೇಹಿತರಿಗೆ ಗೊಂದಲಗಳಿದ್ದರೆ, ಅವುಗಳನ್ನು ಅವರಿಗೆ ಅರ್ಥ ಮಾಡಿಸುವ ಪ್ರಯತ್ಮ ಮಾಡುತ್ತಿದ್ದೆ ಇದರಿಂದ ನನಗೆ ಆ ವಿಷಯದ ಕುರಿತು ಜ್ಞಾನ ಹೆಚ್ಚಾಗುತ್ತಿತ್ತು. ನಾನು ಚನ್ನಾಗಿ ಓದಿ ಹೆಚ್ಚು ಅಂಕ ಗಳಿಸುತ್ತೇನೆ ಎನ್ನುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಿದ್ದೆ. ನೀವು ಕೂಡ ಈ ರೀತಿಯಲ್ಲಿ ದೃಢ ಸಂಕಲ್ಪವನ್ನು ಮಾಡುವ ಮೂಲಕ SSLC ಬೋರ್ಡ್ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ.
SSLC Study Tips ಕೊನೆಯ ಮಾತು:
ವಿದ್ಯಾರ್ಥಿಗಳೇ, ಯಾವುದೇ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೂ, ಪಾಸ್ಪೋರ್ಟ್ ಮಾಡಿಸಬೇಕಾದರೂ, ಉತ್ತಮ ಹುದ್ದೆಯನ್ನು ಪಡೆದುಕೊಳ್ಳಬೇಕಾದರು SSLC ಅಂಕಪಟ್ಟಿ ಅತಿ ಮುಖ್ಯವಾಗಿರುತ್ತದೆ ನೀವು ಎಷ್ಟೇ ಪದವಿ ಪಡೆದರೂ ಕೂಡ SSLC ಅಂಕ ಪಟ್ಟಿಯನ್ನು ಕೇಳಿಯೇ ಕೇಳುತ್ತಾರೆ.
ಇದು ನಿಮ್ಮ ಉನ್ನತ ಶೈಕ್ಷಣಿಕ ಜೀವನದಲ್ಲಿನ ಮೊದಲ ಹೆಜ್ಜೆಯಾಗಿದೆ. ಈ ಮೊದಲ ಹೆಜ್ಜೆಯನ್ನು ಸರಿಯಾಗಿ ಇಟ್ಟರೆ ನಂತರ ಎಲ್ಲವು ಸುಲಭವಾಗಿರುತ್ತದೆ. SSLC ಪರೀಕ್ಷಾ ಸಮಯವೂ ಹತ್ತಿರ ಬರುತ್ತಿದೆ ಪರೀಕ್ಷೆಯ ಕುರಿತು ಹೆಚ್ಚಿನ ಯೋಚನೆ ಮಾಡದೆ ಓದುವ ಕಡೆ ಹೆಚ್ಚಿನ ಗಮನ ಹರಿಸಿರಿ. ಉತ್ತಮ ರೀತಿಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ. ನೀವು ಪಟ್ಟ ಪರಿಶ್ರಮಕ್ಕೆ ನಿಮಗೆ ಒಳ್ಳೆಯ ಯಶಸ್ಸು ಸಿಗಲಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ನೀವು ಓದಿರುವ ವಿಷಯವನ್ನು ಕೀ ಪಾಯಿಂಟ್ ಮಾಡಿಕೊಳ್ಳುವುದು ಹಾಗೂ ಓದಿದ್ದೆಲ್ಲವನ್ನು ಒಮ್ಮೆ ಬರೆದು ಪ್ರಾಕ್ಟೀಸ್ ಮಾಡುವುದು (SSLC Study Tips) ಮುಖ್ಯ ಇಲ್ಲದಿದ್ದರೆ ಓದಿದ್ದೆಲ್ಲವೂ ನೆನಪಿನಲ್ಲಿ ಉಳಿಯುವುದಿಲ್ಲ.
ಪ್ರತಿದಿನ ಕನಿಷ್ಠ 6-8 ಗಂಟೆಗಳಾದರೂ ಓದಿಗೆ ಮೀಸಲಿಡಿ.
ಅಂದಿನ ಪಾಠವನ್ನು ಅಂದೇ ಓದುವುದರಿಂದ ಆ ಪಾಠವನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ ಹಾಗೂ ಓದಿರುವುದು ನೆನಪಿನಲ್ಲಿಯೂ ಉಳಿಯುತ್ತದೆ.
ಹೌದು, ಏಕೆಂದರೆ ಕಳೆದ ಸಾಲಿನ ಪ್ರಶ್ನೆ ಪತ್ರಿಕೆಯಲ್ಲಿರುವ ಕೆಲವು ಪ್ರಶ್ನೆಗಳು ಈ ವರ್ಷ ಪ್ರಶ್ನೆ ಪತ್ರಿಕೆಯಲ್ಲಿ ಪುನರಾವರ್ತನೆ ಆಗುವ ಸಾಧ್ಯತೆಗಳಿರುತ್ತದೆ ಹಾಗೂ ಯಾವ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳು ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಸಹಾಯವಾಗಿತ್ತದೆ.
ಇತರೆ ಪ್ರಮುಖ ಲಿಂಕುಗಳು:
- IIMB: ಐಐಎಂಬಿ ಬೆಂಗಳೂರು ಸಂಸ್ಥೆಯಲ್ಲಿ ಭರ್ಜರಿ ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿ
- Karnataka SDA & FDA: ಭರ್ಜರಿ ನೇಮಕಾತಿ 2026! ಸರ್ಕಾರಿ ಉದ್ಯೋಗ ಕನಸಿಗೆ ಸುವರ್ಣಾವಕಾಶ!
- SSLC Timetable 2026 : ವೇಳಾಪಟ್ಟಿ ಪ್ರಕಟ :ಭಯ ಬೇಡ… ನಿಮ್ಮ ಗೆಲುವಿನ ಸಮಯ ಶುರು! ಹೀಗೆ ಓದಿದ್ರೆ ಪಾಸ್ ಆಗೋದು ಪಕ್ಕಾ!
- Vivo Scholarship: ರೂ.60,000/- ಕನ್ಯಾಜ್ಞಾನ ವಿದ್ಯಾರ್ಥಿವೇತನ – ತಕ್ಷಣ ಅಪ್ಲೈ ಮಾಡಿ!

