Labour Card Benefits: ಲೇಬರ್ ಕಾರ್ಡ್ ಇದ್ದರೆ ಸಾಕು! ಸರ್ಕಾರದಿಂದ ಲಕ್ಷಾಂತರ ಸೌಲಭ್ಯಗಳು – ಸಂಪೂರ್ಣ ಮಾಹಿತಿ ಇಲ್ಲಿದೆ

Labour Card Benefits

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಲೇಬರ್ ಕಾರ್ಡ್ ಹೊಂದಿದ್ದೀರಾ? ನಿಮ್ಮಲ್ಲಿರುವ ಈ ಲೇಬರ್ ಕಾರ್ಡ್ ಇಂದ ಏನೆಲ್ಲಾ ಸೌಲಭ್ಯಗಳು ಲಭಿಸುತ್ತದೆ ಎಂದು ನಿಮಗೆ ತಿಳಿದಿದೆಯಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ. ನೀವೇನಾದರೂ ಲೇಬರ್ ಕಾರ್ಡ್ ಹೊಂದಿದ್ದರೆ, ಈ ಒಂದು ಲೇಬರ್ ಕಾರ್ಡ್ ಮೂಲಕ ಸರ್ಕಾರದಿಂದ ಒಂದಲ್ಲ ಎರಡಲ್ಲ ನೂರಾರು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡರೆ ನೀವು ಅಚ್ಚರಿ ಪಡುವುದು ಪಕ್ಕ!

Labour Card Benefits in Kannada

ಕರ್ನಾಟಕ ಸರ್ಕಾರವು ರಾಜ್ಯದ ಕಾರ್ಮಿಕರ ಇಲಾಖೆಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ ಸಾಕಷ್ಟು ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸುವ ಭರವಸೆಯನ್ನು ನೀಡುತ್ತಲೇ ಬಂದಿದೆ. ಅಲ್ಲದೆ, ಕೆಲವು ಯೋಜನೆಗಳಿಗೆ ಈಗಲೂ ಸಹ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅವುಗಳ ಬಗ್ಗೆ ಕೆಳಗಿನ ಹಂತದಲ್ಲಿ ಮಾಹಿತಿಯನ್ನು ಪಡೆದುಕೊಳ್ಳೋಣ.

ಸರ್ಕಾರವು ನೋಂದಾಯಿತ ಕಾರ್ಮಿಕರಿಗೆ ಕೇವಲ ಕೆಲಸಮಾಡುತ್ತಿರುವ ಸಂದರ್ಭದಲ್ಲಿ ಮಾತ್ರ ಹಣಕಾಸಿನ ನೆರವನ್ನು ನೀಡದೆ ವೃದ್ಧಾಪ್ಯದಲ್ಲೂ ಕೂಡ ಹಣಕಾಸಿನ ನೆರವನ್ನು ನೀಡುತ್ತಿದೆ. ಜೊತೆಗೆ ಕೇವಲ ಕಾರ್ಮಿಕರಿಗೆ ಮಾತ್ರವಲ್ಲದೆ ಕಾರ್ಮಿಕರ ಮಕ್ಕಳಿಗೂ ಹಾಗೂ ಅವರ ಕುಟುಂಬದವರಿಗೂ ಕೂಡ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವಕಾಶ ಕಲ್ಪಿಸಿದೆ.

ಕಾರ್ಮಿಕರಿಗೆ ಸರ್ಕಾರದಿಂದ ಈ ಎಲ್ಲಾ ಸೌಲಭ್ಯಗಳು ದೊರೆಯುತ್ತಿದ್ದರೂ ಕೂಡ ಇವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ವಿಫಲಗುತ್ತಾರೆ. ಆದರೆ ಈ ಒಂದು ಲೇಖನದ ಮೂಲಕ ಕಾರ್ಮಿಕರಿಗಾಗಿ ಯಾವೆಲ್ಲ ಯೋಜನೆಗಳು ಜಾರಿಯಲ್ಲಿದೆ? ಈ ಎಲ್ಲಾ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಲೇಬರ್ ಕಾರ್ಡ್ ಎಷ್ಟು ಅಗತ್ಯ? ಲೇಬರ್ ಕಾರ್ಡ್ ಪಡೆಯಬೇಕೇದರೆ ಹೇಗೆ ಅರ್ಜಿ ಸಲ್ಲಿಸಬೇಕು? ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಕಾರ್ಮಿಕರ ನೆರವಿಗೆಂದೇ ಇರುವ ವಿವಿಧ ಯೋಜನೆಗಳಲ್ಲಿ ಒಂದೊಂದು ಯೋಜನೆಗಳ ಬಗ್ಗೆ ಪ್ರತ್ಯೇಕ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

Labour Card Benefits

Labour Card Benefits ಪ್ರಮುಖ ಹೈಲೈಟ್ಸ್:

1. ನೀವೇನಾದರೂ ಲೇಬರ್ ಕಾರ್ಡ್ ಹೊಂದಿದ್ದರೆ ನಿಮಗೂ ಸಿಗಲಿದೆ ಫ್ರೀ ಟೂಲ್ ಕಿಟ್.
2. ಕಾರ್ಮಿಕರ ಇಬ್ಬರು ಮಕ್ಕಳ ಮದುವೆಗೆ ಸಿಗಲಿದೆ ಭಾರಿ ಮೊತ್ತದ ಸಹಾಯಧನ.
3. ಲೇಬರ್ ಕಾರ್ಡ್ ಇದ್ದರೆ ವೃದ್ಧಾಪ್ಯದಲ್ಲೂ ಕೂಡ ಸರ್ಕಾರದಿಂದ ಸಿಗಲಿದೆ ಆರ್ಥಿಕ ಸಹಾಯಧನ.
4. ಲೇಬರ್ ಕಾರ್ಡ್ ಮೂಲಕ ಸಾಕಷ್ಟು ಯೋಜನೆಗೆ ಅರ್ಜಿ ಸಲ್ಲಿಸಿ ಲಾಭವನ್ನು ಪಡೆದುಕೊಳ್ಳಲು (Labour Card Benefits) ಅವಕಾಶ.

ಕಾರ್ಮಿಕರಿಗೆ ಲೇಬರ್ ಕಾರ್ಡ್ ಏಕೆ ಅವಶ್ಯಕ?

ಕಾರ್ಮಿಕರಿಗೆ ಲೇಬರ್ ಕಾರ್ಡ್ ಎನ್ನುವುದು ಕೇವಲ ಒಂದು ಗುರುತಿನ ಚೀಟಿ ಮಾತ್ರವಲ್ಲದೆ ಅವರಿಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಭದ್ರತೆಯನ್ನು ಒದಗಿಸಲು ಇರುವ ಒಂದು ಪ್ರಮುಖ ಸಾಧನವಾಗಿದೆ. ಕಾರ್ಮಿಕರು ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕಾದರೆ ಲೇಬರ್ ಕಾರ್ಡ್ ಮುಖ್ಯವಾಗಿದೆ.

ಈ ಒಂದು ಲೇಬರ್ ಕಾರ್ಡ್ ಇಂದ ಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು, ಸಂಕಷ್ಟ ಸಮಯದಲ್ಲಿ ನೆರವನ್ನು ಪಡೆಯಲು, ವೃದ್ದಾಪ್ಯ ಸಮಯದಲ್ಲಿ ಪಿಂಚಣಿ ಹಣವನ್ನು ಪಡೆಯಲು, ಕಾರ್ಮಿಕರು ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸಹಾಯವಾಗುತ್ತದೆ.

ಕಾರ್ಮಿಕರಿಗೆ ಲೇಬರ್ ಕಾರ್ಡ್ ನಿಂದ ಸಿಗುವ ಸೌಲಭ್ಯಗಳು:

ಕಾರ್ಮಿಕರು ಕೆಳಗೆ ನೀಡಿರುವ ಈ ಎಲ್ಲಾ ಸೌಲಭ್ಯಗಳನ್ನು (Labour Card Benefits:) ಪಡೆದುಕೊಳ್ಳಬೇಕಾದರೆ ಲೇಬರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

1. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ಪಡೆದುಕೊಳ್ಳಬಹುದು:

ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂದರೆ, ಮಕ್ಕಳ ಶಾಲಾ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣ ಪಡೆಯುವ ವರೆಗೂ ‘ಕಲಿಕಾ ಭಾಗ್ಯ ಯೋಜನೆ’ಯಡಿಯಲ್ಲಿ ₹1,000 ದಿಂದ ಹಿಡಿದು ₹20,000 ದ ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

2. ಕಾರ್ಮಿಕರ ವಿವಾಹಕ್ಕೆ ಸಹಾಯಧನವನ್ನು ಪಡೆದುಕೊಳ್ಳಬಹುದು:

ಕಾರ್ಮಿಕರು ತಮ್ಮ ವಿವಾಹಕ್ಕೆ ಅಥವಾ ತಮ್ಮ ಮಕ್ಕಳ ವಿವಾಹಕ್ಕೆ ‘ವಿವಾಹ ಸಹಾಯಧನ ಯೋಜನೆ’ಯಡಿಯಲ್ಲಿ ₹60,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಹಾಯಧನವನ್ನು ಪಡೆದುಕೊಳ್ಳಲು ಹೆಣ್ಣು ಮಕ್ಕಳು ಕನಿಷ್ಠ 18 ಹಾಗೂ ಗಂಡು ಮಕ್ಕಳು ಕನಿಷ್ಠ 21 ವರ್ಷ ವಯೋಮಿತಿಯನ್ನು ಹೊಂದಿರಬೇಕು.

3. ಉಚಿತ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳಬಹುದು:

ಕಾರ್ಮಿಕರು ಅಥವಾ ಅವರ ಮೇಲೆ ಅವಲಂಬಿತರಾಗಿರುವ ಕುಟುಂಬದ ಸದಸ್ಯರು ಸಾಧಾರಣ ಕಾಯಿಲೆಗಳಿಗೆ ಅಂದರೆ ಅನಾರೋಗ್ಯ ಸಮಸ್ಯೆಯಿಂದ ಸತತ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ‘ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ’ಯಡಿಯಲ್ಲಿ ದಿನಕ್ಕೆ ₹300 ರಂತೆ ಒಟ್ಟು ₹20,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಕಾರ್ಮಿಕರು ಅಥವಾ ಅವರ ಅವಲಂಬಿತ ಕುಟುಂಬದ ಸದಸ್ಯರೆನಾದರೂ ಕಿಡ್ನಿ ಕಸಿ, ಹೃದಯ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ಗಳಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದರೆ ‘ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆ’ಯಡಿಯಲ್ಲಿ ₹2,00,000 ದ ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು.

4. ಹೆರಿಗೆ ಮಾಡಿಸಿಕೊಳ್ಳಲು ಸಹಾಯಧನವನ್ನು ಪಡೆದುಕೊಳ್ಳಬಹುದು:

‘ಪ್ರಸವ ಸಹಾಯಧನ ಯೋಜನೆ’ಯಡಿಯಲ್ಲಿ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಅಥವಾ ನೋಂದಾಯಿತ ಕಾರ್ಮಿಕನ ಪತ್ನಿಗೆ ಪ್ರಸವ ಸಮಯದಲ್ಲಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿಯಲ್ಲಿ ನೋಂದಾಯಿತ ಮಹಿಳಾ ಕಾರ್ಮಿಕರು ₹30,000 ಹಾಗೂ ನೋಂದಾಯಿತ ಕಾರ್ಮಿಕನ ಪತ್ನಿ ₹6,000 ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ನೋಂದಾಯಿತ ಮಹಿಳಾ ಕಾರ್ಮಿಕರ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಮಂಡಳಿಯಲ್ಲಿ ಕನಿಷ್ಠ 1 ವರ್ಷ ಸದಸ್ಯತ್ವವನ್ನು ಹೊಂದಿರಬೇಕು ಹಾಗೂ ಈ ಯೋಜನೆಯು ಮೊದಲ ಇಬ್ಬರು ಮಕ್ಕಳಿಗೆ ಮಾತ್ರ ಅನ್ವಹಿಸುತ್ತದೆ.

5. ಉಪಕರಣ ಖರೀದಿಗೆ ಸಹಾಯಧನ ಪಡೆದುಕೊಳ್ಳಬಹುದು:

Labour Card Benefits: ಕಾರ್ಮಿಕರು ‘ಟೂಲ್ ಕಿಟ್ ವಿತರಣಾ ಯೋಜನೆ‘ಯಡಿಯಲ್ಲಿ ತಮ್ಮ ಕೆಲಸಕ್ಕೆ ಅಗತ್ಯವಾದ ಪರಿಕರಗಳನ್ನೊಳಗೊಂಡ ಟೂಲ್ ಕಿಟ್ ಪಡೆಯಲು ಅರ್ಹರಾಗಿರುತ್ತಾರೆ. ಈ ಟೂಲ್ ಕಿಟ್ ₹20,000 ರೂ ಮೌಲ್ಯದ ಉಪಕರಣಗಳನ್ನು ಒಳಗೊಂಡಿದೆ.

6. ವೃದ್ದಾಪ್ಯದಲ್ಲಿ ಪಿಂಚಣಿ ಸೌಲಭ್ಯ:

ಕಾರ್ಮಿಕರಿಗೆ ‘ಕಾರ್ಮಿಕ ಪಿಂಚಣಿ ಯೋಜನೆ’ಯಡಿಯಲ್ಲಿ ಕಾರ್ಮಿಕರು ಇಷ್ಟು ವರ್ಷದಲ್ಲಿ ತಾವು ಸಲ್ಲಿಸಿದ ಸೇವೆಗೆ ಪ್ರತಿಯಾಗಿ ಸರ್ಕಾರವು ಗೌರವ ಸಮರ್ಪಕವಾಗಿ ಕಾರ್ಮಿಕರಿಗೆ ವೃದ್ದಾಪ್ಯ ಸಮಯದಲ್ಲಿ ₹3,000 ಪಿಂಚಣಿ ಹಣವನ್ನು ನೀಡುತ್ತಿದ್ದು, ಕುಟುಂಬದ ಯಾವುದೇ ಸದಸ್ಯರ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿದೆ. 60 ವರ್ಷ ಪೂರೈಸಿದ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

7. ಕಾರ್ಮಿಕರಿಗೆ ಅಪಘಾತ ಸಮಯದಲ್ಲಿ ನೆರವು:

ಕಾರ್ಮಿಕರು ಕೆಲಸದಲ್ಲಿ ನಿರತರಾಗಿರುವಾಗ ಅಪಘಾತ ಸಂಭವಿಸಿದರೆ ಅಥವಾ ಮರಣ ಹೊಂದಿದರೆ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಧನ ಹಾಗೂ ವಿಮೆ ಲಭಿಸುತ್ತದೆ.

ಕಾರ್ಮಿಕರು ಲೇಬರ್ ಕಾರ್ಡ್ ಪಡೆಯಲು ಹೊಂದಿರಬೇಕಾದ ಅರ್ಹತಾ ಮಾನದಂಡಗಳೇನು?

ನೀವೇನಾದರೂ ಕಾರ್ಮಿಕರ ಕಾರ್ಡ್ ಹೊಂದಬೇಕಾದರೆ ಈ ಕೆಳಗೆ ನೀಡಿರುವ ಅರ್ಹತಾ ಮಾನದಂಡವನ್ನು ಪೂರೈಸಿರಬೇಕು. ಅವುಗಳೆಂದರೆ,

  • ಭಾರತದ ಪ್ರಜೆಯಾಗಿರಬೇಕು.
  • ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು.
  • ಕಾರ್ಮಿಕರು ಕನಿಷ್ಠ 18 ರಿಂದ ಗರಿಷ್ಟ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಕಾರ್ಮಿಕರು ಹಿಂದಿನ ಒಂದು ವರ್ಷದಲ್ಲಿ ಕನಿಷ್ಠ 90 ದಿನವಾದರೂ ಯಾವುದೇ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು.
  • ಕಾರ್ಮಿಕರ ಮಾಸಿಕ ವೇತನವು ₹15,000 ಮೀರಿರಬಾರದು.
ವಿಶೇಷ ಸೂಚನೆ: “ಕಾರ್ಮಿಕರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ, ಅಂತಹ ಕಾರ್ಮಿಕರು ಲೇಬರ್ ಕಾರ್ಡ್ ಹೊಂದಲು ಅರ್ಹರಲ್ಲ.

ಕಾರ್ಮಿಕರು ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಕುಟುಂಬ ಸದಸ್ಯರ ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ವಯಸ್ಸಿನ ಪುರಾವೆ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಇಮೇಲ್ ಐಡಿ
  • ಪಡಿತರ ಚೀಟಿ

ಅರ್ಜಿ ಸಲ್ಲಿಸುವ ವಿಧಾನ:

ನೀವೇನಾದರೂ ಕಾರ್ಮಿಕರಾಗಿದ್ದು, ಇನ್ನು ಲೇಬರ್ ಕಾರ್ಡ್ ಹೊಂದಿಲ್ಲವೇ? ಹಾಗಿದ್ದರೆ ಈ ಕೆಳಗೆ ನೀಡಿರುವ ವಿಧಾನಗಳ ಮೂಲಕ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ. ನೀವು ಕೂಡ ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಲೇಬರ್ ಕಾರ್ಡ್ Labour Card Benefits ಗೆ ಅರ್ಜಿ ಸಲ್ಲಿಸುವವರು ಅಧಿಕೃತ ವೆಬ್ ಸೈಟ್ https://labour.karnataka.gov.in/ ಗೆ ಭೇಟಿ ನೀಡಿ
  • ಆನ್ಲೈನ್ ನೋಂದಣಿ ಹಾಗೂ ನವೀಕರಣ ಆಯ್ಕೆಯನ್ನು ಕ್ಲಿಕ್ ಮಾಡಿ, ಕಾರ್ಮಿಕರ ಕಾಯ್ದೆ ನಿರ್ವಹಣೆಯಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
  • ನಂತರ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಲು ಹೊಸ ನೋಂದಣಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ನೋಂದಣಿ ಪೂರ್ಣಗೊಳಿಸಿ.
  • ನಂತರ, ಸ್ವ ವಿವರ ಹಾಗೂ ಇತರೆ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿಮಾಡಿ.
  • ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ. ನಂತರ ₹25 ಅರ್ಜಿ ಶುಲ್ಕವನ್ನು ಪಾವತಿಸಿ.
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಹೊಸ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿ ಪ್ರತಿಯನ್ನು ಕೇಳಿ ಪಡೆಯಿರಿ.
  • ನಂತರ ಅರ್ಜಿಯಲ್ಲಿ ನಿಮ್ಮ ಹೆಸರು, ಪೂರ್ಣ ವಿಳಾಸ ,ಕುಟುಂಬದ ಸದಸ್ಯರ ವಿವರಗಳು ಮತ್ತು ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಸ್ಪಷ್ಟವಾಗಿ ಬರೆಯಿರಿ.
  • ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
  • ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಅರ್ಜಿ ಪ್ರತಿಯನ್ನು ಕಚೇರಿಗೆ ಸಲ್ಲಿಸಿ, ಕೊನೆಯಲ್ಲಿ ನೀಡಲಾಗುವ ‘ಸ್ವೀಕೃತಿ ಪತ್ರ’ (Acknowledgment Receipt) ಪಡೆದುಕೊಳ್ಳಿ.

ಕೊನೆಯ ಮಾತು:

ಕಾರ್ಮಿಕರು ಯಾವುದೇ ಯೋಜನೆಯಡಿಯಲ್ಲಿ ಲಾಭವನ್ನು (Labour Card Benefits) ಪಡೆದುಕೊಳ್ಳಬೇಕಾದರೂ ಕೂಡ ಲೇಬರ್ ಕಾರ್ಡ್ ಮುಖ್ಯವಾಗಿದ್ದು, ನೀವು ಇನ್ನೂ ಕೂಡ ಲೇಬರ್ ಕಾರ್ಡ್ ಹೊಂದಿಲ್ಲವಾದರೆ ಈ ಮೇಲೆ ನೀಡಲಾಗಿರುವ ಎಲ್ಲಾ ಅರ್ಹತೆಗಳನ್ನು ಪೂರೈಸುತ್ತೀರೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಮಿಕರ ಇಲಾಖೆಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ಸಿಗುವ ಅನೇಕ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳಿ. ನೀವು ಒಂದು ವೇಳೆ ಲೇಬರ್ ಕಾರ್ಡ್ ಹೊಂದಿಲ್ಲವಾದರೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅನರ್ಹರಾಗಿರುತ್ತೀರಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ಇಲ್ಲ, ಲೇಬರ್ ಕಾರ್ಡ್ ಹೊಂದಿದ್ದರೆ ಮಾತ್ರ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕಾರ್ಮಿಕರು ಕನಿಷ್ಠ 18 ರಿಂದ ಗರಿಷ್ಟ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ಮಹಿಳಾ ಕಾರ್ಮಿಕರು ಪ್ರಸವ ಸಹಾಯಧನ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಕನಿಷ್ಠ 1 ವರ್ಷ ಮಂಡಳಿಯ ಸದಸ್ಯತ್ವವನ್ನು ಹೊಂದಿರಬೇಕು.

ಕಾರ್ಮಿಕ ಪಿಂಚಣಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು 60 ವರ್ಷ ಪೂರೈಸಿದ ಕಾರ್ಮಿಕರು ಅರ್ಹರಾಗಿರುತ್ತಾರೆ.


ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *