Tata Scholarship : ನಾಳೆ ಕೊನೆಯದಿನ ! ಟಾಟಾ ಸ್ಕಾಲರ್‌ಶಿಪ್‌ಗೆ ವಿದ್ಯಾರ್ಥಿಗಳು ಈಗ್ಲೆಅಪ್ಲೈ ಮಾಡಿ!

Tata Scholarship

ಭಾರತದ ಅತಿ ದೊಡ್ಡ ಮತ್ತು ವಿಶ್ವಾಸಾರ್ಹ ಬಹುರಾಷ್ಟ್ರೀಯ ವ್ಯಾಪಾರ ಸಂಸ್ಥೆಯಾದ ಟಾಟಾ ಕ್ಯಾಪಿಟಲ್ (Tata Capital) ಮಾಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊಡ್ಡ ಬೆಂಬಲ ನೀಡಲು ಮುಂದಾಗಿದೆ. ಟಾಟಾ ತನ್ನ ಪಂಖ್ (Pankh) ಯೋಜನೆ ಅಡಿ ₹1,00,000 ವರೆಗಿನ ಬಾರಿ ಮೊತ್ತದ ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.

ಮಗುವಿನಲ್ಲಿ ಬುದ್ದಿವಂತಿಕೆ ಇದ್ದರು ಸಹ ಕೇವಲ ಹಣದ ಕೊರತೆಯಿಂದಾಗಿ ಎಷ್ಟೋ ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಪೋಷಕರಿಗೆ ನೆರವಾಗಲು ವಿದ್ಯಾರ್ಥಿಯ ಕನಸಿಗೆ ಮತ್ತಷ್ಟು ಹುರುಪು ತುಂಬಲು ಟಾಟಾ ಈ ಪ್ರೋತ್ಸಹಧನ ನೀಡುತ್ತಿದ್ದೆ 2025- 26 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ನೀವು ಸಿದ್ಧರಾಗಿದ್ದರೆ ಈ ಸಂಸ್ಥೆಯ ಆರ್ಥಿಕ ಸಹಾಯಧನವನ್ನುಪಡೆದುಕೊಳ್ಳಬಹುದು.

ಈ ಸ್ಕಾಲರ್ಶಿಪ್ ನೀವು ಪಡೆದುಕೊಳ್ಳಬಹುದೇ? ಏನೆಲ್ಲ ದಾಖಲೆಗಳು ಬೇಕು? ಎಷ್ಟು ಪ್ರೋತ್ಸಾಹ ಧನ ಸಿಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ ಸಂಪೂರ್ಣವಾಗಿ ಓದಿ ನೀವು ಇದರ ಉಪಯೋಗ ಪಡೆದುಕೊಳ್ಳಿ

Tata Scholarship

ವಿದ್ಯಾರ್ಥಿಗಳೇ ಗಮನಿಸಿ:-

ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್ ಕ್ಕೆ ಕೇವಲ ಒಂದೇ ದಿನ ಬಾಕಿ ಇದ್ದುಈಗಲೀ ಅರ್ಜಿ ಸಲ್ಲಿಸಿ ಈ ಬೃಹತ್ ವಿದ್ಯಾರ್ಥಿ ವೇತನವನ್ನು ನಿಮ್ಮದಾಗಿಸಿಕೊಳ್ಳಿ

ಏನಿದು ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿ ವೇತನ:-

ದೇಶದ ಪ್ರತಿಷ್ಠಿತ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೆಂಬಲ ತುಂಬುವುದು ಮಧ್ಯದಲ್ಲೇ ಓದು ನಿಲ್ಲಿಸದಂತೆ ನೆರವು ನೀಡುವುದು ಈ ಯೋಜನೆ ಪ್ರಮುಖ ಉದ್ದೇಶವಾಗಿದೆ.

ಟಾಟಾ ವಿದ್ಯಾರ್ಥಿ ವೇತನವು ಆರ್ಥಿಕವಾಗಿ ದುರ್ಬಲ ಸಾಮಾಜಿಕ ವಿಭಾಗಗಳಿಗೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಬಲೀಕರಣ ಗೊಳಿಸುವ ಗುರಿಯನ್ನು ಹೊಂದಿದೆ ಈ ಟಾಟಾ ವಿದ್ಯಾರ್ಥಿ ವೇತನವನ್ನು ಟಾಟಾ ಗ್ರೂಪ್ ನ ಹಣಕಾಸು ಸೇವಾ ಕಂಪನಿಯಾದ ಟಾಟಾ ಕ್ಯಾಪಿಟಲ್ ಲಿಮಿಟೆಡ್ ತನ್ನ ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಉಪಕ್ರಮದ ಭಾಗವಾಗಿ ನೀಡುತ್ತದೆ.

ವಿದ್ಯಾರ್ಥಿವೇತನದ ಕಿರು ಪರಿಚಯ:-

ವಿದ್ಯಾರ್ಥಿವೇತನದ ಹೆಸರು ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್(Tata Capital Pankh Scholarship)
ಫಲಾನುಭವಿಗಳುಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್
ಶೈಕ್ಷಣಿಕ ವರ್ಷ2025-26

ಯಾವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗಲಿದೆ?

2026 27 ನೇ ಸಾಲಿನಲ್ಲಿ ನಂಬಿಕೆಯ ಸಂಸ್ಥೆಯಾದ ಟಾಟಾ ನೀಡುತ್ತಿರುವ ವಿದ್ಯಾರ್ಥಿ ವೇತನವು ಈ ಕೆಳಗೆ ನೀಡಿರುವ ವಿದ್ಯಾರ್ಥಿಗಳಿಗೆ ಸಿಗುತ್ತದೆ

  • ಪಿಯುಸಿ:- 11 ಮತ್ತು 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸಹಾಯಧನವು ಲಭಿಸುತ್ತದೆ
  • ಸಾಮಾನ್ಯ ಪದವಿ:– BA BSc BCom BBA BBM ಮತ್ತು ಇತರೆ ಸಾಮಾನ್ಯ ಪದವಿ ಕೋರ್ಸ್ ಗಳು
  • ವೃತ್ತಿಪರ ಪದವಿ:– ಇಂಜಿನಿಯರಿಂಗ್, MBBS Nursing Diploma ITI ಇತರೆ ವೃತ್ತಿಪರ ಕೋರ್ಸ್ ಗಳು

ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಮೊತ್ತ ಸಿಗುತ್ತದೆ ಗೊತ್ತಾ ?

ಪ್ರಿಯ ವಿದ್ಯಾರ್ಥಿಗಳೇ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸ್ಕಾಲರ್ಶಿಪ್ (Scholarship) ವಿವರಗಳನ್ನು ಈ ಕೆಳಗೆಸಂಕ್ಷಿಪ್ತವಾಗಿ ವಿವರಿಸುತ್ತೇನೆ. ಈ ರೀತಿಯಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರ್ಕಾರದಿಂದ ಸ್ಕಾಲರ್ಶಿಪ್ ಹಣವು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಈ ಸ್ಕಾಲರ್ಶಿಪ್(Scholarship) ಮಾತ್ರದಲ್ಲಿ ಯಾವುದೇ ವಿದ್ಯಾರ್ಥಿಗಳಿಗೂ ಭೇದಭಾವ ಇರುವುದಿಲ್ಲ ನೀವು ಪಡೆದಂತಹ ಅಂಕದ ಮೇಲೆ ಈ ವಿದ್ಯಾರ್ಥಿವೇತನವು ನಿರ್ಧಾರವಾಗಿರುತ್ತದೆ.

1. ಪಿಯುಸಿ ವಿದ್ಯಾರ್ಥಿಗಳಿಗೆ:-

ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಅದ್ಭುತ ಅವಕಾಶವಾಗಿದ್ದು ಶಿಕ್ಷಣ ಸಂಸ್ಥೆಯಲ್ಲಿ 11 ಅಥವಾ 12ನೇ ತರಗತಿಗೆ ಪ್ರವೇಶ ಪಡೆದಿರಬೇಕು

ಸಿಗುವ ಆರ್ಥಿಕ ಸಹಾಯ ಧನ:-

  • 60% – 80% ಅಂಕ ಪಡೆದವರಿಗೆ 10,000/-
  • 81% – 90% ಪಡೆದವರಿಗೆ 12,000/-
  • 91% ಮತ್ತು ಹೆಚ್ಚು ಅಂಕ ಪಡೆದವರಿಗೆ 15,000/-

ಅರ್ಹತೆ:-

  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು
  • ಹಾಗೂ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2.50,000 ಲಕ್ಷಕ್ಕಿಂತ ಕಡಿಮೆ ಇರಬೇಕು
  • ವಿದ್ಯಾರ್ಥಿ ಭಾರತಿಯ ನಾಗರಿಕರಾಗಿರಬೇಕು

2.ಸಾಮಾನ್ಯ ಪದವಿ:-

BA, BSc, BCom, BBA, BBM, ಮತ್ತು ಇತರೆ ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ

ಸಿಗುವ ಆರ್ಥಿಕ ಸಹಾಯ ಧನ:-

  • 60% – 80% ಅಂಕ ಪಡೆದವರಿಗೆ 12,000/-
  • 81% – 90% ಪಡೆದವರಿಗೆ 15,000/-
  • 91% ಮತ್ತು ಹೆಚ್ಚು ಅಂಕ ಪಡೆದವರಿಗೆ 18000/-

ಅರ್ಹತೆ:-

  • ಮಾನ್ಯತೆ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರಬೇಕು
  • ಹಿಂದಿನ ತರಗತಿ ಅಥವಾ ಸೆಮಿಸ್ಟರ್ ನಲ್ಲಿ60% ಅಂಕ ಗಳಿಸಿರಬೇಕು

ವೃತ್ತಿಪರ ಪದವಿ:-

ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಮೆಡಿಕಲ್ ನರ್ಸಿಂಗ್ ಡಿಪ್ಲೋಮೋ ಇತ್ಯಾದಿ ವೃತ್ತಿಪರ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಅವರ ಬದುಕಿಗೆ ಮುನ್ನುಡಿ ಬರೆಯಲಿದೆ

ಸಿಗುವ ಆರ್ಥಿಕ ಸಹಾಯ ಧನ:-

  • 60% – 80% ಅಂಕ ಪಡೆದವರಿಗೆ – 20,000 ದಿಂದ 40,000/-
  • 81% – 90% ಪಡೆದವರಿಗೆ- 40000 ದಿಂದ 70,000/-
  • 91% ಮತ್ತು ಹೆಚ್ಚು ಅಂಕ ಪಡೆದವರಿಗೆ- 70,000 ದಿಂದ 1 ಲಕ್ಷದ ವರೆಗೆ

ಅರ್ಹತೆ:-

  • ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು
  • ವಿದ್ಯಾರ್ಥಿ ಭಾರತೀಯ ಪ್ರಜೆಯಾಗಿರಬೇಕು

ಟಾಟಾ ಸಂಸ್ಥೆಯ ಉದ್ದೇಶ (Purpose) :-

  • ಕರ್ನಾಟಕದ ಅನೇಕ ಕುಟುಂಬಗಳು ತಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೊನೆಗೊಳಿಸಲು ಮುಂದಾಗುತ್ತಾರೆ ಅಥವಾ ವಿದ್ಯಾರ್ಥಿಗಳೇ ಅರ್ಧಕ್ಕೆ ತಮ್ಮ ಶಿಕ್ಷಣವನ್ನು ಮುಗಿಸಲು ಯೋಚಿಸುತ್ತಾರೆ. ಇಂತಹ ವಿಷಯಕ್ಕಾಗಿಯೇ ಸರ್ಕಾರ ಈ ಕುಟುಂಬಗಳಿಗೆ ನೆರವು ನೀಡಲು ಯಾವುದೇ ವಿದ್ಯಾರ್ಥಿಯಾದರು ತನ್ನ ಶಿಕ್ಷಣವನ್ನ ಪೂರ್ಣವಾಗಿ ಮುಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನುಸಿದ್ಧಪಡಿಸಿದೆ.
  • ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ(Scholarship) ಕೊಟ್ಟು ಮುಂದಿನ ಶಿಕ್ಷಣಕ್ಕೆ ಅವರನ್ನು ಉತ್ತೇಜಿಸುವುದು.
  • ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಹಾಗೆ ವೃತ್ತಿಪರ ಶಿಕ್ಷಣದ ಕಡೆ ತಮ್ಮ ಗಮನವನ್ನು ಹರಿಸಲು ವಿದ್ಯಾರ್ಥಿವೇತನ ತನ್ನದೇ ಆದ ಪತ್ರ ವಹಿಸುತ್ತದೆ.
  • ಆರ್ಥಿಕವಾಗಿ ಹಿಂದುಳಿದ ಹಾಗೆಯೇ ಬಡ ವಿದ್ಯಾರ್ಥಿಗಳ ಕುಟುಂಬದ ಮೇಲೆ ಹಣದ ಒತ್ತಡ ಇದ್ದೇ ಇರುತ್ತದೆ ಈ ಒತ್ತಡವನ್ನ ಕಡಿಮೆ ಮಾಡುವುದೇ ಸರ್ಕಾರದ ಪ್ರಮುಖ ಉದ್ದೇಶ.
  • 2026 ನೇ ಸಾಲಿನ ಪ್ರೋತ್ಸಾಹ ಧನಕ್ಕೆ ಈಗಾಗಲೇ ಸರ್ಕಾರವು ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಿತು ನಾಳೆ ಕೊನೆಯ ದಿನಾಂಕವಾಗಿದ್ದುಈಗಾಗಲೇ ಅರ್ಜಿ ಸಲ್ಲಿ
  • ಶಿಕ್ಷಣದ ಮೂಲಕ ಬಡ ಹಾಗು ಮಾಧ್ಯಮ ವರ್ಗದ ವಿದ್ಯಾರ್ಥಿಗಳನ್ನ ಸಮಾಜದಲ್ಲಿ ಸಮಾನರಾಗಿ ಹಾಗೆ ಸ್ವಾವಲಂಬಿಯಾಗಿ ತಮ್ಮದೇ ಆದ ಜೀವನ ನಡೆಸಬೇಕೆನ್ನುವ ಉದ್ದೇಶವನ್ನು ಹೊಂದಿದೆ.

ಈ ಸ್ಕಾಲರ್ಶಿಪ್ (Scholarship) ಇಂದ ವಿದ್ಯಾರ್ಥಿಗಳಿಗಾಗುವ ಅನುಕೂಲ :-

  • ಬಡ ಕುಟುಂಬಗಳ ಮೇಲೆ ಇರುವ ಶಿಕ್ಷಣದ ಹೊರೆ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಟುಂಬದ ಬೆಂಬಲ ಸಿಕ್ಕಂತಾಗುತ್ತದೆ.
  • ಸ್ನಾತಕೋತ್ತರ ಡಿಪ್ಲೋಮಾ ಪದವಿ ಹಾಗೆ ವೃತ್ತಿಪರ ಶಿಕ್ಷಣವನ್ನ ನಿರ್ಭಯವಾಗಿ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಧನ ಪ್ರೋತ್ಸಾಹ ಧನದಿಂದ ಅನುಕೂಲವಾಗುತ್ತದೆ.
  • ಪುಸ್ತಕದ ಶುಲ್ಕ, ಕಾಲೇಜು, ಯೂನಿಫಾರಂ ಶುಲ್ಕ, ಪರೀಕ್ಷೆ ಫೀಸ್ ಮುಂತಾದ ಖರ್ಚುಗಳನ್ನ ಸುಲಭವಾಗಿ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನದಿಂದ ಬರಿಸಿಕೊಳ್ಳಬಹುದು.
  • ಅನೇಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಹಣದ ಕೊರತೆಯಿಂದಾಗಿ ಅರ್ಧಕ್ಕೆ ಬಿಡುವ ಪರಿಸ್ಥಿತಿ ನಿವಾರಣೆಯಾಗುತ್ತದೆ.
  • ಈ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಕೂಡ ಸಮಾಜದಲ್ಲಿ ಎಲ್ಲಾ ವಿದ್ಯಾರ್ಥಿಗಳಂತೆ ಸಮಾನವಾಗಿ ಶಿಕ್ಷಣ ಪಡೆಯುವ ಅವಕಾಶ ಲಭಿಸುತ್ತದೆ.
  • ಉತ್ತಮ ಶಿಕ್ಷಣದಿಂದ ಉತ್ತಮ ಉದ್ಯೋಗ ಹಾಗೆ ಉತ್ತಮವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೆ ವಿದ್ಯಾರ್ಥಿಗಳ ಸ್ವಾವಲಂಬಿ ಜೀವನಕ್ಕೆ ದಾರಿ ದೀಪವಾಗುತ್ತದೆ.
  • ಈ ಪ್ರೋತ್ಸಾಹ ಧನದಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವು ನೇರವಾಗಿರುವುದರಿಂದ ಪಾರದರ್ಶಕತೆ ಇರುತ್ತದೆ.

ಪ್ರೋತ್ಸಹ ಧನದ ಕೊನೆಯದಿನಾಂಕಗಳು :-

2026ರ ಪ್ರೋತ್ಸಾಹ ಧನಕ್ಕೆ ಈಗಲೇ ಅರ್ಜಿ ಪ್ರಾರಂಭವಾಗಿದ್ದು 15/02/2026 ಕೊನೆಯ ದಿನಾಂಕವಾಗಿದ್ದು ಅರ್ಹ ವಿದ್ಯಾರ್ಥಿಗಳು ಸರಿಯಾದ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ದಾಖಲಾತಿಗಳು ಹೀಗಿವೆ :-

  1. ಆಧಾರ ಕಾರ್ಡ್
  2. ಶಾಲಾ ಮತ್ತು ಕಾಲೇಜಿನ ಪ್ರವೇಶ ಪತ್ರ
  3. ಪ್ರಸ್ತುತ ಸಾಲಿನಲ್ಲಿ ಶುಲ್ಕ ರಶೀಲಿ
  4. ಹಿಂದಿನ ತರಗತಿಯ ಅಂಕಪಟ್ಟಿ
  5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  6. ಬ್ಯಾಂಕ್ ಪಾಸ್ ಬುಕ್
  7. ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸುವ ಅವಕಾಶವನ್ನು “ ಆನ್ಲೈನ್ ಮೂಲಕ  (Online Application) ಅರ್ಜಿಸಲ್ಲಿಸ ಬಹುದಾಗಿದೆ

ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಸಂಪೂರ್ಣವಾಗಿ ಆನ್ಲೈನ್ ಆಗಿದೆ

ಹಂತ 1. ಮೊದಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು

ಹಂತ 2. ನಿಮ್ಮ ಮೊಬೈಲ್ ನಂಬರ್ ಇಮೇಲ್ ಐಡಿ ಬಳಸಿ ರಿಜಿಸ್ಟರ್ ಮಾಡಿ

ಹಂತ 3. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆಯುತ್ತದೆ ಅಲ್ಲಿ ಕೇಳಲಾಗಿರುವ ವೈಯಕ್ತಿಕ ಮಾಹಿತಿ ವಿಳಾಸ ಅಂಕಗಳು ಬ್ಯಾಂಕ್ ವಿವರ ಮುಂತಾದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ

ಹಂತ 4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು

ವಿಶೇಷ ಟಿಪ್ಸ್ :

  1. ದಾಖಲೆಗಳು PDF / JPG ರೂಪದಲ್ಲಿ ಸಿದ್ಧಪಡಿಸಿಟ್ಟುಕೊಳ್ಳಿ.
  2. ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಚಾಲ್ತಿಯಲ್ಲಿರಲಿ
  3. ಫೋಟೋ ಸ್ಪಷ್ಟವಾಗಿರಬೇಕು ಹಾಗೆ ಇತ್ತೀಚಿನ ಫೋಟೋ ಆಗಿರಬೇಕು .
  4. ಬ್ಯಾಂಕ್ ಖಾತೆ ವಿವರ ತಪ್ಪು ಬಂದರೆ ಹಣ ನೇರ ವರ್ಗಾವಣೆ ಸಾಧ್ಯವಿಲ್ಲ.

ಕೊನೆಯ ಮಾತು :-

ಶಿಕ್ಷಣಕ್ಕೆ ನೀಡುವ ಪ್ರತಿಯೊಂದು ಬೆಂಬಲವೂ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಆಗುತ್ತದೆ ಈ ಮಾಹಿತಿಯು ನಿಮಗೆ ಅಥವಾ ನಿಮ್ಮ ಅಕ್ಕಪಕ್ಕದ ಮನೆಯ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು ನೀವು ಈ ವಿದ್ಯಾರ್ಥಿ ವೇತನದನ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ನೀಡ್ಸ್ ಆಫ್ ಕರ್ನಾಟಕ  ವೆಬ್ ಸೈಟ್ ಮೂಲಕ ತಿಳಿಸುವುದರ ಜೊತೆಗೆ ಯಾವ ರೀತಿಯಲ್ಲಿ ಅರ್ಜಿಸಿ ಅರ್ಜಿ ಸಲ್ಲಿಸಬೇಕೆನ್ನುವುದನ್ನು ತಿಳಿಸಲಾಗಿದೆ. ಇಂತಹ ಗೋಲ್ಡನ್ ಅವಕಾಶವನ್ನ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳದೆ ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಿ.

ತಿಳಿದಿರಲಿ:-ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು?

ಟಾಟಾ ಕ್ಯಾಪಿಟಲ್ ಲಿಮಿಟೆಡ್ ನೀಡುತ್ತಿರುವ ಸ್ಕಾಲರ್ಶಿಪ್ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರೆಸಲು ನೀಡುತ್ತಿರುವ ಹಣ ಸಹಾಯವಾಗಿದೆ.

ಈ ವಿದ್ಯಾರ್ಥಿ ವೇತನಕ್ಕೆ ಪಿಯುಸಿ ಪದವಿ ವಿದ್ಯಾರ್ಥಿಗಳು ಮತ್ತು ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು

ಕೋರ್ಸ್ ಮತ್ತು ಅಂಕಗಳನ್ನು ಆಧರಿಸಿ 10,000 ದಿಂದ 1 ಲಕ್ಷದ ಪ್ರೋತ್ಸಾಹ ಧನ ಸಿಗುತ್ತದೆ

ಹಿಂದಿನ ತರಗತಿಯಲ್ಲಿ ಅಥವಾ ಸೆಮಿಸ್ಟರ್ ನಲ್ಲಿ ಕನಿಷ್ಠ 60% ಅಂಕಗಳು ಅಥವಾ ಅದಕ್ಕೂ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ

ಟಾಟಾ ಸಂಸ್ಥೆ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ


ಇತರೆ ಯೋಜನೆಯ ಪ್ರಮುಖ ಲಿಂಕುಗಳು:-

Leave a Reply

Your email address will not be published. Required fields are marked *