ಹೊಸ ಮನೆ ನಿರ್ಮಿಸಬೇಕೆಂದು ಕನಸು ಕಾಣುತ್ತಿದ್ದೀರಾ? ಮನೆ ನಿರ್ಮಿಸಲು ಆಗುವ ವೆಚ್ಚವನ್ನು ನೆನೆದು ನಿರಾಸೆಯಾಗುತ್ತಿದೀಯಾ? ನಿಮ್ಮೆಲ್ಲಾ ಬೇಸರಕ್ಕೆ ಬೆಸ್ಟ್ ಸೊಲ್ಯೂಷನ್ ಜನವರಿ 24 ರಂದು ಸಿಗಲಿದೆ. ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
PMAY Yojana In Kannada
ಕರ್ನಾಟಕ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸ್ವಂತ ಮನೆಯ ಕನಸ್ಸನ್ನು ನನಸ್ಸು ಮಾಡುವ ಉದ್ದೇಶವನ್ನು ಹೊಂದಿದ್ದು, ಈ ಯೋಜನೆಯಡಿಯಲ್ಲಿ ಒಟ್ಟು 42,345 ಹೊಸ ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಸೂರನ್ನು ಕಟ್ಟಿಕೊಡುವ ಮೂಲಕ ಹೆಚ್ಚಿನ ಜನಬೆಂಬಲವನ್ನು ಪಡೆದುಕೊಂಡಿದೆ.
ಉಚಿತ ಮನೆ ಹಂಚಿಕೆಗೆ ಆನ್ಲೈನ್ ಅರ್ಜಿ:
ಸರ್ಕಾರವು ಜನವರಿ 24 ರಂದು ಬೃಹತ್ ಕಾರ್ಯಕ್ರಮವನ್ನು ನಡೆಸಿ ಉಚಿತವಾಗಿ ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದು, ಈ ಕಾರ್ಯಕ್ರಮ ಎಲ್ಲಿ ನಡೆಯಲಿದೆ, ಎಷ್ಟು ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತದೆ ಹೀಗೆ ಇನ್ನಷ್ಟು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂತ – ಹಂತವಾಗಿ ನೀಡಲಾಗಿದೆ. ಅರ್ಹ ಫಲಾನುಭವಿಗಳು ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ. ಬಡ ಹಾಗೂ ಮಧ್ಯಮ ವರ್ಗದವರಿಗೆಂದೇ ಇರುವ ಇದೇ ರೀತಿ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕೆದ್ದರೆ ನಮ್ಮ ವೆಬ್ಸೈಟ್ ನೀಡ್ಸ್ ಆ ಕರ್ನಾಟಕ ಕ್ಕೆ ಭೇಟಿ ನೀಡಿ.
ಯೋಜನೆಯ ಕುರಿತು ಕಿರು ನೋಟ:
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಆವಾಸ್ ಯೋಜನೆ |
| ಕಾರ್ಯಕ್ರಮ ನಡೆಯುವ ಸ್ಥಳ | ಹುಬ್ಬಳ್ಳಿ |
| ಕಾರ್ಯಕ್ರಮ ನಡೆಯುವ ದಿನಾಂಕ | 24-01-2026 |
| ಒಟ್ಟು ಹಂಚಿಕೆಯಾಗಲ್ಪಡುವ ಮನೆಗಳು | 42,345 |
| ಫಲಾನುಭವಿಗಳು ಪಾವತಿಸಬೇಕಾದ ಒಟ್ಟು ಮೊತ್ತ | ₹1,00,000 |
ಒಟ್ಟು 42,345 ಮನೆಗಳ ಹಂಚಿಕೆ:
ಕರ್ನಾಟಕ ಸರ್ಕಾರವು ಹೊಸವರ್ಷದ ಪ್ರಾರಂಭದಲ್ಲಿಯೇ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಜನವರಿ 24 ರಂದು ಒಟ್ಟು 42,345 ಉಚಿತ ಮನೆಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದೆ. ವಸತಿ ಸಚಿವರಾದ ಜಮೀರ್ ಅಹ್ಮದ್ ಅವರು ಇದರ ಕುರಿತು ಹುಬ್ಬಳ್ಳಿಯಲ್ಲಿ ಸಿಹಿಸುದ್ದಿಯನ್ನು ಘೋಷಣೆ ಮಾಡಿದ್ದು, ಪ್ರತಿಯೊಬ್ಬ ನಾಗರೀಕನಿಗೂ ಉಚಿತ ಸೂರನ್ನು ಒದಗಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ಅವರನ್ನು ಸಬಲರನ್ನಾಗಿ ಮಾಡುವುದು ರಾಜ್ಯ ಸರ್ಕಾರದ ದೃಢ ನಿರ್ಧಾರ ಎಂದು ತಿಳಿಸಿದ್ದಾರೆ.
ಅದ್ದೂರಿ ಸಂಭ್ರಮದಲ್ಲಿ ಗಣ್ಯರ ಉಪಸ್ಥಿತಿ:
ಜನವರಿ 24, 2026 ರಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಅದ್ದೂರಿ ಕಾರ್ಯಕ್ರಮವು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಹಾಗೂ ಸಂತೋಷ್ ಲಾಡ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಮೀರ್ ಅಹ್ಮದ್ ಹಾಗೂ ಸಂತೋಷ್ ಲಾಡ್ ನೇತೃತ್ವದಲ್ಲಿ ಈ ಕಾರ್ಯಕ್ರಮಕ್ಕೆ ಈಗಾಗಲೇ ಪೂರ್ವಸಿದ್ಧತೆಯನ್ನು ಮಾಡಲಾಗಿದೆ.
ಮನೆ ಹಂಚಿಕೆಯ ವಿವರ:
ಕರ್ನಾಟಕ ಸರ್ಕಾರವು ಒಟ್ಟು 42,345 ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದು, ಒಟ್ಟು ಮನೆಗಳಲ್ಲಿ 20,312 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಹಾಗೂ ಉಳಿದ 22,033 ಮನೆಗಳನ್ನು ಉಳಿದ ವರ್ಗಗಳ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಜನವರಿ 24 ರಂದು ಧಾರವಾಡ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ 2,767 ಮನೆಗಳನ್ನು ಹಾಗೂ ಹುಬ್ಬಳ್ಳಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ 1,008 ಮನೆಗಳನ್ನು ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಮನೆ ಹಂಚಿಕೆ ಈ ಎರಡು ಜಿಲ್ಲೆಗಳಗೆ ಮಾತ್ರ ಸೀಮಿತವಲ್ಲದೆ, ಉಳಿದ ಜಿಲ್ಲೆಗಳು ಮನೆಯನ್ನು ಪಡೆಯಲು ಅರ್ಹವಾಗಿರುತ್ತದೆ.
ಫಲಾನುಭವಿಗಳಿಗೆ ಬಂಪರ್ ಕೊಡುಗೆ:
ಕರ್ನಾಟಕ ಸರ್ಕಾರವು ಹಂಚಿಕೆ ಮಾಡುವ ಪ್ರತಿ ಮನೆಯ ಒಟ್ಟು ವೆಚ್ಚವು ₹7.5 ಲಕ್ಷ ಮೊತ್ತದ್ದಾಗಿದ್ದು, ಅರ್ಹ ಫಲಾನುಭವಿಗಳು ಕೇವಲ ₹1 ಲಕ್ಷ ಹಣ ಪಾವತಿಸಿದರೆ ಸಾಕಾಗುತ್ತದೆ, ಉಳಿದ ಮೊತ್ತವನ್ನು ಸಬ್ಸಿಡಿ ರೂಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಭರಿಸುತ್ತದೆ.
ನಿರ್ಮಾಣಗೊಂಡ ಮನೆಗಳ ವಿನ್ಯಾಸ:
ಕರ್ನಾಟಕ ಸರ್ಕಾರವು ಈಗಾಗಲೇ ಹುಬ್ಬಳ್ಳಿ ಜಿಲ್ಲೆಯ ಮಂಟೂರು ರಸ್ತೆಯ ಕೊಳಗೇರಿ ನಿವಾಸಿಗಳಿಗೆ 1,008 ಮನೆಗಳನ್ನು ನಿರ್ಮಿಸಿದ್ದು, ಪ್ರತಿ ಮನೆಯು ಒಂದು ಲಿವಿಂಗ್ ರೂಮ್, ಒಂದು ಮಲಗುವ ಕೋಣೆ, ಅಡುಗೆ ಮನೆ, ಪ್ರತ್ಯೇಕವಾದ ಸ್ನಾನಗೃಹ ಹಾಗೂ ಶೌಚಾಲಯವನ್ನು ಹೊಂದಿದ್ದು, ಅಂದಾಜು 30 ಚದರ ಮೀಟರ್ ಪ್ರದೇಶವನ್ನು ಹೊಂದಿದೆ.
ನೀವು ಫಲಾನುಭವಿಗಳ ಪಟ್ಟಿಯಲ್ಲಿದ್ದೀರೇ ಎಂದು ತಿಳಿದುಕೊಳ್ಳಬೇಕಾ?
- ಮೊದಲು PMAY ಅಧಿಕೃತ ವೆಬ್ಸೈಟ್ https://pmaymis.gov.in/ ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ಫಲಾನುಭವಿಗಳ ಮಾಹಿತಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ, ವಾರ್ಡ್ ಅನ್ನು ಆಯ್ಕೆ ಮಾಡಿ.
- ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಹೆಸರಿದೆಯೇ? ಎಂದು ಖಚಿತ ಪಡಿಸಿಕೊಳ್ಳಿ.
ಇಲ್ಲಿ ಗಮನಿಸಿ: ಬೆಳಿಗ್ಗೆ 7 ಗಂಟೆಯ ಒಳಗೆ, ರಾತ್ರಿ 9 ಗಂಟೆಯ ನಂತರ ಆನ್ಲೈನ್ ನಲ್ಲಿ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಲು ಸೂಕ್ತ ಸಮಯವಾಗಿದ್ದು, ಉಳಿದ ಸಮಯಗಳಲ್ಲಿ ಸರ್ವರ್ ಬಿಸಿ ಇರುವ ಸಾಧ್ಯತೆಗಳಿವೆ.
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರವು ಅದ್ದೂರಿ ಕಾರ್ಯಕ್ರಮದ ಮೂಲಕ ಅರ್ಹ ಫಲಾನುಭವಿಗಳಿಗೆ ಉಚಿತ ಮನೆಯನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ತಿಳಿದುಕೊಳ್ಳಲು PMAY ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಹೆಸರಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇನ್ನು ಉಚಿತ ಮನೆ ಸಿಗದವರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇದು ಕೇವಲ 2ನೆೇ ಹಂತದಲ್ಲಿ ಮನೆ ಹಂಚಿಕೆ ಮಾಡುತ್ತಿದ್ದು, ಏಪ್ರಿಲ್ -ಮೇ ತಿಂಗಳಿಗೆ 3ನೇ ಹಂತದಲ್ಲಿ ಮನೆ ಹಂಚಿಕೆ ಮಾಡಲು ಸರ್ಕಾರವು ಭರ್ಜರಿ ಸಿದ್ಧತೆ ನಡೆಸಿದೆ.
ಇತರೆ ಪ್ರಮುಖ ಲಿಂಕುಗಳು:
- ನಿಮಗೆ ರೂ 2000/- ಹಣ ಇನ್ನು ಬಂದಿಲ್ವಾ? | 21ನೇ ಕಂತಿನ ಹಣ ಈ ದಿನ ಜಮಾ!
- ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ 2026
- ಶ್ರಮ ಶಕ್ತಿ ಯೋಜನೆ ಸಹಾಯಧನ 2026
- ಕರ್ನಾಟಕ ಮಡಿಲು ಕಿಟ್ ಯೋಜನೆ 2026
- ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ! ಸರ್ಕಾರದಿಂದ ₹2.5 ಲಕ್ಷ ಸಾಲ + 35% ಸಬ್ಸಿಡಿ

