Free ToolKit for Labour : ಲೇಬರ್ ಕಾರ್ಡ್ ಇದ್ದರೆ ಸಾಕು! ರೂ5,000/- ಮೌಲ್ಯದ ಟೂಲ್ ಕಿಟ್ ಉಚಿತ!

Free ToolKit for Labour

ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ! ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯೋಗವಕಾಶವನ್ನು ಸೃಷ್ಟಿಸಲು ಮತ್ತು ಹೆಚ್ಚಿನ ಆದಾಯವನ್ನು ಗಳಿಸುವಂತೆ ಮಾಡಲು ಮಾನವ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಕುರಿತು ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ.

Free ToolKit for Labour In Kannada

ಅರ್ಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಯೋಜನೆಯ ಪ್ರಯೋಜನ, ಅರ್ಹತಾ ಮಾನದಂಡ ಇನ್ನಿತರ ಮಾಹಿತಿಗಳನ್ನು ಹಂತ ಹಂತವಾಗಿ ನೀಡಲಾಗಿದೆ ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ:

ಯೋಜನೆಯ ಹೆಸರುಮಾನವ ಕಲ್ಯಾಣ ಯೋಜನೆ
ಫಲಾನುಭವಿಗಳುಆರ್ಥಿಕವಾಗಿ ಹಿಂದುಳಿದ ವರ್ಗದವರು
ಅರ್ಜಿಸಲ್ಲಿಸುವ ವಿಧಾನಆನ್ ಲೈನ್
Labour Card Holders Get Free Tool Kits

ಯೋಜನೆಯ ಕುರಿತು:

ಮಾನವ ಕಲ್ಯಾಣ ಯೋಜನೆಯನ್ನು ಸೆಪ್ಟೆಂಬರ್ 11, 1995 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ,ಕಡಿಮೆ ಆದಾಯವನ್ನು ಹೊಂದಿರುವ ಕುಶಲಕರ್ಮಿಗಳಿಗೆ ಹಾಗೂ ಕಾರ್ಮಿಕರಿಗೆ ಸ್ವ-ಉದ್ಯೋಗವನ್ನು ಸೃಷ್ಟಿಸಿ ಅವರ ಉದ್ಯೋಗಕ್ಕೆ ಅಗತ್ಯವಾದ ಉಪಕರಣಗಳನ್ನು ಮತ್ತು ಸಂಪನ್ಮೂಲಗಳನ್ನು ಒದಗಿಸಲಾಗುವುದು.

ಯೋಜನೆಯ ಉದ್ದೇಶ:

  • ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರು ಹಾಗೂ ಕುಶಲಕರ್ಮಿಗಳು ಉದ್ಯೋಗಕ್ಕಾಗಿ ಇತರರಿಗೆ ಅವಲಂಬಿತರಾಗಿರದೆ, ಸ್ವಂತ ಉದ್ಯೋಗವನ್ನು ಮಾಡಲು ಪ್ರೇರೇಪಿಸುವುದು.
  • ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆದಾಯವನ್ನು ಹೆಚ್ಚುವಂತೆ ಮಾಡಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು.
  • ಈ ಯೋಜನೆಯಡಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.
  • ಕುಶಲಕರ್ಮಿಗಳಿಗೆ ತಮ್ಮ ವೃತ್ತಿಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಅಂತವರಿಗೆ ಕಿಟ್ ಗಳನ್ನು ನೀಡುವ ಮೂಲಕ ಆರ್ಥಿಕ ನೆರವನ್ನು ನೀಡುವುದು.
  • ಸಾಂಪ್ರದಾಯಿಕ ವೃತ್ತಿಗಳನ್ನು ನಂಬಿಕೊಂಡಿರುವ ಕುಟುಂಬಗಳು ತಮ್ಮ ವೃತ್ತಿಯನ್ನು ಮುಂದುವರಿಸಲು ಪ್ರೇರೇಪಿಸುವುದು.

ಯೋಜನೆಯ ಪ್ರಯೋಜನಗಳು:

  • ₹25000 ಮೌಲ್ಯದ ಉಪಕರಣಗಳನ್ನು ಸರ್ಕಾರವೇ ಉಚಿತವಾಗಿ ನೀಡುವುದಿರಿಂದ ಸಣ್ಣ ವ್ಯಾಪಾರ ಮಾಡುವವರು ಹಾಗೂ ಬಡ ಕುಶಲಕರ್ಮಿಗಳು ತಮ್ಮ ಉದ್ಯೋಗಕ್ಕೆ ಬೇಕಾದ ಅಗತ್ಯ ಉಪಕರಣಗಳನ್ನು ಕೊಳ್ಳಲು ಸಾಲ ಮಾಡುವ ಅಗತ್ಯ ಇರುವುದಿಲ್ಲ.
  • ಅರ್ಹ ಫಲಾನುಭವಿಗಳಿಗೆ ಸರ್ಕಾರವು ಡಿಜಿಟಲ್ ಈ -ವೋಚರ್ ಸೌಲಭ್ಯವನ್ನು ನೀಡುವ ಮೂಲಕ ತಮ್ಮ ಇಚ್ಛೆಯ ಬ್ರಾಂಡ್ ಗಳನ್ನು ಉತ್ತಮ ಗುಣಮಟ್ಟದ ಉಪಕರಣಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
  • ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ₹5000 ದಿಂದ ₹25000 ಮೌಲ್ಯದ ಟೂಲ್ ಕಿಟ್ ಗಳನ್ನು ಪಡೆದುಕೊಳ್ಳಬಹುದು.
  • ಕೆಲಸಕ್ಕಾಗಿ ನಗರ ಭಾಗಗಳಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ.
  • ಫಲಾನುಭವಿಗಳ ಆಯ್ಕೆಯ ಉದ್ಯೋಗಗಳ ಕುರಿತು ಅಲ್ಪ ಸಮಯದ ತರಬೇತಿಗಳನ್ನು ನೀಡುತ್ತಿದ್ದು, ತರಬೇತಿ ಸಮಯದಲ್ಲಿ ಅವರಿಗೆ ₹500 ಸ್ಟೈಫಂಡ್ ನೀಡಲಾಗುವುದು.
ಇಲ್ಲಿ ಗಮನಿಸಿ: ಸರ್ಕಾರವು ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಿಲ್ಲ, ಬದಲಾಗಿ ವೃತ್ತಿಗೆ ಅಗತ್ಯವಾದ ಉಪಕರಣಗಳನ್ನು ಪಡೆದುಕೊಳ್ಳಲು ಡಿಜಿಟಲ್ ಈ ವೋಚರ್ ಅಥವಾ ಕಿಟ್ ನೀಡುತ್ತದೆ.

ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಗುಜರಾತಿನ ಖಾಯಂ ನಿವಾಸಿ ಆಗಿರಬೇಕು.
  • ಲೇಬರ್ ಕಾರ್ಡ್ ಹೊಂದಿರಬೇಕು.
  • ಅರ್ಜಿದಾರರು 18 ರಿಂದ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು ₹600000 ಕ್ಕಿಂತ ಕಡಿಮೆ ಇರಬೇಕು.
  • ಫಲಾನುಭವಿಗಳು ಆಯ್ಕೆ ಮಾಡುವ ವೃತ್ತಿಯಲ್ಲಿ ಕೌಶಲ್ಯ ಹೊಂದಿರಬೇಕು.
  • ಯುವುದೇ ಶೈಕ್ಷಣಿಕ ಅರ್ಹತೆಯ ಅವಶ್ಯಕತೆ ಇರುವುದಿಲ್ಲ.
  • ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
  • ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಕುಟುಂಬದ ಒಬ್ಬ ಸದಸ್ಯರು ಕೂಡ ಸರ್ಕಾರಿ ನೌಕರಿಯಲ್ಲಿರಬಾರದು.
  • ಈ ಹಿಂದೆ ಈ ಯೋಜನೆ ಅಥವಾ ಇದೇ ರೀತಿಯ ಸರ್ಕಾರದ ಯೋಜನೆಯ ಲಾಭವನ್ನು ಪಡೆದುಕೊಂಡ ಕುಟುಂಬ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ನಿವೇಶನದ ದಾಖಲೆ
  • ಲೇಬರ್ ಕಾರ್ಡ್
  • ವಯಸ್ಸಿನ ಪುರಾವೆ
  • ಪಾಸ್ಪೋರ್ಟ್ ಸೈಜ್ ಫೋಟೋ
  • ವೃತ್ತಿ ತರಬೇತಿ ಪ್ರಮಾಣ ಪತ್ರ
  • ಮತದಾರರ ಚೀಟಿ

ಅರ್ಜಿ ಸಲ್ಲಿಸುವ ವಿಧಾನ:

  • ಅಧಿಕೃತ ವೆಬ್ ಸೈಟ್ https://e-kutir.gujarat.gov.in/ ಗೆ ಭೇಟಿ ನೀಡಿ
  • ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ
  • ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿಮಾಡಿ
  • ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
  • ಆಯ್ಕೆಯಾದ ಫಲಾನುಭವಿಗಳ ಮೊಬೈಲ್ ನಂಬರ್ ಗೆ SMS ಮೂಲಕ ಮಾಹಿತಿ ಲಭಿಸುತ್ತದೆ ಮತ್ತು ಟೂಲ್ ಕಿಟ್ ಪಡೆಯಲು ಈ ವೋಚರ್ ಬರುತ್ತದೆ.

ಅಂತಿಮ ತೀರ್ಮಾನ:

ಮಾನವ ಕಲ್ಯಾಣ ಯೋಜನೆಯು ಗುಜರಾತ್ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಗುಜರಾತಿನಲ್ಲಿ ಖಾಯಂ ನಿವಾಸಿಯಾಗಿರುವ ಕಡಿಮೆ ಆದಾಯವನ್ನು ಗಳಿಸುವ ಉದ್ಯೋಗಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಶಲಕರ್ಮಿಗಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು. ನೀವು ಗುಜರಾತ್ ನಿವಾಸಿಯಾಗಿದ್ದರೆ, ಈ ಯೋಜನೆಗೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *