ನೀವೇನಾದರೂ ಸ್ವಂತ ಉದ್ಯೋಗ ಮಾಡಲು ಇಚ್ಛಿಸುತ್ತಿದೀರ? ಹಾಗಿದ್ದರೆ ಇಲ್ಲಿದೆ ನೋಡಿ ಭರ್ಜರಿ ಗುಡ್ ನ್ಯೂಸ್. ಕರ್ನಾಟಕ ಸರ್ಕಾರವು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೊಳಿಸಿದೆ.
Chief Minister Employment Generation Scheme 2026
ಗ್ರಾಮೀಣ ನಿರುದ್ಯೋಗಿ ಯುವಕ- ಯುವತಿಯರು ಸ್ವಂತವಾಗಿ ಕೈಗಾರಿಕೆ ಅಥವಾ ಸ್ವಂತ ಉದ್ಯಮವನ್ನು ಸ್ಥಾಪಿಸಲು ಆರ್ಥಿಕ ನೆರವನ್ನು ಜೊತೆಗೆ ಸಬ್ಸಿಡಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು, ಅಗತ್ಯದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಕಂಡಂತಿದೆ, ಅದನ್ನು ಓದಿಕೊಳ್ಳಿ. ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿದ್ದರೆ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕಕ್ಕೆ ಭೇಟಿನೀಡಿ.
ಯೋಜನೆಯ ಅವಲೋಕನ:(Chief Minister Employment Generation Scheme 2026)
| ಯೋಜನೆಯ ಹೆಸರು | ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆ |
| ಅರ್ಹ ಫಲಾನುಭವಿಗಳು | ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು |
| ಒಟ್ಟು ಪ್ರೋತ್ಸಾಹಧನ | ಒಟ್ಟು ಸಾಲದ ಮೇಲೆ 25% ಇಂದ 35% ಸಬ್ಸಿಡಿ |
| ಅಧಿಕೃತ ವೆಬ್ ಸೈಟ್ | https://maha-cmegp.gov.in/ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ಸರ್ಕಾರವು ಆಗಸ್ಟ್ 1, 2019 ರಲ್ಲಿ ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಸ್ವಂತ ಉದ್ಯೋಗವನ್ನು ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಒಟ್ಟು ಯೋಜನಾ ವೆಚ್ಚದ ಮೇಲೆ ಸಾಮಾನ್ಯ ವರ್ಗಗಳಿಗೆ 25% ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಹಾಗೂ ವಿಕಲಚೇತನರಿಗೆ 35% ಸಬ್ಸಿಡಿ ನೀಡಲಾಗುವುದು.
ಯೋಜನೆಯ ಉದ್ದೇಶ: Chief Minister Employment Generation Scheme 2026
- ಗ್ರಾಮೀಣ ಭಾಗದ ಯುವಕ- ಯುವತಿಯರು ಉದ್ಯೋಗಕ್ಕಾಗಿ ಬೇರೆಯವರನ್ನು ಅವಲಂಬಿತರಾಗದೆ, ಸ್ವಂತ ಉದ್ಯೋಗವನ್ನು ಪ್ರಾರಂಭಿಸುವಂತೆ ಉತ್ತೇಜಿಸುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಯುವಕ- ಯುವತಿಯರಿಗೆ ಕೈಗಾರಿಕಾ ಉದ್ಯೋಗಗಳನ್ನು ಮಾಡುವಂತೆ ಪ್ರೇರೇಪಿಸುವ ಮೂಲಕ ಉದ್ಯೋಗವನ್ನು ಹುಡುಕುತ್ತ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು.
- ಉದ್ಯೋಗವನ್ನು ಪ್ರಾರಂಭಿಸಲು ಹಣಕಾಸಿನ ಸಮಸ್ಯೆ ಇರುವವರಿಗೆ ಸಾಲದ ಸೌಲಭ್ಯವನ್ನು ಒದಗಿಸುವುದರ ಜೊತೆಗೆ ಸಬ್ಸಿಡಿ ರೂಪದಲ್ಲಿ ಹಣಕಾಸಿನ ನೆರವನ್ನು ನೀಡುವುದು.
- ಗ್ರಾಮೀಣ ಭಾಗದ ಯುವಕ- ಯುವತಿಯರ ಉದ್ಯಮಶೀಲತೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸಲು ತರಬೇತಿಗಳನ್ನು ನೀಡಿ ಅವರಿಗೆ ಪ್ರೋತ್ಸಾಹ ನೀಡುವುದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಹಾಗೂ ವಿಕಲಚೇತನರಿಗೆ ವಿಶೇಷ ರಿಯಾಯಿತಿಯನ್ನು ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು.
ಯೋಜನೆಯ ಪ್ರಯೋಜನ:
ಸಾಲದ ಮಿತಿ:
- ಸೇವಾ ವಲಯ ಹಾಗೂ ಉತ್ಪಾದನಾ ವಲಯದ ಯೋಜನೆಗಳಿಗೆ ಒಟ್ಟು ₹10 ಲಕ್ಷದಿಂದ ₹25 ಲಕ್ಷದ ವರೆಗೆ ಸಾಲ ಸೌಲಭ್ಯ ಲಭ್ಯವಿದೆ.
ಸಬ್ಸಿಡಿ ದರ:
- ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಒಟ್ಟು ಯೋಜನಾ ವೆಚ್ಚ 2.5 ಲಕ್ಷದ ಮೇಲೆ 25% ಸಬ್ಸಿಡಿ ಸೌಲಭ್ಯ ನೀಡಲಾಗಿದೆ.
- SC/ST/OBC/ಮಹಿಳೆಯರು/ಹಿಂದುಳಿದ ವರ್ಗದವರು/ ಅಲ್ಪಸಂಖ್ಯಾತರು/ ಮಾಜಿ ಸೈನಿಕರಿಗೆ ಒಟ್ಟು ಯೋಜನಾ ವೆಚ್ಚ 3.5 ಲಕ್ಷದ ಮೇಲೆ 35% ಸಬ್ಸಿಡಿ ಸೌಲಭ್ಯ ನೀಡಲಾಗಿದೆ.
ಉಚಿತ ತರಬೇತಿ:
- ಸಾಲ ಮಂಜೂರಾದ ತಕ್ಷಣ ಸರ್ಕಾರದಿಂದ ಫಲಾನುಭವಿಗಳಿಗೆ ಉಚಿತ ಉದ್ಯಮಶೀಲ ತರಬೇತಿಯನ್ನು ನೀಡಲಾಗುವುದು.
ಹೂಡಿಕೆಯ ಪ್ರಮಾಣ ಕಡಿಮೆ:
- ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಾಮಾನ್ಯ ವರ್ಗದವರು 10% ಹಾಗೂ ವಿಶಿಷ್ಟ ವರ್ಗದವರು ( SC/ST/ OBC/ಮಹಿಳೆಯರು/ಹಿಂದುಳಿದ ವರ್ಗದವರು/ ಅಲ್ಪಸಂಖ್ಯಾತರು/ ಮಾಜಿ ಸೈನಿಕರು) 5% ಹಣವನ್ನು ಹೂಡಿಕೆ ಮಾಡಿದರೆ ಸಾಕಾಗುತ್ತದೆ
ಯಾವ ಉದ್ಯಮಗಳಿಗೆ ಸಾಲಸೌಲಭ್ಯ ದೊರೆಯುತ್ತದೆ?
- ಉತ್ಪಾದನಾ ಉದ್ಯಮಗಳು:
ಪೀಠೋಪಕರಣ ತಯಾರಿಕೆ, ಪೇಪರ್ ಉತ್ಪನ್ನಗಳ ತಯಾರಿಕೆ, ಕಟ್ಟಡ ಸಾಮಗ್ರಿಗಳ ತಯಾರಿಕೆ, ಅಗರಬತ್ತಿ ತಯಾರಿಕೆ ಮತ್ತು ಜವಳಿ ಉದ್ಯಮ
- ಕೃಷಿ ಆಧಾರಿತ ಉದ್ಯಮಗಳು:
ಹಿಟ್ಟಿನ ಗಿರಣಿ, ಬೇಳೆಕಾಳುಗಳ ಸಂಸ್ಕರಣೆ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ, ಹಾಲು ಉತ್ಪನ್ನ ಮತ್ತು ಮಸಾಲ ತಯಾರಿಕೆ
- ಜವಳಿ ಮತ್ತು ಉಡುಪು:
ನೂಲು ತಯಾರಿಕೆ, ಪ್ರಿಂಟಿಂಗ್ ಉದ್ಯಮ ಮತ್ತು ಪವರ್ ಲೂಮ್ ಘಟಕ
- ಸೇವಾ ವಲಯದ ಉದ್ಯಮ
ಹೇರ್ ಸಲೂನ್, ಮೆಕ್ಯಾನಿಕ್ ಗ್ಯಾರೇಜ್, ಕಂಪ್ಯೂಟರ್ ಸೇವೆ, ಬ್ಯೂಟಿ ಪಾರ್ಲರ್, ಕ್ಯಾಟರಿಂಗ್, ಹೋಟಲ್ ಉದ್ಯಮ ಮತ್ತು ಫೋಟೋ ಸ್ಟುಡಿಯೋ
ಅರ್ಹತಾ ಮಾನದಂಡ: Chief Minister Employment Generation Scheme 2026
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಕನಿಷ್ಠ 18 ವರ್ಷದಿಂದ 45 ವರ್ಷದ ಒಳಗೆ ವಯೋಮಿತಿಯನ್ನು ಹೊಂದಿರಬೇಕು.
- ವಿಶಿಷ್ಟ ವರ್ಗದವರಿಗೆ ( SC/ST/OBC/ಮಹಿಳೆಯರು/ಹಿಂದುಳಿದ ವರ್ಗದವರು/ ಅಲ್ಪಸಂಖ್ಯಾತರು/ ಮಾಜಿ ಸೈನಿಕರು) 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
- 10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗಳಿಗೆ ಕನಿಷ್ಠ 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- 25% ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗೆ ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಈ ಯೋಜನೆಯು ಹೊಸ ಉದ್ಯಮಗಳಿಗಷ್ಟೇ ಅನ್ವಹಿಸುತ್ತದೆ.
- ಈ ಯೋಜನೆಯ ಲಾಭ ಪಡೆದುಕೊಳ್ಳಬೇಕಾದರೆ ಯಾವುದೇ ಆದಾಯದ ಮಿತಿ ಇರುವುದಿಲ್ಲ.
- ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರು ಮಾತ್ರ ಅರ್ಹರಾಗಿರುತ್ತಾರೆ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಯೋಜನಾ ವರದಿ
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಬ್ಯಾಂಕ್ ಖಾತೆಯ ವಿವರ
- ಪಾಸ್ ಪೋರ್ಟ್ ಸೈಜ್ ಫೋಟೋ
- ಮೊಬೈಲ್ ಸಂಖ್ಯೆ
ಇತರೆ ದಾಖಲೆಗಳು.
ಅರ್ಜಿ ಸಲ್ಲಿಸುವ ವಿಧಾನ: Chief Minister Employment Generation Scheme 2026
- ಅಧಿಕೃತ PMEGP ವೆಬ್ ಸೈಟ್ https://maha-cmegp.gov.in/ ಗೆ ಭೇಟಿನೀಡಿ
- ಅಪ್ಲೈ ಆನ್ಲೈನ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ನಂತರ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ
- ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ
- ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
ವಿಶೇಷ ಸೂಚನೆ:
- ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
- ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಅಥವಾ ಇತರೆ ಯೋಜನೆಗಳ ಅಡಿಯಲ್ಲಿ ಸಾಲವನ್ನು ಪಡೆದವರು ಅಥವಾ ಇತರೆ ಸೌಲಭ್ಯವನ್ನು ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ತೀರ್ಮಾನ:
ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ಉದ್ದೇಶದಿಂದ ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಫಲಾನುಭವಿಗಳು ಸಾಲ ಮಂಜೂರಾದ ಮೇಲೆ ಉದ್ಯಮಶೀಲತಾ ತರಬೇತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಇತರೆ ಪ್ರಮುಖ ಲಿಂಕುಗಳು:
- ನಿಮಗೆ ರೂ 2000/- ಹಣ ಇನ್ನು ಬಂದಿಲ್ವಾ? | 21ನೇ ಕಂತಿನ ಹಣ ಈ ದಿನ ಜಮಾ!
- ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ 2026
- ಶ್ರಮ ಶಕ್ತಿ ಯೋಜನೆ ಸಹಾಯಧನ 2026
- ಕರ್ನಾಟಕ ಮಡಿಲು ಕಿಟ್ ಯೋಜನೆ 2026
- ಕುಕ್ಕುಟ ಸಂಜೀವಿನಿ ಯೋಜನೆ – ಉಚಿತ ಕೋಳಿಮರಿ ಮತ್ತು ಶೆಡ್ ನಿರ್ಮಾಣಕ್ಕೆ ₹7.5 ಲಕ್ಷ ಸಹಾಯಧನ

