ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗಾಗಿ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ. ಅದರಲ್ಲಿ ಮಡಿಲು ಕಿಟ್ ಯೋಜನೆಯು ಒಂದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ತಾಯಿ ಮತ್ತು ನವಜಾತ ಶಿಶುವಿನ ಆರೈಕೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
Karnataka Madilu Kit Scheme In Kannada
ಕರ್ನಾಟಕ ಸರ್ಕಾರವು ಮಡಿಲು ಕಿಟ್ ಯೋಜನೆಯಡಿಯಲ್ಲಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ತಾಯಿ ಮತ್ತು ಮಗುವಿಗೆ ಬಳಕೆಗೆ ಅಗತ್ಯವಿರುವ ಸುಮಾರು 19 ವಸ್ತುಗಳನ್ನೊಳಗೊಂಡ ಕಿಟ್ ಅನ್ನು ಉಚಿತವಾಗಿ ನೀಡುತ್ತಿದೆ. ಈ ಮಡಿಲು ಕಿಟ್ ಸುಮಾರು 1,500 ರೂ. ಮೌಲ್ಯದ್ದಾಗಿದೆ.
ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಇಚ್ಛಿಸುವವರು ನಮ್ಮ ಅಧಿಕೃತ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತಾ ಮಾನದಂಡ, ಪ್ರಮುಖ ದಾಖಲೆಗಳು ಹಾಗೂ ಇನ್ನಷ್ಟುಮಾಹಿತಿಯನ್ನು ಕೆಳಗೆ ನೀಡಿರುತ್ತೇವೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಮಡಿಲು ಕಿಟ್ ಯೋಜನೆ |
| ಇಲಾಖೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ |
| ಫಲಾನುಭವಿಗಳು | ಗರ್ಭಿಣಿ ಮಹಿಳೆಯರು |
ಸಂಕ್ಷಿಪ್ತ ಮಾಹಿತಿ:
ಮಡಿಲು ಕಿಟ್ ಯೋಜನೆಯು 15 ಸೆಪ್ಟೆಂಬರ್ 2007 ರಿಂದ ಪ್ರಾರಂಭಗೊಂಡಿದ್ದು, ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಯೋಜನೆಯ ಉದ್ದೇಶ:
- ಗ್ರಾಮೀಣ ಮತ್ತು ನಗರ ಭಾಗದ ಗರ್ಭಿಣಿ ಮಹಿಳೆಯರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.
- ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಅರೋಗ್ಯ ಮತ್ತು ಸುರಕ್ಷತೆಯನ್ನು ಒದಗಿಸುವುದು.
- ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.
- ಹೆರಿಗೆಯ ನಂತರ ತಾಯಿ ಮತ್ತು ಮಗುವಿಗೆ ಅಗತ್ಯವಾದ ಮೂಲಭೂತ ವಸ್ತುಗಳನ್ನು ಉಚಿತವಾಗಿ ನೀಡುವುದು
ಯೋಜನೆಯ ಪ್ರಯೋಜನಗಳು: Karnataka Madilu Kit Scheme In Kannada
- ಮಡಿಲು ಕಿಟ್ ಯೋಜನೆಯಡಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸವಾದ ತಾಯಿ ಮತ್ತು ಮಗುವಿಗೆ 1,500 ರೂ. ಮೌಲ್ಯದ ಒಟ್ಟು 19 ಮನೆಬಳಕೆ ವಸ್ತುಗಳನ್ನು ನೀಡಲಾಗುವುದು.
- ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ ರೂ. 1,000 ಸಹಾಯಧನ ಪಡೆಯಬಹುದು.
- ತಾಯಿ ಮತ್ತು ಮಗು ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಈ ಯೋಜನೆಯು ಸಹಾಯಕಾರಿ ಆಗುತ್ತದೆ.
- ಹೆರಿಗೆಗೆ ಸಂಬಂಧಿಸಿದ ವೆಚ್ಚದ ಒತ್ತಡ ಕಡಿಮೆಯಾಗುವುದು.
- ಗ್ರಾಮೀಣ ಮತ್ತು ನಗರ ಭಾಗದ ಬಡ ಕುಟುಂಬದ ಮಹಿಳೆಯರಿಗೆ ಸಮಾನ ಆರೋಗ್ಯ ಸೌಲಭ್ಯವನ್ನು ಒದಗಿಸಲಾಗುವುದು.
ಅರ್ಹತಾ ಮಾನದಂಡಗಳು: Karnataka Madilu Kit Scheme In Kannada
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ಗರ್ಭಿಣಿ ಮಹಿಳೆಯರಾಗಿರಬೇಕು.
- ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯಾಗಿರಬೇಕು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸೇರಿದ ಮಹಿಳೆಯರಾಗಿರಬೇಕು.
- ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸವಾದ ತಾಯಿ
- ಮಡಿಲು ಕಿಟ್ ಯೋಜನೆಯು ಮೊದಲ ಎರಡು ಜೀವಂತ ಹೆರಿಗೆಗೆ ಮಾತ್ರ ಅನ್ವಹಿಸುತ್ತದೆ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಫೋಟೋ
- ವಾಸಸ್ಥಳ ಪುರಾವೆ
- ತಾಯಿ ಕಾರ್ಡ್
- ತಾಯಿ ಭಾಗ್ಯದಲ್ಲಿ ಆಶಾ ಕಾರ್ಯಕರ್ತೆಯರು ನೀಡುವ NNC Reg. No
ಗರ್ಭಿಣಿ ಮಹಿಳೆಯರಿಗೆ ಕಿಟ್ ನಲ್ಲಿ ಲಭ್ಯವಾಗುವ ವಸ್ತುಗಳು:
- ಸೊಳ್ಳೆ ಪರದೆ
- ತಾಯಿಗೆ ಸ್ನಾನದ ಸೋಪು (2)
- ಬಟ್ಟೆ ಒಗೆಯುವ ಸೋಪು (4)
- ಬೆಡ್ ಶೀಟ್
- ತಾಯಿಗೆ ಕಾಟನ್ ಹೊದಿಕೆ
- ಕಾಟನ್ ಕಾರ್ಪೆಟ್
- ಸ್ಯಾನಿಟರಿ ಪ್ಯಾಡ್
- ಹೊಟ್ಟೆಗೆ ಕಟ್ಟಲು ಬಟ್ಟೆ
- ತೆಂಗಿನ ಎಣ್ಣೆ
- ತಾಯಿಗೆ ಟವಲ್
- ಮಗುವಿಗೆ ಉಣ್ಣೆಯ ಸ್ವೇಟರ್, ಟೋಪಿ, ಸಾಕ್ಸ್
- ಮಗುವಿಗೆ ಬಟ್ಟೆ (3)
- ಮಗುವಿನ ಡೈಪರ್ (6)
- ಮಗುವಿಗೆ ರಬ್ಬರ್ ಶೀಟ್
- ಮಗುವಿನ ಸೋಪು (2)
- ಮಗುವಿನ ಹೊದಿಕೆ
- ಮಗುವಿನ ಬೆಡ್ ಶೀಟ್ (2)
- ಹಲ್ಲುಜ್ಜುವ ಬ್ರೆಷ್ ಮತ್ತು ಪೇಸ್ಟ್
- ಈ ಎಲ್ಲ ವಸ್ತುಗಳನ್ನು ಇಡಲು ದೊಡ್ಡ ಬ್ಯಾಗ್
ಅರ್ಜಿ ಸಲ್ಲಿಸುವ ವಿಧಾನ: Karnataka Madilu Kit Scheme In Kannada
- ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಯಾವುದೇ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
- ಗರ್ಭಿಣಿಯರು ತಮ್ಮ ಹತ್ತಿರದ ಅಂಗನವಾಡಿ ಅಥವಾ ಸರ್ಕಾರಿ ಆಸ್ಪತ್ರೆಗೆ ಹೋಗಿ ತಾಯಿ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬೇಕು.
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮಡಿಲು ಕಿಟ್ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಹೆರಿಗೆಯ ನಂತರ ಆಸ್ಪತ್ರೆಯ ಸಿಬ್ಬಂದಿಗಳೇ ನೇರವಾಗಿ ಮಡಿಲು ಕಿಟ್ ಅನ್ನು ವಿತರಣೆ ಮಾಡುತ್ತಾರೆ.
ಇತರೆ ಪ್ರಮುಖ ಲಿಂಕುಗಳು:
- ವಿಧವಾ ಪಿಂಚಣಿ ಯೋಜನೆ ಅರ್ಜಿ 2026
- ಐರಾವತ ಯೋಜನೆ ಅರ್ಜಿ 2026
- ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ 2026
- ರಾಜೀವ್ ಗಾಂಧಿ ವಸತಿ ಯೋಜನೆ 2026
- ಕಟ್ಟಡ ಕಾರ್ಮಿಕರ ಗೃಹ ಭಾಗ್ಯ ಯೋಜನೆ 2026

